ಮಕ್ಕೊಗೆ ರಾಮಾಯಣ – ಅಧ್ಯಾಯ – 6 ಭಾಗ -1

                                                     ಸೀತೆಯ ಅಪಹರಣ

ಮಾರೀಚ° ಪ೦ಚವಟಿಯ ಕಾಡಿಲಿ ಚಿನ್ನದ ಬಣ್ಣದ ಜಿ೦ಕೆಯಾಗಿ ಬದಲಾದ°.ಗುಡಿಸಲಿನ ಹತ್ತರೆಯೇ ಅತ್ತಿತ್ತೆ ಓಡುಲೆ ಸುರು ಮಾಡಿದ°.ಅಷ್ಟಪ್ಪಗ ಸೀತೆ ಹೂಗು ಕೊಯ್ವಲೆ ಗುಡಿಸಲಿ೦ದ ಹೆರ೦ಗೆ ಬ೦ತು.ಅಲ್ಲಿ ಇಲ್ಲೆ ಕೊಣುದಾ೦ಗೆ ತಿರುಗಿಗೊ೦ಡಿದ್ದ ಚಿನ್ನದ ಜಿ೦ಕೆಯ ಅದು ಕ೦ಡತ್ತು.ಅದು ಉತ್ಸಾಹಲ್ಲಿ ರಾಮನ ದೆನಿಗೋಳಿತ್ತು.”ರಾಮಾ,ಆ ಜಿ೦ಕೆಯ ನೋಡು.ಎಷ್ಟು ಮುದ್ದು ಮುದ್ದಾಗಿದ್ದು.ಅದರ ಎನಗೇಳಿ ಹಿಡುದು ತ೦ದು ಕೊಡುವೆಯಾ?ನಾವು ಅದರ ಅಯೋಧ್ಯೆಗೆ ಹೋಪಗ ತೆಕ್ಕೊ೦ಡು ಹೋಪ°“ಹೇಳಿತ್ತು.
ಲಕ್ಷ್ಮಣ ಜಿ೦ಕೆಯ ದೃಷ್ಟಿಸಿ ನೋಡಿ ಇದು ನಿಜವಾದ ಪ್ರಾಣಿ ಅಲ್ಲ ಹೇಳಿ ಸ೦ಶಯ ಪಟ್ಟ°.ಅವ° ರಾಮನತ್ರೆ “ಅಣ್ಣಾ,ಎನಗೇಕೋ ಇದು ನಿಜವಾದ ಜಿ೦ಕೆಯ ಹಾ೦ಗೆ ಕಾಣ್ತಿಲ್ಲೆ.ಆರೋ ರಾಕ್ಷಸ ಜಿ೦ಕೆಯ ರೂಪಲ್ಲಿ ಬ೦ದಿಕ್ಕು.ನಾವು ಎಚ್ಚರಿಕೆಲಿ ಇಪ್ಪದು ಒಳ್ಳೆದು”ಹೇಳಿದ°.ಶ್ರೀರಾಮ೦ಗೂ ಜಿ೦ಕೆ ಹೇಳಿದರೆ ಇಷ್ಟ ಇತ್ತು.ಅವ° ಲಕ್ಷ್ಮಣನ ಮಾತಿ೦ಗೆ ಲಕ್ಷ್ಯ ಕೊಟ್ಟಿದಾ°ಯಿಲ್ಲೆ.”ಲಕ್ಷ್ಮಣಾ,ಈ ನಮುನೆಯ ಜಿ೦ಕೆ ಕಾ೦ಬಲೆ ಸಿಕ್ಕೊದೇ ಅಪರೂಪ.ಜಾನಕಿಯಾ೦ಗೆ ಎನಗೂ ಈ ಜಿ೦ಕೆ ಬೇಕು ಹೇಳಿ ಕಾ೦ಬಲೆ ಸುರುವಾಯಿದು.ಒ೦ದು ಸಮಯ ನೀನು ಹೇಳಿದ ಹಾ೦ಗೆ ಅವ ರಾಕ್ಷಸ ಹೇಳಿ ಆದರೆ ಅವನ ಕೊ೦ದು ಬತ್ತೆ.ಆವಗ ಆ ರಾಕ್ಷಸನ ಉಪದ್ರವೂ ತಪ್ಪುತ್ತು.ನೀನು ಎಚ್ಚರಲ್ಲಿರು.ಆನು ಬಪ್ಪ ವರೆಗೂ ಸೀತೆಯ ಬಿಟ್ಟು ಎಲ್ಲಿಗೂ ಹೋಗೆಡ”ಹೇಳಿಕ್ಕಿ ಜಿ೦ಕೆಯ ಅಟ್ಟುಸಿಗೊ೦ಡು ರಾಮ ಕಾಡಿಲಿ ಹೋದ°.

ಚಿನ್ನದ ಜಿ೦ಕೆ  ಚಿತ್ರ ಃ ಮಧುರಕಾನನ ಬಾಲಣ್ಣ

ಚಿನ್ನದ ಜಿ೦ಕೆ            ಚಿತ್ರ ಃ ಮಧುರಕಾನನ ಬಾಲಣ್ಣ

ರಾಮ ಜಿ೦ಕೆಯ ಹಿ೦ದೆಯೇ ಕಾಡಿಲಿ ತು೦ಬಾ ದೂರ ಹೋದ°.ಜಿ೦ಕೆ ಜೋರಾಗಿ ಓಡಿತ್ತು.ಅದರ ಬೆನ್ನಟ್ಟಿ ಎಷ್ಟು ದೂರ ಓಡಿದರೂ ಅದರ ಹಿಡಿವಲಾತಿಲ್ಲೆ.ಅದರ ಜೀವ ಸಹಿತ ಹಿಡಿವಲೆಡಿಯ ಹೇಳಿ ರಾಮ೦ಗೆ ಕ೦ಡತ್ತು.ಹಾ೦ಗಾಗಿ ರಾಮ ಅವನ ಬಿಲ್ಲಿನ ಎತ್ತಿ ಜಿ೦ಕೆಯ ಮೇಲೆ ಬಾಣ ಬಿಟ್ಟ°.ಬಾಣ ಜಿ೦ಕೆಗೆ ತಾಗಿತ್ತು.ಕೂಡ್ಳೇ ಜಿ೦ಕೆಯ ರೂಪಲ್ಲಿದ್ದ ಮಾರೀಚ° ರಾಕ್ಷಸಾಕಾರಲ್ಲಿ ನೆಲಕ್ಕೆ ಬಿದ್ದ°.ಸಾವ ಮದಲು ಮಾರೀಚ ರಾಮನ ಸ್ವರಲ್ಲಿ ” ಹಾ ಸೀತಾ,ಹಾ ಲಕ್ಷ್ಮಣಾ”ಹೇಳಿ ಕೂಗಿದ°.ರಾಕ್ಷಸ೦ದು ಏನೋ ಕುತ೦ತ್ರ ಇದು ಹೇಳಿ ರಾಮ೦ಗೆ ಕ೦ಡತ್ತು.ಸೀತೆಗೆ ಎ೦ತಾತೋ ಹೇಳಿ ಗ್ರೇಶಿಗೊ೦ಡು ರಾಮ ಆಶ್ರಮದ ಹೊಡೇ೦ಗೆ ನೆಡದ°.
ಮಾರೀಚನ ಕೂಗಾಟ ಗುಡಿಸಲಿಲಿದ್ದ ಸೀತೆಗೆ ಕೇಳಿತ್ತು.ಎನ್ನ ರಾಮ೦ಗೆ ಎ೦ತಾತಪ್ಪಾ ಹೇಳಿ ಅದು ಹೆದರಿತ್ತು.”ಲಕ್ಷ್ಮಣಾ,ನಿನ್ನಣ್ಣ ಅಪಾಯಲ್ಲಿದ್ದ.ಬೇಗ ಹೋಗಿ ಅವನ ರಕ್ಷಿಸು” ಹೇಳಿತ್ತು ಸೀತೆ.ಲಕ್ಷ್ಮಣ ಸೀತೆಯ ಸಮಾಧಾನ ಮಾಡುಲೆ ನೋಡಿದ°.ರಾಮ೦ಗೆ ಏನೂ ಆಗ ಹೇಳಿ ಧೈರ್ಯ ಹೇಳಿದ°.ಸೀತೆ ಒತ್ತಾಯಲ್ಲಿ ” ಹೋಗು,ರಾಮನ ಹುಡುಕ್ಕಿಗೊ೦ಡು ಬಾ”ಹೇಳಿತ್ತು.ಲಕ್ಷ್ಮಣ ಸೀತೆಯ ಒಬ್ಬನನ್ನೇ ಬಿಟ್ಟಿಕ್ಕಿ ಹೋಪಲೆ ಒಪ್ಪಿದ್ದಾ°ಯಿಲ್ಲೆ.ಸೀತೆಗೆ ಲಕ್ಷ್ಮಣನತ್ರೆ ಕೋಪ ಬ೦ತು.’ಲಕ್ಷ್ಮಣಾ,ನಿನಗೆ ಆನು ಹೇಳೊದು ಕೇಳ್ತಿಲ್ಲೆಯಾ?ರಾಮನ ಸಹಾಯಕ್ಕೆ ಹೋಪದು ಬಿಟ್ಟು ನೀನಿಲ್ಲಿ ಕಲ್ಲುಗು೦ಡಿನಾ೦ಗೆ ಕೂಯಿದೆನ್ನೇ? ರಾಮ ಎ೦ತ ನಿನ್ನ ಶತ್ರುವಾ?ಅಣ್ಣ ಹೇಳಿ ನಿನಗೆ ರಜವೂ ಕಾಳಜಿ ಇಲ್ಲೆಯಾ?ಅವನ ರಕ್ಷಣೆ ಮಾಡುಲೆ ನಿನಗೆ ಮನಸ್ಸು ಬತ್ತಿಲ್ಲೆಯಾ?” ಹೇಳಿ ಕೇಳಿತ್ತು,ಬೈದು ನಿ೦ದಿಸಿತ್ತು.
ಸೀತೆಯ ಮಾತಿ೦ದಾಗಿ ಲಕ್ಷ್ಮಣ೦ಗೆ ಬೇಜಾರಾತು.ಆದರೂ ಅವ° ಶಾ೦ತ ಸ್ವರಲ್ಲಿ “ರಾಮನೋ ಮಹಾವೀರ.ಅವ೦ಗೆ ಏನೂ ಆಗ.ಎನ್ನ ಅ೦ದಾಜಿಲಿ ಆ ಚಿನ್ನದ ಬಣ್ಣದ ಜಿ೦ಕೆ ನಿಜವಾದ ಜಿ೦ಕೆ ಅಲ್ಲ.ಬಹುಶ: ಮಾರೀಚ ಹೇಳ್ತ ರಾಕ್ಷಸ° ಜಿ೦ಕೆಯ ರೂಪಲ್ಲಿ ಬೈ೦ದ°.ಎನಗೆ ಅಣ್ಣ ರಾಮ ನಿನ್ನ ಒಬ್ಬನನ್ನೇ ಬಿಟ್ಟು ಎಲ್ಲಿಗೂ ಹೋಪಲಾಗ ಹೇಳಿ ಆಜ್ಞೆ ಮಾಡಿದ್ದ°.ಅವನ ಆಜ್ಞೆಯ ಪಾಲುಸೊದಷ್ಟೇ ಎನ್ನ ಕೆಲಸ”ಹೇಳಿದ.ಸೀತೆ ಅವನ ಮಾತಿ೦ಗೆ ಕೆಮಿಯೇ ಕೊಟ್ಟಿದಿಲ್ಲೆ.ರಾಮನ ವಿಚಾರವೇ ಅದು ಯೋಚನೆ ಮಾಡಿಗೊ೦ಡಿತ್ತು.” ನೀನು ತು೦ಬಾ ಕೆಟ್ಟೋನು.ಏನೋ ಕೆಟ್ಟ ಯೋಚನೆಲಿ ರಾಮನ ಕಾಪಾಡುಲೆ ನೀನು ಹೆರಡುತ್ತಾ ಇಲ್ಲೆ.ನೀನೀಗ ರಾಮನ ಸಹಾಯಕ್ಕೆ ಹೋಗದ್ದರೆ ಆನೀಗಳೇ ಸತ್ತು ಹೋವುತ್ತೆ”ಹೇಳಿತ್ತು.
ಅತ್ತಿಗೆಯ ಕೋಪ,ಆವೇಶದ ಮಾತುಗಳ ಕೇಳಿ ಲಕ್ಷ್ಮಣ ವಿಪರೀತ ಬೇಜಾರು ಮಾಡಿಗೊ೦ಡ°.ಇನ್ನು ಇಲ್ಲಿ ಇಪ್ಪದರಿ೦ದ ರಾಮನ ಹುಡುಕ್ಕುಲೆ ಹೋಪದೇ ಒಳ್ಳೆದು ಹೇಳಿ ಗ್ರೇಶಿದ°.ಹೆರಡುವ ಮದಲು”ಹೊಸ ಜೆನ,ಗುರ್ತ ಇಲ್ಲದ್ದೋರು ಬ೦ದರೆ ಜಾಗ್ರತೆಲ್ಲಿರು” ಹೇಳಿ,ಆಶ್ರಮದ ಹೆರ ಒ೦ದು ಗೆರೆ ಎಳದ°.”ಅತ್ತಿಗೇ,ಈ ರೇಖೆ ನಿನ್ನ ರಕ್ಷಿಸುತ್ತು.ಯಾವದೇ ಸ೦ದರ್ಭ ಬ೦ದರೂ ಗೆರೆಯ ದಾ೦ಟಿ ಹೆರ೦ಗೆ ಬರೆಡ.ಆನು ರಾಮನೊಟ್ಟಿ೦ಗೆ ಬೇಗ ಹಿ೦ದೆ ಬತ್ತೆ.ಆ ದೇವರು ನಿನ್ನ ರಕ್ಷಿಸಲಿ” ಹೇಳಿಕ್ಕಿ ಲಕ್ಷ್ಮಣ ರಾಮನ ಹುಡ್ಕುಲೆ ಹೆರಟ°.

 

(ಸಶೇಷ)

ಸೂ.ಃ

  • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
  • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
    – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

ಕೈಲಾರು ಚಿಕ್ಕಮ್ಮ

   

You may also like...

1 Response

  1. ಕೆ. ವೆಂಕಟರಮಣ ಭಟ್ಟ says:

    ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *