ನೆರಿಯ ಅಜಿತೇಶಂಗೆ ಚಿನ್ನದ ಪದಕ…

ಕಾಸರಗೋಡು ತಾಲೂಕು ಬಾಡೂರು ಗ್ರಾಮದ ನೆರಿಯ ತರವಾಡು ಮನೆಯ ಕುಡಿಯಾದ ಎನ್.ಎಚ್.ಅಜಿತೇಶ ಕಳುದ ವರ್ಷ ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಎಮ್.ಎಸ್ಸಿ.[ಮಾನವ ಪ್ರಜ್ಞೆ ಮತ್ತು ಯೋಗವಿಜ್ಞಾನ] ಲ್ಲಿ ಪ್ರಥಮ ಸ್ಥಾನ ಪಡೆದ್ದ.
ಮತ್ತೆ ಅವಂಗೆ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯಲ್ಲಿ ನಡೆದ ೩೦ನೇ ಘಟಿಕೋತ್ಸವಲ್ಲಿ ಮುಖ್ಯಮಂತ್ರಿ ಶ್ರೀ ಸದಾನಂದ ಗೌಡರ ಕೈಯಿಂದ ಬಂಗಾರದ ಪದಕ ಸಿಕ್ಕಿದ್ದು. [ಚಿತ್ರ ನೋಡಿ].

ಧರ್ಮತ್ತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ಟ ಮತ್ತೆ ಶ್ರೀಮತಿ ವೀಣಾ ಇವರ ಪುತ್ರನಾದ ಅಜಿತೇಶ ಬಾಲ್ಯಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿ.
ಪಾಠಲ್ಲಿ ಮಾತ್ರ ಅಲ್ಲ, ಸಂಗೀತ, ಹರಿಕಥೆಗಳನ್ನೂ ಕಲ್ತು, ಕಾರ್ಯಕ್ರಮ ಕೊಡುತ್ತಾ ಇತ್ತಿದ್ದ.
ಧರ್ಮತ್ತಡ್ಕಲ್ಲಿ ಎಸ್.ಎಸ್.ಎಲ್.ಸಿ, ಮಂಗಳೂರಿಲಿ ಕೆನರಾ ಕಾಲೇಜಿಲಿ ಪಿ.ಯು.ಸಿ, ಮತ್ತೆ ವಿಶ್ವವಿದ್ಯಾಲಯ ಕಾಲೇಜಿಲಿ ಬಿ.ಎಸ್ಸಿ. ಮಾಡಿದ ಇವ ಕೊಣಾಜೆಲಿ ಎಮ್.ಎಸ್ಸಿ.ಮಾಡಿ, ಈ ಉನ್ನತ ಸಾಧನೆ ಮಾಡಿದ ಕೀರ್ತಿಗೆ ಪಾತ್ರ ಆಯಿದ.

ಮುಂದೆ ಯೋಗಲ್ಲಿಯೇ ಡಾಕ್ಟರೇಟ್ ಮಾಡುವ ಆಸೆ ಇವಂದು.
ಅಜಿತೇಶಂಗೆ ನಾವು ಅಭಿನಂದನೆ ಸಲ್ಲಿಸುವೊ. ಅವನ ಸಾಧನೆ ಇನ್ನೂ ಮುಂದುವರಿದು, ಅವಂಗೆ ಯಶಸ್ಸು ಸಿಕ್ಕಲಿ ಹೇಳಿ ದೇವರಲ್ಲಿ ಪ್ರಾರ್ಥಿಸುವೊ.

ಗೋಪಾಲಣ್ಣ

   

You may also like...

13 Responses

  1. ಅಜಿತೇಶಂಗೆ ಅಭಿನಂದನೆ. ಅವನ ಸಾಧನೆಯ ಹಾದಿ ಸುಗಮವಾಗಿ ಸಾಗಲಿ. ಶುಭ ಹಾರೈಕೆಗೊ.

  2. ಅಜಿತೇಶಂಗೆ ಅಭಿನಂದನೆಗ. ಶ್ರೇಯಸ್ಸಾಗಲಿ

  3. PERMUKHA ISHWARA BHAT says:

    olleya saadhane maadida ajitesh nge abhinandanego…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *