ಮನೆ ಮದ್ದುಗೊ-೧

September 16, 2013 ರ 7:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣನ ಬೈಲಿಲಿ  ಶುದ್ದಿಗೊಕ್ಕೆ ಒಪ್ಪ ಕೊಟ್ಟುಗೊ೦ಡು ಇತ್ತಿದ್ದ ಮಾಲಕ್ಕ° ಈಗ ನವಗೆಲ್ಲ ಶುದ್ದಿಗಳ ತಿಳುಶುತ್ತಾ ಇದ್ದವು. ಮಾಲಕ್ಕನ ಪರಿಚಯ ಇದ್ದೊ?ಇವರ ಹೆಸರು ಕು೦ಚಿನಡ್ಕ ಶಿವಕುಮಾರಿ.ಮುಜು೦ಗಾವಿನ ಶ್ರೀಭಾರತಿ ವಿದ್ಯಾಸ೦ಸ್ಥೆಗಳಲ್ಲಿ ಕ೦ಪ್ಯೂಟರ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದವು.ಮಾಲಕ್ಕನ ಅಬ್ಬೆ ಶ್ರೀಮತಿ ಲಕ್ಷ್ಮಿ ಕೃಷ್ಣ ಭಟ್  ಇವು ಮನೆ ಮದ್ದುಗಳ ವಿಷಯಲ್ಲಿ ಒಳ್ಳೆತ ವಿಷಯ೦ಗಳ ಅನುಭವ ಇಪ್ಪವು.ಅಬ್ಬೆಯ ಹತ್ರೆ ಪಡದ ಅಮೂಲ್ಯ ಮಾಹಿತಿಗಳ ಬೈಲಿನ ನೆ೦ಟ್ರಿ೦ಗೆ ಹ೦ಚುವ ಸತ್ಕಾರ್ಯ ಮಾಲಕ್ಕ೦ದು. ಸಸ್ಯ ಶಾಸ್ತ್ರದ ಹೆಸರುಗಳ ವಿವರ೦ಗಳ ಡಾ.ಟಿ.ಎಸ್.ಭಟ್,ಬೆ೦ಗಳೂರು,ಡಾ.ರಕ್ಷಾ ಪ್ರಮೋದ್ ಕು೦ಚಿನಡ್ಕ,ಶ್ರೀ ಶ್ರೀಕೃಷ್ಣ ಗಣರಾಜ್ ಮಿತ್ತಜಾಲು ಇವರೆಲ್ಲರ ಸಕಾಯಲ್ಲಿ ಪಡಕ್ಕೊಳ್ಳುತ್ತ ಇದ್ದವು. ಬನ್ನಿ , ಮಾಲಕ್ಕನ ಶುದ್ದಿಗಳ ಓದಿ,ಉಪಯೋಗ ಮಾಡ್ಯೊ೦ಡು ಆರೋಗ್ಯಕರ ಜೀವನವ ಮು೦ದುವರ್ಸುವ.ಅಕ್ಕ೦ಗೆ ಪ್ರೋತ್ಸಾಹವನ್ನೂ ಕೊಡುವ°. ~ ಗುರಿಕ್ಕಾರ°.

                                         ಮನೆ ಮದ್ದುಗೊ-1

 

೧.    ವಾಂತಿಗೆ:

ಸಣ್ಣ ಮಕ್ಕೊಗೆ ಹೊಟ್ಟೆಲಿ ಹುಳು ತುಂಬಿ ವಾಂತಿ ಆವುತ್ತರೆ ಕಹಿಬೇವಿನ ಜೇನಿನೊಟ್ಟಿಂಗೆ ಸಣ್ಣಕೆ ಅರದು ಕಾಲು(1/4) ಚಂಚ ಕುಡಿಶಿರೆ ವಾಂತಿ ಕೂಡ್ಲೆ ನಿಲ್ಲುತ್ತು.

 

ಕಹಿ ಬೇವು
ಕಹಿ ಬೇವು

೨. ಶೀತಕ್ಕೆ:

ಎಳೆಯ ಮಕ್ಕೊಗೆ ಶೀತ ಆದರೆ ಶುದ್ಧ ಕುಂಕುಮವ ಸಜ್ಜಿಲೆ ಬೆಶಿ ಮಾಡಿ ರಜ ತಣುದ ಮೇಲೆ(ಹೂ ಬೆಶಿ) ಮಕ್ಕಳ ನೆತ್ತಿಗೆ ಹಾಕಿ ಹಗೂರಕೆ ರಜ ತಿಕ್ಕಿ ಬಿಡೆಕು. ಅಥವಾ ಶ್ರೀಗಂಧವ ನೀರಿಲ್ಲಿ ತಳದು ಕೊದಿಶಿ ತಣುದ ಮೇಲೆ ನೆತ್ತಿಗೆ ಲೇಪ ಹಾಕಿರೂ ಆವುತ್ತು.

Kumkum
ಶ್ರೀಗಂಧ
ಶ್ರೀಗಂಧ

 

 

 

 

 

೩. ಭೇದಿಗೆ:

೧. ಹುಳಿ ಮಾವಿನ ಕೆತ್ತೆಯ ಮಜ್ಜಿಗೆಲಿ ತಳದು ಎರಡು ಚಂಚ ಕುಡಿಶಿರೆ ಮಕ್ಕಳ ಭೇದಿ ನಿಲ್ಲುತ್ತು

೨. ರಜ ಕುಚ್ಚಿಲಕ್ಕಿಯ ಕಬ್ಬಿಣದ ಸಟ್ಟುಗಿಲ್ಲಿ ಹೊರುದು ಕಪ್ಪು ಮಾಡೆಕ್ಕು. ಕೂಡ್ಳೆ ಇದಕ್ಕೆ ರಜ ನೀರು ಎರದು ಕೊದಿಶೆಕ್ಕು. ಇದರ ರಜ ಬೆಶಿ ಬೆಶಿಯೇ ಕುಡುದರೆ ಭೇದಿ ಕೂಡ್ಳೆ ನಿಲ್ಲುತ್ತು.

 

 

೪. ಕಿಚ್ಚು ಮುಟ್ಟಿದ್ದಕ್ಕೆ:

2-3 ಎಳೆಯ ಸರಳಿ ಸೊಪ್ಪಿನ ಸರೀ ಗುದ್ದಿ ತೆಂಗಿನೆಣ್ಣೆಲಿ ಹಾಕಿ ಮಡಗಿರೆ ಕೈಗೊ ಕಾಲಿಂಗೊ ಮಣ್ಣೊ,ಎಲ್ಲಿಗ್ಕೂ ಅಕ್ಕು ಕಿಚ್ಚು ಮುಟ್ಟಿರೆ ಕೂಡ್ಲೆ ಈ ಎಣ್ಣೆಯ ಹಚ್ಚಿಗೊಂಡರೆ ಹೊಕ್ಳು ಬತ್ತೂ ಇಲ್ಲೆ, ಉರಿತ್ತೂ ಇಲ್ಲೆ.

 

೫. ಶೀತಕ್ಕೆ:

ಒಂದು 4 ಚಂಚ ತೆಂಗಿನೆಣ್ಣೆಯ ಕೊದಿವಲೆ ಮಡುಗಿ ಕೊದುದಪ್ಪಗ ಅದಕ್ಕೆ 1 ಚಂಚ ಸಾಸಮೆ ಹಾಕಿ ಹೊಟ್ಯಪ್ಪಗ ಇಳುಗಿ 1 ಚಂಚ ನಾವು ಮನೆಲೇ ಕುಟ್ಟಿ ಹೊಡಿ ಮಾಡಿದ ಅರಶಿನ ಹೊಡಿ ಹಾಕಿ ಮಡಗೆಕ್ಕು.  ಕೆಲವು ಜೆನಕ್ಕೆ ಉದಿಯಪ್ಪಗ ಎದ್ದ ಕೂಡ್ಲೆ ಸೆಮಿಲು ಬಪ್ಪದು ಅಥವಾ ಶೀತ ಅಪ್ಪದು ಆವುತ್ತನ್ನೆ. ಅಸ್ಟಪ್ಪಗ ಇದರ ರಜ ನೆತ್ತಿಗೆ ಉದ್ದಿಗೊಂಡರೆ ಕಮ್ಮಿ ಆವುತ್ತು.

 

೬. ಹಲ್ಲು ಸೆಳಿವದಕ್ಕೆ:

೧. ಒಳ್ಳೆ ಮೆಣಸು- 7-8 ಕಾಳು

ಲವಂಗ- 10-12

ಉಪ್ಪು – 4 ಚಂಚ

ಇದರ ಎಲ್ಲ ಒಟ್ಟು ಸೇರ್ಸಿ ನೊಂಪು ಹೊಡಿ ಮಾಡಿ ಮಡಿಕ್ಕೊಳೆಕ್ಕು. ಇದರಲ್ಲಿ ದಿನಾ ಹಲ್ಲುತಿಕ್ಕಿರೆ ಹಲ್ಲು ಬೇನೆ ಕಡಮ್ಮೆ ಆವುತ್ತು.

೨. ನಾಚಿಕೆ ಮುಳ್ಳಿನ ಸಮೂಲ ನೀರಿನೊಟ್ಟಿಂಗೆ ಕೊದಿಶಿ ಬಾಯಿ ಮುಕ್ಕುಳುಸಿರೆ ಹಲ್ಲು ಬೇನೆ ಕಡಮ್ಮೆ ಆವುತ್ತು.

೭. ಉರಿಮೂತ್ರಕ್ಕೆ:

ಬೊಂಡ ನೀರು ಅಥವಾ ಗಂಜಿ ತೆಳಿಲಿ ಕೆರಮಣೆ ಸೊಪ್ಪಿನ ಒಳ್ಳೆ ಪುರುಂಚಿ ಕುಡುದರೆ ಆತು.

 

 

೮. ಸಣ್ಣ ಮಕ್ಕೊಗೆ ಮೂತ್ರ ಕಿಡಿ ಬತ್ತದಕ್ಕೆ: 

ಬಿದಿರಿನಎಳೆ ಸೊಪ್ಪಿನ ಒಂದು 4 ಕಾಳು ಜೀರೆಕ್ಕಿ ಹಾಕಿ ರಜ ಬೆಶಿ ನೀರು ಸೇರ್ಸಿ ಸರೀ ಗುದ್ದಿ ತೆಳ್ಳಂಗಿನ ಶುಭ್ರ ಬೆಳಿ ವಸ್ತ್ರಲ್ಲಿ ಹಾಕಿ ಹಿಂಡಿ ಎಸರು ತೆಗದು 1 ಚಂಚದಷ್ಟು ಸಣ್ಣ ಮಕ್ಕೊಗೆ ಕುಡಿಶಿರೆ  ಮಕ್ಕಳ ಮೂತ್ರ ಕಿಡಿ ಬತ್ತಿಲ್ಲೆ. ಬೇಕಾದರೆ ವಾರಕ್ಕೆ 1 ಸರ್ತಿಯ ಹಾಂಗೆ 2-3ವಾರ ಕುಡಿಶುಲಕ್ಕು.(ಹೆಚ್ಚು ಕುಡಿಶುಲೆ ಎಡಿಯ. ಇದು ತುಂಬಾ ಉಷ್ಣ).

 

೯. ಹೊಟ್ಟೆಲಿ ವಾಯು ತುಂಬಿರೆ:

೧.  ಕಡ್ರೇ ಬೇರು- 4-5

ಓಮ- 1 ಚಂಚ

ಜೀರಿಗೆ- 1 ಚಂಚ

ಕೊತ್ತಂಬರಿ- 1 ಚಂಚ

ಬೆಲ್ಲ – ಸ್ವಲ್ಪ

ಅರ್ಧ ಲೀಟರ್ ನೀರಿಂಗೆ ಮೇಲೆ ಹೇಳಿದ ಎಲ್ಲವನ್ನೂ ಗುದ್ದಿ ಸೇರ್ಸಿ ಸರೀ ಕೊದಿಶೆಕ್ಕು. ಇದರ ದಿನಕ್ಕೆರಡು ಸರ್ತಿ ಕುಡಿಯೆಕ್ಕು.

೨. ಮೆಂತೆ ಮತ್ತೆ ಜೀರಿಗೆ ರಜ ರಜ ಹಾಕಿ ಕಷಾಯ ಕೊದಿಶಿ ಕುಡುದರೂ ವಾಯುವಿಂಗೆ ಆವುತ್ತು.  ಬೇಕಾದರೆ ಕಷಾಯ ಕೊದಿಶುವಾಗ ಬೆಲ್ಲ ಸೇರ್ಸಿ ಕೊದಿಶಿ ಕುಡಿವಲಕ್ಕು.

೧೦. ಹಿಮ್ಮಡಿ ಒಡವದಕ್ಕೆ:  ಹಾಡೇ ಬೇರಿನ ಗುದ್ದಿ ತೆಂಗಿನೆಣ್ಣೆಲಿ ಹಾಕಿ ಮಡುಗೆಕ್ಕು. ಇದರ ದಿನಾ ಉದಿಯಪ್ಪಗ ಕಾಲಿಂಗೆ ಕಿಟ್ಟಿರೆ ಕಾಲು ಒಡವದು ಕಮ್ಮಿ ಆವುತ್ತು, ಹಾಂಗೇ ಕಾಲು ಹುಳು ತಿಂಬದಕ್ಕೂ ಆವುತ್ತು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

  1. rama bhat muliyala

    kepula beru guddi tamrada patreli haki tenginenne eradu madugire kalu odaddakke avuttu

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ಶುದ್ದಿಕ್ಕಾರ°ರಾಜಣ್ಣಕಾವಿನಮೂಲೆ ಮಾಣಿಪ್ರಕಾಶಪ್ಪಚ್ಚಿಶ್ರೀಅಕ್ಕ°ಚೆನ್ನೈ ಬಾವ°ಡಾಮಹೇಶಣ್ಣಶರ್ಮಪ್ಪಚ್ಚಿಸುಭಗಅಡ್ಕತ್ತಿಮಾರುಮಾವ°ಮುಳಿಯ ಭಾವಚೂರಿಬೈಲು ದೀಪಕ್ಕಗೋಪಾಲಣ್ಣದೀಪಿಕಾದೊಡ್ಮನೆ ಭಾವವಾಣಿ ಚಿಕ್ಕಮ್ಮಪಟಿಕಲ್ಲಪ್ಪಚ್ಚಿಶೇಡಿಗುಮ್ಮೆ ಪುಳ್ಳಿನೆಗೆಗಾರ°ಬಟ್ಟಮಾವ°ಜಯಶ್ರೀ ನೀರಮೂಲೆಡಾಗುಟ್ರಕ್ಕ°ಡೈಮಂಡು ಭಾವಬೋಸ ಬಾವಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ