ಸರ್ಪಮಲೆ ಅತ್ತೆಯ ಕೈ ತೋಟ

ಬೈಲಿಂಗೆ ಇಳಿಯದ್ದೆ ತುಂಬ ಸಮಯ ಆತು. ಸೆಕೆ ತಡವಲೆ ಎಡಿಯದ್ದೆ, ಮಳೆ ಬರಲಿ, ಮಳೆ ಬಂದು ತಂಪಾಗಲಿ ಹೇಳಿ ಕಾದ್ದದು.

ಮಳೆ ಬಂತು, ಮಾರ್ಗ ಹೊಂಡ ಬೀಳ್ಳೆ ಸುರು ಆತು!
ಮಾಣಿಂದ ಪುತ್ತೂರು ಹೊಡೇಂಗೆ ಹೋಯೆಕ್ಕಾರೆ ಮಳೆ ಬಪ್ಪಂದ ಮದಲೆ ಮೂಗಿಂಗೆ ಬಾಯಿಗೆ ಮಾಸ್ಕ್ ಹೇಳ್ತ ವಸ್ತ್ರವ ಕಟ್ಟೆಗಾಗಿತ್ತು, ಈಗ ಅದು ಬೇಕು ಹೇಳಿ ಇಲ್ಲೆ; ಆದರೆ ಮಾರ್ಗ ಇಲ್ಲೆ, ಕೆಸರು ಗೆದ್ದೆಲೇ ಹೋಪದು!

ಮದುವೆಗೊ, ಎಂತಾರು ಜೆಂಬ್ರಕ್ಕೊ ಮಣ್ಣ ಪಟ್ಟೆ ಸೀರೆ ಸುತ್ತೆಂಡು ಹೆರಟ ಹೆಮ್ಮಕ್ಕೊ, ವೇಷ್ಟಿ ಸುತ್ತಿ, ಬೆಳಿ ಅಂಗಿ, ಶಾಲು ಹಾಕೆಂಡು ಹೆರಟ ಗೆಂಡು ಮಕ್ಕೊ ಮಣ್ಣ ಆದರೆ ಅವರ ಅವಸ್ಥೆ ಹೇಳೊದೇ ಬೇಡ.

ಬೈಕಿಲ್ಲಿ ಹೋದರೆ ಕೆಸರಿನ ಅಭಿಷೇಕ – ಬೈಕಿಂಗೂ, ಅದಲ್ಲಿ ಕೂದವಕ್ಕೂ!!
ಕಾರಿಲ್ಲಿ ಹೋದರೆ ಕಾರಿಂಗೆ ಅಭಿಷೇಕ – ಗ್ಲಾಸು ಮುಚ್ಚದ್ದರೆ ಒಳ ಕೂದವಕ್ಕೂ!!
ಬಸ್ಸಿಲ್ಲಿ ಹೋಪ° ಹೇಳಿದರೆ, ಬಸ್ಸು ಎಲ್ಲಿ ಹುಗಿತ್ತೋ, ಮೊಗಚ್ಚುತ್ತೋ ಹೇಳುವ ಹೆದರಿಕೆ!!
ಅಂತೂ ಪುತ್ತೂರು ಹೊಡೇಂಗೆ ಹೋಗದ್ದೆ ಕೆಲಾವು ದಿನ ಆತು.

ನಿನ್ನೆಂದ ಮಳೆ ರಜ ಕಮ್ಮಿ ಆಯಿದು; ರಜ ಬೆಳಿಕ್ರಿ ಕಾಣುತ್ತು.
ಸರ್ಪಮಲೆಮಾವಂಗೆ ಮನೆಲೇ ಕೂದು ಬೇಜಾರಪ್ಪಲೆ ಸುರು ಆತು; ಮನೆಲಿ ಕೆಲಸ ಇದ್ದರೂ, ಮಾಡ್ಳೆ ಅರಡಿಯ; ಅರಡಿತ್ತರೂ, ಮನೆ ಕೆಲಸ ಮಾಡಿ ಅಬ್ಯಾಸ ಇಲ್ಲೆ; ಅಬ್ಯಾಸ ಇದ್ದರೂ, ಮಾಡ್ಳೆ ಉದಾಸೀನ ಬಿಡುತ್ತಿಲ್ಲೆ, ಮನಸ್ಸೂ ಇಲ್ಲೆ.

ಆದರೆ ಸರ್ಪಮಲೆ ಅತ್ತೆ ಹಾಂಗಲ್ಲ; ಒಂದುನಿಮಿಷ ಸುಮ್ಮನೆ ಕೂರ, ಏನಾರು ಕೆಲಸ ಮಾಡ್ಯೊಂಡೇ ಇಕ್ಕು- ಮನೆ ಒಳವೂ, ಹೆರವೂ.
ಮಾವ° ಅತ್ತೆಯ ಕೆಲಸಂಗೊಕ್ಕೆ ಸಕಾಯ ಮಾಡ್ಳೆ ಹೋಗವು; ಹೋದರೆ ಅತ್ತಗೆ ಸರಿಯೂ ಆಗ; ಅದು ಉಪದ್ರವೇ ಅಕ್ಕು.
ಪೇಟೆ ಮನೆ ಆದರೂ ಮನೆಯ ಎದುರ ರಜೆ ಜಾಗೆ ಇದ್ದ ಕಾರಣ,- ಅತ್ತಗೆ ಕೈಕಾಲು ಎಡಿಯದ್ದರೂ,- ಸುಮ್ಮನೆ ಕೂಬಲೆ ಅರಡಿಯ.

ಒಂದು ಸಣ್ಣ ಕೈ ತೋಟ (ಪೇಟೆಯವು ಕಿಚ್ಚನ್ ಗಾರ್ಡನ್ ಹೇಳ್ತವು) ಮಾಡಿದ್ದು.
ಇಂದು ಸುಮ್ಮನೆ ಕೂದೊಂಡಿಪ್ಪಗ ಕಟ್ಟಿ ಮಡಿಗಿದ ಕೆಮರ ನೆಂಪಾತು ನವಗೆ. ಹಾಂಗೆ ಕೆಮರ ತೆಕ್ಕೊಂಡು ಹೆರ ಬಂದೆ.
ಸರ್ಪಮಲೆ ಅತ್ತೆಯ ಕೈ ತೋಟದ ಕೆಲವು ಪಟಂಗಳ ಇಲ್ಲಿ ನೇಲುಸಿದ್ದೆ:

ಸರ್ಪಮಲೆ ಮಾವ°

   

You may also like...

39 Responses

 1. Gopalakrishna BHAT S.K. says:

  ತೋಟ ಲಾಯಿಕಿದ್ದು.

 2. ಕೆ.ಜಿ.ಭಟ್ says:

  ಮಾವಿನ ಹಣ್ಣು ಹೇಳ್ತ ಪಟಲ್ಲಿ ಜೀಗುಜ್ಜೆಯುದೇ ಬಾಳೆಯುದೇ ಬಿಟ್ರೆ ಒಂದು ಸಣ್ಣ ಮಾವಿನ ಕಾಯಿ ಕಾಣ್ತಷ್ಟೆನ್ನೇ…………..

  • ಸರ್ಪಮಲೆ ಮಾವ says:

   ಒಪ್ಪಕ್ಕೆ ಧನ್ಯವಾದ.

   ಒಂದು ಪಟ ಬಿಟ್ಟು ಹೋದ್ದರ ತಿಳಿಶಿದ್ದು ಒಳ್ಳೆದಾತು; ಪ್ರಕಟುಸುವ ಮದಲು ಹೆಚ್ಚು ಜಾಗ್ರತೆ ವಹಿಸೆಕಾತು.

 3. ತೆಕ್ಕುಂಜ ಕುಮಾರ says:

  ಮನ್ನೆ ಪೆಂಗಣ್ಣ, ನೆಗೆಮಾಣಿ, ನಡುಕೆ ಬೋಚಭಾವ ಕೂಡಿಗೊಂಡು ಅದ್ಕತ್ತಿಮಾರು ಮಾವನ ಗೆದ್ದೆಗೆ ಹೋಯಿದವಡ. ಇನ್ನು ಇವು ಸೇರಿ ಉದೆಗಾಲಲ್ಲಿ ಸರ್ಪಮೂಲೆ ತೋಟಕ್ಕೂ ಎತ್ತಿದವೋ ಹೇಂಗೆ ಭಾವಯ್ಯ..ಉಮ್ಮಪ್ಪ..!

 4. ಅನುಶ್ರೀ ಬಂಡಾಡಿ says:

  ಅತ್ತೆಯ ಕೈತೋಟ ಕಂಡು ಕುಶೀ ಆತು. ಮನಸ್ಸಿಂಗೆ ನೆಮ್ಮದಿ ಕೊಡುವ ಒಳ್ಳೆ ಹವ್ಯಾಸ ಇದು.

  • ಸರ್ಪಮಲೆ ಮಾವ says:

   ಒಪ್ಪಕ್ಕೆ ಧನ್ಯವಾದ.

   ಅನುಶ್ರೀಯ ಮಾತು ಅತ್ತಗೆ ಕುಶಿ ಆತು!

 5. ಮನೆಯ ಸುತ್ತಲೂ ಹಸುರು ತು೦ಬಿಗೊ೦ಡಿದ್ದರೆ ಮನಸ್ಸೂ ಹಸುರಾಗಿರ್ತು ಹೇಳುವ ಮಾತು ಸತ್ಯ. ಸರ್ಪಮಲೆ ಅತ್ತೆಯ ಪರಿಶ್ರಮ ಸಾರ್ಥಕ ಆಯಿದು.ವ೦ದನೆ,ಅಭಿನ೦ದನೆ.
  ಮಾವಾ,ನಿ೦ಗಳ ಮನೆ ಮೇರಿಹಿಲ್ ಹತ್ತರೆ ಗುರುನಗರಲ್ಲಿ ಅಲ್ಲದೊ? ಅಲ್ಲಿ ಮ೦ಗನ ಉಪದ್ರ ಇಲ್ಲದ್ದರೂ ನಮ್ಮ ಪೆ೦ಗಣ್ಣನ ಉಪದ್ರ ಇಕ್ಕು ಹೇಳಿ ಬೋಚ ಉವಾಚ..

  • ಸರ್ಪಮಲೆ ಮಾವ says:

   ಒಪ್ಪಕ್ಕೆ ಧನ್ಯವಾದ.

   ಅಪ್ಪು ರಘು, ಇಪ್ಪದು ಗುರುನಗರಲ್ಲೆ.

   ಮಂಗಂಗಳ ಉಪದ್ರ ಇಲ್ಲೆ; ಪೆಂಗಂಗಳ ಉಪದ್ರವೂ ಇಲ್ಲೆ!

   ಬೋಚ, ನೆಗೆ, ಅರ್ಗೆಂಟುಗಳ ಕರಕ್ಕೊಂಡು ಬತ್ತೆ ಹೇಳಿದ ಪೆಂಗನ ಕಾಣುತ್ತಿಲ್ಲೆನ್ನೆ!

   ದಾರಿ ತಪ್ಪಿತ್ತೋ ಏನೊ?

 6. ತೋಟ ನೋಡಿ ಖುಶಿ ಆತು ಮಾವ ಚೆ೦ದ ಇದ್ದು ತೋಟ..

 7. Ramesh Bhat B says:

  Congrates for your effort.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *