ಕೂಳಕ್ಕೋಡ್ಳು ವೆ೦ಕಟೇಶಮೂರ್ತಿಗೆ ರಾಷ್ಟ್ರಪ್ರಶಸ್ತಿ

August 20, 2013 ರ 3:26 pmಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ –

ಇದೊಂದು ರಾಷ್ಟ್ರಪ್ರಶಸ್ತಿ.ಸಂಸ್ಕೃತಕ್ಕಾಗಿ ವಿಶಿಷ್ಟ ಕೊಡುಗೆ/ಸೇವೆ/ಸಾಧನೆ ಮಾಡಿದ ಯುವ ಸಾಧಕರಿಂಗೆ (ಯಂಗ್ ಎಚೀವರ್ಸ್) ರಾಷ್ಟ್ರಪತಿ ಕೊಡುವ ಪುರಸ್ಕಾರ ಇದು. ಇದರ ಘೋಷಣೆ ಪ್ರತಿ ವರುಷ ಸ್ವಾತ೦ತ್ರ್ಯೋತ್ಸವದ ಶುಭದಿನ ಭಾರತ ಸರಕಾರ ಮಾಡ್ವದು.  ಈ ವರುಷ ಈ ಪ್ರಶಸ್ತಿ ಘೋಷಣೆಯಾದ್ದದು ಹವ್ಯಕ ಪ್ರತಿಭೆಗೆ. ನಮ್ಮ ವೆಂಕಟೇಶ ಮೂರ್ತಿ ಅಣ್ಣಂಗೆ.

ಶ್ರೀಮಾನ್ ವೆ೦ಕಟೇಶ ಮೂರ್ತಿ “ಕೂಳಕ್ಕೋಡ್ಳು-ಈಶಾವಾಸ್ಯಮ್” ಶ್ರೀಮತಿ ಸುಲೋಚನಾ-ಶ್ರೀ ಶಂಕರನಾರಾಯಣ ಭಟ್ಟರ ದೊಡ್ಡ ಮ°,ಒಪ್ಪಣ್ಣನ ಬೈಲಿನ ಹೆಮ್ಮೆಯ ಡಾ.ಮಹೇಶಣ್ಣನ ಅಣ್ಣ. ಶುಭಲಕ್ಷ್ಮೀ ಹೇಳಿ ಹೆಂಡತಿಯ ಹೆಸರು. ಮಗ ಈಶಾನಂಗೆ ಐದು ವರ್ಷ ಆತು. ಈಗ ಸದ್ಯವೇ ಬಾಬೆ ಮಗಳೂ ಬಯಿಂದು. 

ಸಂಸ್ಕೃತ ಮನೆ – ಮೂರ್ತಿ ಅಣ್ಣ ತಾನು ಮಾಂತ್ರ ಅಲ್ಲ, ಹೆಂಡತಿಯೂ, ಮಗನೂ ಸಂಸ್ಕೃತ ಮಾತಾಡುವ ಹಾಂಗೆ ಮಾಡಿದ್ದವು. ಮಗಂಗೆ ಸಂಸ್ಕೃತವೇ ಮಾತೃಭಾಷೆ. ಹಾಂಗಾಗಿ ಮನೆ – “ಸಂಸ್ಕೃತ ಗೃಹ”. ಸುಸಂಸ್ಕೃತ, ಸರಳ, ಸೌಜನ್ಯ ಪೂರ್ಣ ವ್ಯಕ್ತಿತ್ವ ಹೊಂದಿದ ಸಂಸ್ಕೃತ, ಸಂಸ್ಕೃತಿಲ್ಲಿ ಅಚಲ ನಿಷ್ಠೆ ಇಪ್ಪ ಪಾರಂಪರಿಕ ಮೌಲ್ಯವ ಒಳಗೊಂಡ ಆಧುನಿಕ ಜೀವನ.

ಈಗ ಡೆಲ್ಲಿಲ್ಲಿಪ್ಪ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ (ಮಾನಿತ ವಿಶ್ವವಿದ್ಯಾಲಯ) ದ ಮುಕ್ತಸ್ವಾಧ್ಯಾಯ ಪೀಠ (ಇನ್ಸ್ಟಿಟ್ಯೂಟ್ ಒಫ್ ಡಿಸ್ಟೇನ್ಸ್ ಎಜುಕೇಶನ್)ಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಅಸಿಸ್ಟೆಂಟ್ ಪ್ರೊಫೆಸರ್) ಕಾರ್ಯನಿರತರಾಗಿದ್ದವು. ವಿಶ್ವವಿದ್ಯಾಲಯ ಆಯೋಜಿಸುವ ರಾಷ್ಟ್ರೀಯ ಕಾರ್ಯಕ್ರಮಂಗಳ, ಪ್ರಶಿಕ್ಷಣ ಕಾರ್ಯಕ್ರಮಂಗಳ ಸಂಯೋಜಕರಾಗಿ ಇವು ದೇಶಾದ್ಯಂತ ವಿದ್ವಜ್ಜನರಿಂಗೆ ಸುಪರಿಚಿತ. ಅಷ್ಟೇ ಅಲ್ಲ ವ್ಯವಹಾರ ಶೈಲಿಂದಾಗಿ ಆತ್ಮೀಯನೂ ಕೂಡ. ವಿಶ್ವವಿದ್ಯಾಲಯ ತಯಾರು ಮಾಡಿದ ಭಾಷಾಧ್ಯಯನದ ಡಿವಿಡಿ ಗಳ ನಿರ್ಮಾಣಲ್ಲಿ ಮೂರ್ತಿ ಅಣ್ಣನ ಪರಿಶ್ರಮ ಇದ್ದು. ಡಿಡಿ – ಜ್ಞಾನದರ್ಶನ್ ಡಿಡಿ ಭಾರತಿ ಚಾನೆಲಿಲ್ಲಿ ಬಪ್ಪ ‘ಭಾಷಾಮಂದಾಕಿನೀ’ ಕಾರ್ಯಕ್ರಮಲ್ಲಿಯೂ ಕೆಲವು ಸರ್ತಿ ಶಿಕ್ಷಕರಾಗಿ ಕಾಣ್ತವು. 

ಹತ್ತನೇ ಕ್ಲಾಸಿನವರೆಗೆ – ನೀರ್ಚಾಲಿನ ಮಹಾಜನ ಶಾಲೆಲ್ಲಿ ಕಲ್ತದು. ತದನಂತರದ ಶಿಕ್ಷಣ – ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠಲ್ಲಿ. ವಿಶೇಷ ಅಧ್ಯಯನ – ಅದ್ವೈತ ವೇದಾಂತ ಲ್ಲಿ.

ಸ್ಫೂರ್ತಿ – ಕಲಿವಗಳೇ ಕಲೆ, ಭಾಷಣ, ಕ್ರೀಡೆ, ನೇತೃತ್ವ, ಆಯೋಜಕತ್ವ ಗುಣಗಳ ಬಹುಮುಖ ಪ್ರತಿಭೆಂದ ವಿದ್ವಜ್ಜನರ ಮನಸ್ಸಿನ ಗೆದ್ದು ಕ್ರಿಯಾಶೀಲ (ಡೈನಮಿಕ್ ಸ್ಟೂಡೆಂಟ್) ವಾಗಿತ್ತಿದ್ದವಡ. ರಾಷ್ಟ್ರೀಯ ಸ್ಪರ್ಧೆಲ್ಲಿ ಹಲವು ಪುರಸ್ಕಾರಂಗ ಸಿಕ್ಕಿದ್ದಡ.

ಸಂಸ್ಕೃತ ಸಂಭಾಷಣೆಯ ರುಚಿಯ ಎಲ್ಲೋರಿಂಗುದೆ ಅಂಟುಸಿ ಜೂನಿಯರ್ ಗಕ್ಕೆ ತುಂಬ ಜೆನಕ್ಕೆ ಸ್ಫೂರ್ತಿ ನೀಡಿದ ವ್ಯಕ್ತಿತ್ವ. ಅವೆಲ್ಲ ಮೂರ್ತಿ ಅಣ್ಣನ ‘ಪ್ರಥಮ ಶಿಕ್ಷಕ’ ಹೇಳಿ ಆತ್ಮೀಯತೆಂದ ಕಾಣ್ತವಡ, ಅವು ಹೇಳ್ತವಡ – ಮೂರ್ತಿಯವರ ಪ್ರೇರಣೆಂದ ಎಂಗ ಇಷ್ಟು ಮೇಲೆ ಬಂದದು ಹೇಳಿ. ವಿಶ್ವವಿದ್ಯಾಲಯಲ್ಲಿ ಮಾಂತ್ರ ಅಲ್ಲದ್ದೆ ತಿರುಪತಿ ನಗರಲ್ಲಿಯೂ ಇವರೆಲ್ಲೋರ ಸೇರ್ಸಿಯೊಂಡು ಸಂಸ್ಕೃತ ಸಂಭಾಷಣಾ ಆಂದೋಲನವ ನಡೆಸಿತ್ತಿದ್ದವಡ. ನಿಸ್ವಾರ್ಥ ಪರಿಶ್ರಮಂದ ಮಾಂತ್ರ ಹೀಂಗಿಪ್ಪದೆಲ್ಲ ಮಾಡ್ಳೆಡಿವದು.

ಹಾಂಗಾಗಿ ಪ್ರೇರಣಾದಾಯಕ ವ್ಯಕ್ತಿತ್ವ ಇವರದ್ದು ಹೇಳ್ವದು ಇವರ ವೈಶಿಷ್ಟ್ಯ.

ಕಲಾವಿದ –ನಾಟಕ, ಏಕಪಾತ್ರಾಭಿನಯದ ಅಭಿರುಚಿ ತುಂಬಾ ಇದ್ದು. ಕೃಷ್ಣ, ದುರ್ಯೋಧನ, ಅಶ್ವತ್ಥಾಮನ, ಕಂಸ ಇತ್ಯಾದಿ ಪಾತ್ರಲ್ಲಿ ತನ್ನ ಅಭಿನಯ ಕೌಶಲವ ತೋರಿಸಿ ಕಲಾರಸಿಕರ, ವಿದ್ವಜ್ಜನರ ಮೆಚ್ಚುಗೆ ಗಳಿಸಿದ ಕೀರ್ತಿ ಸಿಕ್ಕಿದ್ದು ಇವಕ್ಕೆ.

ಯಕ್ಷಗಾನದ ನಾಟ್ಯ ಕಲ್ತದು ಊರಿಲ್ಲಿ ನೀರ್ಚಾಲು ಶಾಲೆಲ್ಲಿ. ಅಂಬಗ ಕಲ್ತ ಯಕ್ಷಗಾನಕ್ಕೆ ಸಂಸ್ಕೃತ ನಾಟಕವ ಅಳವಡಿಸಿ ವಿಶ್ವಸಮ್ಮೇಳನಲ್ಲಿ ಪ್ರದರ್ಶಿಸಿದ ಸಾಮರ್ಥ್ಯವ ಮೆಚ್ಚೆಕಾದ್ದದು. ಭೋಪಾಲ, ಉಜ್ಜಯಿನಿ, ದೆಹಲಿಲ್ಲಿ ಆದ ನಾಟ್ಯಮಹೋತ್ಸವಲ್ಲಿ ಇಂತಹ ಪ್ರದರ್ಶನ ಆಯಿದು. ಸಂಸ್ಕೃತ ಗೊಂತಿಪ್ಪ ಕಲಾಭಿಮಾನಿ ಜನತೆ ದೇಶಾದ್ಯಂತ ಇದ್ದವು. ಅವಕ್ಕೆ ಯಕ್ಷಗಾನದ ರುಚಿ ತೋರುಸಲೆ ಸಂಸ್ಕೃತ ಉತ್ತಮ ಮಾಧ್ಯಮ ಹೇಳುವದರ ತೋರುಸಿ ಕೊಟ್ಟಿದವು.

೨೦೦೯ ರಲ್ಲಿ ವಿಶ್ವಸಂಸ್ಕೃತ ಸಮ್ಮೇಳನ ಜಪಾನಿಲ್ಲಿ ಆದ್ದದು. ಅದರಲ್ಲಿ ಕೌರವೌರವಮ್

ಕೌರವೌರವಮ್
ಕೌರವೌರವಮ್

 ಹೇಳುವ ಏಕವ್ಯಕ್ತಿ-ಯಕ್ಷಗಾನ ಪ್ರದರ್ಶನ ಮಾಡಿತ್ತಿದ್ದವು. ಇದು ಗದಾಯುದ್ಧದ ದುರ್ಯೋಧನನ ರೋಷ-ವಿಲಾಪದ ಮನೋಜ್ಞ ಅಭಿನಯ.

ಬಾಲ್ಯಲ್ಲಿ ಸಿಕ್ಕಿದ ಸಂಸ್ಕಾರ ಯಾವತ್ತಿಂಗುದೆ ಉಪಯೋಗಕ್ಕೆ ಬತ್ತು ಹೇಳ್ವದಕ್ಕೆ ಇದೊಂದು ದೃಷ್ಟಾಂತ ಅಲ್ಲದ?

ಕಲ್ತದರ ಜೀವನಲ್ಲಿ ಅಳವಡಿಸುವದು, ಅಳವಡಿಸಲೆ ಬೇಕಾಗಿ ಕಲಿವದು ಈ ಗುಣ ಇವರಲ್ಲಿ ಕಾಣ್ತು. ಆಯುರ್ವೇದ, ವಾಸ್ತು ಪುಸ್ತಕಂಗಳ ಮೂಲತತ್ತ್ವಂಗಳನ್ನೂ ಸಕಾರಣವಾಗಿ ತಿಳ್ಕೊಂಡು ಜೀವನಲ್ಲಿ ಅದರ ಉಪಯೋಗುಸುತ್ತವು. ಸಂಸ್ಕೃತವ ಹೇಂಗೆ ನಮ್ಮ ಜೀವನಕ್ಕೆ ಉಪಯೂಗುಸಲಕ್ಕು ಹೇಳ್ವದಕ್ಕೆ ಇದೊಂದು ಉದಾಹರಣೆ.

ಬಾಲ್ಯ ಎಲ್ಲ ನಮ್ಮೆಲ್ಲರ ಹಾಂಗೆಯೇ. ಆದರೆ ಜೀವನಕ್ಕೆ ಒಂದು ಸಾರ್ಥಕ ಲಕ್ಷ್ಯ ಸಿಕ್ಕಿದ್ದು, ಉತ್ತಮ ವೃತ್ತಿ ಸಿಕ್ಕಿದ್ದು ಸನ್ಮಾರ್ಗವ ದೊರಕಿಸಿಕೊಂಡಿದವು ಹೇಳುವದು ಇವರ ವೈಶಿಷ್ಟ್ಯ,

ಈಗ ಪ್ರಶಸ್ತಿ ಘೋಷಣೆ ಆವ್ತಾ ಇದ್ದ ಹಾಂಗೆ ಸಂಸ್ಕೃತ ವಲಯಲ್ಲಿಪ್ಪ ಬಹಳಷ್ಟು ಜನಂಗೊಕ್ಕೆ ತುಂಬಾ ಸಂತೋಷ ಆಯಿದಡ.

ಪ್ರಶಸ್ತಿ ಅರ್ಹ ವ್ಯಕ್ತಿಗೆ ಸೇರಿರೆ ಅದರ ಗೌರವ ಹೆಚ್ಚುತ್ತಡ, ಅಲ್ಲದಾ!

ಪತ್ನಿ ಪುತ್ರರ ಒಟ್ಟಿ೦ಗೆ
ಪತ್ನಿ ಪುತ್ರರ ಒಟ್ಟಿ೦ಗೆ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಮೂರ್ತಿಗೆ ಅಭಿನಂದನೆಗೊ.ಶುಭಾಶೀರ್ವಾದಂಗೊ.

  [Reply]

  ಕೂ. ವೆಂಕಟೇಶ ಮೊರ್ತಿ Reply:

  ನೀರ್ಚಾಲು ಶಾಲೆಲಿ ಕಲಿವಗ ಬೇರೆ ಬೇರೆ ಕಡೆ ಕರಕೊಂಡು ಹೊಗಿ ಚಿತ್ರರಚನಾ-ಸ್ಪರ್ಧೆಲಿ ಭಾಗವಹಿಸಲೆ ಪ್ರೊತ್ಸಾಹಿಸಿದ ನಿಂಗಳ, 5ರಿಂದ 10ರವರೆಗೆ ಸಂಸ್ಕೃತ ಕಲಿಸಿ ಪ್ರೊತ್ಸಹಿಸಿದ ಸಂಸ್ಕೃತಾಧ್ಯಾಪಕರ ಮ್ನತ್ತು ಎಲ್ಲಾ ಇತರ ಅಧ್ಯಾಪಕರ ನೆನಪಾವುತ್ತು . ಧನ್ಯವಾದ. ” ಜೈ ಮ. ಸಂ. ಕಾಲೇಜು ಹೈಸ್ಕೂಲು, ನೀರ್ಚಾಲು “

  [Reply]

  VA:F [1.9.22_1171]
  Rating: +1 (from 1 vote)
 2. ಕೂ. ವೆಂಕಟೇಶ ಮೂರ್ತಿ

  ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನವೆಂಬ ರಾಷ್ಟ್ರಪತಿ ಪುರಸ್ಕಾರಕ್ಕೆ ಎನ್ನ ಹೆಸರು ಘೋಷಣೆಯಾದ ಸುದ್ದಿ ಹಂಚಿ ಬಹುಜನರ ಆಶೀರ್ವಾದ ಸಿಗುವ ಹಾಂಗೆ ಮಾಡಿದ ಶರ್ಮಪ್ಪಚ್ಚಿಗೂ, ಸುದ್ದಿ ತಿಳಿದು ಆಶೀರ್ವಾದ ಮಾಡಿದ ಮತ್ತು ಶುಭ ಹಾರೈಸಿದ/ಅಭಿನಂದಿಸಿದ ಎನ್ನ ಎಲ್ಲ ಹಿತೈಷಿಗಕ್ಕೂ ತುಂಬಾ ಧನ್ಯವಾದಂಗೋ. जयतु संस्कृतम् , जयतु भारतम् ।

  [Reply]

  VA:F [1.9.22_1171]
  Rating: +2 (from 2 votes)
 3. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಹರೇ ರಾಮ,ವೆ೦ಕಟೇಶ ಮೂರ್ತಿಗೆ ಮನದಾಳದ ಅಭಿನ೦ದನಗೊ.ಮತ್ತಷ್ಟು ಉಜ್ಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತಾ “ शुभाशिषः ”

  [Reply]

  VN:F [1.9.22_1171]
  Rating: 0 (from 0 votes)
 4. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಅಭಿನಂದನೆಗೊ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿನೀರ್ಕಜೆ ಮಹೇಶಮಂಗ್ಳೂರ ಮಾಣಿರಾಜಣ್ಣಸುಭಗಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ದೇವಸ್ಯ ಮಾಣಿಶಾ...ರೀವಸಂತರಾಜ್ ಹಳೆಮನೆಪವನಜಮಾವಬೋಸ ಬಾವಶುದ್ದಿಕ್ಕಾರ°ಅನಿತಾ ನರೇಶ್, ಮಂಚಿಚುಬ್ಬಣ್ಣಡಾಗುಟ್ರಕ್ಕ°ಅನು ಉಡುಪುಮೂಲೆಚೆನ್ನೈ ಬಾವ°ದೊಡ್ಡಭಾವಗಣೇಶ ಮಾವ°ಕೆದೂರು ಡಾಕ್ಟ್ರುಬಾವ°ಪೆಂಗಣ್ಣ°ದೀಪಿಕಾಬಂಡಾಡಿ ಅಜ್ಜಿಮುಳಿಯ ಭಾವಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ