Oppanna.com

ಮನಸ್ಸಿಂಗೆ ಮುದ ಕೊಡುವ ಯಕ್ಷಗಾನ ಸಿ.ಡಿ. "ಮುದ್ದಣ ಗೇಯ ಸೌಂದರ್ಯ"

ಬರದೋರು :   ವೇಣೂರಣ್ಣ    on   24/05/2011    10 ಒಪ್ಪಂಗೊ

ವೇಣೂರಣ್ಣ

ಕರಾವಳಿ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನ . ನವರಸ೦ಗಳ ಸಮ್ಮಿಲನ೦ದ ಒಡಗೂಡಿದ ಯಕ್ಷಗಾನ ಆರಾಧನಾ ಕಲೆಯಾಗಿ ಉದ್ಭವಿಸಿ ಕ್ರಮೇಣ ಜಾನಪದ ಕಲೆಯಾಗಿ ಜನರಿಂದ ಸ್ವೀಕರಿಸಲ್ಪಪಟ್ಟತ್ತು. ದಕ್ಷಿಣ ಕನ್ನಡ, ಉತ್ತರ ಕನ್ನಡ , ಕಾಸರಗೋಡು  ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಾಂಬ  ಈ ಕಲೆ ಅದರದ್ದೇ ಆದ  ಅನನ್ಯತೆಯ (uniqueness) ಹೊಂದಿದ್ದು . ಯಕ್ಷಗಾನಲ್ಲಿ ತೆಂಕುತಿಟ್ಟು , ಬಡಗುತಿಟ್ಟು ಮೂಡಲಪಾಯ , ಬಯಲಾಟ  ಹಾಗೂ  ಬಡಾಬಡಗು ಇತ್ಯಾದಿ ಹಲವು ಪ್ರಕಾರ೦ಗೊ ಇದ್ದು  ಪ್ರತಿಯೊಂದು ಪದ್ದತಿಯೂ ಅದರದ್ದೇ ಅದ ವೈವಿಧ್ಯತೆಯ ಹೊಂದಿದ್ದರೂ ಪೌರಾಣಿಕ ವಿಚಾರಧಾರೆಯ ಜನ ಸಾಮಾನ್ಯರಿಗೆ ತಲುಪಿಸುವ ಮಹತ್ವದ ಸಂವಹನ ಮಾಧ್ಯಮವಾಗಿ ಬೆಳೆದು ಬಯಿಂದು .
ಯಕ್ಷಗಾನಲ್ಲಿ   ಪ್ರಸಂಗ ಸಾಹಿತ್ಯದ ವರಕವಿ ನಂದಳಿಕೆ ನಾರ್ಣಪ್ಪಯ್ಯರ (ಮುದ್ದಣ ) ಹೆಸರು ಬಲು ಪ್ರಸಿದ್ದ . ಅವು ಬರದ ಪ್ರಸಂಗ ಕೇವಲ ಎರಡೇ ಎರಡು . ಒಂದು ” ಕುಮಾರ ವಿಜಯ”  ಇನ್ನೊಂದು “ರತ್ನಾವತಿ ಕಲ್ಯಾಣ”. ಇವೆರಡೂ ಕೃತಿಗೋ ಯಕ್ಷಗಾನದ ಅನರ್ಘ್ಯ ರತ್ನಂಗೋ ಹೇಳಿರೆ ತಪ್ಪಲ್ಲ . ಇದರಲ್ಲಿಪ್ಪ ಕನ್ನಡದ ಛಂದಸ್ಸಿನ, ಅಲಂಕಾರ, ಪದ ವೈವಿಧ್ಯದ ಚೆಂದ ಇನ್ಯಾವ ಪ್ರಸಂಗಲ್ಲು ಸಿಕ್ಕ. ಒಂದೇ ಶಬ್ದವ ಹಲವು ಅರ್ತ ಬಪ್ಪ ಹಾಂಗೆ ಪ್ರಯೋಗಿಸಿದ ಚೆಂದ ಪ್ರಸಂಗ ಪುಸ್ತಕ ಓದಿಯೇ ಅನುಭವಿಸೆಕ್ಕು. ಆದರೆ ಹೆಚ್ಚಿನವಕ್ಕೆ ಪ್ರಸಂಗ ಪುಸ್ತಕ ಸುಲಭಲ್ಲಿ ಸಿಕ್ಕುತ್ತಿಲ್ಲೆ. ಸಿಕ್ಕಿರೂ ಆದುದು ಹೇಂಗೆ ಹೇಳಿ ಗೊಂತಿರ್ತಿಲ್ಲೇ . ಹಾಂಗಾಗಿ ಆ ಪ್ರಸಂಗದ ಪದ್ಯಂಗಳ ಅನುಭವಿ ಭಾಗವತರ ಹತ್ತರೆ ಹಾಡಿಸಿ ಅದರ ಸಿಹಿಯ ಹಂಚುವ ಕೆಲಸವ ಈಗಾಗಲೇ ನಮ್ಮ ನಂದಳಿಕೆ ಬಾಲಚಂದ್ರ ರಾವ್ ಮತ್ತೆ ಅವರ ಕೂಡುಗಟ್ಟಿನವ್ವು “ಮುದ್ದಣ ಗೇಯ ಸೌಂದರ್ಯ” ಹೇಳ್ತ ಯಕ್ಷಗಾನ ಸಿ.ಡಿ. ಮಾಡಿ ಮಾರಟಕ್ಕೆ ಬಿಡುಗಡೆ ಮಾಡಿದ್ದವು.
ನಮ್ಮ ತೆಂಕು ತಿಟ್ಟಿನ ಹೆಮ್ಮೆಯ ಭಾಗವತ ಭೀಷ್ಮ ಬಲಿಪಜ್ಜ ಮತ್ತೆ ಪುತ್ತಿಗೆ ರಘುರಾಮ ಹೊಳ್ಳರ ಕಂಠ ಸಿರಿಲಿ ಮೂಡಿ ಬಂದ ಈ ಧ್ವನಿ ತಟ್ಟೆ  ಮುದ್ದಣನ ಎರಡೂ ಪ್ರಸಂಗಗಳ  ವಿವಿಧ ರಾಗಗಳ ,ವಿವಿಧ ಛಂದಸ್ಸಿನ ಪ್ರಾತಿನಿಧಿಕ ಪದ್ಯಂಗಳ ಆರಿಸಿ ಮಾಡಿದ ಒಟ್ಟು ೧೭೩ ಪದ್ಯಂಗಳ ಒಳ್ಳೆಯ ರುಚಿಗಟ್ಟಾದ ಅವಿಲು !  ಸುಮಾರು ನಾಲ್ಕೂವರೆ ಗಂಟೆ ನಿರಂತರ  ಬಿಡದ್ದೆ ಕೇಳುಲಪ್ಪ ನವರಸ ಭರಿತ ಒಂದು ಒಳ್ಳೆ ರಸಪಾಕ ಈ  “ಮುದ್ದಣ ಗೇಯ ಸೌಂದರ್ಯ”.
ಈವರೆಗೆ  ಮಾರುಕಟ್ಟೇಲಿ  ಬಂದ ಧ್ವನಿ ಮುದ್ರಿಕೆಗಳಲ್ಲಿ ೧೯೮೪ ರಲ್ಲಿ  ಬಲಿಪಜ್ಜನ ಭಗವತಿಕೆಲಿ ಬಂದ “ಕುಮಾರ ವಿಜಯ”(ಇದರಲ್ಲಿ ಪುತ್ತೂರು ನಾರಾಯಣ ಹೆಗ್ಡೆ ಶೂರಪದ್ಮ ಮಾಡಿದ್ದು), ಬಲಿಪಜ್ಜನುದೆ ಪದ್ಯಾಣ  ಗಣಪ್ಪಣ್ಣನೂ ಹಾಡಿದ ಮುದ್ದಣ ಸಂಸ್ಮರಣೆಗೆ ಬಿಡುಗಡೆ ಆದ  ಕುಮಾರ ವಿಜಯ , ರತ್ನಾವತಿ ಕಲ್ಯಾಣ ವು ( ಇದರ್ಲಿ  ಮಲ್ಪೆ ರಾಮದಾಸ ಸಾಮಗ್ರ ಅರ್ಥ  ರೈಸಿದ್ದು ), ಪದ್ಯಾಣ ಗಣಪ್ಪಣ್ಣ ಹಾಡಿದ “ಷಣ್ಮುಖ ವಿಜಯ “ (ಇದರಲ್ಲಿ ಶೇಣಿ ಅಜ್ಜನ ಶೂರಪದ್ಮ, ಕುಂಬ್ಳೆ ಹಿರಣ್ಯಕ ರೈಸಿದ್ದು ), ಹಾಂಗೆಯೇ “ಕುಮಾರ ವಿಜಯ ” ಆಟದ ಡಿ.ವಿ.ಡಿ. ಬಲಿಪಜ್ಜ-ಹೊಳ್ಳರ ಭಾಗವತಿಕೆಲಿ ( ಇದರ್ಲಿ ಸೂರಿಕುಮೇರಿ ಗೋವಿಂದ ಮಾವನ ದೂರ್ವಾಸ ರೈಸಿದ್ದು ) ಮುಖ್ಯವಾಗಿ ಹೆಸರುಸುಲೆ ಅಪ್ಪಂಥದ್ದು. ಇವೆಲ್ಲದರಲ್ಲೂ ಸಮಯ ಮಿತಿಯ ಕಾರಣಂದ ಅಜಪ್ಪಿ ಹೆರುಕ್ಕಿದ ಒಳ್ಳೆ ಪದಂಗೋ  ಕಥಾ ನಿರ್ವಹಣೆಗೆ ತಕ್ಕ ಇಪ್ಪದಷ್ಟೇ . ಬರೇ ಪದ್ಯಂಗೋ ಮಾತ್ರ  ಇಪ್ಪ ಬಲಿಪ -ಹೊಳ್ಳರ “ಯಕ್ಷಧ್ವನಿ” ಮುದ್ರಿಕೆಲಿ ಒಂದು ಗಂಟೆ ಸಮಯಾವಕಾಶಲ್ಲಿ  ಎರಡೂ ಪ್ರಸಂಗದ ಪದಂಗೋ ಊಟಲ್ಲಿ ಬಾಳೆ ಕೊಡಿಗೆ ಬಳುಸುವ ರುಚಿ ರುಚಿಯಾದ ಕೋಸಂಬರಿ ಹಾಂಗೆ  ಇಪ್ಪದಷ್ಟೇ .
ಯಕ್ಷಗಾನ ಪಾರಂಪರಿಕ ನಾದ ವೈವಿಧ್ಯವ ಸವಿವ ಮನಸ್ಸಿಪ್ಪ ” ಮರುಳರಿಂಗೆ ” “ಮುದ್ದಣ ಗೇಯ ಸೌಂದರ್ಯ” ಅತೀ ಅಗತ್ಯ ಪೈಸೆ ಕೊಟ್ಟು ಕೇಳುಲೇ ಬೇಕಾದ ಯಕ್ಷಗಾನ ಸಿ.ಡಿ. ಇದರಲ್ಲಿ ಭಾಗವತರೊಟ್ಟಿ೦ಗೆ ನಮ್ಮ ಪದ್ಯಾಣ ಶಂಕರಪ್ಪಚ್ಚಿ  ಮದ್ದಲೆಲಿಯೂ ,ಪದ್ಮನಾಭ ಉಪಾಧ್ಯಾಯರು ಚೆಂಡೆ, ಹಾಂಗೆ ಪ್ರಜ್ವಲ್ ಕುಮಾರ್ ಚಕ್ರತಾಳಲ್ಲಿಯೂ ಸಹಕರಿಸಿದ್ದವು . ಯಕ್ಷಗಾನಲ್ಲಿ ” ಕುಮಾರ ವಿಜಯ”  ಇನ್ನೊಂದು “ರತ್ನಾವತಿ ಕಲ್ಯಾಣ” ಪ್ರಸಂಗವ ಸರಿಯಾಗಿ ಆಡ್ಸುಲೆ ಬಂತು ಹೇಳಿ ಆದರೆ ಅವ ಸರಿಯಾದ ಭಾಗವತ ಹೇಳಿ ಅರ್ಥ . ಏಕೆ ಹೇಳಿರೆ ಇದರಲ್ಲಿ ಇಪ್ಪ ಸಾಹಿತ್ಯ ಬಾಕಿ ಒಳುದ ಯಾವುದೇ ಪ್ರಸಂಗದ ಹಾಂಗೆ ಸುಲಭ ಅಲ್ಲ . ಪ್ರಸಂಗ ಸರಳ ಆದರೂ ಪ್ರಯೋಗ  ಕಷ್ಟವೇ..
ಬಲಿಪಜ್ಜನ ಅತ್ಯಂತ ಇಷ್ಟದ ಪ್ರಸಂಗ೦ಗಳಲ್ಲಿ ಇವೆರಡೂ ಪ್ರಸಂಗ ಮೊದಲ ಸಾಲಿಲ್ಲಿದ್ದರೆ ಹೊಳ್ಳರ ಪದ ರೈಸುದೂ ಈ ಪ್ರಸಂಗದ ಕೆಲವು ಪಾರಂಪರಿಕ ಮಟ್ಟಿನ ಪದ್ಯಂಗಳಲ್ಲೇ.ಈ ಪ್ರಸಂಗದ ಪದ್ಯ ಹೇಳುಲೇ ಒಳ್ಳೆತ ದಮ್ ಬೇಕು . ನಮ್ಮ ಪದ್ಯಾಣ ಗಣಪ್ಪಣ್ಣನೂ ಒಂದು ಕಾಲಲ್ಲಿ ಈ ಪ್ರಸಂಗಗಳ ಅದ್ಭುತವಾಗಿ ಆಡಿಸಿಗೊಂಡಿತ್ತಿದ್ದವು.
ಈಗ ಮಾರುಕಟ್ಟೆಗೆ ಬಂದ “ಮುದ್ದಣ ಗೇಯ ಸೌಂದರ್ಯ” ಸರ್ವ ರೀತಿಲ್ಲಿಯೂ ಸುಖ ಕೊಡುವ ಸಿ.ಡಿ.ಲಿ  ಪದ್ಯಾಣ ಶಂಕರಪ್ಪಚ್ಚಿಯ ಮದ್ದಲೆಯ ಕೈಚಳಕ ಅದರೊಟ್ಟಿ೦ಗೆ ಉಪಾದ್ಯಾಯರ ಚೆಂಡೆಯ ಝೇಂಕಾರ , ಚಕ್ರತಾಳದ ನುಡಿತ ಕೆಳುಲೇ ಕೆಮಿಗೆ ಒಂದು ಹಬ್ಬ … ನಮ್ಮ ನಂದಳಿಕೆ ಬಾಲಚಂದ್ರ ರಾವ್ ಮತ್ತೆ ಅವರ ಕೂಡುಗಟ್ಟಿನವ್ವು  ಅತ್ಯಂತ ಕಾಳಜಿ ವಹಿಸಿ ಇದರ ಮುದ್ರಿಸಿ ಈ ಎಲ್ಲ ಪದ್ಯಂಗೋ ಶಾಶ್ವತವಾಗಿ ಕೆಳುಗರಿಂಗೆ  ಸಿಕ್ಕುವ ಹಾಂಗೆ ಮಾಡಿದ್ದಕ್ಕೆ ಅವಕ್ಕೆ ಗೌರವಪೂರ್ವಕ ಅಭಿನಂದನೆಗೋ . ಅವರ ಶ್ರಮ ಸಾರ್ಥಕ ಆಯೆಕ್ಕರೆ ಆಸಕ್ತರೆಲ್ಲೋರು ದಯಮಾಡಿ “ಪೈಸೆ ಕೊಟ್ಟು “(ಯಾವುದೇ ರೀತಿಲ್ಲಿ copy ಮಾಡದ್ದೆ ) ಸಿ. ಡಿ . ತೆಕ್ಕೊಂಡು ಕೇಳಿ ಆನಂದಿಸಿ ಪ್ರೋತ್ಸಾಹಿಸೆಕ್ಕು ….
ಯಕ್ಷಗಾನಂ ಗೆಲ್ಗೆ.



Subrahmanya Bhat
Assistant Professor in E&EE Department,
Sri Dharmasthala Manjunatheshwara Institute of Technology,Ujire
Ujire-574240

Belthangady Taluk,D.K.
Karnataka

10 thoughts on “ಮನಸ್ಸಿಂಗೆ ಮುದ ಕೊಡುವ ಯಕ್ಷಗಾನ ಸಿ.ಡಿ. "ಮುದ್ದಣ ಗೇಯ ಸೌಂದರ್ಯ"

  1. 1984 ರಲ್ಲಿ ಬಿಡುಗದೆ ಆದ ಕುಮಾರ ವಿಜಯ ಕ್ಯಾಸೆಟ್ ನಿಮ್ಮ ಹತ್ರ ಇದೆಯಾ………. ನನಗೆ ಬೇಕಿತ್ತು……..

  2. ಒಂದೊಂದು ಪದ ಕೇಳುವಗಳೂ ರೋಮಾಂಚನ ಆವ್ತು. ಬಲಿಪ್ಪಜ್ಜನ ಪದ ಹೇಳಿರೆ ಹಾಂಗೆ, ರೋಮ ಕುತ್ತ ! ಆನಂದ ಭಾಷ್ಪ ಕಣ್ಣಿನ ಸುತ್ತ ! ಪುತ್ತಿಗೆದೂ ರೈಸಿದ್ದು. ಒಂದು ಒಳ್ಳೆ ಸಿ.ಡಿ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದ ಹೇಳಲೇ ಬೇಕು.
    ಬೈಲಿನ್ಗೆ ಹೇಳಿ ಸುಮಾರು ಜೆನಕ್ಕೆ ಮನ ಸಂತೋಷಕ್ಕೆ ಕಾರಣರಾದ ವೇಣೂರಣ್ಣಂಗೂ ಧನ್ಯವಾದ.

  3. ಸ೦ತೋಷದ ವಿಷಯ ತಿಳಿಸಿದ್ದಕ್ಕೆ ವೇಣೂರಣ್ಣ೦ಗೆ ಧನ್ಯವಾದ೦ಗ.
    ಪೈಸೆ ಕೊಟ್ತ್ತು ಅ೦ಗಡಿ೦ದ ತೆಕ್ಕೊಳುತ್ತೆ.

  4. ಒಳ್ಳೇ ಶುದ್ದಿ. ಸಂತೋಷ ಆತು. ಎನಗೊಂದು ಸಿ.ಡಿ ಬೇಕಾತು ಭಾವ ಪೈಸಗೆ.

    1. ಈ ಸಿ. ಡಿ . ಎಲ್ಲ ಸಿ .ಡಿ. ಅಂಗಡಿಗಳಲ್ಲೂ ಸಿಕ್ಕುತ್ತು ಬಾವ . Rs.99/-. ಮಂಗಳೂರು ಸಾಹಿತ್ಯ ಕೇಂದ್ರ, ಪುತ್ತೂರು ಕ್ಯಾಸೆಟ್ ಅಂಗಡಿಗಳಲ್ಲಿ ಸಿಕ್ಕುತ್ತು.

      1. ಮಾಹಿತಿಗೆ ಧನ್ಯವಾದ. ತರ್ಸೆಕು ಖಂಡಿತ. ಇಲ್ಲದ್ರೆ ಹೋಗಿಪ್ಪಗ (ಇದ್ದರೆ , ಸಿಕ್ಕಿರೆ) ತೆಕ್ಕೊಂಬದೇ.

      2. ಇದಾ .., ನಾವು ಪೈಸೆ ಕೊಟ್ಟು ಸಿ.ಡಿ. ತರ್ಸಿ ಆತು. ಭಕ್ತಿಲಿ ಕೂದು ನೋಡ್ವದೇ ಈಗಳೇ. ನಿಂಗೊ ರಜಾ ಹೊತ್ತು ಹರಟೆ ಮಾಡ್ಲಾಗ ಆತೋ.. ಏ.

        1. ಅದರ ನೊಡ್ಲೆ ಎಡಿಯ ಕೇಳುಲೆ ಅಕ್ಕು ಅಷ್ಟೇ…. ಅದು MP3 ಅಲ್ಲದೊ?

          1. mp3 ಆದರೆಂತ mp4 ಆದರೆಂತ ಭಾವ. ವೀಡಿಯೊ ಇಲ್ಲದ್ರೆ ರಾಪ್ಪೆರ್ ಕವರ್ ಇದ್ದನ್ನೇ ಫಟ ಹಾಕಿ. ಅದರನ್ನೂ ನೋಡ್ಲಕ್ಕು.

  5. ವೇಣೂರಣ್ಣ,
    ‘ಗೇಯ ಸೌ೦ದರ್ಯ’ ಕೇಳಿ,ಮುದ್ದಣನ ಕವಿತ ರಚನಾಶಕ್ತಿಗೆ ತಲೆದೂಗೆಕ್ಕು,ತಲೆಬಾಗೆಕ್ಕು.
    ಘನ ಹಿಮ್ಮೇಳದೊಟ್ಟಿ೦ಗೆ ಬಲಿಪ್ಪಜ್ಜರೂ ರಘುರಾಮ ಹೊಳ್ಳರೂ ಹಳೆ ಶೈಲಿಲಿ ಹೇಳಿದ ಎಲ್ಲಾ ಪದ್ಯ೦ಗೊ ಮನಸ್ಸಿ೦ಗೆ ಸ೦ತೋಷ ಕೊಡುತ್ತು.
    ಈ ಸಿ.ಡಿ.ಯ ಕೋಪಿ ಮಾಡುಲೆ ಅಷ್ಟು ಸುಲಭ ಇಲ್ಲೆ,ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×