ಬೋಚಬಾವನ ಪುಗ್ಗ!

ಬೋಚಬಾವ ಎಷ್ಟೇ ದೊಡ್ಡ ಆಗಿರಳಿ, ಇನ್ನೂ ಮಕ್ಕಳಾಟಿಕೆ.
ಹೊತ್ತಿಂಗೆ ಸರಿ ಊಟ ಸಮಾಕೆ ಬೇಕು- ಹಾಂಗೆ ದಿನಕ್ಕೊಂದರಿ ಮಕ್ಕೋ ಆಡ್ತ ಆಟದಸಾಮಾನು ಸಿಕ್ಕದ್ದರೆ ಸೋತದೆ.
ಮಕ್ಕಳಾಟಿಕೆ ಎಳಗಿ ಆಡೆಕ್ಕು ಹೇಳಿ ಕಾಂಬಗ ಸೀತ ಎಂತ ಸಿಕ್ಕುತ್ತೋ ಹುಡುಕ್ಕಿ ಹಿಡುದು ಆಡ್ಳೆ ಸುರು ಮಾಡುದೇ!)

ಮೊನ್ನೆಂತಾತು ಹೇಳಿರೆ, ಓ ಅಲ್ಲಿ ಉಪ್ನಾನ ಇತ್ತು.
ಅಲ್ಲಿ ಪುಗ್ಗ (ಬುಗ್ಗೆ) ಕಟ್ಟಿಗೊಂಡಿತ್ತು ಅಲ್ದಾ, ಹೆರಡ್ಳಪ್ಪಗ ಕುಂಞಿ ಮಕ್ಕಳೊಟ್ಟಿಂಗೆ ಲಡಾಯಿಮಾಡಿ ನಾಕು ಬುಗ್ಗೆ ಹಿಡ್ಕೊಂಡು ಹೆರಟ ಬೈಲಿಂಗೆ.
ಹಾಂಗೆ ನೋಡಿರೆ ಆನು ಸಣ್ಣ, ಎನಗೇ ಬುಗ್ಗೆ ಬೇಡ, ಇವ ಎಂತರ ಹೀಂಗೆ – ಛೇ ಚೇ!

ಅವ ಉಶಾರಿ ಆಯೆಕ್ಕು ಹೇಳಿ ನಮ್ಮ ಬೈಲಿನೋರು ಗ್ರೇಶುದು, ಆದರೆ – ಆವುತ್ತನೇ ಇಲ್ಲೆ.
ಅಂಬಗಂಬಗ ಆರಾರೊಬ್ಬ ಹೇಳಿಗೊಂಡು ಬೇಕು.

ಬೋಚಬಾವನ ಪುಗ್ಗ:

ಎದುರೆರಡು ತುಂಡಲ್ಲು ಕರೆಲಿ ಬೇರೊಂದರ್ಧ
ಬೋಸುನೆಗೆ ಮಾಡುವಗ ಮುಚ್ಚಿಗೊಳೊ° ಅದರ |
ಕೆಂಪಲ್ಲು ಕಾಣುತ್ತು ಎಲೆಸುಣ್ಣ ಅಗುದಾಂಗೆ
ಹಲ್ಲುಸರಿ ತಿಕ್ಕು ನೀ – ಬೋಚಬಾವ || 🙂 ||

ಕೈಲಿ ಆಟದ ಕೆಸರು – ತಲೆಲಿ ನಾರಿನ ಕಸವು
ಮಾರುದ್ದ ದೂರಕ್ಕೆ ಮೈ ನಾರುಗಿವನ |
ಇನ್ನಾರು ಚೆಂದಕಿರು ಬೈಲ ಬಾವನ ರೀತಿ
ಮೈಗೆ ಸರಿ ಮಿಂದುಗೊಳೊ° – ಬೋಚಬಾವ || 🙂 ||

ಕಾರು ಬಾರಿನ ಕುಂಞಿ ರೈಲು ಬಿಡುವಾ ಹೊತ್ತು
ಎಲ್ಲ ಅರಡಿವ ಹಾಂಗೆ ತಲೆಯ ಆಡುಸಿಗೊ |
ಆರೆಂತ ಕೇಳಿರೂ ಹೂಂಕುಟ್ಟಿ ಒಂದರಿಯೆ
ನೀನಂತೆ ನೆಗೆಮಾಡು – ಬೋಚಬಾವ || 🙂 ||

ಜೆಂಬ್ರದೂಟವ ಉಂಡು ಒಂದು ಮೈಲಾರು ನೆಡೆ
ಹೊಟ್ಟೆ ಕರಗಲೆ ತಕ್ಕ ಗುಂಡಿಯಾ ಗರ್ಪು |
ನೆಗೆನೆಗೆಯ ಮಾಡಿಂಡು – ಎಂದಿಂಗು ಚುರ್ಕಾಗು
ಸೋಮಾರಿಯಾಗೆಡಾ – ಬೋಚಬಾವ || 🙂 ||

ಗಾಳಿ ತುಂಬಿದ ಬುಗ್ಗೆ ಮೇಲೆಮೇಲೇರುತ್ತು
ನೀರು ತುಂಬಿದ ಹಂಡೆ ಕೆಳವೆ ನಿಂದಿರ್ತು |
ಹೆಚ್ಚು ಕೊಣಿಯೆಡ ನೀನು ಬೈಲಿನೆಲ್ಲರ ಎದುರು
ಬುಗ್ಗೆಗೊಂದೇ ಪಿನ್ನು – ಬೋಚಬಾವ || 🙂 ||

~_~

ಸೂ:

  • ಹಲ್ಲಿಲ್ಲದ್ದ ಈ ನೆಗೆಮಾಣಿಯ ಪದ್ಯ ಹಲ್ಲಿಲ್ಲದ್ದ ಗುಂಡಜ್ಜ ಬರದ ರಾಗಲ್ಲೇ ಇದ್ದು -ಹೇಳಿ ದೀಪಿಅಕ್ಕಂಗೆ ಅನುಸಿರೆ ಆನು ಜೆವಾಬ್ದಾರಿ ಅಲ್ಲ.
  • ಮುಳಿಯಭಾವಂಗೂ, ದೀಪಿಅಕ್ಕಂಗೂ ತಪ್ಪುಸಿ ಪಷ್ಟುಪ್ರೈಸಿನ ತೆಗದ ಪದ್ಯ ಇದು. ಲಾಯಿಕಯಿದಲ್ಲದೋ?
  • ನಿಂಗಳ ಹತ್ತರೆ ಇನ್ನೂ ಪುಗ್ಗ ಇದ್ದರೆ ಒಪ್ಪಲ್ಲಿ ಬರೆಯಿ; ಎಲ್ಲೋರು ಸೇರಿ ಬೋಚಬಾವಂಗೆ ಹೇಳುವೊ°.

ನೆಗೆಗಾರ°

   

You may also like...

64 Responses

  1. ಬೊಳುಂಬು ಮಾವ says:

    ಬೈಲಿಲ್ಲಿ ನಗೆ ಬುಗ್ಗೆಗಳ ರಾಶಿಯನ್ನೇ ಕಂಡು ಕೊಶೀ ಆತು. ನೆಗೆಗಾರನ ಪ್ರಯತ್ನ ಸಾರ್ಥಕ ಆತು. ಬೈಲಿನ ಪ್ರತಿಯೊಬ್ಬನುದೆ ಕವನ ಕೆತ್ತುವುದರಲ್ಲಿ ಕೈಚಳಕ ತೋರುಸಿದ್ದವು. ಒಪ್ಪದ ಮೇಗೆ ಒಪ್ಪ ಬಿದ್ದು ಒಪ್ಪ ಆತದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *