“ಗೆಣಂಗು ಸುಗುಣಂಗೆ”

February 26, 2011 ರ 1:20 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದೊಂದು ಕತೆ.

ಒಂದೂರಿಲ್ಲಿ ಒಬ್ಬ ಗ್ರಾಸ್ತ ಇತ್ತಿದ್ದನಡ.
ಅವಂಗೆ ಒಬ್ಬ ಮಾಣಿಯೂ ಸುಗುಣ ಹೇಳ್ತ ಕೊಂಡಾಟದ ಒಂದು ಕೂಸೂ ಇತ್ತಿದ್ದವಡ.
ಒಂದು ದಿನ ಅವ ಪೇಟೆಂದ ಲಾಯ್ಕದ ಗೆಣಂಗು ತೆಕ್ಕಂಡು ಬಂದನಡ. ಅದರ ಕಂಡು ಅವನ ಹೆಂಡತಿ ‘ಗೆಣಂಗು ಆರಿಂಗೆ?’ ಕೇಳಿತ್ತಡ.
ಗೆಣಂಗು ಸುಟ್ಟು ಸುಗುಣಂಗೆ ಕೊಡು’ ಹೇಳಿದನಡ ಅವ.
ಆ ಹೆಮ್ಮಕ್ಕೊ ಹಾಂಗೇ ಮಾಡಿ ಕೊಟ್ಟತ್ತಡ. ತಂಗೆ ಗೆಣಂಗು ತಿಂಬದರ ಕಂಡು ‘ಅಬ್ಬೇ.. ಎನಗೂ ಸುಟ್ಟಾಕಿ ಕೊಡೂ..‘ ಹೇಳಿ ಮಾಣಿ ತರ್ಕ ಮಾಡಿದನಡ. ಅಷ್ಟಪ್ಪಗ ಅಬ್ಬೆ ‘ಎನಗೆ ಈಗ ಪುರ್ಸೊತ್ತಿಲ್ಲೆ, ಒಸ್ತ್ರ ಒಗವಲೆ ಇದ್ದು. ಎಡಿಗಾರೆ ಸುಗುಣ ಸುಟ್ಟು ಕೊಡುಗು ಹೇಳಿಕ್ಕಿ ಅದರ ಕೆಲಸಕ್ಕೆ ಹೋತಡ.
ತಂಗೆ ಸುಟ್ಟಾಕಿ ಕೊಟ್ಟದರೆಲ್ಲ ಮಾಣಿ ಲಾಯ್ಕಲ್ಲಿ ತಿಂದು ಮುಗುಶಿದನಡ. ಮುಗುಶಿಕ್ಕಿ ಇನ್ನೂ ಬೇಕು ಹೇಳಿ ಅರ್ಗ್ಗೆಂಟು ಹಿಡುದನಡ. ಗೆಣಂಗು ಸುಟ್ಟು ಕೊಟ್ಟು ಕೊಟ್ಟು ಸುಗುಣಂಗೆ ಬೊಡುದತ್ತಡ.
ಅಷ್ಟೊತ್ತಿಂಗೆ ಅಬ್ಬೆ ಒಸ್ತ್ರ ಒಗದು ಹಿಂಡಿಕ್ಕಿ ಇದಾ ಸುಗುಣ,  ಒಲೆ ಮೇಲೆ ಒಣಗುಸು‘ ಹೇಳಿ ಅದರ ಕೈಲಿ ಕೊಟ್ಟತ್ತಡ. ಸುಗುಣ ‘ಏ ಅಣ್ಣ..ಎನಗೆ ಒಸ್ತ್ರ ಆರ್ಸಲೆ ಇದ್ದು. ಇನ್ನು ಬೇಕಾರೆ ನೀನೇ ಸುಟ್ಟಾಕಿಗೊ’ ಹೇಳಿ ಎದ್ದಿಕ್ಕಿ ನೆಡದತ್ತಡ. ಮಾಣಿ ‘ಬೆರ್ರೇ..‘ ಹೇಳಿ ಕೂಗಿದನಡ.
ಇಲ್ಲಿಗೆ ಈ ಕತೆ ಮುಗೂ….ದತ್ತು!!

****

ಥೂ.. ಎಂತ ಸುಟ್ಟ ಕತೆಯಪ್ಪ ಇದು?! ಪೊದುಂಕುಳೂ ಇಲ್ಲೆ ಇದಲ್ಲಿ. ಅಲ್ಲ, ಈ ಸುಭಗಣ್ಣ ಹೀಂಗಿದ್ದ ಲಾಯ್ ಲೋಟು ಕತೆ ಹೇಳಿ ಬೈಲಿನವರ ಮಂಗ ಮಾಡ್ಲೆ ಹೊಣೆತ್ತಾ ಇದ್ದನೋ ಹೇಂಗೆ?‘ ಹೇಳಿ ನಿಂಗೊಗೆಲ್ಲ  ಈಗ ಒಂದಾರಿ ಉರಿದರುಸದ್ದೆ ಇರ!
ಕ್ಷಮುಸಿ. ಪ್ರವೇಶಕ್ಕೆ ಮದಲು ಪೀಠಿಕೆ ಬಡಿತ್ತ ಕ್ರಮ ಇದ್ದನ್ನೆ
– ಹಾಂಗೆ ಇಂದ್ರಾಣ ವಿಷಯ ಪ್ರವೇಶಕ್ಕೆ ಮದಲು ಅದಕ್ಕೆ ರೆಜ ಸಂಬಂಧ ಬಪ್ಪಹಾಂಗೆ ಈ ಸುಟ್ಟ/ಕಟ್ಟುಕತೆಯ ಕಟ್ಟಿ ನಿಂಗೊಗೆ ಹೇಳಿದ್ದು.
ಹನಿಯ ಸಮಾಧಾನ ತೆಕ್ಕಂಡು ಮುಂದೆ ಓದಿ.

***

‘ಮುಂದೆ ಓದಿ’ ಹೇಳಿದೆ ಅಲ್ಲದೊ? ಬೇಡ. ನಿಲ್ಲಿ. ಮುಂದೆ ಓದೆಕ್ಕಾರೆ ಮದಲು ಈ ಕತೆಯ ಸುರೂವಿಂದ ಇನ್ನೊಂದಾರಿ ಓದಿ.
ಪೂರ ಕತೆ ಓದೆಕ್ಕೂಳಿ ಇಲ್ಲೆ- ಕತೆಯ ಶೀರ್ಷಿಕೆಯನ್ನೂ ಅಲ್ಲಿ ಮೇಗೆ ಕೆಂಪಕ್ಷರಲ್ಲಿ ಬರಕ್ಕಂಡಿಪ್ಪ ಪದಸಮೂಹಂಗಳನ್ನೂ ಒಂದೊಂದಾಗಿ ಓದಿ.

ಓದಿದಿರೋ?

ಸಮ.

ಅದಲ್ಲಿ ಎಂತಾರು ವಿಶೇಷ ಇದ್ದಾಂಗೆ ನಿಂಗೊಗೆ ತೋರುತ್ತೋ? ಎಂತ ವಿಶೇಷ ಇಪ್ಪದು ಹೇಳಿಯೂ ಗೊಂತಾವ್ತೋ? (ಅದ! ಅಷ್ಟಪ್ಪಗ ಮುಳಿಯ ಭಾವನೂ ಬೋಸ ಭಾವನೂ ಜೋರು ತಲೆ ಆಡ್ಸುತ್ತವು.
ಸಂಗತಿ ಎಂತರ ಹೇಳಿರೆ- ಒಬ್ಬಂಗೆ ಪೂರ ಗೊಂತಾಯಿದು; ಮತ್ತೊಬ್ಬಂಗೆ ಏನೂ ಗೊಂತಾಯಿದಿಲ್ಲೆ!) ಇರಳಿ,  ಎಲ್ಲರಿಂಗು ಗೊಂತಪ್ಪಹಾಂಗೆ ಆನು ಅದರ ವಿವರುಸುತ್ತೆ- ಇಂದಲ್ಲ; ನಾಕು ದಿನ ಕಳುದು. ಏಕೆ ಹೇಳಿರೆ ಎನ್ನ ಪರಿಕರ್ಮಿ ‘ಕುಬೇರ’ ಈಗ ಸುರಲೋಕಲ್ಲಿ ಬಜೆಟ್ ಮಂಡನೆ ಮಾಡುವ ತೆರಕ್ಕಿಲ್ಲಿ ಇದ್ದ.  ಇದರ ನಿಂಗೊಗೆ ವಿವರುಸೆಕ್ಕಾರೆ ಎನ್ನೊಟ್ಟಿಂಗೆ ಕುಬೇರ ಬೇಕು.  ಅವನ ಕೆಲಸ ಮುಗುಶಿಕ್ಕಿ ಅವ ಬಂದೋಳ್ಳಿ, ಆಗದೋ? 😉

“ಗೆಣಂಗು ಸುಗುಣಂಗೆ”, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಚೆನ್ನೈ ಬಾವ°

  ಅಪ್ಪಪ್ಪು ನಿಂಗೊಗೆ ಈಗ ಹೊತ್ತು ದಾಂಟಿತ್ತು. ಗಂಟೆ ನೋಡಿ. ಓ ಅಲ್ಲೇ ಹೋಪಲಾತು. ಹೋಗಿ ಬಂದಿಕ್ಕಿ. ಎನಗೆ ತಡವಾಯ್ದಿಲ್ಲೇ.

  ನಿಂಗಳ ಪೇಟೆಲಿ ಗೆಣಂಗಿಗೆ ಎಷ್ಟು ಭಾವ?.

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ

  ಮುಂದಂದ ಹಿಂದಂಗೂ, ಹಿಂದಂದ ಮುಂದಂಗೂ ಓದುವಾಗ ಒಂದೇ ರೀತಿ ಬಪ್ಪ ಶಬದಂಗೊಕ್ಕೆ ಎಂತ ಹೇಳುವದು?
  “ಕುಬೇರನಿಗೇನಿರಬೇಕು?”

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ‘ಗತಪ್ರತ್ಯಾಗತ’ ಹೇಳಿ ಹೇಳುದಲ್ದ ಅಪ್ಪಚ್ಚಿ?

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  MALAYALAM, ವಿಕಟಕವಿ, ಸರಸ, ಕುಬೇರನಿಗೇನಿರಬೇಕು, ಎನಗೆ ಗೊಂತಿಪ್ಪದು ಇಷ್ಟು. ಹೇಳಿದ ಹಾಂಗೆ ಸುಭಗಣ್ಣಾ, Palindrome ಹೇಳಿ ಹೇಳುವುದು ಕೇಳಿದ್ದೆ. ಅದೆ ಅಲ್ಲದೊ ಇದು ?
  ಅಂಬಗ ಸುಗಣನ ಅಪ್ಪ ಎಷ್ಟು ಕಿಲೋ ಗೆಣಂಗು ತಂದಿತ್ತಿದ್ದ. ಗೆಂಡೆ ಸುಮಾರು ಇತ್ತೋ ಹೇಳಿ.
  ನಮ್ಮ ದೇವೇಗೌಡಂಗೆ ಕ್ವಿಂಟಾಲು ಗಟ್ಳೆ ಗೆಣಂಗು ಬೇಕಾವುತ್ತೋ ಹೇಳಿ, ತೂಗಲೆ ಬೇಕಾವುತ್ತಲ್ಲದೊ ?

  [Reply]

  VA:F [1.9.22_1171]
  Rating: 0 (from 0 votes)
 4. ಬೋಸ ಬಾವ
  ಬೋಸ...

  ಓ.. ಎನ ಸರೀ ಅರ್ಥಾತು…. :)
  ವಸ್ತ್ರವ ಒಲೆಯ ಮೇಲಿ ಹಾಕಿ ಒಣಗುಸಿರೆ ಬೇಗ ಒಣಗ್ಗು… ಬೆಶಿಲ್ಲಿ ಅಲ್ಲ.. 😛
  10-20 ತು ಗೆಣ೦ಗಿನ, ಬೆಶಿಲ್ಲೆ ಹಾಗಿ ಒಣಗಿಸಿರೆ ಒಟ್ಟಿ೦ಗ ಒಣಗ್ಗು.. 😉
  ಮತ್ತೆ ತಿ೦ಬಲೆ ಎಲ್ಲಾರಿ೦ಗು ಸುಲಾಭ ಹೇಳಿ… ಗೇಸು ಒಳಿಗು ಹೇಳಿ.. 😀

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಬೋಸ ಬಾವಾ, ಗೇಸು ಒಳಿಗ ? ಅಲ್ಲ ಹೊಟ್ಟೆಲಿ ಗೇಸು ಜಾಸ್ತಿ ಅಕ್ಕಾ ?

  [Reply]

  VA:F [1.9.22_1171]
  Rating: 0 (from 0 votes)
 5. ಭಾಗ್ಯಲಕ್ಶ್ಮಿ

  ”ಸಂಸ್ಕೃತ ಎನಗೆ ಸುಟ್ಟು ತಿಮ್ಬಲೂ ಗೊಂತಿಲ್ಲೆ ” ಹೇಳಿ ಆನು ಹೇಳ್ತ ಕ್ರಮ ಇದ್ದು . ಈ ಸುಗುಣನ ಕಥೆ ಓದಿದ ಮತ್ತೆಯೇ ಎನಗೆ ಸುಟ್ಟು ತಿಮ್ಬದರ ಹಿನ್ನಲೆ ಗೊಂತ್ಹಾದ್ದು !! ಕುಬೇರನ ಒತ್ತಿನ್ಗೆ ಅವನ ಪುಷ್ಪಕ ವಿಮಾನಲ್ಲಿ ಆರೆಲ್ಲ ಬತ್ತವೋ ….?

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  Gopalakrishna BHAT S.K.

  ಕೊಡಿಂದಲೂ ಕಡೆಂದಲೂ ಓದಿರೆ ಒಂದೆ ರೀತಿ ಇಪ್ಪ ಕೆಲವು ಶಬ್ದ ಇದ್ದು.ಕಾಳಿದಾಸನ ಹೆಸರು ಬಪ್ಪದು ಇಂತಾ ಒಂದು ವಾಕ್ಯ ಇದ್ದು.ಎನ್ನ ಅಪ್ಪ ಹೇಳುದು ಕೇಳಿದ್ದೆ.ಬರಕ್ಕೊಂಡಿದಿಲ್ಲೆ.ಡಾ.ಮಹೇಶಣ್ಣಂಗೆ ಗೊಂತಿಕ್ಕು.ಅವು ಬರಗೊ?
  ಸುಭಗಣ್ಣನ ಲೇಖನ ಇಷ್ಟ ಆತು.

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘುಮುಳಿಯ

  ಸುಭಗ ಭಾವನ ಲೆಖನ ರಸವತ್ತಾಯಿದು.ಗೆಣ೦ಗಿನ ಕಥೆ ಎ೦ತಪ್ಪಾ ಹೇಳಿ ಸರೀ ನೋಡೊಗ ಅಕ್ಷರ೦ಗಳ ಸೇರುಸಿದ ಕ್ರಮದ ವಿಶೇಷತೆ ಕ೦ಡತ್ತು.ಸಾಹಿತ್ಯ ಎಷ್ಟು ಚೆ೦ದಕ್ಕೆ ತಯಾರಪ್ಪಲೆ ಸಾಧ್ಯ ಇದ್ದು ಹೇಳ್ತದಕ್ಕೆ ಇದು ಒ೦ದು ಉದಾಹರಣೆ.ಭಾವ,ಇನ್ನಾಣ ಕ೦ತಿ೦ಗೆ ಕಾಯ್ತಾ ಇದ್ದೆ.
  ಏ ಬೋಸ ಭಾವಾ,ಗೆಣ೦ಗು ಸುಡುತಾ ಇದ್ದವು,ರಜಾ ಕಾಯೆಕ್ಕು ಆತೋ?

  [Reply]

  ಬೋಸ ಬಾವ

  ಬೋಸ... Reply:

  ಅದು ಅಪ್ಪು.. ಆದರೆ ರಘು ಭಾವ.. ಆನು ಇಷ್ಟು ದಿನ ಬೇಶುತ್ತು.. ಇದು ಸುರಾ ಆನು ಕೇಳುದು… 😉

  [Reply]

  VN:F [1.9.22_1171]
  Rating: 0 (from 0 votes)
 8. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಈ ಲೇಖನ ಯಾವ ವಿಷಯಕ್ಕೆ ಸಂಬಂದ್ಸಿ ಬರದ್ದು ಹೇಳಿ ಗೊಂತಪ್ಪಲೆ ನಾಕು ದಿನ ಕಳಿಯೆಕ್ಕದ.
  ಅಂದು ಶಾಲೆಗೆ ಹೋಯ್ಕೊಂಡಿಪ್ಪಾಗ, ಹೀಂಗೆ ಹಿಂದುಮುಂದಾಗಿ ಓದಿಯಪ್ಪಗ ಒಂದೇರೀತಿ ಬಪ್ಪ ಪದಂಗಳ ಹೇಳುವ ಆಟ ಆಡಿಗೊಂಡಿದ್ದದು ನೆಂಪಾತು.
  ನಯನ, ಕಿಟಕಿ, ನವೀನ, ಸರಸ, ಜಲಜ, ಕನಕ…

  [Reply]

  VA:F [1.9.22_1171]
  Rating: 0 (from 0 votes)
 9. shivakumar

  ಇಂದ್ರಾಣ “ನವಜೀವನ”ಲ್ಲಿ ಹಿಂಗಿಪ್ಪ ಆಟಂಗೊ ಏವ ಮಕ್ಕಳಿಂಗು ಗೊಂತಿಲ್ಲೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಯೇನಂಕೂಡ್ಳು ಅಣ್ಣಚುಬ್ಬಣ್ಣಶಾ...ರೀಮುಳಿಯ ಭಾವಕಳಾಯಿ ಗೀತತ್ತೆಚೂರಿಬೈಲು ದೀಪಕ್ಕಬಟ್ಟಮಾವ°ಮಾಲಕ್ಕ°ಒಪ್ಪಕ್ಕದೀಪಿಕಾಪಟಿಕಲ್ಲಪ್ಪಚ್ಚಿದೊಡ್ಮನೆ ಭಾವಅಡ್ಕತ್ತಿಮಾರುಮಾವ°ಡಾಗುಟ್ರಕ್ಕ°ರಾಜಣ್ಣಪ್ರಕಾಶಪ್ಪಚ್ಚಿಸುಭಗಉಡುಪುಮೂಲೆ ಅಪ್ಪಚ್ಚಿದೊಡ್ಡಭಾವದೊಡ್ಡಮಾವ°ಚೆನ್ನೈ ಬಾವ°ಕಾವಿನಮೂಲೆ ಮಾಣಿಬೊಳುಂಬು ಮಾವ°ಅಕ್ಷರ°ಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ