“ಧನ್ಯವಾದ” – ಲಕ್ಷ್ಮೀಶ ಜೆ ಹೆಗಡೆ

ಲಕ್ಷ್ಮೀಶ ಹೆಗಡೆ – ಹೇಳ್ತ ಪ್ರತಿಭಾವಂತ ವಿದ್ಯಾರ್ಥಿ ಆರ್ಥಿಕ ಸಕಾಯ ಕೇಳ್ತ ಕಾಲಲ್ಲಿ ನಾವು ಬೈಲಿಲಿ ಅವನ ಬಗ್ಗೆ ಪರಿಚಯ, ವಿವರ ಹಾಕಿದ್ದು – ಬೈಲಿನ ಎಲ್ಲೋರುದೇ ಸಕಾಯ ಮಾಡೇಕು ಹೇದು ಪ್ರಾರ್ಥನೆ ಮಾಡಿಗೊಂಡದು ನೆಂಪಿಕ್ಕು.
ನಮ್ಮೋರು ನಮ್ಮೂರು ವಿಭಾಗಲ್ಲಿ ಬಂದ ಶುದ್ದಿಯ ಸಂಕೊಲೆ ಇಲ್ಲಿದ್ದು.
ಆ ಪ್ರಕಾರವಾಗಿ ಬೈಲಿನ ಹತ್ತು ಸಮಸ್ತರು ಸೇರಿ, ಮಾಣಿಯ ಊರವುದೇ ಸೇರಿಗೊಂಡು ಮಾಡಿದ ಆರ್ಥಿಕ ಸಹಕಾರಂದಾಗಿ ಆ ಮಾಣಿಯ ಭವಿಷ್ಯ ಗಟ್ಟಿ ಅಪ್ಪಲೆ ಕಾರಣ ಆತು.
ಲಕ್ಷ್ಮೀಶನ ಆಸೆಯಂತೆ ಈಗ ಅವ ಎಮ್.ಬಿ.ಬಿ.ಎಸ್ ಕಲಿತ್ತಾ ಇದ್ದ°.
ಅವನ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗಿ, ಚೆಂದಕೆ ಕಲ್ತು, ವೈದ್ಯಕೀಯ ವೃತ್ತಿಲಿ ಹತ್ತು ಜೆನಕ್ಕೆ ಉಪಕಾರವ ಸಲ್ಲುಸಲೆ ಆ ದೇವಿ ವಿದ್ಯಾಮಾತೆ ಅವನ ಆಶೀರ್ವಾದ ಮಾಡಲಿ ಹೇಳ್ತದು ನಮ್ಮ ಹಾರೈಕೆ.
ಬೈಲಿನ ಸಣ್ಣ ಉಪಕಾರವ ದೊಡ್ಡದಾಗಿ ನೆಂಪುಮಡಗಿಂಡದು ಮಾಣಿಯ ದೊಡ್ಡಗುಣ.
ಇದಾ, ನಮ್ಮ ಶರ್ಮಪ್ಪಚ್ಚಿಗೆ ಕೊಟ್ಟು ಕಳುಗಿದ ಕಾಗತ ಇಲ್ಲಿದ್ದು, ಬೈಲಿನ ಎಲ್ಲೋರಿಂಗೂ ಉದ್ದೇಶಿಸಿದ್ದು. ಯೋಗ್ಯ ವಿದ್ಯಾರ್ಥಿಗೆ ಸಕಾಯ ಮಾಡಿದ ಸಾಫಲ್ಯ ನಮ್ಮ ಮನಸ್ಸಿಲಿ ಸದಾ ಇಪ್ಪ ಹಾಂಗೆ ಮಾಡಿದ ಲಕ್ಷ್ಮೀಶಂಗೆ ಅನಂತ ಅಶೀರ್ವಾದ, ಅಭಿನಂದನೆಗೊ.
~
ಬೈಲಿನ ಪರವಾಗಿ

 

ಲಕ್ಷ್ಮೀಶ ಹೆಗಡೆ

ಲಕ್ಷ್ಮೀಶ ಹೆಗಡೆ ಬೈಲಿಂಗೆ ಕಳುಸಿದ ಕಾಗತ:

ಹರೇ ರಾಮ,
ಆತ್ಮೀಯ ಬಂಧುಗಳಿಗೆ ನಮಸ್ಕಾರ..

ಆನು ಲಕ್ಷ್ಮೀಶ ಜೆ ಹೆಗಡೆ..
ನಿಂಗಕ್ಕೆ ನೆನಪಿದ್ದಿಕ್ಕು, ಕಳೆದ ವರ್ಷ ಆನು ಪಿ,ಯು,ಸಿ. ಮುಗಿಸಿ ಸಿ.ಇ.ಟಿ.ಯಲ್ಲಿ ವೈದ್ಯಕೀಯ ವಿಭಾಗದಲ್ಲಿ 728ನೇ ಸ್ಥಾನ ಪಡೆದು ಮೆಡಿಕಲ್ ಓದಕ್ಕು ಅಂತ  ಕನಸು ಕಂಡಿ.
ಆದರೆ ಯಂಗಳ ಮನೆಯ  ಆರ್ಥಿಕ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಆಗ ನಿಂಗ ಎಲ್ಲರೂ ಒಪ್ಪಣ್ಣ.ಕಾಂ. ನಲ್ಲಿ ಯನ್ನ ಬಗ್ಗೆ ಬಂದ ವಿವರ ನೋಡಿ ಉತ್ತಮ ರೀತಿಯಲ್ಲಿ ಆರ್ಥಿಕ ಸಹಾಯ ಮಾಡಿ, ಮೆಡಿಕಲ್ ಓದುವ ಯನ್ನ ಕನಸನ್ನ ನನಸು ಮಾಡಿದಿ. ನಿಂಗಕ್ಕೆ ಆನು ಚಿರಋಣಿ.

ಈಗ ನಿಮ್ಮೆಲ್ಲರ ಆಶೀರ್ವಾದದಿಂದ ಎಂ.ಬಿ.ಬಿ.ಎಸ್. ಪ್ರಥಮ ವರ್ಷದ ಪರೀಕ್ಷೆಯಲ್ಲಿ ಶೇಕಡಾ 70 ಅಂಕ ತಗಂಡು ಪ್ರಥಮ ಶ್ರೇಣಿಲಿ ಪಾಸ್ ಆಯ್ದಿ.
ಈ ವಿಷಯ ನ ನಿಂಗಳ ಜೊತಿಗೆ ಹಂಚ್ಕ್ಯಂಬ್ಲೆ ಸಂತಸ ಪಡ್ತಿ. ಹಂಗಾಗಿ ಅವತ್ತು ಯಂಗೆ ಸಹಾಯ ಮಾಡಿದ ಯೆಲ್ಲರಿಗೂ ಒಪ್ಪಣ್ಣನ ಬೈಲಿನ ಮೂಲಕನೇ ಮತ್ತೊಮ್ಮೆ ಧನ್ಯವಾದ ಹೇಳ್ತಾ ಇದ್ದಿ.
ಯಾರೂ ಅನ್ಯಥಾ ಭಾವಿಸಲಾಗ. ನಿಂಗಳ ಆಶೀರ್ವಾದದಿಂದ ಯನ್ನ ಎರಡನೇ ವರ್ಷದ ಎಂ.ಬಿ.ಬಿ.ಎಸ್. ನಿರಾತಂಕವಾಗಿ ಸಾಗ್ತಾ ಇದ್ದು.

ಮತ್ತೊಮ್ಮೆ ಯೆಲ್ಲರಿಗೂ ಧನ್ಯವಾದ ಹೆಳ್ತಾ ಇದ್ದಿ. ತಡವಾಗಿದ್ದಕ್ಕೆ ಕ್ಷಮೆ ಇರಲಿ.

ಲಕ್ಷ್ಮೀಶ ಜೆ ಹೆಗಡೆ.
9845668639

~*~

ಸೂ:
ಬೈಲಿಂದ ಲಕ್ಷ್ಮೀಶಂಗೆ ಸಕಲ ಅನುಕೂಲತೆಗಳ ಒದಗುಸಿಕೊಟ್ಟ ಶರ್ಮಪ್ಪಚ್ಚಿಯ ಶ್ರಮಕ್ಕೆ ಅಭಿವಂದನೆಗೊ.

Admin | ಗುರಿಕ್ಕಾರ°

   

You may also like...

14 Responses

 1. ಶರ್ಮಪ್ಪಚ್ಚಿ says:

  ಲಕ್ಶ್ಮೀಶ ಮತ್ತೆ ಅವನ ಅಪ್ಪ° ಜಯರಾಮ ಹೆಗಡೆ, ಇಬ್ರೂ ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿಗೊ. ಬೈಲಿನ ಬಗ್ಗೆ ತುಂಬಾ ಅಭಿಮಾನಂದ ಹೇಳಿಗೊಂಡು ಬತ್ತವು. ಎಂಗಳ ವಲಯು ಸಭೆಯಂದು ಬಂದಿಪ್ಪಗ ಅಪ್ಪ°, ಮಗಂಗೆ ಹೇಳಿದ ಮಾತುಗೊ “ನೀನು ಕಲ್ತು ಬಂದ ನಂತ್ರ, ನಿನ್ನಿಂದ ಬೇರೆಯವಕ್ಕೆ ಇದೇ ರೀತಿ ಸಹಾಯ ಮಾಡೆಕ್ಕು, ಸಹಾಯ ಮಾಡಿದವರ ಎಂದಿಂಗೂ ಮರೆಡ, ಇದೆಲ್ಲವೂ ನಡೆತ್ತಾ ಇಪ್ಪದು ಶ್ರೀ ಗುರುಗಳ ಅಶೀರ್ವಾದಂದ ಮತ್ತೆ ದೈವ ಬಲಂದ. ಇದರ ನೀನು ಮರವಲೆ ಆಗ” ಹೇಳಿ.
  ಸರಿ ಸುಮಾರು ಅವರ ಅಗತ್ಯಕ್ಕೆ ತಕ್ಕ ಹಣ ಸಂಗ್ರಹ ಆದ ನಂತ್ರ ಅವು ಎಂಗೊಗೆ ಹೇಳಿದ ಮಾತು “ಎನ್ನ ಮಾಣಿಗೆ ಸದ್ಯದ ಅಗತ್ಯಕ್ಕೆ ಬೇಕಾದಷ್ಟು ಆತು, ಇನ್ನು ಸಂಗ್ರಹ ಮಾಡಿ ಎಂಗೊಗೆ ಕೊಡೆಡಿ, ಬೇರೆ ಆರಾರೂ ಅಗತ್ಯ ಇಪ್ಪವಕ್ಕೆ ಕೊಡಿ” ಹೇಳಿ ಆಗಿತ್ತು.
  ಅಪರೂಪದ ವ್ಯಕ್ತಿತ್ವದ ಮಹಾನುಭಾವರು.

 2. ಅಭಿನಂದನೆಗೊ. ಶುಭಾಶಯಂಗೊ

 3. ಕೃಷ್ಣ ಭಟ್, ಶೇಡಿಗುಮ್ಮೆ says:

  ಲಕ್ಷ್ಮೀಶಂಗೆ ಹಾರ್ದಿಕ ಶುಭಾಶಯಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *