ಸೋಮೇಶ್ವರ ಶತಕಕ್ಕೆ ಸಂಬಂಧಿಸಿ ಮೂರು ಕಥೆಗೊ

ಮೊದಲಾಣ ವಾರ ಕೊಟ್ಟ ಸೋಮೇಶ್ವರ ಶತಕಲ್ಲಿ ಕೆಲವೊಂದು ಪೌರಾಣಿಕ ಕತೆಗೊಕ್ಕೆ ಸಂಬಂಧ ಇದ್ದು. ಇದರ ಬಗ್ಗೆ ವಿವರ ಕೇಳಿ ಒಪ್ಪ ಕೊಟ್ಟಿದವು ಬಾಲ ಮಧುರ ಕಾನನ, ರಘು ಮುಳಿಯ.

ಕನ್ನಡ ಸಾಹಿತ್ಯ ಪರಿಷತ್ ಪ್ರಕಟ ಮಾಡಿದ “ಸೋಮೇಶ್ವರ ಶತಕ” ಪುಸ್ತಕಲ್ಲಿ ಇದರ ಬಗ್ಗೆ ವಿವರ ಕೊಟ್ಟದರ ಆನಿಲ್ಲಿ ಪ್ರಸ್ತುತ ಪಡುಸುತ್ತೆ

ಶೂದ್ರಕನ ಕಥೆ

ಪೂರ್ಣ ಕುಂಭ ಹೇಳ್ತ ರಾಜನ ಮಗ ಶೂದ್ರಕ°. ಅವಂಗೆ ಕಾಲ ಜ್ಞಾನಿಯೊಬ್ಬ “ನಿನ್ನ ತಲೆಯ ಕಂಚವಾಳ ಮರಕ್ಕೆ ಕಟ್ಟಲಿದ್ದು ಮುಂದಕ್ಕೆ” ಹೇಳಿ ಭವಿಷ್ಯ ಹೇಳ್ತ. ಶೂದ್ರಕಂಗೆ ಈ ಮಾತು ಅಷ್ಟೊಂದು ಪ್ರಾಮುಖ್ಯ ಹೇಳಿ ಕಂಡಿದಿಲ್ಲೆ.
ಹೀಂಗಿಪ್ಪ ಒಂದು ದಿನ, ಒಬ್ಬ ಆಚಾರ್ಯ ಶಿಷ್ಯಂಗೆ ಶಾಸ್ತ್ರಪಾಠ ಹೇಳಿಕೊಡುವದರ ನೋಡಿ ತನಗೂ ಹೇಳಿ ಕೊಡಿ ಹೇಳಿ ಹಾಸ್ಯಂದ ಕೇಳಿಗೊಂಡ. ಅದಕ್ಕೆ ಆಚಾರ್ಯ “ಗಂಗೆಲಿ ತೇಲಿ ಬಪ್ಪ ಒಂದು ಹೆಣ ನಿನಗೆ ಬೋಧಿಸುಗು” ಹೇಳಿ ಹೇಳ್ತ°.
ಶೂದ್ರಕ ಗಂಗೆಯ ಕರೆಲಿ ಕಾದುಕೂದೊಂಡಿಪ್ಪ ಒಂದು ದಿನ, ಆಚಾರ್ಯ ಹೇಳಿದ ಹಾಂಗೇ, ಹೆಣ ತೇಲಿಂಡು ಬಂದು ಕಾಲ ಜ್ಞಾನಿ ಹೇಳಿದ ಅದೇ ಮಾತಿನ ಹೇಳಿತ್ತು. ಶೂದ್ರಕಂಗೆ ಆಶ್ಚರ್ಯ ಆಗಿ ಆನಿನ್ನು ಇಲ್ಲಿಯೇ ಮುಕ್ತಿ ಪಡವದು ಹೇಳಿ ತನ್ನ ಮೊಳಕಾಲಿನ ಚಿಪ್ಪಿನ ತೆಗದು ಹೆಳವನಾಗಿ ಕಾಶಿಲಿಯೇ ನಿಲ್ಲುತ್ತ°.
ಹೀಂಗಿಪ್ಪ ಒಂದು ದಿನ ವಿಧಿ, ಮನುಷ್ಯನ ರೂಪಲ್ಲಿ ಅವ° ಇಪ್ಪಲ್ಲಿಗೆ ತುಂಟ ಕುದುರೆಯ ಸವಾರಿ ಮಾಡಿಂಡು ಬತ್ತ°..ವೀರನಾದ ಶೂದ್ರಕಂಗೆ ಇದರ ಪಳಗುಸೆಕ್ಕು ಹೇಳಿ ಅನಿಸಿ ಕುದುರೆ ಹತ್ತುತ್ತ°. ಆ ಕುದುರೆ ಇವನ ದೂರಕೆ ಕರಕ್ಕೊಂಡು ಹೋಗಿ ಒಂದು ಕಂಚವಾಳದ ಮರದ ಬುಡಲ್ಲಿ ಬೀಳುಸಿಕ್ಕಿ ಹೋವುತ್ತು.
ಇದೇ ಸಮಯಕ್ಕೆ ಸರಿಯಾಗಿ ಕೆಲವು ಜೆನ ಕಳ್ಳರು ಅದೇ ದಾರಿಲಿ ಬತ್ತವು. ಅವು ಅರಮನೆಲಿ ಕದ್ದ ಮುತ್ತು, ಮಾಣಿಕ್ಯವ ರೆಜ ಇವನ ಹತ್ರೆ ಇಡ್ಕಿಕ್ಕಿ ಹೋವ್ತವು. ರಾಜ ಭಟರು ಶೂದ್ರಕನ ನೋಡಿ ಇವನೇ ಕಳ್ಳ ಹೇಳಿ ನಿಶ್ಚಯ ಮಾಡಿ ರಾಜನಲ್ಲಿಗೆ ಕರಕ್ಕೊಂಡು ಹೋವ್ತವು. ಹೆಳವನಾದ ನೀನು ಕಳ್ಳತನ ಹೇಂಗೆ ಮಾಡಿದೆ ಹೇಳಿ ರಾಜ ಕೇಳಿ ಅಪ್ಪಗ ಶೂದ್ರಕ ತನ್ನ ಕತೆಯ ಹೇಳಿಕ್ಕಿ, ಎನ್ನ ತಲೆಯ ಕಂಚವಾಳ ಮರಕ್ಕೆ ಕಟ್ಟೆಕ್ಕು ಹೇಳ್ತ ವಿಧಿಯೇ ಎನ್ನ ಇಲ್ಲಿಗೆ ತಂದದು ಹೇಳಿ ಹೇಳ್ತ°.
ರಾಜಂಗೆ ಅರ್ಥ ಆವ್ತು. ಶೂದ್ರಕನ ತಲೆಯ ಮೇಗೆ ಒಂದು ಮಯಣದ ಗೊಂಬೆ ಮಡುಗಿ ಅದರ ತಲೆಯ ಹೊಡದು ಉರುಳುಸಲೆ ರಾಜ ಆಜ್ಞೆ ಮಾಡ್ತ. ಆದರೆ ಇದಕ್ಕೆ ನೇಮಿಸಿದ ಕಟುಕ, ಶೂದ್ರಕನ ತಲೆಯನ್ನೇ ಬೊಂಬೆಯ ತಲೆ ಹೇಳಿ ಗ್ರೇಶಿ ಹೊಡೆದು ಉರುಳುಸುತ್ತ°. ವಿಧಿಯ ಮೀರಲೆ ಸಾಧ್ಯ ಇಲ್ಲೆ ಹೇಳ್ತದಕ್ಕೆ, ಸೋಮೇಶ್ವರ ಕವಿ ಇದರ ಉದಾಹರಣೆಯಾಗಿ ತೆಕ್ಕೊಂಡಿದ.

~~**~~
ದ್ರೋಣಾಚಾರ್ಯನ ಕಥೆ.

ಭಾರದ್ವಾಜ ಋಷಿಯ ಮಗನಾದ ದ್ರೋಣಾಚಾರ್ಯನೂ ಪಾಂಚಾಲ ರಾಜನ ಮಗನಾದ ದ್ರುಪದನೂ ಅಗ್ನಿವೇಶ್ಯ ಋಷಿ ಹತ್ರೆ ಒಟ್ಟಿಂಗೆ ಎಲ್ಲಾ ರೀತಿಯ ವಿದ್ಯೆಯ ಕಲಿತ್ತವು. ಅವಿಬ್ರೂ ಸ್ನೇಹಿತರಾಗಿ ಇರ್ತವು. ತಾನು ಅರಸ ಆದಪ್ಪಗ ತನ್ನ ರಾಜ್ಯಲ್ಲಿ ಅರ್ಧ ರಾಜ್ಯವ ದ್ರೋಣಾಚಾರ್ಯಂಗೆ ಕೊಡ್ತೆ ಹೇಳಿ ದ್ರುಪದ ಮಾತು ಕೊಟ್ಟಿರ್ತ. ಆದರೆ ಅವ° ಅರಸ ಆದ ಮತ್ತೆ, ದ್ರೋಣಾಚಾರ್ಯ ತನ್ನ ಮಗಂಗೆ ಕುಡಿವ ಹಾಲಿಂಗೆ ಬೇಕಾಗಿ ಒಂದು ದನವಾದರೂ ತೆಕ್ಕೊಂಡು ಬರೆಕು ಹೇಳಿ ದ್ರುಪದನಲ್ಲಿಗೆ ಹೋವ್ತ. ದ್ರುಪದ ಇವನ ಅವಮಾನ ಮಾಡಿ ಕಳುಸುತ್ತ°.
ದ್ರೋಣಾಚಾರ್ಯ ತನ್ನ ಮಗ ಅಶ್ವತ್ಥಾಮಂಗೂ  ಅರ್ಜುನಂಗೂ ಪ್ರತ್ಯೇಕವಾಗಿ ಶಸ್ತ್ರ ವಿದ್ಯೆ ಕಲುಸುತ್ತ°.
ಶಿಷ್ಯರು ಗುರುದಕ್ಷಿಣೆ ಕೇಳಿಯಪ್ಪಗ, ಪಾಂಚಾಲ ರಾಜನಾದ ದ್ರುಪದನ ಸೆರೆ ಹಿಡಿದು ಒಪ್ಪುಸುವದೇ ಎನಗೆ ನಿಂಗೊ ಕೊಡೆಕಾದ ಗುರುದಕ್ಷಿಣೆ ಹೇಳ್ತ°. ಯುದ್ಧಲ್ಲಿ ಅರ್ಜುನನೊಟ್ಟಿಂಗೆ ಕಾದಲೆ ಎಡಿಯದ್ದೆ ದ್ರುಪದ ಸೆರೆ ಸಿಕ್ಕುತ್ತ°. ದ್ರೋಣಾಚಾರ್ಯನಲ್ಲಿಗೆ ತಂದು ಒಪ್ಪುಸುತ್ತ°.  ಎನ್ನ ಸಾಮರ್ಥ್ಯಂದ ಆನು ಅರ್ಧ ರಾಜ್ಯವ ಗೆದ್ದಿದೆ. ಇನ್ನರ್ಧ ರಾಜ್ಯಕ್ಕೆ ನೀನೇ ದೊರೆ ಹೇಳಿ ಹಂಗುಸಿ ಮಾತಾಡಿ ಬಿಟ್ಟು ಬಿಡ್ತ°.
ದ್ರುಪದಂಗೆ ಈ ಅವಮಾನ ತಡವಲೆ ಎಡಿತ್ತಿಲ್ಲೆ. ತನಗೆ ಅರ್ಜುನನ ಮದುವೆ ಅಪ್ಪ ಮಗಳೂ, ದ್ರೋಣಾಚಾರ್ಯನ ಕೊಲ್ಲುಲೆ ಎಡಿಗಪ್ಪ ಮಗನೂ ಹುಟ್ಟೆಕ್ಕು ಹೇಳಿ ಅನುಗ್ರಹಿಸೆಕ್ಕು ಹೇಳಿ ಋಷಿಗಳ ಹತ್ರೆ ಕೇಳಿಗೊಳ್ತ°. ಯಾಜೋಪಯಾಜ ಹೇಳ್ತ ಋಷಿ ದ್ರುಪದನ ಕೈಲಿ ಯಾಗ ಮಾಡಿಸಿಯಪ್ಪಗ ಅವಂಗೆ ಧೃಷ್ಟದ್ಯುಮ್ನ ಹೇಳ್ತ ಮಗನೂ ದ್ರೌಪದಿ ಹೇಳ್ತ ಮಗಳೂ ಅಗ್ನಿಕುಂಡಂದ ಜನಿಸಿ ಬತ್ತವು. ಇದೇ ಧೃಷ್ಟದ್ಯುಮ್ನ ದ್ರೋಣಾಚಾರ್ಯನಲ್ಲಿ ವಿದ್ಯಾಭ್ಯಾಸ ಮಾಡ್ತ.
ಕೌರವ ಪಾಂಡವರ ಯುದ್ಧಲ್ಲಿ, ದ್ರೋಣಾಚಾರ್ಯ ಕೌರವರ ಪಕ್ಷ ವಹಿಸಿ ಯುದ್ಧ ಮಾಡ್ತ°. ಕೃಷ್ಣ ಅವನ ಕೊಲ್ಲಲೆ ಬೇಕಾಗಿ “ಅಶ್ವತ್ಥಾಮಾ ಹತಃ” ಹೇಳಿ ಕೇಳ್ತ ಹಾಂಗೆ ಮಾಡಿ ಅಪ್ಪಗ, ದ್ರೋಣಾಚಾರ್ಯ ತನ್ನ ದೇಹವ ಅಲ್ಲಿಯೇ ಬಿಟ್ಟು ಚಿರಂಜೀವಿಯಾದ ತನ್ನ ಮಗಂಗೆ ಎಂತ ಆತು ಹೇಳಿ ನೋಡ್ಲೆ ಹೋವ್ತ. ಇದೇ ಸಮಯಲ್ಲಿ ಶ್ರೀಕೃಷ್ಣ, ಧೃಷ್ಟದ್ಯುಮ್ನನ ಕೈಲಿ ದ್ರೋಣಾಚಾರ್ಯನ ಶರೀರವ ಕತ್ತರಿಸಿ ಹಾಕುಸುತ್ತ. ಹೀಂಗೆ ದ್ರೋಣಾಚಾರ್ಯಂಗೆ ಸಾವು ತನ್ನ ಶಿಷ್ಯನಿಂದಲೇ ಬತ್ತು. ಹಾಂಗಾಗಿ ಕವಿ ಸೋಮೇಶ್ವರ ತನ್ನ ಶತಕಲ್ಲಿ ವಸ್ತ್ರ ತೊಳವನಿಂದ ಆಚಾರ್ಯ ಹತನಾದ ಹೇಳಿ ಹೇಳ್ತ.

~**~~
ಪರಶುರಾಮನ ಕಥೆ

ಶಂತನು ಮಹಾರಾಜಂಗೆ ಸತ್ಯವತಿಯ ಮದುವೆ ಅಪ್ಪಲೆ ಬೇಕಾಗಿ ಮಗನಾದ ದೇವವ್ರತ ಪ್ರತಿಜ್ಞೆ ಮಾಡಿ ಭೀಷ್ಮ ಹೇಳಿ ಪ್ರಸಿದ್ಧನಾವ್ತ.
ಸತ್ಯವತಿಗೆ ಚಿತ್ರಾಂಗದ ಮತ್ತೆ ವಿಚಿತ್ರವೀರ್ಯ ಹೇಳ್ತ ಎರಡು ಮಕ್ಕೊ ಹುಟ್ಟುತ್ತವು. ಶಂತನುವಿನ ಕಾಲಾನಂತರ, ಚಿತ್ರಾಂಗದ ಗಂಧರ್ವನೊಟ್ಟಿಂಗೆ ಮಾಡಿದ ಯುದ್ಧಲ್ಲಿ ಸಾಯಿತ್ತ.  ವಿಚಿತ್ರವೀರ್ಯಂಗೆ ಮದುವೆ ಮಾಡುಸಲೆ ಹೆರಟ ಭೀಷ್ಮ ತನ್ನ ಪರಾಕ್ರಮಂದ ಕಾಶೀರಾಜನ ಮಕ್ಕಳಾದ ಅಂಬೆ, ಅಂಬಿಕೆ, ಅಂಬಾಲಿಕೆಯ ಹಸ್ತಿನಾಪುರಕ್ಕೆ ಕರಕ್ಕೊಂಡು ಬತ್ತ°
ಇವರಲ್ಲಿ ಅಂಬೆಗೆ ಮೊದಲೇ ಸಾಲ್ವ ರಾಜನಲ್ಲಿ ಮನಸ್ಸಿತ್ತಿದ್ದು ಹೇಳಿ ಗೊಂತಾದ ಭೀಷ್ಮ, ಅದರ ಅವನಲ್ಲಿಗೇ ಹೋಗು ಹೇಳ್ತ. ಸಾಲ್ವ ಒಪ್ಪುತ್ತಾ° ಇಲ್ಲೆ. ಯುದ್ಧಲ್ಲಿ ಗೆದ್ದವನೊಟ್ಟಿಂಗೆ ನೀನು ಇರೆಕಾದ್ದು ಹೇಳ್ತ. ಒಂದರಿ ಸಾಲ್ವನಲ್ಲಿಗೆ ಒಂದರಿ ಭೀಷ್ಮನಲ್ಲಿಗೆ, ಹೀಂಗೆ ಅತ್ತಿಂದಿತ್ತ ಹೋದ ಅಂಬೆ ಅಕೇರಿಗೆ ಪರಶುರಾಮನಲ್ಲಿಗೆ ಹೋಗಿ, ಇಷ್ಟಕ್ಕೆಲ್ಲಾ ಕಾರಣನಾದ ಭೀಷ್ಮನೇ ಎನ್ನ ಮದುವೆ ಆವ್ತ ಹಾಂಗೆ ಅನುಗ್ರಹಿಸು ಹೇಳ್ತು.
ಪರಶುರಾಮ ತನ್ನ ಶಿಷ್ಯನಾದ ಭೀಷ್ಮಂಗೆ ಅಂಬೆಯ ಮದುವೆ ಆಗು ಹೇಳ್ತ. ತನ್ನ ಪ್ರತಿಜ್ಞೆಯ ಬಿಡ್ಲೆ ತಯಾರಿಲ್ಲದ್ದ ಭೀಷ್ಮಂಗೂ ಪರಶುರಾಮಂಗೂ ಈ ವಿಶಯಲ್ಲಿ ಯುದ್ಧ ಆವ್ತು.  ಇಪ್ಪತೊಂದು ದಿನದ ಘೋರ ಯುದ್ಧಲ್ಲಿ ಪರಶುರಾಮ ಸೋಲ್ತ.
ಕವಿ ಸೋಮೇಶ್ವರ, ಇಲ್ಲಿ ಪರಶುರಾಮ ಅಂಬೆಗೆ ಬೇಕಾಗಿ ಕಾದಾಡಿ ಸೋತ ಹೇಳ್ತರ ತನ್ನ ಶತಕಲ್ಲಿ ತೋರಿಸಿಕೊಡ್ತ. ಬಹುಶಃ ಅಂಬೆಗೆ ಮೊದಲೆ ಸಾಲ್ವನಲ್ಲಿ ಮನಸ್ಸಿತ್ತಿದ್ದ ಕಾರಣ ಬೆಲೆವೆಣ್ಣು ಹೇಳ್ತ ಪ್ರಯೋಗ ಮಾಡಿದ್ದು ಆಗಿಪ್ಪಲೂ ಸಾಕು.

~~**~~

ಶರ್ಮಪ್ಪಚ್ಚಿ

   

You may also like...

6 Responses

 1. ವಿವರಣೆ ಲಾಯಕ ಆಯ್ದು ಅಪ್ಪಚ್ಚಿ. ಒಪ್ಪ.

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ; ಕತೆಯ ಸ೦ಗ್ರಹ ಮಾಡಿ ಬರದ್ದಕ್ಕೆ ಅನ೦ತಾನ೦ತ ಧನ್ಯವಾದ + ಒಪ್ಪ೦ಗೊ ಅಪ್ಪಚ್ಚಿ ನಮಸ್ತೇ….

 2. ಬಾಲಣ್ಣ (ಬಾಲಮಧುರಕಾನನ) says:

  ಅಪ್ಪಚ್ಚಿ, ಕತೆ ಗೊಂತಾತು.ದ್ರೋಣಾಚಾರ್ಯರ ಶಿಷ್ಯ ಆಗಿಪ್ಪಗ ಗುರು ಸೇವಾ ರೂಪಲ್ಲಿ ದೃಷ್ತದ್ಯುಮ್ನ” ವಸ್ತ್ರತೊಳವವ ” ಆದನಾಯಿಕ್ಕು.

  ದ್ರೋಣಾಚಾರ್ಯರ,ಶೂದ್ರಕ ,ಪರಶುರಾಮರ ಕತೆ ತಿಳುಶಿದ್ದಕ್ಕೆ ಧನ್ಯವಾದಂಗೊ.

 3. ರಘು ಮುಳಿಯ says:

  ಧನ್ಯವಾದ ಅಪ್ಪಚ್ಚಿ.

 4. ಧನ್ಯವಾದ 🙂 ಖುಷಿಯಾತು ವಿವರಣೆಗೆ.

 5. ಶರ್ಮಪ್ಪಚ್ಚಿಯ ವಿವರಣೆ ಲಾಯಿಕಾಯಿದು. ಅನಂತಾನಂತ ಧನ್ಯವಾದ..!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *