ಅಪ್ಪಾ°.. ಎನಗೆ ತಿಂದದು ಹೆಚ್ಚಾತು (ನವೀನ ಹಾಡುಗೊ)

May 29, 2014 ರ 10:30 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಪ್ಪಾ°.. ಎನಗೆತಿಂದದುಹೆಚ್ಚಾತು

(ನವೀನ ಹಾಡುಗೊ)

(ಸಂಗ್ರಹ – ಅರ್ತಿಕಜೆ ಮಾವ°)

 

1

ಅಪ್ಪಾ° ಎನಗೆ ತುಪ್ಪದ ಹೋಳಿಗೆ

ಇಪ್ಪತ್ತು ತಿಂದದು ಹೆಚ್ಚಾತು

ನಡವಲೆ ಎಡಿತ್ತಿಲ್ಲೇ ಎನಗೇ

ಕೈಕಾಲು ಬತ್ತಿಲ್ಲೇ… ಅಪ್ಪಾ°  ॥

 

ಕಟ್ಟು ಸಾರಿಲಿ ಉಂಡಿಗಿದೆ

ಸುಟ್ಟವು ನಾಕು ತಿಂದಿಗಿದೆ

ಅಷ್ಟದ್ರವ್ಯ ಮುಟ್ಟಿದ್ದಿಲ್ಲೆ

ಮನಾರ ಮೂರೇ ಮುಷ್ಟಿ  ॥

 

ಕೂಪಲೆ ಎಡಿತ್ತಿಲ್ಲೇ ಎನಗೇ

ನಿಂಬಲೆ ಎಡಿತ್ತಿಲ್ಲೇ

ಕಾಂಬೋರಿಂಗೇನೂ ಕಾಣ್ತಿಲ್ಲೇ

ದ್ರಾಕ್ಷಾರಿಷ್ಟವ ತರಿಸಿಲ್ಲೇ … ಅಪ್ಪಾ° ॥

 

2

ಅಯ್ಯೋ.. ಬಾರನ್ನೆ ಪದ ಎನಗೊಂದುದೇ

ಸ್ವರ ಬಪ್ಪಾದು ಹೇಂಗದು ಹೇಳದ್ದೇ

ಸುರುಮಾಡುತ್ತೆ ಪದ ಒಂದು ಹೇಳುಲೇ

ನಿಂಗೊ ಮಾಡೆಡಿ ಬೇಜಾರ ಕೇಳುಲೇ ॥

 

ನಾಚಿಕೆ ಎಂತ ಹೇಳುಲೆ ಸ್ವಂತ

ಮಾಡುಲೆ ಆಗ ಈಗ ಕೋಲಂಗಳ

ಇಪ್ಪ ತಪ್ಪೀನ ಕ್ಷಮಿಸೆಕ್ಕು ನಿಂಗಳೇ

ಬಪ್ಪ ಕಷ್ಟಾವ ಬಿಡುಸೆಕ್ಕು ದೇವರೇ ॥

 

ನಾವು ಇಪ್ಪಾದು ಸುಮ್ಮನೆ ಭೂಮಿಲಿ

ಬಪ್ಪ ಕಷ್ಟವ ಬಿಡುಸಿ ಎನ್ನ ಕಾಯಿರಿ

ದೇವರ ದಯವೇ ಜ್ಞಾನದ ಮೂಲ

ಆಯ ಇಲ್ಲದ್ದ ಮನೆ ನಿರ್ಮೂಲ ॥

 

~~** ~~

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

  1. ಒಪ್ಪಣ್ಣ

    ಅರ್ತಿಕಜೆ ಮಾವಾ, ಚೆಂದದ ಪದ್ಯ ಇದು :-)
    ನವೀನ ರೀತಿಲಿ ನೆಗೆನೆಗೆಯಾಗಿ ಬಯಿಂದು.

    ಇದರ ಓದಿ ಎನಗೇ ಹೊಟ್ಟೆ ತುಂಬಿದಾಂಗೆ ತೇಗು ಬಂದು ಎರ್ಕಿತ್ತಪ್ಪೋ! :-)

    [Reply]

    VA:F [1.9.22_1171]
    Rating: 0 (from 0 votes)
  2. ಅರ್ತಿಕಜೆ ಮಾವ

    ಸಂತೋಷ ಆತು ಒಪ್ಪಣ್ಣ . ಪ್ರೋತ್ಸಾಹಕ್ಕೆ ಧನ್ಯವಾದಂಗೊ

    ನಮ್ಮ ಮಾತು ಒಪ್ಪ ಇರೆಕು
    ನಾವು ಬರವದು ಒಪ್ಪ ಇರೆಕು
    ನಮ್ಮ ನಡೆನುಡಿ ವ್ಯವಹಾರ ಎಲ್ಲ ಒಪ್ಪ ಇರೆಕು
    ನಾವು ಇದ್ದರೆ ನಮ್ಮ ಒಪ್ಪಣ್ಣನ ಹಾಂಗೆ ಇರೆಕು ಮುದ್ದುತಮ್ಮ

    [Reply]

    VA:F [1.9.22_1171]
    Rating: 0 (from 0 votes)
  3. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ನವೀನ ಹಾಡುಗಳ ಸಂಗ್ರಹ ಲಾಯಿಕಿದ್ದು ಮಾವ. ಇನ್ನುದೇ ಬರಲಿ ಹೀಂಗೆಯೆ.

    [Reply]

    VN:F [1.9.22_1171]
    Rating: 0 (from 0 votes)
  4. ವಿಜಯತ್ತೆ

    ಹರೇರಾಮ, ಅರ್ತಿಕಜೆ ಮಾವನ ಪದ್ಯ ಒಳ್ಳೆದಿದ್ದು. ನೆಗೆ ಒಟ್ಟಿಂಗೆ ಬಗೆ , ಬಗೆ ಅರ್ಥ ಇದ್ದು. ಕೊನೇ ಸಾಲೇ ಬಹು ಬುದ್ಧಿವಾದ ಇದ್ದು.

    [Reply]

    VN:F [1.9.22_1171]
    Rating: 0 (from 0 votes)
  5. ಶೈಲಜಾ ಕೇಕಣಾಜೆ

    ಮಾವನ ಸುರುವಾಣ ಪದ್ಯವ ಎನ್ನ ಅಪ್ಪನ ಮಾವ (ಸೋದರತ್ತೆ ಗಂಡ) ಚೂರ್ಣಿಕೆಯಾಗಿ ಹೇಳ್ಯೊಂಡಿತ್ತದು ನೆಂಪಾವ್ತು .. ನೆಗೆ ಮೂಡಿಸಿಗೊಂಡಿತ್ತದರ ಇಲ್ಲಿ ಹಾಕಿ ಪುನ ಮೋರೆ ಅರಳಿಸಿದ ನಿಂಗೊಗೆ ಪ್ರಣಾಮ

    [Reply]

    VA:F [1.9.22_1171]
    Rating: 0 (from 0 votes)
  6. ಅನಿತಾ ನರೇಶ್, ಮಂಚಿ
    Anitha Naresh Manchi

    ಎನಗಾಗ ಎನಗಾಗ ಜೀಗುಜ್ಜೆ ಬಾಗ ಹೇಳಿ ಪದ್ಯ ಹೇಳಿಕೊಂಡಿದ್ದದು ನೆಂಪಾತು. ಅರ್ತಿಕಜೆ ಮಾವನ ಪದ್ಯಂಗಳೇ ಚೆಂದ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿವೆಂಕಟ್ ಕೋಟೂರುಮುಳಿಯ ಭಾವಚೆನ್ನೈ ಬಾವ°ಸಂಪಾದಕ°ಶ್ಯಾಮಣ್ಣಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆಶ್ರೀಅಕ್ಕ°ಯೇನಂಕೂಡ್ಳು ಅಣ್ಣಬಂಡಾಡಿ ಅಜ್ಜಿಶೇಡಿಗುಮ್ಮೆ ಪುಳ್ಳಿವಾಣಿ ಚಿಕ್ಕಮ್ಮಒಪ್ಪಕ್ಕವಿನಯ ಶಂಕರ, ಚೆಕ್ಕೆಮನೆಜಯಗೌರಿ ಅಕ್ಕ°ಶಾಂತತ್ತೆಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ದೊಡ್ಮನೆ ಭಾವಮಾಲಕ್ಕ°ಅನಿತಾ ನರೇಶ್, ಮಂಚಿರಾಜಣ್ಣಪೆಂಗಣ್ಣ°ಚೆನ್ನಬೆಟ್ಟಣ್ಣಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ