‘ನಕುಲನ್’ ಬಗ್ಗೆ ನಾಕು ಮಾತು..

April 5, 2011 ರ 4:00 pmಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಶತಮಾನದ ಆದಿಭಾಗಲ್ಲಿ ನಮ್ಮ ಹಿರೀಕರಿಂಗೆ; ಮುಖ್ಯವಾಗಿ ಕುಂಬ್ಳೆ ಸೀಮೆಲಿ ನೆಲೆ ಕಂಡೊಂಡಿದ್ದ ನಮ್ಮೋರಿಂಗೆ- ಹಲವು ಸಂಕಷ್ಟಂಗಳ ಎದುರುಸೆಕ್ಕಾಗಿ ಬಂತು. ಬರಗಾಲ, ಕಳ್ಳಂಗಳ ಉಪದ್ರ, ಮಾಪ್ಳೆಗಳ ರಗಳೆ,  ಮೇಗಂದ ಒಂದನೇ ಮಹಾಯುದ್ಧದ ಬೆಶಿ- ಇದೆಲ್ಲದರಿಂದಾಗಿ ನಮ್ಮವಕ್ಕೆ ಇಲ್ಲಿ ದಿನಕಳವದೇ ಬಂಙಾನುಬಂಙ ಆಗಿಹೋತು. ಒಂದೊತ್ತಿನ ತೆಳಿಗೂ ತತ್ವಾರ ಹೇಳಿ ಆದಪ್ಪಗ ನಿವುರ್ತಿ ಇಲ್ಲದ್ದೆ ಅನೇಕ ಕುಟುಂಬಂಗೊ ಇದ್ದಬದ್ದ ಸೊತ್ತುಗಳ ಕಟ್ಟಿಂಡು ಇಲ್ಲಿಂದ ದೇಶಾಂತರ ಹೆರಟವು.

ಹಾಂಗೆ ಹೆರಟವರಲ್ಲಿ ಹೆಚ್ಚಿನವು ಮೋರೆ ತಿರುಗುಸಿದ್ದು ತೆಂಕ ಹೊಡೆಂಗೆ. ನೀಲೇಶ್ವರ ಲಾಗಾಯ್ತು ತೃಶ್ಶೂರು, ಪಾಲಕ್ಕಾಡು, ಮತ್ತೆ ಅಲ್ಲಿಂದ ರೆಜ ಮೂಡಂತಾಗಿ ಕೊಯಂಬತ್ತೂರು ಹೀಂಗೆ ಅಲ್ಲಲ್ಲಿ ಅಲ್ಲಲ್ಲಿ ಗೆಂಟುಮೂಟೆ ಇಳುಶಿ ಜೀವನ ವ್ಯಾಪಾರ ನೆಡಶಲೆ ಸುರುಮಾಡಿದವು. ಶಾಂತಿಕ್ಕಾರಂಗೊ ಆಗಿಯೋ ಹೋಟ್ಲು ಮಡುಗಿಯೋ ಒಬ್ಬೊಬ್ಬ ಒಂದೊಂದು ರೀತಿಲಿ ‘ಅಡಿ’ ಗಟ್ಟಿ ಮಾಡಿಯೊಂಡವು.

ತೆಂಕಲಾಗಿ ಹೋಗಿ ನೆಲೆನಿಂದ ನಮ್ಮ ಹೊಡೆಯಾಣ  ಹವೀಕರಲ್ಲಿ ಹೆಚ್ಚಿನವು ಅವ್ವವು ಉದರಂಭರಣಕ್ಕೆ ಆಯ್ಕೆಮಾಡಿಯೊಂಡ ಕ್ಷೇತ್ರಕ್ಕೆ ಮಾಂತ್ರ ಸೀಮಿತವಾಗಿ ಜೀವನ ನೆಡಶಿಂಡು ಬಂದವು. ಬಾಲಣ್ಣ ಬೈಲಿಂಗೆ ಪರಿಚಯ ಮಾಡಿಕೊಟ್ಟ ಪೋತ್ತಿ ಯವರಹಾಂಗೆ ಸಮಾಜದ ಇತರೆ ಕ್ಷೇತ್ರಂಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ನಮ್ಮವು ಇಪ್ಪದು ಕೇವಲ ಕೆಲವೇ ಕೆಲವು ಜೆನ.

ಹಾಂಗಿಪ್ಪ ಅಪರೂಪದ ವೆಗ್ತಿಗಳಲ್ಲಿ ಮಲಯಾಳಂ ಸಾಹಿತ್ಯ ಕ್ಷೇತ್ರಕ್ಕೆ ಯಥಾನುಶಕ್ತಿ  ಕಾಣಿಕೆ ಸಲ್ಲುಸಿ ಸಾಹಿತಿಯಾಗಿ ಗುರುತಿಸಿಯೊಂಡ ಒಬ್ಬ ವೆಗ್ತಿಯೂ ಇದ್ದವು.

ಅವು ‘ನಕುಲನ್’ . ಈ ಹೆಸರು ಕೇಳಿಯಪ್ಪಗ ‘ಇದು ಹವ್ಯಕರ ಹೆಸರಿನಾಂಗೆ ಇಲ್ಲೆನ್ನೆ?’ ಹೇಳಿ ನಿಂಗೊಗೆ ತೋರಿಕ್ಕು.

ನಿಜ. ಇದು ಅವರ ಮೂಲ ಹೆಸರು ಅಲ್ಲ.

ನಕುಲನ್

ಸರಿಸುಮಾರು ನೂರು ವರ್ಷ ಮದಲು ಕುಂಬ್ಳೆ ಸೀಮೆಂದ ವಲಸೆಹೋದ ಮಡ್ವ ಮನೆತನದ ಭಂಡಾರಕೊಟ್ಟಗೆ ಕವಲಿನ ಶ್ರೀ ಕೃಷ್ಣ ಭಟ್ಟ ಹೇಳುವವು ಪಾಲಕ್ಕಾಡು ಜಿಲ್ಲೆಯ ಕೊಲ್ಲಂಗೋಡು ಹತ್ರಾಣ ನೆನ್ಮೇನಿ ಹೇಳ್ತ ಊರಿಲ್ಲಿ ಒಂದು ದೊಡ್ಡಾ ಜಮೀನ್ದಾರನ ಕಾರ್ಯಸ್ಥನಾಗಿ ಸೇರಿಯೊಂಡವು. ಒಟ್ಟಿಂಗೆ ಅದೇ ಊರಿನ ಒಂದು ದೇವಸ್ಥಾನದ ‘ಶಾಂತಿ’ಯೂ ಸಿಕ್ಕಿತ್ತು. ಅವರ ಮಗ ಎಂ.ಕೆ.ಬಾಲಕೃಷ್ಣ ಭಟ್ ಅಪ್ಪನ ವೃತ್ತಿಗೆ ಸಹಕಾರಿಯಾಗಿ ಇದ್ದುಕೊಂಡು ಸಾಹಿತ್ಯದ ಬಗ್ಗೆಯೂ ಅಭಿರುಚಿ ಬೆಳಶಿಯೊಂಡವು. ಆ ಕಾಲಲ್ಲಿ ಖ್ಯಾತಿಹೊಂದಿದ್ದ ಸಹದೇವನ್ ಹೇಳ್ತ ಒಂದು ಸಾಹಿತಿ – ಕಲಾವಿದನ ಮೇಗಾಣ ಅಭಿಮಾನಂದ ಇವು ನಕುಲನ್ ಹೇಳಿ ಕಾವ್ಯನಾಮ ಮಡುಗಿಂಡು ಕಥೆ ಕಾದಂಬರಿ ಬರವಲೆ ಸುರುಮಾಡಿದವು.

‘ನಕುಲನ್’ ಈವರೆಗೆ ಹನ್ನೊಂದು ಕಾದಂಬರಿ ರಚನೆ ಮಾಡಿದ್ದವು. ಸುಮಾರು 65ಕ್ಕೂ ಮಿಕ್ಕಿ ಸಣ್ಣಕಥೆಗೊ ಕೇರಳದ ಬೇರೆಬೇರೆ ನಿಯತಕಾಲಿಕಂಗಳಲ್ಲಿ ಪ್ರಕಟ ಆಯಿದು.

ಇವರ ಸಾಧನೆಯ ಗುರುತಿಸಿ ಅಖಿಲ ಭಾರತ ಬರಹಗಾರರ ಒಕ್ಕೂಟ ಇವಕ್ಕೆ ಸನ್ಮಾನ ಮಾಡಿ ಗೌರವ ಸಲ್ಲುಸಿದ್ದು. ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯೂ ‘ನಕುಲನ್’ ಸಾಧನೆಗೆ ಸಂದ ಮತ್ತೊಂದು ಗೌರವ.

ವ್ಯವಹಾರಕ್ಕೂ ಸಾಹಿತ್ಯ ರಚನೆಗೂ ಮಲಯಾಳವನ್ನೇ ಉಪಯೋಗಿಸುತ್ತಾ ಇದ್ದರೂ ಇವು ಮಾತೃಭಾಷೆಯ ಮರದ್ದವಿಲ್ಲೆ. ಈಗಳೂ ಮನೆಮಾತು ಕುಂಬ್ಳೆ ಸೀಮೆಯ ಹವಿಕನ್ನಡವೇ.

‘ನಕುಲನ್’ ಸ್ವಯಂ ಪರಿಶ್ರಮಂದ ಕನ್ನಡವ ಓದಲೂ ಕಲ್ತಿದವು..! ಕನ್ನಡದ ಮೇಗಾಣ ಅಭಿಮಾನಂದ ಸುಮಾರು ವರ್ಷ ಕಾಲ ಜನಪ್ರಗತಿ, ಪ್ರಜಾಮತ ಪತ್ರಿಕೆಗಳ ಚಂದಾದಾರರಾಗಿ ಪತ್ರಿಕೆ ತರುಸಿ ಓದಿಯೊಂಡಿ ಇದ್ದಿದ್ದವು. ಆ ಪತ್ರಿಕೆಗಳ ಸಂಗ್ರಹ ಈಗಳೂ ಅವರ ಮನೆಲಿ ಭದ್ರವಾಗಿ ಇದ್ದು!

ಅದೇ ರೀತಿ ಅವರ ಮೂಲಸ್ಥಾನದ ಒಟ್ಟಿಂಗೆ ಈಗಳೂ ಸಂಪರ್ಕ ಮಡುಗಿಯೊಂಡಿದ್ದವು. ಮೂರೋ ನಾಕೋ ವರ್ಷಕ್ಕೊಂದಾರಿ ಊರಿಂಗೆ ಬಂದು ಮಡ್ವ ದೈವದ ಪ್ರಸಾದ ತೆಕ್ಕಂಡು ಹೋಕು.

‘ನಕುಲನ್’ಗೆ ಈಗ ಅರುವತ್ತೆಂಟಾತು. ಸಹಧರ್ಮಿಣಿ ಸಾವಿತ್ರಿ, ಮಗ ಸೊಸೆ ಪುಳ್ಳಿಯಕ್ಕಳೊಟ್ಟಿಂಗೆ ನೆನ್ಮೇನಿಯ ‘ಸರಸ್ವತಿ ಮಂದಿರಂ’ಲಿ ನೆಮ್ಮದಿಯ ಬದುಕು ಸಾಗುಸುತ್ತಾ ಇದ್ದವು.

‘ನಕುಲನ್’ ಖ್ಯಾತಿ ಹೊಂದಿದ ಮುಂಚೂಣಿ ಸಾಹಿತಿ ಖಂಡಿತ ಅಲ್ಲ. ಮಲಯಾಳಂ ಸಾಹಿತ್ಯ ಸಿಂಧುವಿನ ಕೇವಲ ಒಂದು ಸಣ್ಣ ಬಿಂದು. ಆದರೂ ಈ ‘ನಕುಲನ್’ ಅರ್ಥಾತ್ ಎಂ.ಕೆ. ಬಾಲಕೃಷ್ಣ ಭಟ್  ಹೇಳುವ ಬಿಂದು ನಮ್ಮವನೇ ಆದ ಒಬ್ಬ ಹವ್ಯಕ ಬಂಧು ಹೇಳ್ತದು ನಾವೆಲ್ಲರು ಅಭಿಮಾನಪಡೆಕಾದ ವಿಷಯ, ಅಲ್ಲದೊ?

'ನಕುಲನ್' ಬಗ್ಗೆ ನಾಕು ಮಾತು.., 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಒಪ್ಪಣ್ಣ

  ದೂರದ ಮಲೆಯಾಳ ದೇಶಲ್ಲಿ ಕೂದಂಡು ಸರಸ್ವತಿ ಸೇವೆ ಮಾಡ್ತ ನಮ್ಮ ನಕುಲನ್ಮಾವಂಗೆ ನಮಸ್ಕಾರ ಇದ್ದು.
  ಇನ್ನಾಣ ಸರ್ತಿ ಅವರ ಕಾಂಬಲೆ ನಿಂಗೊ ಹೋಪಗ ಒಂದು ದಿನಿಗೆಳಿಕ್ಕಿ. ಆತೋ?
  ಪುರುಸೊತ್ತಿದ್ದರೆ ನಾವುದೇ ಸೇರಿಗೊಳ್ತು ನಿಂಗಳ ಬೈಕ್ಕಿಲಿ.

  [Reply]

  VA:F [1.9.22_1171]
  Rating: +1 (from 1 vote)
 2. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  “ಎಂ.ಕೆ. ಬಾಲಕೃಷ್ಣ ಭಟ್ ಹೇಳುವ ಬಿಂದು ನಮ್ಮವನೇ ಆದ ಒಬ್ಬ ಹವ್ಯಕ ಬಂಧು ಹೇಳ್ತದು ನಾವೆಲ್ಲರು ಅಭಿಮಾನಪಡೆಕಾದ ವಿಷಯ, ಅಲ್ಲದೊ”
  ನಿಜವಾಗಿಯೂ ಅಪ್ಪು. ಅವರ ಬಗ್ಗೆ ತಿಳಿಶಿಕೊಟ್ಟದಕ್ಕೆ ಧನ್ಯವಾದಂಗೊ ಸುಭಗಣ್ಣ.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಖಂಡಿತ ನವಗೆ ಅಭಿಮಾನದ ವಿಷಯ. ಹನ್ನೊಂದು ಕಾದಂಬರಿಗಳ ಪಟ್ಟಿ ಕೊಡ್ಲೆ ಎಡಿಗೋ? ಒಂದೊಂದಾಗಿ ಓದಿ ನೋಡೆಕ್ಕು ಹೇಳಿ ಇದ್ದು.

  [Reply]

  ಸುಭಗ

  ಸುಭಗ Reply:

  ಅಲಮೇಲು, ವೆಳಿಚ್ಚತ್ತೆ ಸ್ನೇಹಿಚ್ಚು, ಸತ್ಯಂ ಅರಿಯುಗ ಮಗನೇ, ಗ್ರಾಮಂ, ತೆನ್ಮಲೆಯುಡೆ ತಾಳ್ವರಯಿಲ್, ಪಂಚಾಗ್ನಿ ಇಡಯಿಲ್ ಪಾಂಚಾಲಿ, ನಾಳತ್ತೆ ಪ್ರಭಾತಂ, ಮುಗಿಲಿರಙಿಯ ತಾಳ್ವರಂ, ಮಧುರಕ್ಕಳ್ಳ್..

  ಒಂಭತ್ತಾತಿಲ್ಯೊ ಭಾವ..? ಇನ್ನೆರಡು ಹೆಸರು ನೆಂಪಾವ್ತಿಲ್ಲೆಪ್ಪ. ಸಿಕ್ಕಿದಕೂಡ್ಲೆ ತಿಳುಸುತ್ತೆ.

  ಅಭಿಮಾನಂದ ಆಸಕ್ತಿ ತೋರ್ಸಿದ್ದಕ್ಕೆ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)
 4. ಸುಭಗ
  ಸುಭಗ

  ಹನ್ನೊಂದಲ್ಲ; ಮತ್ತೂ ಒಂದಿದ್ದು..!
  ಇನ್ನಲೆಗಳ್ ನಾಳೆಗಳ್, ವೆಳ್ಳಿತ್ತಿರಯಿಲೆ ನಾಯಿಕ, ನಿಲಯುಡೆ ಕರಯಿಲ್- ಈ ಮೂರು, ಆಗ ಹೇಳಿದ ಒಂಭತ್ತು – ಒಟ್ಟು ಹನ್ನೆರಡು ಕಾದಂಬರಿಗೊ ಪುಸ್ತಕರೂಪಲ್ಲಿ ಪ್ರಕಟ ಆಯಿದು.

  ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟ ಆದ ಕಾದಂಬರಿಗೊ ಮೂರು- ಸಿಂಗಾರಿ, ಸಲೀಮಾ ನಿನಕ್ಕ್ ವೇಂಡಿ, ತೂಕ್ಕ್ ಮರತ್ತಿಂಡೆ ತಣಲಿಲ್

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಅಕ್ಷರದಣ್ಣಅಡ್ಕತ್ತಿಮಾರುಮಾವ°ಶುದ್ದಿಕ್ಕಾರ°ಅನಿತಾ ನರೇಶ್, ಮಂಚಿಸುಭಗವೆಂಕಟ್ ಕೋಟೂರುಅಕ್ಷರ°ಕಜೆವಸಂತ°ಪ್ರಕಾಶಪ್ಪಚ್ಚಿಬಟ್ಟಮಾವ°ಸಂಪಾದಕ°ಶಾ...ರೀವಾಣಿ ಚಿಕ್ಕಮ್ಮಜಯಗೌರಿ ಅಕ್ಕ°ಪೆಂಗಣ್ಣ°ನೀರ್ಕಜೆ ಮಹೇಶರಾಜಣ್ಣಹಳೆಮನೆ ಅಣ್ಣಯೇನಂಕೂಡ್ಳು ಅಣ್ಣವೇಣೂರಣ್ಣಚುಬ್ಬಣ್ಣಬಂಡಾಡಿ ಅಜ್ಜಿಮಾಷ್ಟ್ರುಮಾವ°ಅನುಶ್ರೀ ಬಂಡಾಡಿದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ