ಕಮಲಭವನ ಪ್ರಿಯ ರಾಣಿ

October 20, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಊರ್ಲಿ ನವರಾತ್ರಿ ಉತ್ಸವ ಗೌಜಿಲಿ ನಡೆತ್ತಾಂಗೆ ನಮ್ಮ ಬೈಲಿಲ್ಲಿಯೂ ಎಡಿಗಾಷ್ಟು ಮಟ್ಟಿಂಗೆ ನಮ್ಮ ಶ್ರೀ ಅಕ್ಕನ ನೇತೃತ್ವಲ್ಲಿ ನಡೆತ್ತಾ ಇಪ್ಪದು ನಿಂಗೊಗೆಲ್ಲ ಗೊಂತಿಪ್ಪದೆ.
ಇಂದ್ರಾಣ ಶುದ್ದಿಗೆ ನಮ್ಮ ದೀಪಿಕಾ ಅಕ್ಕ°  ‘ಕಮಲಭವನ ರಾಣಿ’ ಹಾಡಿನ ಶುಶ್ರಾವ್ಯವಾಗಿ ಹಾಡಿದ್ದು ಇಲ್ಲಿದ್ದು.
ಬನ್ನಿ., ಕೇಳಿ ಪ್ರೋತ್ಸಾಹಿಸುವ°.

– ಗುರಿಕ್ಕಾರ°

ಕಮಲಭವನ ಪ್ರಿಯ ರಾಣಿ  

ಕಮಲಭವನ ಪ್ರಿಯ ರಾಣಿ
ವಿಮಲ ಮತಿಯೆ ನೀ ಕರುಣಿಸು ಜಾಣಿ ||
 
ಅ೦ತರ೦ಗದ ತ೦ತಿಯ ಮಿಡಿಸೌ
ನಿ೦ತು ಜಿಹ್ವೆಯಿ೦ ಹರಿಗುಣ ನುಡಿಸೌ
ಕ೦ತು ಜನಕನಿ೦ದ ಯವನ ಕಾಣಿಸೌ
ಸ೦ತತ ಶಾರದೆ ವೀಣಾ ಪಾಣಿ ||
 
ವಿವಿದ ಭಾಷೆಗಳ ಒಡತಿಯಾಗಿ ನೀ
ವಿವಿದ ಬಣ್ಣಗಳ ಕ೦ಗಳು ಹೊಳೆಯಲು
ಪವಡಿಸಿ ಗರಿಗಳ ಪಸರಿಸಿ ಕುಣಿಯಲು
ನವಿಲನೇರುವಾ ಪನ್ನಘವೇಣಿ ||
 
ಪ್ರೇರಿಸರ್ಥಗರ್ಭದ ನುಡಿಗಳನು
ತೋರಿಸಿ ಪದ್ಯದ ರಚಿತ ರೀತಿಯನು
ಚಾರು ಚರಣಗಳಿಗೆರಗುವೆ ಗದುಗಿನ
ವೀರ ನಾರಾಯಣನ ಸೊಸೆಯೆ ಸುವಾಣಿ ||
ನಮ್ಮ ದೀಪಿ ಅಕ್ಕ ಹಾಡಿದ್ದರ ಕೇಳ್ಳೆ –

Kamalabhavana Priya Rani – by Deepika Bhat 

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಬೈಲಿಲಿ ನವರಾತ್ರಿ ಮಹೋತ್ಸವಕ್ಕೆ ದೀಪಿಕ್ಕ ಹಾಡಿದ್ದು ಒಳ್ಳೆ ಲಾಯಕ ಆಯ್ದು ಅಕ್ಕೋ. ಅಭಿನಂದನೆಗೊ.

  [Reply]

  ದೀಪಿಕಾ

  ದೀಪಿಕಾ Reply:

  ಧನ್ಯವಾದ ಮಾವ..

  [Reply]

  VN:F [1.9.22_1171]
  Rating: 0 (from 0 votes)
 2. ಅನು

  ಹಾಡಿದ್ದು ಲಾಯಿಕಾಯಿದು ಆತ ದೀಪಿ…

  [Reply]

  ದೀಪಿಕಾ

  ದೀಪಿಕಾ Reply:

  ಧನ್ಯವಾದ..

  [Reply]

  VN:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ

  ತುಂಬ ಖುಷಿಯಾವ್ತು ಕೇಳ್ಳೆ. ಆಹ್ಲಾದಕರ ಸ್ವರ ದೀಪಿಕಕ್ಕಂದು.

  ತುಂಬ ಒಳ್ಳೆ ಪದ್ಯ.

  “ಜಾಣಿ” ಈ ಶಬ್ದದ ಅರ್ಥ ಎಂತದು?
  “ಯವನ” ಇದುದೆ ಗೊಂತಾಯಿದಿಲ್ಲೆ.

  {ಪನ್ನಘವೇಣಿ} ಇದು ಪನ್ನಗವೇಣಿ ಹೇಳಿ ಆಯೆಕು.
  “ಗರಿಗಳ” ಹೇಳಿ ಇಪ್ಪದು ಹಾಡುವಗ ಗರಿಗಳು ಹೇಳಿ ಆಯಿದು ಅಲ್ಲದ?

  ಮಿಡಿಸೌ, ನುಡಿಸೌ, ಕಾಣಿಸೌ — ಇದು “ಮಿಡಿಸು, ನುಡಿಸು, ಕಾಣಿಸು” ಹೇಳಿ ಆಯೆಕೋ?

  [Reply]

  ದೀಪಿಕಾ

  ದೀಪಿಕಾ Reply:

  ಧನ್ಯವಾದ ಮಾವ..
  ಜಾಣಿ ಹೇಳಿರೆ ಎಲ್ಲವನ್ನೂ ತಿಳಿದವಳು ಹೇಳಿ ಅರ್ಥ ಅಡ್ಡ.
  ಯವನ ಹೇಳಿರೆ ಯಮ ಹೇಳಿ ಅರ್ಥ ಬತ್ತಡ್ಡ..
  ಇದು ಹುಯಿಲಗೊಳ ನಾರಾಯಣ ರಾವ್ ಅವು ಹಳೆಗನ್ನಡಲ್ಲಿ ಮಾಡಿದ ರಚನೆ
  ಪನ್ನಘವೇಣಿ-ಅಪ್ಪು ಇದು ತಪ್ಪಿದ್ದು
  ಗರಿಗಳ-ಇದು ಬರವಗ ತಪ್ಪಿದ್ದು..ಅದು ನಿಜವಾಗಿ “ಗರಿಗಳು” ಆಯಕಾದ್ದು
  ಮಿಡಿಸೌ, ನುಡಿಸೌ, ಕಾಣಿಸೌ ಇದು ಹೀ೦ಗೇ ಆಯಕಾದ್ದಡ್ಡ..ಮಿಡಿಸು, ನುಡಿಸು, ಕಾಣಿಸು ಅಲ್ಲ.

  [Reply]

  ಗೋಪಾಲಣ್ಣ

  ಎಸ್.ಕೆ.ಗೋಪಾಲಕೃಷ್ಣ ಭಟ್ಟ Reply:

  ಹಾಡಿದ್ದು ಲಾಯ್ಕ ಆಯಿದು.
  ಯವ[ಜವ] ಹೇಳಿರೆ ಯಮ ಹೇಳಿ ಉಪಯೋಗಿಸಿದ್ದು ಆದರೆ,ವಿಷ್ಣುವಿನ ಕೈಲಿ ಎನ್ನ ಮರಣ ಆಗಲಿ ಹೇಳಿ ಕೋರುದೊ? ಬಹಳ ಕುತೂಹಲಕಾರಿ.
  ಮಿಡಿಸೌ,ನುಡಿಸೌ,ಕಾಣಿಸೌ -ಇದು ಸರಿಯಾದ ರೂಪಂಗಳೆ ಸರಿ,ಅನುಮಾನ ಇಲ್ಲೆ. ಹಳೆ ಮೈಸೂರಿಲಿ-ಕಾಯೌ ಶ್ರೀಗೌರಿ ಕರುಣಾಲಹರೀ-ಹೇಳುವ ಪ್ರಾರ್ಥನೆ ಇತ್ತು.ಹಳೆ ಕನ್ನಡಲ್ಲಿ ಈ ರೂಪ ಇದ್ದು.
  ತುಂಬಾ ಲಾಯ್ಕ ಪದ್ಯ ಕೊಟ್ಟದಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಬೈಲಿನ ಒಪ್ಪಕ್ಕ ಒಪ್ಪಕೆ ಹಾಡಿದ್ದರ ಕೇಳಿ ಖುಷಿ ಆತು.

  [Reply]

  ದೀಪಿಕಾ

  ದೀಪಿಕಾ Reply:

  ಧನ್ಯವಾದ ಅತ್ತೆ..

  [Reply]

  VN:F [1.9.22_1171]
  Rating: 0 (from 0 votes)
 5. ಸುವರ್ಣಿನೀ ಕೊಣಲೆ
  Suvarnini Konale

  ಇಡೀ ಕೇಳುಲೆ ಎಡಿಗಾಯ್ದಿಲ್ಲೆ. internet ಸಮಸ್ಯೆ ಇದ್ದು ಎಂಗಳಲ್ಲಿ. ತುಂಬಾ ಲಾಯ್ಕಾಯ್ದು ದೀಪಿಕಾ :)

  [Reply]

  ದೀಪಿಕಾ

  ದೀಪಿಕಾ Reply:

  ಧನ್ಯವಾದ ಸುವರ್ಣಿನಿ ಅಕ್ಕ..

  [Reply]

  VN:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  raghumuliya

  ಬೈಲಿಲಿಯೂ ನವರಾತ್ರಿ ಸ೦ಭ್ರಮ.ದೀಪಿಕನ ಹಾಡು ಸುಮಧುರ,ಭಕ್ತಿಪೂರ್ಣ.ಕೃತಿ ರಚನೆ ಆರದ್ದು?

  [Reply]

  ದೀಪಿಕಾ

  ದೀಪಿಕಾ Reply:

  ಧನ್ಯವಾದ ರಘುಮಾವ..ಇದು ಹುಯಿಲಗೊಳ ನಾರಾಯಣ ರಾವ್ ಅವರ ರಚನೆ.(ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಪದ್ಯ ಬರದೊರು)

  [Reply]

  VN:F [1.9.22_1171]
  Rating: 0 (from 0 votes)
 7. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ನವರಾತ್ರಿಯ ಗೌಜಿಗೆ ದೀಪಿ ಅಕ್ಕನ ಪದ್ಯ ಲಾಯ್ಕ ಆಯಿದು..ಹಾಡಿದ್ದು ಸೂಪರ್…

  [Reply]

  VN:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನವರಾತ್ರಿಯ ಹಬ್ಬದ ಸಮಯಲ್ಲಿ ದಿನಕ್ಕೊಂದು ಸಂಗ್ರಹಯೋಗ್ಯ ಕೃತಿಗಳ ಕೊಡ್ತಾ ಇಪ್ಪದಕ್ಕೆ ಧನ್ಯವಾದಂಗೊ.
  ದೀಪಿಕಾ ಸ್ವರಲ್ಲಿ ಕೇಳಲೆ ಕೊಶೀ ಆವ್ತು.

  [Reply]

  VA:F [1.9.22_1171]
  Rating: 0 (from 0 votes)
 9. ದೊಡ್ಮನೆ ಭಾವ

  ಈ ಪದ್ಯವ ದೀಪಿಅಕ್ಕನ ಮಧುರ ಕ೦ಠದಲ್ಲಿ ಕೇಳುವಾ ಅ೦ದ್ರೆ, ಆ ಕೊ೦ಡಿ ತಪ್ಪೋದು ಅ೦ತ ಕಾಣ್ತು.
  ಬಹುಶಃ upload ಆಯ್ದಿಲ್ಲೆಯೊ?

  [Reply]

  VN:F [1.9.22_1171]
  Rating: 0 (from 0 votes)
 10. ಬೊಳುಂಬು ಮಾವ°

  ಒಪ್ಪ ಕೊಡ್ಳೆ ರಜಾ ತಡವಾತು. ಕ್ಷಮಿಸಿ. ದೀಪಿಕನ ಹಾಡು ಈಗ ಕೇಳಿದೆ ಅಷ್ಟೆ. ಕಮಲಭವನ ಪ್ರಿಯ ರಾಣಿ ಹಾಡು ಅದರ ಮಧುರ ಕಂಠಲ್ಲಿ ಚೆಂದಕೆ ಮೂಡಿ ಬಯಿಂದು, ಸೊಗಸಾಯಿದು. ಅಂಬಗಂಬಗ ದೀಪಿಕನ ಹಾಡುಗೊ ಬೈಲಿಂಗೆ ಬತ್ತಾ ಇರಳಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ವಿದ್ವಾನಣ್ಣವೇಣಿಯಕ್ಕ°ಅಜ್ಜಕಾನ ಭಾವಡಾಗುಟ್ರಕ್ಕ°ಗಣೇಶ ಮಾವ°ಶಾ...ರೀಕೊಳಚ್ಚಿಪ್ಪು ಬಾವಅನುಶ್ರೀ ಬಂಡಾಡಿಶರ್ಮಪ್ಪಚ್ಚಿಸಂಪಾದಕ°ಗೋಪಾಲಣ್ಣದೊಡ್ಡಮಾವ°ಹಳೆಮನೆ ಅಣ್ಣಚೆನ್ನಬೆಟ್ಟಣ್ಣರಾಜಣ್ಣಶಾಂತತ್ತೆವಾಣಿ ಚಿಕ್ಕಮ್ಮದೇವಸ್ಯ ಮಾಣಿಸುಭಗನೀರ್ಕಜೆ ಮಹೇಶಕೇಜಿಮಾವ°ಜಯಗೌರಿ ಅಕ್ಕ°ಜಯಶ್ರೀ ನೀರಮೂಲೆವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ