Oppanna.com

ಧನ್ಯವಾದ ಪತ್ರ–ಲಕ್ಷ್ಮೀಶ ಜೆ.ಹೆಗಡೆ

ಬರದೋರು :   ಶರ್ಮಪ್ಪಚ್ಚಿ    on   10/03/2016    2 ಒಪ್ಪಂಗೊ

ಧನ್ಯವಾದ ಪತ್ರ

ಶರ್ಮರಿಗೆ ನಮಸ್ಕಾರ.
ಆನು ಲಕ್ಷ್ಮೀಶ.ಎಂಗೆ ಆರ್ಥಿಕವಾಗಿ ಸಹಾಯ ಮಾಡಿದ ಎಲ್ಲ ಹವ್ಯಕ ಬಂಧುಗಳಿಗೂ ಆನು ಫೈನಲ್ ಇಯರ್ ಪಾಸಾದ ಸಂದರ್ಭದಲ್ಲಿ ಕೃತಜ್ಞತೆ ಹೇಳಲೆ ಬಯಸ್ತಿ.ಕೆಳಗೆ ಒಂದು ಪತ್ರ ಅಟ್ಯಾಚ್ ಮಾಡಿದ್ದಿ.ಅದನ್ನು ಒಪ್ಪಣ್ಣ ವೆಬ್ಸೈಟ್ ನಲ್ಲಿ ಪ್ರಕಟಿಸಿ..

ಹರೇ ರಾಮ
ಧನ್ಯವಾದಗಳು
ಲಕ್ಷ್ಮೀಶ ಜೆ.ಹೆಗಡೆ

~~~~

ಲಕ್ಷ್ಮೀಶ ಜೆ.ಹೆಗಡೆ

ಹರೇ ರಾಮ.ಒಪ್ಪಣ್ಣನ ಬೈಲಿನ ಎಲ್ಲ ಹವ್ಯಕ ಬಂಧುಗಳಿಗೂ ನಮಸ್ಕಾರ.ಆನು ಲಕ್ಷ್ಮೀಶ ಜೆ.ಹೆಗಡೆ.ನಿಂಗಕ್ಕೆ ನೆನಪಿದ್ದಿಕ್ಕು.ಆನು 2011ರಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಸಿಇಟಿಯಲ್ಲಿ 728 ನೇ Rank ಪಡೆದಿದ್ದಿ.ಆನು ಎಂಬಿಬಿಎಸ್ ಓದ ಕನಸು ಕಾಣ್ತಾ ಇದ್ದಿದ್ದಿ.ಆದ್ರೆ ಎಂಗಳ ಮನೆ ಆರ್ಥಿಕ ಪರಿಸ್ಥಿತೀಲಿ ಎನ್ನನ್ನ ಎಂಬಿಬಿಎಸ್ ಓದ್ಸದು ಸಾಧ್ಯ ಇತ್ತಿಲ್ಲೆ.ಸರ್ಕಾರಿ ಕಾಲೇಜಲ್ಲೇ ಸೀಟ್ ಸಿಕ್ಕಿರೂ ವರ್ಷಕ್ಕೆ ಸುಮಾರು ಐವತ್ತು ಸಾವಿರ ಖರ್ಚು ಬತ್ತಿತ್ತು.ಮೂಡಬಿದ್ರೆ ಹತ್ತಿರದ ಮಿಜಾರು ಎಂಬ ಊರಲ್ಲಿ ಕೃಷಿ ಫಾರಂ ಒಂದರ ಮೇಲುಸ್ತುವಾರಿ ನೋಡ್ಕ್ಯಂಡು ಇಪ್ಪ ಎನ್ನ ಅಪ್ಪಂಗೆ ಎನ್ನನ್ನು ಎಂಬಿಬಿಎಸ್ ಓದ್ಸದು ಆರ್ಥಿಕವಾಗಿ ಸಾಧ್ಯ ಇತ್ತಿಲ್ಲೆ.ಅದೇ ಸಮಯದಲ್ಲಿ ಕೌನ್ಸಿಲಿಂಗ್ ನಡೆದು ಯಂಗೆ ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಲ್ಲಿ ಎಂಬಿಬಿಎಸ್ ಸೀಟು ಸಿಕ್ತು.ಆನು ಬಯಸಿದ ಕಾಲೇಜಲ್ಲೇ ಸೀಟು ಸಿಕ್ಕಿರೂ ಮೆಡಿಕಲ್ ಓದಲೆ ಆನು ಮೇಲೆ ಕೆಳಗೆ ನೋಡ್ತಾ ಇದ್ದಿದ್ದಿ.

ಅದೇ ಸಮಯದಲ್ಲಿ ಒಪ್ಪಣ್ಣ ವೆಬ್ಸೈಟ್ ನಲ್ಲಿ ಎನ್ನ ಬಗ್ಗೆ ಒಂದು ವಿವರ ಪ್ರಕಟ ಆತು.ಎನ್ನ ಪರಿಚಯ,ಎನ್ನ ವಿವರದ ಜೊತಿಗೆ ಆನು ಎಂಬಿಬಿಎಸ್ ಓದಲೆ ಹವ್ಯಕ ಬಂಧುಗಳು ಆರ್ಥಿಕ ಸಹಾಯ ಮಾಡವು ಹೇಳ ಕೋರಿಕೆ ಅದ್ರಲ್ಲಿತ್ತು.ನಂತರ ನಡೆದದ್ದು ಎಲ್ಲವೂ ಒಂದು ಪವಾಡ ಹೇಳೇ ತಿಳ್ಕಂಡಿದ್ದಿ ಆನು.ರಾಜ್ಯಾದ್ಯಂತ ಇಪ್ಪ ಹವ್ಯಕ ಬಂಧುಗಳು,ಬೇರೆ ರಾಜ್ಯದ ಕೊನೆಗೆ ಬೇರೆ ದೇಶದಲ್ಲಿಪ್ಪ ಹವ್ಯಕರೂ ಕೂಡಾ ಯಂಗಳು ಕನಸಲ್ಲೂ ಊಹಿಸಿರದ ರೀತಿಲಿ ಆರ್ಥಿಕವಾಗಿ ಸಹಾಯ ಮಾಡಿದ.ಎನ್ನ ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ಎಲ್ಲೂ ಆರ್ಥಿಕ ತೊಂದ್ರೆ ಎದುರಾಗದ ಹಾಂಗೆ ನೋಡ್ಕ್ಯಂಡ.ಯಾರಿಗೂ ಎನ್ನ ಮುಖ ಪರಿಚಯ ಇಲ್ಲೆ,ಯನ್ನನ್ನ ಫೋನ್ ನಲ್ಲಿ ಸಹ ಯಾರೂ ಸಂಪರ್ಕ ಮಾಡದೇ ಕೇವಲ ವೆಬ್ಸೈಟ್ ಒಂದೇ ನೋಡ್ಕ್ಯಂಡು ಎಂಗಳ ಮಾಣಿ ಹೇಳ ಪ್ರೀತಿ,ಅಭಿಮಾನ ಇಟ್ಕಂದು ಭಾರೀ ದೊಡ್ದ ಮೊತ್ತದಲ್ಲಿ ಎಲ್ಲರೂ ಸಹಾಯ ಮಾಡ್ದ.ನಿಂಗಳೆಲ್ಲರ ನಿರಂತರ ಸಹಾಯದಿಂದ,ನಂಬಿದ ದೇವರ ಮತ್ತು ಶ್ರೀಗುರುಗಳ ಆಶೀರ್ವಾದದಿಂದ ಎನ್ನ ಎಂಬಿಬಿಎಸ್ ನಿರಾತಂಕವಾಗಿ ಸಾಗಿತು.ಅದು ಈಗ ಒಂದು ಗುರಿಯನ್ನು ಮುಟ್ಟಿದ್ದು.ಕಳೆದ ಡಿಸೆಂಬರ್-ಜನವರಿಲಿ ನಡೆದ ಎಂಬಿಬಿಎಸ್ ನ Final Year ನ ಪರೀಕ್ಷೆಲಿ 63% ತೆಗೆದು ಪಾಸ್ ಆಯ್ದಿ.ಇನ್ನು ಒಂದು ವರ್ಷ Internship ಮಾಡಿರೆ ಆನು ಡಾಕ್ಟರ್ ಆದಂಗೆ.ಈ ಶುಭಸಮಾಚಾರನ ನಿಂಗಳ ಹತ್ರ ಹ್ಯಂಚಿಕ್ಯಂಬ್ಲೆ ಖುಷಿ ಪಡ್ತಿ ಆನು.

ಅವತ್ತು ಎಂಗೆ ಆರ್ಥಿಕವಾಗಿ ಸಹಾಯ ಮಾಡಿದ ಎಲ್ಲ ಹವ್ಯಕ ಬಂಧುಗಳಿಗೂ ಆನು ಒಪ್ಪಣ್ಣ ವೆಬ್ಸೈಟ್ ಮೂಲಕವೇ ಕೃತಜ್ಞತೆ ಹೇಳಲೆ ಬಯಸ್ತಿ.ಎಲ್ಲರನ್ನೂ ವೈಯಕ್ತಿಕವಾಗಿ ಸಂಪರ್ಕಿಸಿ ಧನ್ಯವಾದ ಹೇಳಲೆ ಸಾಧ್ಯ ಇಲ್ಲೆ.ಹಂಗಾಗಿ ಇಲ್ಲೇ ಬರಿತಾ ಇದ್ದಿ.ಯಾರೂ ಅನ್ಯಥಾ ಭಾವಿಸಲಾಗ.ಯಂಗೆ ಸಹಾಯ ಮಾಡಿದ ಎಲ್ಲರಿಗೂ ಅನಂತಾನಂತ ಕೃತಜ್ಞತೆಗಳು.ನಿಂಗಳ ಉಪಕಾರನ ಆನು ಜೀವಮಾನದಲ್ಲಿ ಮರಿತ್ನಿಲ್ಲೆ.ನಿಂಗಳ ಆಶೀರ್ವಾದ,ಶುಭಹಾರೈಕೆ ಎನ್ನ ಮೇಲೆ ಸದಾ ಇರಲಿ.ಮುಂದೊಂದು ದಿನ ಯಂಗೆ ಆದ ಕಾಲಕ್ಕೆ ಅಗತ್ಯ ಇಪ್ಪ ಹವ್ಯಕ ವಿದ್ಯಾರ್ಥಿಗಳಿಗೆ ಆನು ಆರ್ಥಿಕ ಸಹಾಯ ಮಾಡ್ತಿ ಹೇಳ ವಿಶ್ವಾಸ ಯಂಗೆ ಇದ್ದು.ಮತ್ತೊಮ್ಮೆ ಎಲ್ಲರಿಗೂ ಕೃತಜ್ಞತೆಗಳು.

ಅಂದಿನಿಂದ ಇಲ್ಲಿನವರೆಗೂ ಎನ್ನ ಬಗ್ಗೆ ಎಲ್ಲಾ ಮಾಹಿತಿಯನ್ನು ತಗಳ್ತಾ ಎನ್ನ ಬಗ್ಗೆ ಆಗಾಗ ವೆಬ್ಸೈಟ್ ನಲ್ಲಿ ಅಪ್ದೇಟ್ ಮಾಡ್ತ ಬಂದವು ಶ್ರೀ ಕೃಷ್ಣ ಶರ್ಮರು.ಮತ್ತು ವೆಬ್ಸೈಟ್ ನ ಹೊರಗೂ ಹವ್ಯಕರನ್ನು ಸಂಪರ್ಕಿಸಿ ಎನಗೆ ಆರ್ಥಿಕ ಸಹಾಯ ಮಾಡವು ಹೇಳಿ ಸುಮಾರು ಜನರಿಗೆ ಹೇಳ್ದವು ಬಾಲಕೃಷ್ಣ ಭಟ್ಟರು.ಇಬ್ಬರ ಹೆಸರನ್ನು ಮಾತ್ರ ಬರಿತಾ ಇದ್ದಿ ಹೇಳಿ ಯಾರೂ ತಪ್ಪು ತಿಳಿದುಕೊಳ್ಳಲಾಗ.ಆದರೆ ಅವತ್ತಿನಿಂದ ಇಲ್ಲಿಯವರೆಗೂ ಆನು ನೇರವಾಗಿ ಸಂಪರ್ಕದಲ್ಲಿದ್ದದು ಕೃಷ್ಣ ಶರ್ಮ,ಮತ್ತು ಬಾಲಕೃಷ್ಣ ಭಟ್ಟರ ಹತ್ತಿರ.ಅವು ಆಗಾಗ ಫೋನ್ ಮೂಲಕ,ವಾಟ್ಸಾಪ್ ಮೂಲಕ ಎನ್ನ ವಿದ್ಯಾಭ್ಯಾಸದ ಪ್ರಗತಿಯ ಬಗೆ ನಿರಂತರವಾಗಿ ಎನ್ನನ್ನು ವಿಚಾರಿಸ್ತಾ ಇದ್ದಿದ್ದ.ಹಂಗಾಗಿ ಅವರಿಬ್ಬರ ಹೆಸರನ್ನು ಬರೆದೆ ಅಷ್ಟೇ.ಬೇರೆ ಯಾರ ಹೆಸರನ್ನೂ ಬರೆಯಲ್ಲೆ ಹೇಳಿ ಯಾರೂ ಮತ್ತೊಮ್ಮೆ ಅನ್ಯಥಾ ಭಾವಿಸಲಾಗ.ಆಗಲೇ ಹೇಳಿದಾಂಗೆ ವೈಯಕ್ತಿಕವಾಗಿ ಎಲ್ಲರನ್ನೂ ಸಂಪರ್ಕ ಮಾಡದು ಕಷ್ಟಸಾಧ್ಯವಾದ ಕಾರಣ ಒಪ್ಪಣ್ಣದಲ್ಲೇ ಎಲ್ಲರಿಗೂ ಕೃತಜ್ಞತೆ ಹೇಳ್ತಾ ಇದ್ದಿ.ಕ್ಷಮೆ ಇರಲಿ.

ಘಟ್ಟದ ಮೇಲಿನ ಹವ್ಯಕ ಭಾಷೆಲಿ ಬರೆದ್ದಿ. ಕ್ಷಮೆ ಇರಲಿ.ನಿಂಗಳೆಲ್ಲರಿಗೂ ಆನು ಚಿರಋಣಿಯಾಗಿದ್ದಿ.ನಮಸ್ಕಾರ.ಹರೇ ರಾಮ.

 

ಲಕ್ಷ್ಮೀಶ ಜೆ.ಹೆಗಡೆ

lakshmishahegademijar@gmail.com

8762735783

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಧನ್ಯವಾದ ಪತ್ರ–ಲಕ್ಷ್ಮೀಶ ಜೆ.ಹೆಗಡೆ

  1. ಲಕ್ಷ್ಮೀಶಂಗೆ ಅಭಿನಂದನೆಗೊ. ವೈದ್ಯ ಆಗಿ ಸಮಾಜಕ್ಕೆ ಅವನಿಂದ ಉಪಕಾರ ಆಗಲಿ.

  2. ಲಕ್ಷ್ಮೀಶನ ಕಾಗದ ನೋಡಿ ಮನಸ್ಸು ತು೦ಬಿತ್ತು.
    ಬಹುಶ: “ಒಪ್ಪಣ್ಣನ ಬೈಲು” ಒ೦ದು ಸಮಾಜಸೇವಾ ಸ೦ಸ್ಥೆಯಾಗಿ ನಿ೦ಬಲೆ ಪ್ರೇರಣೆ ಕೊಟ್ಟದು ಲಕ್ಷ್ಮೀಶನೇ..ನಮ್ಮ ಸಮಾಜಲ್ಲಿ ಬೆಳಗುವ ಪ್ರತಿಭೆಗೊಕ್ಕೆಅಗತ್ಯ ಇಪ್ಪಗ ಎಡಿಗಾದ ಸಹಾಯ ಮಾಡೆಕ್ಕು ಹೇಳ್ತ ಒಳ್ಳೆ ಮನಸ್ಸಿನ ಬೈಲ ನೆ೦ಟ್ರಿ೦ಗೆ ಕೊಟ್ಟ ದೇವರಿ೦ಗೆ ಕೈ ಮುಗಿತ್ತೆ.
    ಲಕ್ಷ್ಮೀಶ ಮು೦ದೆ ವೈದ್ಯವೃತ್ತಿಲಿ ಸಮಾಜಕ್ಕೆ ನಾರಾಯಣನಾಗಲಿ ಹೇಳಿ ಹಾರೈಕೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×