ಹೊಟ್ಟೆ ದೊಡ್ಡ ಆದರೆ ಹತ್ತು ಲಾಭ ನಷ್ಟಂಗೊ!

May 10, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದಪ್ಪು,
ನಮ್ಮ ಬೈಲಿಂಗೆ ಒಬ್ಬ ನೆಗೆಗಾರ° ಬಂದು ಸೇರಿದ°.
ನೆಗೆಗೊ – ಬರೆಕ್ಕಾರೆ ಆರಾರು ಒಬ್ಬ° ನೆಗೆಗಾರ° ಇರೆಕ್ಕನ್ನೆ, ಹಾಂಗೆ!
ಇನ್ನು ಮುಂದೆ ನಮ್ಮ ನೆಗೆಗೊ ಬೆಳೆತ್ತಾ ಇರ್ತು.
ಹಾಂ, ನೆಗೆಗಾರನ ಮಿಂಚಂಚೆ: nege@oppnna.com
ನಿಂಗಳತ್ರೂ ನೆಗೆಗೊ, ತಮಾಶೆಗೊ ಇದ್ದರೆ ಕಳುಸಿಕೊಡಿ, ಇಲ್ಲಿ ಹಾಕುವ°, ಎಲ್ಲೊರೂ ನೆಗೆಮಾಡುವೊ°, ಆತಾ?
ಏ°?

~
ಒಪ್ಪಣ್ಣ

ಹೊಟ್ಟೆದೊಡ್ಡ ಆದ್ದದರ ಹತ್ತು ಕಷ್ಟಂಗೊ:

  • ತಿಂಬಗ ಅರುದರೆ – ಮದಲಿಂಗೆ ಸೀತ ಕೆಳ ಬಿದ್ದುಗೊಂಡು ಇತ್ತು – ಈಗ ಅಂಗಿಲಿ ಕಲೆ ಆವುತ್ತು!
  • ಪೇಂಟಿನ ಗುಬ್ಬಿ ಸರಿ ಹಾಕಿದ್ದೋ ಹೇಳಿ ನೋಡೆಕ್ಕಾರೂ ಬಗ್ಗೆಕ್ಕಾವುತ್ತು!, ಜೋಡು ಹಾಕಿದ್ದು ಸರಿ ಆಯಿದೋ – ಇಲ್ಲೆಯೋ ಹೇಳಿ ಬೇರೆಯವರತ್ರೆ ಕೇಳೆಕ್ಕಷ್ಟೆ!!
  • ವಾಹನ ಬಿಡ್ಳೆ ಹೇಂಡ್ಳು / ಷ್ಟೇರಿಂಗು ಹರಟೆ ಆವುತ್ತು!
  • ಬೈಕ್ಕಿನ ಹಿಂದೆ ಕೂಬದು ಬಾರಿ ಕಷ್ಟ, ಕಾರಿನ ಸೀಟಿಂದ ಬೇಕಪ್ಪಗ ಏಳುಲೆಡಿತ್ತಿಲ್ಲೆ!
  • ಕವುಂಚಿ ಮನುಗಿರೆ ಬೆನ್ನು ಬೇನೆ ಆವುತು – ಬಗ್ಗಿದ ಹಾಂಗಾಗಿ!
  • ಒಂಟಿಪಾಲಲ್ಲಿ ನೆಡವಗ ಕಾಲು ಮಡಗಿದ್ದು ಕಾಣದ್ದೆ ಉದುರುವ ಹೆದರಿಕೆ ಆವುತ್ತು!
  • ಕಂಪ್ಯೂಟರು ಕುಟ್ಟುವಗ ಕೀಬೋರ್ಡು ದೂರ ಮಡಗೆಕ್ಕಾವುತ್ತು, ಒತ್ತಿದ್ದು ಸರಿಯೋ – ತಪ್ಪೋ ಕಾಣ್ತಿಲ್ಲೆ!
  • ಪೂಜಗೆ ಕೂದಲ್ಲಿ ಕೌಳಿಗೆಸಕ್ಕಣ ನೆಲಕ್ಕಲ್ಲಿ ಮಡಗಿದ್ದು ಕಾಣ್ತೇ ಇಲ್ಲೆ!
  • ಮುಂಡು ಸುತ್ತುದೇ ಒಳ್ಳೆದು ಕಾಣ್ತು! ಅಂಗಿ, ಪೇಂಟುಗೊ ಪೂರ ಸಣ್ಣ ಅಪ್ಪಲೆ ಸುರು ಆವುತ್ತು! – ಕೆಲಸದಾಳಿಂಗೇ ದಾನ ಹಿಡಿಯೆಕ್ಕಷ್ಟೆ!
  • ಹೊಟ್ಟೆ ಬೆಳದರೆ ವ್ಯಾಯಾಮ ಮಾಡ್ಳೆ ಉದಾಸ್ನ ಅಪ್ಪದು – ವ್ಯಾಯಾಮ ಮಾಡದ್ದೆ ಹೊಟ್ಟೆ ಇನ್ನೂ ಬೆಳವದು!!

  ಹೊಟ್ಟೆಬೆಳದರೆ ಅಪ್ಪ ಹತ್ತು ಗುಣಂಗೊ:

   • ರಜ ಜಾಸ್ತಿ ತಿಂದರೂ ಆರೂ ಎಂತೂ ಗ್ರೇಶುತ್ತವಿಲ್ಲೆ!
   • ಎಲ್ಲೇ ಆದರೂ, “ಬನ್ನಿ ಬಾವ, ಕೂರಿ” – ಹೇಳಿ ಕೂಬಲೆ ಜಾಗೆ ಮಾಡಿ ಕೊಡ್ತವು! ಬಸ್ಸಿಲಿ ಆರಾಮಲ್ಲಿ  ಕೂಪಲೆ ಸೀಟುಬಿಟ್ಟುಕೊಡ್ತವು! ಕಾರಿಲಿ ಸೀಟಿಲಿ ಎರಾಗಿ ಕೂರುಸುತ್ತವು.
   • ಜೆಂಬ್ರಲ್ಲಿ ಕನಿಷ್ಠ ಒಂದು ಹೋಳಿಗೆ ಇಡೀ ಬಳುಸುತ್ತವು!
   • ನೆರೆಕರೆ ಜೆಂಬ್ರಂಗಳಲ್ಲಿ ಸುದಾರಿಕೆಗೆ ಹೋಗದ್ರೂ ಆರುದೇ ಎಂತ ಗ್ರೇಶುತ್ತವಿಲ್ಲೆ!
   • ಬಚ್ಚುವಗ ಕೈಯ ಹೊಟ್ಟೆಮೇಲೆ ಮಡಗಿ ಕೂದಂಡು ಒರಗುಲಾವುತ್ತು!
   • ಪಕ್ಕನೆ ಎಂತಾರು ಬರೇಕಾರೆ ಬೇರೆ ಮೇಜೋ – ರಟ್ಟಿನಕಡೆಯೋ – ಮತ್ತೊ ಹುಡ್ಕೆಕ್ಕಾವುತ್ತಿಲ್ಲೆ!
   • ಜೆನರಿಂದ ಒಂದು ರಜ್ಜ ದೂರ ಇದ್ದೇ ಇರ್ತು – ಆದುನಿಕ ಸಮಾಜದ ತತ್ವದ ಹಾಂಗೆ!
   • ಮುಂಡು – ವೇಷ್ಟಿ ಸುತ್ತಿರೆ ಚೆಂದ ಕಾಣ್ತು!! – ಅಲ್ಲದ್ರೆ ಕಡ್ಡಿಗೆ ಒಸ್ತ್ರ ಸುಂದಿದ ಹಾಂಗೆ ಕಾಣ್ತಡ!
   • ಕೀಬೋರ್ಡಿನ / ಲೇಪ್ಟಾಪಿನ ಹೊಟ್ಟೆಮೇಲೆಯೇ ಮಡಿಕ್ಕೊಂಬಲಾವುತ್ತಡ (ಶ್ತೋಮಕ್-ಟೋಪ್)..!
   • ಜಾಸ್ತಿ ತಿಂಬಲೆಡಿತ್ತು, ಜಾಸ್ತಿ ತಿಂದಷ್ಟೂ ಹೊಟ್ಟೆ ಬೆಳೆತ್ತು!!

   ಇದು ಕಷ್ಟಂಗೊ – ಗುಣಂಗೊ ಆರಿಂಗೆ?
   ಶಾಂಬಾವನ ಹಾಂಗೆ ಜನ್ಮದಾರಭ್ಯ ಹೊಟ್ಟೆ ಇದ್ದವಂಗೆ ಅಲ್ಲ, ಪ್ರಕಾಶಮಾವನ ಹಾಂಗೆ – ಎಡೆಲಿ ಬಂದವಂಗೆ ಅನುಭವ ಅಪ್ಪದು.

   ನಿಂಗೊಗೆ ಯೇವದಾರು ಗೊಂತಿದ್ದರೆ, ಅನುಭವಕ್ಕೆ ಬಂದಿದ್ದರೆ – ತಿಳುಶಿ!
   ಕೇವಲ ನೆಗೆಗಾಗಿ!
   ~
   ನೆಗೆಗಾರ°
   nege@oppanna.com
   ಹೊಟ್ಟೆ ದೊಡ್ಡ ಆದರೆ ಹತ್ತು ಲಾಭ ನಷ್ಟಂಗೊ!, 4.0 out of 10 based on 12 ratings
   ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

   ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

   ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

   1. gabbaladkada mani

    hottenda upakara illadroo akku
    tondare appalagada!

    [Reply]

    VA:F [1.9.22_1171]
    Rating: 0 (from 0 votes)

   ಶುದ್ದಿಗೆ ಒಂದು ಒಪ್ಪ ಕೊಡಿ

   (ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)

   
   ಬೈಲಿಂಗೆ ಲಾಗ ಹಾಕಲೆ

   ಗುಟ್ಟುಶಬ್ದ(password) ಮರದತ್ತೋ?

   ಬೈಲಿನ ಬಗ್ಗೆ:
   ಚೋಲು - ಡಬ್ಬಲ್ ಚೋಲು
   ವಿಶೇಷ ವಿಷಯ
   ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
   ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
   ಬೆಶಿ ಬೆಶಿ ಒಪ್ಪಂಗೊ..
   ಬೈಲಿನ ನೆರೆಕರೆ
   ಗುರಿಕ್ಕಾರ°ಒಪ್ಪಣ್ಣಸಂಪಾದಕ°ಅನುಶ್ರೀ ಬಂಡಾಡಿಶೇಡಿಗುಮ್ಮೆ ಪುಳ್ಳಿಶಾ...ರೀವಾಣಿ ಚಿಕ್ಕಮ್ಮಚೂರಿಬೈಲು ದೀಪಕ್ಕವಿದ್ವಾನಣ್ಣಬಟ್ಟಮಾವ°ಬಂಡಾಡಿ ಅಜ್ಜಿಶರ್ಮಪ್ಪಚ್ಚಿಯೇನಂಕೂಡ್ಳು ಅಣ್ಣಸುಭಗಮಂಗ್ಳೂರ ಮಾಣಿಕಾವಿನಮೂಲೆ ಮಾಣಿಅಕ್ಷರ°ಡೈಮಂಡು ಭಾವಡಾಮಹೇಶಣ್ಣಡಾಗುಟ್ರಕ್ಕ°ಬೋಸ ಬಾವಚುಬ್ಬಣ್ಣಶಾಂತತ್ತೆಪ್ರಕಾಶಪ್ಪಚ್ಚಿಪುಟ್ಟಬಾವ°ಶುದ್ದಿಕ್ಕಾರ°ಒಪ್ಪಕ್ಕಪೆರ್ಲದಣ್ಣ
   ಬೈಲಿನ ಮೋರೆಪುಟ
   ಸದ್ಯದ ಪಟಂಗೊ
   ಪಂಕಜ ರಾಮ ಭಟ್
   "ಆನು ಕಂಡುಂಡ ಕಾಶೀಯಾತ್ರೆ"

   ಬೆಣಚ್ಚಿಪ್ಪಲ್ಲಿ ಹುಡ್ಕಲೆ