ದೇವಿ ಮಹಾತ್ಮೆ ಆರಂಭ

November 14, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸ್ವಾರೋಚಿಷ ಹೇಳುವ ಮನ್ವಂತರ ಹದಿನಾಲ್ಕು ಮನ್ವಂತರಂಗಳಲ್ಲಿ ಎರಡನೆದು.
ಆವಾಗ ಚೈತ್ರ ವಂಶಲ್ಲಿ ಸುರಥ ಹೇಳುವ ಧರ್ಮಾತ್ಮನಾದ ರಾಜ ಜನ್ಮತಾಳಿದ.
ಅವ ಸಮಸ್ತ ಭೋಗ ಭಾಗ್ಯಂಗಳ ಹೊಂದಿ ಸುಖ ಸಂತೋಷಂದ ಕಾಲಕಳಕ್ಕೊಂಡಿದ್ದಿದ್ದ.
ಕೋಲಾವಿಧ್ವಂಸಕರು ಹೇಳುವ ಶತ್ರುಗೊ ಬಂದು ರಾಜನ ಸೋಲಿಸಿ ಸಾಮ್ರಾಜ್ಯವ ಕಬಳಿಸಿದವು. ಅದೇ ಸಮಯಕ್ಕೆ ದ್ರೋಹಿ ಸಾಮಂತರು, ಮಕ್ಕೊ,ಮಂತ್ರಿಗೊ ಎಲ್ಲಾ ಸೇರಿ ರಾಜನ ತೆಗೆದುಹಾಕಿ ಅವಂಗೆ ಎಂತದೂ ಇಲ್ಲದ್ದ ಹಾಂಗೆ ಮಾಡಿದವು.
[ಈಗಳೂ ಹಾಂಗೆ ಅಲ್ಲದೊ,ಆಳುವವಕ್ಕೆ ಏನಾದರೂ ಕೆಟ್ಟ ಕಾಲ ಬಂದು ರಜಾ ಹಿನ್ನಡೆ ಅಪ್ಪದೇ ತಡ-ಅವನ ಕೆಳ ಬೀಳುಸಲೆ ಎಲ್ಲರೂ ತಯಾರಾವ್ತವು].

ಸುರಥಂಗೆ ತುಂಬಾ ಬೇಜಾರಾತು.
ಛೆ,ಎನ್ನ ಮನೆಯವೇ ಹೀಂಗೆ ಮಾಡಿದವನ್ನೆ“ಹೇಳುವ ಬೇಜಾರ ಅವಂಗೆ ಶತ್ರುಗಳೊಟ್ಟಿಂಗೆ ಸೋತ ಬೇಜಾರಂದಲೂ ಹೆಚ್ಚಾತು.
ಈಗ ಒಂದೋ ಅವ ತನ್ನ ಸಕಾಯಕ್ಕೆ ಆರೆಲ್ಲ ಬತ್ತವೊ ನೋಡಿಕೊಂಡು ಯುದ್ಧ ಮಾಡೆಕ್ಕು. ಇಲ್ಲದ್ದರೆ ಮರ್ಯಾದೆ ಕಳಕ್ಕೊಂಡು ಉಳಿದವರ ಹಂಗಿಲಿರೆಕ್ಕು-ಬರೆ ಜೀವ ಒಳಿಶಿಯೊಂಬಲೆ ಬೇಕಾಗಿ!
ಈಗ ಸೇನೆಲೂ ಹೆಚ್ಚಿನವೂ ಅವನ ಕಡೆಲಿ ಇತ್ತಿದ್ದವಿಲ್ಲೆ. ಬಲಿಷ್ಠರಾದ ಅವರೊಟ್ಟಿಂಗೆ ಯುದ್ಧ ಮಾಡುದು ಕಷ್ಟ-ಹೇಳಿ ಅವಂಗೆ ಬೋಧ್ಯ ಆತು.
ಯುದ್ಧ ಮಾಡಿದರೆ,ರಣರಂಗಂದ ಓಡುದು ಕ್ಷತ್ರಿಯ ಧರ್ಮಕ್ಕೆ ವಿರುದ್ಧ ಆವುತ್ತು. ಅವಂಗೆ ಎಂತದೂ ಬೇಡ ಹೇಳಿ ಕಂಡುಹೋತು.
ಬೇಟೆಗೆ ಹೋವ್ತೆ ಹೇಳಿ ಅವ ಅಲ್ಲಿಂದ ತಪ್ಪಿಸಿ ಕಾಡಿಂಗೆ ಹೋದ.

ಕಾಡಿಲಿ ಅವಂಗೆ ಮನಶ್ಶಾಂತಿ ಸಿಕ್ಕಿದ್ದಿಲ್ಲೆ-“ಅಯ್ಯೋ ಈ ಪ್ರಪಂಚವೇ! ಹಣಕ್ಕಾಗಿ,ಅಧಿಕಾರಕ್ಕೆ ಬೇಕಾಗಿ ಜನಂಗೊ ಸ್ವಂತ ಬಂಧುಗಳನ್ನೂ ಸೋಲಿಸುತ್ತವನ್ನೆ?ಇದಕ್ಕೆಲ್ಲ ಎಂತ ಅರ್ಥ?ಎನ್ನ ಮನಸ್ಸಿಲೇ ಇದು ಕೊರೆತ್ತನ್ನೆ?ಎನಗೆ ಯಾವಾಗ ಇದರಿಂದ ಮುಕ್ತಿ?“ಹೇಳಿ ಚಿಂತೆ ಮಾಡಿಕೊಂಡಿತ್ತಿದ್ದ.
ಒಂದು ಇರುಳು ಕಳುದತ್ತು.
ಅವ ಉದಿಯಪ್ಪಗ ಒಂದು ಸರೋವರಲ್ಲಿ ಮಿಂದು ದೇವರನ್ನೇ ನೆನೆಸಿಕೊಂಡು ಮುಂದೆ ಬಪ್ಪಾಗ ಅವಂಗೆ ಸುಮೇಧ ಋಷಿಯ ಆಶ್ರಮ ಕಂಡತ್ತು.
ಒಳ ಹೋಗಿ ಋಷಿಗೆ ನಮಸ್ಕಾರ ಮಾಡಿದ. ಋಷಿ ರಾಜಂಗೆ ಸತ್ಕಾರ ಮಾಡಿದವು. ಆದರೆ ರಾಜಂಗೆ ಅಲ್ಲಿಯೂ ಮನಸ್ಸಿಂಗೆ ಸಮಾಧಾನ ಸಿಕ್ಕಿದ್ದಿಲ್ಲೆ. ಅವ ಅಲ್ಲಿಂದಲೂ ಹೆರ ಬಂದು ಒಂದು ಸರೋವರದ ಹತ್ತರೆ ಹೋದ.
ಅಲ್ಲಿ ಒಬ್ಬ ಮನುಷ್ಯ ತಪಸ್ಸು ಮಾಡುತ್ತಾ ಇದ್ದಿದ್ದ.

ರಾಜ ಅವನ ಹತ್ತರೆ ಮಾತಾಡಿದ. ಅವ ಹೇಳಿದ-“ಮಹಾರಾಜರೇ,ಆನು ವೈಶ್ಯ. ಎನ್ನ ಹೆಸರು ಸಮಾಧಿ ಹೇಳಿ. ಎನಗೆ ತುಂಬಾ ಸಂಪತ್ತೂ, ದೊಡ್ಡ ವಹಿವಾಟೂ ಇದ್ದತ್ತು. ಎನ್ನ ಮಕ್ಕಳೇ ಆಚೀಚೆ ಕಚ್ಚಾಡಿ ಸಂಪತ್ತೆಲ್ಲಾ ಅಪಹಾರ ಮಾಡಿದವು. ಎನ್ನ ಮನೆಂದ ಹೆರಹಾಕಿದವು. ಇದು ಅವರ ಪಡೆದು ಸಾಂಕಿದ್ದಕ್ಕೆ ಎನಗೆ ಸಿಕ್ಕಿದ ಫಲ! ಎನ್ನ ಮನಸ್ಸಿಂಗಾದ ಬೇನೆ ಹೋಪಲೆ ಬೇಕಾಗಿ ಈ ಕಾಡಿಂಗೆ ಬಂದು ದೇವರ ಧ್ಯಾನ ಮಾಡುತ್ತಾ ಇದ್ದೆ…..”
ರಾಜಂಗೆ ತುಂಬಾ ಬೇಜಾರಾತು. ಅವ ತನ್ನ ಕತೆಯನ್ನೂ ಹೇಳಿ-“ವಣಿಕ್ ವರ್ಯನೇ, ನೀನೂ ಆನೂ ಒಂದೇ ಹಾಂಗೆ ದುಃಖಿತರು. ಎಂತ ಮಾಡಿರೂ ಬೇಜಾರ ಹೋಗ! ಹೀಂಗೆ ಆ ದುಷ್ಟರ ಬಗ್ಗೆ ಆಲೋಚಿಸಿರೆ ನಮಗೇ ಹಾಳು. ನಾವು ಇಲ್ಲೇ ಹತ್ತರೆ  ಸುಮೇಧ ಋಷಿಗೊ ಇದ್ದವು . ಅವರ ಹತ್ತರೆ ಹೋಪೊ. ನಮಗೆ ಅವು ಎಂತಾದರೂ ಒಳ್ಳೆ ಉಪದೇಶ ಕೊಡುಗು.”ಹೇಳಿ ಹೇಳಿದ.
ಜಗತ್ತಿಲಿ ಒಂದೇ ತರದ ಗುಣ ಅಥವಾ ಚಟ [ಕೆಟ್ಟ ಅಭ್ಯಾಸ] ಇಪ್ಪವಕ್ಕೆ ಸ್ನೇಹ ಆವುತ್ತು -ಹೇಳುವುದು ಸತ್ಯ!

ಇಲ್ಲಿ ಸುರಥನೂ ಸಮಾಧಿಯೂ ಒಂದೇ ತರದ ಬೇಜಾರಂದ ಪೀಡಿತರು-ಇಬ್ಬರೂ ಧರ್ಮಾತ್ಮರು,ಮೋಸಹೋದವರು.
ಇಬ್ಬರೂ ಋಷಿಯ ಹತ್ತರೆ ಹೋಗಿ ತಮ್ಮ ದುಃಖವ ತೋಡಿಕೊಂಡವು.ಸದುಪದೇಶ ಕೊಟ್ಟು ತಿಳಿವಳಿಕೆ ಬಪ್ಪ ಹಾಂಗೆ ಮಾಡೆಕ್ಕು ಹೇಳಿ ಕೇಳಿಕೊಂಡವು.

ಹಸನ್ಮುಖರಾದ ಋಷಿ ಸುಮೇಧರು “ಮಹಾರಾಜ-ವೈಶ್ಯರೇ, ಈ ಸಂಸಾರ ಎಲ್ಲಾ ಮಾಯೆಯಿಂದ ಕೂಡಿದ್ದು.ನಿಂಗೊ ಇದೆಲ್ಲಾ ಮಾಯೆಯ ಕೈವಾಡ ಹೇಳಿ ತಿಳಿದು,ಆದಿಮಾಯಾಸ್ವರೂಪಿಣಿಯಾದ ದೇವಿಯ ಸ್ಮರಿಸಿರೆ ನಿಂಗೊಗೆ ಶ್ರೇಯಸ್ಸಕ್ಕು…”ಹೇಳಿದವು.
ಮಹರ್ಷಿಗಳೇ, ಆದಿಮಾಯೆ ಹೇಳಿರೆ ಆರು? ಅದರ ಮಹಿಮೆ ಎಂತರ?ಪೂರ್ತಿ ಹೇಳುವ ಕೃಪೆ ಮಾಡಿ“ಹೇಳಿ ರಾಜನೂ ವೈಶ್ಯನೂ ಸುಮೇಧ ಋಷಿಯ ಕಾಲಿಂಗೆ ಪ್ರಣಾಮ ಮಾಡಿದವು.

“ಧರ್ಮಾತ್ಮರೇ,ಈ ಜಗತ್ತಿನ ಸೃಷ್ಟಿ,ಸ್ಥಿತಿ,ಲಯ-ಮೂರಕ್ಕೂ ಕಾರಣ ಆದ ಮಹಾದೇವಿಯೇ ಈ ಆದಿಮಾಯೆ!
ಅದರ ಮಹಿಮೆ ಸಾಮಾನ್ಯ ಅಲ್ಲ,ಭಕ್ತಿಂದ ಕೇಳೆಕ್ಕು…” ಹೇಳಿ ಸುಮೇಧ ಋಷಿ ದೇವಿಯ ಮಹಾತ್ಮೆಯ ಹೇಳುಲೆ ಸುರು ಮಾಡಿದವು.

~*~*~*~

ದೇವಿ ಮಹಾತ್ಮೆ ಆರಂಭ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ದೇವಿ ಮಹಾತ್ಮೆಯ ಪೀಠಿಕೆ , ಹಿನ್ನಲೆ ವಿವರಿಸಿದ್ದು ಲಾಯಕ ಆಯ್ದು. ಇದು ಹೀಂಗೇ ಮುಂದುವರುದು ಇಡೀ ದೇವಿಮಹಾತ್ಮೆ ಕತೆಯ ಇಲ್ಲಿ ಎದುರು ನೋಡ್ಳಕ್ಕೋ ಗೋಪಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಒಳ್ಳೇದು, ಲೇಖನಮಾಲೆಗೆ ಕಾದುಕೂದ೦ಡಿದ್ದೆ.

  [Reply]

  VA:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ದೇವೀ ಮಹಾತ್ಮೆ ಪೀಠಿಕೆ ಲಾಯಕ ಆಯಿದು… ಇದರ ಓದುವಗ ಕಳೆದ ವರ್ಷದ ನವರಾತ್ರಿ ಸಮಯಲ್ಲಿ ಗುರುಗೋ ಮಾಡಿದ ಸಪ್ತಶತೀ ಪ್ರವಚನಂಗ ಹರೇ ರಾಮಲ್ಲಿ ಕೇಳಿದ್ದು ನೆನಪಾತು…

  [Reply]

  VA:F [1.9.22_1171]
  Rating: 0 (from 0 votes)
 4. ವೇಣೂರಣ್ಣ

  ನಮ್ಮ ಬಲಿಪಜ್ಜ ಬರದ ಐದು ದಿನದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದ ಮೊದಲಾಣ ದಿನ ಅದುವ ಕಥೆ ಇದುವೇ. ಕಥೆ ಲಾಯಕ್ಕಿದ್ದು

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ದೇವೀ ಮಹಾತ್ಮೆ ಬಗ್ಗೆ ಪೀಠಿಕೆ ತುಂಬಾ ಲಾಯಿಕ ಆಯಿದು.
  ಆ ಆದಿ ಮಾಯೆ ಬಗ್ಗೆ ಹೆಚ್ಚಿನ ವಿವರಂಗಳ ಮುಂದಾಣ ಕಂತಿಲ್ಲಿ ನಿರೀಕ್ಷಿಸುತ್ತೆ

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಧನ್ಯವಾದ ಗೋಪಾಲಣ್ಣ.
  ದೇವೀ ಮಹಾತ್ಮೆಯ ಹಿನ್ನೆಲೆಯ ಪರಿಚಯ ಆತು. ಮು೦ದಾಣದ್ದಕ್ಕೆ ಕಾವ ಹಾ೦ಗಾತು.ಚೆ೦ದದ ವಿವರಣೆ.

  [Reply]

  VA:F [1.9.22_1171]
  Rating: 0 (from 0 votes)
 7. ಮಂಗ್ಳೂರ ಮಾಣಿ

  ಕಥೆಯ ವಿವರಣೆ ಲಾಯಕಾಯಿದು ಮಾವಾ.
  ಕಳುದೊರಿಶ ನವರಾತ್ರಿಗೆ ಗುರುಗೊ ಬೆಂಗಳೂರಿಲ್ಲಿ “ದುರ್ಗಾ ಸಪ್ತಶತೀ” ಹೇಳುವ ಹೆಸರಿಲ್ಲಿ ಈ ಎಲ್ಲ ಕಥೆ ಹೆಳಿತ್ತಿದ್ದವು…
  ಖುಶಿ ಆತು ಓದಿ :)

  [Reply]

  VA:F [1.9.22_1171]
  Rating: 0 (from 0 votes)
 8. ಶ್ರೀಅಕ್ಕ°

  ಗೋಪಾಲಣ್ಣ ಯಾವ ವಿಷಯ ಬರದರೂ ಅದು ಪೂರ್ಣ ಆಗಿರ್ತು. ದೇವಿ ಮಹಾತ್ಮೆಯ ಆರಂಭದ ಬಗ್ಗೆ ಬರದ್ದದು ಲಾಯ್ಕಾಯಿದು.

  [ಈಗಳೂ ಹಾಂಗೆ ಅಲ್ಲದೊ,ಆಳುವವಕ್ಕೆ ಏನಾದರೂ ಕೆಟ್ಟ ಕಾಲ ಬಂದು ರಜಾ ಹಿನ್ನಡೆ ಅಪ್ಪದೇ ತಡ-ಅವನ ಕೆಳ ಬೀಳುಸಲೆ ಎಲ್ಲರೂ ತಯಾರಾವ್ತವು].

  ಖಂಡಿತಾ!!! ಆರಿಂಗೆ ಆದರೂ ಒಳ್ಳೆ ಕೆಲಸ ಮಾಡ್ತವಂಗೆ, ಮುಂದೆ ಹೋಪವಂಗೆ ಏನಾದರೂ ಕೆಟ್ಟ ಕಾಲ ಬಂದರೆ ಅವನ ಅಡ್ಡ ಬೀಳ್ಸುಲೆ ಸುಮಾರು ಜನ ಕಾಲು ಕೊಡ್ತವಪ್ಪ!!

  [ಛೆ,ಎನ್ನ ಮನೆಯವೇ ಹೀಂಗೆ ಮಾಡಿದವನ್ನೆ“ಹೇಳುವ ಬೇಜಾರ ಅವಂಗೆ ಶತ್ರುಗಳೊಟ್ಟಿಂಗೆ ಸೋತ ಬೇಜಾರಂದಲೂ ಹೆಚ್ಚಾತು.]

  ಸಮಯ ದೋಷದ ಸಮಯಲ್ಲಿ ಹತ್ತರಾಣ ಬಂಧುಗಳೇ ದೂರ ಮಾಡಿದರೆ ಅದು ಯಾವುದೇ ಶರೀರ ಬಾಧೆಂದ ಹೆಚ್ಚು ಬೇನೆ ಕೊಡ್ತು.. ಅದು ಮನಸ್ಸಿಂಗೆ ನಾಟುವ ಬೇನೆ ಅಲ್ಲದಾ?

  [ಅಯ್ಯೋ ಈ ಪ್ರಪಂಚವೇ! ಹಣಕ್ಕಾಗಿ,ಅಧಿಕಾರಕ್ಕೆ ಬೇಕಾಗಿ ಜನಂಗೊ ಸ್ವಂತ ಬಂಧುಗಳನ್ನೂ ಸೋಲಿಸುತ್ತವನ್ನೆ?]

  ಇದು ಸರ್ವ ಕಾಲಿಕ ವಿಷಯ ಅಲ್ಲದಾ ಗೋಪಾಲಣ್ಣ?
  ಎಲ್ಲಾ ಕಾಲಲ್ಲಿ ಕೂಡಾ ಪೈಸೆಗಾಗಿ ಸ್ವಂತ ಬಂಧುಗಳ ಸೋಲುಸುವ ಜೆನಂಗ ಇದ್ದವಲ್ಲದಾ? :-(

  [ಜಗತ್ತಿಲಿ ಒಂದೇ ತರದ ಗುಣ ಅಥವಾ ಚಟ [ಕೆಟ್ಟ ಅಭ್ಯಾಸ] ಇಪ್ಪವಕ್ಕೆ ಸ್ನೇಹ ಆವುತ್ತು -ಹೇಳುವುದು ಸತ್ಯ!
  ಇಲ್ಲಿ ಸುರಥನೂ ಸಮಾಧಿಯೂ ಒಂದೇ ತರದ ಬೇಜಾರಂದ ಪೀಡಿತರು-]

  ಒಂದೇ ರೀತಿಯ ಭಾವನೆಯ ಜನಂಗ ಒಂದಪ್ಪದು ವಿಧಿ ನಿಯಮ ಅಲ್ಲದಾ?
  ಇದು ದೇವರು ಕೊಡುವ ಅವಕಾಶ.. ಒಬ್ಬಕ್ಕೊಬ್ಬನ ಭಾವನೆಗಳ ಹಂಚಿ ಜೀವನ ಹಗುರ ಮಾಡ್ಲೆ…

  ಲಾಯ್ಕಾಯಿದು ಗೋಪಾಲಣ್ಣ. ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವವೇಣಿಯಕ್ಕ°ವಿನಯ ಶಂಕರ, ಚೆಕ್ಕೆಮನೆಕಜೆವಸಂತ°ಮಂಗ್ಳೂರ ಮಾಣಿಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣಅನು ಉಡುಪುಮೂಲೆವೆಂಕಟ್ ಕೋಟೂರುಅಡ್ಕತ್ತಿಮಾರುಮಾವ°ವಸಂತರಾಜ್ ಹಳೆಮನೆವಿಜಯತ್ತೆಕಾವಿನಮೂಲೆ ಮಾಣಿಮಾಲಕ್ಕ°ಶರ್ಮಪ್ಪಚ್ಚಿಬೊಳುಂಬು ಮಾವ°ಯೇನಂಕೂಡ್ಳು ಅಣ್ಣಉಡುಪುಮೂಲೆ ಅಪ್ಪಚ್ಚಿಸರ್ಪಮಲೆ ಮಾವ°ತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿಅಜ್ಜಕಾನ ಭಾವಚೂರಿಬೈಲು ದೀಪಕ್ಕರಾಜಣ್ಣಪುತ್ತೂರುಬಾವಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ