Oppanna.com

ಸಮರ – ಸಾಮರಸ್ಯ – ಸಂರಕ್ಷಣೆ

ಬರದೋರು :   ಪೆಂಗಣ್ಣ°    on   21/09/2010    9 ಒಪ್ಪಂಗೊ

ಪೆಂಗಣ್ಣ°

ಸುಮಾರು ದಿನ ಆತು ಈ ಹೊಡೆಂಗೆ ಬಾರದ್ದೆ. ಪ್ರವಾಸದ ನೆಡೂಕೆ ಅಂತರ್ಜಾಲ ಸೆರಿ ಸಿಕ್ಕುತ್ತಿಲ್ಲೆ.
ಮಾತಾಡುಲೆ ಸುದ್ದಿಗಳೂ ತುಂಬಾ ಇದ್ದು. ಸಂಕ್ಷಿಪ್ತವಾಗಿ ಹೇಳುತ್ತೆ ಆಗದೋ?
ಅಖೇರಿಯ ಸುದ್ದಿಯ ಮರುದಿನ ಸಾಮರಸ್ಯದ್ದೇ ದೊಡ್ಡ ಸುದ್ದಿ.
ಮಂತ್ರಿ ರಾಜೀನಾಮೆ, ಪುಟ್ಟಜ್ಜ ಸತ್ತದ್ದು.. ಕರ್ಣಾಟಕ ಮಂತ್ರಿ ಮಂಡಲ ವಿಸ್ತರಣೆ,
ಪೆಟ್ರೋಲಿಂಗೆ ದಿನಕೊಂದು ಸರ್ತಿ ರೇಟು ಜಾಸ್ತಿ ಅಪ್ಪದು ಇನ್ನೂ ಏನೇನೋ..
ಎಲ್ಲೋರು ಕೋಮುವಾದ ಹೇಳ್ತದನ್ನೆ ಜಾಸ್ತಿ ಮಾತಾಡುದು. ಕೋಮುವಾದ ಹೇಳ್ರೆ ಎಂತರ ಗೊಂತಿದ್ದೊ. ಎನಗು ಅರಡಿಯಾ.!
ಸಾಮರಸ್ಯ ಸುದ್ದಿ ಎಂತರ ಗ್ರೇಶಿದಿರೋ? ಅದೇ ಮೊನ್ನೆ ದಲಿತಕೇರಿಗೆ ಬ್ರಾಹ್ಮಣ, ಬ್ರಾಹ್ಮಣ ಕೇರಿಗೆ ದಲಿತ ಸ್ವಾಮೀಜಿ ಬೇಟಿ ಕೊಟ್ಟದ್ದು..
ನಮ್ಮ ಕೆಪ್ಪಣ್ಣಂಗೆ ನಾಕು ದಿನ ಪುರುಸೋತ್ತೆ ಇತ್ತಿಲ್ಲೆಡ. ಅಲ್ಲಿ ಎಂತರ ಸಾಮರಸ್ಯ ಆಯಿದು ಎನಗೆ ಗೊಂತಿಲ್ಲೆ.
ನಮ್ಮಲ್ಲಿ ಮೊದಲಿಂದಲೂ ಸಾಮರಸ್ಯ ಇಲ್ಲೆಯೋ? ಕಂಡಿತಾ ಇದ್ದು.  ನಮ್ಮಲ್ಲಿ ಕೆಲಸಕ್ಕೆ ಬಟ್ಯನೂ ಬಕ್ಕು, ಬಾಬುವೂ ಇಕ್ಕು.
ಹಬ್ಬ ಬಂದರೆ ಅವಕ್ಕೆ ಹೊಸ ವಸ್ತ್ರ ಕೊಡುಗು ಹಿರಿಯೋರು, ಅವ್ವುದೆ ವಿಷುವಿಂಗೆ ಹೊಸ ಬೆಳೆ ಕೊಡುಗು. ಸಮರಸಲ್ಲೆ ಜೀವನ ಇತ್ತು.
ಎಲ್ಲಿ ಇದು ಹಾಳಾತು. ಬೇರೆ ಧರ್ಮಗಳ ಇಲ್ಲಿ ಸ್ಥಾಪಿಸುಲೆ ಹೊರಟಪ್ಪಗ ಅಲ್ಲದಾ
ಅಲ್ಲಿಯೊರಗೆ ನಮ್ಮಲ್ಲಿ ಸಮರ ಇತ್ತೋ.. ಎಂಗ ಬೆಳೆಯೆಕ್ಕಾದರೆ ಇವು ಸೋಲೆಕ್ಕು ಇದು ಅನ್ಯ ಧರ್ಮಿಯರಿಗಿದ್ದ ಮೊದಲ ಕಾರ್ಯ.
ಅದರ ಪೋರೈಸುಲೆ ನಮ್ಮನಮ್ಮಲ್ಲಿ ಜೆಗಳ ಮಾಡ್ಸಿದವು. ಮೃದು ಹೃದಯಿಗೊ ಅವಕ್ಕೆ ಸೋತವು, ಇನ್ನು ಕೆಲವು ಬುದ್ದಿಜೀವಿಗೋ ಕೂಡಾ
ಆನು ಹೇಳಿದ್ದೆ ಸರಿ ಹೇಳ್ತವು, ಇಲ್ಲಿ ತಪ್ಪು ಹುಡುಕಿ ಅಲ್ಲಿ ಹೋದವು. ಇಲ್ಲಿಂದ ಉಳುದವರ ಕರ್ಕೋಂಡೋಪಲೆ ಬೇರೆ ಬೇರೆ ರೀತಿಲಿ ಕೆಲಸ ಶುರು ಮಾಡಿದವು.
ಎಲ್ಲಾ ಧರ್ಮಲ್ಲಿ, ನಮ್ಮ ಸಂವಿಧಾನಲ್ಲಿ ಯೇವದರ ಹತ್ಯೆ ಮಾಡುಲಾಗ ಹೇಳಿದ್ದವೋ ಅದನ್ನೆ ಮಾಡ್ಸಿ ಜಗಳ ಶುರು ಮಾಡಿದವು.
ಅಲ್ಲಿಂದ ಶುರು ಆದ್ದು ಇಲ್ಲಿಯೊರೆಗೆ ಬಂತು. ಈಗ ನವಗೆ ಜಾಗೆ ಇರದೋ ಹೇಳುವಲ್ಲಿವರೆಗೆ.
ಆನು ಸಾಮರಸ್ಯದ ನಡಿಗೆ ಆದ್ದರ ಬಗ್ಗೆ ಏನೂ ಹೇಳ್ತಿಲ್ಲೆ. ನಮ್ಮ ಧರ್ಮದ ಉಳಿವಿಗೆ ಅಗತ್ಯವೋ ಏನೋ?
ಹೇಂಗೆ ನಮ್ಮ ಗುರುಗೋ ಜಗತ್ತಿನ ಅಮ್ಮ ಉಂಬೆಯ ಉಳಿಸುವ ಕಾರ್ಯ ಮಾಡ್ತಾ ಇದ್ದವೋ, ಹಾಂಗೆ ಅವ್ವುಜಗತ್ತಿನ ಅಪ್ಪ ಸನಾತನ ಧರ್ಮವ ಉಳ್ಸುವ ಕಾರ್ಯವ ಮಾಡ್ತಾ ಇದ್ದವೋ ಏನೋ?
ಇರಲಿ, ದೇಶ ರಕ್ಷಣೆಗೆ ಎಂತೆಲ್ಲ ಅಗತ್ಯ ಬೇಕೋ ಅದು ಆಯೆಕ್ಕೆ. ಇಲ್ಲದ್ರೆ ನಾವು ಸನಾತನ ಭಾರತವ ನೋduದು ಸಾಧ್ಯವೇ ಇಲ್ಲೆ.
ಧರ್ಮೋ ರಕ್ಷತಿ ರಕ್ಷಿತ: ಹೇಳಿದ್ದವು ಹಿರಿಯೋರು. ಅದು ಅಯೇಕ್ಕಾದರೆ ಸಾಧ್ಯ ಇಪ್ಪದು ಅದ್ವೈತಂದಲೇ..!
ಇನ್ನು ಮಂತ್ರಿ ರಾಜೀನಾಮೆ ಹೇಳಿದೆ. ಏನೋ ಮೊದಲೆ ಹೇಳಿದಾಂಗೆ ಕೈ ಸೆರಿ ಇಪ್ಪವು ಆರು?
ರಾಜಕೀಯಲ್ಲಿ ರಾಜಕೀಯ ಸಾಮಾನ್ಯ! ಇನ್ನು ಜನ ಸಾಮಾನ್ಯ !!! ಮಾನ್ಯತೆ ಸಿಕ್ಕುಗೋ ನವಗೆ!!!
ಎರಡು ದಿನಂದ ಮಂತ್ರಿ ಅಪ್ಪಲೆ ಕಾದೋಡಿದ್ದವೆಲ್ಲ ನಾನಾ ತಂತ್ರ ಶುರು ಮಾಡಿದ್ದವು ಸಾವಲ್ಲಿವರೆಗೆ.
ಪುಟ್ಟಜ್ಜ ಹೇಳಿದೆ. ಅದೇ ಗದುಗಿನ ವೀರೇಶ್ವರ  ಪುಣ್ಯಾಶ್ರಮಲ್ಲಿ ಸ್ವತಹ ಕಣ್ಣಿಲ್ಲದ್ದರೂ, ಕಣ್ಣಿಲ್ಲದವರ ಪಾಲಿನ ದೇವರು – ಪಂಡಿತ ಪುಟ್ಟರಾಜ ಗವಾಯಿ (1914-2010).
ಅವ್ವು ಇನ್ನಿಲ್ಲೆ. ಅವರ ಆಶ್ರಮಲ್ಲಿ ರಾಜಕೀಯ ಬರದ್ದೆ, ಅವು ಶುರು ಮಾಡಿದ ಕಾರ್ಯಂಗ ನಿರಂತರ ನಡೆದು ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ.
ಇಂದ್ರಾಣ ಊರು: ಚಿಕ್ಕಮಗಳೂರಿಂದ, ಹಾಸನ, ಮೈಸೂರು ಗದಗ ಆಗಿ ಬೆಂಗಳೂರು.

~

ಪೆಂಗ ಪ್ರಮ್ ಬೈಲು.
bingi.penga@gmail.com

9 thoughts on “ಸಮರ – ಸಾಮರಸ್ಯ – ಸಂರಕ್ಷಣೆ

  1. ಲೇಖನ ಅದಕ್ಕೆ ಬಂದ ಒಪ್ಪಂಗ ಎಲ್ಲಾ ಲಾಯಿಕ್ಕಿದ್ದು. ನಾವು ನಮ್ಮತನವ ಮರತ್ತದುದೇ ಒಂದು ಕಾರಣ ಆಗಿಕ್ಕಲ್ಲದಾ? ನಾವು ದಿನಲ್ಲಿ ರಜ್ಜ ಹೊತ್ತಾದರೂ ಹೇಂಗಾರು ಮಾಡಿ ನಮ್ಮತನದ ಬಗ್ಗೆ ಆಲೋಚನೆ ಮಾಡ್ರೆ,ನಮ್ಮ ಗುರುಗೊಳ ಮಾರ್ಗದರ್ಶನಂದ ನಾವು ನೆಮ್ಮದಿಂದ ಇಪ್ಪಲಕ್ಕು……..

  2. ಸಮಯೋಚಿತ ಲೇಖನ 🙂 ಬರದ್ದೂ ಲಾಯ್ಕ ಆಯ್ದು, ಯಾವುದೇ ಕೋಮು ಅಥವ ವ್ಯಕ್ತಿಯ ಹೆಸರು ಹೇಳದ್ದೇ..ಓದುವವಕ್ಕೆ ವಿಷಯ ಮನದಟ್ಟಪ್ಪ ಹಾಂಗೆ ಬರದ್ದಿ… ಇಂಗ್ಲೀಷಿಲ್ಲಿ ಹೇಳ್ತರೆ keep it up [ಕಂಪ್ಯೂಟರಿನ ಅಟ್ಟಲ್ಲಿ ಮಡುಗೆಡಿ] 🙂
    ಅಣ್ಣ, ನಿಂಗೊ ಇಲ್ಲಿ ಧರ್ಮ ಹೇಳ್ತ ಶಬ್ದದ ಉಪಯೋಗ ಮಾಡಿದ್ದಿ.. ಅದು ಅಷ್ಟು ಸರಿ ಅಲ್ಲ ಹೇಳಿ ಎನ್ನ ಅಭಿಪ್ರಾಯ, ಧರ್ಮ ಎಲ್ಲೋರಿಂಗೂ ಒಂದೇ…. ಬೇರೆ ಬೇರೆ ಹೇಳಿ ಇಪ್ಪದು ಮತಂಗೊ ಅಲ್ಲದಾ? ಮತಕ್ಕೂ ಧರ್ಮಕ್ಕೂ ವ್ಯತ್ಯಾಸ ಇದ್ದಲ್ಲದಾ?[ಈ ವ್ಯತ್ಯಾಸದ ಬಗ್ಗೆ ಶ್ರೀಗುರುಗೊ ತುಂಬಾ ಚೆಂದಕ್ಕೆ ವಿವರಣೆ ಕೊಡ್ತವು].ಪ್ರಪಂಚದ ಎಲ್ಲೋರಿಂಗೂ ಒಂದೇ ಧರ್ಮ “ಸನಾತನ ಧರ್ಮ”. ಗುರಿ ಒಂದೇ ಆದರೂ ದಾರಿ ಬೇರೆ ಬೇರೆ ಇಪ್ಪ ಹಾಂಗೆ ಮತಂಗೊ ಬೇರೆ ಬೇರೆ.
    ತಪ್ಪುಗೊ, ಅನ್ಯಾಯಂಗೊ, ಹಿಂಸೆ ಇತ್ಯಾದಿ ನಡೆತ್ತಾ ಇಪ್ಪದಪ್ಪು ಆದರೆ ಅದಕ್ಕೆಲ್ಲಾ ಕಾರಣ..ಅದರ ಮಾಡುವವ್ವು ಮಾಂತ್ರವೆಯಾ? ಇಂಗ್ಲೀಷಿಲ್ಲಿ ಒಂದು ಮಾತು ಹೇಳ್ತವು “the world suffers not because of the violence of bad people but the silence of good people”. ನಮ್ಮದೆಲ್ಲೋರದ್ದೂ ತಪ್ಪು ಎಲ್ಲಿಯೋ ಒಂದು ರಜ್ಜ ಆದರೂ ಇದ್ದಲ್ಲದ?ನಾವು ನಮ್ಮ ಸ್ವಂತಿಕೆಯ ಬಿಟ್ಟು ಬದುಕುದು ನಮ್ಮ ತಪ್ಪಲ್ಲದಾ? ಸತ್ಯ ಅಸತ್ಯದ ವ್ಯತ್ಯಾಸವನ್ನೂ ತಿಳಿವಲೆ ಎಡಿಯದ್ದಷ್ಟು ಕುರುಡು ನಮ್ಮದೋ ಅಥವಾ..ಅಂತಹ ಕತ್ತಲೆಲಿ ನಮ್ಮ ನೂಕಿದ್ದವೋ ಅಲ್ಲ ದೊಡ್ಡ ಹೊಂಡಕ್ಕೆ ಕಾಲುಜಾರಿ ಬಿದ್ದಿದೋ ನಾವು? ಇನ್ನಾರೂ ಅರ್ಥ ಮಾಡಿಗೊಳ್ಳದ್ದರೆ ಮುಂದೊಂದು ದಿನ ಅಸ್ತಿತ್ವವೇ ಇಲ್ಲದ್ದೆ ಅಪ್ಪ ಸಾಧ್ಯತೆ ಇದ್ದು. ಆದರೆ ಆ ಹೆದರಿಕೆ ಬೇಡ ಈಗ 🙂 ನಮ್ಮೊಟ್ಟಿಂಗೆ ಶ್ರೀಗುರುಗೊ ಇದ್ದವು. ಕುರುಡಾದರೆ ಕೈ ಹಿಡುದು ನಡಶುತ್ತವು, ಕತ್ತಲೆ ತುಂಬಿರೆ ಜ್ಞಾನ ದೀಪವ ಹಿಡ್ಕೊಂಡು ನಿಲ್ತವು, ಹೊಂಡಕ್ಕೆ ಬಿದ್ದವರ ಕೈ ಹಿಡುದು ಮೇಲೆ ತತ್ತವು. ಆದರೆ ನವಗೆ ಮನಸ್ಸಿರೆಕು ಸರಿದಾರಿಗೆ ಬಪ್ಪಲೆ ಅಷ್ಟೆ. ಅಲ್ಲದಾ?
    [ಇಲ್ಲಿ “ನಾವು” ಹೇಳಿರೆ ಬೈಲಿನೋರು ಹೇಳಿ ಅಲ್ಲ, ಅನ್ಯಾಯ ಅವ್ತಾ ಇದ್ದು ಹೇಳಿ ಮಾತಾಡಿಗೊಂಡು ಯಾವುದೇ ಪರಿಹಾರದ ಆಲೋಚನೆಗೆ ಪ್ರಯತ್ನ ಮಾಡದ್ದೆ ಇಪ್ಪ ಪ್ರಪಂಚದ ಎಲ್ಲಾ ಜನರಿಂಗೆ ಅನ್ವಯಿಸುತ್ತು]

  3. ಶ್ರೀಶಣ್ಣಾ,
    ಸಮಾಜದ ಈ ವಿಂಗಡಣೆಯ ಸಂಧಿ ಯಾವದಾದರೆಂತ?ಇದೊಂದು ಲೋಪವೇ ಅಲ್ಲದೋ?

    1. ಲೋಪ ಲೋಪವೇ. ನವಗೆ “ಆದೇಶ” ಸಂಧಿಯೂ ಇಕ್ಕು. ಆದರೆ “ಆಗಮ” ಸಂಧಿ ಕಾಲ ಬಕ್ಕೋ?

  4. ಮಂತ್ರಿಮಂಡಲ ವಿಸ್ತರಣೆ ಆಗಿ ಆಗಿ … ಇನ್ನು ರಾಜ್ಯದ ಪ್ರತಿಯೊಬ್ಬನೂ ಮಂತ್ರಿ ಅಕ್ಕೋ ಹೇಳಿ ಸಂಶಯ.ಹೆಂಗೂ ಊರೂರಿಲಿ ವಿಕಾಸ ಸೌಧಂಗ ಏಳುತ್ತಾ ಇದ್ದು.
    ಬ್ರಾಹ್ಮಣರ ಕೇರಿ ಹೇಳಿಯೂ ಇದ್ದೋ ಭಾವಾ? ಬ್ರಾಹ್ಮಣರು ಅಕೇರಿ ಹೇಳಿ ಆಯಿದಲ್ಲದೋ ಪ್ರಸಕ್ತ ರಾಜಕೀಯದ ಮೀಸಲಾತಿ ನೀತಿಂದಾಗಿ?

    1. [ಬ್ರಾಹ್ಮಣರ ಕೇರಿ]
      ಬ್ರಾಹ್ಮಣರು + ಅಕೇರಿ = ಬ್ರಾಹ್ಮಣರಕೇರಿ ?
      ಎಂತ ಸಂಧಿಯೋ, ಅರಡಿಯ

    2. ಬ್ರಾಹ್ಮಣರು ಅಕೇರಿ ಹೇಳಿ ಮಾಡಿರೂ ಕೆಸರಿಲ್ಲಿ ತಾವರೆ ಅರಳುವ ಹಾಂಗೆ ಬ್ರಾಹ್ಮಣರು ಎಲ್ಲಾ ಕ್ಷೇತ್ರಲ್ಲಿಯೂ ಮಿನುಗುತ್ತವು !!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×