ಮತ್ತೆರಡು ಸುಭಾಷಿತಂಗ

January 31, 2013 ರ 6:42 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಭಾಷಿತಮ್

ಅಂದೊಂದರಿ ನಾವು ಸುಭಾಷಿತದ ಬಗ್ಗೆ ಕೇಳಿ ತಿಳ್ಕೊಂಡದು ನೆಂಪಿದ್ದೊ?

ಈಗ ಕೆಲವು ಸುಭಾಷಿತಂಗಳ ಕಲ್ತುಗೊಂಬ.

೧. ಕೆಲವೆಲ್ಲ ವ್ಯರ್ಥ ಕೆಲಸಂಗ ಹೇಳಿ ನಾವು ಹೇಳುವದಿದ್ದು. ಹಾಂಗಿಪ್ಪ ಒಂದು ಸುಭಾಷಿತ ಹೀಂಗಿದ್ದು.

ವೃಥಾ ವೃಷ್ಟಿಃ ಸಮುದ್ರೇಷು

ವೃಥಾ ತೃಪ್ತೇಷು ಭೋಜನಮ್।

ವೃಥಾ ದಾನಂ ಧನಾಢ್ಯೇಷು

ವೃಥಾ ದೀಪೋ ದಿವಾಪಿ ಚ॥

ಅನ್ವಯಃ-

 ಸಮುದ್ರೇಷು ವೃಷ್ಟಿಃ ವೃಥಾ । ತೃಪ್ತೇಷು ಭೋಜನಮ್ ವೃಥಾ।  ದಾನಂ ಧನಾಢ್ಯೇಷು ವೃಥಾ। ಅಪಿ ಚ ದಿವಾ ದೀಪಃ ವೃಥಾ

ಅರ್ಥ

ವೃಥಾ = ಸುಮ್ಮನೆ / ವ್ಯರ್ಥ / ಬೇಡದ್ದದು / ಉಪಯೋಗ ಇಲ್ಲದ್ದು.

ಎಂತದೆಲ್ಲ ವೃಥಾ ಅಡ?

ಸಮುದ್ರೇಷು ವೃಷ್ಟಿಃ ವೃಥಾ = ಸಮುದ್ರಗಳ ಮೇಲೆ ಮಳೆ ಬೀಳುವದು

ತೃಪ್ತೇಷು ಭೋಜನಮ್ ವೃಥಾ= ಹೊಟ್ಟೆ ತುಂಬಿ ತೃಪ್ತರಾದವಕ್ಕೆ ಊಟ

ಧನಾಢ್ಯೇಷು ದಾನಂ ವೃಥಾ= ಶ್ರೀಮಂತರಿಂಗೆ ದಾನ

ಅಪಿ ಚ  = ಮತ್ತು

ದಿವಾ  ದೀಪಃ  ವೃಥಾ = ಹಗಲು ಹೊತ್ತಿಲ್ಲಿ ದೀಪ.

 ಸಮುದ್ರದ ಮೇಲೆ ಮಳೆ ಬೀಳುವದೂ, ಹೊಟ್ಟೆ ತುಂಬಿದವಕ್ಕೇ ಮತ್ತೆ ಮತ್ತೆ ಉಣುಶುವದೂ, ಪೈಸೆಕ್ಕಾರಂಗಕ್ಕೆ ದಾನ ಮಾಡ್ವದೂ, ಹಗಲಿಲ್ಲಿ ದೀಪ ಹೊತ್ತುಸವದರಿಂದಲೂ ಲಾಭ ಇಲ್ಲೆ ಅಲ್ಲದಾ?

ಸುಭಾಷಿತವ ಪುನಃ ಒಂದರಿ ಓದಿ, ಬಾಯಿಪಾಠ ಮಾಡಿ.

೨.  ಕೆಲವು ವಸ್ತುಗ ಇರೆಕಾದ ಜಾಗೆಲ್ಲಿ ಇಲ್ಲದ್ರೆ ಚೆಂದ ಕಾಣ್ತಿಲ್ಲೆ ಅಡ!

ಸ್ಥಾನಭ್ರಷ್ಟಾ ನ ಶೋಭಂತೇ  ದಂತಾಃ ಕೇಶಾಃ ನಖಾ ನರಾಃ।

ಸ್ಥಾನಭ್ರಷ್ಟಾ ನ  = ಸ್ಥಾನಭ್ರಷ್ಟಾಃ + ನ

ನಖಾ ನರಾಃ =ನಖಾಃ + ನರಾಃ 

ಸ್ಥಾನಭ್ರಷ್ಟಃ ಹೇಳಿರೆ ಇಪ್ಪ ಜಾಗೆ ತಪ್ಪಿದ/ಜಾರಿದ/ ವಸ್ತು.

ಜಾಗೆ ತಪ್ಪಿದ ವಸ್ತುವಿಂಗೆ ಶೋಭೆ ಇಲ್ಲೆ, ಬೆಲೆಯೂ ಇಲ್ಲೆ  ಅಲ್ಲದಾ? ಅದಕ್ಕೆ ಉದಾಹರಣೆಯಾಗಿ ಕೆಲವುದರ ಕೊಟ್ಟಿದವಿಲ್ಲಿ –

ದಂತಾಃ ಕೇಶಾಃ ನಖಾಃ ನರಾಃ

ಅರ್ಥಃ –

ಸ್ಥಾನಭ್ರಷ್ಟಾಃ = ಜಾಗೆಂದ ಭ್ರಷ್ಟರಾದವು

ನ ಶೋಭಂತೇ = ಶೋಭಿಸುತ್ತವಿಲ್ಲೆ.

ಆರಾರು?

ದಂತಾಃ = ಹಲ್ಲುಗೊ

ಹಲ್ಲುಗೊ ಬಾಯಿಲ್ಲಿದ್ದರೆ (ಅದುದೆ ವ್ಯವಸ್ಥಿತವಾಗಿ) ಚೆಂದ! ಕೆಳ ಬಿದ್ದರೆ ಮತ್ತೆ ಕೇಳೆಕ?

ಕೇಶಾಃ = ಕೂದಲುಗ

ನಖಾಃ = ಉಗುರುಗೊ

ಇವೆಲ್ಲ ಶರೀರಲ್ಲಿಪ್ಪಗ ಸೌಂದರ್ಯ ಹೆಚ್ಚುಸುವಂತಾದ್ದು. ಬಿದ್ದ ಮತ್ತೆ ಕಸವು. ಬರೀ ಕಸವು!

ಇವೆಲ್ಲ ನಿರ್ಜೀವ ವಸ್ತುಗೊ. ನಮ್ಮ ಕಥೆ ಎಂತರ? ನಾವೂ (ಮನುಷ್ಯರುದೆ) ಹಾಂಗೆಯೇ. ನರಾಃ  ಹೇಳಿರೆ ಮನುಷ್ಯರು.

ಹಾಂಗಾಗಿ ಮನುಷ್ಯರುದೆ ಅವರವರ ಯೋಗ್ಯತೆಗೆ ಅನುಸಾರವಾಗಿ, ಸಾಮರ್ಥ್ಯವ ತಿಳ್ಕೊಂಡು, ಕಾಲಕ್ಕೆ ತಕ್ಕ ಹಾಂಗೆ ಇರೆಕಾದಲ್ಲಿಯೇ ಇರೆಕು.

ಅಪ್ಪೋ?

ಸುಭಾಷಿತವ ಪುನಃ ಒಂದರಿ ಓದಿ, ಕಂಠಸ್ಥ ಮಾಡಿ.

ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತೇಷು ಭೋಜನಮ್।

ವೃಥಾ ದಾನಂ ಧನಾಢ್ಯೇಷು ವೃಥಾ ದೀಪೋ ದಿವಾಪಿ ಚ॥

ಸ್ಥಾನಭ್ರಷ್ಟಾ ನ ಶೋಭಂತೇ  ದಂತಾಃ ಕೇಶಾಃ ನಖಾ ನರಾಃ।

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಸುಬ್ಬಣ್ಣ ಭಟ್ಟ, ಬಾಳಿಕೆ

  ಭೂಭಾಗ ಕಮ್ಮಿ,ಬಿದ್ದ ಮಳೆ ಭೂಮಿಯೇ ನುಂಗುತ್ತು.ಸಮುದ್ರಕ್ಕೆ ಬಿದ್ದರೆ ಅದೇ ನೀರು ಆವಿಯಾಗಿ ಮೋಡಬವಾಗಿ ಮತ್ತೆ ಮಳೆ ಬತ್ತು. ಆ ನೀರು ಭೂಮಿಗೇ ಸಿಕ್ಕುತ್ತು. ಧನಿಕಂಗೆ ದಾನ ಕೊಟ್ಟರೆ ಅವನ ಕೈಲ್ಲಿ ಒಳಿತ್ತು. ಅವ ಸೇವಕರಿಂಗೆ ಕೂಲಿಯ ರೂಪಲ್ಲಿ ಕೊಡುತ್ತ. ಹಾಂಗೆ ಉಂಡೋರ ಹೊಟ್ಟೆ ಬೇಗ ತುಂಬುತ್ತು.ನೂರು ಜನರ ಊಟವ ಸಾವಿರ ಜನ ಉಂಗು. ಹಶುವಾದೋನು ಉಂಡಿಕ್ಕಿ ಹೋದೋನು ಮರದಿನ ಹೀಂಗೇ ಊಟ ಎಲ್ಲಿ ಸಿಕ್ಕುಗು ಹೇಳಿ ಹುಡುಕ್ಕಿಗೊಂಡು ಹೋಕು.ಹಗಲು ಹೊತ್ತಿಲ್ಲಿ ಮನೆಯೊಳದಿಕ್ಕೆ ದೀಪವೇ ಬೇಕಾವುತ್ತಲ್ಲದೋ?ಪ್ರಕೃತಿಲ್ಲಿ ಹೇಂಗಪ್ಪ ವಿಕೃತಿ ಕಾಂಬದು!

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ನಿಂಗಳ ಪ್ರತಿವಾದ ಲಾಯಕ ಇದ್ದು!!

  {ಸಮುದ್ರಕ್ಕೆ ಬಿದ್ದರೆ ಅದೇ ನೀರು ಆವಿಯಾಗಿ ಮೋಡಬವಾಗಿ ಮತ್ತೆ ಮಳೆ ಬತ್ತು}
  ಮತ್ತೆ ಮಳೆ ಬಂದದು ಮತ್ತೆ ಸಮುದ್ರಕ್ಕೇ ಬೀಳ್ತು. ಎಂತಕೆ ಹೇಳಿರೆ ನಿಂಗ ಹೇಳಿದಾಂಗೆ ಸಮುದ್ರಭಾಗ ಹೆಚ್ಚು!. ತಾನು ಕೊಟ್ಟು ತಾನೇ ತೆಕ್ಕೊಂಬದು – ಛೇ ಇದು ಒಳ್ಳೆ ಗುಣ ಅಲ್ಲ ! ಇತರರಿಂಗೆ ಒಂದು ಹನಿ ಕುಡಿಯಲೆ ಕೊಡದ್ದೆ!
  {ಧನಿಕಂಗೆ ದಾನ ಕೊಟ್ಟರೆ ಅವನ ಕೈಲ್ಲಿ ಒಳಿತ್ತು.}
  ಬರೀ ಒಳುಶುವವಕ್ಕೆ ಕೊಟ್ಟು ಎಂತ ಪ್ರಯೋಜನ? ಬಳಸುವವಕ್ಕೆ ಕೊಡೆಕಾದ್ದದು. ಧನಿಕರಲ್ಲಿ ಮೂರು ವಿಧ – ೧. ಕಟ್ಟಿ ಮಡುಗುವವು, ಇಲ್ಲದ್ರೆ ೨. ದುಂದುವೆಚ್ಚ ಮಾಡುವವು. ಮೂರನೆಯವು – ನಿಂಗ ಹೇಳಿದಾಂಗೆ
  {ಅವ ಸೇವಕರಿಂಗೆ ಕೂಲಿಯ ರೂಪಲ್ಲಿ ಕೊಡುತ್ತ. }
  ಹೀಂಗಿಪ್ಪ ಧನಿಕಂಗೆ ಗೊಂತಿದ್ದದಾ – ಧನಾಢ್ಯರಿಂಗೆ ದಾನ ಕೊಡ್ಳಾಗ ಹೇಳಿ, ಹಾಂಗಾಗಿ ಬಡ ಕೂಲಿಯವಕ್ಕೆ ಕೊಡುವದು!
  {ಉಂಡೋರ ಹೊಟ್ಟೆ ಬೇಗ ತುಂಬುತ್ತು.}
  ಸುಭಾಷಿತಲ್ಲಿ ಹೇಳಿದ ತೃಪ್ತರು – ಪೂರ್ತಿ ಹೊಟ್ಟೆ ತುಂಬಿದವೇ. ಅರ್ಧ ಹೊಟ್ಟೆ ತುಂಬಿದವು ತೃಪ್ತರಲ್ಲ!
  {ಹಗಲು ಹೊತ್ತಿಲ್ಲಿ ಮನೆಯೊಳದಿಕ್ಕೆ ದೀಪವೇ ಬೇಕಾವುತ್ತಲ್ಲದೋ?}
  ಬೇಕಾವುತ್ತು. ಪ್ರಕೃತಿದತ್ತವಾದ ಹಗಲಿನ ಬೆಳಕು ಮನೆಯೊಳ ಬಾರದ್ದ ಹಾಂಗೆ ಮನೆ ಕಟ್ಟಿರೆ! ಅರ್ಥಾತ್ ಹಗಲಿನ ಬೆಳಕು ಸಿಕ್ಕದ್ದಲ್ಲಿ ಹೇಳಿಯೇ ಆತಲ್ಲದ?

  [Reply]

  VN:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಧನ್ಯವಾದಂಗೊ. ಶುಭಾಷಿತಂಗೊ ಇನ್ನೂ ಇನ್ನೂ ಬತ್ತಾ ಇರಲಿ ಬೈಲಿಂಗೆ.
  ಕೆಲವು ದಿಕ್ಕೆ ಅಂತೇ ಏನಾರು ಪದಂಗಳ ಹೇಳಿ ಚೂರ್ಣಿಕೆ ಹೇದು ಆರ್ಬಾಯಿ ಕೊಡ್ತ ಬದಲು ಹೀಂಗಿಪ್ಪ ಸುಭಾಷಿತಂಗೊ ಕೇಳಿ ಬರಲಿ ಹೇಳ್ತ ಆಶಯ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ನಮ್ಮ ಪೂರ್ವಿಕರ ಜೀವನಾನುಭವದ ಭಾವಪೂರ್ಣ ನುಡಿಮುತ್ತುಗೊ ಹೀ೦ಗೆಯೇ ಸದಾ ಬರಳಿ ಮಹೇಶಾ.ಎರಡು ಸುಭಾಷಿತ೦ಗಳೂ ಅರ್ಥಪೂರ್ಣ.

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಗೋಪಾಲ್ ಬೊಳುಂಬು

  ಸರಳ ಸುಂದರ ಸುಭಾಷಿತಂಗೊ. ಎಷ್ಟೊಂದು ಅರ್ಥ. ಮಹೇಶಣ್ನಂಗೆ ಧನ್ಯವಾದಂಗೊ.
  ಎರಡ್ನೇ ಸುಭಾಷಿತವ ನೋಡುವಗ, ನಮ್ಮ ಮಂತ್ರಿಗಳ ನೆಂಪಾತು. ಅವರ ಒಟ್ಟಿಂಗೆ ಟಂಗೀಸು ಚೀಲ ಹಿಡುದು ಮಾರ್ಕೆಟ್ಟಿಲ್ಲಿ ತರಕಾರಿ ತೆಗೆತ್ತಾ ಇಪ್ಪ ನಿವೃತ್ತ ಹಿರಿಯ ಅಧಿಕಾರಿಗಳ ನೆಂಪಾತು.

  [Reply]

  VA:F [1.9.22_1171]
  Rating: 0 (from 0 votes)
 5. ಸುಬ್ಬಣ್ಣ ಭಟ್ಟ, ಬಾಳಿಕೆ

  ನಮ್ಮ ಭೂಮಿ ಸಮುದ್ರವ ಆವರುಸಿಗೊಂಡಿದ್ದರೂ ಮೇಲಂದ ಬೀಳುವ ನೀರೇ ಬುವಿಗೆ ಬೇಕು.ಬಪ್ಪ ದಾರಿಲ್ಲಿ ಬಂದರೆ ಸರಿಯಿಕ್ಕು. ಹಾಂಗೆ ಬಿದ್ದ ಮಳೆಯನ್ನೂ ಆಣೆಕಟ್ಟಿನ ಮೂಲಕ ರಕ್ಷಿಸಿ ಭೂಮಿಗೆ ಕೊಡುತ್ತು. ಸಮುದ್ರದ ನೀರು ಭೂಮಿಗೂ ಬೇಡ ನಮಗೂ ಬೇಡ!.ವರ್ಷವೂ ಒಂದು ಪ್ರಮಾಣಲ್ಲಿ ಬಂದೊಂಡಿರೆಕ್ಕಲ್ಲದೋ?

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಮಹೇಶಣ್ಣ,
  ಬಾರೀ ಅರ್ಥವತ್ತಾದ ಸುಭಾಷಿತ. ಇ೦ಥ ಸುಭಾಷಿತ ನಮ್ಮ ಬೈಲಿಲ್ಲಿ ಇನ್ನೂದೆ ಬರಲಿ. ಇದರ ಓದಿಯಪ್ಪಗ ಒ೦ದು ಕನ್ನಡ ಪದ್ಯ ಭಾಗ ನೆ೦ಪಾತು.ಅದರ ಅರ್ಥ ಮಾ೦ತ್ರ ಬೇರೆ. ಆ ಕ೦ದ ಪದ್ಯ ಹೀ೦ಗಿದ್ದಿದಾಃ-
  “ ಜಲನಿಧಿ ಜಲಮ೦ ಜಲಭೃ
  ತ್ಕುಲಕ್ಕೆ ನಲಿದಿತ್ತು ದತ್ತ ಮಿತ್ತ ನದೀನಿ ।
  ರ್ಮಲಸಲಿಲ೦ ದೊರೆದುದು ಗಡ
  ನೆಲದೊಳ್ ಕೊಟ್ಟ೦ಗೆ ಬಡತನ೦ ಬ೦ದಪುದೇ ॥ ”
  [ ಸಮುದ್ರ ಮೋಡಕ್ಕೆ ನೀರಿನ ಸ೦ತೋಷಲ್ಲಿ ಕೊಟ್ತತ್ತು. ಇತ್ಲಾಗಿ೦ದ ನಿರ್ಮಲವಾದ ನದಿಯ ನೀರು ಹರುದು ಬ೦ದು ಸೇರಿತ್ತು.ಹಾ೦ಗೆ ಭೂಮಿಲಿ ದಾನ ಮಾಡುವವ೦ಗೆ ಬಡತನ ಬಕ್ಕೋ?ಬಾರ ಹೇಳ್ವದು ಇಲ್ಲಿಯ ಅಭಿಪ್ರಾಯ.]ನಿ೦ಗಳ ಈ ಸತ್ಕಾರ್ಯ ನಿರ೦ತರ ಮು೦ದುವರಿಯಲಿ. ಧನ್ಯವಾದ೦ಗೊ.

  [Reply]

  VN:F [1.9.22_1171]
  Rating: 0 (from 0 votes)

  ಭಾಗ್ಯಲಕ್ಶ್ಮಿ Reply:

  ”ಸಮುದ್ರದ ನೀರು ನವಗೂ ಬೇಡ ಭೂಮಿಗೂ ಬೇಡ ” ಇದು ಹೇನ್ಗಪ್ಪದು? ನವಗೆ ಉಪ್ಪಿಲ್ಲದ್ದರೆ ಆವುತ್ತೊ? ಉಪ್ಪು ಆವಿಯಾದ ಸಮುದ್ರದ ನೀರೇ ಅಲ್ಲದಾ ಮಾವ? ನಾವು ಪ್ರಕ್ರುತಿಯ ಒನ್ದಲ್ಲ ಒನ್ದು ರೀತಿಲಿ ಅವಲಮ್ಬಿಸಿಗೊನ್ದಿರೆಕಾವುತು ಹೇಳಿ ಎನಗೆ ಅನ್ನುಸುದು.ನಮ್ಮ ದೇಹ ಪ್ರಕ್ರುತಿಲಿದೆ ಉಪ್ಪಿನ೦ಶ ಬೇಕೆ ಬೇಕಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಸುಭಾಷಿತ ಲಾಯಿಕಿದ್ದು.ಇನ್ನೂದೆ ಬರಲಿ.ಸಾಹಿತ್ಯ ಆಗಲಿ,ಸುಭಾಷಿತ ಆಗಲಿ-ಅದಕ್ಕೆ ಒಂದು ನಿರ್ದಿಷ್ಟ ಚೌಕಟ್ಟು ಇದ್ದು.ಅದರಲ್ಲಿ ಎಲ್ಲಾ ವಿಷಯವನ್ನೂ[ಅಪವಾದಂಗಳ ಸಹಿತ]ಹೇಳಲೆಡಿಯ.ಅದಕ್ಕೆ ನಾವು ಅರ್ಥ ಹೊಂದಿಸಿಕೊಳೆಕ್ಕು.ಮೇಲಿನ ವಾದವಿವಾದ ನೋಡುವಾಗ ಹಾಂಗೆ ಅನಿಸಿತ್ತು.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  {ಅದಕ್ಕೆ ಒಂದು ನಿರ್ದಿಷ್ಟ ಚೌಕಟ್ಟು ಇದ್ದು}
  ಅಪ್ಪು.
  ಹೋಲಿಕೆ, ಉಪಮಾನ, ದೃಷ್ಟಾಂತ/ಉದಾಹರಣೆ ಎಲ್ಲದಕ್ಕುದೆ ಒಂದು ಚೌಕಟ್ಟು ಇದ್ದು. ಒಂದು ಒಂದು ವಿಷಯವ ಮನಸ್ಸಿಂಗೆ ಮುಟ್ಟುವ ಹಾಂಗೆ ಹೇಳ್ಳೆ ಮಾಂತ್ರ ದೃಷ್ಟಾಂತದ ಬಳಕೆ.
  “ಮೋರೆ ಚಂದ್ರನ ಹಾಂಗಿದ್ದು” ಹೇಳಿ ಮೋರೆಯ ಚಂದ್ರಂಗೆ ಹೋಲಿಸಿರೆ ಆಹ್ಲಾದಕತೆಯ ವರ್ಣಿಸುವದು ಹೇಳಿ ತಿಳ್ಕೊಳ್ಳೆಕು. ಅದರ ಬಿಟ್ಟು “ಚಂದ್ರನ ಮೋರೆಲ್ಲಿ ಕಲೆ ಇಲ್ಲೆಯೋ? ಚೆಂದದ ಮೋರೆಯ ಚಂದ್ರಂಗೆ ಹೋಲುಸುವದು ಹೇಂಗೆ?” ಹೇಳಿ ಕೇಳುವ ಕ್ರಮ ಇಲ್ಲೆ!!

  ಇಲ್ಲಿ ಸಮುದ್ರವ `ಉಪಯೋಗಕ್ಕಿಲ್ಲದ್ದ/ಜಿಪುಣನ’ ಹಾಂಗೆ ಚಿತ್ರಿಸಿದ ಹಾಂಗೆ ಕಾಣ್ತು.
  ಇನ್ನೊಂದು ಉದಾಹರಣೆಲ್ಲಿ ನವಗೆ ಸಮುದ್ರವ ಹೊಗಳಿ ಬರವದು ಕಾಣುಗು.
  ರಾಮಾಯಣಲ್ಲಿ ರಾಮನ ಗಾಂಭೀರ್ಯವ ವರ್ಣಿಸಲೆ `ಸಮುದ್ರದ ಹಾಂಗೆ’ ಹೇಳಿ ಹೇಳಿದ್ದು! (`ಸಮುದ್ರ ಇವ ಗಾಂಭೀರ್ಯೇ’ ಹೇಳಿ)
  ಒಂದು ಸುಭಾಷಿತಲ್ಲಿ `ಪೈಸೆಯೇ ಎಲ್ಲ ಅನರ್ಥಕ್ಕೆ ಕಾರಣ’ ಹೇಳುಗು. ಇನ್ನೊಂದರಲ್ಲಿ `ಸಂಪತ್ತು ಎಷ್ಟು ಮುಖ್ಯ’ ಹೇಳಿ ವಿವರುಸುಗು!
  ಆದರುದೆ –
  ಇಲ್ಲಿ ವಾದ-ಪ್ರತಿವಾದ ಎಲ್ಲ ವಿನೋದಕ್ಕಾಗಿ! ಇರಲಿ.
  ಮತ್ತೆ, ಇಂತಹ ಚರ್ಚೆಗ ಮಾತುಗಾರಿಕೆಲ್ಲಿ ಶಬ್ದಚಾತುರ್ಯ ಬೆಳಶಲೆ ಸಹಕಾರಿ ಆವ್ತು. ನಮ್ಮ ಕಲ್ಪನಾಶಕ್ತಿಯ, ಲೋಜಿಕ್/ರೀಸನಿಂಗ್ ಸಾಮರ್ಥ್ಯವ ಗಟ್ಟಿಮಾಡ್ಳೆ ಒಳ್ಳೆದು.

  [Reply]

  VN:F [1.9.22_1171]
  Rating: +3 (from 3 votes)
 7. ಸುಬ್ಬಣ್ಣ ಭಟ್ಟ, ಬಾಳಿಕೆ

  ಶ್ರೀಮುಖವಾಣಿ ಕೇಳುವೋರಿಂಗೆ ಕೇಳಿಗೊಂಡೇ ಇರೆಕ್ಕು ತೋರುತ್ತು.ಆದರೆ ಸಭೆಲ್ಲಿದ್ದೋರು ಎಲ್ಲೋರು ಕೇಳುತ್ತವು ಹೇಳಿ ಬಕ್ಕೋ? ಬೀಳುವ ಮಳೆ ವ್ಯರ್ಥ ಹೇಳಿ ಕಂಡರೂ ಮತ್ತೆ ಮಳೆ ರೂಪಲ್ಲಿ ಬತ್ತಲ್ಲದೋ?ಮಳೆಂದ ಇಳೆ. ಉಪ್ಪು ನೀರಿನ ಬಗ್ಗೆ ಹಕೇಳಿದರೆ ಇಳೆಂದ ಕರಗಿ ಹೋದ ಲವಣಾಂಶವೇ ಕಡಲ್ಲಿ ಸೇರಿಗೊಂಡು ಉಪ್ಪಿನ ನಿಧಿಯೂ ಆಯಿದು.ಎಶ್ಟು ಮಳೆ ಬಂದರೂ ನೀರು ಸಪ್ಪೆ ಆಗ. ತನ್ನಲ್ಲಿಪ್ಪ ಜೀವರಾಶಿಗೊಕ್ಕೆ ನವಗೆ ಕೊಟ್ಟು ಮುಗಿಯದ್ದ ನಿಧಿ ಸಮುದ್ರ.ತಿಮ್ಮಪ್ಪಂಗೆ ರೆಡ್ಡಿ ಕೊಟ್ಟ ದಾನ ಬೇಡದ್ದರೂ ಸುಮ್ಮನಿದ್ದ. ಎಲ್ಲವೂ ವಿಧ

  [Reply]

  ಗೋಪಾಲಣ್ಣ

  ಎಸ್.ಕೆ.ಗೋಪಾಲಕೃಷ್ಣ ಭಟ್ಟ Reply:

  [ವಾದ-ವಿವಾದ ವಿನೋದಕ್ಕಾಗಿ]-ಮಹೇಶಣ್ಣನ ಮಾತು ಇಷ್ಟ ಆತು.
  ವಿಷಯ ಬೆಳೆಸಿದ ಸುಬ್ಬಣ್ಣ ಮಾವಂದಾಗಿ ಹಲವು ವಿಷಯ ಚರ್ಚೆ ಆತು.ಇಬ್ಬರಿಂಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 8. ಗಣೇಶ ಪೆರ್ವ
  ಗಣೇಶ ಪೆರ್ವ

  ಮಹೇಶಣ್ಣಾ.. ಧನ್ಯವಾದ೦ಗೊ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಶಾಂತತ್ತೆಕೇಜಿಮಾವ°ಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ಪಟಿಕಲ್ಲಪ್ಪಚ್ಚಿವೇಣಿಯಕ್ಕ°ದೀಪಿಕಾಡೈಮಂಡು ಭಾವಪೆರ್ಲದಣ್ಣಅನು ಉಡುಪುಮೂಲೆಪುತ್ತೂರುಬಾವವಿಜಯತ್ತೆಗಣೇಶ ಮಾವ°ಬೋಸ ಬಾವಅಕ್ಷರ°ಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕನೆಗೆಗಾರ°ಶ್ಯಾಮಣ್ಣಕಳಾಯಿ ಗೀತತ್ತೆದೊಡ್ಡಮಾವ°ನೀರ್ಕಜೆ ಮಹೇಶಬೊಳುಂಬು ಮಾವ°ಚೆನ್ನಬೆಟ್ಟಣ್ಣvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ