Oppanna.com

`ಹಿಮಾಲಯನ್ ಬ್ಲಂಡರ್' – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ

ಬರದೋರು :   ಕೊಳಚ್ಚಿಪ್ಪು ಬಾವ    on   01/03/2010    8 ಒಪ್ಪಂಗೊ

ಕೊಳಚ್ಚಿಪ್ಪು ಬಾವ

ನವಗೆಲ್ಲ ದೇಶದ ಬಗ್ಗೆ ಅಭಿಮಾನ ಭಕ್ತಿ ಬರೆಕ್ಕಾರೆ ಯುದ್ಧವೇ ಬೇಕು.
’99ರಲ್ಲಿ ಕಾರ್ಗಿಲ್ ಯುದ್ಧ ಆಗದ್ರೆ ನಮ್ಮಲ್ಲಿ ಸುಮಾರು ಜೆನಕ್ಕೆ ದೇಶದ ಬಗ್ಗೆ, ನಮ್ಮ ಸೈನ್ಯದ ಬಗ್ಗೆ ಗೊತ್ತೆ ಆವುತ್ತಿತ್ತಿಲ್ಲೆ.
ಆ ಯುದ್ಧ ಆಗಿ ಏಷ್ಟೋ ಸಮಯ ಆದ ಮೇಲೆ ಆನು ಪುಸ್ತಕ ಹುಡುಕ್ಕೆಕ್ಕಾರೆ ಅನಿರೀಕ್ಶಿತ ಆಗಿ ಸಿಕ್ಕಿದ ಪುಸ್ತಕ “ಹಿಮಾಲಯನ್ ಬ್ಲಂಡರ್“.
ಮೂಲ ಇಂಗ್ಲೀಷಿಲಿ ಬರದ ಜೆನ ಮೇಜರ್. ಜಾನ್ ಪರಶುರಾಮ್ ದಳವಿ.
1962ರ ಯುದ್ಧಲ್ಲಿ ಭಾರತದ ಬಗ್ಗೆ ಬರೆದ ಪುಸ್ತಕ ‘ಏಕೆ ಭಾರತ ಆ ಯುದ್ಧಲ್ಲಿ ಸೊತತ್ತು ,ಹಾಂಗೆ ಸೊಲಲೇ ಯಾರು ಕಾರಣ’ ಹೇಳ್ತ ಪ್ರಶ್ನೆಗೆ ಉತ್ತರ ಪುಸ್ತಕಲ್ಲಿ ಸಿಕ್ಕುತ್ತು.
1959 ರಲ್ಲಿ ಲದಾಖ್ (ಜಮ್ಮು ಕಾಶ್ಮೀರ ರಾಜ್ಯದ ಜಿಲ್ಲೆ ) ಲಿ ಗಡಿಂದ 40 ಕಿಲೋ ಮೀಟರ್ ಒಳ ಬಂದು ನಮ್ಮ ದೇಶದ 21 ಜೆನ ಸೈನಿಕರ ಕೊಂದವು ಚೈನಾದವು.
ಅದರ ಬಗ್ಗೆ ಆಗ ಇದ್ದ ಸೇನೆಯ ಗುರಿಕ್ಕಾರ ಜನರಲ್ ತಿಮ್ಮಯ್ಯ ಆಗಾಣ ರಕ್ಷಣ ಮಂತ್ರಿ ಕೃಷ್ಣ ಮೆನನ್ ನ ಹತ್ರೆ, “ಈ ಚೈನಾದವು ನಮ್ಮ ದೊಡ್ಡ ಶತ್ರು. ಅದರ ಬಗ್ಗೆ ನಾವು ರಜ್ಜ ಗಮನಕೊಡೆಕ್ಕು!” ಹೇಳಿಯಪ್ಪಗ, ಆಗಾಣ ಪ್ರದಾನಿ ನೆಹರು , “ಜನರಲ್ ತಿಮ್ಮಯ್ಯಂಗೆ ಎಂತದೂ ಅರಡಿತಿಲ್ಲೆ. ಚೈನಾ ನಮಗೆ ದೊಡ್ಡಣ್ಣ ಇದ್ದಂಗೆ. ಅದು ನವಗೆ ಮೋಸ ಮಾಡುಗಾ?” ಹೇಳಿ ಉತ್ತರ ಕೊಡ್ತ.
ಇದರಿಂದ ಬೇಜಾರಾಗಿ ಜನರಲ್ ತಿಮ್ಮಯ್ಯ ರಾಜಿನಾಮೆ ಕೊಟ್ಟು ಹೆರಬತ್ತವು. ಮುಂದೆ ಅದೇ ಜನರಲ್ ತಿಮ್ಮಯ್ಯ ವಿಶ್ವ ಸಂಸ್ಥೆಲಿ ದೊಡ್ಡ ಹುದ್ದೆಗೆ ಹೋವುತ್ತವು.
ಭಾರತ ಸರಕಾರ ಮಿಲಿಟ್ರಿ ಆಯುಧ ಮಾಡುವ ಕಾರ್ಖಾನೆಲಿ ಕುಕ್ಕರು ಸೌಟು ಮಾಡುಸುಲೆ ಶುರು ಮಾಡಿತ್ತು.
ಆದರೆ ಚೈನಾ ಭಾರತದ ಗಡಿಯಹತ್ರೆ ಹೊಸ ಮಾರ್ಗ ಹೊಸ ಕಟ್ಟಡ ಕಟ್ಟುಲೆ ಶುರುಮಾಡಿತ್ತು.
ಯುದ್ಧ ಶುರು ಆಯೆಕ್ಕಾರೆ ಸುಮಾರು ಸಾವಿರ ಚೈನಾ ಸೈನಿಕರಿಂಗೆ ಹಿಂದಿ ಬತ್ತಿತ್ತು. ನಮ್ಮಲ್ಲಿ ಒಬ್ಬಂಗೂ ಚೈನಾದ ಭಾಷೆ ಬತ್ತಿತ್ತಿಲ್ಲೆ.
ಇದೆಲ್ಲಾ ಆಯೆಕ್ಕಾರೆ ಸೆಪ್ಟೆಂಬರ 8, 1962ಕ್ಕೆ ಚೈನಾ ಯುದ್ದ ಶುರು ಮಾಡಿತ್ತು.
ಗಡಿಲಿ ಒಂದೆರಡು ಕಡೆ ಬೆಡಿ ಹೊಟ್ಟಲೆ ಶುರು ಆತು. ಆ ಸಮಯಲ್ಲಿ ಭಾರತದ ಸೇನೆಯ ಗುರಿಕ್ಕಾರ ಬಿ.ಎಮ್.ಕೌಲ್ ನ ಹತ್ತರೆ ಈ ಸುದ್ದಿ ಹೋವುತ್ತು.
ಆ ಮನುಷ್ಯ ‘ಆನು ರಜೆ ಹಾಕಿ ಎನ್ನ ಹೆಂಡತಿ ಮಕ್ಕಳೊಟ್ಟಿಂಗೆ ಗಮ್ಮತು ಮಾಡಿಯೊಂಡು ಇದ್ದೆ. ಈಗ ಎನಗೆ ಉಪದ್ರ ಕೊಡೆಡಿ’ ಹೇಳ್ತ.
ನೆಹರು ಹತ್ರ ಹೇಳಿರೆ “ಚೈನಾದವು ಮೊದಲು ನಮ್ಮ ಮೇಲೆ ಗುಂಡು ಹಾರ್ಸುವ ವರೆಗು ನಾವು ಹಾರ್ಸುಲೆ ಆಗ” – ಹೇಳುವ ಆದೇಶ ಕೊಡ್ತ.
ಅದರೊಟ್ಟಿಂಗೆ ‘ನಾವು ನಮ್ಮ ಗಡಿ ಬಿಟ್ಟು ಹಿಂದೆ ಬಪ್ಪಲೆ ಎಡಿಯ’ ಹೇಳಿಯೂ ಹೇಳ್ತ.
ಮಿಲಿಟ್ರಿಯವೆಲ್ಲ ಗಡಿ ಬಿಟ್ಟು ಕೆಳ ಬಪ್ಪ ಆ ಪರ್ವತದ ಕೊಡಿಲಿ ಕೂತು ಯುದ್ಧ ಮಾಡುದು ಬೇಡ ಹೇಳಿರು ಕೇಳಿದಿಲ್ಲೆ.
ಆ ಪರ್ವತಗಳ ಹತ್ತುಲೆ ನವಗೆ ೩ ದಿನ ಬೇಕು ಇನ್ನು ಅಲ್ಲಿ ಸಿಕ್ಕಿ ಹಾಕಿಯೊಂಡರೆ ಕೆಳಬಪ್ಪಲೆ ಎಡಿಯ, ನಾವು ಹಿಂದೆ ಬಂದು ಒಂದು ಒಳ್ಳೆ ಜಾಗೆಲಿ ನಿಂತು ಅವರ ಸೋಲ್ಸುವ ಹೇಳ್ರು ಕೇಳದ್ದೆ ಕೂರ್ತ ಚಾಚಾ ನೆಹರು. ಅಲ್ಲಿ ಮರಗಟ್ಟುವ ಚಳಿಲಿ ಹಳೇ ಗನ್ನಿನ ಹಿಡುಕ್ಕೊಂದು ಒಂದು ಮುಷ್ಟಿ ಕಾಡತೂಸು ಕಿಸೆಲಿ ಇಟ್ಟುಕ್ಕೊಂಡು ಸರಿಯಾಗಿ ತಿಂಬಲೆ ಆಹಾರ ಇಲ್ಲದ್ದೇ ಭಾರತದ ಸೈನಿಕರು ಚೈನಾದ ಸೈನಿಕರಿಂದ 80 ಫೀಟಿನ ದೂರಲ್ಲಿ ಎರಡು ದಿನ ಕೂರ್ತವು.
ಅವರ ಎದುರು ಕೂತ ಚೈನಾದ ಸೈನಿಕನ ಕೈಲಿ ಇಪ್ಪ ಗನ್ನಿಂದ ನಿಮಿಶಕ್ಕೆ 40 ಗುಂಡು ಹೊಟ್ಟುಗು, ಚಳಿ ಕಾಸುಲೆ ಬೇಕಾದಷ್ಟು ಕಟ್ಟಿಗೆ, ತಿಂಬಲೆ ಅಹಾರ, ಕುಡಿವಲೇ ನೀರು, ಬೆಚ್ಚಂಗೆ ಹೊದವಲೆ ವಸ್ತ್ರ ಎಲ್ಲ ಇತ್ತು. ನಮ್ಮವರತ್ರ ಎಂತದುದೆ ಇತ್ತಿಲ್ಲೆ.!
ಎರಡು ದಿನ ಚಳಿಲಿ ಮರಗಟ್ಟಲಿ ಹೇಳಿ ಕಾದು ಕೂತು ಚೈನಾದವು ನಮ್ಮ ಮೇಲೆ ಆಕ್ರಮಣ ಮಾಡಿಯಪ್ಪಗ ನಮ್ಮ ಸೈನಿಕರಿಂಗೆ ಬೆಡಿ ಹೊಟ್ಟುಸುಲೆದೆ ತ್ರಾಣ ಇಲ್ಲದ್ದೆ ನುಶಿಗಳಾಂಗೆ ಸತ್ತು ಬೀಳ್ತವು.
ಆ ದಿನ ಸತ್ತ ಒಬ್ಬ ಮೇಜರಿನ ಹೊಟ್ಟೆಲಿ 144 ಗುಂಡು ಸಿಕ್ಕಿತ್ತಡ. ನಾಲ್ಕು ದಿನಲ್ಲಿ 16 ಕಿಲೋ ಮೀಟರ್ ಒಳ ಬಂದಾಗಿತ್ತು ಚೈನಾದ ಸೇನೆ.

ಹಿಮಾಲಯನ್ ಬ್ಲಂಡರ್ - ಮೂಲಪುಸ್ತಕದ ಮುಖಪುಟ
ಹಿಮಾಲಯನ್ ಬ್ಲಂಡರ್ - ಮೂಲಪುಸ್ತಕದ ಮುಖಪುಟ

ಚೈನಾ ಯಾವಾಗ ಇನ್ನು ಯುದ್ಧ ಮಾಡುತ್ತು ಹೇಳಿ ಗೊಂತಾತೋ ಆಗ ಹೆಚ್ಚುವರಿ ಸೈನಿಕರ ಕಳ್ಸಿದವು.
ಆದರೆ ಕಳ್ಸಿದ್ದು ರಾಜಸ್ತಾನಲ್ಲಿ ಪಂಜಾಬಲ್ಲಿ ಇದ್ದ ಸೈನಿಕರ. ಅವರಲ್ಲಿ ಮುಕ್ಕಾಲರಷ್ಟು ಜೆನ ಹಿಮವ ನೋಡಿದ್ದು ತವಾಂಗ್ ಊರಿಲಿ.
(ಅರುಣಾಚಲ ಪ್ರದೇಶಲ್ಲಿ ಇಪ್ಪ ಸಣ್ಣ ಊರು, ಭಾರತಂದ ಚೈನಾಕ್ಕೆ ಇಪ್ಪ ಒಂದು ದಾರಿಲಿ ಬತ್ತು).
ಮರಳುಗಾಡಿಲಿ ಉಪಯೋಗ ಮಾಡುವ ಬಟ್ಟೆಯ ಷೂ ಹಾಕಿಯೊಂಡು, ಹಿಮಲ್ಲಿ ಹೋರಾಡುಲೆ ಹೇಳಿದ್ದರ ಕಣ್ಣು ಮುಚ್ಚಿಯೊಂಡು ಮಾಡಿದವು.
ಬಟ್ಟೆಯ ಷೂ ಹಿಮಲ್ಲಿ ಕಂಡಾಬಟ್ಟೆ ಜಾರ್ತಡ – ನಡವಲೆ ಆವುತ್ತಿಲ್ಲೆಡ.
ಅವೆಲ್ಲಾದ್ರು ಹಾಂಗೆ ಮಾಡದ್ರೆ ಅಸ್ಸಾಂ ಮತ್ತೆ ಬೇರೆ ರಾಜ್ಯಂಗೋ ಇಂದು ಚೈನಾಲ್ಲಿ ಇರ್ತ ಇತ್ತು.
ಹಿಮಲ್ಲಿ ಇನ್ನೊಂದು ತೊಂದರೆ ಹೇಳಿರೆ ಕಣ್ಣಿಂಗೆ ಬಡಿವ ಸೂರ್ಯನ ಬೆಣಚ್ಚು. ಹಿಮಂದ ಪ್ರತಿಫಲನ ಅಪ್ಪ ಸೂರ್ಯನ ಬೆಣಚ್ಚು ಕಣ್ಣಿಂಗೆ ಬಡುದು ಸುಮಾರು ಜನ ಸೈನಿಕರು ಕಣ್ಣು ಕಾಣದ್ದೆ ಚೈನಾದ ಸೈನಿಕರ ಕೈಗೆ ಸಿಕ್ಕಿ ಬಿದ್ದಿತ್ತಿದವಡ.
ಹೀಂಗೆ ಸೋಲೆಕ್ಕಾರೆ ಭಾರತ ದೇಶವೇ ಚೈನಾದ ಎದುರು ನಿಂದತ್ತು.
ಸರಕಾರ ಎಷ್ಟೇ ತಪ್ಪು ಮಾಡಿರೂ ಅದರ ಬಗ್ಗೆ ಯೋಚನೆ ಮಾಡದ್ದೆ ನಮ್ಮ ಸೈನಿಕರಿಂಗೆ ಹೇಳಿ ದೇಣಿಗೆ ಒಟ್ತು ಮಾಡುಲೆ ಶುರು ಮಾಡಿದವು.
ಇಷ್ಟೆಲ್ಲಾ ಆಯೆಕ್ಕಾರೆ 19 ನವಂಬರ 1962ಕ್ಕೆ ಚೈನಾ ಯುದ್ಧ ವಿರಾಮ ಘೋಷಣೆ ಮಾಡಿತ್ತು.
ಆ ಯುದ್ಧಲ್ಲಿ ಭಾರತದ 1383 ಜೆನ ಸೈನಿಕರು ಅವರ ಪ್ರಾಣ ಕಳಕ್ಕೊಂಡವು 1696 ನಾಪತ್ತೆ ಆದವು..
ಈ ಸೋಲಿನ ಮತ್ತೆ ಭಾರತ ಸರಕಾರ ಓರಕ್ಕಿಂದ ಎದ್ದು ಸೇನೆಗೆ ಪೈಸೆ ಕೊಟ್ಟು ಅದಕ್ಕೆ ಬೇಕಾದ ಎಲ್ಲಾ ಆಯುಧಗಳ ತೆಕ್ಕೊಂಬಲೆ ವ್ಯವಸ್ಥೆಮಾಡಿತ್ತು.
ಆದರೆ ಸರಕಾರವ ಒರಕ್ಕಿಂದ ಏಳ್ಸೆಕ್ಕಾರೆ ಇಷ್ತು ಜೆನ ಸೈನಿಕರು ಸಾಯೆಕ್ಕಾತನ್ನೆ ಹೇಳುದೇ ಬೆಜಾರದ ಸಂಗತಿ.
ನೆಹರು ದೇಶಕ್ಕಾಗಿ ಸುಮಾರು ಒಳ್ಳೆ ಕೆಲಸ ಮಾಡಿದ್ದರೂ , ಈ ಯುದ್ಧದ ವಿಷಯಲ್ಲಿ ಮಾಡಿದ ತಪ್ಪು ಎಲ್ಲ ಒಳೆ ಕೆಲಸವ ಮರವಾಂಗೆ ಮಾಡುತ್ತು.
ಪುಸ್ತಕದ ಬಗ್ಗೆ ಬರವದಾದರೆ, ಯುದ್ಧದ ಪ್ರತಿ ಹಂತವ ಸವಿಸ್ತಾರ ಅಗಿ ವಿವರಣೆ ಮಾಡುತ್ತಾ ಹೋವುತ್ತ ಮೇಜರ್ ದಳವಿ.
ಎಲ್ಲದರಿಂದ ಬೇಜಾರಪ್ಪದು ಮೇಜರ್ ದಳವಿ ಚೈನಾದ ಸೇನೆಯ ಕೈಲಿ ಯುದ್ಧ ಖೈದಿಆಗಿ ಬಿಡುಗಡೆ ಆಗಿ ಬಪ್ಪಗ ಆ ಜೆನವ ಚೈನಾ ದ ಗೂಡಚಾರ ಹೇಳುವಾಂಗೆ ಸಂಶಯಲ್ಲಿ ನೋಡುವ ಸಂಗತಿ.
1969 ರಲ್ಲಿ ಈ ಪುಸ್ತಕ ಬಿಡುಗಡೆ ಆದ ಕೂಡಲೇ ಅದರ ಸರಕಾರ ನಿಷೇದ ಮಾಡ್ತು.
ಸುಮಾರು 20 ವರ್ಷ ಆದ ಈ ಪುಸ್ತಕದ ನಿಷೇಧವ ರದ್ದು ಮಾಡ್ತವು.
ಈ ಪುಸ್ತಕವ ಕನ್ನಡಕ್ಕೆ ರವಿ ಬೆಳಗೆರೆ – ತುಂಬಾ ಮೊದಲು ಲಾಯ್ಕು ಬರಕ್ಕೊಂಡು ಇಪ್ಪಾಗ – ಅನುವಾದ ಮಾಡಿದ್ದ!
ಸಿಕ್ಕಿದರೆ ಆ ಪುಸ್ತಕವ ತೆಕ್ಕೊಂಡು ಓದಿ, ಇಲ್ಲದ್ರೆ ಬೈಲಿನ ಆರತ್ರಾರು ಕೇಳಿ, ಇಪ್ಪಲೂ ಸಾಕು.
ಅಖೇರಿಗೆ: ನಮ್ಮ ಭಾಷೆಲಿ (ಕನ್ನಡಲ್ಲಿದೇ ) ಸುಮಾರು ಶಬ್ದಂಗೊ ಇದ್ದ್ದು ಅದರ ನಾವು ಈಗ ಬಳಕೆ ಮಾಡ್ತದೆ ಇಲ್ಲೆ.
ಹೀಂಗೆ ಮಾಡಿದ್ರೆ ನಮ್ಮ ಭಾಷೆಯ ನಾವು ನಿಧಾನಕ್ಕೆ ಕೊಂದ ಹಾಂಗೆ ಅಲ್ಲದ. .?
ನಿಂಗೊಗೆ “ಒಲಿಪ್ಪೆ” ಹೇಳಿರೆ ಎಂತ ಹೇಳಿ ಗೊಂತಿದ್ದ?
ಗೊಂತಿದ್ದರೆ ಹೇಳಿ.

8 thoughts on “`ಹಿಮಾಲಯನ್ ಬ್ಲಂಡರ್' – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ

  1. ಲೇಖನ ಕಳುಹಿಸುವ ಕ್ರಮ ರಜ ಹೇಳಿ.

  2. layakkayidu….vijaya moleyara,avu …havyaka bhasheli..bareda khategala kuritu research madtavada..hangagi…aasaktaru avara samparkisi…bhashe iddavu..havyaka bhashe olishondiddavu!…gamanisi..miniya..

  3. ಲಾಯ್ಕ ಬರದ್ದೆ ಆತೋ.. ಹೀಂಗೆ ಇನ್ನು ಹತ್ತು ಹಲವು ಬರಲಿ..

  4. ದಿವ್ಯ ,ಮುರಳಿ : 🙂 , I will try to keep writing.
    ಆದಿ , ಬರದ್ದು ಆನು ನಮಸ್ಕಾರ ಒಪ್ಪಣ್ಣಂಗೋ? ಇನ್ನು ಪುಸ್ತಕ ಕೊಡುವಾಗ ಒಂದು ಪುಸ್ತಕಲ್ಲಿ ಬರದು ಮಡಿಕ್ಕೋ ಆತ. ಲೆಕ್ಕ ಬರದಿಟ್ಟುಕೊಂಡಾಂಗೆ. ಮರತ್ತು ಹೋಗ ಆರು ಪುಸ್ತಕ ತೆಕೊಂಡು ಹೋದ್ದು ಹೇಳಿ.

  5. ನಮಸ್ಕಾರ ಒಪ್ಪಣ್ಣ,, ನಿನ್ನ ಮಾತು ನಿಜ, ಯುದ್ದ ಬಾರದ್ದೆ ನಮ್ಮ ಜನಕ್ಕೆ ಎಚ್ಚರಿಗೆ ಆವುತ್ತಿಲ್ಲೆ.. ನೀ ಹೇಳಿದ ಪುಸ್ತಕವ ಆನುದೆ ಓದಿದ್ದೆ.. ಕನ್ನಡ ಅನುವಾದ ಓದಿದ ನೆನಪ್ಪು.. ಹಾಂಗೆ ಕಾರ್ಗಿಲ್ ಬಗ್ಗೆ ಬರದ ಒಂದು ಪುಸ್ತಕವುದೆ ಇದ್ದು. ಕಾರ್ಗಿಲ್ ಕಂಪನ ಹೇಳಿ ಅದರ ಕನ್ನಡ ಅನುವಾದದ ಹೆಸರು.. ನಿಜಕ್ಕು ಓದೆಕ್ಕಾದ್ದು. ಆನು ಆ ಪುಸ್ತಕವ ತೆಗದು ಮಡುಗಿತ್ತಿದ್ದೆ, ಆರೋ ಪುಣ್ಯಾತ್ಮ ಓದ್ಲೆ ಹೇಳೆ ಕೊಂಡೋದವ ಪತ್ತೆಯೆ ಇಲ್ಲೆ!
    ಓಲಿಪ್ಪೆ ಹೇಳಿರೆ ಎಂತ ಹೇಳಿ ಎನಗೆ ಗೊಂತಿಲ್ಲೆ ಆತ,, ಸತ್ಯ ಹೇಳ್ತೆ.. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×