ರಾಕ್ಷಸರ ನಿರ್ನಾಮ-ದೇವತೆಗೊಕ್ಕೆ ಅಭಯಪ್ರದಾನ : ದೇವೀ ಮಹಾತ್ಮೆ- 06

December 20, 2011 ರ 6:30 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಿಂದಾಣ ಸಂಚಿಕೆ: ದೇವಿ ಬೀಸಿತ್ತು ಮಾಯದ ಬಲೆ,ತೂಗಿತ್ತದ ಉಯ್ಯಾಲೆ!
ಮುಂದೆ ಓದಿ >>

ರಾಕ್ಷಸರ ನಿರ್ನಾಮ-ದೇವತೆಗೊಕ್ಕೆ ಅಭಯಪ್ರದಾನ : ದೇವೀ ಮಹಾತ್ಮೆ ಉತ್ತಮಚರಿತಮ್- ಉತ್ತರಾರ್ಧ:

ಧೂಮ್ರಾಕ್ಷ ಸೈನ್ಯ ತೆಕ್ಕೊಂಡು ದೇವಿಯ ಹತ್ತರೆ ಬಂದ.
“ಏ ಅಬಲೆಯೆ,ಬಾ ಎಂಗಳ ಒಡೆಯ ಶುಂಭನ ಮದುವೆ ಆಗು”ಹೇಳಿ ಬೊಬ್ಬೆ ಹಾಕಿದ. “ನೀನು ಬಾರದ್ದರೆ ನಿನ್ನ ಎಳಕ್ಕೊಂಡು ಹೋಪೆ” ಹೇಳಿ  ಜಡೆಗೆ ಕೈ ಹಾಕಲೆ ಬಂದ.
“ರಕ್ಕಸ ವೀರಾ,ನೀನು ಬಲಶಾಲಿ.ಹೀಂಗೆ ಕೋಪಿಸಿ  ಬಂದರೆ ಆನೆಂತ ಮಾಡುದು?” ಹೇಳಿ ದೇವಿ ನೆಗೆ ಮಾಡಿತ್ತು. ದೇವಿ ಅಬಲೆ ಹೇಳಿ ಆ ಮೂಢ ಗ್ರೇಶಿದ!

ಅವ ಮುಂದೆ ಬಪ್ಪಗ ದೇವಿ ಒಂದೇ ಹುಂಕಾರಂದ ಅವನ ಭಸ್ಮ ಮಾಡಿತ್ತು. ದೇವಿಯ ಕೋಪ ಭಯಂಕರ!
ರಾಕ್ಷಸರು ದೇವಿಯ ಆಕ್ರಮಿಸಿದವು. ಅಂತ ಚಿಲ್ಲರೆ ವೀರರ ದಮನ ದೇವಿಗೆ ಒಂದು ಲೆಕ್ಕವೊ?
ದೇವಿಯ ವಾಹನ ಸಿಂಹ ರಕ್ಕಸ ಸೈನ್ಯದ ಮೇಲೆ ಹಾರಿ, ಅವರ ಕೊಲ್ಲಲೆ ಸುರು ಮಾಡಿತ್ತು. ರಕ್ಕಸ ಸೈನ್ಯ ಧೂಳೀಪಟ ಆತು.

ಈ ಸುದ್ದಿ ಶುಂಭಂಗೆ ಗೊಂತಾತು. ಅವ ಆಪ್ತರಾದ ಚಂಡ ಮುಂಡರ ದಿನುಗೋಳಿ “ಚಂಡ,ಮುಂಡ, ಹೋಗಿ ಆ ಹೆಣ್ಣಿನ ಸೋಲಿಸಿ ಕಟ್ಟಿಹಾಕಿ, ಇಲ್ಲಿಗೆ ತನ್ನಿ. ಅದರ ವಾಹನ ಸಿಂಹವ ಬಡಿದು ನಾಶ ಮಾಡಿ” ಹೇಳಿ ಆಜ್ಞೆ ಕೊಟ್ಟ.
ಚಂಡ ಮುಂಡರು ಭಾರೀ ಸೈನ್ಯದೊಟ್ಟಿಂಗೆ ಬಂದು ದೇವಿಯ ಕಂಡವು.ದೇವಿಯ ಎಳಕ್ಕೊಂಡು ಹೋಪಲೆ ಯತ್ನ ಮಾಡಿದವು.ದೇವಿಗೆ ಕೋಪ ಬಂತು.ಅದರ ಮುಖಂದ ಕಾಳಿಯ ರೂಪ ಹೊರಹೊಮ್ಮಿತ್ತು.
ಕಾಳಿ ರೂಪ ಹೆದರಿಕೆ ಹುಟ್ಟಿಸುವ ಹಾಂಗೆ ಇತ್ತು.
ದಾಡೆ,ನಾಗಾಭರಣ,ರುಂಡಮಾಲೆ, ಖಟ್ವಾಂಗ ಹೇಳುವ ಆಯುಧ ಹೊಂದಿ ಹುಲಿಚರ್ಮದ ವಸ್ತ್ರ ಸುತ್ತಿದ ಈ ರೂಪ ರಾಕ್ಷಸರ ಸೈನ್ಯವ ಅಗಿದು ನುಂಗಿ, ಉಗುಳಿತ್ತು!
ಕಾಳಿಯ ಎದುರಿಸಿದ ಚಂಡನ  ಮತ್ತೆ ಮುಂಡನ ಬಾಣಂಗೊ ಕಾಳಿಯ ಮುಖವ  ಮುಸುಕಿತ್ತು.
ದೇವಿ ಕಾಳಿ  ಸಿಂಹವ ಏರಿ ಚಂಡನ ಖಡ್ಗಲ್ಲಿ ಕಡಿದು ಹಾಕಿತ್ತು.ಮತ್ತೆ ಬಂದ ಮುಂಡಂಗೂ ಅದೇ ಗತಿ.
ಅವರ ತಲೆಗೊ ರುಂಡಮಾಲೆ ಸೇರಿದವು.ಕಾಳಿ ಮತ್ತೆ ದೇವಿಲಿ ಐಕ್ಯ ಆತು.
ಚಂಡನ ಕೊಂದ ಕಾರಣ ಚಂಡಿ ಹೇಳಿಯೂ ಮುಂಡನ ವಿನಾಶ ಮಾಡಿದ್ದರಿಂದ ಚಾಮುಂಡಿ ಹೇಳಿಯೂ ದೇವಿಗೆ ಹೆಸರಾತು.

ಈ ಸುದ್ದಿ ಕೇಳಿ ಶುಂಭಾಸುರ ರಕ್ತಬೀಜನ ನೇತೃತ್ವಲ್ಲಿ ಅಸುರಂಗಳ ಗಣವನ್ನೇ ಕಳಿಸಿದ.
ಅವರ ಕಂಡು ದೇವಿ ತನ್ನ ಶಂಖ ಮತ್ತೆ ಗಂಟೆಯ ಬಾರಿಸಿತ್ತು,ಆ ಶಬ್ದ ಅಸುರರ ಎದೆ ತಲ್ಲಣಿಸುವ ಹಾಂಗಿತ್ತು.ದೇವಿ ಶಿವನನ್ನೇ ಶುಂಭನ ಹತ್ತರೆ ದೂತನನ್ನಾಗಿ ಕಳಿಸಿ, ದೇವೇಂದ್ರಂಗೆ ಯಾಗದ ಹವಿಸ್ಸಿನ ಹಕ್ಕನ್ನೂ ರಾಜ್ಯವನ್ನೂ ಮರಳಿ ಕೊಡಲೆ ತಿಳಿಸಿತ್ತು, ತಪ್ಪಿರೆ ಯುದ್ಧಲ್ಲಿ ರಕ್ಕಸರ ನಾಶ ಮಾಡುದು ಖಂಡಿತ ಹೇಳಿ ಎಚ್ಚರ ಕೊಟ್ಟತ್ತು.
[ಶಿವನನ್ನೇ ದೂತನನ್ನಾಗಿ ಕಳಿಸಿದ್ದರಿಂದ ದೇವಿಗೆ ಶಿವದೂತಿ ಹೇಳಿ ಹೆಸರಾತು].

ರಕ್ಕಸರು ಒಪ್ಪದ್ದೆ ಯುದ್ಧ ಮಾಡಿದವು.
ದೇವಿ ಏಳು ರೂಪಂಗಳ ಹೊಂದಿತ್ತು. ಮೊದಲಿಂಗೆ ದೇವತೆಗಳ ಶರೀರಂದ ಹೆರಬಂದ ಶಕ್ತಿಗೊ ಆ ಆ ರೂಪಲ್ಲೇ ಕಂಡು ಬಂದವು
ಬ್ರಹ್ಮಾಣಿ,ಕೌಮಾರಿ,ವೈಷ್ಣವಿ,ವಾರಾಹಿ,ನಾರಸಿಂಹೀ,ಐಂದ್ರಿ,ಕಾಳಿ…..!
ರಕ್ತಬೀಜನ ಒಂದು ಬೊಟ್ಟು ನೆತ್ತರು ಬಿದ್ದಲ್ಲಿ ಲಕ್ಷ ಲಕ್ಷ ರಾಕ್ಷಸರು ಹುಟ್ಟುತ್ತವು. ಹೀಂಗೆ ಅನೇಕ ರಕ್ಕಸರು ಹುಟ್ಟಿದವು ,ಸತ್ತವು,ಮತ್ತೆ ಹುಟ್ಟಿದವು.ಮುಕ್ತಾಯವೇ ಇಲ್ಲೆ.

ದೇವಿ ಉಪಾಯ ಮಾಡಿ ಚಾಮುಂಡಿ ರೂಪಂದ ಆ ರಕ್ಕಸನ ನೆತ್ತರಿನ ನೆಲಕ್ಕೆ ಬೀಳದ್ದ ಹಾಂಗೆ ಕುಡಿತ್ತಾ ಬಂದು,ಅವನ ಕೊಂದತ್ತು. ರಕ್ತಹೀನನಾದ ಅಸುರ ನೆಲಕ್ಕೆ ಬಿದ್ದ. ರಕ್ತೇಶ್ವರಿಗೆ ಜಯ ಸಿಕ್ಕಿತ್ತು.

ಮಹಾವೀರ ಶುಂಭಂಗೆ ಅನುಯಾಯಿಗಳ ನಾಶಂದ ಬಲ ಕುಂದಿತ್ತು,ಕೋಪ ತಲೆಗೇರಿತ್ತು.ತಮ್ಮನಾದ ನಿಶುಂಭನ ಕೂಡಿಯೊಂಡು ಬಂದ.
ದೇವಿ ಮತ್ತೆ ನಿಶುಂಭನ ಯುದ್ಧ ತುಂಬಾ ಸಮಯ ನಡೆದತ್ತು.ರಕ್ಕಸನ ದಿವ್ಯಾಸ್ತ್ರಂಗಳ ದೇವಿ ಕಡಿದು ಹಾಕಿತ್ತು.
ಅನೇಕ ರಕ್ಕಸರ ದೇವೀ ರೂಪಂಗೊ ತಿಂದವು.ಕಡೆಂಗೆ ದೇವಿ ತ್ರಿಶೂಲಂದ ನಿಶುಂಭನ ಇರಿದು ಕೊಂದತ್ತು.

ಸರ್ವ ಮಂಗಳೆ, ಮಾಂಗಲ್ಯೆ..

ಪ್ರಿಯ ತಮ್ಮನ ಅಂತ್ಯಂದ ದುಃಖ ಆದರೂ ಶುಂಭ ಯುದ್ಧಕ್ಕೆ ಇಳಿದ.
ವೀರಾವೇಶಲ್ಲಿ ಹೋರಾಡಿದ. [ದೇಹ ನೀರಿಲಿ ಇಡಿ ಮುಂಗುವಲ್ಲಿ ವರೆಗೆ ಚಳಿ ಇಕ್ಕು, ಒಂದಾರಿ ಇಡಿ ಮುಂಗಿರೆ, ಮತ್ತೆ ಚಳಿ ಇಕ್ಕೊ?]

ಶುಂಭ-ದೇವಿಯರ ಯುದ್ಧ ಇಲ್ಲಿ ವರೆಗೆ ಆದ ಯುದ್ಧಂಗಳಲ್ಲಿಯೇ ಅತ್ಯಂತ ಭಯಾನಕ ಆಗಿತ್ತು.
“ಏ ಹೆಣ್ಣೇ,ನೀನು ಬೇರೆಯವರ ಸಹಾಯಂದ ಯುದ್ಧ ಮಾಡುದಲ್ಲದೊ?ಬಾ ಎನ್ನ ಸೋಲಿಸು ನೋಡುವೊ” ಹೇಳಿ ಶುಂಭ ಹೇಳಿದ.
“ರಾಕ್ಷಸಾ,ಈ ಜಗತ್ತಿಂಗೆ ಆನೊಬ್ಬನೇ ದೇವಿ,ಎಲ್ಲರೂ ಎನ್ನಲ್ಲೇ ಇದ್ದವು”ಹೇಳಿ ದೇವಿ ಒಂದೇ ರೂಪಲ್ಲಿ ಕಾಂಬಲೆ ಸಿಕ್ಕಿತ್ತು. ದೇವತೆಗೊ ಹೆದರಿ “ಅಮ್ಮಾ,ನಿನ್ನ ಯುದ್ಧ ನೋಡಿ ಎಂಗೊಗೆ ಹೆದರಿಕೆ ಆವುತ್ತು.ಬೇಗ ರಕ್ಕಸನ ಕೊಂದು ಎಂಗಳ ಕಾಪಾಡು ” ಹೇಳಿ ಕೂಗಿದವು!

ಮಹಾದೇವಿ-ರಕ್ಕಸರು ಅತಿ ವಿಚಿತ್ರವಾದ ಮಲ್ಲಯುದ್ಧವ ಮಾಡಿದವು, ದೇವಿ ರಕ್ಕಸನ ಆಯುಧಂಗಳ ಹೊಡಿ ಮಾಡಿತ್ತು. ಕಡೆಂಗೆ ಆಕಾಶಲ್ಲಿ ಯುದ್ಧ !ಹೊಯ್-ಕೈ ಮಾಡಿದವು.
ಮಹಾದೇವಿ ರಕ್ಕಸನ ಬಚ್ಚಿಸಿ,ಬಚ್ಚಿಸಿ ಅಖೇರಿಗೆ ತ್ರಿಶೂಲಂದ ಅವನ ಎದೆಯ ಕುತ್ತಿ ಕೊಂದು ಅವನ ಭೂಮಿಗೆ ಕೆಡಗಿತ್ತು.
ರಾಕ್ಷಸ ಸಂಹಾರ ಆದ ಮೇಲೆ ದೇವತೆಗೊ ದೇವಿಯ ಸ್ತೋತ್ರ ಮಾಡಿದವು.ದೇವಿಯ ಸರ್ವವ್ಯಾಪಿತ್ವ,ಶಕ್ತಿಸಂಪನ್ನತೆ ,ವಿವಿಧ ರೂಪಂಗೊ ಎಲ್ಲಾ ವರ್ಣಿಸುತ್ತಾ ಹೊಗಳಿದವು.[ನಾರಾಯಣೀ ಸ್ತುತಿ ಹೇಳಿ ಇದಕ್ಕೆ ಹೆಸರು].
ಸುಪ್ರೀತಳಾದ ಜಗನ್ಮಾತೆ,ದೇವತೆಗೊಕ್ಕೆ ಶತ್ರು ಬಾಧೆ ಅಪ್ಪಾಗ ಬಂದು ಸಲಹುತ್ತೆ ಹೇಳಿ ವರ ಕೊಟ್ಟತ್ತು.

ಆರು ಈ ನಾರಾಯಣಿ ಸ್ತವಂದ ಎನ್ನ ಪೂಜಿಸುತ್ತವೊ ಅವಕ್ಕೆ ಆನು ಒಲಿತ್ತೆ,ಅಂತವಕ್ಕೆ ಯಾವ ಬಾಧೆಯೂ ಇರ -ಹೇಳಿ ತಿಳಿಸಿತ್ತು.

ದೇವಿ ಅದೃಶ್ಯ ಆದ ಮೇಲೆ ದೇವತೆಗೊ ಸ್ವರ್ಗಕ್ಕೆ ಮತ್ತೆ ಬಂದವು. ಅಳಿದುಳಿದ ರಕ್ಕಸಂಗೊ ಪಾತಾಳಕ್ಕೆ ಹೋದವು.

~*~*~*~*~

ಹೀಂಗೆ ದೇವಿಯ ಕತೆಯ ಮುಗಿಸಿದ ಸುಮೇಧ ಋಷಿ-“ಮಹಾರಾಜಾ,ವೈಶ್ಯೋತ್ತಮಾ ,ಕೇಳಿದಿರನ್ನೆ?ಆದಿ ಮಾಯೆ ಈ ಜಗತ್ತಿನ ಎಲ್ಲದಕ್ಕೂ ಆಧಾರ ಸ್ವರೂಪಳು.ನಿಂಗೊ ಅದರ ಭಜಿಸಿ. ಭವಲೋಕದ ಬಂಧನಂದ ಬಿಡುಗಡೆ ಸಿಕ್ಕುಗು”ಹೇಳಿ ಪೂಜಾವಿಧಾನಂಗಳ ಉಪದೇಶ ಮಾಡಿದ.
ಮತ್ತೆ ಅವು ಕಾಡಿಂಗೆ ಹೋಗಿ,ತಪಸ್ಸು ಮಾಡಿದವು.
ತಮ್ಮ ದೇಹ ಭಾಗವನ್ನೇ ದೇವಿಗೆ ಬಲಿ ಕೊಟ್ಟವು!
ಮೂರು ವರ್ಷದ ಮತ್ತೆ ದೇವಿ ಪ್ರತ್ಯಕ್ಷ ಆಗಿ-” ಮಕ್ಕಳೇ,ನಿಂಗಳ ಭಕ್ತಿಗೆ ಮೆಚ್ಚಿದ್ದೆ.ರಾಜಾ,ಈ ಜನ್ಮಲ್ಲಿ ನಿನಗೆ ರಾಜ್ಯ ಮತ್ತೆ ಸಿಕ್ಕುತ್ತು.ಮುಂದೆ ನೀನು ಸಾವರ್ಣಿ ಹೇಳುವ ಮನು ಆಗಿ ಹುಟ್ಟುವೆ. ಸಮಾಧಿಯೇ,ನಿನಗೆ ಜ್ಞಾನ ಆವುತ್ತು” ಹೇಳಿ ವರ ಕೊಟ್ಟತ್ತು.
{ಹದಿನಾಲ್ಕು ಮನ್ವಂತರಲ್ಲಿ ಈಗಾಣದ್ದು  ಏಳನೇದು- ವೈವಸ್ವತ ಮನ್ವಂತರ. ಎಂಟನೆದು -ಇನ್ನಾಣದ್ದು-ಸಾವರ್ಣಿ ಮನ್ವಂತರ.}

(ಮುಗುದತ್ತು)

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ|
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ||

~ಮಂಗಳಂ~

ಸೂ:

 • ದೇವಿ ಮಹಾತ್ಮೆಯ ಸಂಕ್ಷೇಪವಾಗಿ, ಸರಳವಾಗಿ ಬೈಲಿಂಗೆ ಮುಟ್ಟುಸಿದ ಗೋಪಾಲಣ್ಣಂಗೆ ಬೈಲಿನ ಪರವಾಗಿ ಅನಂತ  ಕೃತಜ್ಞತೆಗೊ ಸಲ್ಲುತ್ತು.
 • ದೇವಿ ಮಹಾತ್ಮೆಯ ಎಲ್ಲಾ ಕಂತುಗಳ ಓದೇಕಾರೆ : ಇಲ್ಲಿದ್ದು

ರಾಕ್ಷಸರ ನಿರ್ನಾಮ-ದೇವತೆಗೊಕ್ಕೆ ಅಭಯಪ್ರದಾನ : ದೇವೀ ಮಹಾತ್ಮೆ- 06, 5.0 out of 10 based on 1 rating

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಚೆನ್ನೈ ಬಾವ°

  ಮಾತರ್ಮೇ ಮಧುಕೈಟಭೋಗ್ರಮಹಿಷಪ್ರಾಣಾಪಹಾರೋದ್ಯಮೇ
  ಹೇಲಾನಿರ್ಜಿತಧೂಮ್ರಲೋಚನವಧೇ ಹೇ ಚಂಡಮುಂಡಾರ್ದಿನಿ ।
  ನಿಶ್ಯೇಷೀಕೃತರಕ್ತಬೀಜದನುಜೇ ನಿತ್ಯೇ ನಿಶುಂಭಾಪಹೇ
  ಶುಂಭಧ್ವಂಸಿ ಸಂಹರಾಶು ದುರಿತಂ ದುರ್ಗೇ ನಮಸ್ತೇಂಬಿಕೇ ॥

  ಗೋಪಾಲಣ್ಣನ ಸರಳರೂಪದ ದೇವೀಮಹಾತ್ಮೆ ಚರಿತೆ ನಿರೂಪಣೆ ಲಾಯ್ಕು ಆಹುದು ಹೇಳಿ ಒಪ್ಪ.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಏತಸ್ಯ ಶ್ಲೋಕಸ್ಯ ಅರ್ಥಃ ಕಃ ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಭಾಗವತ ಇಪ್ಪಗ ಮದ್ದಳೆಗಾರ ಪದ ಹೇಳ್ಳೆ ಕೂಬ ಕ್ರಮ ಇದ್ದೋಪ!

  ಸಾವಕಾಶ ಕೂದು ಆಲೋಚನೆ ಮಾಡಿ ಅರ್ಧಂಬರ್ಧ ಆನು ಹೇಳುವದಕ್ಕಿಂತ ನಿಂಗಳೇ ಪಕ್ಕ ಚಂದಕ್ಕೆ ಹೇಳಿಕ್ಕಿ ಮಹೇಶಣ್ಣ. ನಾಕು ಜನ ಓದಿ ಅರ್ಥ ಮಾಡಿಗೊಂಗು, ಆನು ಬರದರೆ ನಾಕು ಜನ ಓದಿ ನೆಗೆಮಾಡುಗು!!. ಆನು ಎನ್ನ ಕ್ರಮಲ್ಲಿ ಹೇಳ್ತದಾದರೆ -“ಮಧುಕೈಟಭರ ನಿಗ್ರಹಿಸಿ, ಮಹಿಷನ ಪ್ರಾಣಾಪಹಾರ ಮಾಡಿ, ಧೂಮ್ರಲೋಚನನ ವಧಿಸಿ ಚಂಡಮುಂಡರ ಮರ್ದಿಸಿ ರಕ್ತಬೀಜದನುಜನ ನಿಶ್ಯೇಷ ಮಾಡಿ, ನಿಶುಂಭ ಶುಂಭರ ಸಂಹರಿಸಿ ದುರಿತವ ದೂರ ಮಾಡಿದ ಎನ್ನ ಮಾತೆ ದುರ್ಗೆಯೇ, ಅಂಬಿಕೆಯೇ ನಿನಗೆ ನಮಸ್ಕಾರ”.

  ಪರಿಷ್ಕಾರಃ ಆವಶ್ಯಕಃ ಅಸ್ತಿ ಚೇತ್, ಭವಾನ್ ಏವ ಸಮರ್ಥಃ ।

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಏಕ: ಶ್ಲೋಕಸ್ಯ ಅರ್ಥಂ ಜ್ಹಾತಂ| ಸರ್ವೇಭ್ಯೋ ಧನ್ಯವಾದಾ:|

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ದೇವೀ ಮಹಾತ್ಮೆಯ ೬ ಕಂತುಗಳಲ್ಲಿ, ತುಂಬಾ ಚೆಂದಕೆ ನಿರೂಪಿಸಿದ್ದು ಕೊಶೀ ಕೊಟ್ಟತ್ತು.
  ಪ್ರತಿಯೊಂದು ವಾಕ್ಯಲ್ಲಿಯೂ ಕಥೆಯ ಒಂದೊಂದು ಭಾಗಂಗಳ ಸೂಕ್ಷ್ಮವಾಗಿ ಅಳವಡಿಸಿಂಡು ಓದುವವಕ್ಕೆ ಒಳ್ಳೆ ಮಾಹಿತಿ ಕೂಡಾ ಕೊಟ್ಟತ್ತು.

  [Reply]

  VA:F [1.9.22_1171]
  Rating: +1 (from 1 vote)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಸುಂದರ ನಿರೂಪಣೆ, ಗೋಪಾಲಣ್ಣಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಕೋಳ್ಯೂರು ಕಿರಣ

  ತುಂಬಾ ಖುಷಿ ಆತು. ಯಕ್ಷಗಾನಲ್ಲಿ ನೋಡಿದ ಹಾಂಗೆ ಆತು .ಒಪ್ಪಂಗ

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಚೆ೦ದದ ನಿರೂಪಣೆ.ಧನ್ಯವಾದ ಗೋಪಾಲಣ್ಣ.ಶಿವನ ಸ೦ಧಾನಕ್ಕೆ ಕಳುಸಿದ್ದು ನವಗೆ ಹೊಸತ್ತು.
  ಅ೦ತೂ ಶು೦ಭ ದಾನವನೂ ಹೆಣ್ಣು,ಹೊನ್ನು,ಮಣ್ಣಿನ ಆಸೆ೦ದಾಗಿ ಮಣ್ಣು ತಿ೦ದದು,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 6. ಜಯಶ್ರೀ ನೀರಮೂಲೆ
  jayashree.neeramoole

  ದೇವೀ ಮಹಾತ್ಮೆ ಸರಳ ರೂಪಲ್ಲಿ ಬೈಲಿಲ್ಲಿ ಮೂಡಿ ಬಂದದು ತುಂಬಾ ಖುಷಿ ಆತು… ಗೋಪಾಲಣ್ಣ೦ಗೆ ಧನ್ಯವಾದಂಗ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಶ್ಯಾಮಣ್ಣಡಾಮಹೇಶಣ್ಣಸಂಪಾದಕ°ದೊಡ್ಮನೆ ಭಾವಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿದೊಡ್ಡಮಾವ°ಬೊಳುಂಬು ಮಾವ°ಕಜೆವಸಂತ°vreddhiಅಕ್ಷರದಣ್ಣಕಾವಿನಮೂಲೆ ಮಾಣಿದೇವಸ್ಯ ಮಾಣಿಡಾಗುಟ್ರಕ್ಕ°ಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆಡೈಮಂಡು ಭಾವಕಳಾಯಿ ಗೀತತ್ತೆಪೆಂಗಣ್ಣ°ಪ್ರಕಾಶಪ್ಪಚ್ಚಿಕೇಜಿಮಾವ°ಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ಶ್ರೀಅಕ್ಕ°ಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ