ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣದೀಪಿಕಾಬಟ್ಟಮಾವ°ಸುಭಗವಸಂತರಾಜ್ ಹಳೆಮನೆಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿಪುತ್ತೂರುಬಾವಚೆನ್ನಬೆಟ್ಟಣ್ಣಕಳಾಯಿ ಗೀತತ್ತೆಸಂಪಾದಕ° (editor)ಸರ್ಪಮಲೆ ಮಾವ°ಕೊಳಚ್ಚಿಪ್ಪು ಬಾವದೊಡ್ಡಭಾವಬಂಡಾಡಿ ಅಜ್ಜಿಕೇಜಿಮಾವ°ಅಡ್ಕತ್ತಿಮಾರುಮಾವ°ಅಕ್ಷರದಣ್ಣಅಕ್ಷರ°ಬಲ್ನಾಡುಮಾಣಿಗೋಪಾಲಣ್ಣವಿದ್ವಾನಣ್ಣಪವನಜಮಾವಮುಳಿಯ ಭಾವನೆಗೆಗಾರ°ಪೆರ್ಲದಣ್ಣಚೂರಿಬೈಲು ದೀಪಕ್ಕಶರ್ಮಪ್ಪಚ್ಚಿಶ್ರೀಅಕ್ಕ°ಎರುಂಬು ಅಪ್ಪಚ್ಚಿಅನು ಉಡುಪುಮೂಲೆಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ಶುದ್ದಿಕ್ಕಾರ°ಪುಟ್ಟಬಾವ°ಚೆನ್ನೈ ಭಾವ°ವೇಣೂರಣ್ಣವೇಣಿಯಕ್ಕ°ನೀರ್ಕಜೆ ಮಹೇಶತೆಕ್ಕುಂಜ ಕುಮಾರ ಮಾವ°ಜಯಶ್ರೀ ನೀರಮೂಲೆಯೇನಂಕೂಡ್ಳು ಅಣ್ಣಗಣೇಶ ಮಾವ°ಮಂಗ್ಳೂರ ಮಾಣಿಡೈಮಂಡು ಭಾವಕಾವಿನಮೂಲೆ ಮಾಣಿಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿಬೊಳುಂಬು ಮಾವ°ಡಾಮಹೇಶಣ್ಣದೊಡ್ಡಮಾವ°ಶ್ಯಾಮಣ್ಣಪೆಂಗಣ್ಣ°ಚುಬ್ಬಣ್ಣಸುವರ್ಣಿನೀ ಕೊಣಲೆಶಾಂತತ್ತೆಅನುಶ್ರೀ ಬಂಡಾಡಿಒಪ್ಪಕ್ಕಡಾಗುಟ್ರಕ್ಕ°ಅಜ್ಜಕಾನ ಭಾವ


ಭೋಜನ ಸ್ವೀಕಾರ ಮಂತ್ರ

January 16, 2010 ರ 12:00 pmಗೆ ನಮ್ಮ ಗಣೇಶ ಮಾವ° ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಣ್ಣ ಇಪ್ಪಗ ಜೆಪದ ಮಂತ್ರಂದ ಕಲಿವಲೆ ಸುರುಮಾಡ್ತವು.
ಅಂಬಗ ಗೋಪಿ ಮೆತ್ತಿಗೊಂಡು ಜೆಪ ಮಾಡ್ತದು ತುಂಬ ಕುಶಿಯ ಸಂಗತಿ.
ದೊಡ್ಡ ಆದ ಮತ್ತೆ ಕೈನ್ನೀರು ತೆಗವ ಮಂತ್ರಂದ ಕಲಿವಲೆ ಸುರು ಮಾಡುದಡ – ಎಂತಕೆ ಹೇಳಿರೆ, ದೊಡ್ಡವಕ್ಕೆ ಉಂಬದೇ ಕುಶಿಯ ಸಂಗತಿ ಅಡ!

ಇದು ಕೈನ್ನೀರು ತೆಗವಗ ಹೇಳ್ತದು, 
ಭೋಜನ ಸ್ವೀಕಾರ ಮಂತ್ರ
:

1. ಪ್ರೋಕ್ಷಣೆ:

ಬಾಳೆಲೆಬುಡಲ್ಲಿ (ಬಾಳೆಬುಡಲ್ಲಿ ಅಲ್ಲ!) ಕೂದಂಡು ಸುರೂವಿಂಗೆ ಕೈಲಿ ನೀರು ತೆಕ್ಕೊಂಡು ಅಶನಕ್ಕೆ ಗಾಯತ್ರಿ ಮಂತ್ರಲ್ಲಿ ಪ್ರೋಕ್ಷಣೆ ಮಾಡುದು:
ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ||
ಧಿಯೋ ಯೋನ:ಪ್ರಚೋದಯಾತ್ ||

2. ಪರಿಷಿಂಚನೆ:
ಈ ಮಂತ್ರ ಹೇಳಿಗೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ದಕ್ಷಿಣ ಭಾಗಂದ ಪ್ರಾರಂಭ ಮಾಡಿ ವೃತ್ತಾಕಾರಲ್ಲಿ ಪುನಃ ದಕ್ಷಿಣಕ್ಕೆ ನೀರು ಸುತ್ತುಗಟ್ಟುವದು.
ಇದುವೇ ಪರಿಷಿಂಚನೆ
ಸತ್ಯಂ ತ್ವರ್ತೇ ನ  ಪರಿಷಿಂಚಾಮಿ || (ಹಗಲಿಂಗೆ)
ಋತಂ ತ್ವಾ ಸತ್ಯೇನ
ಪರಿಷಿಂಚಾಮಿ ||(ಇರುಳಿಂಗೆ)

3. ಹವಿಸ್ಸು ಸಮರ್ಪಣೆ:
ಬಾಳೆ ಎಲೆಯ ದಕ್ಷಿಣ ಭಾಗಲ್ಲಿ ಪೂರ್ವಂದ ಪ್ರಾರಂಭ ಮಾಡಿ ಪಡು ಹೊಡೆಂಗೆ ಯಮಾದಿ ದೇವತೆಗಕ್ಕೆ ಹವಿಸ್ಸು ಸಮರ್ಪಣೆ.
ಒಂದೊಂದೇ ಅಶನವ ಮಡುಗಿ ಒಂದೊಂದು ಬಿಂದು ನೀರು ಬಿಡುವದು.
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |
ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ ||
(ನಾಲ್ಕು ಅವುಳು ಅಶನ ಮಡಗುದು)

ಯಮಾಯ ನಮ: ತೃಪ್ತಿರಸ್ತು |
ಯಮಧರ್ಮಾಯ ನಮ: ತೃಪ್ತಿರಸ್ತು |
ಚಿತ್ರಾಯ ನಮ: ತೃಪ್ತಿರಸ್ತು |
ಚಿತ್ರಗುಪ್ತಾಯ ನಮ: ತೃಪ್ತಿರಸ್ತು ||
(ನಾಲ್ಕು ಹುಂಡು ನೀರು ಬಿಡುದು)
(ವಸಿಷ್ಠ ಗೋತ್ರದವು  ಈ ರೀತಿ ಹವಿಸ್ಸು ಸಮರ್ಪಣೆ ಮಾಡ್ಲೆ ಇಲ್ಲೆ. ಅವು ನಿತ್ಯ ಅಗ್ನಿಹೋತ್ರಿಗ!
ಅವು ಅಗ್ನಿಯ ಆರಾಧನೆ ಮಾಡುವಗ ಹವಿಸ್ಸು ಸಮರ್ಪಣೆ ಮಾಡುವದು ಹೇಳಿ ಶಾಸ್ತ್ರ ವಚನ)

4. ಪ್ರಾರ್ಥನೆ:
ಎಡದ ಕೈ ಪವಿತ್ರ ಬೆರಳಿಲಿ ಬಾಳೆಎಲೆ ಮುಟ್ಟಿಗೊಂಡು, ಬಲ ಕೈಲಿ ನೀರು ಹಿಡ್ಕೊಂಡು ಈ ಮಂತ್ರ ಪ್ರಾರ್ಥನೆ ಮಾಡೇಕು:
ಅಂತಶ್ಚರಸಿ ಭೂತೇಷು ಗುಹಾಯಾಂ ವಿಶ್ವತೋಮುಖಃ |
ತ್ವಂ ಯಜ್ನಸ್ತ್ವಂ ವಷಟ್ಕಾರಸ್ತ್ವಂ ವಿಷ್ಣುಃ ಪುರುಷಃ ಪರಃ ||

ಇದರ ಹೇಳಿಗೊಂಡೂ ಆ ನೀರಿನ ಕುಡಿಯೇಕು:
ಅಮೃತೋಪಸ್ತರಣಮಸಿ ಸ್ವಾಹಾ ||

5. ಅನ್ನಪ್ರಾಶನ:

ಇನ್ನು ಅನ್ನ ಪ್ರಾಶನ (ಅವುಳು ನುಂಗುದು).
ಒಂದೊಂದು ಮಂತ್ರಕ್ಕೂ ಒಂದೊಂದು ಕ್ರಮಲ್ಲಿ ಅಶನ ‘ಸ್ವಾಹಾ’ ಮಾಡುದು.

ಓಂ ಪ್ರಾಣಾಯ ಸ್ವಾಹಾ || ದಕ್ಷಿಣ ದಿಕ್ಕಿಂದ ಅಶನವ ಮಧ್ಯ,ಪವಿತ್ರ,ಅಂಗುಷ್ಠ ಬೆರಳುಗಳ ಸೇರ್ಸಿ ಹೆರ್ಕಿ ಪ್ರಾಶನ ಮಾಡೆಕ್ಕು.
ಓಂ ಅಪಾನಾಯ ಸ್ವಾಹಾ || ಪಶ್ಚಿಮ ದಿಕ್ಕಿಂದ ಕಿರುಬೆರಳು, ಪವಿತ್ರ ಬೆರಳು, ಅಂಗುಷ್ಠ ಬೆರಳು ಸೇರ್ಸಿ..
ಓಂ ವ್ಯಾನಾಯ ಸ್ವಾಹಾ || ಉತ್ತರ ದಿಕ್ಕಿಂದ ಕಿರು ಬೆರಳು, ತೋರು ಬೆರಳು, ಅಂಗುಷ್ಠ ಬೆರಳು ಸೇರ್ಸಿ..
ಓಂ ಉದಾನಾಯ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
ಓಂ ಸಮಾನಾಯ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
ಓಂ ಬ್ರಹ್ಮಣೇ ಸ್ವಾಹಾ ||ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು

ಋಷಿಮುನಿಗೊಕ್ಕೆ ಊಟ ಹೇಳಿ ಇದ್ದದು ಇದೇ ಆರು ತುತ್ತಗೊ ಮಾಂತ್ರ ಅಡ.
ನಾವು ಸಾಂಪ್ರದಾಯಿಕವಾಗಿ ಅವುಳು ತಿಂದು ಮತ್ತೆ ಉಂಬಲೆ ಸುರುಮಾಡುದು.
ಹಾಂಗೆ, ಇನ್ನು ಗಡದ್ದಿಂಗೆ ಉಂಬದು.

6. ಆಪೋಶನ :

ಊಟ ಆದಮೇಲೆ ಆಪೋಶನ.
ಬಲ ಕೈಗೆ ನೀರು ಹಾಕಿಯೊಂಡು ಈ ಮಂತ್ರ ಹೇಳಿಕ್ಕಿ ಕುಡಿವದು.
ಅಮೃತಾಪಿಧಾನಮಸಿ ಸ್ವಾಹಾ ||

ಇನ್ನು ಕೈ ತೊಳದು ಅಪ್ಪನ್ನಾರ ಆಹಾರ / ನೀರು ಸೇವನೆ ಮಾಡ್ಳಾಗ. ನೀರು ಕುಡಿತ್ತರೂ ಎದ್ದು ಕೈ ತೊಳದ ಮತ್ತೆಯೇ ಆತಷ್ಟೆ.

ಭೋಜನ ಸ್ವೀಕಾರ ಮಂತ್ರ, 3.8 out of 5 based on 4 ratings
ಶುದ್ದಿಶಬ್ದಂಗೊ (tags): , , , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗಣೇಶ ಮಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

  1. Venkatesh
    ವೆಂಕಟೇಶ
    VA:F [1.9.3_1094]
    Rating: 0 (from 0 votes)

    Magange upanayana maadule alochane maaduvaga ee lekhan sikkiddu baari upakara aathu.

    [ಉತ್ತರುಸಿ]

  2. Sthuti Bhat
    VA:F [1.9.3_1094]
    Rating: 0 (from 0 votes)

    hello,ganesha maava,,ninga elligoo laaga haakle suru maadideera?laayika aayidu aatha,,kai neeru tegava vishaya,but enga koosuga kai neeru tegava haange illenne,, ha, helida haange ningoge idara ella baravale time eshtottinge sikkuttu?
    oppanna na bagge parichaya aayekkashte, nidhaanavaagi nodte oppanna.. olle lekhanakke ibru oppannandringe dhanyavadagalu…..

    [ಉತ್ತರುಸಿ]

  3. ಗುತ್ತು ಸದಾಶಿವ’
    VA:F [1.9.3_1094]
    Rating: +1 (from 1 vote)

    ಇಷ್ಟೆಲ್ಲಾ ಸಂಗತಿದೆ ಇದ್ದು – ಭೋಜನ ಸ್ವೀಕಾರಲ್ಲಿ ಹೇಳುವದು ಎನಗೊಂತಿತ್ತಿದ್ದಿಲ್ಲೆ! – ಇಷ್ಟು ವಿವರವಾಗಿ ತಿಳುದು ಒಂದುದೆ ತಪ್ಪಿಲ್ಲದ್ದ ಹಾಂಗೆ ಬರೆಕಾರೆ ಆ ಬರದ ಜನಕ್ಕೆ ಜ್ಞಾನದೆ ಸಹನೆದೆ ಸ್ಪೂರ್ತಿದೆ ಮೂಗಿಂದ ಮೇಲೆ ಇಪ್ಪಲೇ ಬೇಕು! – ಆರೇ ಇರಳಿ ಅವಕ್ಕೆ ಎನ್ನ ಎದೆ ಒಳಂದ ಧನ್ಯವಾದ!

    [ಉತ್ತರುಸಿ]

  4. Vinoda
    VA:F [1.9.3_1094]
    Rating: +4 (from 4 votes)

    E manthrangala Ottinge … Namma Bhagavadgeethe Manthra helidhare olledhu

    Brahmarpanam Brahma Havir
    Brahmagnau Brahmana Hutam
    Brahmaiva Tena Ghantavyam
    Brahmakarma Samadhinaha

    Aham Vaishvanaro Bhutva
    Praninaam Dehamaa Ashritaha
    Prana Pana Samayuktah
    Pachamyannam Chaturvidham

    For More details see:

    http://www.sathyasai.org/devotion/prayers/brahmar.html

    [ಉತ್ತರುಸಿ]

  5. prashanth
    VA:F [1.9.3_1094]
    Rating: 0 (from 0 votes)

    olleya vishaya gonthathu

    [ಉತ್ತರುಸಿ]

  6. ಕುವೈತ್ ಭಾವ
    VA:F [1.9.3_1094]
    Rating: 0 (from 0 votes)

    ಗಣೇಶ ಮಾವ, ಉತ್ತಮ ಲೇಖನ. ಆದರೆ ಒಂದು ಸಂಶಯ….. ಪ್ರಾಶನ ಆರಂಭ ಪೂರ್ವಂದ ಅಲ್ಲದೋ? ಮುದ್ರಾರಾಕ್ಷಸನ ಹಾವಳಿಯೋ ಏನೋ? ಎನಗೆ ತೋರಿದ್ದರ ಕೆಳ ಬರದ್ದೆ.

    ಓಂ ಪ್ರಾಣಾಯ ಸ್ವಾಹಾ || ಪೂರ್ವ ದಿಕ್ಕಿಂದ ಅಶನವ ತೋರು ಬೆರಳು, ಮಧ್ಯಮ, ಅಂಗುಷ್ಠ ಬೆರಳುಗಳ ಸೇರ್ಸಿ ಹೆರ್ಕಿ ಪ್ರಾಶನ ಮಾಡೆಕ್ಕು.
    ಓಂ ಅಪಾನಾಯ ಸ್ವಾಹಾ || ದಕ್ಷಿಣ ದಿಕ್ಕಿಂದ ಅಶನವ ಮಧ್ಯಮ,ಪವಿತ್ರ,ಅಂಗುಷ್ಠ ಬೆರಳುಗಳ ಸೇರ್ಸಿ..
    ಓಂ ವ್ಯಾನಾಯ ಸ್ವಾಹಾ || ಪಶ್ಚಿಮ ದಿಕ್ಕಿಂದ ಕಿರುಬೆರಳು, ಪವಿತ್ರ ಬೆರಳು, ಅಂಗುಷ್ಠ ಬೆರಳು ಸೇರ್ಸಿ..
    ಓಂ ಉದಾನಾಯ ಸ್ವಾಹಾ || ಉತ್ತರ ದಿಕ್ಕಿಂದ ಕಿರು ಬೆರಳು, ತೋರು ಬೆರಳು, ಅಂಗುಷ್ಠ ಬೆರಳು ಸೇರ್ಸಿ..
    ಓಂ ಸಮಾನಾಯ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
    ಓಂ ಬ್ರಹ್ಮಣೇ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು

    ಎನ್ನದು ತಪ್ಪಿದ್ದರೆ ಗೊಂತಿದ್ದನ್ನೆ…, ತಿದ್ದಿಕ್ಕಿ.

    [ಉತ್ತರುಸಿ]

  7. ಗಣೇಶ ಮಾವ
    ಗಣೇಶ ಮಾವ°
    VA:F [1.9.3_1094]
    Rating: 0 (from 0 votes)

    ಪಾಠನ್ತರ,ದೇಶ ಕಾಲೌ ಸಂಕೀರ್ತ್ಯ…ಹೇಳುವ ಹಾಂಗೆ ಒಂದೊಂದು ಗ್ರಂಥ ಆಧಾರ ಪ್ರಕಾರ ಇರ್ತು ಭಾವ,ಆನು ಕಾಂಚೀ ಮಠದ ಪದ್ಧತಿಯ ಇಲ್ಲಿ ಹಾಕಿದ್ದು..ನಿಂಗಳ ಸಲಹೆಗೆ ಧನ್ಯವಾದ.

    [ಉತ್ತರುಸಿ]

    ranju ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    dayavittu trikala sandhya vandhane vidhi vidhana bagge detailagi bareyakku heli korike…

    [ಉತ್ತರುಸಿ]

  8. Keshavchandra Bhatt Kekanaje
    Kesh
    VN:F [1.9.3_1094]
    Rating: 0 (from 0 votes)

    Hello Ganesh Mava,

    Tumba thanks for bhojana mantra.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME