ಕೊಡೆಯಾಲ ರಾಮಕಥೆಯ ಮೊದಲ ದಿನ

ಹರೇರಾಮ

ಕೊಡೆಯಾಲಲ್ಲಿ ಅಪ್ಪ ರಾಮಕಥೆಯ ಬಗ್ಗೆ ಗುರಿಕ್ಕಾರ್ರು ಬೈಲಿಂಗೆ ಹೇಳಿಕೆ ಮುಟ್ಟಿಸಿದ್ದವು. ನಾವು ಬಿಡುವು ಮಾಡಿಯೊಂಡು ಅಲ್ಲಿ ಹೋಯಿದು. ನಾವು ಕೇಳಿದ್ದರ ಎಲ್ಲೋರಿಂಗೂ ತಿಳಿಶುವ ಪ್ರಯತ್ನ ನಮ್ಮದು. ಈ ಕಾರ್ಯಲ್ಲಿ ರಜಾ ಹೆಚ್ಚು ಕಮ್ಮಿ ಇಕ್ಕು. ಹಾಂಗಾಗಿ ತಪ್ಪಿದ್ದರೆ ಭಾಗವಹಿಸಿದವು ತಿದ್ದುಗು ಹೇಳ್ತ ಧೈರ್ಯಲ್ಲಿ ಬರವಲೆ ಶುರು ಮಾಡಿದ್ದು. ಪೂರ್ತಿ ಪ್ರವಚನ ಮುಂದಂಗೆ ಹರೇರಾಮಲ್ಲಿ ಬಕ್ಕು. ಶ್ರೀಗುರುಚರಣಕ್ಕೆ ಮನಸಾ ವಂದಿಸಿ ಆರಂಭ ಮಾಡ್ತು.

ಹೇಳಿಕೆ ಕಾಕತಲ್ಲಿ ಸೂಚಿಸಿದ ಹೊತ್ತಿಂಗೆ ಶ್ರೀಸಂಸ್ಥಾನದ ಜೊತೆಲಿ ಶ್ರೀಪರಿವಾರದ ಅಣ್ಣಂದ್ರು ವಾಲ್ಮೀಕೀ ರಚಿತ ಶ್ರೀರಾಮಯಣ ಮೂಲ ರಾಮಾಯಣ ಗ್ರಂಥವ ಚೆಂಡೇ ಮೇಳ, ಮಂಗಳ ಕಲಶ ಮೆರವಣಿಗೆಲಿ ರಾಮಕಥಾ ಮಂಟಪಕ್ಕೆ ಬಂದವು. ಮೊದಲ ದಿನದ ಪ್ರಾಯೋಜಕರು ಮತ್ತು ಸಮಿತಿ ಸದಸ್ಯರ ಒಟ್ಟಿಂಗೆ ಧ್ವಜಾರೋಹಣ ಮಾಡುವುದರೊಟ್ಟಿಂಗೆ ಆರಂಭ ಆತು. ನಂತರ ರಾಮಾಯಣಗ್ರಂಥಕ್ಕೆ ಪುಷ್ಪಾರ್ಚನೆ ಶ್ರೀಕರಾರ್ಚಿತ ಪೂಜೆ ನಡದತ್ತು. ಒಟ್ಟಿಂಗೆ ಪ್ರೇಮಲತಕ್ಕನೂ ಶ್ರೀಪಾದ ಮಾವನೂ ಶ್ರೀರಾಮ ಜಯರಾಮ”ಪದ್ಯವ ಹಾಡಿದವು ಗೋಪಾಲಕೃಷ್ಣ ಹೆಗಡೆ ತಬಲಾ ಬಾರಿಸಿದವು. ಸೀತಾ ಸಹಿತ ಶ್ರೀರಾಮ ದೇವರಿಂಗೂ ಪೂಜೆ ನಡದತ್ತು. ನಂತರ ವಿದ್ವಾನಣ್ಣ ಪ್ರಾಸ್ತಾವಿಕವಾಗಿ ಮಾತಾಡಿ ರಾಮಕಥೆಯ ಬಗ್ಗೆ ತೂಷ್ಣಿಲಿ ವಿವರಣೆ ಕೊಟ್ಟವು. ಅದಾದ ಮೇಲೆ ಗುರುಗೋ ಗೋಕರ್ಣ ಗೆಣವತಿ, ಮಹಾಬಲೇಶ್ವರನ ನೆಂಪು ಮಾಡಿಯೊಂಡು ಪೀಠಿಕೆ ಹಾಕಿದವು. ಒಟ್ಟಿಂಗೆ ನೀರ್ನಳ್ಳಿ ಗೆಣವತಿ ಮಾವ ಚೆಂದಲ್ಲಿ ಗೆಣವತಿಯ ಚಿತ್ರ ಬರದವು. ನಮ್ಮ ಇಂದಿನ ಮಾನಸಿಕ ಸ್ಥಿತಿಯ ಬಗ್ಗೆ ಹೇಳ್ತಾ ‘ಗುರುಗೋ, ಮಾಡ್ತವು, ಸಾಕು, ನಾವು ಮಾಡೆಕ್ಕೂಳಿ ಇಲ್ಲೆ, ತರವಾಡು ಮನೆಲಿ ಮಾಡ್ತವು ಸಾಕು ನಾವು ಮಾಡೆಕ್ಕೂಳಿ ಇಲ್ಲೆ’ ಹೇಳ್ತ ಮನಸ್ಥಿತಿ ಹೆಚ್ಚಾವ್ತ ಇದ್ದು. ಜೆಪತಪ, ಪೂಜೆ ಪುನಸ್ಕಾರ ಆಚರಣೆಗೋ ಹೀಂಗೆ ಆವ್ತಾ ಇದ್ದು. ಹಾಂಗೆ ರಾಮಕಥೆಯುದೇ ಆವ್ತಾ ಇದ್ದು. ರಾಮ ಯುದ್ಧ ಮಾಡ್ತ ಸಂಧರ್ಭಲ್ಲಿ ರಾವಣನ ಮೂಲ ಸೇನೆಯ ನೋಡಿ ಕಪಿ ಸೈನ್ಯ ಓಡಿಯಪ್ಪಗ, ರಾಮ ಒಬ್ಬನೇ ಯುದ್ಧ ಮಾಡ್ತ ಸಂದರ್ಭಲ್ಲಿ ರಾಕ್ಷಸರಿಂಗೂ ಎಲ್ಲೆಲ್ಲಿ ನೋಡಿರೂ ರಾಮನ ಕಂಡಿದು, ಹಾಂಗಿಪ್ಪಗ ನಾವು ಮನುಷ್ಯರಿಂಗೆ ಏಕೆ ರಾಮನ ಕಾಣ್ತಿಲ್ಲೆ!

ಕಬೀರದಾಸಂಗೆ ಎಲ್ಲೆಲ್ಲಿ ನೋಡಿರೂ ಶ್ರೀರಾಮ ಕಾಣ್ತಾ ಇತ್ತನಡ. ಅದಕ್ಕೆ ಕಾರಣ ಗುರುಕೃಪಾಂಜನ. ಅಂಜನ ಹೇಳಿರೆ ಕಣ್ಣಿಗೆ ಹಾಕುತ್ತ ಮದ್ದು ಹೇಳ್ತ ಅರ್ಥವನ್ನೂ ಹೇಳಿದವು. ಅಷ್ಟಪ್ಪಗ ಅದರ ಕನ್ನಡಾನುವಾದ ‘ಗುರುಕೃಪಾಂಜನ ಧರಿಸಿರಿ ಭರದೀ.. ರಾಮನ ಹೊರತು ಇನ್ನೇನು ಕಾಣದು ಅಲ್ಲಿ…’ ಹಾಡಿನ ಪ್ರೇಮಕ್ಕನ ಬಳಗದವು ಹಾಡಿದವು. ಆ ಹಾಡಿಂಗೆ ಭರತನಾಟ್ಯವ ವಿಶ್ವೇಶ್ವರ ಕುಮಟಾ ಮಾಡಿರೆ ನೀರ್ನಳ್ಳಿ ಮಾವ ಚಿತ್ರ ಬಿಡುಸಿದವು. ಊಟಕ್ಕೆ ಮೂಲ ಹಸಿವು. ವಿಧ್ಯೆಗೆ ಮೂಲ ಅಜ್ಞಾನ. ಹಾಂಗಾದ ಕಾರಣ ಶಿಷ್ಯನ ಅಜ್ಞಾನ ಗುರುವಿನ ಭೋಧನೆಗೆ ಮೂಲ. ಆದ ಕಾರಣ ಗುರು ಕೃಪೆ ಹೇಳ್ತ ಅಂಜನವ ಕಣ್ಣಿಂಗೆ ಹಾಕಿರೆ ರಾಮನ ಕಾಂಬಲೆಡಿಗು ಹೇಳಿದವು.

ಈ ಕಾರ್ಯಕ್ರಮಲ್ಲಿ ಮುಖ್ಯವಾಗಿ ಮೂರು ಅಂಶಂಗೊ, ಶ್ರೋತ, ವಕ್ತ, ಗ್ರಂಥ ಹೇಳಿರೆ, ಕೇಳುವವು, ಹೇಳುವವು, ಒಟ್ಟಿಂಗೆ ರಾಮಾಯಣ ಗ್ರಂಥವುದೇ. ಎಲ್ಲೋರಲ್ಲಿಯೂ ರಾಮನ ಕಂಡರೆ, ರಾಮಂಗೆ ರಾಮ ಹೇಳುವ ರಾಮ ಕಥೆಯೇ ರಾಮಕಥೆ ಹೇಳಿ ಹೇಳಿದವು. ಇಲ್ಲಿ ನಾವೇ ರಾಮ ಹೇಳುಲಕ್ಕು . ಇಲ್ಲಿ ನಾವೇ ರಾಮ ಹೇಳ್ತದಕ್ಕೆ ಧೀರ್ಘ ತೆಗದೆರೆ ಒಂದು ಅರ್ಥ; ಧೀರ್ಘ ಸೇರುಸಿರೊಂದರ್ಥ ಬತ್ತು. ಎರಡಾದರೂ ನಾವೇ, ನಾವೇ ನಾವೆಯ ಹುಟ್ಟು ಹಾಕಿ ದೂರ ತೀರ ಮುಟ್ಟುಸೆಕ್ಕು. ಮಧ್ಯೆ ಬಪ್ಪ ಅಲೆಗೆ ಸಿಕ್ಕಿ ಅತ್ತಿತ್ತ ಆಗದ್ದ ಹಾಂಗೆ ನಮ್ಮ ಬಾಳ ಗುರಿಮುಟ್ಟೆಕ್ಕು ಹೇಳಿ ಹೇಳಿದವು. ಹುಟ್ಟಿಹಾಕಿ ನಾವೆ ಹಾಕಿ.. ತೀರದೂರ ಮುಟ್ಟಬೇಕು.. ಅಲೆಯ ಬಲೆಗೆ ಸಿಕ್ಕದಂತೆ.. ಬಾಳ ಕಟ್ಟ ಬೇಕು. ಎಲೇಸೊ ಐಸೋ ಏಲೈಸೋ ಹೇಳ್ತ ಪದ್ಯದೊಟ್ಟಿಂಗೆ ಒಂದು ಚಿತ್ರವೂ ಇತ್ತು.

ದೂರ ತೀರ ಮುಟ್ಟುಲೆ ರಾಮಕಥೆ ಸಹಾಯ ಮಾಡುತ್ತು. ರಾಮಾಯಣ ಸಹಾಯ ಮಾಡ್ತು. ಆದರೆ ನಮ್ಮ ಇಂದಿನ ಜೀವನ ಕ್ರಮಲ್ಲಿ ಇಂಥದಕ್ಕೆ ಕೊಡ್ತ ಪ್ರಾಮುಖ್ಯತೆ ಕಡಿಮೆ ಆವ್ತಾ ಇದ್ದು ಹೇಳುದರ ಉದಾಹರಣೆ ಸಹಿತ ವಿವರಿಸಿದವು. ಅದರೊಟ್ಟಿಂಗೆ ರಾಮಕಥೆ ಓದಿಯೊಂಡಿದ್ದ ಅಜ್ಜಂಗೆ – ಪುಳ್ಳಿ ಯಾವಾಗಲೂ ಅದರ ಎಂತಕೆ ಓದುತ್ತು ಹೇಳಿ ಕೇಳಿದ್ದಕ್ಕೆ, ಅಜ್ಜ ಮಸಿ ಹಾಕಿ ಮಡಗುತ್ತ ಹೆಡಗೆಲಿ ನೀರು ತಪ್ಪಲೆ ಹೇಳಿದವಡ. ಪುಳ್ಳಿ ಅಜ್ಜನ ಮಾತು ಮೀರುಲಾಗ ಹೇಳಿ ಪ್ರಯತ್ನ ಮಾಡ್ತ ಇತ್ತಿದ್ದನಡ ಎಷ್ಟೇ ಪ್ರಯತ್ನ ಪಟ್ಟರೂ  ನೀರು ತಪ್ಪಲಾತಿಲ್ಲೆ ಹೇಳಿ ಅಜ್ಜಂಗೆ ತೋರ್ಸಿಯಪ್ಪಗ ಅಜ್ಜ ಹೇಳಿದವಡ ನೀರು ತಪ್ಪಲಾಗದ್ರೆ ಎಂತಾತು ಹೆಡಗೆ ಬೆಳಿಯಾತನ್ನೇ. ಈ ರಾಮಾಯಣ ಕತೆಯನ್ನೂ ಓದುದರಿಂದಲೂ ಇದೇ ಆವ್ತು ಹೇಳಿ ಅಜ್ಜ ವಿವರಿಸಿದವು. ಹೇಳ್ತ ಕಥೆಯೊಟ್ಟಿಂಗೆ ರಾಮಕಥೆಯ ಪ್ರಾಮುಖ್ಯತೆಯ ಬಗ್ಗೆ ಹೇಳಿದವು.

ವಾಲ್ಮೀಕೀ ರಾಮಾಯಣ ವಿಶ್ವದ ಮೊದಲ ಗ್ರಂಥ. ಅದರಲ್ಲಿ ಏಳು ಕಾಂಡಂಗೋ. ಬಾಲ, ಅಯೋಧ್ಯಾ, ಅರಣ್ಯ, ಯುದ್ಧ, ಸುಂದರ, ಉತ್ತರಾ ಹೇಳಿ. ಇದರಲ್ಲಿ ಐನೂರು ಅಧ್ಯಾಯ, ೨೪೦೦೦ ಶ್ಲೋಕಂಗೋ ಇದ್ದು ಹೇಳ್ತ ವಿವರಣೆ ಕೊಟ್ಟವು. ಅಷ್ಟಪ್ಪಗ ಸ್ವಾದ.. ನಾದ.. ಅಂದ.. ಗಂಧ..ಹೇಳುವ ಪದ್ಯಕೆ ನಾಟ್ಯ ಚಿತ್ರವೂ ಇದ್ದತ್ತು.

ನಾವು ಇಂದು ಹೆರ, ಹೇಳಿರೆ ಯಕ್ಷಗಾನಲ್ಲಿಯೋ ಅಲ್ಲದ್ದರೆ ಪುಸ್ತಕಂಗಳಲ್ಲೋ ಓದುತ್ತಾ ಇಪ್ಪದು ನಿಜವಾದ ರಾಮಾಯಣ ಅಲ್ಲ. ಅದರಲ್ಲಿ ಎಷ್ಟೋ ವ್ಯತ್ಯಾಸ ಆಯಿದು, ಆದರೆ ವಾಲ್ಮೀಕೀ ಬರದ ರಾಮಾಯಣ, ರಾಮನ ಮಕ್ಕೋ ಲವಕುಶರು ಹಾಡಿ ಸಾಕ್ಷಾತ್ ಶ್ರೀರಾಮಚಂದ್ರನನ್ನೇ ಮೆಚ್ಚುಸಿದ ಕಥೆ ಹೇಳಿ ಹೇಳಿದವು. ಈಗ ನಾವು ಹೆರ ಓದುತ್ತ ರಾಮಾಯಣವ ವರ್ಣನೆ ಮಾಡ್ತಾ, ಗುರುಗಳಿಂಗೆ ಶಿಷ್ಯ ಸಮಿತ್ತು ತಂದ ಕತೆ ಹೇಳಿದವು. ಒಂದು ‘ಸ್ವಾದೇಶ’ (ನಮ್ಮಕೈಯ ಹೆಬ್ಬೆರಳಿನ ಕೊಡಿಂದ ತೋರುಬೆರಳಿನ ಕೊಡಿವರೆಗಿನ ಅಳತೆ) ಅಳತೆಯ ಸಮಿತ್ತು ತಾ ಹೇಳಿದ್ದಕ್ಕೆ ಅಳತೆ ಮಾಡಿ ಮಾಡಿ ತುಂಡು ಮಾಡಿ ತಂದ ಸಮಿತ್ತು ಒಂದು ಸಾವಿರ ಅಪ್ಪಗ ಅಕೇರಿಯಾಣದ್ದು ಮಾರುದ್ದ ಆಗಿತ್ತಡ, ಹಾಂಗೆ ಇತರ ರಾಮಯಣ ಕಥೆಗಳೂ ಆಯಿದು ಹೇಳಿದವು.

ಈ ರಾಮಾಯಣ ಕಥೆಯ ಐದು ದಿನ ಮೂರು ಮೂರು ಗಂಟೆ ಹೇಳಿರೆ ಒಟ್ಟು ಹದಿನೈದು ಗಂಟೆಲಿ ಎಷ್ಟೇ ಹೇಳಿದರುದೆ, ಅದು ಸಾಗರವ ಕೇವಲ ಹರಿಗೋಲಿನ ಸಹಾಯಂದ ದಾಂಟಿದ ಹಾಂಗೆ, ಇಡೀ ಬ್ರಹ್ಮಾಂಡವ ಬರಿಗೈಲಿ ಅಳದಾಂಗೆ ಅಕ್ಕಷ್ಟೇ, ಆದರೆ ಅಮೃತಬಿಂದು ಒಂದಾದರೂ ಸಾಕನ್ನೆ ಹೇಳಿದವು.

ಅಂದು ಒಂದು ಅಮೃತಬಿಂದು
ಇಂದು ಕೋಟಿ ಕುಂಭ ಮೇಳ
ಮೂಲದಲ್ಲಿ ಬಿಂದು ಮಾತ್ರ
ಮುಂದೆ ಗಂಗೆ ಬೃಹದ್ಗಾತ್ರ
ರಾಮಕತೆಯ ಒಂದು ಪದ
ಪೂರ್ಣ ಬಾಳು ಪುಣ್ಯ ಪಾತ್ರ
ಅಂದು ಒಂದು ನಾಂದಿ ಪದ್ಯ
ಇಂದು ಮಹಾ ಕಾವ್ಯ ಜಾಲ…. ಹೀಂಗೆ ಮುಂದುವರೆತ್ತ ಪದ್ಯ ಹಾಡಿದವು. ಅದಕ್ಕೆ ಸರಿಯಾಗಿ ನೀರ್ನಳ್ಳಿ ಮಾವ ಚಿತ್ರ ಬರದವು.

ಈ ಐದು ದಿನಲ್ಲಿ ರಾಮಾಯಣದ ಮೂಲಕಥೆಯ, ಹೇಳೀರೆ ರಾವಣನ ಕಥೆಯ ಹೇಳ್ತೆಯೋ . ಏಕೆ ಹೇಳಿರೆ ರಾವಣ ಹೇಳ್ತ ಧೂರ್ತ, ಧರ್ಮಾಂಧ ಇಲ್ಲದ್ದೇ ಇರ್ತಿದ್ದರೆ ರಾಮಾಯಣ ಆವ್ತಿತ್ತಿಲ್ಲೆ. ಹಾಂಗಾಗಿ ರಾವಣ ಹೇಳಿರೆ ರಾಕ್ಷಸ, ಬ್ರಹ್ಮ ರಾಕ್ಷಸ. ಅಪ್ಪ ಅಮ್ಮ ಬೇರೆ ಬೇರೆ ಕುಲದವು. ಈಗಾಣ ಭಾಷೆಲಿ ಹೇಳ್ತರೆ ‘ಕ್ರೋಸು ಬ್ರೀಡು’. ನಮ್ಮ ಜೆರ್ಸಿ ದನದಾಂಗೆ ಹೇಳಿದವು. ಆದರೆ ಹೀಂಗಿರ್ತ ರಾವಣ, ಇದ್ದಲ್ಲಿಗೆ ರಾಮ ಏಕೆ ಹೋದ ಅಲ್ಲದ್ದರೆ ರಾಮನ ಹುಡ್ಕಿಗೊಂಡು ರಾವಣ ಏಕೆ ಬಂದ ಹೇಳಿ ನೋಡಿರೆ  ರಾವಣನ ಮನಸ್ಸಿನೊಳ ಜಯ ವಿಜಯರ ಹಾಂಗಿಪ್ಪ ಒಳ್ಳೆ ಮನಸ್ಸುದೇ ಇತ್ತು. ಜಯ ವಿಜಯರು ದ್ವಾರಪಾಲಕರಾಗಿದ್ದವು. ಹರಿಯ ಪೂಜಿಸಿಯೊಂಡಿದ್ದವು. ಹಾಂಗಾದ ಕಾರಣ ರಾವಣನುದೇ ರಾಮನ ಹುಡ್ಕಿಯೊಂಡು ಬಂದದ್ದು ಹೇಳಿದವು. ಹರಿಯನ್ನು ಅರಿ ಹೇಳ್ತ ರೂಪಕವ ಶ್ರೀಧರ ಹೊಳ್ಳ ಬಳಗದವು ನೆಡೆಶಿ ಕೊಟ್ಟವು.  ದೇವರೆಂಬುದೇನು.. ಕಗ್ಗತ್ತಲ ಗವಿಯೇ…  ಹೀಂಗೆ ಮುಂದುವರಿತ್ತ ಕಗ್ಗದ ಸಾಲುಗಳನ್ನೂ ನೆನಪಿಸಿಕೊಂಡವು.

ಇಲ್ಲಿಗೆ ಮೊದಲ ದಿನದ ಮಂಗಲಕ್ಕೆ ಸಮಯ ಆತು. “ಜೈ ಜೈ ಶ್ರೀರಾಮಕಥಾ” ಪದ್ಯಕ್ಕೆ ಎಲ್ಲೋರು ಅವಕ್ಕವಕ್ಕೆ ಅರಡಿದಾಂಗೆ ನೃತ್ಯಮಾಡಿ ಅನುಭವಿಸಿದವು. ಇದಾದ ಮೇಲೆ ರಾಮಾಯಣ ಗ್ರಂಥಕ್ಕೆ ಮಂಗಳಾರತಿ ಮಾಡಿಯಪ್ಪಗ ಮುಗುದತ್ತು. ಪಾನಕ, ಪಂಚಕಜ್ಜಾಯ ತಿಂದಿಕ್ಕಿ ನಾವು ಮನುಗಲೆ ಹೆರಟತ್ತು. ನಾಳೆ ಸುಧಾರಿಕೆ ಆಯೆಕನ್ನೇ..

ಕತೆ ಮಾಂತ್ರ ಅಲ್ಲಾ ಬೈಲಿನ ಸುಮಾರು ಜೆನ ಬೈಂದವು. ಹೆಸರು ಹೇಳಿಯೊಂಡು ಕೂದರೆ ಮಂಗ್ಳೂರು ಮಾಣಿ ಎನ್ನಹೆಸರು ಹೇಳಿದ್ದಿಲ್ಲೆ ಹೇಳುಗು. ದೊಡ್ಡ ಬಾವ ಕಾಸ್ರೋಡಿಂದ ಎರಡು ಚಕ್ರ ತಿರುಗುಸಿಯೊಂಡು ಬೈಂದವು. ನಾವು ಕಾರು ನೆಡೆಸಿಯೊಂಡು ಮನೆಗೆ ಹೆರಟತ್ತು.

ಓಯೀ ಮುಗುದ್ದಿಲ್ಲೆ ನಾಳೇಯೂ ಇದ್ದು

ಹರೇರಾಮ

~
ಪೆಂಗಣ್ಣ ಪ್ರಮ್ ಬೈಲು
bingi.penga@gmail.com

ಪೆಂಗಣ್ಣ°

   

You may also like...

13 Responses

  1. anuradha says:

    ಪೆಂಗಣ್ಣ, ಎಂಗೊಗೆ ಸಿಕ್ಕಿದ್ದಿಲ್ಲೆನ್ನೆ ಹೇಳಿ ಬೇಜಾರಾವ್ತು. ಅಂತೂ ಮಂಗಳೂರಿನೋರು ಉಷಾರಿ ಮಾಡಿದಿರಿ.

  2. ಬೊಳುಂಬು ಮಾವ says:

    ಗುರುಗಳ ಪ್ರತಿಯೊಂದು ಮಾತನ್ನು ಉದ್ದರಿಸಿ ಬರದ ರಾಮಕಥೆಯ ವರದಿ ನಿಜವಾಗಿಯೂ ಅದ್ಭುತ. ರಾಮಕಥೆಗೆ ಬಪ್ಪಲೆಡಿಯದ್ದ ಎನ್ನ ಹಾಂಗಿಪ್ಪವಕ್ಕೆ, ರಾಮಕಥೆಯ ಯಥಾವತ್ ಚಿತ್ರಣ ಸಿಕ್ಕಿತ್ತು. ಧನ್ಯವಾದಂಗೊ.
    ಎಲ್ಲೋರಲ್ಲಿಯೂ ರಾಮನ ಕಂಡರೆ, ರಾಮಂಗೆ ರಾಮ ಹೇಳುವ ರಾಮ ಕಥೆಯೇ ರಾಮಕಥೆ ಹೇಳಿ ಹೇಳಿದವು. ಇಲ್ಲಿ ನಾವೇ ರಾಮ ಹೇಳುಲಕ್ಕು . ಗುರುಗೊ ಹೇಳಿದ್ದರ ಪೆಂಗಣ್ಣ ಸರಿಯಾಗಿಯೇ ಹೇಳಿದ್ದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *