ಅಪಾಯ

ಅಪಾಯ

ಇಲ್ಲ್ಯೊಂದು “ಸಿ ಆರ್ ಪಿ ಎಫ್ ದ್ವಾರಕಾ” ಶಾಲೆ ಹೇಳಿ ಇದ್ದು. ಇಲ್ಲಿ ಹೇಳಿರೆ ಎಲ್ಲಿ? ಡೆಲ್ಲಿಲ್ಲಿ.

ಇದು ಸಿ ಆರ್ ಪಿ ಎಫ್ ಸೈನಿಕರ ಮಕ್ಕಳ ಶಿಕ್ಷಣಕ್ಕೆ ಬೇಕಾಗಿ ಇಪ್ಪದು.

ವಿಶೇಷ ಹೇಳಿರೆ ಇಲ್ಲಿ ಎಲ್ಲಾ ಮಕ್ಕಳುದೆ ಐದರಿಂದ ಹನ್ನೆರಡನೇ ಕ್ಲಾಸಿನವರೆಗೂ ಸಂಸ್ಕೃತ   ಕಲಿತ್ತವು.  ಕಲುಶುವ ರೀತಿ ಅಷ್ಟು ಲಾಯ್ಕ ಇಲ್ಲದ್ರುದೆ ಮಕ್ಕೊ ಕಲಿತ್ತಾ ಇದ್ದವು – ಅವಕ್ಕೆ ಸಂಸ್ಕೃತದ ಬಗ್ಗೆ ರಜ ಮಾಹಿತಿ ಸಿಕ್ಕುತ್ತು ಹೇಳಿ ಸಮಾಧಾನ.

ಅದಾ, ಆ ಶಾಲೆಲ್ಲಿ ಇನ್ನಾಣ ವರ್ಷ ಹೊಸ ಭಾಷೆ ಕಲುಶುತ್ತ ವ್ಯವಸ್ಥೆ ಆವ್ತಡ. ಅದಕ್ಕಾಗಿ ಬೇಕಾದ ಸಿದ್ಧತೆಗ ನಡೆತ್ತಾ ಇದ್ದು. ಹೊಸ ಕ್ಲಾಸುರೂಮುಗೊ ತಯಾರಾವ್ತಾ ಇದ್ದು, ಆಧುನಿಕ ಉಪಕರಣಂಗ ಬತ್ತಡ.

ಯಾವ ಭಾಷೆಯ ಕಲುಶುವದು?

ಜರ್ಮನ್, ಫ್ರೆಂಚು.

ಒಳ್ಳೆದೇ, ಮಕ್ಕೊ ಹೊಸ ಹೊಸ ವಿಷಯ ಕಲ್ತರೆ ಒಳ್ಳೆದೇ! ಆದರೆ..

ಆ ಭಾಷೆ ಕಲಿಯೆಕಾರೆ ಎಂತ ಮಾಡೆಕು?

ಸಂಸ್ಕೃತ ಕಲಿವದರ ಬಿಡೆಕು!

ಅಪ್ಪು, ಬಪ್ಪ ವರ್ಷ ಸುರ್ವಪ್ಪಗಳೇ ಮಕ್ಕಳತ್ರೆ ಕೇಳುಗು – “ಮಕ್ಕಳೇ! ನಿಂಗೊಗೆ ಯಾವ ಭಾಷೆ ಕಲಿಯೆಕು ಹೇಳಿ ಇದ್ದು? ಈ ಮೂರರಲ್ಲಿ ಒಂದರ ಆಯ್ಕೆ ಮಾಡಿ – ಸಂಸ್ಕೃತ/ಜರ್ಮನ್/ಫ್ರೆಂಚ್ !”’

ಸಂಸ್ಕೃತವ ವಿದೇಶೀ ಭಾಷೆಯ ಕೆಟಗರಿಗೆ ಸೇರುಸಿದವನ್ನೇ!

ಮಕ್ಕೊ ಯಾವುದರ ಆಯ್ಕೆ ಮಾಡುಗು? ಮಕ್ಕಳ ಹೆತ್ತವರ ಉಪದೇಶ/ಒತ್ತಡ ಎಂತಾಗಿಕ್ಕು? ಯೋಚನೆ ಮಾಡಿ.

ಆತು, ಕೆಲವು ಮಕ್ಕೊ ಇಷ್ಟಪಟ್ಟು ಸಂಸ್ಕೃತ ತೆಕ್ಕೊಂಡರುದೆ –

 • ಸಂಸ್ಕೃತ ಕಲುಶಲೆ ಆಧುನಿಕ ಪದ್ಧತಿ/ಉಪಕರಣ ಇಲ್ಲೆ,
 • ಜರ್ಮನು/ಫ್ರೆಂಚು ಕಲುಶಲೆ ಆಕರ್ಷಕ ಪದ್ಧತಿಗೊ ಇದ್ದು.
 • ಸಂಸ್ಕೃತ ಕಲ್ತರುದೆ ಮಾತಾಡ್ಳೆ ಬತ್ತಿಲ್ಲೆ!
 • ಜರ್ಮನು/ಫ್ರೆಂಚು ಕ್ಲಾಸಿಲ್ಲಿ ಮಕ್ಕೊ ಅದೇ ಭಾಷೆಲ್ಲಿ ಮಾತಾಡ್ತವು.
 • ಸಂಸ್ಕೃತ ಕಲ್ತರೆ ಎಂತ ಲಾಭವೋ, ಉಮ್ಮಪ್ಪ!
 • ಜರ್ಮನು/ಫ್ರೆಂಚು ಕಲ್ತರೆ ಬೇರೆ ದೇಶಕ್ಕೆ ಹೋಪಲಕ್ಕು!

ಹೀಂಗೆ ಹೋಲುಸಿ ನೋಡಿ ಕೀಳರಿಮೆ ಬಕ್ಕು. ಚೆ! ಆನು ಸಂಸ್ಕೃತ ತೆಕ್ಕೊಂಬಲಾವುತ್ತಿತ್ತಿಲ್ಲೆ ಹೇಳಿ ಬೇಜಾರಲ್ಲಿ ಎಲ್ಲೊರತ್ರೆ ಹೇಳುಗು. ಅವರ ಅನುಭವ ಕೇಳಿ ಕೇಳಿ…  ಕ್ರಮೇಣ ಸಂಸ್ಕೃತ ವಿದ್ಯಾರ್ಥಿಗಳ ಸಂಖ್ಯೆ ಕಮ್ಮಿ ಆವ್ತ ಹೋಕು.

 

ಇದು ಒಂದು ಶಾಲೆಯ ಕಥೆ ಅಲ್ಲ!

ಇನ್ನಾಣ ವರ್ಷ ಎಲ್ಲ ಶಾಲೆಲ್ಲಿಯುದೆ ಈ ಸ್ಥಿತಿ ಬಪ್ಪಲಿದ್ದು. ಇನ್ನಿನ್ನು ಫ್ರೆಂಚು, ಜರ್ಮನು ಪಾಠಮಾಡುವ ನೂರಿನ್ನೂರು ಜೆನ ಶಿಕ್ಷಕರು ಬಕ್ಕು, ಚೈನೀಸ್, ಜಪಾನೀಸು ಭಾಷೆಗಳ ಪ್ರವೇಶವೂ ಅಪ್ಪಲಿದ್ದು. ಎಲ್ಲ ಮಾರ್ಕೆಟಿಲ್ಲಿ ಚೈನೀಸು ಮಾಲು ಸಿಕ್ಕುವಾಂಗೆ ಶಿಕ್ಷಣ ಕ್ಷೇತ್ರಲ್ಲಿಯೂ ನಾನ್ನೂರೈನೂರು ಚೈನಿಸು ಮಾಷ್ಟ್ರಕ್ಕೊ, ಜಪಾನೀಸು ಟೀಚರುಗೊ ಕಾಂಬಲೆ ಸಿಕ್ಕಲಿದ್ದು.

ಸರಕಾರದ ಭಾಷಾನೀತಿಯೇ ಹಾಂಗೆ ಬದಲಾಯಿದು, ಸಂಸ್ಕೃತ ಇದ್ದರೂ ಸಿಕ್ಕದ್ದ ಹಾಂಗೆ ಮಾಡ್ಳೆ ಉಪಾಯ ಆಯಿದು.

ಅಪಾಯ ಹತ್ತರೆ ಬಯಿಂದು.

ಶಾಲೆಲ್ಲಿ ಮಕ್ಕೊ ಕಲಿಯದ್ರೆ ಕೋಲೇಜಿಲ್ಲಿ ಸಂಸ್ಕೃತ ತೆಕ್ಕೋಳ್ತವಿಲ್ಲೆ.

ಕ್ರಮೇಣ ಸಂಸ್ಕೃತ ಕಲಿವವೇ ಸಿಕ್ಕವು. ಅರೆಬರೆ ಉಳುದ ಸಂಸ್ಕೃತ  ಗ್ರಂಥಂಗಳ, ಶಾಸ್ತ್ರಂಗಳ ಕಲಿವವು, ಕಲುಶುವವು ಇಲ್ಲದ್ದೆ ಎಲ್ಲವೂ ಲೋಪ ಆಗಿ ಹೋಪಲಿದ್ದು.

 

ಸಂಸ್ಕೃತ ಉಳಿಯೆಕಾರೆ

 • ಒಳ್ಳೆ ಶಿಕ್ಷಕರು ಬೇಕು,
 • ಆಕರ್ಷಕ ಪಾಠಪದ್ಧತಿ ಬೇಕು,
 • ಉತ್ತಮ ಪಾಠಸಾಮಗ್ರಿ ಬೇಕು.
 • ಸಂಸ್ಕೃತ ಮಾಧ್ಯಮಲ್ಲಿ ಪಾಠ ಮಾಡೆಕು,

 

ಹೀಂಗೆ ಆತು ಹೇಳಿ ಆದರೆ ಸಂಸ್ಕೃತದ ಕುರಿತಾಗಿ ಇಪ್ಪ ದೃಷ್ಟಿಕೋನವೇ ಬದಲಪ್ಪ ಹಾಂಗೆ ಮಾಡ್ಳೆ ಎಡಿಗು, ಸಂಸ್ಕೃತ ಕಲಿಯೆಕು ಹೇಳಿ ಅನುಸುಗು.

 

ಇನ್ನು ಯೋಚನೆ ಮಾಡ್ಯೊಂಡು ಕೂದರಾಗ ಹೇಳಿ ಸಂಸ್ಕೃತ ಸಂವರ್ಧನ ಪ್ರತಿಷ್ಠಾನ (Samskrit Promotion Foundation) ಕಾರ್ಯರಂಗಕ್ಕೆ ಇಳುದ್ದು.

ಸಂಸ್ಕೃತದ ಬಗ್ಗೆ ಇಪ್ಪ ಅವಜ್ಞೆಯ ದೂರಮಾಡ್ಳೆ ಕೆಲವು ರಣನೀತಿ ತಯಾರಾಯಿದು.

ಪ್ರತಿಷ್ಠಾನಕ್ಕೆ ಬೆಂಬಲವಾಗಿ ಜಸ್ಟೀಸ್ ಆರ್ ಸಿ ಲಾಹೋಟಿ, ಎನ್. ಗೋಪಾಲಸ್ವಾಮಿ (ಮಾಜಿ ಚೀಫ್ ಇಲೆಕ್ಷನ್ ಕಮಿಶನರ್),  ಜಸ್ಟೀಸ್ ರಾಮ ಜೋಯಿಸರು, ದಾಲ್ಮಿಯಾ ಗ್ರೂಪ್….ಇನ್ನೂ ಸುಮಾರು ದೊಡ್ಡ ಜೆನಂಗ ಇದ್ದವು.

ಹೊಸ ಪ್ರಯೋಗ ಡೆಲ್ಲಿಯ ನಾಲ್ಕು ಪ್ರತಿಷ್ಠಿತ ವಿದ್ಯಾಲಯಂಗಳಲ್ಲಿ ನೆಡೆತ್ತಾ ಇದ್ದು. ಆ ಶಾಲೆಗಳಲ್ಲಿ ‘ಪ್ರತಿಷ್ಠಾನ’ದ ಪ್ರಯತ್ನಂದ ಸಂಸ್ಕೃತದ ಬಗ್ಗೆ ವಿಶೇಷ ಆಸಕ್ತಿ ಶುರುವಾಯಿದು.

ಒಂದು ‘ಇಂಟರ್ನೇಶನಲ್’ ಸ್ಕೂಲಿಲ್ಲಿ ಮಹತ್ತರ ಬದಲಾವಣೆ ಆಯಿದು, ಅಭೂತಪೂರ್ವ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು (ಊಹಿಸಲೂ ಎಡಿಯದ್ದ ಹಾಂಗೆ), ಅದರ ಬಗ್ಗೆ ವಿವರವಾಗಿ ಮತ್ತೆ ಹೇಳ್ತೆ.

ಈ ಪ್ರಯೋಗ ಇನ್ನು ಬೇರೆ ರಾಜ್ಯಂಗಕ್ಕುದೆ ವಿಸ್ತಾರ ಅಪ್ಪಲಿದ್ದು, ಕೋರ್ಪೋರೇಟ್ ಸೆಕ್ಟರಿಂಗುದೆ ವಿಸ್ತರಿಸಲಿದ್ದು. ಇನ್ನೊಂದು ವರ್ಷದೊಳ ಹೊಸ ಹೊಸ ರೀತಿಲ್ಲಿ ಸಂಸ್ಕೃತದ ರಸದೌತಣ ರೆಡಿ ಆವ್ತು.

ಅಯಾಯ ಕ್ಷೇತ್ರಲ್ಲಿಪ್ಪ ಜನಂಗಕ್ಕೆ ಬೇಕಾದ ಹಾಂಗೆ ಸಂಸ್ಕೃತವ ಆಸ್ವಾದಿಸಲೆ ಅವಕಾಶಂಗ ಬಪ್ಪಲಿದ್ದು.

ಉದಾ –

 • Samskrit for Management
 • Samskrit  for Cosmetics
 • Samskrit  for Cultural  tourism
 • Samskrit  for Psychology
 • Samskrit  for  Science
 • Samskrit for Environment
 • Samskrit for Agriculture

ಇತ್ಯಾದಿ ಇತ್ಯಾದಿ ….

ಇದೆಲ್ಲ ಯೋಜನೆ ಇದ್ದು, ಇದೆಲ್ಲ ಆದರೆ ಸಂಸ್ಕೃತದ ಬಗ್ಗೆ ಇಪ್ಪ ಮಾನಸಿಕತೆಯೇ ಬದಲಕ್ಕು.

ಆದರೆ ಇದಕ್ಕೆ ಶಿಕ್ಷಕರು ಬೇಕನ್ನೆ!  ಡಿಮಾಂಡ್ ಬೇಕಾದಷ್ಟು ಇದ್ದು, ಪೂರೈಕೆಯೇ ಇಲ್ಲೆ.

ಹೀಂಗೆ ಸಮರ್ಥ ಅಭ್ಯರ್ಥಿಗಳ ಹುಡುಕಿಯೊಂಡಿಪ್ಪಗ ನಮ್ಮ “ಮುಜುಂಗಾವಿನ ಭಾರತೀ ಸಂಸ್ಕೃತ ಮಹಾವಿದ್ಯಾಲಯ” ದ ಪ್ರಸ್ತಾಪ ಬಂತು. ಅಲ್ಯಾಣ ವಿದ್ಯಾರ್ಥಿಗೊಕ್ಕೆ ಪ್ರಶಿಕ್ಷಣ ಕೊಡೆಕು, ಅವರಿಂದ ಸಮಾಜಕ್ಕೆ ಕೊಡುಗೆ ಕೊಡುಸೆಕು ಹೇಳಿ ಎಲ್ಲ ಪ್ಲೇನು ಹಾಕಿಯೊಂಡು, ಅಲ್ಲಿ ಸಂಪರ್ಕ ಮಾಡಿರೆ……

ಒಂದು ಆಘಾತಕಾರಿ, ಕಳವಳಕಾರಿ ಅಂಶ ಗೊಂತಾತು,

 ಭಾರತೀ ಸಂಸ್ಕೃತ ಕಾಲೇಜಿನ ಮುಂದುವರಿಕೆ ಇಲ್ಲೆಡ, ಅದರ ಬಾಗಿಲು ಮುಚ್ಚುತ್ತವಡ !🙁 🙁

 

ಒಂದು ಕಾಲಲ್ಲಿ

 • ಗಗನಭಾರತೀ (ಪ್ಲಾನಟೋರಿಯಮ್)
 • ಜ್ಞಾನದಾಯಿನೀ ಸಭಾ (ಶಾಲೆ ಮಕ್ಕಗೆ ಭಾರತೀಯ ಸಂಸ್ಕೃತಿಯ ತಿಳುವಳಿಕೆ ಕೊಡುವ ಯೋಜನೆ)
 • ತ್ರೈಮಾಸಿಕ ಜ್ಯೌತಿಷ ಪತ್ರಿಕೆ
 • ಸಾರ್ವಜನಿಕರಿಂಗೆ ಪಂಚಾಂಗ, ಜ್ಯೌತಿಷ ಪರಿಚಯ

ಇತ್ಯಾದಿ ಜನಪ್ರಿಯ ಕಾರ್ಯಕ್ರಮಂಗಳ ಕೊಟ್ಟ ವಿದ್ಯಾಲಯ ಇದು!

ಇತರ ರಾಜ್ಯಲ್ಲಿಪ್ಪ ಸಂಸ್ಕೃತ ವಿದ್ಯಾರ್ಥಿಗಕ್ಕೆ ಹೋಲುಸಿರೆ ಇಲ್ಲಿಯ ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು.

ಈ ವಿದ್ಯಾಲಯ ರಜ್ಜ ಕಷ್ಟಲ್ಲಿ ನೆಡಕ್ಕೊಂಡು ಇದ್ದಿದ್ದ ಸಂಗತಿ ಗೊಂತಿತ್ತು. ಆದರೆ ಅದಕ್ಕೆ ಮದ್ದು ಮಾಡುವದು ಬಿಟ್ಟು,

 •  ಇದ್ದ ಓಕ್ಸಿಜನ್ ಮಾಸ್ಕನ್ನೇ ತೆಗವ ನಿರ್ಣಯ ಆರು/ಎಂತಕೆ ತೆಕ್ಕೊಂಡವೊ?
 • ಆ ನಿರ್ಣಯ ತೆಕ್ಕೊಂಬಲೆ ಕಾರಣ ಎಂತದೊ? ಹಿತೈಷಿಗಳತ್ರೆ ಸಮಾಲೋಚನೆ ಮಾಡಿದ್ದವೊ?
 • ಕಾರಣ ಇದ್ದರೆ ಅದರ ಪರಿಹಾರಕ್ಕೆ ಪ್ರಯತ್ನ ಪಟ್ಟಿದವೊ? ಪ್ರಯತ್ನಲ್ಲಿ ವಿಫಲ ಆದರೆ ಅದರ ಕಾರಣ ಎಂತದು ಹೇಳಿ ಗೊಂತಾಯಿದೊ?
 • ಅಥವಾ ಮದ್ದು ಮಾಡ್ಳೆಡಿಯದ್ದೆ ದಯಾಮರಣ ಕೊಡುವ ಆಲೋಚನೆಯೋ?
 • ಸಂಸ್ಕೃತ ಬೇಕು ಹೇಳ್ಯೊಂಡು ಬಪ್ಪ ವಿದ್ಯಾರ್ಥಿಗ ಇದ್ದವು (ಸಂಖ್ಯೆ ಕಮ್ಮಿ ಇದ್ದರುದೆ).  ಅವರ ನಿರಾಶೆಗೊಳಿಸುವ (ಡಿಸ್ಕರೇಜ್) ಹಾಂಗೆ ಮಾಡ್ಳಕ್ಕೊ?

ಈಗಳುದೆ ಕಾಲೇಜಿನ ಅಭಿವೃದ್ಧಿಗಾಗಿ  ಶ್ರಮಿಸುವ ನಾಗರಿಕರು ಅಲ್ಲಿದ್ದವು. ಆದರುದೆ ಅಲ್ಲಿ ಏನೋ ಕೊರತೆಂದಾಗಿ ಅವರ ಶ್ರಮ ಸಾರ್ಥಕ ಆವ್ತಾ ಇಲ್ಲೆ.

ಈಗ ಈ ಸಂಸ್ಥೆಯ ಸ್ಥಾಪಿಸಲೆ, ಬೆಳವಲೆ ತನು ಮನ ಧನಂದ ಸಹಕರಿಸಿದವಕ್ಕೆ ಎಂತ ಹೇಳುವದೋ ಹೇಳಿ ಚಿಂತೆ ಆಯಿದು.

ಆ ಕಾಲೇಜು ಅಲ್ಲಿದ್ದರೆ

 • ನಮ್ಮ ಹಳ್ಳಿಲ್ಲಿ, ಕಾಸರಗೋಡಿಲ್ಲಿ, ದಕ್ಷಿಣಕನ್ನಡಲ್ಲಿ ಬದುಕುವ ಹಿಂದುಗಕ್ಕೆ ಪ್ರೇರಣೆ ಕೊಡುವ ಒಂದು ಸಂಸ್ಥೆ ಇದ್ದ ಹಾಂಗೆ.
 • ದೇಶದ ಪ್ರತಿಷ್ಠಿತ ವಿದ್ವಾಂಸರು ಬಪ್ಪಲೆ ಒಂದು ಅವಕಾಶ. ಸಾರ್ವಜನಿಕರಿಂಗೂ ಇದರಿಂದ ಲಾಭ ಇದ್ದು. (ತಿರುಪತಿಂದ, ಮುಂಬಯಿಂದ, ಚೆನ್ನೈಂದ, ಡೆಲ್ಲಿಂದ ಶ್ರೇಷ್ಠ ವ್ಯಕ್ತಿಗ ಬಂದ ಉದಾಹರಣೆಗ ಇದ್ದು)
 • ದೇವಾಲಯ, ಸರೋವರ ಇಪ್ಪ ವಿಶಾಲ ಪ್ರಶಾಂತ ಪರಿಸರಕ್ಕೆ ಒಂದು ಪರಿಪೂರ್ಣತೆ.
 • ಹವ್ಯಕರಲ್ಲಿ ವಿದ್ಯಾವೈವಿಧ್ಯತೆ ತಪ್ಪಲೆ ಒಂದು ಅವಕಾಶಸ್ಥಾನ.
 • ನಮ್ಮ ಸ್ಥಾನೀಯ ಕಲೆಗಳ ಸಂಸ್ಕೃತಲ್ಲಿ ಪ್ರಸ್ತುತಪಡಿಸಿರೆ ರಾಷ್ಟ್ರೀಯ ಮಟ್ಟಲ್ಲಿ ಅದರ ಸ್ವೀಕಾರ, ಪ್ರಶಂಸೆ ಅಕ್ಕು. ಉದಾ – ಸಂಸ್ಕೃತ ಯಕ್ಷಗಾನ
 • ಸಂಸ್ಕೃತಕ್ಕೆ ಅದೊಂದು ಶಕ್ತಿಕೇಂದ್ರವಾಗಿದ್ದರೆ, ವೈದಿಕರಿಂಗೆ, ಧರ್ಮಾಭಿಮಾನಿ ಜನತೆಗೆ, ಮನೆಗಕ್ಕೆ ಅನುಕೂಲ.

ಹೀಂಗಿಪ್ಪಗ  ಸಮಾಜೋಪಯೋಗಿ ಸಂಸ್ಥೆಯ ರಕ್ಷಣೆಲ್ಲಿ ನಮ್ಮ ದಾಯಿತ್ವ ಇಲ್ಲೆಯಾ?

ಇದಾ, ನಾವೆಲ್ಲ ಪ್ರಯತ್ನ ಮಾಡಿರೆ ಈ ನಿರಾಶಾದಾಯಕ ನಿರ್ಣಯವ ಬದಲುಸಲೆಡಿಗು.

ವಿದ್ಯಾಲಯ ಉಳಿಯೆಕು, ಬೆಳೆಕು ಹೇಳುವ ಧ್ವನಿ ರಜ್ಜ ಬಲವಾಗಿ ಕೇಳೆಕು. ಸಮಾಜ ಪ್ರತಿಸ್ಪಂದಿಸುತ್ತು ಹೇಳುವದು ವೇದ್ಯವಾಗಲಿ.

ಸಕಾರಾತ್ಮಕ ನಿರ್ಣಯ ತೆಕ್ಕೊಂಬವಲೆಡಿವವಕ್ಕೆ ನಮ್ಮ ಕಾಳಜಿಯ ತಲಪಿಸೆಕು.

ಸಂಬಂಧಪಟ್ಟವರತ್ರೆ ಮಾತಾಡಿ, ಸಮಸ್ಯೆ ಎಂತ ಹೇಳಿ ತಿಳ್ಕೊಳ್ಳಿ.,

ಅವರದ್ದು  ಅರಣ್ಯರೋದನ ಆಗದ್ದೆ  ನಗರಲ್ಲಿಯೂ ರಜ್ಜ ಪ್ರತಿಧ್ವನಿಸಲಿ.

ಅಲ್ಲಿ ಈ ವಿದ್ಯಾಲಯವ ಉಳುಶೆಕು ಹೇಳುವ ಯುವ ಅಧ್ಯಾಪಕರ  ಆವಶ್ಯಕತೆ ಇದ್ದು,  ಸಂಪೂರ್ಣ ದಕ್ಷತೆಂದ, ಪೂರ್ಣ ಸಮರ್ಪಣೆಂದ ಕಾರ್ಯಸಾಧಿಸುವವರ ನಿಯುಕ್ತಿ ಆಯೆಕು.

ಅವಕ್ಕೆ ಬೆಂಬಲ ಕೊಡೆಕು. ನೈತಿಕ ಪ್ರೇರಣೆ ಕೊಡೆಕು, ಹೊಸ ಉತ್ಸಾಹವ ತುಂಬುಸುವ ಕಾರ್ಯಕ್ರಮಂಗ / ಪ್ರಾಜೆಕ್ಟುಗೊ ಆಯೆಕು.

ಎಡಿಗೋ?

~


ಈ ಮಹಾವಿದ್ಯಾಲಯ ಮುಚ್ಚಿರೆ ಅದು ಹವ್ಯಕ ಸಮಾಜದ ಆರಂಭಶೂರತ್ವಕ್ಕೆ ಉದಾಹರಣೆ ಆಗಿ ಹೋಗದಾ? ಹಾಂಗೆ ಅಪ್ಪದು ಬೇಡ ಅಲ್ಲದಾ?

ವಿಷಾದಯೋಗ ಮುಗಿಯಲಿ। ಜ್ಞಾನಯೋಗವೂ, ಕರ್ಮಯೋಗವೂ ಸುರುವಾಗಲಿ।

ಡಾಮಹೇಶಣ್ಣ

   

You may also like...

9 Responses

 1. ಚೆನ್ನೈ ಭಾವ° says:

  ಲಾಯಕ ಅಧ್ಯಯನಾತ್ಮಕ ಶುದ್ದಿ ಮಹೇಶಣ್ಣಂದು. ಆಘಾತಕಾರಿ ಶುದ್ದಿ. ಅದು ಇಲ್ಲಿ ತಮಿಳುನಾಡಿಲ್ಲಿ ಮಾಂತ್ರವೋ ಹೇಳಿ ಗ್ರೇಶಿತ್ತಿದ್ದೆ. ಇಲ್ಲಿಯೂ ಹಾಂಗೆ ಮಾಡುತ್ತವಡ ಬಪ್ಪ ವರುಷಂದ. ನಮ್ಮವೇ ಸಂಸ್ಕೃತಿಯ ಬೆಳಶುಲೆ ಉಳುಶಲೆ ಪ್ರಯತ್ನಿಸದ್ದೆ ಇಪ್ಪದು ನಿಜಕ್ಕೂ ದುರದೃಷ್ಟ. ಇಲ್ಯೊಬ್ಬ ಮಾಣಿಯತ್ರೆ ಸಂಸ್ಕೃತ ಕಲಿ ಹೇಳಿರೆ ನಾಕು ಮೈಲು ದೂರಕ್ಕೆ ಓಡುತ್ತ. ಇದು ಅವನ ತಪ್ಪೋ, ಮನೆಯವರ ತಪ್ಪೋ. ಆ ಮಾಣಿಗೆ ಕ್ರಿಕೆಟ್ ಬೇಕು, ಕಾರ್ಟೂನ್ ಬೇಕು, ಫೇಸ್ಬುಕ್ ಬೇಕು. ಮನೆಯವರ ಅಕ್ಷೇಪವೂ ಇಲ್ಲೆ ಅದಕ್ಕೆ. ಸಂಸ್ಕೃತಕ್ಕಪ್ಪಗ ಮಾಣಿಗೆ ಇಂಟರೆಸ್ಟು ಇಲ್ಲೆ ಹೇಳುತ್ತದು ಎಷ್ಟು ಸರಿ!.

  ಸಂಸ್ಕೃತ – ಸಂಸ್ಕೃತಿ ಉಳಿಯೆಕು. ನಮ್ಮವು ನಿಜವಾಗಿ ಎಚ್ಚೆತ್ತುಕೊಳ್ಳೆಕು ಹೇಳಿ ಆಶಯ.

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಹೇ ರಾಮ!

 3. jayashree.neeramoole says:

  ಹರೇ ರಾಮ,

  ಮಹೇಶಣ್ಣನ ಜೊತೆ ಎಂಗಳ ಸಂಪೂರ್ಣ ಬೆಂಬಲ ಇದ್ದು…

  “ಯುದ್ದ ಆರಂಭ ಆದ ಮೇಲೆ ಭಟ್ರು ಸಾಕಾವುತ್ತಿಲ್ಲೇ… ರಾಮ ಭಟರು ಬೇಕು…”.

  ಜೈ ಶ್ರೀ ರಾಮ್

 4. ಗೋಪಾಲ ಬೊಳುಂಬು says:

  ನಿಜವಾಗಿಯೂ ಬೇಜಾರು ತಪ್ಪಂತಹ ವಿಷಯವ ಮಹೇಶ ತಿಳುಸಿ ಕೊಟ್ಟಿದ. ಸಂಸ್ಕೃತ ಸಂವರ್ಧನ ಪ್ರತಿಷ್ಠಾನ (ರಣ) ರಂಗಕ್ಕೆ ಇಳುದ್ದದು ಸಂತೋಷದ ವಿಷಯ. ಇದಕ್ಕ್ಸೆ ಒಳ್ಳೆ ಬೆಂಬಲ ಸಿಕ್ಕಿದ್ದು ಕೇಳಿ ಕೊಶಿಆತು. ಎಲ್ಲೋರೂ ಈ ಸಮೆಲಿ ಚಿಂತನೆ ನೆಡೆಶೆಕು, ಅಪಾಯವ ಅರ್ಥ ಮಾಡೆಳೆಕು. ನಮೆಲ್ಲರ ಸಹಕಾರ ಈ ವಿಷಯಲ್ಲಿ ಖಂಡಿತಾ ಇದ್ದು.

 5. ರಾಜನಾರಾಯಣ ಹಾಲುಮಜಲು says:

  ಮಹೇಶ ಭಾವ,
  ಒಳ್ಳೆ ಮಾಹಿತಿ . ನಮ್ಮ ಬೈಲಿಂದಲೇ ಇದರ ಒಳಿಶುವ ಬಗ್ಗೆ ಪ್ರಯತ್ನ ಸುರುವಾಗಲಿ. ಮುಚುಲೇ ಕಾರಣ ಎಂತದು- ಪರಿಹಾರ ಹೆಂಗೆ ಹೇಳಿ ವಿಮರ್ಶೆ ಆಗಲಿ. ನಾವುದೇ ನಮ್ಮಂದ ಆದ ರೀತಿಲಿ ಪ್ರಯತ್ನ ಪಡುವ.

 6. ಬೆಟ್ಟುಕಜೆ ಮಾಣಿ says:

  ಮಹೇಶಣ್ಣಾ ಹೇಳಿದ ವಿಚಾರ ಸತ್ಯ..ಅದೇ ಭಾರತೀ ವಿದ್ಯಾಪೀಠಲ್ಲಿ ಕಲ್ತಿದೆ ಆನು..ಒಂದು ಕಾಲಲ್ಲಿ ಆನು ಇಪ್ಪಗ ಬಹಳ ಸಾಧನೆಗ ಆಯ್ದು..ಆದರೆ ಕಾರಣಾಂತರಂದ ಅದು ಈಗ ಇಲ್ಲೆ..ಅದು ಬೇಜಾರದ ಸಂಗತಿ..

 7. Suvarnini Rao Konale says:

  ದೇಶದ ಮುಂದೆ ಇಪ್ಪ ಹಲವು ಸಮಸ್ಯೆಗಳಲ್ಲಿ ಒಂದು ಇದು. ಮುಖ್ಯವಾ ದ್ದು ಕೂಡ ಅಪ್ಪು.
  ಬೇರೆಯವ್ವು ಮಾಡೆಕು ಹೇಳಿ ಕಾದರಾಗ. ಸರಕಾರ ಅಥವಾ ಸಂಸ್ಥೆಗೊ ಈಈ ಭಾಷೆಯ ಎಲ್ಲ ರಂಗಂಗಳಲ್ಲಿಯೂ ಅಳವಡಿಸುಲೆ ಅಪ್ಪ ಹಾಂಗೆ ಮಾಡ್ಲೆ ನಮ್ಮ ಪ್ರಯತ್ನ ಬೇಕೇಬೇಕು…

  • ಬೆಟ್ಟುಕಜೆ ಮಾಣಿ says:

   ಅಕ್ಕ ನಿಂಗಲ ವಿಚಾರಕ್ಕೆ ಎನ್ನ ಒಂದು ಒಪ್ಪ..ಈ ಕೆಲಸ ಆಗದ್ದೆ ಕಲ್ತವುದೆ ಬೇರೆ ಉದ್ಯೊಗ ಮಾಡ್ತ ಇದ್ದವು ಆದ ಕಾರಣ ಕಲಿವವರ ಸಂಖ್ಯೆ ಕಡಿಮೆ ಆಯ್ದು ಅಲ್ಲದ್ದೆ ಉದ್ಯೋಗ ಭರವಸೆ ಕಡಿಮೆ..

 8. SHARMA KMS says:

  Samskrutha shale muchchuva vishaya keli thumba bejaravuthu. Muchchadda hange aadare olledu. Enna kailada sahaya aanu kodule thayaaru. AAnu obba retired Statistics professor. EEga aanu Mangalurili eppadu. Illi Bharathi collegeli Shanivara AAdithyavara Veda Samskrutha class nadeshuthavu. AAnu aa clasinge hovuththe. Enage eega Samskrutha kaliyadde eddadakke thumba bejara aavuthu. Nijavagiu ashtondu samruddha bhashe berondu ille.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *