ತೆಕ್ಕುಂಜ ಶಂಕರ ಭಟ್ಟ ವಿರಚಿತ ಶ್ರೀ ಷೋಡಶೀಸ್ತವಃ – ಪೂರ್ವಾರ್ಧ

ಅಜ್ಜನ ನೋಡಿದ ನೆಂಪು ಎನಗೆ ಇಲ್ಲೆ, ಹಾಂಗಾಗಿ ಅವರ ವೆಗ್ತಿ ಪರಿಚಯ ಮಾಡೆಕ್ಕಾರೆ ಹೆರಿಯೊರು ಹೇಳಿದ್ದು ಕೇಳಿದ್ದರ, ನೆಂಪು ಒಳುದ್ದರ ತಿಳುಶೆಕ್ಕಷ್ಟೆ.

( ಅಜ್ಜ – ಅಜ್ಜಿಯ ರೇಖಾಚಿತ್ರ ದಿ. ಶ್ರೀ ತೆಕ್ಕುಂಜ ದಾಮೋದರ ಭಟ್ಟರ “ವಿವೇಚನೆ” ಪುಸ್ತಕಂದ, ಕಲಾವಿದ – ಶ್ರೀ ಗೋಪಾಡ್ಕಾರ್)

ಅಜ್ಜನ ಸ್ತೋತ್ರಂಗಳ ಕನ್ನಡಾನುವಾದ ಮಾಡಿದ ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗೊ ಪ್ರಸ್ತಾವನೆಲಿ ಬರದ ಶಬ್ದಂಗಳ ಇಲ್ಲಿ ಹಾಕಿದ್ದೆ :


– ಅವರು – ಶೀಲ,ವಯಸ್ಸು,ಜ್ಞಾನ ಈ ಮೂರರಲ್ಲೂ ವೃದ್ದರಾದವರು.
ಸಂಭಾಷಣೆ ಮಾಡುವಾಗ, ಅಭಿನಯಪೂರ್ವಕವಾಗಿ – ಮಂದಹಾಸಪೂರ್ವಕವಗಿ – ಹೊರಹೊಮ್ಮುವ ಅವರ ರಸಿಕತೆ, ಸಾಹಿತ್ಯ, ವೇದಾಂತ ಮೂಂತಾದವುಗಳ ಜ್ಞಾನ, ಇವು ಅನ್ಯಾದ್ರಶಗಳೂ, ಅವಿಸ್ಮರಣೀಯಗಳೂ ಆಗಿವೆ.
ಇವರು – ಅನೇಕ ವರ್ಷಗಳ ವರೆಗೆ ಸ್ವಂತ ಶಾಲೆಯನ್ನು ನಡೆಯಿಸಿ, ಅನೇಕ ವಿದ್ಯಾರ್ಥಿಗಳಿಗೆ ಸಂಸ್ಕೃತ ವಿದ್ಯಾದಾನವನ್ನು ಮಾಡಿದ್ದರು.
ಹಲವು ಮಂದಿ ಬಡವರಿಗೆ ವೈದ್ಯಕೀಯದ ಮೂಲಕ ಆರೋಗ್ಯ ದಾನವನ್ನೂ ಮಾಡಿದ್ದರು.


ಹದಿನಾರು ಶ್ಲೋಕ ಇಪ್ಪ ಶ್ರೀ ಷೋಡಶೀಸ್ತವದ ಶುರುವಾಣ ಎಂಟು ಸ್ತೋತ್ರಂಗಳ ಕನ್ನಡಾನುವಾದದೊಟ್ಟಿಂಗೆ ಕೊಟ್ಟಿದೆ.
ಒಳುದ ಎಂಟು ಸ್ತೋತ್ರ ಇನ್ನಾಣ ಸರ್ತಿ.

ಶ್ರೀ ಷೋಡಶೀಸ್ತವ:

ಕಸ್ತೂರೀತಿಲಕಾಂಚಿತಾಂ ಕಚಭರೈಃ ಶೋಭಾಯಮಾನಾನನಾಂ
ಕಂಬುಂ ಚಕ್ರಮಥಾರವಿಂದಯುಗಳಂ ಸಂಬಿಭ್ರ ತೀಂ ಸುಂದರೀಂ ॥
ಕರ್ತ್ರೀಂ ಕಾರಣರೂಪಿಣೀಂ ಕವಿವರೈಃ ಸಂಸ್ತೂಯಮಾನಾಂ ಮುದಾ
ವಂದೇಂ ತ್ವಾಂ ಕಮನೀಯಮೂರ್ತಿಮನಘಾಮಾನಂದಕಂದಾಂ ಶಿವಂ ॥1॥

ಹೇ ದೇವಿ ! ನೀನು ಕಸ್ತೂರಿಯ ತಿಲಕದಿಂದ ಶೋಭಿಸುವವಳೂ-ಕೂದಲಿನ ರಾಶಿಯಿಂದ ಶೋಭಿಸುವ ಮುಖವುಳ್ಳವಳೂ-  ಶಂಖ-ಚಕ್ರ ಮತ್ತು ಎರಡು ತಾವರೆ ಹೂಗಳನ್ನು ಧರಿಸಿದವಳೂ-ಸುರೂಪೆಯೂ-ಸಕಲ ಲೋಕಗಳಿಗೆ ಕರ್ತೃವೂ ಕಾರಣಳೂ-ಕವಿಗಳಿಂದ ಭಕ್ತಿಪೂರ್ವಕವಾಗಿ ಸ್ತುತಿಸಲ್ಪಡುವವಳೂ-ಸುಂದರವಾದ ದೇಹವುಳ್ಳವಳೂ-ಪಾಪರಹಿತಳೂ-ಸಂತೋಷಕ್ಕೆ ಬೀಜರೂಪಳೂ-ಮಂಗಳರೂಪಳೂ-ಆಗಿರುವಿ.
ನಿನ್ನನ್ನು ನಾನು ನಮಸ್ಕರಿಸುವೆನು.

ಏಲಾಜಾತಿಲವಂಗಕುಂಕುಮಲಸದ್ವಕ್ತ್ರಾಂ ಮಹಾಮೋಹಿನೀಂ
ಏಣಾಂಕಾಲಯಸಂಸ್ಥಿತಾಂ
ತ್ರಿಜಗತೀಮಾತಃ ಸದಾ ಭಾವಯೇ
ಏಧದ್ವಕ್ತ್ರವರಾಂಶುಕಾಂ
ಕುಚಭರಾನಮ್ರಾಂ ಪರಾನಂದಿನೀಂ
ಏತೇ
ದಿವ್ಯವರಾಯುಧಾಃ ಕರತಲೇಷ್ವಾತನ್ವತೇ ಭೀಷಿಕಾಂ2

ಏಲಕ್ಕಿ-ಜಾಯಿಕಾಯಿ-ಲವಂಗ-ಕುಂಕುಮಕೇಸರಿ ಇವುಗಳಿಂದ ಪ್ರಕಾಶಿಸುವ ಬಾಯಿಯುಳ್ಳವಳೂ, ಮಹತ್ತಾದ ಮೋಹನಶಕ್ತಿಯುಳ್ಳವಳೂ, ಚಂದ್ರಬಿಂಬಾಂತರ್ಗತಳೂ, ನಿಮಿಷ ನಿಮಿಷಕ್ಕೆ ಕಳೇಯೇರುತ್ತಿರುವ ಮುಖಕಾಂತಿಯುಳ್ಳವಳೂ, ಸ್ತನಭಾರದಿಂದ ಬಾಗಿದವಳೂ, ಪರಮಾನಂದಭರಿತೆಯೂ ಆದ ಹೇ ತ್ರಿಗಜ್ಜಜನೀ ! ನಿನ್ನನ್ನು ಯಾವಾಗಲೂ ಧ್ಯಾನಿಸುವೆನು.
ನಿನ್ನ ಕೈಗಳಲ್ಲಿರುವ ಈ ದಿವ್ಯಾಯುಧಗಳು ಪಾಪಿಗಳಿಗೆ ಭಯವನ್ನುಂಟು ಮಾಡುತ್ತಿರುವುವು.

ಈಡೇ ತ್ವಾಂ ಜನನೀ ಜಗತ್ರಯಕರೀಂ ಶೋಣಾಬ್ಜಸಂಸ್ಥಾಂಸದಾ
ಈತೀರ್ನಿತ್ಯವಿನಾಶಿನೀಂ
ಭಗವತೀಂ ಬ್ರಹ್ಮಾಂಡಭಾಂಡೋದರೀಂ
ಈವರ್ಣೇನಸುಶೋಭಿನೀಂ ಮಣಿಮಯೇಚಕ್ರೇ
ಸುರೂಢಾಂ ಪರಾಂ
ಪಶ್ಯಂತೀಂ
ಪರದೇವತಾಂ ಶ್ರುತಿಮಯೀಂ ಶ್ರೀರಾಜರಾಜೇಶ್ವರೀಂ 3

ಮೂರು ಲೋಕಗಳನ್ನುಂಟುಮಾಡಬಲ್ಲ, ಯಾವಾಗಲೂ ಕೇಂದಾವರೆಯಲ್ಲಿ ಕುಳಿತಿರುವ, ಅತಿವೃಷ್ಟಿ-ಅನಾವೃಷ್ಟಿ-ಮುಂತಾದ ಆರು ಬಗೆಯ ಪೀಡೆಗಳನ್ನು ನಿತ್ಯವೂ ನಾಶಮಾಡುತ್ತಿರುವ, ಕೀರ್ತಿವಂತೆಯಾದ, ಬ್ರಹ್ಮಾಂಡವೆಂಬ ಗಡಿಗೆಯೇ ತನ್ನ ಹೊಟ್ಟೆಯಾಗಿರುವ, ಈಕಾರವೆಂಬ ಬೀಜಾಕ್ಷರದಿಂದ ಶೋಭಿಸುತ್ತಿರುವ, ಚಿಂತಮಣಿನಿರ್ಮಿತವಾದ ಶ್ರೀಚಕ್ರದಲ್ಲಿ ಕುಳಿತಿರುವ, ನಾಲ್ಕು ವಿಧವಾದ ಮಾತುಗಳಲ್ಲಿ-ಮೊದಲನೆಯದಾದ “ಪರಾ” ಎಂಬ ವಾಗ್ರೂಪಿಣಿಯಾಗಿಯೂ,ಎರಡನೆಯದಾದ “ಪಶ್ಯಂತೀ” ಎಂಬ ವಾಗ್ರೂಪಿಣಿಯಗಿಯೂ ಇರುವ, ಸಕಲ ದೇವದೇವತೆಗಳಿಗಿಂತ ಶ್ರೇಷ್ಟ ದೇವತೆಯೆನಿಸಿದ, ವೇದೋಪನಿಷತ್ಸ್ವರೂಪಿಣಿಯಾದ, ಮಹಾಚಕ್ರವರ್ತಿನಿಯೆನಿಸಿದ, ಲೋಕ ಜನನಿಯಾದ ನಿನ್ನನ್ನು ಸ್ತುತಿಸುವೆನು.

ಲಜ್ಜಾಲಾಂಛಿತವಿಗ್ರಹಾಂ ಲಯಕರೀಂ ಲಾವಣ್ಯಮಾತನ್ವತೀಂ
ಲಕ್ಷೀಂ
ತ್ವಾಂ ಲಲನಾಜನೇನ ಸತತಂ ಸಂಸೇವ್ಯಮಾನಾಂ ಭಜೇ
ಲಕ್ಷಾರ್ಥ್ಯಪ್ರತಿಬೊಧಿನೀಂ
ಲಘುಮಯೀಂ ಶ್ರೀಚಕ್ರಮಧ್ಯಸ್ಥಿತಾಂ
ಶ್ರೀದೇವೀಂ
ಲಲನಾಸ್ವರೂಪಮಖಿಲೇಷ್ವಾತನ್ವತೀಮೀಶ್ವರೀಂ 4

ಓ ದೇವಿ ! ಲಜ್ಜಾನ್ವಿತೆಯಗಿಯೂ, ಲೊಕನಾಶಕಾರಿಣಿಯಾಗಿಯೂ, ಹೊಳಪನ್ನು ಇತರರ ದೇಹದಲ್ಲಿ ಉಂಟುಮಾಡುವವಳಾಗಿಯೂ, ಲಕ್ಷಣವಂತೆಯಾಗಿಯೂ, ಸ್ತ್ರೀ ವರ್ಗದಿಂದ ಎಡೆಬಿಡದೆ ಸೇವಿಸಲ್ಪಡುವವಳಾಗಿಯೂ, ” ತತ್ವಮಸಿ” ಎಂಬ ಶ್ರುತಿವಾಕ್ಯದ ಲಾಕ್ಷಣಿಕವಾದ ಅರ್ಥವನ್ನು – ಎಂದರೆ, “ಜೀವಾತ್ಮ ಪರಮಾತ್ಮರ ಚೈತನ್ಯವು ಒಂದೇ” ಎಂಬ ತತ್ವಾರ್ಥವನ್ನು ಬೊಧಿಸುವವಳಾಗಿಯೂ, ಹತ್ತಿಯಂತೆ ಹಗುರವಾಗುವ ” ಲಘಿಮಾ” ಎಂಬ ಸಿದ್ದಿ ಉಳ್ಳವವಳಾಗಿಯೂ – ಶ್ರೀಚಕ್ರದ ಮಧ್ಯವರ್ತಿನಿಯಾಗಿಯೂ, ಐಶ್ವರ್ಯದ ಅಭಿಮಾನಿನಿಯಾಗಿಯೂ, ತನ್ನ ದರ್ಶನಕ್ಕಾಗಿ ಹತ್ತಿರ ಬರುವ ಬ್ರಹ್ಮಾದಿಗಳಲ್ಲಿ ಸ್ತ್ರೀ ಸ್ವರೂಪವನ್ನುಂಟುಮಾಡುವವಳಾಗಿಯೂ, ಜಗನ್ನಾಯಕಿಯಾಗಿಯೂ ಇರುವ ನಿನ್ನನ್ನು ಸೇವಿಸುತ್ತಿರುವೆನು.

ಹ್ರೀಂಕಾರತ್ರಯಶೋಭಿನೀಂ ಗುಣಮಯೀಂ ಹ್ರೀಂಕಾರಮಂತ್ರಾಲಯಾಂ
ಹ್ರೀಂದೇವೀಂ
ಶ್ರುತಿಗೋಚರಾಂ ಶಶಿಕಲಾಲಂಕಾರಸಂದೀಪಿತಾಂ
ಹ್ರೀಮಿತ್ಯೇವ
ಜಪಂತಿ ನಿತ್ಯಮಮಲಾಂ ಯೇಬ್ರಹ್ಮವಿದ್ಯಾಂ ಜನಾಃ
ತೇಭ್ಯೋದಾಸ್ಯಸಿ
ಯೋಗಮಾರ್ಗಸುಲಭಂ ಮೋಕ್ಷಂ ಭಜೇ ಯೋಗಿನೀಂ 5

ಆದಿಮಧ್ಯಾಂತಗಳಲ್ಲಿ ಹ್ರೀಂಕಾರವೆಂಬ ಮೂರು ಬೀಜಾಕ್ಷರಗಳಿಂದ ಶೋಭಿಸುವ ಮೂಲಮಂತ್ರರೂಪಿಣಿಯಾಗಿಯೂ, ಸತ್ವಾದಿಗುಣರೂಪಿಣಿಯಾಗಿಯೂ,-“ಹ್ರೀಂ” ಎಂಬ ಮಂತ್ರದಲ್ಲಿ ಅಡಗಿರುವವಳಾಗಿಯೂ, ಹ್ರೀಂಕಾರವಾಚ್ಯಳಾದ ದುರ್ಗೆಗೆ ಪೂಜ್ಯಳಾಗಿಯೂ, ಉಪನಿಷತ್ತುಗಳ ಮೂಲಕ ತಿಳಿಯಲ್ಪಡತಕ್ಕವಳಾಗಿಯೂ, “ಚಂದ್ರಕಲೆ”ಯೆಂಬ ಆಭರಣದಿಂದ ಪ್ರಜ್ವವಿಸುವವಳಾಗಿಯೂ, ಬ್ರಹ್ಮಜ್ಞಾನಸ್ವರೂಪಿಣಿಯೂ ಆದ ನಿನ್ನನ್ನು ” ಹ್ರೀಂ” ಎಂಬ ಬೀಜಾಕ್ಷರದ ಮೂಲಕ ನಿತ್ಯವೂ ಯಾರು ಜಪಿಸುತ್ತಿರುವರೋ, ಅಂಥಾ ಉಪಾಸಕರಿಗೆ, ಯೋಗಾಭ್ಯಾಸದ ಮೂಲಕ ಸುಲಭದಿಂದ ಪಡೆಯಬೇಕಾದ ಮೋಕ್ಷವನ್ನು ಕೊಡುತ್ತಿರುವ, ಯೋಗಿನೀಗಣಗಳ ಸ್ವರೂಪಿಣಿಯಾದ ನಿನ್ನನ್ನು ಸೇವಿಸುವೆನು.

ಹತ್ಯಾದೋಷವಿನಾಶಿನೀಂ ಹಲಧರೇಣಾಸೇವಿತಾಂ ಹಾಸಿನೀಂ
ಹರ್ಯಕ್ಷಾದ್ಯಮರೌಘಸನ್ನುತಪದಾಂ
ಹರ್ಷಪ್ರದಾಂ ಯೋಗಿನಾಂ
ಹಂಸೀಂ
ಹಂಸವಿಹಾರಿಣೀಂ ಹತಮಹಾಪಾಪಂ ಪರಾಂ ಪಾವನಾಂ
ಹಂತಾಹಂ
ಸಮುಪಾಶ್ರಯೇ ಹರಿಹರಾವಾಜ್ಞ ಪಯಂತೀಂ ಶಿವಾಂ6

ಹಿಂಸೆಯಿಂದುಂಟಾದ ಪಾಪಗಳನ್ನು ಪರಿಹರಿಸುವವಳೂ, ಬಲರಾಮನಿಂದ ಸೇವಿಸಲ್ಪಡುವವಳೂ, ನಗುಮುಖವುಳ್ಳವಳೂ, ನರಹರಿ ಮುಂತಾದ ದೇವತೆಗಳಿಂದ ಸೇವಿಸಲ್ಪಟ್ಟ ಪಾದಗಳುಳ್ಳವಳೂ, ಯೋಗಿಗಳಿಗೆ ಸಂತೋಷವನ್ನುಂಟುಮಾಡುವವಳೂ, ಜೀವಾತ್ಮರೂಪಳೂ, ಹಂಸವಾಹಿನಿಯೂ, ಪಾಪನಾಶಿನಿಯೂ, ಪರಮಶಾವನೆಯೂ, ಹರಿಹರವನ್ನು ಲೋಕದ ಕಾರಣ ಪುರುಷರನ್ನಾಗಿ ಆಜ್ಞಾಪಿಸುವವಳೂ, ಮಂಗಲರೂಪಿಣಿಯೂ, ಆದ ನಿನ್ನನ್ನು ಆಶ್ರಯಿಸುವೆನು.

ಸತ್ಸಿದ್ಧಿಂ ಸಮುಪಾಶ್ರಿತಾಯ ದದತೀಂ ಸತ್ವಪ್ರದಾಂ ಶಾಶ್ವತಾಂ
ಸಚ್ಚಿಲ್ಲಕ್ಷಣಲಕ್ಷಿತಾಂ
ಸದಸತೋಃ ಸಂವಿತ್ ಪ್ರಭಾಂ ಭಾಸುರಾಂ
ಸದ್ವಿದ್ಯಾಗಮವೇದಶಾಸ್ತ್ರನಿಚಯೈರಾಸೇವಿತಾಂ
ತಾರಿಣೀಂ
ಸತ್ಯಾಂ
ಸಂಗವಿಸರ್ಜಿತಾಂ ಭಗವತೀಂ ಸಂಪ್ರಾರ್ಥಯೇ ಪಾರ್ವತೀಂ 7

ತನ್ನ ಭಕ್ತನಿಗೆ ಉತ್ತಮವಾದ ಸಿದ್ಧಿಯನ್ನು ಕೊಡುವವಳೂ, ಸತ್ವಗುಣವನ್ನು ಕರುಣಿಸುವವಳೂ, ಹುಟ್ಟುಸಾವುಗಳಿಲ್ಲದವಳೂ, ಸತ್ಯಜ್ಞಾನಗಳೆಂಬ ಲಕ್ಷಣವುಳ್ಳವಳೂ, ನಶ್ವರವಾದ ಪ್ರಪಂಚಕ್ಕೂ ನಾಶವಿಲ್ಲದ ಆತ್ಮಗಳಿಗೂ ಜ್ಞಾನರೂಪವಾದ ಪ್ರಭೆಯನ್ನುಂಟುಮಾಡುವವಳೂ, ಸುಜ್ಞಾನ, ಆಗಮಶಾಸ್ತ್ರಗಳು, ವೇದಗಳು,ಧರ್ಮಶಾಸ್ತ್ರಗಳು, ಇವುಗಳ ಅಭಿಮಾನಿ ದೇವತೆಗಳಿಂದ ಸೇವಿಸಲ್ಪಡುವವಳೂ, ಸಂಸಾರದಿಂದ ಭಕ್ತರನ್ನು ಪಾರಗಾಣಿಸುವವಳೂ, ಸತ್ಯರೂಪಳೂ, ದುಃಸಂಗವರ್ಜಿತಳೂ, ಉತ್ಪತ್ತಿ, ನಾಶ, ಪ್ರಾಣಿಗಳ ಆಗತಿ, ನಿರ್ಗತಿ, ವಿದ್ಯೆ – ಅವಿದ್ಯೆ( ಅಜ್ಞಾನ) ಗಳೆಂಬ ಆರು ವಿಷಯಗಳನ್ನರಿತವಳೂ, ಪರ್ವತಕುಮಾರಿಯೂ ಆದ ನಿನ್ನನ್ನು ಪ್ರಾರ್ಥಿಸುವೆನು.

ಕಮ್ರಾಲಾಲಕಶೋಭಿತಾಸ್ಯಕಮಲಾಂ ಕಲ್ಪದ್ರುಮೂಲೇಸ್ಥಿತಾಂ
ಕಾಮಾರಾತಿವಿಭಾವಿತಾಂ
ಕಲಿಮಲಪ್ರಧ್ವಂಸಿನೀಂ ಕಾಳಿಕಾಂ
ಕಾಂತಾಂ
ಕಾರಣಕಾರಿಣೀಂ ಕತಿಪಯೈರಾಸೇವಿತಾಂ ಭಾರತೀಂ
ಶಾಂತಾಂ
ಸರ್ವಸುಖಪ್ರದಾಂ ಭವಮಯೀಂ ಭಾಗ್ಯಾಂಕುರಾಂ ಭಾವಯೇ 8

ಕಾಮಿಗಳನ್ನು ಆಕರ್ಶಿಸುವಷ್ಟು ಸುಂದರವಾದ ಮುಂಗುರುಳುಗಳಿಂದ ಶೋಭಿಸುವ ಮುಖಕಮಲವುಳ್ಳ ಕಲ್ಪವೃಕ್ಷದಡಿಯಲ್ಲಿ ಕುಳಿತಿರುವ, ಕಾಮನನ್ನು ದಹಿಸಿದ ಶಿವನನ್ನು ಸಹ ತನ್ನೆಡೆಗೆ ಆಕರ್ಶಿಸುವ, ಪಾಪವೆಂಬ ಕೆಸರನ್ನು ನಿರ್ಮೂಲ  ಮಾಡುವ, ಸಂಹಾರಕರ್ತ್ರಿಯಾದ, ಸುಂದರಿಯಾದ, ಲೋಕದ ಸೃಷ್ಟಿಗೆ ಕಾರಣಳಾದ ಪಂಚಭೂತಗಳನ್ನುಂಟುಮಾಡಿದ, ಕೆಲವು ಮಂದಿಗಳೇ ಆಗಿರುವ ಭಕ್ತರಿಂದ ಸೇವಿಸಲ್ಪಡುವ, ತೇಜಃಪ್ರಿಯಳಾದ, ಶಾಂತಸ್ವರೂಪೆಯಾದ, ಸಕಲಸುಖಪ್ರದೆಯಾದ, ಸಂಸಾರಿಯಂತೆ ತೋರಿಸಿಕೊಳ್ಳುವ, ಭಾಗ್ಯದ ಮೊಳಕೆಯಂತಿರುವ, ಶ್ರೀ ದೇವಿಯನ್ನು ಧ್ಯಾನಿಸುವೆನು.

~*~*~

(ಸಶೇಷ)

ತೆಕ್ಕುಂಜ ಕುಮಾರ ಮಾವ°

   

You may also like...

8 Responses

 1. Shashikala says:

  ಕುಮಾರ ಬಾವ,

  ಅಜ್ಜನ ಸ್ತೋತ್ರಂಗಳ ಪರಿಚಯಿಸುದು ತು೦ಬಾ ಸಂತೋಷ ಆವುತ್ತು. ನಮ್ಮ ಅಜ್ಜನ ನೋಡಿದ ನೆಂಪು ಎನಗು ಇಲ್ಲೆ.

  • ತೆಕ್ಕುಂಜ ಕುಮಾರ ಮಾವ° says:

   ಅಜ್ಜನ ನೆಂಪು ಇಲ್ಲದ್ದರೂ ಅವು ಮಾಡಿದ ಕೆಲಸಂಗಳ ನೆಂಪು ಮಡಿಕ್ಕೊಂಬದು ನಮ್ಮ ಕರ್ತವ್ಯ. ಇದಕ್ಕೆ”ಒಪ್ಪಣ್ಣ” ಒಂದು ಒಳ್ಳೆ ವೇದಿಕೆ ಆತು,ಅಲ್ಲದೊ ಶಶಿ.

 2. ಚೆನ್ನೈ ಭಾವ says:

  [ಸಂಭಾಷಣೆ ಮಾಡುವಾಗ, ಅಭಿನಯಪೂರ್ವಕವಾಗಿ – ಮಂದಹಾಸಪೂರ್ವಕವಗಿ – ಹೊರಹೊಮ್ಮುವ ಅವರ ರಸಿಕತೆ] – ಮನದಾಳದಲ್ಲಿ ಶೀಘ್ರ ಅರ್ಥ ಅಪ್ಪಲೂ, ಬಹುಕಾಲ ನೆಂಪು ನಿಂಬಲೆ ಇದು ಅತೀ ಅಗತ್ಯ.

  ಅನೇಕರಿಂಗೆ ವಿದ್ಯಾದಾನ, ಆರೋಗ್ಯ ದಾನ ಮಾಡಿ ಜನಮನ್ನಣೆ ಪಡೆದು ಕೀರ್ತಿಶೇಷರಾದ ಅಜ್ಜಂಗೆ ನಮೋ ನಮಃ .

  ಅವರ ಶುದ್ದಿ ಬರದ ತೆಕ್ಕುಂಜ ಕುಮಾರ ಮಾವಂಗೆ ಧನ್ಯವಾದ ಹೇಳಿ ಇತ್ಲಾಗಿಂದ ಒಪ್ಪ.

  • ತೆಕ್ಕುಂಜ ಕುಮಾರ ಮಾವ° says:

   ನಿಂಗಳ ಅಭಿಮಾನಪೂರ್ವಕ ಒಪ್ಪಕ್ಕೆ ಅಭಿವಂದನೆ, ಭಾವ.

 3. ಧನ್ಯವಾದ ಕುಮಾರ ಮಾವಾ…

 4. thripthibhat says:

  ಮುದಿಯಜ್ಜನ ನೆನಪಿಸಿದ್ದಕ್ಕೆ ಧನ್ಯವಾದನ್ಗೊ ಮಾವಾ..

 5. ಶರ್ಮಪ್ಪಚ್ಚಿ says:

  ನಿಂಗಳ ಅಜ್ಜನ ಇಲ್ಲಿ ಪರಿಚಯಿಸಿ ಅವರ ಅಮೂಲ್ಯ ಕೃತಿಗಳ ಬೈಲಿಂಗೆ ಹಂಚುವ ಒಳ್ಳೆ ಕೆಲಸಕ್ಕೆ ಶುಭವಾಗಲಿ ಹೇಳಿ ಹಾರೈಕೆ.
  ಎಲ್ಲಾ ಸ್ತೋತ್ರಂಗಳಲ್ಲಿಯೂ ಸುರುವಾಣ ಮೂರು ಗೆರೆಗಳೂ ಸುರು ಅಪ್ಪದು ಒಂದೇ ಅಕ್ಷರಂದ. ರಾಗಲ್ಲಿ ಓದಲೆ ತುಂಬಾ ಕೊಶೀ ಆವ್ತು.
  [ತೆಕ್ಕುಂಜ ಶ್ರೀ ಗೋಪಾಲ ಕೃಷ್ಣ ಭಟ್ಟರು ಎಂಗೊಗೆ ಅಲೋಶಿಯಸ್ ಕಾಲೇಜಿಲ್ಲಿ ಕನ್ನಡ ಕ್ಲಾಸ್ ತೆಕ್ಕೊಂಡು ಇಪ್ಪದು ನೆಂಪಾತು. ಆರ ಕ್ಲಾಸಿಂಗೆ ತಪ್ಪಿಸಿದರೂ ಮಕ್ಕೊ ಅವರ ಕ್ಲಾಸ್ ಒಂದು ತಪ್ಪಿಸಿಂಡು ಇತ್ತಿದ್ದವಿಲ್ಲೆ. ಅವರ ಪಾಠದ ಶೈಲಿ ಹಾಂಗೆ ಇತ್ತಿದ್ದು.]

 6. anusha thekkunja says:

  thank you kumara doddappa anusha thekkunja

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *