ಕಲ್ಯಾಣಿ ಗೀರ್ವಾಣಿ ವೀಣಾಪಾಣಿ

ಬೈಲಿನ ಎಲ್ಲೋರಿಂಗೂ ಶರನ್ನವರಾತ್ರಿಯ ಪುಣ್ಯಪರ್ವದ ಶುಭಾಶಯಂಗೊ.
ನವರಾತ್ರಿ ಹೇಳಿದರೆ ಅಬ್ಬೆಯ ಪೂರ್ಣ ಆಶೀರ್ವಾದ, ಅಮ್ಮನ ಪ್ರೀತಿ ನಮ್ಮ ಮೇಲೆ ಹಗಲಿರುಳು ಸುರಿವ ಪುಣ್ಯಕಾಲ.
ಈ ಕಾಲಲ್ಲಿ ಬೈಲಿನ ಎಲ್ಲೊರ ಮೇಲೆ ಅಬ್ಬೆಯ ಕೃಪಾದೃಷ್ಟಿ ಸದಾ ಇರಲಿ ಹೇಳಿ ಹಾರಯಿಕೆ.

ಬೈಲಿಲಿ ನವರಾತ್ರಿಯ ನವ ದಿನಂಗಳ ಸ್ತೋತ್ರ ರೂಪಲ್ಲಿ ಆಚರಣೆ ಮಾಡುದು ಕ್ರಮ.
ದೀಪಿ ಅಕ್ಕನೂ, ಉಡುಪುಮೂಲೆ ಅಪ್ಪಚ್ಚಿಯೂ, ಬೆಟ್ಟುಕಜೆ ಮಾಣಿಯೂ ಸೇರಿ – ಜಗಜ್ಜನನಿಯ ರೂಪಂಗಳ ಬೈಲಿಂಗೆ ತತ್ತಾ  ಇದ್ದವು.
ಇಂದು ನವರಾತ್ರಿಯ ಸುರುವಾಣ ದಿನ.
ಈ “ವೀಣಾಪಾಣಿ” ಕೃತಿಯ ದೀಪಿಅಕ್ಕ° ಸುಶ್ರಾವ್ಯವಾಗಿ ಬೈಲಿಂಗೆ ಕೊಡ್ತಾ ಇದ್ದವು.
ಎಲ್ಲೋರುದೇ ಕೇಳಿ, ಆ ಅಂಬೆಯ ಪೂರ್ಣಾನುಗ್ರಹಕ್ಕೆ ಪ್ರಾಪ್ತರಾಗಿ, ಸರ್ವಮಂಗಳರಾಯೇಕು ಹೇದು ಬೈಲಿನ ಹಾರಯಿಕೆ.
~
ಗುರಿಕ್ಕಾರ°

ಕಲ್ಯಾಣಿ ಗೀರ್ವಾಣಿ:

ಕಲ್ಯಾಣಿ ಗೀರ್ವಾಣಿ ಹೇಳುವ ಈ ಕೃತಿ ಶಾರದಾ ದೇವಿಯ ಬಗ್ಗೆ ವರ್ಣಿತವಾಗಿದ್ದು.
ಇದರಲ್ಲಿ ಮನುಷ್ಯನ ಭಾವನೆಗಳ ಪ್ರತಿಬಿಂಬಿಸುವ ನವರಸಂಗಳೂ, ಸಂಗೀತದ ಸಪ್ತಸ್ವರಂಗಳ ಶಬ್ಧಾಕ್ಷರಂಗಳಲ್ಲಿ ಇಡೀ ಕೃತಿ ರಚನೆ ಆದ್ದದು ತುಂಬಾ ಲಾಯ್ಕ ಭಾವ ಕೊಡ್ತು.
ನವರಾತ್ರಿಯ ಈ ಸಮಯಲ್ಲಿ ಎಲ್ಲೊರೂ ಈ ಕೃತಿಯ ಕೇಳಿ ಶಾರದೆಯ ಕೃಪೆಗೆ ಪಾತ್ರರಾಯೆಕ್ಕು ಹೇಳಿ ಆಶಿಸುತ್ತೆ.

ದ್ವನಿರೂಪ ಕೇಳುಲೆ:


Kalyani-Geervani Deepika Bhat-mp3

ಶ್ಲೋಕ ಓದಲೆ:

ಕಲ್ಯಾಣಿ ಗೀರ್ವಾಣಿ ವೀಣಾ ಪಾಣಿ
ಸ೦ಗೀತ ನೃತ್ಯಾದಿ ಕಲಾ ಪ್ರದಾಯಿನಿ ॥

ನವರಸ ವರ್ಷಿಣಿ ರಾಗ ವಿವರ್ಧಿನಿ
ಸ್ವರ ರಾಗ ಲಯ ಭಾವ ಪ್ರಕಾಷಿಣಿ
ಶೃ೦ಗಾರ ವೀರ ಕರುಣ ಅದ್ಭುತ ಹಾಸ್ಯ
ಭಯಾನಕ ಬೀಭತ್ಸ್ಯ ರೌದ್ರ ಶಾಂತಂ

ಸಪ್ತಸ್ವರ ರೂಪಿಣಿ ಸುಹಾಸಿನಿ
ಸೂರ್ಯ ತೇಜಸ್ವಿನಿ ರಮ್ಯ ಗುಣಭರಿಣಿ
-ಷಡ್ಜ ಸರಸಿಜ ರೂಪಿಣಿ
ರಿ-ಋಷಭ ರಿಪು ಸ೦ಹಾರಿಣಿ
-ಗಾ೦ಧಾರ ಗಾನಸುಧಾ ವರ್ಷಿಣಿ
-ಮಧ್ಯಮ ಮಧುರ ಭಾಷಿಣಿ
ಪ-ಪ೦ಚಮ ಪ೦ಕಜ ಲೋಚನಿ
-ದೈವತ ದಯಾ ಸ್ವರೂಪಿಣಿ
ನಿ-ನಿಷಾದ ನಿಗಮೋದ್ಧಾರಿಣಿ ॥

~*~*~

ಹಾಡಿದ್ದದರ ಕೇಳ್ಳೆ:

  •  ಧ್ವನಿ: ದೀಪಿಕಾ ಭಟ್, ತಲೆಂಗಳ

Kalyani-Geervani Deepika Bhat-mp3

ದೀಪಿಕಾ

   

You may also like...

8 Responses

 1. ತೆಕ್ಕುಂಜ ಕುಮಾರ ಮಾವ° says:

  ಸಪ್ತಸ್ವರ ಭೂಷಿಣಿ…ಹೇಳಿ ಶುರು ಮಾಡಿ ಸಪ್ತಸ್ವರಂಗಳ ಹಾಡಿದ್ದು ತುಂಬಾ ಲಾಯ್ಕಾಯಿದು . ಇನ್ನು ಹತ್ತು ದಿನಂಗೊಕ್ಕೆ ಹತ್ತು ಗಾನಂಗಳ ಮೂಲಕ ದೇವಿ ಸ್ತೋತ್ರವ ಮಾಡುವೋ..

 2. ಶರ್ಮಪ್ಪಚ್ಚಿ says:

  ಒಂದು ಒಳ್ಳೆ ಕೃತಿಯ ಮೂಲಕ ನವರಾತ್ರಿಯ ಶುಭಾರಂಭ ಆತು.
  ದೀಪಿಕಾ ಹಾಡಿದ್ದು ತುಂಬಾ ಲಾಯಿಕ ಆಯಿದು. ಪುನಃ ಪುನಃ ಕೇಳುವ ಹಾಂಗೆ ಇದ್ದು.

 3. ನವರಾತ್ರಿಯ ಶುಭಾಶಯಂಗೊ. ಲಾಯಕ ಮೂಡಿಬೈಂದು .

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಹಾಡಿದ್ದು ಲಾಯ್ಕ ಆಯಿದು.ಸಪ್ತಸ್ವರಗಳ ಏರು,ಇಳಿಗಳ ಸುಲಲಿತ ನಿರೂಪಣೆ.

 5. ವಿದ್ಯಾ ರವಿಶಂಕರ್ says:

  ದೀಪಿಕಾ ಹಾಡಿದ್ದು ಅದ್ಭುತ ಆಯಿದು. ನವರಾತ್ರಿಯ ಶುಭಾಶಯಂಗೊ.

 6. ಸುಮನ ಭಟ್ ಸಂಕಹಿತ್ಲು. says:

  ಧನ್ಯವಾದಂಗೋ.
  ಎಲ್ಲೋರಿಂಗೂ ನವರಾತ್ರಿಯ ಹಾರ್ದಿಕ ಶುಭಾಶಯಂಗೋ.
  ಹಾಡಿದ್ದು ತುಂಬಾ ತುಂಬಾ ಲಾಯಿಕಾಯಿದು, ಕೇಳಿ ಖುಶಿ ಆತು.

 7. ಬೆಟ್ಟುಕಜೆ ಮಾಣಿ says:

  ನವರಾತ್ರಿಲಿ ಸರಸ್ವತಿಯ ಅನುಗ್ರಹ ಬೈಲಿನ ಎಲ್ಲೋರಿಂಗು ಆಗಲಿ..ನವದುರ್ಗೆತರ ಆಶಿರ್ವಾದ ನಮ್ಮ ಮೇಲೆ ಇರಲಿ..ಲಾಯ್ಕ ಅಯಿದು..

 8. ದೀಪಿಕಾ says:

  ಕೇಳಿ ಪ್ರೋತ್ಸಾಹಿಸಿದ ಎಲ್ಲೋರಿ೦ಗೂ ಧನ್ಯವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *