ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಹಳೆಮನೆ ಕೆಮರದಣ್ಣ ಓ ಮೊನ್ನೆ ಸಿಕ್ಕಿದವು, ಗುಡ್ಡೆತಲೆಲಿ – ಮಂಜಪ್ಪು ಕೋಟೆಯ ಹತ್ರೆ!
ಕೈಲಿ ಒಂದು ಕೇನು ಇತ್ತು. ಕೊರಳಿಲಿ ಒಂದು ಕಪ್ಪು ಬೆಳ್ಟು ಇತ್ತು.
ಕೇನಿಲಿ ಬೆಳೀ ಹಾಲಿತ್ತು, ಬೆಳ್ಟಕೊಡಿಲಿ ಕರಿಕೆಮರ ಇತ್ತು!
‘ಚೆಲಾ, ಇದೆಂತ ಹಳೆಮನೆಅಣ್ಣ! ಅದೆಂತಕೆ, ಇದೆಂತಕೆ? ಎರಡೂ ಒಟ್ಟಿಂಗೆ ಎಂತಕೆ?’ ಕೇಳಿದೆ.“ಅದು ನೋಡು ಒಪ್ಪಣ್ಣಾ, ಆನೀಗ ಡಿಪಕ್ಕೆ ಹಾಲು ಹಾಕಲೆ ಹೋಪದು.
ಎಲ್ಲಿಗಾರು ಹೋಪಗ ಕೆಮರ ಒಂದು ನೇಲುಸಿಗೊಂಬದು. ಒಳ್ಳೊಳ್ಳೆ ದೃಶ್ಯಂಗೊ ಸಿಕ್ಕಿರೆ ಪಟತೆಗವದು.
ಮತ್ತೆ ಆ ದೃಶ್ಯ ಪಟಂಗಳ ಇಂಟರ್ನೆಟ್ಟಿಲಿ ನೇಲುಸುದು” – ಹೇಳಿದ° ನೆಗೆಮಾಡಿಗೊಂಡು.
ಆನೆಂತ ನೆಗೆಮಾಡಿದ್ದಿಲ್ಲೆ, ಮಾಡಿದ್ದರೆ ಅದನ್ನುದೇ ಒಂದು ಪಟ ತೆಗೆತ್ತಿತನೋ ಏನೋ!ಹಳೆಮನೆ ಅಣ್ಣ ಪಟತೆಗವದು ಗೊಂತಿತ್ತು, ಆದರೆ ಪಟ ಹೇಂಗೆ ಬತ್ತು ಹೇಳಿ ಆರು ನೋಡಿದ್ದ°!
ಯೇವದಾರು ಜೆಂಬ್ರದ್ದಾದರೆ – ಎಲ್ಲವುದೇ ಹೆಚ್ಚುಕಮ್ಮಿ ಒಂದೇ ನಮುನೆ ಇರ್ತು. ಬಟ್ಟಮಾವ, ಮದುಮ್ಮಾಯ, ಉಪ್ನಯನದ ಮಾಣಿ, ಅದು ಇದು.
ಆದರೆ ನಮ್ಮದೇ ಪರಿಸರದ ಪಟಂಗ ಹೇಂಗಿಕ್ಕು?!
ದೊಡ್ಡಬಾವನಲ್ಲಿಗೆ ಹೋಗಿ ಒಂದರಿ ಅವ ತೆಗದ ಪಟಂಗಳ ಇಂಟರ್ನೆಟ್ಟಿಂತ ಇಳುಶಿ ತೋರುಸುಲೆ ಹೇಳಿದೆ, ದೊಡ್ಡಬಾವ° ತೋರುಸಿದ°.
ಕೆಮರದ ಹಾಂಗೆ ಒಂದು ಕಪ್ಪು ಪುಟಲ್ಲಿ – ಸುಮಾರು ಪಟಂಗ; ವಾಹ್! ತುಂಬಾ ಚೆಂದ ಇತ್ತು!
ಒಂದು ಪಟ, ಒಂದು ಗೆರೆ ಹೆಡ್ಡಿಂಗು, ಇಂಗ್ಳೀಶಿಲಿ – ದೊಡ್ಡಬಾವ ಅದರ ಅರ್ತ ವಿವರುಸುವಗ ಒಂದೊಂದೇ ಗೊಂತಪ್ಪಲೆ ಸುರು ಆತು!!ಪ್ರತಿ ಪಟಲ್ಲಿದೇ ಅದರದ್ದೇ ಆದ ಶಕ್ತಿ ಇತ್ತು.
ಅಲ್ಲಿ ಇದ್ದದೆಲ್ಲ, ಕೊಕ್ಕರೆಯೋ, ಜೇಡನಬಲೆಯೋ, ತೊಳಶಿ ಹೂಗೋ – ಸಾಮಾನ್ಯ ನಿತ್ಯಜೀವನಲ್ಲಿ ಕಾಣ್ತ ದೃಶ್ಯಂಗಳೇ ಆದರೂ, ಪಟ ಹಳೆಮನೆ ಅಣ್ಣ ತೆಗದ್ದಾದರೆ ಅದರ್ಲಿ ಏನೋ ಒಂದು ಬೇರೇ ನಮುನೆ ಕಾಂಬದು.
ನಿನ್ನೆ ಹೋಗಿ ಕೇಳಿದೆ, ಹಳೆಮನೆ ಅಣ್ಣ, ಇದರ ಒಪ್ಪಣ್ಣನ ಬೈಲಿಂಗೆ ತೋರುಸುವನಾ? ಹೇಳಿ…
ಕುಶೀಲಿ ಅಕ್ಕು ಹೇಳಿದ, ಪೆಟ್ಟಿಂಗೆಂದ ಹುಡ್ಕಿ ಕೆಲವರ ತೆಗದು ಕೊಟ್ಟ!
ಇದಾ, ಆ ಕೆಲವು ಪಟಂಗೊ! ನೋಡಿ, ಕುಶಿ ಆದರೆ ಒಪ್ಪ ಕೊಡಿ.
ಆತೋ? ಏ°?
~
ಒಪ್ಪಣ್ಣ
ಹೆಚ್ಚಿನ ಪಟಂಗೊಕ್ಕಾಗಿ http://drishyaphotos.blogspot.com ಸಂಕೊಲೆಯ ಒತ್ತಿ.
ಆಯ್ದ ಕೆಲವು ದೃಶ್ಯಪಟಂಗೊ ಇಲ್ಲಿದ್ದು:
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಹಳೆಮನೆ ಅಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
Supper aidu maraya ninna Style original aagi Helidhavu woh….
[ಉತ್ತರುಸಿ]
harishanna,photo ella laayakka bayndu,camera yaavudu?
[ಉತ್ತರುಸಿ]
ಒಪ್ಪಣ್ಣ ವಿವರಣೆ ಕೊಟ್ಟದು ಲಾಯಿಕಾದು…
ನಿಂಗ ಹೇಳಿದಾಂಗೆಯೇ. ಹರಿಶಣ್ಣ ತೆಗೆದ ಫೋಟೋಸ್ ಸೂಪರಪ್ಪ!!
[ಉತ್ತರುಸಿ]
ಎಂತ ಅಳಿಯಾ. ಅಳಿಯ ಹರೀಶನ ಫೊಟೋಂಗಳ ಒಪ್ಪಣ್ಣನ ಜಾಗೆಲಿ ನೋಡಿ ಭಾರಿ ಕೊಶಿ ಆತು. ಒಂದಕ್ಕಿಂತ ಒಂದು ಮಿಗಿಲಾಗಿದ್ದು. ಸೂಪರ್ ಆಯಿದು. ಒಳ್ಳೆದಾಗಲಿ.
ಗೋಪಾಲ್ ಬೊಳುಂಬು
[ಉತ್ತರುಸಿ]
ಬರೇ ಕಪ್ಪು ಬೆಳಿಲಿ ಬರದ ಶುಧ್ಧಿ ಓದಿ ಬೇಜಾರಪ್ಪದಕ್ಕೆ,
ಅಂಬಂಗ ಹೀಂಗಿಪ್ಪ ಪಟಂಗಳನ್ನುದೆ ಹಾಕಿರೆ
ನೋಡ್ಲೆ ಕೊಷೀ ಆವುತ್ತದಾ!!
ಪಟಂಗೊ ಎಲ್ಲಾ ಚೆಂದ ಇದ್ದು.
ಅಭಿನಂದನೆಗೊ ಇಬ್ರಿಂಗೂ..
[ಉತ್ತರುಸಿ]
ಪಟ೦ಗ ಒ೦ದಕ್ಕಿ೦ದ ಒ೦ದು ಚೆ೦ದ ಆಯಿದು….ಸೂಪರ್…
[ಉತ್ತರುಸಿ]
ಹೊತ್ತುವೇಳೆ: 1 February,2010ರ 11:13 AM ಗೆ. (ಒಪ್ಪಸಂಕೊಲೆ)
ಹರೀಶ್ ಹಳೆಮನೆ, ನಿಜಕ್ಕೂ ಅದ್ಭುತ ಫೋಟೊಗಳು, ನಿನಗೆ ಒಳ್ಳೆಯ ಪ್ರಶಸ್ತಿ, ಬಹುಮಾನಂಗ ಬೇಗ ಬರಲಿ, ಇನ್ನಷ್ಟು ಜನ ಗುರುತಿಸಲಿ ಹೇಳಿ ಹಾರೈಸುತ್ತೆ.. ಹೀಂಗೆ ಅದ್ಭುತ ಫೊಟೊ ಬರುತ್ತಲೇ ಇರಲಿ..ಈ ಬ್ಲಾಗ್‌ದೆ ತುಂಬ ಲಾಯಕ ಇದ್ದು.
[ಉತ್ತರುಸಿ]
Photo nga ella laika baindu ….halemane annana camera antoo suuuper..
[ಉತ್ತರುಸಿ]
ಅದ್ಭುತ!!! ತುಂಬ ತುಂಬಾ ಲಾಯ್ಕಾಯಿದು…
[ಉತ್ತರುಸಿ]
photo nga nodi bari kushi atu. innastu photo gala haki. kelasada bisi mugudu hottappaga ningala ee photongala nodiappaga manassingi kushi avuthu.
[ಉತ್ತರುಸಿ]
ಅದ್ಭುತ !
[ಉತ್ತರುಸಿ]