Oppanna.com

ಚರ್ಚೆಗಿಪ್ಪದು

ಬರದೋರು :   ಕೇಜಿಮಾವ°    on   07/10/2010    15 ಒಪ್ಪಂಗೊ

ಮಾತುಗೊ ಒಂದೊಂದಾಗಿ ನಿಲ್ಲದ್ದೆ ಪರಸ್ಪರ ಚರ್ಚೆ ಆದರೆಯೇ ಅದು ಫಲಿತಾಂಶ ಕೊಡುಗಷ್ಟೇ!
ಕೇಜಿಮಾವಂಗೆ ಇದು ಅಂದಾಜಿ ಆಗಿ, ಪರಸ್ಪರ ಚರ್ಚೆ ಮಾಡುವೊ ಹೇಳಿಗೊಂಡು ಈ ಶುದ್ದಿಯ ಹಾಕಿದವು.
ಚರ್ಚೆಗೆ ಅದರದ್ದೇ ಆದ ವೇದಿಕೆಯ (forum) ಸದ್ಯಲ್ಲೇ ತಯಾರಿ ಮಾಡ್ತು, ಸದ್ಯಕ್ಕೆ ಶುದ್ದಿಲಿಯೇ ಚರ್ಚೆ ಮಾಡಿಗೊಂಬೊ°.

ಕೇಜಿಮಾವನ ಈ ’ಆರಂಭ’ಕ್ಕೆ ಬೈಲಿನವರ ಅಭಿವಂದನೆಗೊ.
~
ಗುರಿಕ್ಕಾರ°

ಕೃಷ್ಣ ಭಾವ ಒಳ್ಳೆ ಪ್ರಶ್ನೆ ಕೇಳಿದ°.
ಹಿಂದಾಣ ಕಾಲದವು ಬೈಪ್ಪಣೆ ಇಲ್ಲದ್ದೆ ಉಂಡುಗೊಂದಿತ್ತಿದ್ದವು, ಮುದುಕರಪ್ಪಲಿಯವರೆಗೂ ಕೆಲಸ ಮಾಡಿಗೊಂಡಿತ್ತಿದ್ದವು,ಹಾಂಗಾಗಿ ಹಿಂದಣ ಕ್ರಮವೇ ಒಳ್ಳೆದಲ್ಲದೊ.
ಅವ° ಹೇಳುದು ಸ್ವಲ್ಪ ಮಟ್ಟಿಂಗೆ ಸರಿಯೇ.
ಆನೀಗ ಕ್ರಮಂಗಳ ಬಗ್ಗೆ ಬರೆತ್ತಿಲ್ಲೆ.
ಏಂತಕೆ ಹೇಳಿರೆ ನಾವೀಗ ಕ್ರಮ ಬದಲಾವಣೆ ಮಾದುವ ಪರಿಸ್ತಿತಿಲಿ ಇಲ್ಲೆ,ಹೊಸ ಕ್ರಮ ಹೊಸ ಕೆಲಸ ಹೊಸ ಜೀವನಕ್ಕೆ ಒಗ್ಗಿ ಹೋಗಿಯೊಂಡಾಯಿದು.
ಹಿಂದಾಣೋರು ಶಾರೀರಿಕವಾಗಿ ನಾವಿಪ್ಪದಕ್ಕಿಂತ ಗಟ್ಟಿಯಾಗಿತ್ತಿದ್ದವಾ.ಅಪ್ಪು.

ನಮ್ಮ ಅಜ್ಜಂದ್ರ ಕಾಲಲ್ಲಿ ಆಧುನಿಕ ವೈದ್ಯಕೀಯ ಶಾಸ್ತ್ರ ಇನ್ನೂ ಚಾಲ್ತಿಗೆ ಬಂದಿತ್ತಿಲ್ಲೆ.
ಯಾವದೇ ರೀತಿಯ ಜನಸಂಖ್ಯೆ ನಿಯಂತ್ರಣ ಚಾಲ್ತಿಲಿ ಇತ್ತಿಲ್ಲೆ ಅದಾ.ಅಂಬಗ ಒಂದು ದಂಪತಿಗೆ ಒಂದು ಮಗುವಿಂದ ಹಿಡುದು ಹದ್ನೆಂಟು ಮಕ್ಕೊ ಹುಟ್ಟಿದ್ದೂ ಇಕ್ಕು.
ಆದರೆ ಹೆಚ್ಚಿನ ಉದಾಹರೆಣೆಗಳಲ್ಲಿ ನಾಲ್ಕೋ ಐದೋ ಮಕ್ಕೊ ಒಳುದಿಕ್ಕು.ಹೆಚ್ಚು ಒಳುದ್ದದು ಸ್ವಾಭಾವಿಕವಾಗಿ ಗಟ್ಟಿಯಗಿದ್ದ ಕಾರಣ.
ನಾವು ಪ್ರಕೃತಿಲಿ ನೋಡುತ್ತು.ಸೌತ್ತೆ ಬಿತ್ತು ಹಾಕಿರೆ ಅದು ರಜಾ ದೊಡ್ಡಪ್ಪಾಗ ಎಡೇಂದ ಸೆಸಿ ಕಿತ್ತು ಹಾಕಿ ಒಳ್ಳೆದಿಪ್ಪ ಸೆಸಿ ಮಾಂತ್ರ ಮಡಿಕ್ಕೊಂಬದರ ನಮ್ಮ ಮನೆಗಳಲ್ಲಿ ನೋಡಿದ್ದು.
ಹಾಂಗೇ ಹುಟ್ಟಿದ ಮಕ್ಕಳಲ್ಲಿ ಯಾವದೇ ರೀತಿಯ ಅನಾರೋಗ್ಯ ಇದ್ದಲ್ಲಿ ಅಥವಾ ಮುಂದೆ ಆರೋಗ್ಯಲ್ಲಿ ಇಪ್ಪಲೆ ಸಾಧ್ಯ ಇಲ್ಲೆ ಹೇಳಿ ಇದ್ದ ಮಕ್ಕೊ ಹುಟ್ಟಿದ ಕೆಲವೇ ದಿನಲ್ಲಿ ಅಥವಾ ವರ್ಷಲ್ಲಿ ಸತ್ತುಗೊಂಡಿತ್ತಿದ್ದವು.

ನಮ್ಮ ದೇಶಲ್ಲಿ ೧೯೩೦ನೇ ಇಸವಿಲಿ ೧೦೦೦ ಮಕ್ಕಳಲ್ಲಿ ೨೩೦ ಮಕ್ಕ ಒಂದು ವರ್ಷ ಆಯೆಕ್ಕಾರೆ ಹೀಂಗೆ ಸತ್ತೊಂಡಿತ್ತಿದ್ದವು.(ಇಂದು ಅದು ೩೦ರ ಹಿಂದೆ ಮುಂದೆ ಇದ್ದು).
ಒಳುದವೂ ಕೂಡಾ ಬೇರೆ ಬೇರೆ ಕಾಯಿಲೆಲಿ ಒಳುಕ್ಕೊಂಡಿತ್ತಿದವಿಲ್ಲೆ.ನವಗೆ ನೆಂಪಿಕ್ಕು,ಅವನ ಹೆಂಡತ್ತಿ ಬಸರಿ ಕೂಸು ಹೆರಿಗೆಲಿ ಹೋತಾಡ,ಅವನ ಅಳಿಯ ಸನ್ನಿಲಿ ಹೋದಾಡ ಹೇಳಿ ಮಾತಾಡಿಯೊಂಡಿದ್ದದು.
ಎರಡನೇ ಮದುವೆ ಬಾರೀ ಸಾಮಾನ್ಯ ಆಗಿತ್ತು.ಸಣ್ಣ ಪ್ರಾಯದ ವಿಧವೆ,ಹೆಂಡತ್ತಿ ಸತ್ತು ಎರಡನೇ ಮದುವೆ ಆದೋರ ತುಂಬಾ ಕಂಡೊಂಡಿತ್ತು.
ಪೊಲಿಯೋ ಆಗಿ ಕಾಲು ಸರಿ ಇಲ್ಲದ್ದ ಮಕ್ಕೊ ಎಷ್ಟಿತ್ತಿದ್ದವು?
ಹೀಂಗೆ ಒಳುದ ಮಗು ದೊಡ್ಡ ಆಗಿ ಮದುವೆ ಅಪ್ಪಗ ಸರಿಯಾದ ಕೂಸು ನೋಡಿ ಮದುವೆ ಆಗಿಯೊಂಡಿತ್ತಲ್ಲದೊ?
ಮದುವೆ ಅಪ್ಪಗಳೂ ಕೂಸು ಮಾಣಿಯ ಕುಟುಂಬದ ಆರೊಗ್ಯ ಕೂಡಾ ಹೇಂಗಿದ್ದು ಹೇಳಿ ನೋಡಿಯೇ ಆಗಿಯೊಂಡಿದ್ದದು.ಇದರಿಂದಾಗಿ ಸಂತಾನ ಒಳ್ಳೆದಾಗಿಯೊಂಡಿತ್ತು.

ಆ ಕಾಲಲ್ಲಿ ಹೆಚ್ಚಿನವು ಕೃಷಿ ಮಾಡಿ ಬದುಕ್ಕಿಯೊಂಡಿತ್ತಿದ್ದವು.ಅವಕ್ಕೆ ಬೇಕಾದ ಅಕ್ಕಿ,ತರಕಾರಿ ಮನೆಲೇ ಆಗಿಯೊಂಡಿತ್ತು.
ಹಾಲು ಪ್ಲೇಸ್ಟಿಕ್ ತೊಟ್ಟೆಲಿ ಅಲ್ಲ,ಮನೆಲಿ ದನ ಕರದು ಹಾಲೋ ಮಜ್ಜಿಗೆಯೋ ಮಾಡಿ ಉಪಯೋಗ ಮಾಡಿಯೊಂಡಿತ್ತಿದ್ದವು.
ಉದಿಯಪ್ಪಾಗ ಆಳುಗಳೊಟ್ಟಿಂಗೆ ತೊಟಕ್ಕೋ,ಗೆದ್ದೆಗೋ ಹೋಗಿ ಗೈಕ್ಕೊಂಡಿತ್ತಿದ್ದವು.ಹಳ್ಳಿಲಿ ಈಗಾಣ ಹಾಂಗೆ ಕೂಪಲೆ ಕುರ್ಶಿ ಇಲ್ಲೆ,ಮನಗೆ ನೆಂಟ್ರು ಬಂದರೆ ಹಸೆ ಹಾಕಿ ಕೂಪಲೆ ಹೇಳುದದಾ.
ಹಾಂಗಾಗಿ ಇಂದು ಬೈಪ್ಪಣೆ ಬೇಡದ್ದದಪ್ಪು. ಆ ತಲೆಮಾರಿನವು(ಬದ್ಕಿ ಒಳುದವು)ಆರೋಗ್ಯಲ್ಲಿ ಗಟ್ಟಿ ಇದ್ದದು ಅಪ್ಪು.
ಆ ಕ್ರಮಂಗೊ ಒಳ್ಳೆದೇ.ಹಾಂಗೆ ಹೇಳಿ ಈಗ ನಾವು ಮಕ್ಕಳ ಆರೋಗ್ಯ ಸರಿಯಾಗಿಪ್ಪಲೆ ಬೇಕಾಗಿ ಕಾಯಿಲೆ ಬಾರದ್ದ ಹಾಂಗೆ ಮದ್ದು,ಇಂಜಕ್ಶನ್ ಕೊಡುಸುದು ತಪ್ಪು ಹೇಳಿರೆ ಒಪ್ಪುವ ವಿಷಯ ಅಲ್ಲನ್ನೆ.
ಪೇಟೆಲಿ ಸಣ್ಣ ಮನೆ ಮಾಡಿ ನೆಲಲ್ಲೇ ಕೂದು ಉಂಬೊ ಹೇಳಿರೆ ಅಪ್ಪ ಜೆಂಬಾರ ಅಲ್ಲನ್ನೆ.
ಈ ಮದ್ದುಗಳ ಪ್ರಭಾವಂದಾಗಿ ಆರೋಗ್ಯಲ್ಲಿ ಬದುಕ್ಕುವ ಸಾಮರ್ಥ್ಯ ಇಲ್ಲದ್ದ ಮಗು ದೊಡ್ಡಪ್ಪಾಗ ಗಟ್ಟಿಯಾಗಿರೇಕು ಹೇಳಿ ನಿರೀಕ್ಷೆ ಸರಿಯಲ್ಲನ್ನೆ.
ರಾಸಾಯನಿಕವೇ ಉಪಯೋಗ ಅಪ್ಪ ಹಣ್ಣು ತರಕಾರಿ ತಿಂದು ಎಷ್ಟು ಗಟ್ಟಿಯಾಗಿಪ್ಪಲೆಡಿಗಣ್ಣೋ?.

ಹಾಂಗೆ ಹೇಳಿ ನಾವು ಇಂದು ಬದಲಾದ ಪರಿಸ್ತಿತಿಲಿ ಅನಿವಾರ್ಯವಾಗಿ ಗುಣ ಮಟ್ಟ ಇಲ್ಲದ್ದ ಆಹಾರ ತಿನ್ನೆಕ್ಕಾವುತ್ತು.
ಜನಸಂಖ್ಯೆ ಹೆಚ್ಚಾದ ಕಾರಣ ನಮ್ಮ ದೇಶಲ್ಲಿ ಊಟ ಇಲ್ಲದ್ದ ಪರಿಸ್ತಿತಿ ಇದ್ದದು ಅಪ್ಪಚ್ಚಿಗೋ ಮಾವಂಗೋ ನೆಂಪಿಕ್ಕು.
ಅದರೊಟ್ಟಿಂಗೆ ರಾಜಕೀಯ,ಅಂತರ್ರಾಷ್ಟ್ರೀಯ ಒತ್ತಡಂಗೊ ನಮ್ಮಲ್ಲಿ ರಾಸಾಯನಿಕ ಉಪಯೋಗ ಮಾಡಿ ಕೃಷಿ ಮಾಡುವಲ್ಲಿಂಗೆ ನಮ್ಮ ತಂದಿಕ್ಕು.
ಅದು ಒಳ್ಳೆದೋ ಹಾಳೋ,ನಮ್ಮ ಮಕ್ಕೊ ನಮ್ಮ ಕಣ್ಣೆದುರು ಬದುಕ್ಕಿ ಒಳಿವದು ನೂರಕ್ಕೆ ನೂರು ಸತ್ಯ. ಇಂದು ಹುಟ್ಟಿದ ಮಕ್ಕೊ ಒಂದು ವರ್ಷದೊಳ ಸಾಯುವದು ಕಮ್ಮಿ ಆಗಿ ೧೦೦೦ ಹೆರಿಗೆಲಿ ೨೫ರ ವರೆಗೆ ಇಳುದ್ದು ಕಾಣ್ತು.

ಹುಟ್ಟಿ ಮಗು ಸಾಯುವದು ಇಲ್ಲೆ ಹೇಳುವ ಮಟ್ಟಕ್ಕೆ,ಹೆರಿಗೆಲಿ ಕೂಸುಗೊ ಪ್ರಾಣ ಕಳಕ್ಕೊಂಬದು ತೀರಾ ಕಮ್ಮಿ ಆಯಿದು.
(ಸಿಸೇರಿಅನ್ ಹೆರಿಗೆಯ ವಿರೋಧ ಮಾಡೆಡಿ).ಇಂದು ನಿಂಗೊ ಎಷ್ಟು ಎರಡ್ಣೇ ಮದುವೆ,ಗೆಂಡ/ಹೆಂಡತ್ತಿ ಸತ್ತು,ಅಪ್ಪದು ನೋಡಿದ್ದಿ?
ಡೈವೋರ್ಸ್ ಆದರೆ ಎನಗರಡಿಯ.
ಇದು ತಾರ್ಕಿಕ ಅಂತ್ಯ ಕಾಂಬ ವಿಷಯ ಅಲ್ಲ.ಆ ಕಾಲಕ್ಕೆ ಅದು ಸುಖ,ಈ ಕಾಲಕ್ಕೆ ಇದು ಸುಖ.ಎರಡರ ಮಧ್ಯೆ ಹೊಂದಾಣಿಕೆ ಮಾಡಿಯೊಂಬದು ನಮ್ಮ ಬುದ್ಧಿವಂತಿಕೆಗೆ ಬಿಟ್ಟ ವಿಚಾರ..

~

ನಿಂಗಳ,

ಕೇಜಿಮಾವ°


Dr.K.G.Bhat,M.B;B.S
Palace Road,
VITTAL.-574243,Karnataka
pH;9448850635,9902695250
http://kgbhatvittal.blogspot.com

ಕೇಜಿಮಾವ°
Latest posts by ಕೇಜಿಮಾವ° (see all)

15 thoughts on “ಚರ್ಚೆಗಿಪ್ಪದು

  1. ಹಾಂಗೆಯೇ peak oil ಹೇಳ್ತದರ ಜೊತೆಜೊತೆಗೇ ಇಪ್ಪ ವಿಷಯಂಗೊ :

    peak coal (ಇದಕ್ಕೆ ಚೂರು ಸಮಯ ಇದ್ದು ಇನ್ನುದೆ)
    peak phosphorus (ಈಗಾಗಲೇ ಬಯಿಂದಡ್ಡ)
    peak soil (ಫಲವತ್ತಾದ ಮಣ್ಣಿನ ಕೊರತೆ, ಈಗಾಗಲೇ ದೊಡ್ಡ ಸಮಸ್ಯೆ)
    peak water (ಈಗಾಗಲೇ ದೊಡ್ಡ ಸಮಸ್ಯೆ, ನವಗೆಲ್ಲರಿಂಗೂ ಗೊಂತಿದ್ದು)
    .
    .
    .

    ಇತ್ಯಾದಿ. ಇವೆಲ್ಲ ಗೂಗುಲ್ಲಿಲಿ ಒಂದರಿ ಸರ್ಚ್ ಮಾಡಿ. ನಿಂಗೊಗೇ ಗೊಂತಕ್ಕು, ಈ ಸಮಸ್ಯೆಗಳ ತೀವ್ರತೆ ಎಷ್ಟಿದ್ದು ಹೇಳಿ (http://www.treehugger.com/files/2008/05/peak-everything-8-things-we-are-running-out-of.php).

    ಇಷ್ಟೆಲ್ಲ ಇದ್ದರುದೆ, ಪೇಟೆಲಿಪ್ಪದು ಅನಿವಾರ್ಯ ಹೇಳಿ ನಾವು ಹೇಳೆಕ್ಕಾ ಹೇಳ್ತದು ಎನ್ನ ಪ್ರಶ್ನೆ.

  2. ಇನ್ನೊಂದು ಮಾತು. ಪೇಟೆಲಿ ಬದ್ಕುದು ನವಗೆ ಅನಿವಾರ್ಯ ಹೇಳಿ ಆದರೆ ಪೆಟ್ರೋಲ್ ಕಾಲ ಮುಗುದ ಮೇಲೆ (ಅದರ ಹೊಸ್ತಿಲಿ ಇದ್ದು ನಾವು) ನಾವು ಸಾವದು ಅನಿವಾರ್ಯ ಹೇಳ್ತದು ಬತ್ತು. ಹಾಂಗಾಗಿ ಜವ್ವನಿಗರೇ, ನಮ್ಮ ಜನರೇಶನ್ನಿನ ಕಾಲಲ್ಲೇ ಎಲ್ಲರೂ ಸಾವಲೆ ಸಿಧ್ಧರಾಗಿ 🙂

  3. ಆನು ಹೇಳುದು ವಿಚಿತ್ರ ಅನ್ಸುಗು. ಆದರೂ ಹೇಳ್ತೆ.

    ಒಟ್ಟಾರೆಯಾಗಿ ಭೂಮಿಲಿ ಪೆಟ್ರೋಲಿಯಂ ಮೂಲಂಗ ಕಮ್ಮಿ ಅಪ್ಪಗ ಮೊದಲಣ ಬದುಕೆ ಅನಿವಾರ್ಯ ಆವುತ್ತು (http://sampada.net/article/25174). ಇಷ್ಟ ಇರ್ಲಿ ಇಲ್ಲದ್ದೇ ಇರ್ಲಿ. ವಿಜ್ನಾನಿಗೊ ಎಂತಾರು ಪರ್ಯಾಯ ಕಂಡುಹುಡ್ಕುಗು ಹೇಳ್ತ ಒಂದು ಆಶಯ ಎಲ್ಲರಲ್ಲೂ ಇದ್ದು. ಈ ಆಶಯ ಅಜ್ನಾನಂದಾಗಿಯೇ ಅಲ್ಲದ್ದೆ ಮತ್ತೆಂತದೂ ಅಲ್ಲ ಹೇಳ್ತದು ಎನ್ನ ನಿಲುವು. ಪೆಟ್ರೋಲಿಂಗೆ ಬೇರೆ ಯಾವುದೇ ಪರ್ಯಾಯ ಇಲ್ಲೆ.

    ಹೇಳಿದ ಹಾಂಗೆ ಪೆಟ್ರೋಲ್ ಮೂಲಂಗ ಕಮ್ಮಿ ಅಪ್ಪ ಬಗ್ಗೆ (peak oil) ಪ್ರಪಂಚದಾದ್ಯಂತ ಚರ್ಚೆಗೊ ನಡೆತ್ತಾ ಇದ್ದು. ಎಲ್ಲರೂ ಒಪ್ಪುವ ವಿಷಯ ಎಂತ ಹೇಳ್ರೆ ಅದು ತುಂಬ ದೂರ ಇಲ್ಲೆ ಹೇಳಿ! ಅದಕ್ಕೆ ಎರಡು ವರ್ಷ ಇದ್ದೋ ಅಲ್ಲ ಹತ್ತು ವರ್ಷ ಇದ್ದೋ ಹೇಳ್ತದೇ ಚರ್ಚೆ ಅಷ್ಟೆ. ಮುಗಿತ್ತಾ ಇಲ್ಲೆಯಾ ಹೇಳಿ ಅಲ್ಲ 🙂

  4. {ಪೇಟೆಲಿ ಸಣ್ಣ ಮನೆ ಮಾಡಿ ನೆಲಲ್ಲೇ ಕೂದು ಉಂಬೊ ಹೇಳಿರೆ ಅಪ್ಪ ಜೆಂಬಾರ ಅಲ್ಲನ್ನೆ.}
    ಎಂತಕ್ಕೆ? ಕಾರಣ? ಎಲ್ಲರೂ ಹಾಂಗೆ ಮಾಡ್ತವು ಹೇಳಿಯೋ? ಸ್ವಂತ ಮನೆ ಮಾಡಿಕೊಂಡವು ಗೊಂತಿಲ್ಲೆ, ಎಂಗ ಬಾಡಿಗೆ ಮನೆ ಮಾಡಿಕೊಂಡದು. ಮನೆಲಿ ಬೈಪಾಣೆ ಎಲ್ಲ ಇಲ್ಲೆ. ಕೂದೊಂಡೇ ಉಂಬದು. 🙂

  5. ಆಧುನಿಕ ವೈದ್ಯ ಬಗ್ಗೆ ಎನ್ನ ಅಭಿಪ್ರಾಯ : ಅದು ರೋಗ ಪತ್ತೆಗೆ, ಅನಿವಾರ್ಯ ಆಪರೇಶನ್ ಗೊಕ್ಕೆ ಒಳ್ಳೆದು. ಹಿರಿಯೊರ ಆಯುರ್ವೇದ, ಅಜ್ಜಿಮದ್ದು, ಯೋಗ ಇತ್ಯಾದಿ ರೋಗ ತಡವಲೆ, holistic ಆರೋಗ್ಯ ಕಾಪಾಡಿಕೊಂಬಲೆ ಒಳ್ಳೆಯದು.

    ಇನ್ನು ಪೇಟೆಲಿ ಇಪ್ಪದರ ಬಗ್ಗೆ ಎನ್ನ ಅಭಿಪ್ರಾಯ : ಅದು ಅನಿವಾರ್ಯ ಹೇಳ್ತುದರ ಎನಗೆ ಒಪ್ಪುಲೆ ತಯಾರಿಲ್ಲೆ ಆನು. ಅನಿವಾರ್ಯ ಹೇಳ್ತ ಅರ್ಥ ಎಂತದು? ಎಲ್ಲರಿಂಗೂ ಅನಿವಾರ್ಯ ಹೇಳಿಯೋ ಅಥವಾ ಒಬ್ಬೊಬ್ಬಂಗೆ ಅವನ ಹಿನ್ನೆಲೆ ಆಧರಿಸಿ ಅನಿವಾರ್ಯ ಹೇಳಿಯೋ? ಎನ್ನ ಮನಸಿಂಗೆ ಹೀಂಗೆ ತೋಚುದು – ಪೇಟೆ ತಿರುಗುಲೆ (ಗಮ್ಮತ್ತಿಂಗುದೆ, ವ್ಯವಹಾರಕ್ಕುದೆ) ಚೆಂದ, ಹಳ್ಳಿ ಬದುಕುಲೆ ಚೆಂದ. ಎರಡೂ ಬೇಕು, ಒಂದರ ಬಿಟ್ಟು ಇನ್ನೊಂದು ಇಪ್ಪಲೆ ಸಾಧ್ಯ ಇಲ್ಲೆ. ಈಗ ನಮ್ಮ ಪುತ್ತೂರುದೆ ಪೇಟೆಯೇ ಅಲ್ಲದ? ಅದರ ಬಗ್ಗೆ ಆರಿಂಗೆ ದೂರು ಇದ್ದು? ಈಗ ಸಮಸ್ಯೆ ಹೇಳ್ರೆ ಬೆಂಗಳೂರಿನಂಥ ಮಹಾಪೇಟೆಲಿ ಸೆಟ್ಲ್ ಆದವಕ್ಕೆ ಎಲ್ಲವಕ್ಕೂ ಪೇಟೆಯೇ ಆಯೆಕ್ಕು ಹೇಳಿ ಆವುತ್ತು. ಅಷ್ಟಪ್ಪಗ ಈ ಎಲ್ಲ ಸಮಸ್ಯೆಗೊ ಶುರು ಆವುತ್ತು.

    1. ಮರತ್ತು. ಪರಂಪರಾಗತ ಮದ್ದು ನಿದಾನಕ್ಕೂ ಒಳ್ಳೆದು. ಪತ್ತೆಗೆ ಮತ್ತು ಆಪರೇಶನ್ನಿಂಗೆ ಮಾತ್ರ ಇಂಗ್ಲೀಶು ಒಳ್ಳೆದು.

  6. ಕೇಜಿ ಅಣ್ಣನ “ಚರ್ಚಾ ಕೂಟಕ್ಕೆ” ಸ್ವಾಗತ. ಅಭಿಪ್ರಾಯ ಬೇಧಂಗೊ ಇಪ್ಪದೇ. ಚರ್ಚೆ ಮಾಡಿದಷ್ಟು, ಮೊಸರಿನ ಕಡದು ಬೆಣ್ಣೆ ತೆಗದ ಹಾಂಗೆ ಎಲ್ಲರಿಂದಲೂ ಒಂದಲ್ಲ ಒಂದು ಒಳ್ಳೆ ವಿಶಯಂಗೊ ಬತ್ತು.
    ಪೇಟೆಲಿ ಅನುಭವಂಗಳ ಎನ್ನ ಕೆಲವು ಅನಿಸಿಕೆಗಳ ಹೇಳ್ತೆ.
    ಉದಿಯಪ್ಪಗಾಣ ಕಾಫಿಗೆ ಪೇಕೆಟ್ ಹಾಲೇ ಆಯೆಕ್ಕಷ್ಟೆ. ಹಾಲು ಎಷ್ಟು ದಿನ ಮೊದಲಾಣದ್ದೋ, ಪ್ಲಾಸ್ಟಿಕ್ ತೊಟ್ಟೆಲಿ ಬತ್ತು, ಕಾಯಿಸುತ್ತು, ಉಪಯೋಗಿಸುತ್ತು. ಮನೆಲಿ ದನ ಕರದು ಗೆನಾ ಹಾಲಿಲ್ಲಿ ಮಾಡಿದ್ದಕ್ಕೂ ಇದಕ್ಕೂ ಹೋಲುಸಲೆ ಎಡಿಯ. ಹಾಲಿಲ್ಲಿ ತರಹೇವಾರು. ಕೊಬ್ಬು ಇಪ್ಪದು, ಇಲ್ಲದ್ದು, ಟೋನ್ ಮಾಡಿದ್ದು. ಅದಕ್ಕೆ ಎಂತೆಲ್ಲಾ ಹಾಕಿ ಈ ನಮೂನೆ ಹೆಸರು ಹಾಕ್ತವು ಹೇಳಿ ನೋಡ್ಲೆ ಹೋದರೆ, ಹಾಲು ದೊಂಡೆಂದ ಕೆಳ ಇಳಿಯ. ಬೇಕಾರೆ ಉಪಯೋಗಿಸೆಕ್ಕು.
    ಹಸಿರು ಕ್ರಾಂತಿ ಲೆಕ್ಕಲ್ಲಿ ಆಹಾರಕ್ಕೆ ಹೆರ ದೇಶಕ್ಕೆ ಕೈ ನೀಡೆಕ್ಕು ಹೇಳಿ ಇಲ್ಲೆ. ಆದರೆ ಇಲ್ಲಿ ಸಿಕ್ಕುವದೆಲ್ಲವೂ ಹೇಂಗಿಪ್ಪದು !!!
    ತರಕಾರಿಗೊ: ಚೆಂದ ಪಚ್ಚೆ ಪಚ್ಚೆ ಕಾಣುತ್ತು ಹೇಳಿ ತಂದರೆ, ಎಷ್ಟು ಬೇಯಿಸಿರೂ ಬೇಯ. ಕಾರಣ? ಅದರ ಬೆಳೆಸುವಾಗ, ಸಾಗಿಸುವಾದ ಹಾಕ್ತ ಕೆಮಿಕಲ್ಸ್. ಒಂದು ಸಮೀಕ್ಷೆ ಪ್ರಕಾರ, ಅಳತ್ತಂಡೆ, ಬೀನ್ಸ್ ಹಾಂಗಿಪ್ಪ ತರಕಾರಿಗಳಲ್ಲಿ ಅತ್ಯಂತ ಹೆಚ್ಚು ಕ್ರಿಮಿನಾಶಕಂಗಳ ಅವಶೇಷ ಇರ್ತಡ. ಕೇಬೇಜ್, ಕಾಲಿ ಫ್ಲವರ್ ಕತೆ ಇದಕ್ಕಿಂತ ಬೇರೆ ಏನೂ ಅಲ್ಲ
    ಹಣ್ಣುಗೊ: ಮನೆಲಿ ಒಂದು ಬಾಳೆ ಹಣ್ಣಿನ ಗೊನೆ ಕಟ್ಟಿ ನೋಡಿ. ರೆಜ ರೆಜವೇ ಹಣ್ಣಾಗಿಂಡು ಹೋಕು. ಪೇಟೆಂದ ಒಂದು ಗೊನೆ ತಂದು ಕಟ್ಟಿ ನೋಡಿ. ತಂದ ಮರುದಿನ ಇಡೀ ಗೊನೆ ಅರಷಿನ ಆಗಿ ಆತು. ಕಾರಣ? ಬೇಗ ಹಣ್ಣು ಮಾಡ್ಲೆ ಹಾಕ್ತ ಕೆಮಿಕಲ್ಸ್
    ಏಪಲ್, ದ್ರಾಕ್ಷಿ ಕತೆ ಕೇಳುವದು ಬೇಡ. ಹೂಗು ಅಗಿ ಹಣ್ಣು ಅಪ್ಪಲ್ಲಿ ವರೆಗೆ ಎಷ್ಟು ಸರ್ತಿ ಕೆಮಿಕಲ್ ಸ್ಪ್ರೇ ಮಾಡ್ತವು ಹೇಳಿ ಅವಕ್ಕೆ ಗೊಂತಿದ್ದೋ ಇಲ್ಲೆಯೋ. ಸಾಗುಸುವಾಗ, ಶೇಖರಣೆ ಮಾಡುವಾಗ ಹಾಳಪ್ಪಲಾಗ ಹೇಳಿ ಇತ್ತೀಚೆಗೆ ಏಪ್ಫಲ್ ಹಣ್ಣಿಂಗೆ ವೇಕ್ಸ್ (wax) ಕೋಟಿಂಗ್ ಕೊಡ್ತವು.
    ಕಾಲಾಯ ತಸ್ಮೈ ನಮಃ. ಪಾಲಿಗೆ ಬಂದದ್ದು ಪಂಚಾಮೃತ ಹೇಳಿ ಉಪಯೋಗಿಸೆಕ್ಕು ಇಲ್ಲದ್ದರೆ ಬಿಡೆಕು.

    1. ಹಾಂಗಾಗಿಯೇ ಹಣ್ಣು ತರಕಾರಿ ತಿನ್ನಿ ಹೇಳಲೆ ಎನಗೆ ನಾಚಿಕೆ ಆವುತ್ತು.ಮೊನ್ನೆ ಒಬ್ಬ ಕೇಳಿದ,ಇಶ್ಟು ಮದ್ದು ಹಾಕಿದ ಹಣ್ಣು ತಿಂದೆಂತ ಪ್ರಯೋಜನ ಹೇಳಿ.ಎಂತ ಹೇಳ್ಲಿ?

    2. ಅಪ್ಪು ಅಪ್ಪಚ್ಚೀ!
      ಹಾಂಗೆ ನೋಡಿರೆ ಪೇಟೆಲಿ ಸಿಕ್ಕುತ್ತ ಎಲ್ಲಾ ಹಣ್ಣುದೇ ತಿಂದಿಕ್ಕಲೆಡಿಯದ್ದ ನಮುನೆದು.
      ಬೌಶ್ಷ ಚೇರೆಹಣ್ಣು ಒಂದೆಯೋ ಹೇಳಿಗೊಂಡು – ಧೈರ್ಯಲ್ಲಿ ತಿಂದಿಕ್ಕಲೆಡಿಗಪ್ಪದು.. 😉

      1. ಚೇರೆ ಹಣ್ಣಿನ ಚೋಲಿ ತೆಗದು ತಿಂಬಲಕ್ಕು ಮಗ°.ಊರಿನ ಪೇರಳೆ,ಚಿಕ್ಕು,ಮಾರ್ಲೆ ಮದಲೇ ಸಿಕ್ಕಿರೆ ಬಾಳೆ ಹಣ್ಣು ಇತ್ಯಾದಿ ತಿಂಬಲಕ್ಕು.

  7. ಡಾಕ್ಟ್ರು ಭಾವ ಒಳ್ಳೆ ವಿಚಾರ.ಎನ್ನ ಅಣ್ಣ ಹೆಳುಗು ಅ೦ದಿಗೆ ಅದೇ ಸುಖ ಇ೦ದಿಗೆ ಇದೇ ಸುಖ ಹೇಳಿ.ಮತ್ತೆ ಸಿಸೇರಿಯನ್ ನ ಬಗ್ಯೆ ಕ೦ಡಿತಾ ಎನಗೆ ವಿರೋಧ ಇಲ್ಲೆ ಆದರೆ ಕೆಲವು ಸರ್ತಿ ಪೈಸೆ ಮಾಡ್ಲೆ ಬೇಕಾಗಿಯೇ ಸಿಸೇರಿಯನ್ ಮಾಡ್ತವಾನೆ ಅದಕ್ಕೆ ವಿರೋಧ ಇದ್ದು.ಈ ವಿಚಾರ ನಿ೦ಗೋಗು ಗಮನಕ್ಕೆ ಬ೦ದಿಕ್ಕು.ಫುಟ್ಬೋಲ್ ಕುಟ್ಟಿದ ಹಾ೦ಗೆ ಕಟ್ಟ್ಸಿದ ಆಸ್ಪತ್ರೆಯ ಪೈಸೆ ಬಪ್ಪಲೆ ಬೇಕಾಗಿ ರೋಗಿಗಳ ಬೇಕಾದ್ದದು ಬೇಡದ್ದದು ಪರೀಕ್ಷೆ ಮಾಡುಸುವ ಡಾಕ್ಟ್ರುಗೊ ಬೇಕಾಷ್ಟು ಇದ್ದವು.ಸ್ವತಹ ಕ೦ಡು ನೋಡಿ ಅನುಭವ೦ದ ಹೇಳ್ತಾ ಇದ್ದೆ.ಇನ್ನು ಆಹಾರ ಪದ್ದತಿಗೊ ಆಹಾರ೦ಗಳ ಬಗ್ಯೆ ಅ೦ದ್ರಾಣ ಹಾ೦ಗೆ ಇಪ್ಪಲೆ ಎಡಿಯ ಹೆಳ್ತ ಸ೦ಪೂರ್ಣ ಜ್ನಾನ ಇದ್ದು.ಆದರೆ ನಾವು ಮು೦ದಾಣವಕ್ಕೆ ಇ೦ತಾ ಆಹಾರ ಪದ್ದತಿ೦ದ ಗುಣ ಇದ್ದತ್ತು ಅದರ ಅಳವಡಿಸಲೆ ಎಡಿಗಾಷ್ಟಾದರು ಅಳವಡಿಸಿಯೋಳಿ ಹೇಳಿ ತಿಳುಸಿ ಕೊಡೇಕಲ್ಲದೊ.ಅ೦ದ್ರಾಣ ಆರೋಗ್ಯವು ಇ೦ದ್ರಾಣ ಆಯುಷ್ಯವೂ ಬತ್ತರೆ ಆರೂ ಬೇಡ ಹೇಳವಲ್ಲದೊ?ಇರಲಿ ಉತ್ತಮ ಲೇಖನಕ್ಕೆ ಒ೦ದು ಒಳ್ಳೆ ಒಪ್ಪ.

  8. ಅಪ್ಪಪ್ಪಾ. ಎಲ್ಲವನ್ನೂ ಮದಲಾಣ ಕಾಲದ ಹಾಂಗೆ ನೆಡೆಸೆಂಡು ಬಪ್ಪಲೆ ಎಡಿಯ. ನವಗೆ ಎಡಿಗಾದ ಹಾಂಗೆ ಮದಲಾಣ ಕ್ರಮಂಗಳನ್ನೂ ಸೇರಿಸೆಂಡು ಮುಂದೆ ಹೋಯೆಕಷ್ಟೆ. ನೆಡು ಬಗ್ಗದ್ದವಕ್ಕೆ ಬೈಪ್ಪಣೆಯೇ ಆಯೆಕು. ನೆಲಕ್ಕಲ್ಲಿ ಕೂದು ಸುಖಲ್ಲಿ ಉಂಬಲೆ ಅವಕ್ಕೆ ಎಡಿಯಕಾನೆ. ಜೆಂಬಾರಂಗಳಲ್ಲಿ ಬಫೆ ಇಲ್ಲದ್ದೆ ಈಗ ಸಾಧ್ಯವೇ ಇಲ್ಲೆ. ಬಡುಸುವ ಸುದರಿಕಗೆ ಜೆನವೂ ಇಲ್ಲೆ. ಉಣ್ತ ಜೆನಂಗವಕ್ಕೆ ಪುರುಸೊತ್ತೂ ಇಲ್ಲೆ. ಮನೆ ಯಜಮಾನಂಗೆ ಎಲ್ಲಾ ಜಾತಿಯ ಸ್ನೇಹಿತರನ್ನೂ ದಿನಿಗೇಳದ್ದೆ ಆವ್ತೊ ? ಅವರ ಬಿಟ್ಟು ಹಾಕಲಾವುತ್ತೊ ? ಆದರೆ ಕೂದು ಉಂಬವಕ್ಕೆ ಪಂಕ್ತಿ ಊಟದ ವ್ಯವಸ್ತೆ ಬೇಕೇ ಬೇಕು. ಊಟ ದಕ್ಷಿಣೆ ಕೊಡ್ಳಾದರೂ ಒಂದು ಹಂತಿ ಬೇಕಾನೆ ?

    1. ನೂರಕ್ಕೆ ನೂರು ಸತ್ಯವಾದ ಮಾತು.ಕಾಲಕ್ಕೆ ತಕ್ಕ ಕೋಲ.ಹಳತ್ತನ್ನೇ ಮುಂದುವರಿಸಿಯೊಂಡು ಹೋಯೆಕ್ಕು ಹೇಳುತ್ತ ಆಗ್ರಹ ಏನೂ ಇಲ್ಲೆ ನವಗೆ.ಆರನ್ನೂ ಬಿಟ್ಟು ಹಾಕುತ್ತ ಪ್ರಶ್ನೆ ಇಲ್ಲೆ.ಸಾಧ್ಯವೂ ಅಲ್ಲ.ಕೈನ್ನೀರು ಹಾಕಲೆ ಹಂತಿ ಬೇಕಷ್ಟೆ.ನಮ್ಮ ಊರಿಲ್ಲಿ ಚಿಕನ್ ಗುನ್ಯ ಬಂದ ಮೇಲೆ ಎಲ್ಲೋರೂ ಅರ್ಥ ಮಾಡಿಯೊಂಡಿದವದಾ.ಇದು ಬರೀ ವಿಮರ್ಶೆ ಅಷ್ಟೇ.

  9. ವಿಚಾರಂಗೊ ನಿಜವಾಗಿಯೂ ಚರ್ಚೆಗೆ ಒಳಪಡೆಕಾದ್ದೆ. ಯಾವುದೂ ತಪ್ಪಲ್ಲ, ಹಾಂಗೇಳಿಗೊಂಡು ಮಾಡುದೆಲ್ಲವೂ ಸರಿಯೂ ಅಲ್ಲ. ಬರದ್ದು ಲಾಯ್ಕ ಆಯ್ದು.
    ಸಿಸೇರಿಯನ್ ನ ಬಗ್ಗೆ ಹೆಚ್ಚಿನ ಜೆನಕ್ಕೆ ತಪ್ಪು ಕಲ್ಪನೆ ಇದ್ದು, ಅದು ಅನಿವಾರ್ಯ ಆದರೆ ಮಾಡಲೇ ಬೇಕಾವ್ತು. ಇನ್ನು ಜೀವನ ಪದ್ಧತಿಯೂ ಅಷ್ಟೆ… ಮೊದಲಾಣ ಹಾಂಗೆ ಬದುಕ್ಕುದು ಈಗ ಕಷ್ಟ..ಕಾರಣ ಹಲವು… ಕಾಲಕ್ಕೆ ತಕ್ಕ ಕೋಲ ಹೇಳ್ತಿಲ್ಲೆಯ…. ಸಂದರ್ಭಕ್ಕೆ ತಕ್ಕ ಹಾಂಗೆ ಸರಿಯಾದ ಮಾರ್ಗಲ್ಲಿ ಬದುಕ್ಕುದರ ಅಭ್ಯಾಸ ಮಾಡೆಕು ನಾವು. ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಗೊಂಬಲಾಗ,…..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×