ನೃತ್ಯಪ್ರಿಯ ನಟರಾಜ : ಮೂರ್ತಿ ವರ್ಣನೆ

ನಾಟ್ಯಕಲೆಯ ಆದಿದೈವ ನಟರಾಜನ ಮೂರ್ತಿಯ ವೈಶಿಷ್ಟ್ಯತೆಯ ಬೈಲಿಲಿ ಹ೦ಚಿಗೊ೦ಬಾ ಹೇಳಿ ಆತು..

ನಾಟ್ಯಕಲಾ ಆದಿ ದೈವ - ನಟರಾಜ

ನಟರಾಜ ನಾಟ್ಯ ಕಲೆಯ ಆದಿದೈವ..
16ನೆ ಶತಮಾನಲ್ಲಿ ಚೋಳರ ಕಾಲಲ್ಲಿ ಈ ವಿಗ್ರಹ ರೂಪು ತಾಳಿತ್ತು ಹೇಳ್ತವು.
ನಟರಾಜನ ಪರಿಕಲ್ಪನೆಯ ಪ್ರತಿಯೊ೦ದು ಭಾಗಕ್ಕೂ ವಿಶೇಷ ಅರ್ಥ, ವಿವರಣೆಗ ಇದ್ದು:

ಈ ವಿಗ್ರಹಲ್ಲಿ ಕಾ೦ಬ ಶಿವನ ಭ೦ಗಿಯ “ನಾದಾ೦ತ ನೃತ್ಯ” ಅಥವಾ “ಆನ೦ದ ತಾ೦ಡವ” ಹೇಳಿ ಹೇಳ್ತವು.
ಈ ಮೂರ್ತಿ ಷಟ್ಕೋನದ ರೇಖಾ ವಿನ್ಯಾಸಲ್ಲಿದ್ದು..
ಎರಡು ಕೈಗೊ ಮತ್ತೆ ಮಧ್ಯ ಭಾಗಲ್ಲಿಪ್ಪ ದೇಹ ಮೇಲಾಣ ಮೂರು ಕೋನ೦ಗಳ ಸೂಚಿಸುತ್ತು. ಅಪಸ್ಮಾರನ ಮೇಲೆ ಮಡುಗಿದ ಕುಂಚಿತ ಪಾದ ಕೆಳಾಣ ಒ೦ದು ಕೋನವ ಸೂಚಿಸಿರೆ, ಅವನ ಮೇಲೆದ್ದ ಕಾಲು ಮತ್ತೆ ನರ್ತಿಸುವಗ ಹರಡಿದ ವಸ್ತ್ರ ಕೆಳಾಣ ಇನ್ನೆರಡು ಕೋನವ ಸೂಚಿಸುತ್ತು.
ಈ ಆರು ಕೋನ೦ಗೊ, ಸುತ್ತಲು ಇಪ್ಪ ವರ್ತುಲಾಕಾರದ ಅಗ್ನಿಜ್ವಾಲೆಯ ಪ್ರಭಾವಳಿಯ ಒಳ ಅಡಕವಾಗಿದ್ದು..

ನವಿಲು ಗರಿ೦ದ ಅಲ೦ಕೃತವಾಗಿಪ್ಪ ಶಿವನ ಜಟೆಲಿ ಗ೦ಗೆ ಮತ್ತೆ ಅರ್ಧಚ೦ದ್ರ ಶೋಭಿಸುತ್ತವು..
ಮ೦ದಸ್ಮಿತ ವದನಲ್ಲಿಪ್ಪ ಮೂರು ಕಣ್ಣುಗಳಲ್ಲಿ ಎರಡು ಸೂರ್ಯ ಚ೦ದ್ರರ ಸ೦ಕೇತವಾದರೆ ಮೂರ್ನೆದು ಅಗ್ನಿ೦ದ ಜ್ವಲಿಸುತ್ತು..
ಬಲದ ಕೆಮಿಲಿ ಮಕರಕು೦ಡಲ ಮತ್ತೆ ಎಡದ ಕೆಮಿಲಿ ಪತ್ರಕು೦ಡಲ ಧರಿಸಿರ್ತ..
ಹಾವಿನ ಕೊರಳಸುತ್ತ ಸುತ್ತಿಗೊ೦ಡದು ಆಭರಣದ ಹಾ೦ಗೆ ಕಾಣ್ತು..
ಹಿ೦ದಾಣ ಎಡದ ಕೈಲಿ ಕಿಚ್ಚು , ಬಲದ ಕೈಲಿ ಡಮರು ಇದ್ದರೆ, ಮುಂದಾಣ ಎಡದ ಕೈ ಲತಾ ಹಸ್ತ, ಬಲದ ಕೈ ಅಭಯ ಮುದ್ರೆಲಿದ್ದು.
ಮುಯ್ಯಲಗ(ಅಪಸ್ಮಾರ) ಹೇಳುವ ರಾಕ್ಷಸನ ಬೆನ್ನಿನ ಮೇಲೆ ನಿ೦ದು ಶಿವ ನರ್ತಿಸುತ್ತಾ ಇಪ್ಪಗ ಹರಡಿದ ಜಟೆ ನೃತ್ಯದ ರಭಸವ ತೋರ್ಸುತ್ತು..

ಇಲ್ಲಿ ಶಿರಲ್ಲಿಪ್ಪ ಅರ್ಧಚ೦ದ್ರ  ಸೌಂದರ್ಯದ ಪ್ರತಿಬಿ೦ಬ ಮತ್ತೆ ಅಮೃತತ್ವದ ಸ೦ಕೇತ.
ಜಟೆ೦ದ ಇಳುದು ಬಪ್ಪ ಗ೦ಗೆ ಜೇವನದ ಶಾಶ್ವತತೆಯ ಪ್ರತೀಕ ಆಗಿದ್ದು.
ಹಣೆಯ ಕಣ್ಣು  ಜ್ಞಾನದ ಸ೦ಕೇತ..

ಹಿ೦ದಾಣ ಬಲಗೈಲಿಪ್ಪ ,  “ಮೊಟ್ಟಮೊದಲು ನಾದ ಹೊಮ್ಮಿಸಿದ ವಾದ್ಯ” ಹೇಳುವ ಡಮರು, ಶಿವನ  ಸೃಷ್ಟಿ ಕ್ರಿಯೆಯ ಸ೦ಕೇತವಾಗಿದ್ದು.
ಎಡಗೈಲಿಪ್ಪ ಅಗ್ನಿಜ್ವಾಲೆ, ಶಿವ ಸ೦ಹಾರ ಕಾರಣ ಹೇಳುವ ತತ್ವವ ಸಾರ್ತು.
ಮೂರ್ತಿಯ ಸುತ್ತಲು ಇಪ್ಪ ಪ್ರಭಾವಳಿಯ “ತಿರುವಷಿ” ಹೇಳ್ತವು.
ಇದು ಪ್ರಕೃತಿಯ ನಿರಂತರವಾದ ಚಲನೆಯ ಸೂಚಿಸಿದರೆ  ಇದರ ಕೇ೦ದ್ರವಾಗಿ ಶಿವ ಶಾಶ್ವತವಾಗಿ ನರ್ತಿಸುತ್ತಲೇ ಇರ್ತ ಹೇಳುಲಕ್ಕು..
ನಟರಾಜನ ಈ ಆನ೦ದ ತಾ೦ಡವ ಶಿವನ ಪಂಚಕ್ರಿಯೆಯಾದ:
ಸೃಷ್ಟಿ , ಸ್ಥಿತಿ , ಸ೦ಹಾರ , ತಿರೋಭಾವ , ಅನುಗ್ರಹ೦ಗಳ ಪ್ರತಿಪಾದಿಸುತ್ತು..

ಶಿವ ತಾ೦ಡವ ನೃತ್ಯದ ಭ೦ಗಿಲಿ ನಿಂದಿಪ್ಪ ಈ ಮೂರ್ತಿ ಎಷ್ಟು ಚೆ೦ದ ಕಾಣ್ತು, ಅದರಲ್ಲಿ ಅಡಗಿಪ್ಪ ವೈಶಿಷ್ಟ್ಯತೆಗಳ ನೋಡುವಾಗ ಇನ್ನು ಖುಶಿ ಆವ್ತು..
ನಾಟ್ಯದ ಆದಿದೈವ ನಟರಾಜ೦ಗೆ ನಮೋ ನಮಃ

ಆ೦ಗಿಕಮ್ ಭುವನಂ ಯಸ್ಯ
ವಾಚಿಕಂ ಸರ್ವ ವಾಙ್ಮಯಂ |
ಆಹಾರ್ಯಂ ಚಂದ್ರ ತಾರಾದಿ
ತಮ್ ನಮಃ ಸಾತ್ವಿಕಂ ಶಿವಂ ||

ದೀಪಿಕಾ

   

You may also like...

31 Responses

 1. ಸೂರ್ಯ says:

  ಮಾಹಿತಿಯುಕ್ತ ಒಳ್ಳೆಯ ಬರಹ…ಹೀಂಗೆ ಬರೆತ್ತಾ ಇರಿ.. ಅಂಬಗಂಬಗ…

 2. ತೆಕ್ಕುಂಜ ಕುಮಾರ ಮಾವ° says:

  ಒಳ್ಳೆ ಮಾಹಿತಿ.

 3. ವಿದ್ಯಾ ರವಿಶಂಕರ್ says:

  ಮಾಹಿತಿ ಇಪ್ಪ ಲೇಖನವ ಚೆಂದಕೆ ಬರದ್ದಿ.

 4. ಅಕ್ಸರ ದಾಮ್ಲೆ says:

  ಲೇಖನ ಲಾಯ್ಕ ಆಯ್ದು… ನಟರಾಜ ನಾಟ್ಯದ ಆದಿದೈವ…… ನಾಟ್ಯಶಾಸ್ತ್ರವ ಬರದ್ದು ಭರತಮುನಿ…

  ಆದರೂ ಭರತನಾಟ್ಯ ಮಾಡುವ ಮಾಣ್ಯಂಗೊ ಎಷ್ಟು ಜನ ಇದ್ದವು??!!! ತುಂಬಾ ಕಡಮ್ಮೆ….. !!!! ಇದು ಎಂತಕಾದಿಕ್ಕು???!!!

 5. ದೀಪಿಕಾ says:

  ಅಪ್ಪು ಭರತನಾಟ್ಯ ಮಾಡುವ ಮಾಣ್ಯಂಗೊ ಕಡಮ್ಮೆ..
  ಒ೦ದು ಕಾರಣ ಇದು ಕೂಸುಗೊಕ್ಕೆ ಇಪ್ಪ ಒ೦ದು ಕಲೆ ಹೇಳುವ ತಪ್ಪು ಕಲ್ಪನೆ೦ದಾಗಿ ಅದಿಕ್ಕಾ ಏನ..
  ಮತ್ತೆ ಇಗೀಗ ಇದರ ಪ್ರೊಫೆಶನ್ ಆಗಿ ತೆಕ್ಕೊ೦ಬಲೆ ತಯಾರ್ ಇಪ್ಪ ಮಾಣಿಯ೦ಗೊದೆ ತು೦ಬಾ.. ಕಡಮ್ಮೆ . ಹಾ೦ಗೆ ಎಲ್ಲ್ಯಾರು ಕಲ್ತುಗೊ೦ಡಿದ್ದರು ಹತ್ತ್ನೆ ಕ್ಲಾಸೊ ಅಥವಾ ಪಿ ಯು ಸಿ ಗೊ ಬ೦ದಪ್ಪಗ ಕಲಿವದರ ನಿಲ್ಸುತ್ತವು(ಪುನ ತಪ್ಪು ಕಲ್ಪನೆ- ಓದುಲೆ ಕಷ್ಟ ಆವ್ತು ಹೆಳಿಎಲ್ಲ)..ಇದು ಅಪ್ಪ ಅಮ್ಮ೦ದ್ರ೦ದಾಗಿಯ ಗೊ೦ತಿಲ್ಲೆ…
  ಎನ್ನ ಕೊಲೆಜಿ೦ಗೆ ಹೇಳಿಕೊಡ್ಳೆ ಬಪ್ಪ ಒಬ್ಬ ಖೊರಿಯೊಗ್ರಫರ್ (ಒಳ್ಳೆ ಭರತನಾಟ್ಯ ಕಲಾವಿದ ) ಯಾವತ್ತು ಹೇಳ್ತವು- ಪರ್ಫಾರ್ಮರ್ಸ್ ಆಗಿ ಕೂಸುಗೊ ಕಾ೦ಬದು ಜಾಸ್ತಿ , ಗುರುಗೊ ಆಗಿ ಮಾಣಿಯ೦ಗೊ ಕಾ೦ಬದು ಜಾಸ್ತಿ ಹೇಳಿ. ಇದು ಆದಿಕ್ಕ ಹೇಳಿ ಎನಗೂ ಅ೦ಸಿತ್ತಿದ್ದು..

 6. ಅಕ್ಸರ ದಾಮ್ಲೆ says:

  ಹ್ಮ್… ಅಪ್ಪು… ತಪ್ಪು ಕಲ್ಪನೆಯೂ ಇದ್ದು… ಮತ್ತೆಷ್ಟೋ ಸರ್ತಿ, ಆಸಕ್ತಿ ಇಪ್ಪ ಕೆಲವು ಮಾಣ್ಯಂಗೊಕ್ಕೆ ಎಂತಾವ್ತು ಹೇಳಿದರೆ, ಕ್ಲಾಸಿಲಿ ಒಬ್ಬಂಟಿಯಾಗಿ ಬಿಡ್ತವು… !!!

  ಹಾಂ.. ಅದೂ ಅಪ್ಪು…. ಕಲೆಯ ಜೀವನವಾಗಿ ತೊಕೊಂಬದು ರಜ್ಜ ರಿಸ್ಕಿ…. ಮಾಣ್ಯಂಗೊಕ್ಕೆ ಲೈಫ್ ಸೆಕ್ಯೂರಿಟಿಯ ಹೆದರಿಕೆಯೂ ಅಕ್ಕು… ಬೇಕಾದಷ್ಟು ಪ್ರೋಗ್ರಾಮ್ ಸಿಕ್ಕಿದರೆ ಬಚಾವ್… ಇಲ್ಲದ್ರೆ, ಜೀವನ ಮಾಡುದು ತುಂಬಾ ಕಷ್ಟ… !!

  ಇನ್ನೂ ಒಂದು ಕಾರಣ ಎನಗೆ ಕಾಂಬದು, ಭರತನಾಟ್ಯಕ್ಕೆ ತುಂಬಾ ನಾಜೂಕು ಬೇಕು… ಅದು ಎಲ್ಲ ಮಾಣ್ಯಂಗಳಲ್ಲಿ ಇರ್ತಿಲ್ಲೆ… ಎಷ್ಟೋ ಮಾಣ್ಯಂಗೊಕ್ಕೆ ಯಕ್ಷಗಾನಲ್ಲಿ ಕುಣಿವ ಹಾಂಗೆ, ಗಟ್ಟಿ ಹೆಜ್ಜೆ ಹಾಕಿಯೇ ಅಭ್ಯಾಸ… !!!!! ಃ) ಃ ) ಃ)

  ನಿಂಗಳ ಗುರುಗ ಹೇಳಿದ್ದೂ ವಾಸ್ತವ…… ಃ) ಃ)

 7. shivakumara says:

  ಮಾಣಿಯಂಗೊ ನಾಟ್ಯ ಮಾಡಿಯೊಂಡು ಕೂದರೆ ಕೂಸು ಸಿಕ್ಕ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *