ಕುಟುಂಬ – ನಂಬಿಕೆ

January 1, 2010 ರ 12:01 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಟ್ಟಿಗುದ್ದಿರೂ, ಗುದ್ದಿ ಕಟ್ಟಿರೂ ಒಂದೇ ಅಲ್ಲದೋ ಹೇಳ್ತ ಗಾದೆ ಇದ್ದು.
ಇದು ಮುಡಿಕಟ್ಟುವಾಗಣ ಕ್ರಿಯೆಗೆ ಸಂಬಂಧಿಸಿ ಹೇದ್ಸೋ, ಅಲ್ಲ ಕಳ್ಳ ಸಿಕ್ಕಿಬಿದ್ದ ಸಂದರ್ಭವನ್ನೋ!
ಹೇಂಗಾರು ಇರಳಿ – ಗಾದೆ ಗಾದೆಯೇ. ಸಾರ್ವಕಾಲಿಕ ಸತ್ಯ.
ಎಂತ್ಸಕೆ ಹೇದ್ಸು ಹೇದರೆ, ಈ ಬರಹಕ್ಕೆ ಒಂದು ತಲೆಬರಹ ಬೇಕಾನೆ!
ಹಾಂಗೆ ತಲೆ ಆಗಿಕ್ಕಿ ಶರೀರವೋ, ಅಲ್ಲ ಶರೀರ ಆಗಿ ಅದರ ರೂಪ ಸೌಂದರ್ಯಕ್ಕೆ ಹೋಂದುತ್ತ ಹೆಸರು ಕೊಡೆಕೋ?
ಏಕೆ ಹೇದರೆ, ಜಾನುಸುಸ್ಸು ಒಂದು, ಆವುತ್ಸು ಮತ್ತೊಂದು ಕೆಲವು ಸರ್ತಿ.
’ವಿನಾಯಕಂ ಪ್ರಕುರ್ವಾಣ ರಚಯಾಮಾಸ ವಾನರಃ’ – ಹುಟ್ಟುತ್ತ ಹಿಳ್ಳಗೆ ಹೆಸರು ನಿಜಮಾಡಿಕ್ಕಿ ಮಕ್ಕಳ ಮಾಡ್ತ ಕ್ರಮ ಇದ್ದೋ?
ಹಾಂಗಾಗಿ ನೋಡೆಂಡು ಹೆಸರು ಹಾಕುವೊ°. ಅಂಬಗಳೂ ನಿಜ ಆಗದ್ರೆ ಒಂದು ೬ ತಿಂಗಳು ಕಾಯಿವೊ°.
ಅಷ್ಟರಲ್ಲಿ ಇದು ಬದ್ಕಿ ಒಳುದರಲ್ಲದೋ ಬೇಕಾದ್ಸು?
ತಲೆಬೆಶಿ ಬೇಡ – ಮುಂದೆ ಹೋಪೊ°.

ಇದು ಆನು ಬೇರೆವು ಹೇದ್ಸರನ್ನೇ ಹೇಳುಸ್ಸು – ನಾಕು ಜೆನಕ್ಕೆ ಗೊಂತಾಗಲಿ ಹೇದು – ಇದು ಒಂದು ಒಳ್ಳೆ ದೃಷ್ಟಾಂತ. ಎನಮಾಂತ್ರ ಗೊಂತಿದ್ರೆ ಸಾಲ. ಒಳಿಯೇಕು ಹೇದು. ಈಗಂತು ಜೆನಕ್ಕೆ ಈ ಗಾದೆ ಮಾತು, ದೃಷ್ಟಾಂತ, ಭಾಷಾ ಸೌಂದರ್ಯ, ಒಂದೂ ಬೇಡ. ಕಂಗ್ಲಿಷು, ಪ್ರಕೃತ ಹಂಗ್ಲೀಷು (ಹವ್ಯಕ). ಮತ್ತೆ ಹಳಸಲು ಜೋಕುಗೊ!
ಮೊಬೈಲುಗಳಲ್ಲಿ ಹಂಚಲೆ – ಸುಮ್ಮನೆ ಬೇಕಾದವಕ್ಕೂ, ಬೇಡದ್ದವಕ್ಕೂ ಬಿಕ್ಕಿಂಡು ಹೋವುಸ್ಸು. ಅನುಪ್ಪತ್ಯಲ್ಲಿ ಉಪ್ಪು ಬಡುಸುತ್ತ ಹಾಂಗೆ.
ಇದ ಇದೀಗ ಶೇಣಿ ಹರಿಕತೆ ಹಾಂಗೆ ಆವ್ತೋ ಎಂತ್ಸೋ – ಪೀಠಿಕೆಯೇ ಉದ್ದ, ಕತೆ ತೂಷ್ಣಿ – ಉಪಕತೆ ರಜ!
ಹಾಂಗಾಗಿ ನೇರ ಕತೆ ಹೇಳ್ತೆ ಕೇಳಿ.

ಅವು ಗೆಂಡ ಹೆಂಡತ್ತಿ ಅನ್ಯೋನ್ಯವಾಗಿದ್ದಿದ್ದವು. ತುಂಬಾ ಅನ್ಯೋನ್ಯವಾಗಿದ್ದಿದ್ದವು!
ಏಷ್ಟೋ ವರ್ಷಂದ – ಏಳೆಂಟು ವರ್ಷ ಹೇಂಗೂ ಆಗಿಕ್ಕು – ಒಂದರಿಯಾದರು ಅಲ್ಲಿ ಬೈಗುಳು ಗಲಾಟೆ ಪರೆಂಚಾಣ ಲಡಾಯಿ ನಿಟ್ಟುಸೆಡವು ಕೋಪ ಮೌನ ಆಗಿಂಡು ಆರಿಂಗೂ ಕಂಡಿದಿಲ್ಲೆ.

ಮತ್ತೆ ನೆರೆಕರೆಯಕ್ಕೆ ಬೇರೆ ಕೆಲಸ ಇಲ್ಲದ್ದಿಪ್ಪಗ ಬೇರೆವರ ಮನೆ ದೋಸೆಲಿ ತೂತು ಹುಡುಕ್ಕುಸ್ಸು ಸಾಮಾನ್ಯ ಅಲ್ಲದೋ? ಎಲ್ಲಾ ಊರಿಲ್ಲೂ ಎಲ್ಲಾ ಕಾಲಕ್ಕೂ.
ಇಲ್ಲಿಯೂ ಹಾಂಗೇ ಆತು. ಕೊಲೆ ಹಾದಿರ ಲಡಾಯ ಸುದ್ದಿ ಕೇಳಲೆ ಮನಿಷರಿಂಗೆ ಕೊದಿ.
ಇನ್ನೊಬ್ಬರ ಸಂಣಮಾಡಿ ತಾನು ಗಟ್ಟಿಗ ಆಯೇಕು. ತಾನು ಎತ್ತರ ಬೆಳದು ಅವ ಸಣ್ಣ ಆವುತ್ತ ಕಷ್ಟ ಎಂತ್ಸಕೆ? ಇದು ಸುಲಭ.
/ ಈ ಗೆರೆ ಸಂಣದು ಮಾಡುಸ್ಸು ಹೇಂಗೆ?… ಅದರಿಂದ ದೊಡ್ಡ / ಈ ಗೆರೆ ಹಾಕಿರೆ ಆತಿಲ್ಯೋ – ತದ್ವಿರುದ್ದ ಮನುಷ್ಯ ಸ್ವಭಾವ.
ಆನು ಸುಮ್ಮನೆ ಹೇದ್ಸೋ ಉಪಕತೆಯೇ ಹೆಚ್ಚಾವುತ್ತು ಹೇದು – ಅಶನಂದ ಹೆಚ್ಚು ಬೆಂದಿ – ಎಂತ ಮಾಡ್ಸು
ಪ್ರಯತ್ನ ಮಾಡ್ತೆ ಕಂಮಿ ಮಾಡಲೆ.
ಒಂದು ದಿನ ಪಕ್ಕದ ಮನೆಲಿ ಎಂಕಟಬಾವ ಬಂದಿಪ್ಪಗ ಈ ಮಾತು ಬಂತು.
ನೋಡಿ – ಅವು ಎಷ್ಟು ಅನ್ಯೋನ್ಯವಾಗಿದ್ದವು ಹೇದು. ಅದಕ್ಕೆ ಇವ ಹೇದ –
ಎಲ್ಲ ಹೆರತ್ತರಂಗೆ ಬಾವ, ಒಳಾಣ ಗುಟ್ಟೂ ಶಿವಂಗೇ ಗೊಂತು. ಎರಡು ದಿನ ಕಳುದು ನೋಡಿ, ಅವರ ಮನೆ ಹೇಂಗೆ ರಣ ರಂಗ ಆಗಿಂಡಿದ್ದು ಹೇದು..
ಅಪ್ಪೋ?! ಹಾಂಗೋ?
ಈ ಎಂಕಟ ಅವರ ಮನೆಗೆ ಹೋದ. ಸಮಯ ನೋಡಿ ಗೆಂಡ ಬೇರೆಲ್ಲಿಗೋ ನೆಂಟ್ರಲ್ಲಿಗೋ ಪರಾದೀನಕ್ಕೋ ಹೋದ ದಿನ – ಹೆಮ್ಮಕ್ಕಳ ಹತ್ರೆ ಮಾತಾಡಿದ, ಅದರ ನೆಂಟರಿಷ್ಟರ ಸುದ್ದಿ  – ಇತ್ಯಾದಿ.
ವಿಷ ಬೀಜ ಬಿತ್ತಲೆ ಹೆಮ್ಮಕ್ಕಳ ಭೂಮಿಂದ ಒಳ್ಳೆ ಜಾಗೆ ಬೇರೇವದಿದ್ದು!
ಸಮಯನೋಡಿ ಹೇದ – ನಿನ್ನ ಗೆಂಡ ಹೋದ ಜನ್ಮಲ್ಲಿ ಉಪ್ಪಿನ ಮಾಪಳೆ ಆಗಿಂಡಿದ್ದಿದ್ದ – ಹೇದು.
ಆರಿಂಗಾರೂ ಹಿತ ಅಕ್ಕೋ ಈ ಮಾತು ಕೇಳ್ಳೆ!
“ಅಪ್ಪೋ, ನಿನಹೇಂಗೆ ಗೊಂತು? ”
“ನೋಡು ನೀ ಬೇಕಾರೆ ಇಡೀ ಮೈಯೇ ಉಪ್ಪುಉಪ್ಪು. ಜಾಗ್ರತೆ, ಒರಗಿಂಡಿಪ್ಪಗ ನೋಡು ನಾಲಗೆ ತಟ್ಟುಸಿ, ನಿನಗೇ ಗೊಂತಕ್ಕು”

ಹೇದಿಕ್ಕಿ ಎಂಕಟ ಬಾವ ದಾರಿಲಿ ಅದರ

ಗೆಂಡ ಎದುರಾವುತ್ತ ಹಾಂಗೆ ಹೋದ –
ಭೇಟಿ ಅಪ್ಪಗ ಒಂದೆರಡು ವಿಷಯ ಮಾತಾಡಿಕ್ಕಿ ಹೇದ – ನಿನ್ನ ಹೆಂಡತಿಗೆ ನಿನ್ನ ಮೇಗೆ ಎಂತದೋ ಅನುಮಾನ, ಎನ್ನತ್ರೆ ಒಂದೊಂದಾರಿ ಎಂತೆಲ್ಲ ಹೇಳುತ್ತು – ನಾಯಿ ಬುದ್ದಿಯ ಹಾಂಗೆ!
ಎಷ್ಟಾದರೂ ಪೂರ್ವಜನ್ಮದವಾಸನೆ ಪೂರ‍್ತಿ ಹೋಕೋ? ಹೋದ ಜನ್ಮಲ್ಲಿ ಬೊಗ್ಗಿ ಆಗಿಂಡಿದ್ದಿದ್ಸಲ್ಲದೋ? ”
“ಓ ಹಾಂಗೋ?” ಇವನ ಮನಸ್ಸಿಂಗೆ ಸಂಶಯ ಪಿಶಾಚಿಯ ಹೊಗುಸಿ ಆತು-

“ನೋಡು ಮೈ ನಕ್ಕುತ್ತ ಬುದ್ಧಿ ಬಿಟ್ಟಿದೋ ಹೇದು ನಿನಗೇ ಅರಡಿಗು – ಇರುಳು ರಜ ಎಚ್ಚರಲ್ಲಿ ಇದ್ದರೆ!”
ಹಾಂಗೆ ರಜ ಮುಗಿಲು ಮುಗಿಲಾಗಿಂಡಿದ್ದತ್ತು.
ಇರುಳು ಇವಂಗೆ ಮೈ ಅಳಿ ಚಳಿ ಆತು . ಹಂದುಸದ್ದೆ ಕೂದ – ಅಪ್ಪು ಇದು ಮೈ ನಕ್ಕುತ್ತು – ಅವ ಹೇದ್ಸು ಸರಿ –
“ಇದೆಂತ ನಿನ್ನ ನಾಯಿ ಬುದ್ಧಿ?” ತಡವಲೆಡಿಯದ್ದೆ ಕೇಟ.
“ಉಪ್ಪಿನ ಮಾಪಳೆಗೆ ಅದೆಲ್ಲ ಎಂತ್ಸಕ್ಕೆ?”
“ಆನು ಉಪ್ಪಿನ ಮಾಪಳೆಯೋ?”
“ಅಲ್ಲದೋ ಮತ್ತೆ – ಮೈಯಿಡೀ ಉಪ್ಪುಪ್ಪು”
“ಅದು ಬೊಗ್ಗಿಗೇ ಗೊಂತಕ್ಕಷ್ಟೆ”.
“ಆನು ಬೊಗ್ಗಿಯೋ? ಎನ್ನ ಸಾವಾಸ

ನಿಂಗೊಗೆ ಬೇಡ, ಆನು ಎನ್ನಷ್ಟಕ್ಕೆ ಇರ್‍ತೆ” –
“ಎಂತಾರು ಮಾಡು ಎಂಜಲು ನಕ್ಕಿಂಡು”.

ಆತಿಲ್ಯೋ ರಣರಂಗ!
ಒಂದಕ್ಕೆರಡಕ್ಕೆ ಬೆಂಣೆಲಿ ಕಲ್ಲು ಹುಡುಕ್ಕುಸ್ಸು –
ಒಂದರ ಮುಸುಡು ತೆಂಕಂತಾಗಿ ಆದರೆ ಮತ್ತೊಂದ ಮೋರೆ ಬಡಗು.

“ಮುಗಾತು”

ಕುಟುಂಬ - ನಂಬಿಕೆ, 4.5 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ನಾವು ಈ ಬೈಲಿಲಿ ಬಂದು ಒಕ್ಕಲು ಕೂದ್ದು ಇತ್ತೀಚೆಗೆ. ಇತ್ತೀಚೆಗೆ ಬಂದದು ಅಪ್ಪಾದರೂ ಇದರಿಂದ ಮದಲೆ ಇದರಿಂದ ಆಚಿಗೆ ಮದಲಿಂಗೆ ಎಂತೆಲ್ಲಾ ಇತ್ತಿದ್ದು , ಎಂತಲ್ಲಾ ಆಗಿಯೊಂಡಿತ್ತು ಹೇದು ಅರಟದ್ರೆ ಬೈಲಿನ ಬಗ್ಗೆ, ಬೈಲಿಲಿ ಎಂತೆಲ್ಲ ಇತ್ತಿದ್ದು, ಹೇಂಗೆಲ್ಲಾ ಇತ್ತಿದ್ದು ಹೇದು ತಿಳಿತ್ತೇಂಗೆ. ಹಾಂಗೆ ಅರಟುವಾಗ ನಮ್ಮ ಕಣ್ಣಿಂಗೆ ಬಿದ್ದದು ದೊಡ್ಡಮಾವನ ಈ ಸಣ್ಣಕೆ ಕಾಂಬ ದೊಡ್ಡಶುದ್ದಿ.

  ಯಬ್ಬ!, ಅಂತೇ ಅಲ್ಲಾ ದೊಡ್ಡಮಾವಂಗೆ ದೊಡ್ಡಮುಂಡಾಸು. ಆ ದೊಡ್ಡಮುಂಡಾಸಿನೊಳ ಅದೇಷ್ತು ಗಹನ ವಿಚಾರಂಗೊ. ವಿಚಾರಂಗಳೂ ಗಾದೆಲಿ ಅಡಕವಾಗಿ. ‘ಗಾದೆ ಗಾದೆಯೇ. ಸಾರ್ವಕಾಲಿಕ ಸತ್ಯ’ ಹೇಳಿಗೊಂಡು ಅದೆಷ್ತು ಗಾದೆಗೊ ಈ ಕಿರುಲೇಖನಲ್ಲಿ ತುಂಬಿಸಿದ್ದವು ದೊಡ್ಡಮಾವ°.

  ‘ಕುಟುಂಬ ಮತ್ತು ನಂಬಿಕೆ’ ಹೇಳುವ ಮಹತ್ತರ ವಿಷಯವ ಅರ್ಥಮಾಡಿಗೊಂಬಲೆ, ಸಮಾಜಲ್ಲಿಪ್ಪ ಒಂದು ದೃಷ್ಟಾಂತವನ್ನೂ ಮುಂದಿರಿಸಿ ಎಂಕಟ ಹೋಗಿ ಸಂಕಟ ಉಂಟುಮಾಡಿಸಿ ಕಲಂಕಿಸಿದ ಘಟನೆಂದಲಾಗಿ, ಕುಟುಂಬಲ್ಲಿ ನಂಬಿಕೆ ಎಷ್ಟು ಪ್ರಾಮುಖ್ಯ ಹೇಳ್ವ ಒಂದು ವಿಚಾರವ ನಮ್ಮ ಮುಂದೆ ಮಡುಗಿದ್ದು ಲಾಯಕ ಆಯ್ದು ಹೇಳುವದು – ‘ಚೆನ್ನೈವಾಣಿ’

  ದೊಡ್ಡಮಾವ°, ಇದಾ ಇಲ್ಲಿಂದಲೇ , ‘….ಅಹಮಸ್ಮಿ ಭೋ ಅಭಿವಾದಯೇ’.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಇನ್ನೊಬ್ಬರ ಏಳಿಗೆ ಸಹಿಸಲೆ ಎಡಿಯದ್ದೆ ವಿಷ ಬೀಜ ಬಿತ್ತುವ ವೆಂಕಣ್ಣಂಗೊ ಲೋಕಲ್ಲಿ ಎಲ್ಲಾ ದಿಕ್ಕೆಲಿಯೂ ಇರ್ತವು.
  ಇದು ಕುಟುಂಬವ ಒಡವ ಕಾರ್ಯಕ್ಕೆ ಮಾತ್ರ ಸೀಮಿತವಾಗಿ ಇಲ್ಲೆ.
  ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡೆಕ್ಕು ಹೇಳುವದು ಇದಕ್ಕೇ ಅಲ್ಲದಾ?
  ೨೦೧೨ ರ ಆರಂಭಕ್ಕೆ ದೊಡ್ದ ಮಾವ ಶುದ್ದಿ ಹೇಳಿದ್ದಲ್ಲಿ, ನವಗೆ ಒಂದು ಚಿಂತನೆಗೆ ಕೂಡಾ ಅವಕಾಶ ಮಾಡಿ ಕೊಟ್ಟಿದವು-ಹಿತ್ತ್ತಾಳೆ ಕೆಮಿ ಇಪ್ಪಲಾಗ ಹೇದು
  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಅದಾ,ಹೇಮರ್ಸಿ ಮಡುಗಿದ್ದರ ಚೆನ್ನೈಭಾವ ಬಿಡುಸಿ ಹೆರ ತ೦ದ ಕಾರಣ ದೊಡ್ಡಮಾವನ ಈ ಚಿ೦ತನೆಯ ಓದುವ ಹಾ೦ಗಾತು.ಜಾನ್ಸಿದ್ದರ ಹೀ೦ಗೇ ಹೇಳಿರೆ ನವಗೂ ಸುಮಾರು ವಿಷಯ ಗೊ೦ತಾವುತ್ತು.
  ದೊಡ್ಡಮಾವ,ಶೇಣಿ ಅಜ್ಜನ ಹರಿಕಥೆ ಭಾರೀ ಲಾಯ್ಕ ಆಗ್ಯೊ೦ಡಿತ್ತಡ,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಹಳೆಮನೆ ಅಣ್ಣಕೆದೂರು ಡಾಕ್ಟ್ರುಬಾವ°ಶರ್ಮಪ್ಪಚ್ಚಿಅನು ಉಡುಪುಮೂಲೆಅಡ್ಕತ್ತಿಮಾರುಮಾವ°ಬಂಡಾಡಿ ಅಜ್ಜಿಬಟ್ಟಮಾವ°ಪುತ್ತೂರುಬಾವಪವನಜಮಾವವಿನಯ ಶಂಕರ, ಚೆಕ್ಕೆಮನೆಕಾವಿನಮೂಲೆ ಮಾಣಿವೇಣೂರಣ್ಣಬೋಸ ಬಾವಶೀಲಾಲಕ್ಷ್ಮೀ ಕಾಸರಗೋಡುದೀಪಿಕಾಕಜೆವಸಂತ°ಡೈಮಂಡು ಭಾವನೀರ್ಕಜೆ ಮಹೇಶಮುಳಿಯ ಭಾವಡಾಮಹೇಶಣ್ಣದೊಡ್ಮನೆ ಭಾವಪುಟ್ಟಬಾವ°ದೊಡ್ಡಮಾವ°ಚೆನ್ನೈ ಬಾವ°ಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ