ಮ೦ಕುತಿಮ್ಮನ ಕಗ್ಗ (ಧ್ವನಿ ಸಹಿತ)

ಬೈಲಿನ ಬಹುಪ್ರತಿಭೆ ದೀಪಿಅಕ್ಕಂಗೆ ಕಗ್ಗ ಕುಶಿಆತಡ.
ಹಾಂಗೆ, ಶೃತಿಬದ್ಧವಾಗಿ ರೆಕಾರ್ಡುಮಾಡಿ ಬೈಲಿಂಗೆ ಕಳುಸಿಕೊಟ್ಟಿದವು. ಎಲ್ಲೋರುದೇ ಕೇಳಿ, ಆನಂದಿಸಿ!

ಓ ಮೊನ್ನೆ ನಮ್ಮ ಹವ್ಯಕ ಮಹಾಸಭೆಲಿ ಪ್ರತಿಬಿ೦ಬ ಹೇಳುವ ಕಾರ್ಯಕ್ರಮ ಇತ್ತು..
ಎರಡು ದಿನವೂ ಸಣ್ಣ ಮಕ್ಕಳಿ೦ದ ಹಿಡುದು ದೊಡ್ಡೋರ ವೋರೆಗೂ ಭಾಗವಹಿಸುವಂತ  ಸ್ಫರ್ಧೆ ಇತ್ತು.
ಸುರುವಾಣ ದಿನ ಎನ್ನ ತ೦ಗೆಯ ಏಕಪಾತ್ರ ಅಭಿನಯವ ನೋಡ್ಲೆ ಹೋಗಿತ್ತಿದ್ದೆಯ. ಸಣ್ಣ ಮಕ್ಕೊಗೆಲ್ಲ ಬೇರೆ ಬೇರೆ ತರದ ಗಾಯನ ಸ್ಫರ್ಧೆ ಇತ್ತು.

ಅವ್ವು ಹಾಡುದರ ನೋಡುವಾಗ, ಎನಗುದೇ ಆಶೆ ಆಗಿ ಮರುದಿನದ “ಮ೦ಕುತಿಮ್ಮನ ಕಗ್ಗ”  ಸ್ಫರ್ಧೆಗೆ ಹೆಸರು ಕೊಟ್ಟಿಕ್ಕಿ ಬ೦ದೆ.
ಡಿ.ವಿ.ಜಿ ಯವರ “ಅ೦ತಃಪುರ ಗೀತೆ” ಗಳ ಸುಮಾರು ಕೇಳಿತ್ತಿದ್ದೆ; ಆದರೆ ಕಗ್ಗದ ಬಗ್ಗೆ ಅಷ್ಟನ್ನಾರ ಹೆಚ್ಚೆ೦ತ ಗೊ೦ತಿತ್ತಿಲ್ಲೇ.
ಅಲ್ಲಿ ಇಲ್ಲಿ ಕೇಳಿ ಒಂದೆರಡು ಕಗ್ಗ೦ಗ ಬ೦ದುಗೊ೦ಡಿತ್ತು. ಒಟ್ಟು ಐದು ಕಗ್ಗ೦ಗ ಹಾಡಕ್ಕು ಹೇಳಿ ಇತ್ತ ಕಾರಣ ಮತ್ತೆ ಮೂರರ ಹುಡ್ಕುಲೆ ಸುರು ಮಾಡಿದೆ.
ಆವಾಗ ಅದರ ಬಗ್ಗೆ ಹೆಚ್ಚು ತಿಳಿವ ಉತ್ಸಾಹ ಬ೦ತು ..
ಯಾವುದರ ಹೇಳುದು ಯಾವುದರ ಬಿಡುದು ಹೇಳಿ ಗೊ೦ತಾಗ (ಎನಗೆ ಕಲಿವಲೆ ಒ೦ದೇ ದಿನ ಇತ್ತಕಾರಣ ಆದಷ್ಟು ಬಾಯಿಪಾಟ ಮಾಡ್ಲೆ ಸುಲಾಬ ಇಪ್ಪದರ ಹುಡ್ಕಿದೆ 😉  )
ಸುರು ಮಾಡಿರೆ ಒ೦ದಕ್ಕಿ೦ತ ಒ೦ದು ಚೆ೦ದ, ಅರ್ಥವತ್ತಾಗಿತ್ತು.

1943ರಲ್ಲಿ ಕಗ್ಗ ಪ್ರಕಾಶನಗೊ೦ಡತ್ತಡ.
ಇದು ಕನ್ನಡದ “ಭಗವದ್ಗೀತೆ “ ಹೇಳಿಯೇ ಪ್ರಖ್ಯಾತ ಆಯಿದು .
“ಮ೦ಕುತಿಮ್ಮನ ಕಗ್ಗ”ಲ್ಲಿ ಒಟ್ಟು 945 ಪದ್ಯ೦ಗ ಇದ್ದು.
ಪ್ರತಿಯೊ೦ದು ಪದ್ಯವೂ 4 ಗೆರೆಗಳದ್ದು..
ಕೆಲವು ಪದ್ಯ ಹಳೆಗನ್ನಡಲ್ಲಿ ಇದ್ದು.
ಸನಾತನ ಪುರಾತನ ಮಹಾಕಾವ್ಯ೦ಗಳ ಸಾಲಿ೦ಗೆ ಕಗ್ಗ ಸೇರ್ತು.
ಕುವೆ೦ಪು ಇದರ ಬಗ್ಗೆ ಹೀ೦ಗೆ ಹೇಳಿತ್ತಿದ್ದವಡ “ಮ೦ಕು, ತಿಮ್ಮ, ಕಗ್ಗ – ಇದೆಲ್ಲ ಎ೦ತಪ್ಪಾ ಹೇಳಿ ಗ್ರೆಶಿದೆ, ಓದುತ್ತಾ ಓದುತ್ತಾ ಮಸ್ತಕಕ್ಕೆ ಮಡುಗಿದೆ” ಹೇಳಿ.
ಶತಾವಧಾನಿ ಡಾ.ಆರ್  ಗಣೇಶ್  ಹೇಳ್ತವು “ಇದೊ೦ದು ಬದುಕಿನ ಕಾವ್ಯ” ಹೇಳಿ.
– ಇವರ ಇ೦ತಾ ಮಾತಿ೦ದ ನವಗೆ ಕಗ್ಗ ಎಷ್ಟು ವಿಶೇಷಾ ಹೇಳಿ ಗೊ೦ತಾವ್ತಿದ ..

ಕಗ್ಗದ ಗುಂಡಜ್ಜ

ಒ೦ದೊ೦ದು ಪದ್ಯಲ್ಲಿಯೂ ಎಷ್ಟೊ೦ದು ತತ್ವ ಇದ್ದು ಸಾರ ಇದ್ದು .. “ಅಕ್ಕಿಯೊಳಗನ್ನವನು ಮೊದಲಾರು ಕ೦ಡವರು ” ಎ೦ತಾ ಯೋಚನೆ!!
ಎಲ್ಲವೂ ಒಂದಕ್ಕಿಂತ ಒಂದು ಅದ್ಭುತ.
ಚೆಂದದ ಕಗ್ಗಂಗಳಲ್ಲಿ ಕೆಲವು ಕಗ್ಗಂಗೊ:

~

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ||

ಮನುಷ್ಯನ ಬದುಕು ಹೇಳಿದರೆ ಒಂದು ಜಟಕಾ ಬಂಡಿ ಇದ್ದ ಹಾಂಗೆ. ವಿಧಿಯೇ ಬಂಡಿಯ ಒಡೆಯ°. ನೀನು ಕುದುರೆ. ವಿಧಿ ಹೇಳಿದ ಹಾಂಗೆ ನಿನ್ನ ಪ್ರಯಾಣ ನೆಡೆಯೆಕ್ಕು. ಮದುವೆಗಾ, ಸ್ಮಶಾನಕ್ಕಾ ಎಲ್ಲಿಗೆ ನಮ್ಮ ತಿರುಗುಸುತ್ತೋ ಅಲ್ಲಿಗೆ ಹೋಯೆಕ್ಕು. ಸೋತು ಅಡಿ ತಪ್ಪಿಅಪ್ಪಗ ನೆಲವೇ ನೆಲೆ.

~

ಅಕ್ಕಿಯೊಳಗನ್ನವನು ಮೊದಲಾರು ಕಂಡವನು ?|
ಅಕ್ಕರದ ಬರಹಕ್ಕೆ ಮೊದಲಿಗನಾರು? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ |
ದಕ್ಕುವುದೆ ನಿನಗೆ ಜಸ ? – ಮಂಕುತಿಮ್ಮ ||

ಅಕ್ಕಿಂದ ಅಶನ ಮಾಡ್ಲೆ ಆವುತ್ತು ಹೇಳಿ ಸುರೂ ಕಂಡುಗೊಂಡವ° ಆರು? ಅಕ್ಷರವ ರೂಪಿಸಿ ಬರವಣಿಗೆಯ ಸುರು ಮಾಡಿದವ° ಆರು? ಈ ಪ್ರಶ್ನೆಗೊಕ್ಕೆ ಜಗತ್ತೇ ಉತ್ತರವ ಮಾಡಿಕ್ಕೊಂಡಿದಿಲ್ಲೇ, ಆರ ಹೆಸರು ಕೂಡಾ ದಾಖಲೆ ಆಗಿ ಇಲ್ಲೆ. ಅಂಬಗ ಯಶಸ್ಸು ನಮ್ಮದು ಹೇಳಿ ಹೇಂಗೆ ಹೇಳಿಗೊಂಬದು?

~

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ||

ಭೂಮಿಂದ ಸೆಸಿ ಚಿಗುರು ಒಡದು ಬಪ್ಪಗ ತಮಟೆಗಳ ಶಬ್ಧ ಕೇಳ್ತಿಲ್ಲೆ. ಹಣ್ಣುಗ ಮಧುರತೆ ತುಂಬಿ ಬೆಳದಪ್ಪಗ ತುತ್ತೂರಿ ಶಬ್ಧ ಕೇಳ್ತಿಲ್ಲೆ. ಜಗತ್ತಿಂಗೆ ಬೆಳಕು ಕೊಡುವ ಸೂರ್ಯ- ಚಂದ್ರರದ್ದು ಕೂಡಾ ಸದ್ದಿಲ್ಲದ್ದ ಕೆಲಸ. ಅಂಬಗ ಯೇ ಮನುಷ್ಯ! ಸಣ್ಣ ಸಣ್ಣದನ್ನೂ ಡಂಗುರ ಸಾರುವ ನಿನ್ನ ತೊಡಿಗಳ ಮೊದಾಲು ಹೊಲಿ!!

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ |
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ ||

ಗುಡ್ಡೆಯ ಬುಡಲ್ಲಿ ಹುಲ್ಲಿನಾ೦ಗೆ, ಮನೇಲಿ ಮಲ್ಲಿಗೆಯಷ್ಟು ಮೃದು ವಾಗಿರು ಆದರೆ ಕಷ್ಟ ಕಾಲಲ್ಲಿ ಕಲ್ಲಿನಷ್ಟು ಗಟ್ಟಿ ಯಾಗಿರು , ದೀನ ದುರ್ಬಲರೊಟ್ಟಿ೦ಗೆ ಬೆಲ್ಲ ಸಕ್ಕರೆಯಷ್ಟು ಸೀವಾಗಿರು ,ಎಲ್ಲೋರೊಟ್ಟಿ೦ಗೂ ಒ೦ದಾಗಿರು” ಎಂತಾ ಅರ್ಥ ಅಲ್ಲದಾ..?

~

ನಗುವು ಸಹಜದ ಧರ್ಮ ; ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ |
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೋ ಮ೦ಕುತಿಮ್ಮ ||

ತಾನೂ ಕುಶಿಲಿ ಇರೆಕ್ಕು, ಇನ್ನೊಬ್ಬನನ್ನೂ ಕುಶಿಪಡುಸೆಕ್ಕು ಹೇಳಿ ತಾತ್ಪರ್ಯ. ಎಂತಾ ಮಾನವೀಯತೆ, ಅಲ್ಲದಾ?

~

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣ ದೊಡ ಮಳ್ತಿಯಿಂ ನಂಬಿಹುದೊ |
ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ ||

ಶ್ರೀ ವಿಷ್ಣು ಈ ಲೋಕಕ್ಕೆ ಅಡಿಪಾಯ.
ತನ್ನದೇ ಆದ ಮಾಯಾಶಕ್ತಿಲಿ ಮುಳುಗಿಪ್ಪವ°. ಜೆನಂಗ ಭಕ್ತಿ, ಪ್ರೀತಿಂದ ದೇವರು ಹೇಳಿ, ಜಗತ್ತಿನ ಸಮಸ್ತಕ್ಕೂ ಒಡೆಯ°, ಪರಬ್ರಹ್ಮ ಹೇಳಿ ನಂಬಿಗೊಂಡಿದ್ದವು. ಕಣ್ಣಿಂಗೆ ಕಾಣದ್ದರೂ ಪ್ರೀತಿಂದ ಜೆನ ನಂಬಿಪ್ಪ ಆ ವಿಚಿತ್ರಕ್ಕೆ ನಮಸ್ಕಾರ ಮಾಡು.
~

ಜೀವನದ ಸಾರಂಗಳೇ ತುಂಬಿ ಇಪ್ಪ ಈ ನಾಲ್ಕು ಸಾಲುಗಳ ಗುಚ್ಛಂಗೊ ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸತ್ಯಕ್ಕಾರು ಒ೦ದು ದೊಡ್ಡ ಆಸ್ತಿ ಅಲ್ಲದಾ..

ಕೆಲವು ಕಗ್ಗಂಗಳ ಹಾಡಿ ಮುದ್ರಣ ಮಾಡ್ಳೆ ಪ್ರಯತ್ನ ಮಾಡಿದ್ದೆ.
ಹೇಂಗಾಯಿದು ತಿಳುಸುವಿರಾ?

ಧ್ವನಿ:

[audio:audio/mankutimmanakagga/Manku-Timmana-Kagga.mp3]

ದೀಪಿಕಾ

   

You may also like...

34 Responses

 1. ವಿದ್ಯಾ ರವಿಶಂಕರ್ says:

  ತುಂಬಾ ಲಾಯಿಕಾಯಿದು ದೀಪಿಕ. ಎನಗೂ ಈ ಡಿ ವಿ ಜಿ ಅಜ್ಜನ ಕಗ್ಗಂಗ ಹೇಳಿದರೆ ತುಂಬಾ ಪ್ರೀತಿ. ಆನು ಸಣ್ಣಾಗಿಪ್ಪಗಳೆ ಈ ಕಗ್ಗಂಗಳ ಎನ್ನ ಅಪ್ಪ ಅರ್ಥ ಸಹಿತ ವಿವರಿಸಿಗೊಂಡಿತ್ತಿದ್ದವು. ಬೈಲಿಲಿ ಇದರ ಕೇಳಿ ಖುಶಿ ಆತು..

 2. ಕಗ್ಗದ ಬಗ್ಗೆ ಹೆಚ್ಚು ಗೊಂತಿಲ್ಲೆ… ಆರೋ ಡಿ ವಿ ಜಿ ಹೇಳುವವ್ವು ಬರದ್ದು ಒಳ್ಳೆ ಜೀವನ ಮೌಲ್ಯಂಗೊ ಇಪ್ಪದು… ಹೇಳಿ ಅಲ್ಲಲ್ಲಿ ಕೇಳಿ ಗೊಂತಿತ್ತಷೇ. 🙂
  ಒಂದು ಪುಸ್ತಕವೂ ತಂದು ಮಡಗಿತ್ತಿದ್ದೆ, ಓದುಲೆ ಆಯಿದಿಲ್ಲೆ..

  ನೀ ಬರದ್ದು ತುಂಬ ಖುಶಿ ಆತು 🙂
  ಇನ್ನೂ ಬರೆ ಈ ಶುದ್ದಿಯ…
  ಮುಂದುವರೆಸು ನಿಲ್ಸೆಡ..

  ಹಾ°.. ಚೆಂದದ ಸ್ವರ… 🙂

 3. ಉಂಡೆಮನೆ ಕುಮಾರ° says:

  ತುಂಬಾ ಲಾಯಿಕಾಯಿದು..ಸ್ವಂತ ಸ್ವರಲ್ಲಿ ಪ್ರಸ್ತುತಪಡಿಸಿದ್ದದು ಕೊಶಿ ಆತು..ಮುಂದೆಯೂ ಹೀಗೇ ನಿಂಗಳ ಸ್ವರಲ್ಲಿ ಕಗ್ಗ, ಸ್ತೋತ್ರಂಗೊ, ಭಾವಗೀತಗೊ ಇತ್ಯಾದಿ ಎಲ್ಲ ಒೞೆದಾಗಿ ಮೂಡಿ ಬರಳಿ ಹೇಳಿ ಹಾರೈಕೆ..

  ಪ್ರತಿಬಿಂಬಲ್ಲಿ ಮೊದಲನೇ ಪ್ರೈಸು ಬಂದದಕ್ಕೆ ಅಭಿನಂದನಗೊ

  • ದೀಪಿಕಾ says:

   ಧನ್ಯವಾದ ಮಾವ..ನಿ೦ಗೊಳ ಹಾರೈಕೆ ಕ೦ಡು ಖುಶಿ ಆತು..
   ಹಾ, ಪ್ರತಿಬಿ೦ಬಲ್ಲಿ ಎನಗೆ ‘ಮೊದಲನೇ ಪ್ರೈಸು’ ಬ೦ದದಲ್ಲ 🙂

   • ಪ್ರೀತಿಯ ದೀಪಿಕಾ,

    [‘ಮೊದಲನೇ ಪ್ರೈಸು’ ಬ೦ದದಲ್ಲ]
    ಪ್ರೈಸು ಬಪ್ಪದು ಮುಖ್ಯ ಅಲ್ಲ. ಭಾಗವಹಿಸುದು. ಅಷ್ಟು ಜನರ ಎದುರು ಸಾಧನೆ ಮಾಡಿ ಗುರುತಿಸಿಗೊಂಬದು ಮುಖ್ಯ!
    ನಿನಗೂ, ನಿನ್ನ ಪುಟ್ಟು ತಂಗೆ ಚೈತುವಿಂಗೂ ಅಭಿನಂದನೆಗೋ!!!

    ನಮ್ಮ ರಘು ಭಾವನ ಕವನಕ್ಕೆ ಎರಡನೇ ಬಹುಮಾನ ಬಂತು ನೋಡು! ಆದರೆ ಅವರ ಕವನದ ಸಾರ, ಆಳ, ವಿಸ್ತಾರ ನೋಡಿದರೆ ಅದು ನಮ್ಮ ಲೆಕ್ಕಲ್ಲಿ ಎಷ್ಟೋ ಮೇಲೆ ಇದ್ದಲ್ಲದಾ? ಹಾಂಗೆ ನಿನ್ನದೂ ಕೂಡಾ! ಕನ್ನಡದ ಭಗವದ್ಗೀತೆಯ ಹಾಂಗೆ ಇಪ್ಪ, ಜೀವನದ ಸತ್ವವ ತೋರ್ಸುವ ಮಂಕುತಿಮ್ಮನ ಕಗ್ಗವ ಇಷ್ಟು ಸಣ್ಣ ಪ್ರಾಯಲ್ಲೇ ಕಂಠಪಾಠ ಮಾಡ್ಲೆ ತೋರ್ಸಿದ ಉತ್ಸಾಹ, ನೀನು ಅದರ ಹಾಡಿದ ರೀತಿ ಎಲ್ಲವೂ ತುಂಬಾ ಲಾಯ್ಕಾಯಿದು. ನಿನ್ನ ಶ್ರಮಕ್ಕೆ ಖಂಡಿತಾ ಎಂಗಳ ಪ್ರೋತ್ಸಾಹ ಇದ್ದು. ನಿನ್ನಲ್ಲಿ ತುಂಬಾ ಪ್ರತಿಭೆ ಇದ್ದು, ಸ್ವರ ಲಾಯ್ಕಾಗಿ ಇಂಪಾಗಿದ್ದು. ಸಾಧನೆಯ ಬಿಡದ್ದೆ ಮುಂದುವರಿಶಿದರೆ ಮುಂದೆ ಬೈಲಿನ ಎಲ್ಲೋರೂ ಹೆಮ್ಮೆ ಪಡುವ ಕೂಸು ಆವುತ್ತೆ.

    ನಿನ್ನ ಹತ್ತರೆ ಇಪ್ಪ ಕಲೆಗೋಕ್ಕೆ ಸರಿಯಾದ ವೇದಿಕೆ ಯಾವಾಗಲೂ ಸಿಕ್ಕುತ್ತಾ ಇರಲಿ ಹೇಳುವ ಪ್ರೀತಿ ತುಂಬಿದ ಹಾರೈಕೆ..

 4. ’ಮಂಕುತಿಮ್ಮ’ನ ಕಗ್ಗ, ಪ್ರತೀ ಸರ್ತಿ ಓದಿಯಪ್ಪಗಳೂ ಒಂದೊಂದು ಹೊಸ ಅರ್ಥ !! ಒಂದೊಮ್ದು ಕಗ್ಗವೂ ಜೀವನದ ದರ್ಶನ ಮಾಡ್ಸುತ್ತು.
  ನಿಜವಾಗಿಯೂ ಸತ್ಯ…ಭಗವದ್ಗೀತೆಯ ಒಂದು ಅಂಶ ಇದು ! ಗೀತೆ ಓದದ್ದವ್ವು..ಇದರ ಓದಿರೂ ಸಾಕು..ಜೀವನವ ಅರ್ಥ ಮಾಡಿಗೊಂಬಲೆ….
  ಅತ್ಯಮೂಲ್ಯ,ಅತ್ಯದ್ಭುತ ಆಸ್ತಿ ಇದು… ಎಲ್ಲರೂ ಇದರ ಓದೆಕ್ಕು…
  ಒಂದರಿ ನಮ್ಮ ಗುರುಗಳ ಹತ್ತರೆ ಹೊದಪ್ಪಗ…ಯಾವುದೋ ವಿಚಾರವ ಎನಗೆ ವಿವರ್ಸಿ ಹೇಳಿದವ್ವು…ಒಟ್ಟಿಂಗೆ ಒಂದು ಕಗ್ಗವನ್ನೂ ಹೇಳಿದವ್ವು…ಗುರುಗಳಿಂದ ಅದರ ಕೇಳಿ ಅದರ ಬಗ್ಗೆ ಆಸಕ್ತಿ ಹೆಚ್ಚಾತು….
  ಕಗ್ಗದ ಪುಸ್ತಕ ಮನೆಗೆ ತೆಕ್ಕೊಂಡು ಬಂದು ಓದುಲೆ ಶುರು ಮಾಡಿದೆ 🙂

  ದೀಪಿಕಾ, ನಿನ್ನ ಸ್ವರ ಕೇಳುಲೆ ಎಡಿತ್ತಾ ಇಲ್ಲೆ ಈಗ , ಇಂಟರ್’ನೆಟ್ ಸಮಸ್ಯೆ ಇದ್ದು. ಇನ್ನೊಂದರಿ ಕೇಳ್ತೆ.
  ಉತ್ತಮ ಪ್ರಯತ್ನ..ದೀಪಿಕಾ…
  ಬೈಲಿಂಗೆ ಕಗ್ಗದ ಹೊಳೆ ಹರಿತ್ತಾ ಇದ್ದು… ಸಂತೋಷ….

 5. Narayana Bhat says:

  ಇದರ ಧ್ವನಿಮುದ್ರಣ ದಯವಿಟ್ಟು ಅಪ್ಲೋಡ್ ಮಾಡಿ. ಧ್ವನಿ ಸುರುಳಿ ೩ ಲಾಇಕ ಆಯ್ದು…. 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *