ಅರ್ಘ್ಯೆಜೆಪ : ಸಂಧ್ಯಾವಂದನೆ

ಪ್ರತಿದಿನವೂ ಸೂರ್ಯನ ಸಂಧ್ಯಾಕಾಲಲ್ಲಿ ಪ್ರಪಂಚಕ್ಕೆಲ್ಲ ಬೆಣಚ್ಚು ಕೊಡುವ ಆ ಸೂರ್ಯಂಗೆ ಕೃತಜ್ಞತೆ ಹೇಳುವ ಉದ್ದೇಶಂದ ಮಾಡ್ತ ಕಾರ್ಯವೇ “ಸಂಧ್ಯಾವಂದನೆ“.
ಸಂಧ್ಯಾವಂದನೆಂದ ಆಧ್ಯಾತ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ ಪ್ರಯೋಜನ ಇದ್ದು.
ನಮ್ಮ ಮನಸ್ಸಿಂಗೆ ನೆಮ್ಮದಿ, ಶಾಂತಿ ಸಿಕ್ಕುದಲ್ಲದ್ದೆ, ಆರೋಗ್ಯ ದೃಷ್ಠಿಂದ ಪ್ರಾಣಾಯಾಮ ಮನೋಶುದ್ಧಿ ಮಾಡ್ತು. ಬುದ್ಧಿ ಚುರುಕ್ಕು ಆವುತ್ತು; ಆಯುಷ್ಯ  ಹೆಚ್ಚುತ್ತು.  ಋಷಿವರೇಣ್ಯಂಗಳ ಧೀರ್ಘಾಯುಷ್ಯದ ಗುಟ್ಟುದೇ ಈ ಪ್ರಾಣಾಯಾಮ.
ಹಾಂಗೇ ಸೂರ್ಯ ನಮಸ್ಕಾರ ಮಾಡುವದರಿಂದ ದೇಹದ ಎಲ್ಲ ಅಂಗಾಂಗೊಕ್ಕು ವ್ಯಾಯಾಮ ಆವುತ್ತು.
ಅಷ್ಟೆ ಅಲ್ಲದ್ದೆ,  ಜೀವನಲ್ಲಿ ಶಿಸ್ತು ಮೂಡ್ಳೆ ಪ್ರಥ
ಮ ಮೆಟ್ಳು ‘ಸಂಧ್ಯಾವಂದನೆ’.
ಒಟ್ಟಿಲ್ಲಿ ಹೇಳುತ್ತರೆ,  ಪ್ರತಿಯೊಬ್ಬನೂ ತನ್ನ ಮಾನಸಿಕ ಮತ್ತು ಶಾರೀರಿಕ ಉನ್ನತಿಗೆ, ಸದ್ಗುಣ, ಸುಸಂಸ್ಕೃತ ಸದಾಚಾರ ಪ್ರವೃತ್ತಿ ಅಭಿವೃದ್ಧಿಗೆ, ಬ್ರಹ್ಮತೇಜೋಭಿವೃದ್ಧಿಗೆ, ದೀರ್ಘ ಆಯಸ್ಸು, ಆರೋಗ್ಯ ಅಭಿವೃದ್ಧಿಗೆ ನಿತ್ಯ ಮಾಡೆಕ್ಕಪ್ಪದು – ‘ತ್ರಿಕಾಲ ಸಂಧ್ಯಾವಂದನೆ’.
ಈಗಾಣ ಕಾಲಘಟ್ಟಕ್ಕೆ ಸಾಧ್ಯತೆ ಇಪ್ಪ ಸುಲಭ ಸಂಧ್ಯಾವಂದನೆಯ ಮಾರ್ಗವ ಚೆನ್ನೈಭಾವ ಸಂಪಾಲುಸಿ ಕೊಟ್ಟಿದವು. ಎಲ್ಲೋರುದೇ ಇದರ ಸದುಪಯೋಗವ ಪಡಕ್ಕೋಳೇಕು ಹೇಳ್ತದು ನಮ್ಮ ಹಾರೈಕೆ.

~

ಸಂಧ್ಯಾವಂದನೆ – ದ್ವನಿರೂಪ:
(ಕೃಪೆ: ವೇದಮೂರ್ತಿ ತುಪ್ಪೆಕ್ಕಲ್ಲು ಕುಮಾರ ಭಟ್ರು)

[audio:audio/SANDHYAVANDANAM_10mb.mp3]

ಸಂಧ್ಯಾವಂದನೆ – ಅಕ್ಷರರೂಪ:
ಕೃಪೆ: ಚೆನ್ನೈಭಾವ

1. ಆಚಮನ:
ಪೂರ್ವಾಭಿಮುಖವಾಗಿ ಕೂದು ಆಚಮನ ಮಾಡುವದು ಶಾಸ್ತ್ರ. ಉತ್ತರವೂ ನಿಷೇಧ ಅಲ್ಲ; ಆದರೆ ದಕ್ಷಿಣಾಭಿಮುಖವಾಗಿ ಕೂದು ಆಚಮನ ಮಾಡುವದು ಪ್ರಶಸ್ತ ಅಲ್ಲ ಹೇಳಿ ಶಾಸ್ತ್ರ ಹೇಳ್ತು.
ಆಚಮನ ಹೇಂಗೆ ಮಾಡೆಕ್ಕಪ್ಪದು, ಆಚಮನ ಮಾಡುವಾಗ ನೆಂಪಿಲ್ಲಿರೆಕ್ಕಾದ ವಿಷಯದ ಬಗ್ಗೆ ನಾವು ಈ ಮದಲೆ ಮಾತಾಡಿದ್ದು. (ಸಂಕೊಲೆ)

ದ್ವಿರಾಚಮ್ಯ – ಗೋಕರ್ಣಾಕಾರ ಮಾಡಿದ ಬಲ-ಅಂಗೈಗೆ, ಎಡದ ಕೈಲಿ ಸಕ್ಕಣಲ್ಲಿ ನೀರು ಹಾಕಿ ಆರು ಸರ್ತಿ ಕುಡಿಯೆಕ್ಕು:

ಓಂ ಋಗ್ವೇದಾಯ ಸ್ವಾಹಾ |
ಓಂ ಯಜುರ್ವೇದಾಯ ಸ್ವಾಹಾ |
ಓಂ ಸಾಮವೇದಾಯ ಸ್ವಾಹಾ ||

ಓಂ ಋಗ್ವೇದಾಯ ಸ್ವಾಹಾ |
ಓಂ ಯಜುರ್ವೇದಾಯ ಸ್ವಾಹಾ |
ಓಂ ಸಾಮವೇದಾಯ ಸ್ವಾಹಾ ||

2. ಅಂಗಸ್ಪರ್ಶ :
ಆಚಮನ ನಂತರ ಅಂಗಸ್ಪರ್ಶ. ಈ ಮೂಲಕ ನಮ್ಮ ದೇಹದ ಭಾಗಂಗೊಕ್ಕೆ ಒಂದೊಂದು ಶಕ್ತಿಗಳ ಕಲ್ಪಿಸಿಗೊಂಬದು. ಮನಸ್ಸಿಲಿ ಕಲ್ಪನೆ ಮಾಡಿಗೊಂಡು ಅದರ ಒಟ್ಟಿಂಗೆ ಆ ಅಂಗವ ಬಲಕೈಲಿ ಮುಟ್ಟಿಗೊಂಬದೇ ಅಂಗಸ್ಪರ್ಶ.
ಒಂದು ಅಂಗ ಸ್ಪರ್ಶ ಆದ ಮತ್ತೆ, ಇನ್ನೊಂದು ಅಂಗ ಸ್ಪರ್ಶ ಮಾಡೆಕ್ಕಾರೆ ಮದಲು ಕೈಬೆರಳಿನ ಒಂದರಿ ನೀರಿಲ್ಲಿ ಮುಟ್ಟಿಗೊಳ್ಳೆಕ್ಕು.
ಅಂಗ ಸ್ಪರ್ಶಂದ ಆಯಾ ದೇವತಾ ಶಕ್ತಿಗೊ ಅಲ್ಲಲ್ಲಿ ಇದ್ದವು ಹೇಳಿ ಭಾವಿಸುವದು ತಾತ್ಪರ್ಯ.

ಓಂ ಅಥರ್ವ ವೇದಾಯ ನಮಃ | – ಮೇಲಾಣ ತೊಡಿಯ – ಎಡತ್ತಿಂದ ಬಲತ್ತಿಂಗೆ ಬಲಗೈ ಹೆಬ್ಬಟೆ (ಅಂಗುಷ್ಠ) ಬೆರಳಿಲಿ ಉದ್ದಿಗೊಂಬದು.
ಓಂ ಇತಿಹಾಸ ಪುರಾಣೇಭ್ಯೋ ನಮಃ | – ಕೆಳಾಣ ತೊಡಿಯ ಉದ್ದಿಗೊಂಬದು.

ಓಂ ಅಗ್ನಯೇ ನಮಃ | ಮೋರೆಯ ಮೇಗಂದ ಕೆಳಾಂತಾಗಿ – ಅಂಗೈ ತಳಂದ – ಉದ್ದಿಗೊಂಬದು.
ಓಂ ನಕ್ಷತ್ರೇಭ್ಯೋ ನಮಃ | – ಬಲ ಅಂಗೈಮುಷ್ಟಿಲಿ ರಜ ನೀರು ಎಡದಕೈಗೆ ಪ್ರೋಕ್ಷಣೆ ಮಾಡುದು.
ಓಂ ವಿಷ್ಣವೇ ನಮಃ | – ಬಲಗೈ ಮುಷ್ಟಿಂದ ಎರಡು ಪಾದಕ್ಕೆ ಪ್ರೋಕ್ಷಣೆ ಮಾಡುದು.
ಓಂ ಸೂರ್ಯಾಯ ನಮಃ | ಬಲದ ಕಣ್ಣು ಮುಟ್ಟುವದು- ಹೆಬ್ಬಟೆ ಮತ್ತು ಪವಿತ್ರ ಬೆರಳಿಲಿ.
ಓಂ ಚಂದ್ರಮಸೇ ನಮಃ |ಎಡದ ಕಣ್ಣು ಮುಟ್ಟುವದು – ಹೆಬ್ಬಟೆ ಮತ್ತು ಪವಿತ್ರ ಬೆರಳಿಲಿ.
ಓಂ ಪ್ರಾಣಾಯ ನಮಃ | –  ಮೂಗಿನ ಬಲದ ಹೊಡೆ ಮುಟ್ಟುವದು –  ಹೆಬ್ಬಟೆ ಮತ್ತು ತೋರುಬೆರಳಿಲಿ.
ಓಂ ಅಪಾನಾಯ ನಮಃ |ಮೂಗಿನ ಎಡದ ಹೊಡೆ ಮುಟ್ಟುವದು –  ಹೆಬ್ಬಟೆ ಮತ್ತು ತೋರುಬೆರಳಿಲಿ.
ಓಂ ದಿಗ್ಭ್ಯೋ ನಮಃ |ಬಲದ ಕೆಮಿ ಮುಟ್ಟುವದು – ಹೆಬ್ಬೆಟ್ಟು ಮತ್ತು ಕಿರು ಬೆರಳ ಜೋಡುಸಿ.
ಓಂ ದಿಗ್ಭ್ಯೋ ನಮಃ | ಎಡದ ಕೆಮಿ ಮುಟ್ಟುವದು – ಹೆಬ್ಬೆಟ್ಟು ಮತ್ತು ಕಿರು ಬೆರಳ ಜೋಡುಸಿ.
ಓಂ ಇಂದ್ರಾಯ ನಮಃ | ಬಲಭುಜ ಮುಟ್ಟುವದು – ಹೆಬ್ಬೆಟ್ಟು ಮತ್ತು ನಡು ಬೆರಳ ಜೋಡುಸಿ.
ಓಂ ಇಂದ್ರಾಯ ನಮಃ | ಎಡಭುಜ ಮುಟ್ಟುವದು – ಹೆಬ್ಬೆಟ್ಟು ಮತ್ತು ನಡು ಬೆರಳ ಜೋಡುಸಿ.
ಓಂ ಪೃಥಿವೈ ನಮಃ | ಎರಡೂ ಪಾದಂಗಳ ಉದ್ದಿಗೊಂಬದು – ಬಲಗೈಲಿ.
ಓಂ ಅಂತರಿಕ್ಷಾಯ ನಮಃ | – ಎಡ ಮತ್ತು ಬಲ ಮೊಳಪ್ಪುಗಳ ಅನುಕ್ರಮವಾಗಿ ಮುಟ್ಟಿಗೊಂಬದು.
ಓಂ ದಿವೇ ನಮಃ | – ಗುಹ್ಯಸ್ಥಳ ಸ್ಪರ್ಶಿಸಿಗೊಂಬದು.
ಓಂ ಬ್ರಹ್ಮಣೇ ನಮಃ | ಹೊಕ್ಕುಳು (ನಾಭಿ) ಮುಟ್ಟುವದು- ಅಂಗುಷ್ಠ ಬೆರಳಿಂದ.
ಓಂ ರುದ್ರಾಯ ನಮಃ |ಹೃದಯ ಮುಟ್ಟಿಗೊಂಬದು- ಅಂಗೈಲಿ.
ಓಂ ಶಿವಾಯ ನಮಃ | ತಲೆ ಮುಟ್ಟಿಗೊಂಬದು – ಬಲಗೈಲಿ.
ಓಂ ಸಪ್ತ ಋಷಿಭ್ಯೋ ನಮಃ |ಶಿಖೆ (ಜುಟ್ಟು) ಮುಟ್ಟಿಗೊಂಬದು – ಬಲಗೈಲಿ.
ಪ್ರತಿ ಅಂಗಸ್ಪರ್ಶ ಆದ ಮತ್ತೆ ಒಂದರಿ ಸಕ್ಕಣಂದ ನೀರಿನ ಮುಟ್ಟಿಗೊಂಬಲೆ ನೆಂಪಿರಳಿ.

3. ಭಸ್ಮಧಾರಣೆ:

ಭಸ್ಮ, ಗೋಪೀಚಂದನ ಧಾರಣೆ ಮಾಡಿಗೊಂಡು ಮುಂದೆ ಸಂಧ್ಯೋಪಾಸನೆ ಸುರುಮಾಡುವದು ಕ್ರಮ.
ಕೈ ತೊಳಕ್ಕೊಂಡು ಒಂದು ಆಚಮನ ಮಾಡುವದು –

ಓಂ ಋಗ್ವೇದಾಯ ಸ್ವಾಹಾ |
ಓಂ ಯಜುರ್ವೇದಾಯ ಸ್ವಾಹಾ |
ಓಂ ಸಾಮವೇದಾಯ ಸ್ವಾಹಾ ||

ಬಲದ ಕೈಗೆ ರಜ್ಜ ವಿಭೂತಿ ಹಾಕಿಗೊಂಡು, ಅದಕ್ಕೆ ಒಂದು ಸಕ್ಕಣ ನೀರು ಹಾಕಿಕ್ಕಿ, ಈ ಮಂತ್ರ ಹೇಳಿಗೊಂಡು ಎರಡೂ ಕೈಯ ಉದ್ದಿಗೊಂಡು ವಿಭೂತಿ ನೀರಿಲಿ ಕರಗುಸುದು:

ಮಾನಸ್ತೋ ಕೇ ತನಯೇ ಮಾ ನ ಆಯುಷಿ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ |
ವೀರಾನ್ಮನೋ ರುದ್ರ ಭಾಮಿತೋ ವಧೀರ್ ಹವಿಷ್ಮಂತೋ ನಮಸಾ ವಿಧೇಮತೇ ||


ಹಣೆ, ಬಲಬಾಹು, ಎಡಬಾಹು, ಎದೆ, ಕೊರಳು, ತಲೆ – ಈ ಭಾಗಂಗೊಕ್ಕೆ ಕೈಬೆರಳುಗಳಲ್ಲಿಪ್ಪ ವಿಭೂತಿಯ ಉದ್ದೇಕು.

4. ಪ್ರಾಣಾಯಾಮ:
ಇದರಿಂದ ಅಂಗಾಂಗ ಅನಾಯಾಸ ಸಕ್ರಿಯಗೊಳ್ಳುತ್ತು ; ರಜೋಗುಣ ಕ್ಷಯಿಸಿ ಸತ್ವ ಗುಣ ಅಭಿವೃದ್ಧಿ ಆವ್ತು.

ಪ್ರಣವಸ್ಯ ಪರಬ್ರಹ್ಮ ಋಷಿಃ |ಶಿರೋ ಮಧ್ಯ ಮುಟ್ಟಿಗೊಂಬದು – ಬಲದ ಕೈಲಿ.
ದೈವೀ ಗಾಯತ್ರೀ ಚ್ಛಂದಃ |ಮುಖ ಸ್ಪರ್ಶಿಸುವದು – ಬಲಕೈಲಿ.
ಪರಬ್ರಹ್ಮ ಪರಮಾತ್ಮಾ ದೇವತಾ | – ಹೃದಯ ಮುಟ್ಟಿಗೊಂಬದು, ಬಲ ಅಂಗೈಲಿ
ಪ್ರಾಣಾಯಾಮೇ ವಿನಿಯೋಗಃ || – ಎರಡೂ ಕೈ ಜೋಡುಸಿ ನಮಸ್ಕಾರ ಮಾಡಿಗೊಂಬದು.

ಓಂ ಭೂಃ – ಎರಡೂ ಕೈಂದ ಎರಡೂ ಪಾದ ಸ್ಪರ್ಶಿಸುವದು
ಓಂ ಭುವಃ – ಎರಡೂ ಕೈಂದ ಮೊಣಕಾಲಿಂದ ಕೆಳ (ಜಂಘೆ) ಸ್ಪರ್ಶಿಸುವದು
ಓಗ್೦ ಸುವಃ – ಎರಡೂ ಕೈಂದ ಮೊಳಪ್ಪಿನ ಸ್ಪರ್ಶಿಸುವದು
ಓಂ ಮಹಃ – ಬಲಗೈಂದ ಜಠರ ( ಹೊಟ್ಟೆ) ಮುಟ್ಟಿಗೊಂಬದು
ಓಂ ಜನಃ – ಬಲಗೈಂದ ಕೊರಳು ಮುಟ್ಟಿಗೊಂಬದು
ಓಂ ತಪಃ – ಬಲಗೈಂದ ಮೋರೆ ಮುಟ್ಟಿಗೊಂಬದು
ಓಗ್೦ ಸತ್ಯಂ – ಬಲಗೈಂದ ತಲೆ ಮುಟ್ಟಿಗೊಂಬದು
ಇದಕ್ಕೆ ಸಪ್ತ (ಏಳು) ವ್ಯಾಹೃತಿ ಹೇಳಿ ಹೆಸರು.
ಪ್ರಾಣಾಯಾಮದ ಅಂಗವಾದ ಈ ಕೆಲಸಕ್ಕೆ ಸಪ್ತ ವ್ಯಾಹೃತಿ ನ್ಯಾಸ ಹೇಳ್ತವು. ಸಪ್ತ ಲೋಕದ ಶಕ್ತಿಯ ನಮ್ಮ ಶರೀರಲ್ಲಿ ಕಲ್ಪಿಸಿಗೊಂಬದು.

ಬಲಗೈ ಹೆಬ್ಬೆರಳಿಂದ ಬಲಮೂಗಿನ ಒತ್ತಿಗೊಂಡು, ಎಡ ಮೂಗಿನಿಂದಾಗಿ ಒಂದು ದೀರ್ಘ ಶ್ವಾಸವ ಸಮದಾನಕ್ಕೆ ಒಳ ತೆಕ್ಕೊಂಬದು. ಅಲ್ಲೇ ಶ್ವಾಸ ಹಿಡುದು ಮಡಿಕ್ಕೊಂಡು ಈ ಗಾಯತ್ರೀ ಮಂತ್ರವ ಮನಸ್ಸಿಲೇ ಹೇಳಿಗೊಂಬದು:

ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||

ಬಲಗೈ ಪವಿತ್ರ-ಕಿರು ಬೆರಳಿಂದ ಎಡಮೂಗು ಒತ್ತಿ ಹಿಡುದು ಬಲಮೂಗಿನ ಹೆಬ್ಬೆಟೆಬೆರಳಿನ ಸಡಿಲಮಾಡಿ, ಹಿಡುಕ್ಕೊಂಡ ಶ್ವಾಸವ ಬಲಮೂಗಿಂದಾಗಿ ನಿಧಾನವಾಗಿ ಹೆರ ಬಿಡುವದು:

ಓಮಾಪೋ ಜ್ಯೋತೀ ರಸೋಮೃತಂ ಬ್ರಹ್ಮಭೂರ್ಭುವಸ್ಸುವರೋಮ್ ||

5. ಸಂಕಲ್ಪ:
ಸಂಧ್ಯಾವಂದನೆಯ ಮಾಡ್ತಾ ಇದ್ದೆ, ಹೇಳಿ ಪರಮೇಶ್ವರನ ಹತ್ತರೆ ಸಂಕಲ್ಪ ಮಾಡಿಗೊಂಬದು.
ಎಡಗೈಲಿ ಸಕ್ಕಣಲ್ಲಿ ನೀರು ತೆಕ್ಕೊಂಡು ಬಲದಕೈಗೆ ಎರದು ತಟ್ಟಗೆ ಬಿಡುವದು:

ಮಮೋಪಾತ್ತ ದುರಿತಕ್ಷಯದ್ವಾರಾ, ಶ್ರೀ ಪರಮೇಶ್ವರಪ್ರೀತ್ಯರ್ಥಂ, ಪ್ರಾತಃ ಸಂಧ್ಯಾಂ ಉಪಾಸಿಷ್ಯೇ |
– (ಉದಿಯಪ್ಪಗಾಣದ್ದಕ್ಕೆ ಪ್ರಾತಃ ಸಂಧ್ಯಾಂ ಹೇಳೆಕ್ಕು; ಹೊತ್ತೋಪಗಾಣದ್ದಕ್ಕೆ ಸಾಯಂ ಸಂಧ್ಯಾಂ ಹೇಳೇಕು).

6. ಮಾರ್ಜನ
ಮಾರ್ಜನ ಹೇಳಿರೆ ನೀರು ಪ್ರೋಕ್ಷಿಸಿಗೊಂಬದು.
ಎಡದ ಕೈಲಿ ಸಕ್ಕಣಲ್ಲಿ ನೀರು ತೆಗದು ಹಿಡ್ಕೊಂಡು, ಬಲಗೈ ಪವಿತ್ರ ಬೆರಳಿಲ್ಲಿ ಶರೀರಕ್ಕೆ ತಳಿವದು. (ತುಳಸೀದಳ ಮೂಲಕವು ತಳಿವ ಕ್ರಮವೂ ಇದ್ದು)
ಬೇರೆಬೇರೆ ಭಾಗಂಗೊಕ್ಕೆ, ಒಟ್ಟು ಒಂಬತ್ತು ಸರ್ತಿ ಪ್ರೋಕ್ಷಣೆಮಾಡ್ಳಿದ್ದು.

6.1. ಪಾದಂಗೊಕ್ಕೆ ಪ್ರೊಕ್ಷಣೆ:
ಓಂ ಆಪೋಹಿಷ್ಠಾ ಮಯೋ ಭುವಃ | ತಾ ನ ಊರ್ಜೇ ದಧಾತನ| ಮಹೇ ರಣಾಯ ಚಕ್ಷಸೇ|
6.2 ತಲಗೆ:
ಓಂ ಯೋ ವಃ ಶಿವತಮೋ ರಸಃ| ತಸ್ಯ ಭಾಜಯತೇಹ ನಃ| ಉಶತೀರಿವ ಮಾತರಃ|
6.3 ಹೃದಯಕ್ಕೆ:
ಓಂ ತಸ್ಮಾ ಅರಂಗ ಮಾಮವಃ| ಯಸ್ಯ ಕ್ಷಯಾಯ ಜಿನ್ವಥ| ಆಪೋ ಜನಯಥಾ ಚ ನಃ||
6.4 ತಲಗೆ :
ಓಂ ಆಪೋಹಿಷ್ಠಾ ಮಯೋ ಭುವಃ | ತಾ ನ ಊರ್ಜೇ ದಧಾತನ| ಮಹೇ ರಣಾಯ ಚಕ್ಷಸೇ|
6.5 ಹೃದಯಕ್ಕೆ :
ಓಂ ಯೋ ವಃ ಶಿವತಮೋ ರಸಃ| ತಸ್ಯ ಭಾಜಯತೇಹ ನಃ| ಉಶತೀರಿವ ಮಾತರಃ|
6.6 ಪಾದಕ್ಕೆ :
ಓಂ ತಸ್ಮಾ ಅರಂಗ ಮಾಮವಃ| ಯಸ್ಯ ಕ್ಷಯಾಯ ಜಿನ್ವಥ| ಆಪೋ ಜನಯಥಾ ಚ ನಃ||
6.7 ಹೃದಯಕ್ಕೆ :
ಓಂ ಆಪೋಹಿಷ್ಠಾ ಮಯೋ ಭುವಃ | ತಾ ನ ಊರ್ಜೇ ದಧಾತನ| ಮಹೇ ರಣಾಯ ಚಕ್ಷಸೇ|
6.8 ಪಾದಕ್ಕೆ :
ಓಂ ಯೋ ವಃ ಶಿವತಮೋ ರಸಃ| ತಸ್ಯ ಭಾಜಯತೇಹ ನಃ| ಉಶತೀರಿವ ಮಾತರಃ|
6.9 ತಲಗೆ :
ಓಂ ತಸ್ಮಾ ಅರಂಗ ಮಾಮವಃ| ಯಸ್ಯ ಕ್ಷಯಾಯ ಜಿನ್ವಥ| ಆಪೋ ಜನಯಥಾ ಚ ನಃ||

7. ಮಂತ್ರಾಚಮನ :
ಎಡಕೈಲಿ ಒಂದು ಸಕ್ಕಣ ನೀರಿನ ಬಲಗೈಯ ಗೋಕರ್ಣಾಕೃತಿ ಹಸ್ತಕ್ಕೆ ಸುರುದು, ಕೆಳಾಣ ಮಂತ್ರ ಹೇಳುವದು. ಮಂತ್ರ ಹೇಳಿಕ್ಕಿ ಅಕೇರಿಗೆ ಅಂಗುಷ್ಠಮೂಲಂದ ಕುಡಿವದು:
ಹಗಲಿಂಗೆ:
ಓಂ ಸೂರ್ಯಶ್ಚ ಮಾ ಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃ | ಪಾಪೇಭ್ಯೊ ರಕ್ಷಂತಾಂ | ಯದ್ರಾತ್ರಿಯಾ ಪಾಪ ಮಕಾರ್^ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾ ಮುದರೇಣ ಶಿಶ್ಞಾ | ರಾತ್ರಿಸ್ತದವಲುಂಪತು | ಯತ್ಕಿಂಚ ದುರಿತಂ ಮಯಿ | ಇದಮಹಂ ಮಾಮಮೃತಯೋನೌ | ಸೂರ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ ||
ಇರುಳಿಂಗೆ:
ಓಂ ಅಗ್ನಿಶ್ಚ ಮಾ ಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃ | ಪಾಪೇಭ್ಯೊ ರಕ್ಷಂತಾಂ | ಯದಹ್ನಾ ಪಾಪ ಮಕಾರ್^ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾ ಮುದರೇಣ ಶಿಶ್ಞಾ | ಅಹಸ್ತದವಲುಂಪತು | ಯತ್ಕಿಂಚ ದುರಿತಂ ಮಯಿ | ಇದಮಹಂ ಮಾಮಮೃತಯೋನೌ | ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ ||

ಮಂತ್ರಾಚಮನ ಆದ ಮತ್ತೆ ಒಂದು ಆಚಮನ:
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||

8. ಪುನರ್ಮಾರ್ಜನಮ್:
ಮಂತ್ರಾಚಮನ ಆದ ಮತ್ತೆ ಪುನಃ ಪ್ರೋಕ್ಷಣೆ ಮಾಡಿಗೊಂಬದೇ ‘ಪುನರ್ಮಾರ್ಜನಮ್’.

8.1 ತಲಗೆ :
ದಧಿಕ್ರಾವ್‍ಣ್ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ |
ಸುರಭಿ ನೋ ಮುಖಾ ಕರತ್ಪ್ರಣ ಆಯೂಗ್ಂಷಿ ತಾರಿಷತ್ ||
ಓಂ ಆಪೋಹಿಷ್ಠಾ ಮಯೋ ಭುವಃ | ತಾ ನ ಊರ್ಜೇ ದಧಾತನ | ಮಹೇ ರಣಾಯ ಚಕ್ಷಸೇ |

8.2 ಮೋರಗೆ :
ಓಂ ಯೋ ವಃ  ಶಿವತಮೋ ರಸಃ | ತಸ್ಯ ಭಾಜಯತೇಹ ನಃ | ಉಶತೀರಿವ ಮಾತರಃ |
ಓಂ ತಸ್ಮಾ ಅರಂಗ ಮಾಮವಃ | ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನಃ ||

9. ಅರ್ಘ್ಯ :
ಪ್ರೋಕ್ಷಣ, ಮಾರ್ಜನ ಮುಗಿಸಿ ಅರ್ಘ್ಯಪ್ರದಾನ ಮಾಡುದು.
ಅಂಜಲಿ ಪೂರ್ವಕ ಸೂರ್ಯಂಗೆ ಮೂರು ಅರ್ಘ್ಯ ಪ್ರದಾನ ಮಾಡೆಕ್ಕಾದ್ದು ಪ್ರತಿಯೊಬ್ಬನ ಕರ್ತವ್ಯ.  ಹಾಂಗಾಗಿಯೇ ಸಂಧ್ಯಾವಂದನೆಗೆ ಅರ್ಘ್ಯೆಜೆಪ ಹೇಳಿಯೂ ಹೇಳ್ತವು.
ಎಡಕೈಲಿ ಸಕ್ಕಣ ನೀರು ತೆಗದು ಬಲಗೈ ಕೆಳಮುಖವಾಗಿ ಹಿಡುದು ಅಂಗೈಗೆ ನೀರು ಎರದು ತಟ್ಟಗೆ ನೀರು ಬಿಡುವದು ಸರಳ ವಿಧಾನ. (ಅರ್ಘ್ಯ ಪ್ರದಾನ ಮಾಡುವಾಗ ಹೆಬ್ಬಟೆ ಬೆರಳು ತಾಗಲಾಗ ಹೇಳಿ ಶಾಸ್ತ್ರ).


ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||
| ಭಾಸ್ಕರಾಯ ನಮಃ | ಇದಮರ್ಘ್ಯಮ್ ||

– ಈ ರೀತಿಲಿ ಮೂರು ಅರ್ಘ್ಯ ಕೊಡೆಕ್ಕು.

ನಾಲ್ಕನೆಯದು ಪ್ರಾಯಶ್ಚಿತ್ತಾರ್ಘ್ಯ:
ಮಾಡುವ ಕರ್ಮಲ್ಲಿ ವ್ಯತ್ಯಾಸ ಬಂದಿದ್ದರೆ, ಅದರ ಪರಿಹಾರಕ್ಕೆ.

ಕಾಲಾತಿಕ್ರಮದೋಷಪರಿಹಾರಾರ್ಥಂ, ಪ್ರಾಯಶ್ಚಿತ್ತಾರ್ಘ್ಯಂ ಕರಿಷ್ಯೇ
(ಎಡದ ಕೈಲಿ ಸಕ್ಕಣಲ್ಲಿ ನೀರು ತೆಕ್ಕೊಂಡು ಬಲದ ಕೈಗೆ ಹಾಕಿ ತಟ್ಟಗೆ ಬಿಡುವದು)

ಓಂ ಭೂರ್ಭುವಸ್ಸುವರ್ಮಹರ್ಜನಸ್ತಪಃಸತ್ಯಂ
ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್||
ಓಂ ಭೂರ್ಭುವಸ್ಸುವರ್ಮಹರ್ಜನಸ್ತಪಃಸತ್ಯಂ ||

ಹೇಳಿಕ್ಕಿ, ಒಂದು ಸಕ್ಕಣ ನೀರು ಆಗ ಅರ್ಘ್ಯ ಬಿಟ್ಟ ಹಾಂಗೇ ತಟ್ಟಗೆ ಬಿಡುವದು.

ತಲಗೆ ನೀರು ಸುತ್ತುಗಟ್ಟುದು:
ಓಂ ಅಸಾವಾದಿತ್ಯೋ ಬ್ರಹ್ಮ |
ಹೇಳಿಗೊಂಡು ಒಂದು ಸಕ್ಕಣ ನೀರು ಬಲದ ಕೈಗೆ ಹಾಕಿ ಮುಷ್ಟಿಲಿ ಹಿಡುಕೊಂಡು ತನ್ನ ತಲಗೆ ಒಂದು ಪ್ರದಕ್ಷಿಣಾಕಾರವಾಗಿ ಸುತ್ತು ತಂದು ಕೆಳ ತಟ್ಟಗೆ ಬಿಡುವದು.
ಪುನಃ ದ್ವಿರಾಚಮನ
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||

10. ಶಿಖಾಬಂಧಃ
ಸಂಪ್ರದಾಯಲ್ಲಿ, ಮಿಂದಿಕ್ಕಿ ಬಂದ ಮತ್ತೆ ತಲೆಕೂದಲಿನ ಜೊಟ್ಟುಕಟ್ಳೆ ಇಪ್ಪ ಮಂತ್ರ.(ನಿಂಗಳ ಜುಟ್ಟು ಕಟ್ಟಿಯೊಂಡಿದ್ದರೂ ಒಂದರಿ ಬಿಡುಸಿ ಕಟ್ಟಿಕ್ಕಿ.)
ಶಿಖೆ (ಜೊಟ್ಟು) ಇಲ್ಲದ್ದವು ಈ ಮಂತ್ರ ಹೇಳಿಗೊಂಡು ಶಿಖಾಭಾಗವ ಒಂದರಿ ಮುಟ್ಟಿಗೊಂಬದು.

ಊರ್ಧ್ವಕೇಶಿ ವಿರೂಪಾಕ್ಷಿ ಮಾಂಸಶೋಣಿತ ಭಕ್ಷಿಣಿ |
ತಿಷ್ಠ ದೇವಿ ಶಿಖಾಬಂಧೇ ಚಾಮುಂಡೇಹ್ಯಪರಾಜಿತೇ ||

11. ಅಸ್ತ್ರೋಪಸಂಹಾರಂ:
ಅಸ್ಯಶ್ರೀ ಅಸ್ತ್ರೋಪಸಂಹಾರ ಮಹಾಮಂತ್ರಸ್ಯ |
ಬ್ರಹ್ಮಾಋಷಿಃ | –  ಮಸ್ತಕ ಮುಟ್ಟಿಗೊಳೆಕ್ಕು
ಗಾಯತ್ರೀಚ್ಛಂದಃ | ಮೋರೆ ಮುಟ್ಟೆಕು
ಸವಿತಾ ದೇವತಾ | ಹೃದಯ ಮುಟ್ಟೆಕು
ಪ್ರೇಷಿತಾಸ್ತ್ರೋಪಸಂಹಾರೇ ವಿನಿಯೋಗಃ | ಕೈ ಮುಗುಕ್ಕೊಳೇಕು

ಸೋಹಮರ್ಕಃ ಪರಂಜ್ಯೋತಿರರ್ಕಜ್ಯೋತಿರಹಂ ಶಿವಃ |
ಆತ್ಮಜ್ಯೋತಿರಹಂ ಸೂರ್ಯಃ ಸರ್ವಜ್ಯೋತೀರಸೋಮಹೋಂ ||

ಪ್ರಾತಃ:
ಓಂ ಆವಾಯ ವ್ಯಯಾ ವಾಯವ್ಯಾ | ಯಯಾ ವಾಯವ್ಯಯಾ ವಾಯವ್ಯಾ | ಔರ್ವಾ ಯಯವಾ | ಹರೋಸಿ ಪಾಪ್ಮಾನಂ ಮೇ ವಿದ್ಧಿ |
|[ – ಉದಿಯಪ್ಪಂಗೆ ಹರೋಸಿ ಹೇಳುದು]
ಸಾಯಂ:
ಓಂ ಆವಾಯ ವ್ಯಯಾ ವಾಯವ್ಯಾ | ಯಯಾ ವಾಯವ್ಯಯಾ ವಾಯವ್ಯಾ | ಔರ್ವಾ ಯಯವಾ | ಸಂವರ್ತೋsಸಿ ಪಾಪ್ಮಾನಂ ಮೇ ವಿದ್ಧಿ || – [ಸಾಯಂಸಂಧ್ಯೆಗೆ ಸಂವರ್ತೋsಸಿ ಹೇಳುದು]

ಸೂರ್ಯ ಮಂಡಲಂದ ಗಾಯತ್ರಿಯ ತನ್ನ ಹೃದಯದೊಳ ಆಕರ್ಷಿಸಿಗೊಂಬದು:
ಉತ್ತಿಷ್ಠ ದೇವಿ ಗಂತವ್ಯಂ ಪುನರಾಗಮನಾಯ ಚ |
ಪ್ರವಿಶ್ಯ ದೇವಿ ಗಾಯತ್ರೀಂ ಪ್ರವಿಶ್ಯ ಹೃದಯಂ ಮಮ ||

12. ಗುರು ಪ್ರಣಾಮಃ:
ಕೈ ಮುಗುಕ್ಕೊಂಡು ಈ ಕೆಳಾಣ ಮಂತ್ರ ಹೇಳಿಗೊಂಬದು. ಗುರುಪರಂಪರೆಗೆ ವಂದಿಸುದು.

ಓಂ ಹ್ರೀಂ ಪರಮಾತ್ಮಾದ್ಯಶೇಷಗುರು ಪಾರಂಪರ್ಯಕ್ರಮೇಣ, ಸ್ವಗುರುಪಾದಾಂಬುಜಂ ಯಾವತ್ ತಾವತ್ಪ್ರಣೌಮಿ |
ಆಸನಮಂತ್ರಸ್ಯ ಪೃಥಿವ್ಯಾಃ ಮೇರುಪೃಷ್ಠ ಋಷಿಃ, ಸುತಲಂ ಛಂದಃ, ಕೂರ್ಮೋ ದೇವತಾ |

ಆಧಾರಶಕ್ತಿಕಮಲಾಸನಾಯ ನಮಃ |
ಆಸನೇ ವಿನಿಯೋಗಃ ||

ಪೃಥ್ವಿ ತ್ವಯಾ ಧೃತಾ ಲೋಕ ದೇವಿ ತ್ವಂ ವಿಷ್ಣುನಾ ಧೃತಾ|
ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರುಚಾಸನಮ್||
ಕೂರ್ಮಾಸನಾಯ ನಮಃ ||

ಅಪಸರ್ಪಂತು ತೇ ಭೂತಾ ಯೇ ಭೂತಾ ಭೂಮಿಸಂಸ್ಥಿತಾಃ|
ಯೇ ಭೂತಾ ವಿಘ್ನಕರ್ತಾರಸ್ತೇ ನಶ್ಯಂತು ಶಿವಾಜ್ಞಯಾ||
ಅತಿತೀಕ್ಷ್ಣ ಮಹಾಕಾಯ ಕಲ್ಪಾಂತದಹನೋಪಮಾ |
ಭೈರವಾಯ ನಮಸ್ತುಭ್ಯಂಮನುಜ್ಞಾಂ ದಾತುಮರ್ಹಸಿ ||
ಅಪಕ್ರಾಮಂತು ಭೂತಾದ್ಯಾಃ ಸರ್ವೇ ತೇ ಭೂಮಿ ಭಾರಕಾಃ |
ಸರ್ವೇಷಾಮವಿರೋಧೆನ ಬ್ರಹ್ಮಕರ್ಮ ಸಮಾರಭೇತ್ ||

ಆತ್ಮ ರಕ್ಷಣಂ:
ಬಲಗೈ ಹೆಬ್ಬಟೆ ಮತ್ತು ನಡು ಬೆರಳುಗಳಿಂದ ತನ್ನ ತಲಗೆ ಪ್ರದಕ್ಷಿಣಾಕಾರವಾಗಿ ತಲೆಯ ಎದುರು, ಬಲತ್ತು, ಹಿಂದೆ, ಎಡತ್ತು – ಹೀಂಗೆ ಚಿಟಕಿ ಬಡುಕ್ಕೊಂಡು – ಎರಡು ಅಂಗೈ ತಟ್ಟಿ ಚಪ್ಪಾಳೆ ಶಬ್ದ ಮಾಡುದು.
ಓಂ ಕ್ಷಂ ರಂ ಳಂ ಯಂ ಅಸ್ತ್ರಾಯ ಫಟ್ ||
ಗುರುಗಣಪತಿದುರ್ಗಾಕ್ಷೇತ್ರಪಾಲಾದಿ ವಂದನಂ:
ಓಂ ಗುಂ ಗುರುಭ್ಯೋ ನಮಃ |- ತಲೆ ಮೇಲ್ಕಟೆ ಕೈ ಜೋಡ್ಸಿ ನಮಸ್ಕರಿಸುವದು
ಗಂ ಗಣಪತಯೇ ನಮಃ | – ಬಲಭುಜ ಸಂಧಿಲಿ ಕೈ ಜೋಡ್ಸಿ ನಮಸ್ಕರಿಸುವದು
ದುಂ ದುರ್ಗಾಯೈ ನಮಃ | – ಎಡಭುಜ ಸಂಧಿಲಿ ಕೈ ಜೋಡ್ಸಿ ನಮಸ್ಕರಿಸುವದು
ಕ್ಷಂ ಕ್ಷೇತ್ರಪಾಲಾಯ ನಮಃ |– ಎರಡೂ ತೊಡೆ ಮೇಲ್ಕಟೆ ಕೈ ಜೋಡ್ಸಿ ನಮಸ್ಕರಿಸುವದು
ಸಂ ಸರಸ್ವತೈ ನಮಃ – ನಾಭಿಂದ ಕೆಳ ಕೈ ಜೋಡ್ಸಿ ನಮಸ್ಕರಿಸುವದು
ಪಂ ಪರಮಾತ್ಮನೇ ನಮಃ | – ಹೃದಯದ ಹತ್ರೆ ಕೈ ಜೋಡ್ಸಿ ನಮಸ್ಕರಿಸುವದು

ಅನಂತರ ಒಂದು ಪ್ರಾಣಾಯಾಮ ಮಾಡುದು –
ಪ್ರಣವಸ್ಯ ಪರಬ್ರಹ್ಮ ಋಷಿಃ | – ಶಿರೋ ಮಧ್ಯ ಮುಟ್ಟಿಗೊಂಬದು
ದೈವೀ ಗಾಯತ್ರೀ ಚ್ಛಂದಃ | – ಮುಖ ಸ್ಪರ್ಶಿಸುವದು
ಪರಬ್ರಹ್ಮ ಪರಮಾತ್ಮಾ ದೇವತಾ | – ಅಂಗೈಂದ ಹೃದಯ ಮುಟ್ಟಿಗೊಂಬದು
ಪ್ರಾಣಾಯಾಮೇ ವಿನಿಯೋಗಃ |ಕೈ ಜೋಡಿಸಿಗೊಂಬದು

ಓಂ ಭೂಃ ಎರಡೂ ಕೈಂದ ಎರಡೂ ಪಾದ ಸ್ಪರ್ಶಿಸುವದು
ಓಂ ಭುವಃ ಎರಡೂ ಕೈಂದ ಮೊಣಕಾಲಿಂದ ಕೆಳ (ಜಂಘೆ) ಸ್ಪರ್ಶಿಸುವದು
ಓಗ್೦ ಸುವಃಎರಡೂ ಕೈಂದ ಮೊಳಪ್ಪಿನ ಸ್ಪರ್ಶಿಸುವದು
ಓಂ ಮಹಃ ಬಲಗೈಂದ ಜಠರ ( ಹೊಟ್ಟೆ) ಮುಟ್ಟಿಗೊಂಬದು
ಓಂ ಜನಃಬಲಗೈಂದ ಕೊರಳು ಮುಟ್ಟಿಗೊಂಬದು
ಓಂ ತಪಃಬಲಗೈಂದ ಮೋರೆ ಮುಟ್ಟಿಗೊಂಬದು
ಓಗ್೦ ಸತ್ಯಂಬಲಗೈಂದ ತಲೆ ಮುಟ್ಟಿಗೊಂಬದು

ಬಲಗೈ ಹೆಬ್ಬೆರಳಿಂದ ಬಲಮೂಗಿನ ಒತ್ತಿಗೊಂಡು, ಎಡ ಮೂಗಿನಿಂದಾಗಿ ಒಂದು ದೀರ್ಘ ಶ್ವಾಸವ ಸಮದಾನಕ್ಕೆ ಒಳ ತೆಕ್ಕೊಂಬದು. ಅಲ್ಲೇ ಶ್ವಾಸ ಮಡಿಕ್ಕೊಂಡು ಈ ಗಾಯತ್ರೀ ಮಂತ್ರವ ಮನಸ್ಸಿಲೇ ಹೇಳಿಗೊಂಬದು:
ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್||
ಬಲಗೈ ಪವಿತ್ರ-ಕಿರು ಬೆರಳಿಂದ ಎಡಮೂಗು ಹಿಡುದು ಬಲಮೂಗಿನ ಹೆಬ್ಬೆಟೆಬೆರಳಿನ ಸಡಿಲಮಾಡಿ, ಹಿಡುಕ್ಕೊಂಡ ಶ್ವಾಸವ ಬಲಮೂಗಿಂದಾಗಿ ನಿಧಾನವಾಗಿ ಹೆರ ಬಿಡುವದು:
ಓಮಾಪೋ  ಜ್ಯೋತೀ ರಸೋಮೃತಂ ಬ್ರಹ್ಮಭೂರ್ಭುವಸ್ಸುರೋಮ್ ||

13. ಗಾಯತ್ರ್ಯಾ ಕರ-ಷಡಂಗ ನ್ಯಾಸಃ :
ನ್ಯಾಸ ಹೇಳಿರೆ ನಮ್ಮ ಶರೀರದ ಅವಯವಲ್ಲಿ ಆಯಾ ಶಕ್ತಿಗಳ ಆವಾಹಿಸುವದು / ಕಲ್ಪಿಸಿಗೊಂಬದು.
ಗಾಯತ್ರೀ ನ್ಯಾಸ, ಧ್ಯಾನ ವಿವರಣೆಯ ಒಪ್ಪಣ್ಣ° ಒಂದು ಶುದ್ದಿಲಿ ಹೇಳಿದ್ದ°, ನೆಂಪಿದ್ದೋ. (ಸಂಕೊಲೆ)

ಕರನ್ಯಾಸ:
ತತ್ಸವಿತುಃ ಬ್ರಹ್ಮಾತ್ಮನೇ
ಅಂಗುಷ್ಠಾಭ್ಯಾಂ ನಮಃ | ಹೆಬ್ಬೆರಳಿಂಗೆ ಅನ್ವಯ ಮಾಡಿಗೊಂಡು ಹೇಳ್ತದು, ಅರ್ಥಾತ್, ಎರಡೂ ಕೈ ತೋರು ಬೆರಳಿಂದ ಆಯಾ ಕೈ ಅಂಗುಷ್ಠ ಬೆರಳ ಮುಟ್ಟಿಗೊಂಡು ಹೇಳುವದು
ವರೇಣ್ಯಂ ವಿಷ್ಣ್ವಾತ್ಮನೇ – ತರ್ಜನೀಭ್ಯಾಂ ನಮಃ |– ಅಂಗುಷ್ಠ ಬೆರಳಿಂದ ತೋರುಬೆರಳು
ಭರ್ಗೋ ದೇವಸ್ಯ ರುದ್ರಾತ್ಮನೇ – ಮಧ್ಯಮಾಭ್ಯಾಂ ನಮಃ |– ಅಂಗುಷ್ಠ ಬೆರಳಿಂದ ನೆಡುಬೆರಳು
ಧೀಮಹೀಶ್ವರಾತ್ಮನೇ – ಅನಾಮಿಕಾಭ್ಯಾಂ ನಮಃ | – ಅಂಗುಷ್ಠ ಬೆರಳಿಂದ ಪವಿತ್ರಬೆರಳು
ಧಿಯೋ ಯೋ ನಃ ಸದಾಶಿವಾತ್ಮನೇ – ಕನಿಷ್ಠಿಕಾಭ್ಯಾಂ ನಮಃ | – ಅಂಗುಷ್ಠ ಬೆರಳಿಂದ ಕಿರುಬೆರಳು
ಪ್ರಚೋದಯಾತ್ ಸರ್ವಾತ್ಮನೇ – ಕರತಲಕರಪೃಷ್ಠಾಭ್ಯಾಂ ನಮಃ || – ಅಂಗೈ, ಹಿಂಗೈ, ಪೂರ್ತಿ ಕೈಯೊಳ ಎರಡೂ ಕೈ ಪರಸ್ಪರ ಉದ್ದಿಗೊಂಬದು

ಸನಾತನತೆಯ ಸಂಧ್ಯಾವಂದನೆ (ಚಿತ್ರಕೃಪೆ: ಯೇನಂಕೂಡ್ಳಣ್ಣ)

ಷಡಂಗನ್ಯಾಸ:
ತತ್ಸವಿತುರ್ಬ್ರಹ್ಮಾತ್ಮನೇ – ಹೃದಯಾಯ ನಮಃ |– ಬಲಗೈ ಅಂಗೈಲಿ ಎದೆ ಮುಟ್ಟಿಗೊಂಡು ಹೇಳ್ತದು
ವರೇಣ್ಯಂ ವಿಷ್ಣ್ವಾತ್ಮನೇ – ಶಿರಸೇ ಸ್ವಾಹಾ |– ನೆತ್ತಿಯ ಮುಟ್ಟಿಗೊಂಡು
ಭರ್ಗೋ ದೇವಸ್ಯ ರುದ್ರಾತ್ಮನೇ –  ಶಿಖಾಯೈ ವಷಟ್ |– ಶಿಖೆ (ಜೊಟ್ಟು) ಮುಟ್ಟಿಗೊಂಡು
ಧೀಮಹೀಶ್ವರಾತ್ಮನೇ  – ಕವಚಾಯ ಹುಮ್ |– ಎರಡೂ ಕೈಯ ರಕ್ಷಣಾಕವಚದ ಹಾಂಗೆ ಹಿಡ್ಕೊಂಡು
ಧಿಯೋ ಯೋ ನಃ ಸದಾಶಿವಾತ್ಮನೇ – ನೇತ್ರತ್ರಯಾಯ ವೌಷಟ್ |– ಬಲಗೈಲಿ ಕಣ್ಣುಗಳ ಮುಟ್ಟಿಗೊಂಡು
ಪ್ರಚೋದಯಾತ್ ಸರ್ವಾತ್ಮನೇ – ಅಸ್ತ್ರಾಯ ಫಟ್ || – ಎರಡೂ ಕೈ ಸೇರುಸಿ ಒಂದು ಚಪ್ಪಾಳೆ ಶೆಬ್ದ ಮಾಡುವದು

14. ಧ್ಯಾನಂ:
ಧ್ಯಾನಂ ಹೇಳಿರೆ ಧ್ಯಾನಿಸುವದು – ಶ್ಲೋಕ ಮೂಲಕ ಗಾಯತ್ರಿಯ ವರ್ಣಿಸಿ ಸ್ತುತಿಸುವದು.
ಮಂದಾರಾಹ್ವಯ ರೋಚನಾಂಜನ ಜಪಾ ಖಾಭೈರ್ಮುಖೈರಿಂದುಮ-
– ದ್ರತ್ನೋದ್ಯನ್ಮಕುಟಾಂಶು ಸಂತತ ಚತುರ್ವಿಂಶಾರ್ಣ ಚಿತ್ರಾತನುಃ |
ಅಂಭೋಜೇsರಿ ದರಾಹ್ವಯೌ ಗುಣಕಪಾಲಾಖ್ಯೌ ಚ ಪಾಶಾಂಕುಶೇ-
ಷ್ಟಾಭೀತೀರ್ದಧತೀ ಭವೇದ್ಭವಭಯಪ್ರೋತ್ಸಾರಿಣೀ ತಾರಿಣೀ ||

ಗಾಯತ್ರೀ ಹೃದಯ
ಗಾಯತ್ರೀ ಶಕ್ತಿಯ ಆಳ – ಕೈ ಮುಕ್ಕೊಂಡು ಧ್ಯಾನಿಸುವದು.
ಓಮಿತ್ಯೇಕಾಕ್ಷರಂ ಬ್ರಹ್ಮ|
ಅಗ್ನಿರ್ದೇವತಾ ಬ್ರಹ್ಮ ಇತ್ಯಾರ್ಷಮ್|
ಗಾಯತ್ರಂ ಛಂದಂ ಪರಮಾತ್ಮಂ ಸ್ವರೂಪಮ್|
ಸಾಯುಜ್ಯಂ ವಿನಿಯೋಗಮ್|

ಗಾಯಾತ್ರಿ ಆಮಂತ್ರಣಂ:
ನಮ್ಮ ಅಸ್ತಿತ್ವಕ್ಕೆ ಗಾಯತ್ರಿಯ ಅಹ್ವಾನಿಸುವದು
ಆಯಾತು ವರದಾ ದೇವೀ ಅಕ್ಷರಂ ಬ್ರಹ್ಮ ಸಮ್ಮಿತಮ್|
ಗಾಯತ್ರೀಮ್ ಛಂದಸಾಂ ಮಾತೇದಂ ಬ್ರಹ್ಮ ಜುಷಸ್ವ ಮೇ||

ಮಹಿಮಾವರ್ಣನಂ
ಮಹಿಮೆಯ ವರ್ಣನೆ ಮಾಡುದು
ಯದಹ್ನಾತ್ಕುರತೇ ಪಾಪಂ ತದಹ್ನಾತ್ಪ್ರತಿಮುಚ್ಯತೇ||
ಯದ್ರಾತ್ರಿಯಾತ್ಕುರುತೇ ಪಾಪಂ ತದ್ರಾತ್ರಿಯಾತ್ಪ್ರತಿಮುಚ್ಯತೇ||

ಸ್ತುತಿ
ಗಾಯತ್ರಿಯ ಸ್ತುತಿಸುವದು
ಸರ್ವ ವರ್ಣೇ ಮಹಾದೇವಿ ಸಂಧ್ಯಾವಿದ್ಯೇ ಸರಸ್ವತಿ||
ಓಜೋಸಿ ಸಹೋಸಿ ಬಲಮಸಿ ಭ್ರಾಜೋಸಿ ದೇವಾನಾಂ ಧಾಮ ನಾಮಾಸಿ ವಿಶ್ವಮಸಿ ವಿಶ್ವಾಯುಃ ಸರ್ವಮಸಿ ಸರ್ವಾಯುರಭಿಭೂರೋಂ ||
ಗಾಯತ್ರ್ಯಾವಹನ:
ಗಾಯತ್ರಿಯ ಆವಾಹಿಸುವದು
ಗಾಯತ್ರೀ ಮಾವಾಹಯಾಮಿ, ಸಾವಿತ್ರೀ ಮಾವಾಹಯಾಮಿ, ಸರಸ್ವತೀ ಮಾವಾಹಯಾಮಿ, ಛಂದರ್ಷೀನಾವಾಹಯಾಮಿ, ಶ್ರೀಯಮಾವಾಹಯಾಮಿ||
ಗಾಯತ್ರ್ಯಾ ಪರಿಚಯ ವರ್ಣನಂ:
ಗಾಯತ್ರಿಯ ಸ್ಥೂಲ ಪರಿಚಯ
ಗಾಯತ್ರಿಯಾ ಗಾಯಾತ್ರೀ ಚ್ಛಂದೋ ವಿಶ್ವಾಮಿತ್ರ ಋಷಿಃ ಸವಿತಾ ದೇವತಾಗ್ನಿರ್ಮುಖಂ ಬ್ರಹ್ಮಾಶಿರೋ ವಿಷ್ಣು ಹೃದಯಗ್ಂ ರುದ್ರಃ ಶಿಖಾ ಪೃಥಿವೀ ಯೋನಿಃ ಪ್ರಾಣೋಪಾನವ್ಯಾನೋದಾನಸಮಾನಾಸಪ್ರಾಣಾ ಶ್ವೇತವರ್ಣಾ ಸಾಂಖ್ಯಾಯನ ಸಗೋತ್ರಾ ಗಾಯತ್ರೀ ಚತುರ್ವಿಗ್‍ಂ ಶತ್ಯಕ್ಷರಾ ತ್ರಿಪದಾ ಷಟ್ಯುಕ್ಷಿಃ, ಪಂಚಶೀರ್ಷೋಪನಯನೇ ವಿನಿಯೋಗಃ||

ಓಂ ಭೂಃ ಎರಡೂ ಕೈಂದ ಎರಡೂ ಪಾದ ಸ್ಪರ್ಶಿಸುವದು
ಓಂ ಭುವಃ – ಎರಡೂ ಕೈಂದ ಮೊಣಕಾಲಿಂದ ಕೆಳ ಸ್ಪರ್ಶಿಸುವದು
ಓಗ್೦ ಸುವಃ ಎರಡೂ ಕೈಂದ ಮೊಳಪ್ಪಿನ ಸ್ಪರ್ಶಿಸುವದು
ಓಂ ಮಹಃ– ಬಲಗೈಂದ ಜಠರ ( ಹೊಟ್ಟೆ) ಮುಟ್ಟಿಗೊಂಬದು
ಓಂ ಜನಃ – ಬಲಗೈಂದ ಕೊರಳು ಮುಟ್ಟಿಗೊಂಬದು
ಓಂ ತಪಃ – ಬಲಗೈಂದ ಮೋರೆ ಮುಟ್ಟಿಗೊಂಬದು
ಓಗ್೦ ಸತ್ಯಂ – ಬಲಗೈಂದ ತಲೆ ಮುಟ್ಟಿಗೊಂಬದು

ಬಲಗೈ ಹೆಬ್ಬೆರಳಿಂದ ಬಲಮೂಗಿನ ಒತ್ತಿಗೊಂಡು, ಎಡ ಮೂಗಿನಿಂದಾಗಿ ಒಂದು ದೀರ್ಘ ಶ್ವಾಸವ ಸಮದಾನಕ್ಕೆ ಒಳ ತೆಕ್ಕೊಂಬದು. ಅಲ್ಲೇ ಶ್ವಾಸ ಮಡಿಕ್ಕೊಂಡು ಈ ಗಾಯತ್ರೀ ಮಂತ್ರವ ಮನಸ್ಸಿಲೇ ಹೇಳಿಗೊಂಬದು:
ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ  ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್||
ಬಲಗೈ ಪವಿತ್ರ-ಕಿರು ಬೆರಳಿಂದ ಎಡಮೂಗು ಹಿಡುದು ಬಲಮೂಗಿನ ಹೆಬ್ಬೆಟೆಬೆರಳಿನ ಸಡಿಲಮಾಡಿ, ಹಿಡುಕ್ಕೊಂಡ ಶ್ವಾಸವ ಬಲಮೂಗಿಂದಾಗಿ ನಿಧಾನವಾಗಿ ಹೆರ ಬಿಡುವದು:
ಓಮಾಪೋ ಜ್ಯೋತೀ ರಸೋಮೃತಂ ಬ್ರಹ್ಮಭೂರ್ಭುವಸ್ಸುವರೋಮ್ ||

15. ಗಾಯತ್ರೀ ಜಪ

ವಿಶ್ವಾಮಿತ್ರ ಋಷಿಃ |– ಮಸ್ತಕ (ತಲೆ) ಮುಟ್ಟಿಗೊಂಬದು
ದೇವೀಗಾಯತ್ರೀ ಚ್ಛಂದಃ | – ಮುಖ (ಮೋರೆ) ಮುಟ್ಟಿಗೊಂಬದು
ಸವಿತಾ ದೇವತಾ | ಹೃದಯ ಮುಟ್ಟಿಗೊಂಬದು

ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್||

12 ಅಥವಾ, 24, ಅಥವಾ, 108, ಅಥವಾ- ಯಥಾಶೆಗ್ತಿ ಗಾಯತ್ರಿ ಜೆಪ ಮಾಡುದು.
ಮನಸ್ಸು ಕೇಂದ್ರೀಕರಿಸಿ, ತದೇಕಚಿತ್ತರಾಗಿ ಜಪ ಮಾಡಿರೆ ನಮ್ಮೊಳ ತಪಃಶಕ್ತಿ ಶೀಘ್ರ ತುಂಬುತ್ತು. ಮನಸ್ಸಿಂಗೆ ಶಾಂತಿ ನೆಮ್ಮದಿ ಲಭಿಸುತ್ತು. ಅದಕ್ಕೇ ಹೇಳುವುದು ಜಪ, ತಪ, ಪೂಜಾ, ಹೋಮ ಕಾರ್ಯ ಮಾಡುವಾಗ ನಮ್ಮ ಸುತ್ತೂ ಪ್ರಶಾಂತ ವಾತಾವರಣ ಇರೇಕು. ಮತ್ತೆ., ಗಾಯತ್ರೀ ಜೆಪ ಮಾಡುವಾಗ ‘ವರೇಣ್ಯಂ’ ಹೇಳ್ವದರ ‘ವರೇಣಿಯಂ’ ಹೇದು ಹೇಳೆಕ್ಕು ಹೇದು ಹಿರಿಯೋರು ಹೇಳ್ತವು. ಹಾಂಗೇ ಇಲ್ಲಿ ಬರದ್ದದುದೇ.

16. ಸೂರ್ಯೋಪಸ್ಥಾನ:
ಪ್ರಾತಃ ಸಂಧ್ಯೆ
:
ಎದ್ದು ನಿಂದುಗೊಂಡು, ಪೂರ್ವಾಭಿಮುಖವಾಗಿ ಸೂರ್ಯಂಗೆ ನಮಸ್ಕಾರ ಮಾಡುದು.
ಮಿತ್ರಸ್ಯ ಚರ್ಷಣೀ ಧೃತಶ್ರವೋ ದೇವಸ್ಯ ಸಾನಸಿಮ್ |

ಸತ್ಯಂ ಚಿತ್ರಶ್ರವಸ್ತಮಮ್ ||
ಮಿತ್ರೋ ಜನಾನ್, ಯಾತಯತಿ ಪ್ರಜಾನನ್

ಮಿತ್ರೋದಾಧಾರ ಪೃಥಿವೀಮುತ ದ್ಯಾಮ್ |

ಮಿತ್ರಃ ಕೃಷ್ಟೀರನಿಮಿಷಾಭಿಚಷ್ಟೇ

ಸತ್ಯಾಯ ಹವ್ಯಂ ಘೃತವದ್ವಿಧೇಮ ||
ಪ್ರಸಮಿತ್ರಮರ್ತೋ ಅಸ್ತು ಪ್ರಯಸ್ವಾನ್,

ಯಸ್ತ ಆದಿತ್ಯ ಶಿಕ್ಷತಿ ವ್ರತೇನ |

ನ ಹನ್ಯತೇ ನ ಜೀಯತೇ ತ್ವೋತೋ ನೈನ ಮಗ್ಂ ಹೋ

ಅಶ್ನೋತ್ಯಂತಿತೋ ನ ದೂರಾತ್ ||
ಉದ್ವಯಂ ತಮ ಸ ಸ್ಪರಿ ಪಶ್ಯಂತೋ ಜ್ಯೋತಿರುತ್ತರಂ |

ದೇವಂ ದೇವತ್ರಾ ಸೂರ್ಯಮಗನ್ಮ ಜ್ಯೋತಿರುತ್ತಮಂ ||
ಉದುತ್ಯಂ ಜಾತವೇದಸಂ ದೇವಂ ವಹಂತಿ ಕೇತವಃ |

ದೃಶೇ ವಿಶ್ವಾಯ ಸೂರ್ಯಂ ||
ಚಿತ್ರಂ ದೇವನಾಮುದ ಗಾದ ನೀಕಂ |

ಚಕ್ಷುರ್ಮಿತ್ರಸ್ಯ ವರುಣಸ್ಯಾಗ್ನೇಃ |
ಆಪ್ರಾ ದ್ಯಾವಾ ಪೃಥಿವೀ ಅಂತರಿಕ್ಷಗ್ಂ ಸೂರ್ಯ

ಆತ್ಮಾ ಜಗತಸ್ತಸ್ಥುಷಶ್ಚ ||

ಸಾಯಂ ಸಂಧ್ಯೆ:
ಪಶ್ಚಿಮಾಭಿಮುಖವಾಗಿ ಎದ್ದು ನಿಂದುಗೊಂಡು
ಓಂ ಇಮಂ ಮೇ ವರುಣ ಶ್ರುಧೀ ಹವ ಮದ್ಯಾಚ ಮೃಡಯ| ತ್ವಾ ಮವಸ್ಯು ರಾಚಕೇ ||
ತತ್ವಾ ಯಾಮಿ ಬ್ರಹ್ಮಣಾ ವಂದಮಾನಸ್ತದಾ ಶಾಸ್ತೇ ಯಜಮಾನೋ ಹವಿರ್ಭಿಃ |
ಅಹೇಡಮಾನೋ ವರುಣೇಹ ಬೋಧ್ಯು ರುಶಗ್ಂ ಸ ಮಾ ನ ಆಯುಃ ಪ್ರಮೋಷೀಃ ||

17. ದಿಗುಪಸ್ಥಾನ :
ದಿಕ್ಕುಗೊಕ್ಕೆ ನಮಸ್ಕರಿಸುವದು
ಪ್ರಾತಃ ಸಂಧ್ಯೆ:

ಪೂರ್ವಾಭಿಮುಖವಾಗಿ ನಿಂದುಗೊಂಡಿಪ್ಪಲ್ಲ್ಯಂಗೆ ಕೈ ಮುಗುದುಕೊಂಡೇ ಹೇಳುದು
ಓಂ ನಮಃ ಪ್ರಾಚ್ಯೈದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ದಕ್ಷಿಣಾಭಿಮುಖವಾಗಿ ತಿರುಗಿ ನಿಂದುಗೊಳೆಕ್ಕು

ನಮೋ ದಕ್ಷಿಣಾಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಪಶ್ಚಿಮಾಭಿಮುಖವಾಗಿ ತಿರುಗಿ ನಿಂದುಗೊಳೆಕ್ಕು
ನಮಃ ಪ್ರತೀಚ್ಯೈದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಉತ್ತರಾಭಿಮುಖವಾಗಿ ತಿರುಗಿ ನಿಂದುಗೊಳೆಕ್ಕು
ನಮ ಉದೀಚೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಪೂರ್ವಾಭಿಮುಖವಾಗಿ ತಿರುಗಿ ನಿಂದು ಮೇಗಂತಾಗಿ ನೋಡಿಗೊಂಡು
ನಮ ಊರ್ಧ್ವಾಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಕೆಳಮುಖವಾಗಿ ನೆಲಕ್ಕ ನೋಡಿಗೊಂಡು
ನಮೋಧರಾಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಪ್ರದಕ್ಷಿಣೆ ಮಾಡಿಗೊಂಡು, ಪುನಾ ಮೂಡ ಮೋರೆ ಮಾಡಿ ನಿಂದುಗೊಳೆಕ್ಕು
ನಮೋ ಅವಾಂತರಾಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಪೂರ್ವಾಭಿಮುಖವಾಗಿ ಸಾಷ್ಟಾಂಗ ನಮಸ್ಕರಿಸುವದು

ನಮೋ ಗಂಗಾಯಮುನಾಯೋರ್ಮಧ್ಯೇ ಯೇ ವಸಂತಿ ತೇ ಮೇ ಪ್ರಸನ್ನಾತ್ಮಾನಶ್ಚಿರಂಜೀವಿತಂ ವರ್ಧಯಂತಿ,

ನಮೋ ಗಂಗಾಯಮುನಯೋರ್ಮುನಿಭ್ಯಶ್ಚ, ನಮೋ ನಮೋ ಗಂಗಾಯಮುನಯೋರ್ಮುನಿಭ್ಯಶ್ಚ ನಮಃ ||

ಸಾಯಂ ಸಂಧ್ಯೆ:
ಪಶ್ಚಿಮಂದ ಸುರುಮಾಡಿ ಪ್ರದಕ್ಷಿಣಾಕಾರವಾಗಿ, ಪಶ್ಚಿಮಾಭಿಮುಖವಾಗಿ ಮುಗ್ತಾಯಗೊಳುಸುವದು:
-ಪಶ್ಚಿಮಾಭಿಮುಖವಾಗಿ ತಿರುಗಿ ನಿಂದುಗೊಳೆಕ್ಕು –
ನಮಃ ಪ್ರತೀಚ್ಯೈದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಉತ್ತರಾಭಿಮುಖವಾಗಿ ತಿರುಗಿ ನಿಂದುಗೊಳೆಕ್ಕು
ನಮ ಉದೀಚೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ

– ಪೂರ್ವಾಭಿಮುಖವಾಗಿ ತಿರುಗಿ ನಿಂದುಗೊಳೆಕ್ಕು
ನಮಃ ಪ್ರಾಚ್ಯೈದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

–  ದಕ್ಷಿಣಾಭಿಮುಖವಾಗಿ ತಿರುಗಿ ನಿಂದುಗೊಳೆಕ್ಕು

ನಮೋ ದಕ್ಷಿಣಾಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಪಶ್ಚಿಮಾಭಿಮುಖವಾಗಿ ತಿರುಗಿ ನಿಂದು ಮೇಗಂತಾಗಿ ನೋಡಿಗೊಂಡು
ನಮ ಊರ್ಧ್ವಾಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಕೆಳಮುಖವಾಗಿ ನೆಲಕ್ಕ ನೋಡಿಗೊಂಡು
ನಮೋಧರಾಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ  ಪ್ರತಿವಸಂತ್ಯೇತಾಭ್ಯಶ್ಚ ನಮೋ |

– ಪ್ರದಕ್ಷಿಣೆ ಮಾಡಿಗೊಂಡು, ಪುನಾ ಪಡು ಮೋರೆ ಮಾಡಿ ನಿಂದುಗೊಳೆಕ್ಕು
ನಮೋ ಅವಾಂತರಾಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ |

–  ಪಶ್ಚಿಮಾಭಿಮುಖವಾಗಿ ಸಾಷ್ಟಾಂಗ ನಮಸ್ಕರಿಸುವದು-
ನಮೋ ಗಂಗಾಯಮುನಾಯೋರ್ಮಧ್ಯೇ ಯೇ ವಸಂತಿ ತೇ ಮೇ ಪ್ರಸನ್ನಾತ್ಮಾನಃ ಚಿರಂಜೀವಿತಂ ವರ್ಧಯಂತಿ, ನಮೋ ನಮೋ ಗಂಗಾಯಮುನಯೋರ್ಮುನಿಭ್ಯಶ್ಚ, ನಮೋ ನಮೋ ಗಂಗಾಯಮುನಯೋರ್ಮುನಿಭ್ಯಶ್ಚ ನಮಃ||

ಇದಾದ ಮತ್ತೆ, ಕೈ ಜೋಡಿಸಿ ಕೈ ಮುಕ್ಕೊಂಬದು:
ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವೈ ನಮ ಓಷಧೀಭ್ಯಃ |
ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ |
ಭದ್ರಂ ನೋ ಅಪಿವಾತಯ ಮನಃ | ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ ||

ಸಂಧ್ಯಾಯೈ ನಮಃ|
ಸಾವಿತ್ರ್ಯೈ ನಮಃ |
ಗಾಯತ್ರ್ಯೈ ನಮಃ |
ಸರಸ್ವತ್ಯೈ ನಮಃ|
ಸರ್ವೇಭ್ಯೋ ದೇವೇಭ್ಯೋ ನಮಃ |
ಸರ್ವಾಭ್ಯೋ ದೇವತಾಭ್ಯೋ ನಮಃ |
ಋಷಿಭ್ಯೋ ನಮಃ |
ಮುನಿಭ್ಯೋ ನಮಃ |
ಗುರುಭ್ಯೋ ನಮಃ |
ಆಚಾರ್ಯೇಭ್ಯೋ ನಮಃ |
ಈಶಾನಾಯ ನಮೋ ಗೋ-ಪಿತೃ-ಮಾತೃ-ಗುರುದೇವತಾಭ್ಯೋ ನಮಃ |

18. ಗೋತ್ರಾಭಿವಾದನ:
ನಿಂಗಳ ಗೋತ್ರ ಸೂತ್ರ ಪ್ರವರ ಗೋತ್ರ ಹೇಳಿ ನಮಸ್ಕರಿಸೆಕ್ಕು.
ನಿಂಗಳ ಗೋತ್ರ-ಸೂತ್ರ ವಿವರ ಯೇವದು ಹೇದು ಗೊಂತಿಲ್ಲದ್ದರೆ ನಿಂಗಳ ಬಟ್ಟಮಾವನ ಕೈಲಿ ಕೇಳಿಕ್ಕಿ.
ಶ್ರೀಮದ್ಯಜುಶ್ಶಾಖಾ – ಯಜುರ್ವೇದ ಅಧ್ಯಾಯಿಗೊ ನಾವು,
ಬೋಧಾಯಾನ ಸೂತ್ರಾನ್ವಿತ – ಬೋಧಾಯನ ಸೂತ್ರ ನಮ್ಮದು
……….ಆರ್ಷೇಯ ಪ್ರವರಾನ್ವಿತ, – ಪ್ರತಿ ಗೋತ್ರಕ್ಕೂ ಮೂರು ಅತವಾ ಐದು ಋಷಿಗಳ ಪ್ರವರ ಇರ್ತ
….. ಗೋತ್ರೋತ್ಪನ್ನಃ, – ಇಂತಾ ಗೋತ್ರಲ್ಲಿ ಜನ್ಮ ಪಡಕ್ಕೊಂಡ,
…. ಶರ್ಮಃ, – ಇಂತಾ ಹೆಸರಿಪ್ಪ
ಅಹಮಸ್ಮಿ ಭೋ ಅಭಿವಾದಯೇ || – ಆನು ಅಭಿವಾದನೆ ಮಾಡ್ತೆ.

19. ಯಮೋಪಸ್ಥಾನ:

ಯಮಂಗೆ ನಮಸ್ಕರಿಸುವ ಕಾಲ
ಪ್ರದಕ್ಷಿಣಾಕಾರವಾಗಿ ತಿರುಗಿ ದಕ್ಷಿಣಾಭಿಮುಖವಾಗಿ ನಿಂದು ಯಮೋಪಸ್ಥಾನ
ಯಮಾಯ ಧರ್ಮರಾಜಾಯ ಮೃತ್ಯವೇ  ಚಾಂತಕಾಯ ಚ |
ವೈವಸ್ವತಾಯ ಕಾಲಾಯ ಸರ್ವಭೂತಕ್ಷಯಾಯ ಚ |
ಔದುಂಬರಾಯ ದಧ್ನಾಯ ನೀಲಾಯ ಪರಮೇಷ್ಠಿನೇ |
ವೃಕೋದರಾಯ ಚಿತ್ರಾಯ ಚಿತ್ರಗುಪ್ತಾಯ ವೈ ನಮಃ ||

ಬಲಕ್ಕೆ ತಿರುಗಿ ಉತ್ತರಾಭಿಮುಖವಾಗಿ ನಿಂದುಗೊಂಡು –
ಋತಗ್ಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣಪಿಂಗಳಂ |
ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ ||

ಪ್ರದಕ್ಷಿಣಾಕಾರವಾಗಿ ಮೂರು ಸುತ್ತು ಬಂದುಗೊಂಡು ನಮಸ್ಕರಿಸುವದು
ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ |
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ||
ಯಾಂ ಸದಾ ಸರ್ವ ಭೂತಾನಿ ಸ್ಥಾವರಾಣಿ ಚರಾಣಿ ಚ |
ಸಾಯಂ ಪ್ರಾತರ್ನಮಸ್ಯಂತಿ ಸಾ ಮಾ ಸಂಧ್ಯಾsಭಿರಕ್ಷತು ||

20. ಗಾಯತ್ರೀ ವಿಸರ್ಜನಂ
ಕೈ ಮುಗುಕ್ಕೊಂಡು:
ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತಮೂರ್ಧನೀ |
ಬ್ರಹ್ಮಣೇಭ್ಯೋsಭ್ಯನುಜ್ಞಾತಾ ಗಚ್ಛ ದೇವಿ ಯಥಾ ಸುಖಂ |
ಸ್ತುತೋ ಮಯಾ ವರದಾ ವೇದ ಮಾತಾ |
ಪ್ರಚೋದಯಂತೀ ಪವನೇ ದ್ವಿಜಾತಾ |
ಆಯುಃ ಪೃಥಿವ್ಯಾಂ ದ್ರವಿಣಂ ಬ್ರಹ್ಮವರ್ಚಸಂ |
ಮಹ್ಯಂ ದತ್ವಾ ಪ್ರಜಾತುಂ ಬ್ರಹ್ಮಲೋಕಂ ||

ಚತುಸ್ಸಾಗರಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು ||
ಸರ್ವೇ ಜನಾಃ ಸುಖಿನೋ ಭವಂತು ||

ಆಕಾಶಾತ್ಪತಿತಂ ತೋಯಂ ಯಥಾ ಗಚ್ಚತಿ ಸಾಗರಂ |
ಸರ್ವದೇವನಮಸ್ಕಾರಃ ಕೇಶವಂ ಪ್ರತಿಗಚ್ಛತಿ||
ಕೂದುಗೊಂಬದು.

21. ಬ್ರಹ್ಮಾರ್ಪಣ
ಎಡದ ಕೈಲಿ ಒಂದು ಸಕ್ಕಣ ನೀರು ತೆಗದು ಬಲಗೈ ಅಂಗೈಗೆ ಎರದು ಕೆಳ ತಟ್ಟಗೆ ಬಿಡುವದು.
ಪ್ರತಿ ಕಾರ್ಯಕ್ರಮದ ಅಕೆರಿಗೆ, ಮಾಡಿದ ಕಾರ್ಯವ  ಶ್ರೀ ಪರಮಾತ್ಮಂಗೆ ಅರ್ಪುಸುವದು ಬ್ರಹ್ಮಾರ್ಪಣ.
ಕೆಲವು ಮನೆ ಕ್ರಮಂಗಳಲ್ಲಿ ಈ ಬ್ರಹ್ಮಾರ್ಪಣವ ಜಪದ ಅಖೇರಿಗೂ (ಅಷ್ಟಾಕ್ಷರಿ, ಪಂಚಾಕ್ಷರಿ ಜೆಪ ಆದಿಕ್ಕಿಯೂ)  ಮಾಡ್ತವು.

ಅನೇನ ಪ್ರಾತಃ  ಸಂಧ್ಯಾವಂದನಕರ್ಮಣಾ ಶ್ರೀ ಪರಮೇಶ್ವರಃ ಪ್ರೀಯತಾಂ |

ಸಾಯಂಕಾಲಕ್ಕೆ –

ಅನೇನ ಸಾಯಂ ಸಂಧ್ಯಾವಂದನಕರ್ಮಣಾ ಶ್ರೀ ಪರಮೇಶ್ವರಃ ಪ್ರೀಯತಾಂ |

ಓಂ ತತ್ಸತ್ ||

ಆಚಮನಂ:
ಓಂ ಋಗ್ವೇದಾಯ ಸ್ವಾಹಾ |
ಓಂ ಯಜುರ್ವೇದಾಯ ಸ್ವಾಹಾ |
ಓಂ ಸಾಮವೇದಾಯ ಸ್ವಾಹಾ ||

22. ಅಷ್ಟಾಕ್ಷರೀ ಜಪ:
‘ಓಂ ನಮೋ ನಾರಾಯಣಾಯ’ – ಹೇಳ್ತದು ಎಂಟು ಅಕ್ಷರ ಇಪ್ಪ ’ಅಷ್ಟ-ಅಕ್ಷರೀ’ ಮಂತ್ರ.
ಅಥ ಆಚಮನಂ:
ಓಂ ಋಗ್ವೇದಾಯ ಸ್ವಾಹಾ |
ಓಂ ಯಜುರ್ವೇದಾಯ ಸ್ವಾಹಾ |
ಓಂ ಸಾಮ ವೇದಾಯ ಸ್ವಾಹಾ ||

ಅಸ್ಯಶ್ರೀ ಅಷ್ಟಾಕ್ಷರೀ ಮಂತ್ರಸ್ಯ
ಕೈ ಜೋಡಿಸಿ ನಮಸ್ಕರಿಸಿ
ಸಾಧ್ಯನಾರಾಯಣ ಋಷಿಃ– ಮಸ್ತಕವ ಮುಟ್ಟಿಗೊಂಬದು
ದೇವೀ ಗಾಯತ್ರೀ ಛಂದಃ – ಮೋರೆ ಮುಟ್ಟಿಗೊಂಬದು
ಪರಬ್ರಹ್ಮಪರಮಾತ್ಮಾ ದೇವತಾ– ಹೃದಯ ಮುಟ್ಟಿಗೊಂಬದು

ಕರ ನ್ಯಾಸ:
ಓಂ ಕ್ರುದ್ದೋಲ್ಕಾಯ ಸ್ವಾಹಾ– ಅಂಗುಷ್ಠಾಭ್ಯಾಂ ನಮಃ ಎರಡೂ ಕೈಲಿ ತೋರು ಬೆರಳಿಂದ ಆಯಾ ಕೈಯ ಹೆಬ್ಬಟೆ ಬೆರಳ ಸ್ಪರ್ಶಿಸಿಗೊಂಬದು.
ಓಂ ಮಹೋಲ್ಕಾಯ ಸ್ವಾಹಾ – ತರ್ಜನೀಭ್ಯಾಂ ನಮಃ ಹೆಬ್ಬಟೆ ಬೆರಳಿಂದ ಆಯಾ ಕೈಯ ತೋರು ಬೆರಳ ಮುಟ್ಟುವದು.
ಓಂ ವೀರೋಲ್ಕಾಯ ಸ್ವಾಹ – ಮಧ್ಯಮಾಭ್ಯಾಂ ನಮಃ ಹೆಬ್ಬಟೆ ಬೆರಳಿಂದ ಆಯಾ ಕೈಯ ಮಧ್ಯ ಬೆರಳ ಮುಟ್ಟುವದು.
ಓಂ ದ್ಯೋಲ್ಕಾಯ ಸ್ವಾಹಾ– ಅನಾಮಿಕಾಭ್ಯಾಂ ನಮಃ ಹೆಬ್ಬಟೆ ಬೆರಳಿಂದ ಆಯಾ ಕೈಯ ಪವಿತ್ರ ಬೆರಳ ಮುಟ್ಟುವದು.
ಓಂ ಜ್ಞಾನೋಲ್ಕಾಯ ಸ್ವಾಹಾ – ಕನಿಷ್ಠಿಕಾಭ್ಯಾಂ ನಮಃ ಹೆಬ್ಬಟೆ ಬೆರಳಿಂದ ಆಯಾ ಕೈಯ ಕಿರು ಬೆರಳ ಮುಟ್ಟುವದು.
ಓಂ ಸಹಸ್ರೋಲ್ಕಾಯ ಸ್ವಾಹಾ– ಕರತಲಕರಪೃಷ್ಠಾಭ್ಯಾಂ ನಮಃ– ಅಂಗೈ, ಹಿಂಗೈ, ಪೂರ್ತಿ ಕೈಯೊಳ ಉದ್ದಿಗೊಂಬದು

ಷಡಂಗನ್ಯಾಸ:
ಓಂ ಕ್ರುದ್ದೋಲ್ಕಾಯ ಸ್ವಾಹ – ಹೃದಯಾಯ ನಮಃ ಬಲಗೈ ಅಂಗೈಂದ ಹೃದಯ ಸ್ಪರ್ಸಿಸಿಗೊಂಬದು.
ಓಂ ಮಹೋಲ್ಕಾಯ ಸ್ವಾಹಾ – ಶಿರಸೇ ಸ್ವಾಹಾ ಶಿರ ಮುಟ್ಟಿಗೊಂಬದು.
ಓಂ ವೀರೋಲ್ಕಾಯ ಸ್ವಾಹ – ಶಿಖಾಯೈ ವಷಟ್ ಜುಟ್ಟು ಮುಟ್ಟಿಗೊಂಬದು.
ಓಂ ದ್ಯೋಲ್ಕಾಯ ಸ್ವಾಹಾ – ಕವಚಾಯ ಹುಂ ಎರಡೂ ಕೈಗಳ ಹೃದಯಕ್ಕೆ ಕವಚದಾಕಾರ ಮಾಡಿ ಭುಜ ಸಂಧಿಯ ಸ್ಪರ್ಶಿಸುವದು
ಓಂ ಜ್ಞಾನೋಲ್ಕಾಯ ಸ್ವಾಹಾ – ನೇತ್ರಾಭ್ಯಾಂ ವಷಟ್ ಬಲಗೈ ಹೆಬ್ಬಟೆ ಬೆರಳಿಂದ ಮತ್ತು ಪವಿತ್ರ ಬೆರಳ ಕಣ್ಣಿಂಗೆ ಮುಟ್ಟುವದು.
ಓಂ ಸಹಸ್ರೋಲ್ಕಾಯ ಸ್ವಾಹ – ಅಸ್ತ್ರಾಯ ಫಟ್ಎರಡೂ ಕೈ ಸೇರುಸಿ ಒಂದು ಚಪ್ಪಾಳೆ ಶಬ್ದ ಮಾಡುವದು.

ಧ್ಯಾನಂ:
ಅಷ್ಟಾಕ್ಷರೀ ಮೂರ್ತಿಯ ದೇಹವರ್ಣನೆಯ ಧ್ಯಾನಿಸಿಗೊಂಡು:
ಅರ್ಕೌಘಾಭಾಂ ಕಿರೀಟಾನ್ವಿತಮಕರಲಸತ್ಕುಂಡಲಂ ದೀಪ್ತಿರಾಜ-
ತ್ಕೇಯೂರಂ ಕೌಸ್ತುಭಾಭಾಶಬಲರುಚಿರಹಾರಂ ಸಪೀತಾಂಬರಂ ಚ |
ನಾನಾರತ್ನಾಂಶುಭಿನ್ನಾಭರಣಶತಯುಜಂ ಶ್ರೀಧರಾಶ್ಲಿಷ್ಟಪಾರ್ಶ್ವಂ
ವಂದೇ ದೋಸಕ್ತಚಕ್ರಾಂಬುರುಹದರಗದಂ ವಿಶ್ವವಂದ್ಯಂ ಮುಕುಂದಂ ||

ಅಷ್ಟಾಕ್ಷರಿಯ ಆವಾಹನೆ:
ಅಷ್ಟಾಕ್ಷರ್ಯಂಗದೇವತಾಃ ಪ್ರಧಾನ ದೇವತಾಸ್ತಾಃ ಸರ್ವಾಃ ಸನ್ನಿಹಿತಾಃ ಸಂತು |
ಎರಡೂ ಅಂಗೈಗಳ ಅಂಜಲಿ ಗೊಳಿಸಿ ಒಳ ಹೊಡೇಂಗೆ ಮಡುಸಿಗೊಂಡು – ಮೂರು ಸರ್ತಿ ಮಾಡುವದು (ಅವಾಹನೆ ಮಾಡುವ ಮುದ್ರೆ):
ಅಷ್ಟಾಕ್ಷರೀಮಾವಾಹಯಾಮಿ, ಅಷ್ಟಾಕ್ಷರೀಮಾವಾಹಯಾಮಿ, ಅಷ್ಟಾಕ್ಷರೀಮಾವಾಹಯಾಮಿ ||
ಸಾಧ್ಯನಾರಾಯಣ ಋಷಿಃ ಮಸ್ತಕವ ಮುಟ್ಟಿಗೊಂಬದು
ದೇವೀ ಗಾಯತ್ರೀಛಂದಃ ಮೋರೆ ಮುಟ್ಟಿಗೊಂಬದು
ಪರಬ್ರಹ್ಮ ಪರಮಾತ್ಮಾ ದೇವತಾಹೃದಯ ಮುಟ್ಟಿಗೊಂಬದು

ಓಂ ನಮೋ ನಾರಾಯಣಾಯ||
ಗಾಯತ್ರೀ ಜಪದ ಎರಟಿ (ಎರಡು ಪಾಲು) ಅಷ್ಟಾಕ್ಷರೀ ಜಪ ಮಾಡೆಕ್ಕು ಹೇಳಿ ಶಾಸ್ತ್ರ ಹೇಳ್ತು.
23. ಪಂಚಾಕ್ಷರೀ ಜಪ:
ಓಂ ನಮಃ ಶಿವಾಯ – ಹೇಳ್ತದು ಐದು ಅಕ್ಷರ ಇಪ್ಪ ಪಂಚ-ಅಕ್ಷರೀ ಮಂತ್ರ.
ಅಸ್ಯಶ್ರೀ ಪಂಚಾಕ್ಷರೀ ಮಂತ್ರಸ್ಯ – ಕೈ ಜೋಡಿಸಿ ನಮಸ್ಕರಿಸಿಗೊಂಡು
ವಾಮದೇವ ಋಷಿಃ – ಬಲಗೈಲಿ ತಲೆ ಮುಟ್ಟಿಗೊಂಬದು
ಪಂಕ್ತಿಶ್ಛಂದಃ ಮೋರೆ ಮುಟ್ಟುವದು
ಸದಾಶಿವರುದ್ರೋ ದೇವತಾ – ಬಲದ ಕೈ ಅಂಗೈಂದ ಹೃದಯ ಮುಟ್ಟಿಗೊಂಬದು.

ಕರನ್ಯಾಸ:
ಓಂ – ಅಂಗುಷ್ಠಿಕಾಭ್ಯಾಂ ನಮಃ – ಎರಡೂ ಕೈಲಿ ತೋರು ಬೆರಳಿಂದ ಆಯಾ ಕೈಯ ಹೆಬ್ಬಟೆ ಬೆರಳ ಸ್ಪರ್ಶಿಸಿಗೊಂಬದು.
ನಂ – ತರ್ಜನೀಭ್ಯಾಂ ನಮಃಹೆಬ್ಬಟೆ ಬೆರಳಿಂದ ಆಯಾ ಕೈಯ ತೋರು ಬೆರಳ ಮುಟ್ಟುವದು.
ಮಂ – ಮಧ್ಯಮಾಭ್ಯಾಂ ನಮಃ – ಹೆಬ್ಬಟೆ ಬೆರಳಿಂದ ಆಯಾ ಕೈಯ ಮಧ್ಯ ಬೆರಳ ಮುಟ್ಟುವದು.
ಶಿಂ – ಅನಾಮಿಕಾಭ್ಯಾಂ ನಮಃ – ಹೆಬ್ಬಟೆ ಬೆರಳಿಂದ ಆಯಾ ಕೈಯ ಪವಿತ್ರ ಬೆರಳ ಮುಟ್ಟುವದು.
ವಾಂ – ಕನಿಷ್ಠಿಕಾಭ್ಯಾಂ ನಮಃ – ಹೆಬ್ಬಟೆ ಬೆರಳಿಂದ ಆಯಾ ಕೈಯ ಕಿರು ಬೆರಳ ಮುಟ್ಟುವದು.
ಯಂ – ಕರತಲಕರಪೃಷ್ಠಾಭ್ಯಾಂ ನಮಃ – ಅಂಗೈ, ಹಿಂಗೈ, ಪೂರ್ತಿ ಕೈಯೊಳ ಉದ್ದಿಗೊಂಬದು

ಷಡಂಗ ನ್ಯಾಸ:
ಓಂ  – ಹೃದಯಾಯ ನಮಃ – ಬಲಗೈ ಅಂಗೈಂದ ಹೃದಯ ಸ್ಪರ್ಸಿಸಿಗೊಂಬದು.
ನಂ – ಶಿರಸೇ ಸ್ವಾಹಾ – ಶಿರ ಮುಟ್ಟಿಗೊಂಬದು.
ಮಂ – ಶಿಖಾಯೈ ವಷಟ್ – ಜುಟ್ಟು ಮುಟ್ಟಿಗೊಂಬದು.
ಶಿಂ – ಕವಚಾಯ ಹುಂ – ಎರಡೂ ಕೈಗಳ ಹೃದಯಕ್ಕೆ ಕವಚದಾಕಾರ ಮಾಡಿ ಭುಜ ಸಂಧಿಯ ಸ್ಪರ್ಶಿಸುವದು
ವಾಂ – ನೇತ್ರತ್ರಯಾಯ ವೌಷಟ್ – ಬಲಗೈ ಹೆಬ್ಬಟೆ ಬೆರಳಿಂದ ಮತ್ತು ಪವಿತ್ರ ಬೆರಳ ಕಣ್ಣಿಂಗೆ ಮುಟ್ಟುವದು.
ಯಂ – ಅಸ್ತ್ರಾಯ ಫಟ್ – ಎರಡೂ ಕೈ ಸೇರುಸಿ ಒಂದು ಚಪ್ಪಾಳೆ ಶಬ್ದ ಮಾಡುವದು.

ಧ್ಯಾನಂ:
ಬಿಭ್ರದ್ಧೋರ್ಭಿಃ ಕುಠಾರಂ ಮೃಗಮಭಯವರೌ ಸುಪ್ರಸನ್ನೋ ಮಹೇಶಃ
ಸರ್ವಾಲಂಕಾರದೀಪ್ತಃ ಸರಸಿಜನಿಲಯೋ ವ್ಯಾಘ್ರಚರ್ಮಾತ್ತವಾಸಾಃ |
ಧ್ಯೇಯೋ ಮುಕ್ತಾಪರಾಗಾಮೃತರಸಕಲಿತದ್ರಿಪ್ರಭಃ ಪಂಚವಕ್ತ್ರಃ
ತ್ರ್ಯಕ್ಷಃ ಕೋಟೀರಕೋಟೀಘಟಿತತುಹಿನರೋಚಿಷ್ಕಲೋತ್ತುಂಗ ಮೌಲಿಃ ||

ಪಂಚಾಕ್ಷರೀ ಆವಾಹನೆ:
ಪಂಚಾಕ್ಷರ್ಯಂಗದೇವತಾಃ ಪ್ರಧಾನ ದೇವತಾಸ್ತಾಃ ಸರ್ವಾಃ ಸನ್ನಿಹಿತಾಃ ಸಂತು |
ಎರಡೂ ಅಂಗೈಗಳ ಒಳ ಹೊಡೇಂಗೆ ಮಡುಸಿಗೊಂಡು ಮೂರು ಸರ್ತಿ ಅವಾಹನೆ ಮಾಡುವದು:
ಪಂಚಾಕ್ಷರೀಮಾವಾಹಯಾಮಿ, ಪಂಚಾಕ್ಷರೀಮಾವಾಹಯಾಮಿ, ಪಂಚಾಕ್ಷರೀಮಾವಾಹಯಾಮಿ ||

ವಾಮದೇವ ಋಷಿಃ ಬಲಗೈಲಿ ಶಿರ ಮುಟ್ಟಿಗೊಂಬದು
ಪಂಕ್ತಿಶ್ಛಂದಃ – ಮುಖ ಮುಟ್ಟುವದು
ಸದಾಶಿವರುದ್ರೋ ದೇವತಾ ಬಲದ ಕೈ ಅಂಗೈಂದ ಹೃದಯ ಮುಟ್ಟಿಗೊಂಬದು.

|| ಓಂ ನಮಃ ಶಿವಾಯ ||
ಗಾಯತ್ರೀ ಜಪದ ನಾಕು ಪಾಲು ಪಂಚಾಕ್ಷರೀ ಜಪ ಮಾಡ್ತದು ಹೇಳಿ ಶಾಸ್ತ್ರ ಹೇಳ್ತು.

24. ಸಮರ್ಪಣ:
ಕೆಳಾಣ ಮಂತ್ರ ಹೇಳಿಗೊಂಡು – ಎಡದ ಕೈಲಿ ಒಂದು ಸಕ್ಕಣ ನೀರು ಬಲದ ಕೈ ಅಂಗೈಗೆ ಎರದು, ಅಂಜಲಿ ಪೂರ್ವಕ ಕೆಳ ತಟ್ಟಗೆ ಬಿಡುವದು.

ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ
ಸದಾಶಿವಾಯೇತಿ ಸಮರ್ಪಯಾಮಿ ||

|| ಓಂ ತತ್ಸತ್ ||
ದ್ವಿರಾಚಮನ (ಎರಡು ಸರ್ತಿ ಆಚಮನ ಮಾಡುವದು)
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮವೇದಾಯ ಸ್ವಾಹಾ ||

||ಓಂ ತತ್ಸತ್||

||ಹರಿಃ ಓಂ||

~*~*~

ಸೂ:

 • ಈ ಶುದ್ದಿ ಓದುತ್ತವ° ಆರಂಭಿಕ° – ಹೇಳ್ತ ದೃಷ್ಟಿಲಿ ಪ್ರತಿ ಕ್ರಮಂಗಳನ್ನು ಸಂಕ್ಷಿಪ್ತವಾಗಿ ಬರದ್ದು. ವಿವರವಾಗಿ ಕಲಿಯೇಕಾರೆ ನಿಂಗಳ ಹತ್ತರಾಣ ಬಟ್ಟಮಾವನ ಸಂಪರ್ಕಿಸಿ.
 • ಪ್ರಿಂಟು ತೆಗದರೂ ಚೆಂದಕೆ ಬತ್ತ ನಮುನೆ ನಿರ್ದಿಷ್ಟ ಬಣ್ಣಂಗಳನ್ನೇ ಉಪಯೋಗುಸಿದ್ದು.
 • ತಲೆಮಾರಿನ ಅತ್ಯಂತ ತೂಕದ, ಚೆಂದದ ಪಟ ಒದಗುಸಿ ಕೊಟ್ಟ ಯೇನಂಕೂಡ್ಳಣ್ಣಂಗೆ ಧನ್ಯವಾದಂಗೊ.
 • ಎಲ್ಲೋರು ನಿತ್ಯ ಸಂಧ್ಯಾವಂದನೆ ಮಾಡಿ ಬ್ರಹ್ಮ ತೇಜಸ್ಸು ತಮ್ಮಲ್ಲಿ ವೃದ್ಧಿಸಿ ಆಯು ಆರೋಗ್ಯಂದ ದೀರ್ಘ ಕಾಲ ಸಮಾಜ ಸೇವೆ ಮಾಡುವಂತಾಗಲಿ.
  ಬಹು ಅಂಬೇರ್ಪಿಲ್ಲಿಪ್ಪೋರು, ತೀರಾ ಸಮಯ ಇಲ್ಲದ್ದೋರು ಕೂಡ ಕನಿಷ್ಠ ಪಕ್ಷ ಆಚಮನ, ಪ್ರಾಣಾಯಾಮ, ಸಂಕಲ್ಪ, ಮಾರ್ಜನ, ಮಂತ್ರಾಚಮನ, ಅರ್ಘ್ಯ ಪ್ರದಾನ, ನ್ಯಾಸ – ಧ್ಯಾನ ಸಹಿತ ಗಾಯತ್ರೀ ಜಪ, ಸೂರ್ಯೋಪಸ್ಥಾನ, ನ್ಯಾಸ – ಧ್ಯಾನ ಸಹಿತ ಅಷ್ಟಾಕ್ಷರೀ ಜಪ ಮತ್ತು ಪಂಚಾಕ್ಷರೀ ಜಪ ಮಾಡಿ ಬ್ರಹ್ಮಾರ್ಪಣ ಮಾಡಿರೆ ಉತ್ತಮ ತಪಃಶಕ್ತಿ ಲಭುಸುತ್ತು.

ಸಂಧ್ಯಾವಂದನೆ ಮಂತ್ರ (Audio):
ವೇದಮೂರ್ತಿ ತುಪ್ಪೆಕ್ಕಲ್ಲು ಕುಮಾರ ಭಟ್ರು ಸಂಧ್ಯಾವಂದನೆ ಧ್ವನಿಮುದ್ರಣ ಮಾಡಿ ಬೈಲಿಂಗೆ ಕೊಟ್ಟಿದವು. ಅವಕ್ಕೆ ಅನಂತಾನಂತ ಕೃತಜ್ಞತೆಗೊ.
ಅವರ ಧ್ವನಿಮುದ್ರಣದ ವೆವಸ್ತೆ ಮಾಡಿದ ಚೆನ್ನೈಭಾವಂಗೂ ಬೈಲಿನ ಪರವಾಗಿ ಕೃತಜ್ಞತೆಗೊ.

 

[audio:audio/SANDHYAVANDANAM_10mb.mp3]

ಈ ಶುದ್ದಿಯ ಪಿ.ಡಿ.ಎಫ್ ರೂಪ ಇಲ್ಲಿದ್ದು. ನಿಂಗಳ ಪೈಕಿಯೋರಿಂಗೆ ಕಳುಸುಲಕ್ಕು.
Arghyejepa

ಬಟ್ಟಮಾವ°

   

You may also like...

30 Responses

 1. sampyadaanna says:

  ನಿಜವಾಗಿಯು ಒಳ್ಲೆ ವಿಶಯ

 2. H Giri says:

  thanks for providing the information request you give the link to audio not able to down load
  thanks
  giri

 3. ಡಾ.ಆಜೇಯ says:

  ಲಾಯಿಕ್ಕ ಬರದ್ದವು. ಜಪ ಮಾಡುವಗ ಪ್ರಿಂಟ್ ಮೊಬೈಲ್ ಲಿ ನೋಡಿ ಮಾಡ್ಲಕ್ಕು(Hi-Tech)
  “ಸಂವರ್ತೋಸಿ” ಹೇಳಿ ಆಯೆಕ್ಕು, “ಸಂವತ್ಸರೋಸಿ” ಅಲ್ಲ.
  ಸಾಯಂ ಸಂಧ್ಯೆಗೆ ಊರ್ದ್ವಾಯೈ ದಿಶೇ ಹೇಳ್ತದು ಬಿಟ್ಟು ಹೋಯಿದು. ಅದರ ತಿದ್ದಿಯೊಂಡು ಮಾಡಿರೆ ಆತು.
  ಆರಾದರೂ ಮುದ್ರೆಗಳ ತಿಳುದವ್ವಿದ್ದರೆ ಹೇಳಿಕೊಡಿ. ಅಂಕುಶ ಮುದ್ರೆ ಹೇಂಗೆ? ಗಾಯತ್ರಿ ಮುದ್ರೆಗೊ ಹೇಂಗೆ?

  • ಹರೇ ರಾಮ. ಧನ್ಯವಾದಂಗೊ ಅಜೇಯಣ್ಣ. ಬರವಾಗ ಆದ ಆ ಎರಡು ದೋಷಂಗಳ ಪರಿಷ್ಕರಿಸಿದ್ದೀಗ ಶುದ್ದಿಲಿ.
   ಮುದ್ರೆಗಳ ವಿವರ ಮತ್ತೆ ಮಹತ್ವವ ಬಟ್ಟಮಾವನನ್ನೋ, ತಂತ್ರಿಬಾವನನ್ನೋ ಕಂಡಪ್ಪಗ ಕೇಟು ಅರಡಿಯೆಕ್ಕಷ್ಟೇ

 4. Shriharsha Hegde says:

  Audio Link bekagittu download Madikyambale. Idre kodra.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *