ಆಟಿ ಕಳಂಜನ ವಾಟ್ಸ್ಯಾಪ್ ಸ್ಪೆಷಲ್

ಆಟಿ ಕಳಂಜನ ಬಗ್ಗೆ ಒಪ್ಪಣ್ಣ ಬರೆದ್ದದು ನೋಡಿಯಪ್ಪಗ ಹೋದ ವರ್ಷ ನಮ್ಮಲ್ಲಿಗೆ ಬಂದ ಆಟೀ ಕಳಂಜನ ನೆಂಪಾತು. ಪ್ರತೀ ವಷರ್ಾಣ ಹಾಂಗೆ ಈ ವರ್ಷವೂ ಅದರ ಕಾಲ್ಗೆಜ್ಜೆ ಶಬ್ಧ ಓ ಅಲ್ಲೆ ಕೇಳುವಾಗಳೇ ಗೇಟು ತೆಗದು ಮಡಗಿದೆ. ಝಲ್…ಝಲ್…ಶಬ್ಧದೊಟ್ಟಿಂಗೆ ಕಳಂಜ ಬಂತದ. ಅದರ ಅಪ್ಪ ಮೊನ್ನ (ಬಹುಷಃ ಮೋಹನ ಹೇಳುವ ಹೆಸರು ಹಾಂಗಾದ್ದಾದಿಕ್ಕು). ಇದು ಲಕ್ಷ್ಮಣ. ಸಾಧಾರಣ ಹದಿನಾಲ್ಕು ಹದಿನೈದು ವರ್ಷದ ಆಣು. ಮೊನ್ನನ ಡಮಕ…ಡಮಕ…ಪೆಟ್ಟಿಂಗೆ ಕಳಂಜ ಕೊಡೆ ತಿರುಗ್ಸಿಯೋಂಡು ಕೊಣುದತ್ತಯ್ಯ….ಕೊಣುದತ್ತು. ಆನು ಐದಾರು ಪಟ ತೆಗೆದೆ. ಎಲ್ಲ ಆಗಿಯಪ್ಪಗ ಪ್ರತೀ ವರ್ಷ ಕೊಡ್ತ ಹಾಂಗೆ ತೆಂಗಿನಕಾಯಿಯೊಟ್ಟಿಂಗೆ ಪೈಸೆ ಕೊಟ್ಟೆ.

ಅಕ್ಕ ನಿಮ್ಮ ಮಗಣ (`ನ’ ಕಾರ ಕ್ಕೆ `ಣ’ ಕಾರ ಹೇಳ್ತದು ಮೊನ್ನನ ಅಭ್ಯಾಸ) ಜೀಣ್ಸು ಪೇಂಟು ಇದ್ರೆ ಇವ್ಣಿಗೆ ಕೊಡಿಯಕ್ಕಾ...” ಪೈಸೆ, ತೆಂಗಿನಕಾಯಿ ತೆಕ್ಕೊಂಡಿಕ್ಕಿ ಮೊನ್ನ ಕೇಳಿತ್ತು.

“ನನ್ನ ಮಗ ತುಂಬಾ ಉದ್ದ ಇದ್ದಾನಲ್ಲ? ಇವ್ನಿಗೆ ಅದು ಹಾಳಿತ ಆದೀತಾ?” ಕಳಂಜನ ತೋಸರ್ಿ ಕೇಳಿದೆ.

ನನ್ನಮ್ಮ ಟೈಲರು ಮಾಡ್ತಾರೆ. ಅವರಿಗೆ ಅದನ್ನು ಸಣ್ಣದು ಮಾಡ್ಲಿಕೆ ಗೊತ್ತುಂಟು.” ಕಳಂಜ ಪಾತ್ರಧಾರಿ ಲಕ್ಷ್ಮಣ ತೆಗದ ಬಾಯಿಗ ಹೇಳಿತ್ತದ.

ಹಾಂಗೆ ಎನ್ನ ಮಗನ ಹಳೆ ಜೀನ್ಸ್ ಪೇಂಟೂದೆ ಅದರ ಚೀಲದೊಳಾಂಗೆ ಹೊಕ್ಕತ್ತು. ಅಂದರೂ ಅವಿಬ್ರೂ ಇನ್ನೂ ಹೆರಡ್ತ ಸೂಚನೆ ಕಂಡತ್ತಿಲ್ಲೆ.

“ಇನ್ನು ಎಂತ ಆಗ್ಬೇಕು ಮೊನ್ನ?” ಕೇಳಿದೆ. ಅಪ್ಪನೂ ಮಗನೂ ಮೋರೆ ಮೋರೆ ನೋಡಿಯೋಂಡವು. ಮಗನೇ ಮೆಲ್ಲಂಗೆ ಹೇಳಿತ್ತು,

“ಅಕ್ಕಾ…, ನೀವೀಗ ತೆಗೆದ ಪಟ ಒಮ್ಮೆ ತೋರಿಸ್ತೀರಾ…?”

ati kalanja

Aati Kalenja

ಎನಗೆ ಅದರ ಪಾಪ ಕಂಡತ್ತು. ಕೂಲಿ ಕೆಲಸಲ್ಲಿ ದಿನ ಕಳಿತ್ತ ಇವಕ್ಕೆ ನಮ್ಮ ಕೈಲಿಪ್ಪ ಹಾಂಗಿರ್ತ ಸ್ಮಾಟರ್್ ಫೋನು ಕಂಡೇ ಗೊಂತಿರ….,ಪಾಪ..ಕಣ್ಣಿಲ್ಲಿಯಾದ್ರೂ ನೋಡಿಯೋಳಲಿ ಹೇಳಿ ಜಾನ್ಸಿದೆ. ಕಳಂಜನ ಹತ್ರೆ ಹೋಗಿ ಎಲ್ಲ ಪಟಂಗಳ ತೋಸರ್ಿದೆ. ಪುನಃ ಪುನಃ ನೋಡಿತ್ತು.

ಅಕ್ಕಾ, ಈ ಪಟ ಯಾವುದೂ ಕ್ಲಿಯರ್ ಬಲರ್ಿಲ್ಲ…,ನಾನು ಇನ್ನೊಮ್ಮೆ ಪಟಕ್ಕೆ ಬೇಕಾದ ಹಾಗೆ ಕುಣೀತೇನೆ…,ನೀವು ಚಂದದ ಪಟ ತೆಗೀಬೇಕು ಆಯಿತಾ…?” ಹೇಳಿತ್ತು.

`ಯೆಲಾ…ಇದರ ಬೀರ್ಯವೇ…?’ ಹೇಳಿ ಕಂಡ್ರೂ ಎಂತೂ ಹೇಳದ್ದೆ “ಆಯಿತು..” ಹೇಳಿಕ್ಕಿ ಪಟ ತೆಗವಲೆ ತಯಾರಾದೆ.

ಒಂದು….,ಎರಡು….,ಮೂರು….,ಪಟ ತೆಗದ್ದದೇ ತೆಗದ್ದು. ಎನಗೆ ಪಟ ತೆಗದು ಬಚ್ಚೀರೂ ಅದಕ್ಕೆ ಕೊಣುದು ಬಚ್ಚಿದ್ದಿಲ್ಲೆ!

“ಏ…ಇವತ್ತಿಗೆ ಇಷ್ಟು ಸಾಕು ಮಾರಾಯಾ…” ಹೇಳಿ ಆನು ಹೇಳಿದ ಮತ್ತೆ ನಿಲ್ಸಿತ್ತು. ಪಟಂಗಳ ಕಳಂಜ ನೋಡಿತ್ತಯ್ಯ ನೋಡಿತ್ತು. ಸುಮಾರು ಕಾಲು ಘಂಟೆ ತಿರುಗ್ಸಿ ಮುರುಗ್ಸಿ ನೋಡಿತ್ತು. ಕಡೇಂಗೆ ಹೇಳಿತ್ತು,

ಅಕ್ಕಾ…, ಇದ್ರಲ್ಲಿ ಈ ನಾಲ್ಕು ಪಟ ಒಂದು ಮಟ್ಟು ಬಂದಿದೆ. ನೋಡಿ, ಇದ್ರಲ್ಲಿ ನೀವು ಹಿಡ್ದ ಯ್ಯಾಂಗಲ್ ಸರಿ ಆಗ್ಲಿಲ್ಲ…,ಇದನ್ನು ಸ್ವಲ್ಪ ಎಡಿಟ್ ಮಾಡ್ಬೇಕು…,ಈ ಪಟವನ್ನು ಉಂಟಲ್ಲಾ…ವಿಂಟೇಜ್ ಮೋಡಿನಲ್ಲಿಟ್ಟು ಎಡಿಟ್ ಮಾಡ್ಬೇಕು, ಆಗ ಫೋಟೋ ಇಫೆಕ್ಟ್ ಓಳ್ಳೇದು ಬರ್ತದೆ…,” ಹೀಂಗೇ ಅದು ಹೇಳಿಯೋಂಡು ಹೋದ ಹಾಂಗೇ ಎನಗೆ ಬೆಗರು ಬಿಚ್ಚಲೆ ಸುರುವಾತದ.

“ಏ ಲಕ್ಷ್ಮಣ..,ನೀನು ಇದನ್ನೆಲ್ಲ ಕಲ್ತದ್ದು ಎಲ್ಲಿಯಾ…?” ಕೇಳಿದೆ

“ನಿಮ್ಮದು 2ಜಿ ಅಲ್ವಕ್ಕಾ…? ನನ್ನತ್ರ 3ಜಿ ಉಂಟು…ಇವತ್ತು ತಲರ್ಿಲ್ಲ ಅಷ್ಟೇ…ಇಕ್ಕೊಳ್ಳಿ ನನ್ನ ನಂಬರು. ನಿಮ್ಮದ್ರಲ್ಲಿ ಫೀಡ್ ಮಾಡಿ. ನಾನು ಹೇಳಿದ ಆ ಮೂರು ಪಟವನ್ನು ನನ್ಗೆ ವಾಟ್ಸ್ಯಾಪ್ ಮಾಡಿ ಆಯಿತಾ…?” ಹೇಳಿತ್ತು. ಆನು ಗೆಬ್ಬಾಯಿಸಿ ನೋಡಿಯೊಂಡು ಅಂತೇ ತಲೆಯಾಡ್ಸಿಬಿಟ್ಟೆ.

3ಜಿ ಮೊಬೈಲು ಇಪ್ಪ ಜೆನಕ್ಕೆ ಎನ್ನ ಮಗನ ಹಳೆ ಜೀನ್ಸು ಪೇಂಟು ಎಂತಕೆ ಹೇಳ್ತ ಪ್ರಶ್ನೆ ಎನ್ನ ನಾಲಗೆ ಕೊಡಿವರೇಂಗೆ ಬಂತು. ಕೇಳ್ಲೆ ದೈರ್ಯ ಬಯಿಂದಿಲ್ಲೆ. ಇನ್ನು ಅದಕ್ಕೆ ಎಂತ ಹೇಳ್ತೋ ದೇವರೇ ಬಲ್ಲ.

ಆಯ್ತು ಬತರ್ೇವೆ ಅಕ್ಕ..,ಬರುವ ವರ್ಷ ಕಾಣುವಾ..” ಹೇಳಿಕ್ಕಿ ಎರಡೂದೆ ಹೋದವು.

ಈ ವರ್ಷವೂದೆ ಆಟಿಕಳಂಜನ ಕಾಯ್ತಾ ಇದ್ದೆ. ಈ ವಷರ್ಾಣ ಅದರ ಬೇಡಿಕೆ ಎಂತ ಇತರ್ೋ…
ಅದರ ಪೂರೈಸುವ ಶಕ್ತಿ ಎನಗಿಕ್ಕೋ ಗೊಂತಿಲ್ಲೆ.

 

 

ಶೀಲಾಲಕ್ಷ್ಮೀ ಕಾಸರಗೋಡು

   

You may also like...

15 Responses

  1. sheelalakshmi says:

    ಅಪ್ಪು.

  2. N S JAYALAXMI says:

    ಸೂಪರ್ ಆಟಿ ಕಳಂಜ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *