ಭ್ರಮರಾಂಬಾಷ್ಟಕಮ್

ಶ್ರೀ ಶಂಕರಾಚಾರ್ಯ ವಿರಚಿತ ಯಾವುದೇ ಸ್ತೋತ್ರಂಗ ಅಥವಾ ಕೃತಿಗ ಆದಿಕ್ಕು, ಅದಕ್ಕೆ ಅದರದ್ದೇ ಆದ ಮಹತ್ವ ಇದ್ದು.
ಅದರ ಸಾಹಿತ್ಯಲ್ಲಿ ಇಪ್ಪ ಸೌಂದರ್ಯವೂ ಬೇರೆಯೇ.
ಹೀಂಗಿಪ್ಪ ಅನೇಕ ಅಷ್ಟಕಂಗಳ ಶ್ರೀಶಂಕರರು ಬರದ್ದವು; ಅದರಲ್ಲಿ ಈ ಭ್ರಮರಾಂಬಾಷ್ಟಕವೂ ಒಂದು ಪ್ರಸಿದ್ಧ ಅಷ್ಟಕ..

ಶ್ರೀಶೈಲ ಗೋಪುರ

ಈ ಭ್ರಮರ್ರಾಂಬಾಷ್ಟಕ ಹೆಸರೇ ಸೂಚಿಸುವ ಹಾಂಗೆ ದೇವಿ ಸ್ತೋತ್ರ; ಶ್ರೀಶೈಲಲ್ಲಿ ನೆಲೆಯಾಗಿಪ್ಪ ಭ್ರಮರಾಂಬಿಕೆಯ ಸ್ತುತಿ..
ಶ್ರೀಶೈಲ ಹೇಳ್ವಾಗ ನೆಂಪಪ್ಪದು ನವಗೆ ದ್ವಾದಶ ಜ್ಯೋತಿರ್ಲಿಂಗಂಗಳಲ್ಲಿ ಒಂದು ಹೇಳ್ತ ವಿಚಾರ. ಸೌರಾಷ್ಟ್ರ ಸೋಮನಾಥ ಹೇಳಿ ಹೇಳ್ತ ಜಾಗೆ.
ಶ್ರೀಶೈಲವ ಶ್ರಿಪರ್ವತಮ್, ಶ್ರೀಗಿರಿ ಹೇಳಿಯೂ ಹೇಳ್ತವಡ. ಕೃಷ್ಣಾ ನದಿಯ ತೀರ ಈ ಜಾಗೆ.

ಶ್ರೀಶೈಲಲ್ಲಿ ಆರಾಧನೆ ಸ್ವಾಮಿ ಮಲ್ಲಿಕಾರ್ಜುನಂಗೆ ಮತ್ತು ದೇವಿ ಭ್ರಮರಾಂಬೆಗೆ
ಇಲ್ಯಾಣ ವಿಶೇಷ ಎಂತ ಹೇಳಿರೆ ದ್ವಾದಶ ಜ್ಯೊತಿರ್ಲಿಂಗಂಗಳಲ್ಲಿ ಒಂದು ಹೇಳ್ಲೆ ಕಾರಣ ಸ್ವಾಮಿ ಮಲ್ಲಿಕಾರ್ಜುನನ ಸನ್ನಿಧಿ..
ಅದೂ ಅಲ್ಲದ್ದೆ ಅಷ್ಟಾದಶ ಶಕ್ತಿಪೀಠಂಗಳಲ್ಲಿ ಒಂದು ತಾಯಿ ಭ್ರಮರಾಂಬೆಯ ಸನ್ನಿಧಿಂದ.
ಇಂತಹ ಮಹಿಮೆ ಇಪ್ಪ ಪುಣ್ಯಸ್ಥಳ. ತಾಯಿ ಪಾರ್ವತಿ, ಭ್ರಮರ ಹೇಳಿರೆ ದುಂಬಿ ಆಗಿ ಮಹಿಷಾಸುರನ ಸಂಹಾರ ಮಾಡಿದ್ದು ಹೇಳ್ತ ನಂಬಿಕೆ ಇಲ್ಲಿ ಇದ್ದಲ್ಲದ್ದೆ ದೇವಸ್ಥಾನದ ಒಳ ಒಂದು ಸಣ್ಣ ಒಟ್ಟೆಲಿ ಈಗಳೂ ದುಂಬಿಯ ಶಬ್ಧ ಕೇಳ್ತಡ ಕೆಮಿ ಮಡಗಿ ಕೇಳಿರೆ.
ಪುರಾಣಂಗಳಲ್ಲಿ ಈ ಕ್ಷೇತ್ರದ ಬಗ್ಗೆ ಉಲ್ಲೇಖ ಇದ್ದು. ಸ್ಕಂದ ಪುರಾಣಲ್ಲಿ ಶ್ರೀಶೈಲ ಕಾಂಡ ಹೇಳಿ ಒಂದು ಪಾಠ ಇದ್ದಡ.
ಆದಿ ಶಂಕರರು ಈ ಕ್ಷೇತ್ರವ ಭೇಟಿ ಮಾಡಿಪ್ಪಾಗಲೇ ಶಿವಾನಂದ ಲಹರಿ ಹೇಳ್ತ ಶಿವನ ಸ್ತುತಿಯನ್ನು ಬರದ್ದಡ.

ತಾಯಿ ಭ್ರಮರಾಂಬೆಯ ಕುರಿತು ಶ್ರೀ ಶಂಕರರು ಬರದ ಈ ಭ್ರಮರಾಂಬಾಷ್ಟಕ ಹೀಂಗಿದ್ದು:

ಭ್ರಮರಾಂಬಾಷ್ಟಕಮ್

ಧ್ವನಿ: ದೀಪಿಕಾ ಭಟ್


Bhramaraambaashtakam Deepika Bhat-mp3

 

ಚಾಂಚಲ್ಯಾರುಣ ಲೋಚನಾಂಚಿತಕೃಪಾ ಚಂದ್ರಾರ್ಕ ಚೂಡಾಮಣಿಂ
ಚಾರುಸ್ಮೇರಮುಖಾಂ ಚರಾಚರಜಗತ್ಸಂರಕ್ಷಣೀಂ ತತ್ಪದಾಮ್ |
ಚಂಚತ್ ಚಂಪಕ ನಾಸಿಕಾಗ್ರ ವಿಲಸನ್ ಮುಕ್ತಾಮಣೀ ರಂಜಿತಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||

ಕಸ್ತೂರೀತಿಲಕಾಂಚಿತೇಂದುವಿಲಸತ್ ಪ್ರೋದ್ಭಾಸಿಫಾಲಸ್ಥಲೀಂ
ಕರ್ಪೂರದ್ರವಮಿಶ್ರಚೂರ್ಣ ಖದಿರಾ ವೋದೋಲ್ಲಸದ್ವೀಟಿಕಾಮ್ |
ಲೋಲಾಪಾಂಗತರಂಗಿತೈರತಿ ಕೃಪಾ ಸಾರೈರ್ನತಾನಂದಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೧||

ರಾಜನ್ಮತ್ತಮರಾಲ ಮಂದಗಮನಾಂ ರಾಜೀವಪತ್ರೇಕ್ಷಣಾಂ
ರಾಜೀವಪ್ರಭವಾದಿದೇವಮಕುಟೈ ರಾಜತ್ಪ್ರದಾಂಭೋರುಹಾಂಮ್ |
ರಾಜೀವಾಯತಮಂದಮಂಡಿತ ಕುಚಾಂ ರಾಜಾಧಿರಾಜೇಶ್ವರೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೨||

ಷಟ್ತಾರಾಂ ಗಣದೀಪಿಕಾಂ ಶಿವಸತೀಂ ಷಡ್ವೈರಿವರ್ಗಾಪಹಾಂ
ಷಟ್ಚಕ್ರಾಂತರಸಂಸ್ಥಿತಾಂ ವರಸುಧಾಂ ಷಡ್ಯೋಗಿನೀವೇಷ್ಟಿತಾಮ್ |
ಷಟ್ಚಕ್ರಾಂಚಿತ ಪಾದುಕಾಂಚಿತಪದಾಂ ಷಡ್ಭಾವಗಾಂ ಷೋಡಷೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೩||

ಶ್ರೀನಾಥಾಧೃತಪಾಲಿತಾತ್ರಿಭುವನಾಂ ಶ್ರೀಚಕ್ರ ಸಂಚಾರಿಣೀಂ
ಜ್ಞಾನಾಸಕ್ತಮನೋಜಯೌವನಲಸತ್ ಗಂಧರ್ವಕನ್ಯಾ ಧೃತಾಮ್ |
ದೀನಾನಾಮತಿವೇಲಭಾಗ್ಯಜನನೀಂ ದಿವ್ಯಾಂಬರಲಾಂ ಕೃತಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೪||

ಲಾವಣ್ಯಾಧಿಕಭೂಷಿತಾಂಗಲತಿಕಾಂ ಲಾಕ್ಷಾಲಸದ್ರಾಗಿಣೀಂ
ಸೇವಾಯಾತಸಮಸ್ತದೇವವನಿತಾಂ ಸೀಮಂತಭೂಷಾನ್ವಿತಾಮ್ |
ಭಾವೋಲ್ಲಾಸವಶೀ ಕೃತಪ್ರಿಯತಮಾಂ ಭಂಡಾಸುರಚ್ಛೇದಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೫||

ಧನ್ಯಾಂ ಸೋಮವಿಭಾವನೀಯಚರಿತಾಂ ಧಾರಾಧರಶ್ಯಾಮಲಾಂ
ಮುನ್ಯಾರಾಧನಮೇಧಿನೀಂ ಸುಮವತಾಂ ಮುಕ್ತಿಪ್ರಧಾನವ್ರತಾಮ್ |
ಕನ್ಯಾಪೂಜನಸುಪ್ರಸನ್ನ ಹೃದಯಾಂ ಕಾಂಚೀಲಸನ್ಮಧ್ಯಮಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೬||

ಕರ್ಪೂರಾಗರುಕುಂಕುಮಾಂಕಿತ ಕುಚಾಂ ಕರ್ಪೂರವರ್ಣಸ್ಥಿತಾಂ
ಕೃಷ್ಟೋತ್ಕೃಷ್ಟಸುಕೃಷ್ಟಕರ್ಮದಹನಾ ಂ ಕಾಮೇಶ್ವರೀಂ ಕಾಮಿನೀಮ್ |
ಕಾಮಾಕ್ಷೀಂ ಕರುಣಾರಸಾರ್ದ ಹೃದಯಾಂ ಕಲ್ಪಾಂತರಸ್ಥಾಯಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೭||

ಗಾಯತ್ರೀಂ ಗರುಢಧ್ವಜಾಂ ಗಗನಗಾಂ ಗಾಂಧರ್ವಗಾನಪ್ರಿಯಾಂ
ಗಂಭೀರಾಂ ಗಜಗಾಮಿನೀಂ ಗಿರಿಸುತಾಂ ಗಂಧಾಕ್ಷತಾಲಂ ಕೃತಾಮ್ |
ಗಂಗಾಗೌತಮಗರ್ಗಸನ್ನುತಪದಾಮ್ ಗಾಂ ಗೌತಮೀಂ ಗೋಮತೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೮||

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ
ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ
ಶ್ರೀಮಚ್ಛಂಕರಭಗವತಃ ಕೃತೌ
ಭ್ರಮರಾಂಬಾಷ್ಟಕಂ ಸಂಪೂರ್ಣಮ್ ||

~*~*~

ಸ್ತೋತ್ರವ ದೀಪಿ ಅಕ್ಕ° ರಾಗಲ್ಲಿ ಹಾಡಿದ್ದವು. ಅದರ ಕೇಳಲೆ:

Bhramaraambaashtakam Deepika Bhat-mp3 by oppanna-1

ಬೆಟ್ಟುಕಜೆ ಮಾಣಿ

   

You may also like...

8 Responses

 1. ಚೆನ್ನೈ ಭಾವ° says:

  ಲಾಯ್ಕ ಆತು. ಹಾಡಿದ್ದೂ ಲಾಯಕ ಆಯ್ದು. ಹರೇ ರಾಮ.

 2. ಭಾರಿ ಲಾಯ್ಕ ಆಯಿದು. ಶ್ಲಾಘನೀಯ ಕಾರ್ಯ.
  ದೀಪಿಕಾನ ಸ್ವರ ಅನುರಣನೀಯ

 3. ಕಾಂತಣ್ಣ says:

  ಶ್ರೀಶೈಲೇ ಮಲ್ಲಿಕಾರ್ಜುನಃ ||

 4. ಬೆಟ್ಟುಕಜೆ ಮಾಣಿ says:

  ದೀಪಿ ಅಕ್ಕಂಗೆ ಧನ್ಯವಾದ..ಲಾಯ್ಕ ಆಯಿದು..

 5. ಶರ್ಮಪ್ಪಚ್ಚಿ says:

  ಸಂಗ್ರಹಯೋಗ್ಯ ಸ್ತೋತ್ರ ಕೊಟ್ಟ ಬೆಟ್ಟುಕಜೆ ಮಾಣಿಗೆ, ಚೆಂದಕೆ ಧ್ವನಿ ಒದಗಿಸಿದ ದೀಪಿಕಾ, ಇಬ್ರಿಂಗೂ ಧನ್ಯವಾದಂಗೊ

 6. ಬೆಟ್ಟುಕಜೆ ಮಾಣಿ says:

  ಧನ್ಯವಾದ ಅಪ್ಪಚ್ಚಿ….

 7. ಉಡುಪುಮೂಲೆ ಅಪ್ಪಚ್ಚಿ says:

  ನಮ್ಮ ಹೆರಿಯೋರು ಪಾಠಕನಲ್ಲಿರೇಕಾದ ಗುಣ೦ಗಳ ಹೇಳುವಾಗ ಅಕ್ಷರಸ್ಪಷ್ಟತೆ, ಪದಸ್ಪಷ್ಟತೆ, ಸುಸ್ವರಾದಿಗೊಕ್ಕೆ ಮಹತ್ವ ಕೊಡೆಕು ಹೇದು ಹೇಳಿದ ಮಾತು ನೆನಪು ಆತು. ದೊಡ್ಡ ಸ೦ಗೀತ ಕಲಾವಿದರು ಕೆಲವು ಜೆನ ಹಾಡುವಾಗ “ರಾಗ ರಸ;ಸಾಹಿತ್ಯ ಕಸ.” ಮಾಡುವದರ ಕಛೇರಿಗಳಲ್ಲಿ ಕ೦ಡದಿದ್ದು. ಆದರೆ ನಿನ್ನ ಹಾಡುವಿಕೆಲಿ ಈ ಏವ ದೋಷ೦ಗಳೂ ಕಾಣ್ತಿಲ್ಲೆಬ್ಬೊ! ಭೇಷ್! ಉಚ್ಚಾರ ಸ್ಪಷ್ಟತೆ, ಅಲ್ಪಪ್ರಾಣಾದಿಗಳ ಕಡಗೆ ಗಮನ ಎಲ್ಲವುದೆ ಮೆಚ್ಚೆಕಾದ ಅ೦ಶ೦ಗೊ. ನಿನಗೆ ಒಳ್ಳೆ ಭವಿಷ್ಯ ಇದ್ದು. ಈ ಆಸಕ್ತಿಯ ಬಿಡದ್ದೆ ಮು೦ದುವರ್ಸು ಮಿನಿಯ. ಧನ್ಯವಾದ. ನಮಸ್ತೇ….

 8. ಸಂಗ್ರಹಯೋಗ್ಯ ಶ್ಲೋಕ ಬೆಟ್ಟುಕಜೆ ಅಣ್ಣಾ 🙂
  ಖುಶೀ ಆವುತ್ತು ಹೇಳುಲೆ… ರಾಗಲ್ಲ್ಲಿ ಕೇಳೆಕಷ್ಟೇ…
  ಧನ್ಯವಾದಂಗೊ ಇಬ್ರಿಂಗೂ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *