- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
‘ಮನು’ ಹೆಸರಿಲಿ ಬರಕ್ಕೊಂಡಿಪ್ಪ ಶ್ರೀ. ಪಿ. ಏನ್. ರಂಗನ್ ಕನ್ನಡ ಸಾರಸ್ವತ ಲೋಕಲ್ಲಿ ವೈಜ್ಞಾನಿಕ ಕತೆಗಳ ಬರವವರಲ್ಲಿ ದೊಡ್ಡ ಹೆಸರು ಮಾಡಿದ್ದವು. ಕನ್ನಡದ ಹೆಚ್ಚಿನ ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಇವರ ವೈಜ್ಞಾನಿಕ ಕತೆಗ ಬಂದುಗೊಂಡಿತ್ತಿದ್ದು. ಮನು ಬರದ ‘ಮಹಾಸಂಪರ್ಕ’ ಈ ಸರ್ತಿಯ ಪರಿಚಯಕ್ಕೆ ಅನು ಅರಿಸಿದ್ದೆ. 2002 ರಲ್ಲಿ ಶುರುವಿಂಗೆ ಇದು ಎರಡು ಸಂಪುಟಲ್ಲಿ ಪ್ರಕಟ ಆಯಿದು. ಇದರ ಪರಿಷ್ಕೃತ ಆವೃತ್ತಿ, (ಎರಡು ಸಂಪುಟಂಗಳ ಸೇರಿಸಿ – ಸಂಯುಕ್ತ ಆವೃತ್ತಿ ) 2009 ರಲ್ಲಿ ಬಂತು.
‘ಮಹಾಸಂಪರ್ಕ’ಪುಸ್ತಕ ಒಂದು ಅಪರೂಪದ ಪುಸ್ತಕ. ಸಾಮಾನ್ಯವಾಗಿ ಇಪ್ಪ ಪುಸ್ತಕಂಗಳ ಪೈಕಿ ವಿಭಿನ್ನವಾಗಿದ್ದು. ಓದಲೆ ತುಂಬಾ ಕುತೂಹಲಕಾರಿಯಾಗಿದ್ದು ಅಲ್ಲದ್ದೆ ಲೇಖಕ ಇದರಲ್ಲಿ ಮಾಡಿದ ಪ್ರತಿಪಾದನೆ ದಿಗ್ಭ್ರಮೆ ಮೂಡುಸುತ್ತು. ಇದಕ್ಕೆ ಬೇಕಾಗಿ ಲೇಖಕ ಜ್ಯೋತಿರ್ವಿಜ್ಞಾನ, ಭೂವಿಜ್ಞಾನ,ಭೌತಶಾಸ್ತ್ರ, ವಿಶ್ವಸೃಷ್ಟಿಜ್ಞಾನ, ಭಾರತೀಯ ಪುರಾತತ್ವ ಇತ್ಯಾದಿಗಳ ಆಳವಾಗಿ ಅಭ್ಯಾಸ ಮಾಡಿ ತರ್ಕ ಮಾಡುತ್ತವು.ಸುಮಾರು ಐದು ಸಾವಿರ ವರ್ಷಂಗಳ ಹಿಂದೆ ಬೇರೊಂದು ತಾರಾಲೋಕದವು ಭರತಖಂಡದವರ ಒಟ್ಟಿಂಗೆ ಸಂಪರ್ಕ ಬೆಳೆಸಿತ್ತಿದ್ದವು ಹೇಳುವ ಪ್ರತಿಪಾದನೆಯ ಲೇಖಕ ಈ ಗ್ರಂಥಲ್ಲಿ ಮಾಡಿದ್ದವು.ಇದು ಮಹಾಭಾರತದ ಸಮಕಾಲೀನಲ್ಲಿ ನಡದ್ದದು ಹೇಳುವ ಅಭಿಪ್ರಾಯ ಲೇಖಕಂದು. ಆಕಾಶನೌಕೆಲಿ ಬಂದಿಳಿದ ತಾರಾಲೋಕದವು ಆ ಕಾಲದವರಂದ ಹೆಚ್ಚು ಬುದ್ದಿವಂತರಾಗಿತ್ತಿದ್ದವು, ಅಲ್ಲದ್ದೆ ಇಲ್ಲಿತ್ತಿದ್ದವಕ್ಕೆ ಋಗ್ವೇದವ ಕಲಿಸಿದವು.ಸಂಸ್ಕೃತ ಭಾಷೆಯನ್ನೂ ಕಲಿಸಿಕೊಟ್ಟವು. ಇದರ ಹೆಜ್ಜೆ ಗುರುತುಗಳ ದೀರ್ಘವಾಗಿ ಆಲೋಚನೆ ಮಾಡಿಗೊಂದು ಋಗ್ವೇದದ ಋಕ್ಕುಗಳಲ್ಲಿ ಹುಡುಕುತ್ತವು. ಹಿಂಗೆ ಬೇರೆ ತಾರಾಲೋಕಂದ ಬಂದು ಭೂಮಿಲಿಪ್ಪ ಜೆನಂಗಳ ಸಂಪರ್ಕ ಸಾಧಿಸಿ ವಾಪಾಸು ತಮ್ಮ ಲೋಕಕ್ಕೆ ಮರಳಿ ಹೋವುತ್ತವು. ಇಂಥದ್ದೊಂದು ಅದ್ಭುತ ಕಲ್ಪನೆಯ ವಿವರಣೆ ‘ಮಹಾಸಂಪರ್ಕ’ಲ್ಲಿ ಇಪ್ಪದು. !
ಪ್ರೊ.ಎಸ. ಕೆ.ರಾಮಚಂದ್ರ ರಾವ್ ಈ ಪುಸ್ತಕಕ್ಕೆ ಮುನ್ನುಡಿ ಬರದ್ದವು. ಮುನ್ನುಡಿಯ ಕೆಲವು ಭಾಗಂಗಳ ಇಲ್ಲಿ ಪ್ರಸ್ತುತ ಪಡಿಸುದು ಎನಗೆ ಅವಶ್ಯಕ ಕಾಣುತ್ತು.:
ಲೇಖಕರು ಈ ಕಾಲಗಳಲ್ಲಿ ಸತ್ಯ ಎಂದು ನಿರ್ಧಾರವಾಗಿರುವ ತತ್ವಗಳಾದ ಮಹಾಸ್ಪೋಟ(ಬಿಗ್ ಬ್ಯಾಂಗ್),ಮಾನವನ ಹೆಜ್ಜೆ ಗುರುತುಗಳು, ಭೂಮಿಯ ಸರಿಯುವಿಕೆ( ಗೊಂಡ್ವಾನಾ),ಮಾನವ ಜನಾಂಗೀಯ ಅನುವಂಶಿಕ ಗುಣಗಳ ಅಧ್ಯಯನ, ನಿರಂತರವಾಗಿ ಹಿಗ್ಗುತ್ತಿರುವ ವಿಶ್ವ, ಇದ್ದಕ್ಕಿಂದ್ದಂತೆ ಅಭಿವೃದ್ದಿ ಪಡೆದ ಅಥವಾ ನಾಶವಾದ ನಾಗರಿಕತೆಗಳು, ದೆಹಲಿಯಲ್ಲಿರುವ ಕುತುಬ್ ಮಿನಾರಿನ ಅನನ್ಯ ಗುಣ, ಸಂಸ್ಕೃತದ ಅತ್ಯುತ್ತಮ ಮಟ್ಟದ ಭಾಷಾ ಕೌತುಕ ಇತ್ಯಾದಿಗಳ ಆಧಾರದ ಮೇಲೆ ತಮ್ಮ ವಾದವನ್ನು ಮಂಡಿಸುತ್ತಾರೆ. ಇಂದು ಬಹುಚರ್ಚಿತವಾದ ಸರಸ್ವತಿ ನದಿ ಹಾಗೂ ಅದರ ಬಗ್ಗೆ ಋಗ್ವೇದದಲ್ಲಿ ಉಲ್ಲೇಖ, ಇದರಿಂದ ಋಗ್ವೇದ ಕಾಲದಲ್ಲಿ ಸರಸ್ವತಿ- ದ್ರಷದ್ವತಿ ನದಿಗಳು ಇದ್ದವೆಂಬುದನ್ನು ಅವರು ಸರಿಯಾಗಿ ನಿರೂಪಿಸುತ್ತಾರೆ.
ಹಿಂಗೆ ಮುಂದುವರುಕ್ಕೊಂಡು : ಇದೊಂದು ಪ್ರಚೋದನಕಾರಿ ಆಲೋಚನೆ.ಇದು ಸತ್ಯವಿರಬಹುದು, ಇಲ್ಲದಿರಬಹುದು. ಇಲ್ಲಿಯವರೆಗೆ ಆಯಾ ಕ್ಷೇತ್ರಗಳಲ್ಲಿ ಸಂಶೋಧಕರು ಕಲೆಹಾಕಿರುವ ತತ್ವಗಳ, ತಥ್ಯಗಳ ಆಧಾರದ ಮೇಲೆ ಈ ವಾದವನ್ನು ಪುಷ್ಟೀಕರಿಸಲು ಬರುವುದಿಲ್ಲ. ಇದು ಅಸಾಧ್ಯ, ಕೇವಲ ಕಾಲ್ಪನಿಕ ಎಂದು ಪಕ್ಕಕ್ಕೆ ತಳ್ಳಿಹಾಕಲೂ ಬರುವುದಿಲ್ಲ……………
ಲೇಖಕರು ವೇದವನ್ನು ಬೇರೊಂದು ತಾರಾಲೋಕದ ಜನರು ತಂದಿತ್ತರು ಎಂದು ಹೇಳುವಾಗ, ನನಗೆ ಅನ್ನಿಸುವುದು ವೇದದ ಸ್ರೋತ ನಮ್ಮ ಅಂತರ್ಯವೇ ಆಗಿದ್ದು, ಸಾಮಾನ್ಯ ಜನರಿಗೆ ಇದು ಹೊರ ಜಗತ್ತಿನಷ್ಟೇ ವಿಶಿಷ್ಟವಾಗಿತ್ತು. ವೇದವನ್ನು ಅಪೌರುಷೇಯ ಎಂದು ಹೇಳುವಾಗ ಇದೇ ಅರ್ಥವನ್ನು ನಾವು ಸೂಚಿಸುತ್ತೇವೆ. ಋಷಿ ಮುನಿಗಳ ದರ್ಶನದಿಂದ, ಭಗವಂತನ ಕ್ರಪೆಯಿಂದ, ತಪಸ್ಸಿನಿಂದ ಸಾಧಾರಣ ಇಂದ್ರಿಯಗಳಿಂದ ಕಾಣಲಾಗದ, ಬುದ್ಧಿಯಿಂದ ಅರಿಯಲಾಗದ, ತರ್ಕದಿಂದ ತಿಳಿಯಲಾಗದ ಇದನ್ನು ‘ನೋಡ’ಬಲ್ಲವರಾಗಿದ್ದರು. ಹಾಗಾಗಿ ಇದು ಹಾಗೆ ‘ನೋಡಬಲ್ಲ’ ಋಷಿ ಮುನಿವರರ ಇಚ್ಚೆಯಾದಾಗ ನಡೆಸುವ ಕಾರ್ಯಕ್ಷೇತ್ರವಾಗಿತ್ತು. ಈ ಋಷಿಗಳು ಸಾಧಾರಣ ಮನುಷ್ಯರಾಗಿರಲಿಲ್ಲ. ಅಸಾಧಾರಣ ದೃಷ್ಟಿ ಅವರಲ್ಲಿತ್ತು. ಇಂತಹ ದ್ರಷ್ಟಾರರೆ ಈ ಲೇಖಕರು ಹೇಳಿರುವ ಹೊರಲೋಕದಿಂದ ಬಂದ ಬುದ್ಧಿವಂತ ಜನಾಂಗವಿರಬಹುದೇ ?
ಲೇಖಕ° ಇದರಲ್ಲಿ ಪ್ರಸ್ತುತ ಪಡಿಸಿದ ಮಾತುಗೊ ಮೂರು ಭದ್ರ ಬುನಾದಿಯ ಅಧಾರಲ್ಲಿ ಇದ್ದು ಹೇಳಿ ಮುನ್ನುಡಿಲಿ ಗುರುತಿಸಿದ್ದವು. 1.ವೇದವ ಪದಶಃ ಅರ್ಥ ಮಾಡುಲೆ ಪ್ರಯತ್ನುಸುದು ತಪ್ಪು ಗ್ರಹಿಕೆಗೆ ಕಾರಣ ಆವುತ್ತು. 2. ವೇದದ ಋಕ್ ಲಿ ಸಾಂಕೇತಿಕ ಅರ್ಥವ ಯಥೇಚ್ಚವಾಗಿ ಉಪಯೋಗಿಸಿದ್ದು. 3. ಋಷಿ ಮುನಿಗೋ ಮುಂದಾಣ ಪೀಳಿಗೆಗೆ ವೇದದ ಸಂಕೇತವ ಬಿಡುಸುಲೇ ಅವಕಾಶ ಕೊಟ್ಟಿದವು. ಸಾಕಷ್ಟು ಟಿಪ್ಪಣಿ , ಹಿನ್ನುಡಿಗಳೊಂದಿಗೆ ಈ ಗ್ರಂಥ ಒಂದು ಅಭ್ಯಾಸಯೋಗ್ಯವಾಗಿದ್ದು. ವಿಶ್ವದ ಉದಯ, ಮನುಷ್ಯನ ಅವತಾರ, ನಾಗರಿಕತೆಯ ಉದಯ ಹೀಂಗೆ ಇಲ್ಲಿ ಬಪ್ಪ ಮಹತ್ತರ ವಿಷಯಂಗೋ ನಮ್ಮ ಚಿಂತನೆಗೆ ಒಳಪಡುಸುತ್ತು. ಭೂಮಿಯ ಮೇಲೆ ಮಾನವನ ಉದ್ಭವ, ಬೆಳೆವಣಿಗೆ ಇದಕ್ಕೆ ಇಲ್ಲಿ ಸಿಕ್ಕುವ ಉತ್ತರ ಕಾಲ್ಪನಿಕ ಹೇಳಿ ಕಂಡರೂ ಅವು ಅನೇಕ ತಥ್ಯಂಗಳ ಆಧಾರಂದ ಬಯಿಂದು.
‘ಮಹಾಸಂಪರ್ಕ’ದ ವಸ್ತು ವಿಷಯವ ಸಂಕ್ಷಿಪ್ತಲ್ಲಿ ಹೇಳುವ ಪ್ರಯತ್ನ ಮಾಡುತ್ತೆ. – ಸುಮಾರು ಐದು ಸಾವಿರ ವರ್ಷಕ್ಕೆ ಮದಲು, ಈ ಭೂಮಿಯ ಮೇಲೆ ಬೇರೆ ಗ್ರಹಂದ ಒಂದು ದೊಡ್ಡ ಆಕಾಶನೌಕೆಲಿ ಅರುವತ್ತಕ್ಕೂ ಹೆಚ್ಚು ಜೆನಂಗೊ ಹಿಮಲಯದ ತಪ್ಪಲಿಲಿ ಬಂದು ಇಳಿತ್ತವು. ವ್ಯಾಸ(ಮಹರ್ಷಿ) ಇವರ ನಾಯಕ ಆಗಿತ್ತಿದ್ದ. ಇವು ಬುದ್ಧಿಮತ್ತೆಲಿ, ಶ್ರೇಷ್ಠರಾಗಿತ್ತಿದ್ದವು, ಪ್ರಾಜ್ಞರಾಗಿತ್ತಿದ್ದವು. ಸ್ತಳೀಯ ಜೆನಂಗೊ ಇವರ ಆಕಾರ, ಲಕ್ಷಣ, ದಿರುಸು, ಅತಿಮಾನುಷ ಶಕ್ತಿ, ವಿಶೇಷವಾದ ಜ್ಞಾನವ ಕಂಡು “ದೇವರು’ ಹೇಳಿ ತಿಳ್ಕೊಂಡವು. ಇಲ್ಯಾಣ ಜೆನಂಗಳ ಒಟ್ಟಿಂಗೆ ಸೇರಿಗೊಂಡು ಹಲವು ವೈಜ್ಞಾನಿಕ,ಜೈವಿಕ, ತಾಂತ್ರಿಕ ಸಂಶೋಧನೆಗಳ ಮಾಡಿದವು. ತಮ್ಮ ದೇವರು ಹೇಳಿ ತಿಳ್ಕೊಂಡ ಜನರ ಉದ್ಧಾರ ಮಾಡುವ ಕೆಲಸವನ್ನೂ ಮಾಡಿದವು. ತಮಗೆ ಗೊಂತಿಪ್ಪ ವಿಷಯಂಗಳ ಸಣ್ಣ ಪ್ರಾಯದ ವಿದ್ಯಾರ್ಥಿಗೊಕ್ಕೆ ಆಶ್ರಮ ವಿಧ್ಯಾಭ್ಯಾಸದ ಮೂಲಕ ಕಲುಸುತ್ತವು. ಇಂಥಾ ಪ್ರಬುದ್ಧ ಜ್ಞಾನವ ಸುಲಭಲ್ಲಿ ಮನನ ಮಾಡಿ ನೆಂಪು ಮಡಿಕ್ಕೊಂಬಲೆ ಬೇಕಾಗಿ ಶ್ಲೋಕ ರೂಪಲ್ಲಿ ಬಾಯಿಪಾಠ ಮಾಡುಸುತ್ತವು.ಇದುವೇ ಇಂದ್ರಾಣ ಸಂಸ್ಕ್ರತದ ಋಗ್ವೇದ ಗ್ರಂಥ. ಬೇರೊಂದು ಗ್ರಹಂದ ಬಂದ “ದೇವರ” ಸ್ರಷ್ಟಿ ಆದ ಕಾರಣ ಇದು ‘ಅಪೌರುಷೇಯ’ ಆತು. ಇದರ ಭಾಷೆ ಸಂಸ್ಕ್ರತ – ‘ದೇವಭಾಷೆ’ ಆತು. ಇದೇ ಸಮಯಲ್ಲಿ, ಆಕಾಶನೌಕೆಲಿ ಒಟ್ಟಿಂಗೆ ಬಂದ ಸ್ತ್ರೀ, ಒಂದು ಮಾಣಿಗೆ ಜನ್ಮ ಕೊಡುತ್ತು. ಈ ಶಿಶುವೇ ಮಹಾಭಾರತದ ‘ಶ್ರೀಕ್ರಷ್ಣ’. ಈ ಪ್ರಾಜ್ಞರು ಭೂಮಿಯ ಮೇಲೆ ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲ ಇಪ್ಪಲ್ಲಿವರೆಗೆ, ಇಲ್ಯಾಣ ಜೆನಂಗಳ ಒಟ್ಟಿಂಗೆ ಭೌತಿಕವಾಗಿಯೂ, ಬೌದ್ಧಿಕವಾಗಿಯೂ ಸೇರಿಗೊಂಡು ಹಲವು ಪ್ರಯೋಗಂಗಳ ಮಾಡಿ, ತಾವು ತಿಳ್ಕೊಂಡ ವಿಶೇಷ ಜ್ಞಾನವ ಜೆನಂಗೊಕ್ಕೆ ಹಂಚಿ, ತಮ್ಮ ಗ್ರಹಕ್ಕೆ ವಾಪಾಸು ಹೋವುತ್ತವು. ಮಹಾಭಾರತದ ಕಾಲಲ್ಲಿ ಈ ಸಂಪರ್ಕ ನಡದ್ದದು ಹೇಳುವ ಪ್ರತಿಪಾದನೆಯ ಲೇಖಕ ಮಾಡಿದ್ದವು. ಮಹಾಭಾರತದ ಪೂರ್ಣ ಕತೆಯ ‘ಮಹಾಪ್ರಸ್ತಾನ’ ದ ವರೆಗೆ ವೈಜ್ಞಾನಿಕವಗಿ ವಿಶ್ಲೇಸಿದ್ದವು..
‘ಮನು’ ಈ ವಾದವ ತುಂಬ ಬುದ್ಧಿವಂತಿಕೆ ಉಪಯೊಗಿಸಿ ಪ್ರತಿಪಾದನೆ ಮಾಡಿದ್ದವು. ಪುರಾತತ್ವ ವಿಷಯಂಗಳ ಅಧ್ಯಯನ ಮಾಡಿ, ಅದರಲ್ಲಿ ಸಿಕ್ಕಿದ ಸೂಕ್ಷ್ಮ ಸುಳಿವಿನ ಪತ್ತೆ ಹಚ್ಚಿ, ವಿಷ್ಲೇಶಿಸಿದ್ದವು. ಬೇರೆ ತಾರ ಲೋಕದವು ಆಕಾಶನೌಕೆಲಿ ಬಂದು, ಹಿಮಾಲಯದ ತಪ್ಪಲಿಲಿ ಇಳುದು, ಒಂದು ಶತಮಾನಕ್ಕೂ ಹೆಚ್ಚಿಗೆ ಸಮಯ ಭೂಮಿಲಿ ಇದ್ದು, ಅದೇ ಆಕಶನೌಕೆಲಿ ವಾಪಸು ಹೋಪ ಕಲ್ಪನೆಯ ನಂಬುಲೆ ಘಟ್ಟಿ ಪುರಾವೆಗೊ ಇದರಲ್ಲಿ ಸಿಕ್ಕದ್ದರೂ, ಇಂಥದ್ದೊಂದು ಕಲ್ಪನೆ ವಿಚಾರ ಯೋಗ್ಯ ಅಪ್ಪು. ಹಾಂಗಾಗಿಯೆ ಇದೊಂದು ಆಪರೂಪದ ಪುಸ್ತಕ.
ಕೊಡೆಯಾಲಲ್ಲಿ ಸಿಕ್ಕುಗೊ ಹೇಳಿ ವಿಚಾರ್ಸೆಕ್ಕಷ್ಟೆ, ಎನಗೆ ಗೊಂತಿಲ್ಲೆ, . ಬೆಂಗ್ಳೂರಿಲಿ ಸಪ್ನಲ್ಲಿ ಸಿಕ್ಕುತ್ತು.
ಈ ಪುಸ್ತಕ ಎನಗೆ ಬೇಕಿತ್ತು… ಎಲ್ಲಿ ಸಿಕ್ಕುತ್ತು? ಕೊಡೆಯಾಲದ ಅಶೋಕ ವರ್ಧನನ ಬುಕ್ ಸೆಂಟರ್ ಲಿ ಸಿಕ್ಕುಗಾ?
ಮನು ಬರೆದ ಕತೆ ಕಾದಂಬರಿಗೊ ಲಾಯ್ಕ ಇರುತ್ತು.ಅವರ ಈ ಪುಸ್ತಕ ಓದೆಕ್ಕಷ್ಟೆ.
ಪುಸ್ತಕದ ಹೆಸರು ಕೇಳಿತ್ತಿದ್ದೆ. ಕುಮಾರಣ್ಣ ಕೊಟ್ಟ ಪರಿಚಯ ವಿವರಣೆಗಳಿಂದಾಗಿ ಇದರ ಓದೆಕ್ಕು ಹೇಳುವ ಆಸಕ್ತಿ ಬತ್ತಾ ಇದ್ದು
ಅಪರೂಪದ ವಸ್ತು ಇಪ್ಪ ಪುಸ್ತಕವ ಬೈಲಿಂಗೆ “ಸಂಪರ್ಕ” ಮಾಡುಸಿದ ತೆಕ್ಕುಂಜೆ ಕುಮಾರಣ್ಣಂಗೆ ವಂದನೆಗೊ.
ಈ ಪುಸ್ತಕ ಓದಲೆ ಇಷ್ಟರ ಒರೆಂಗೆ ಆಯಿದಿಲ್ಲೆ. ಬೈಲಿಲಿ ಸಿಕ್ಕಿರೆ ಓದೇಕು ಹೇಳಿ ಇದ್ದು.
ಹೇಳಿದಾಂಗೆ,
{ ಸಂಸ್ಕೃತದ ಅತ್ಯುತ್ತಮ ಮಟ್ಟದ ಭಾಷಾ ಕೌತುಕ }
ಈ ಬಗ್ಗೆ ಎಂತ ಇದ್ದು ಅಲ್ಲಿ? ಭಾಶೆಯ ವಾಕ್ಯರಚನಾ ಶೈಲಿ ಇತ್ಯಾದಿಗಳ ಬಗ್ಗೆ ಹೇಳಿದ್ದವೋ – ಅತವಾ, ಶಬ್ದ-ವ್ಯುತ್ಪತ್ತಿಗಳ ಬಗ್ಗೆ ಹೇಳ್ತವೋ?
ಒಂದರಿ ಬೆಲಿಯಕಿತಾಬು ನೋಡಿ ಹೇಳ್ತಿರೋ?
ಧನ್ಯವಾದ ಒಪ್ಪಣ್ಣ.
ಸಂಸ್ಕೃತ ಭಾಷೆ, ವ್ಯಾಕರಣ, ಶಬ್ದ ವ್ಯುತ್ಪತ್ತಿಗಳ ಬಗ್ಗೆ ಇದರಲ್ಲಿ ಬರದ್ದಿಲ್ಲೆ.