ನೆಗೆ ಅಲೆ

August 14, 2014 ರ 10:30 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

1. ಮಾಸ್ಟ್ರು – ದೇಶಾಂತರ ಹೇಳಿರೆ ಎಂತರ?

ಹುಡುಗ° – ಬೇರೆ ದೇಶ ಸರ್.

ಮಾಸ್ಟ್ರು – ವಿಷಯಾಂತರ ಹೇಳಿರೆ?nege ale

ಹುಡುಗ° – ಬೇರೆ ವಿಷಯ ಸರ್!

ಮಾಸ್ಟ್ರ – ಭಾಷಾಂತರ ಹೇಳಿರೆ ಎಂತದು?

ಹುಡುಗ° – ಬೇರೆ ಭಾಷಗೆ ಅನುವಾದ ಸರ್.

ಮಾಸ್ಟ್ರ° – ಗಂಡಾಂತರ ಹೇಳಿರೆ ??

ಹುಡುಗ° – ಬೇರೆ ಗೆಂಡ ಸರ್! 😀

 

2. ಅವ° – ಅಬ್ಬೆ ಮಲೆಹಾಲು ಕುಡುದವು ಅಬ್ಬೆಯ ಮರೆತ್ತವಿಲ್ಲೆ

ಇವ° – ಬಾಟ್ಳಿ ಹಾಲು ಕುಡುದವು ಬಾಟ್ಳಿಯ ಮರೆತ್ತವಿಲ್ಲೆ ! 😀

 

3. ಒಬ್ಬ° – “ನಮ್ಮಲ್ಲಿ ಇದ್ದವು ಎಷ್ಟೋ ಸಾಧಕರು..

ಹತ್ರೆ ಇಪ್ಪವ° ಮತ್ತೊಬ್ಬ° – ಅಪ್ಪಪ್ಪು.. , ಸಮಯ ಸಾಧಕರು, ಸ್ವಾರ್ಥ ಸಾಧಕರು 😀

 

4. ಒಬ್ಬನ ಬಗ್ಗೆ ಒಬ್ಬ° ಹೇಳಿದ° – ಸಣ್ಣಾಗಿಪ್ಪಗ ಇವ ಸಾಕಷ್ಟು ಹಾಲು ಕುಡುದ್ದ°

ಅವನ ಒಳ್ಳೆತ ಗೊಂತಿದ್ದ ಹತ್ರೆ ಇಪ್ಪವ° ಹೇಳಿದ° – “ಈಗಲೂ ಸಾಕಷ್ಟು ಹಾಲು ಕುಡಿತ್ತ°.. – ಆದರೆ ಆಲ್ಕೋ ಹಾಲು” 😀

 

5. ರಾಮಣ್ಣ : ಇವ ಬಹಳ ಉದಾರಿ, ಬೇಕಾಷ್ಟು ಖರ್ಚು ಮಾಡುತ್ತ°

ಕಿಟ್ಟಣ್ಣ° : ಆಗಿಕ್ಕು, ಆದರೆ ಬೇರೆಯೋರ, ಸಂಘ ಸಂಸ್ಥೆಗಳ ಪೈಸೆಯ 😀

 

6. ಈಜುಕೊಳಕ್ಕೆ ಜವ್ವಂತಿ ಒಂದು ಈಜುಲೆ ಹೇಳಿ ಬಂತು.

ವಸ್ತ್ರ ಬಿಡುಸಿ ಈಜುಡುಗೆ ಧರಿಸ್ಯೊಂಡು ನೀರಿಂಗೆ ಹಾರಲೆ ತಯಾರಾತು.

ಅದರ ನೋಡಿದ ಅಲ್ಲಿಯಾಣ ಕಾವಲುಗಾರ° “ಇಲ್ಲಿ ಈಜಲೆ ಅನುಮತಿ ಇಲ್ಲೆ” – ಹೇಳಿದ°

ಜವ್ವಂತಿಗೆ ಕೋಪಬಂದು ಹೇಳಿತ್ತು – ಆನು ವಸ್ತ್ರ ಬಿಡುಸುವಾಗಳೇ ನೀನು ಏಕೆ ಹೇಳಿದ್ದಿಲ್ಲೆ?!

ಅದಕ್ಕೆ ಕಾವಲುಗಾರನ ಉತ್ತರ – “ಇಲ್ಲಿ ಈಜುಲೆ ಮಾತ್ರ ನಿಷೇಧ ಹೇಳಿ ಇಪ್ಪದು” 😀

 

7. ಕ್ಲಾರ್ಕ° – ಸ್ವಾಮಿ, ಇನ್ನು ಮುಂದೆ ಎನ್ನ ಸಂಬಳವ ಹೆಚ್ಚುಸೆಕ್ಕು. ಏಕೆ ಹೇಳಿರೆ ಎನಗೆ ಮದುವೆ ಆಯಿದು.

ಆಫೀಸರ° – ಆಫೀಸಿನ ಹೆರ ಅಪ್ಪ ಏವದೇ ಅವಾಂತರಕ್ಕೆ ಎಂಗೊ ಜವಬ್ದಾರಿ ಅಲ್ಲ 😀

 

8. ಒಂದು ಕಲ್ತ ಕೂಸು ಕೆಲಸಕ್ಕೇಳಿ ಅರ್ಜಿಯ ಭರ್ತಿಮಾಡಿಗೊಂಡಿತ್ತು.

ಹೆಸರು, ವಿಳಾಸ, ಅರ್ಹತೆ, ಅನುಭವ ಎಲ್ಲದರ ಭರ್ತಿಮಾಡಿಕ್ಕಿ ಏಜ್ ಹೇಳಿ ಇಪ್ಪಲ್ಲಿ ‘ಅಟಾಮಿಕ್ ಏಜ್’ ಹೇಳಿ ಬರದತ್ತು ! 😀

 

9. ಮೇನೇಜರ° – ಇಂದ್ರಾಣ ಪೇಪರು ಎಲ್ಲಿದ್ದೋ°?

ಪೇದೆ – ಅದರ್ನೇ ಆನು ನಿನ್ನೆಂದ ಹುಡುಕ್ಕುತ್ತ ಇದ್ದೆ, ಸಿಕ್ಕಿದ್ದೇ ಇಲ್ಲೆ!

 

10. ಅಫೀಸೊಂದರಲ್ಲಿ ಒಬ್ಬ° ಒಟ್ಟಿಂಗೆ ಕೆಲಸ ಮಾಡ್ತವ° – ಎಂತ ಇದು ಆಫೀಸಿಲ್ಲಿ ನೀನು ಒರಗುತ್ತ ಇದ್ದೆ?! ಇನ್ನೆಲ್ಲ್ಯಾರು ಹೀಂಗೆ ಮಾಡಿರೆ ಹಿರಿಯ ಆಫೀಸರನತ್ರೆ ಹೇಳುವೆ.

ಮತ್ತೊಬ್ಬ° – ಹೋಗಿ ಹೇಳು, ಆರು ಹೆದರ್ತವು?!, ಆಪೀಸರಂಗೆ ಹೇಳೆಕ್ಕಾರೆ ಅವನ ನೀನು ತಟ್ಟಿ ಏಳ್ಸೆಕ್ಕಾವ್ತನ್ನೇ! 😀

 

11. ಇಂಟರ್ವ್ಯೂವಿಂಗೆ ಬಂದವಂಗೆ ಪರೀಕ್ಷಕ° ಕೇಳಿದ° – “ ನಿನ್ನ ಒಂದು ಕೆಮಿ ಕತ್ತರಿಸಿರೆ ಎಂತಕ್ಕು?”

ಬಂದವ° – ಎನಗೆ ಸರಿಯಾಗಿ ಕೇಳ

ಪರೀಕ್ಷಕ° – ಎರಡೂ ಕೆಮಿ ಕತ್ತರಿಸಿರೆ?!

ಬಂದವ° – ಕಣ್ಣೇ ಕಾಣ!.

ಪರೀಕ್ಷಕ° – ಆನು ಹೇಳಿದ್ದದು ಕಣ್ಣಲ್ಲ, ಕೆಮಿ. ಎರಡೂ ಕೆಮಿ ಕತ್ತರಿಸಿರೆ ಎಂತ ಅಕ್ಕು ಹೇಳಿ ಕೇಳಿದೆ.

ಬಂದವ° – ಅದೇ ಆನು ಹೇಳಿದ್ದದು.. , ಎರಡೂ ಕೆಮಿ ಕತ್ತರಿಸಿರೆ ಎನ್ನ ಕನ್ನಡಕ ಬಿದ್ದು ಹೋಕು, ಎನಗೇನೂ ಕಾಣ 😀

 

12. ಒಂದನೇವ° – ಅಗ್ನಿಪರ್ವತ ಹೇಂಗಿರುತ್ತು ಗೊಂತಿದ್ದಾ?

ಎರಡ್ನೇವ° – ಅದು ಹೇಂಗಿರುತ್ತು?!

ಒಂದನೇವ° – ನೋಡ್ಳೆ ಪಾಪ ಕಾಣುತ್ತು. ಬಾಯಿ ತೆಗದರೆ ಕಿಚ್ಚನ್ನೆ ಕಾರುತ್ತು.

ಮೂರನೇವ° – ಓಹ್ಹೋ..!, ಅವ° ಒಗಟು ಹೇಳ್ತಾ ಇದ್ದ°. ಅಷ್ಟು ಗೊಂತಾವುತ್ತಿಲ್ಲೆಯೋ?!… ಎನಗೂ ಮದುವೆ ಆಯಿದು. 😀

 

13. ಚಿತ್ರ ರಸಿಕ° – ನಿನ್ನೆ ಚಿತ್ರ ಪ್ರದರ್ಶನಕ್ಕೆ ಹೋಗಿತ್ತಿದ್ದೆ. ನೀನು ಬರದ ಚಿತ್ರದ ಎದುರು ಅರ್ಧ ಗಂಟೆ ನಿಂದಿತ್ತಿದ್ದೆ.

ಚಿತ್ರಗಾರ° – ಎನ್ನ ಚಿತ್ರ ನಿನಗೆ ಅಷ್ಟೂ ಮೆಚ್ಚಿಗೆ ಆತೋ?!

ಚಿತ್ರ ರಸಿಕ° – ಹಾಂಗೆಂತ ಇಲ್ಲೆ, ಬೇರೆ ಚಿತ್ರಂಗಳ ಎದುರೆ ಜೆನಂಗೊ ತುಂಬಿಗೊಂಡಿತ್ತಿದ್ದವು. 😀

***
ನೆಗೆ ಅಲೆ
[ಸಂಗ್ರಹ : ಅರ್ತಿಕಜೆ ಮಾವ°]

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. K.Narasimha Bhat Yethadka

  ನೆಗೆಯ ಅಲೆಗೊಒಂದರ ಹಿಂದೆ ಒಂದು ಅಪ್ಪಳ್ಸಿ ಅಪ್ಪಚ್ಚಿ ಆದವು ಅರ್ತಿಕಜೆ ಅಣ್ಣ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಕವನ, ಸಂಗ್ರಹ , ನೆಗೆಗುಚ್ಛಂಗಳ ಸಂತೋಷ-ಉತ್ಸಾಹಲ್ಲಿ ನಮ್ಮೊಟ್ಟಿಂಗೆ ಹಂಚಿಗೊಂಬ ಅರ್ತಿಕಜೆ ಮಾವಂಗೆ ಸದಾ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಲಾಯಕಿತ್ತು ನೆಗೆಯಲೆ.

  [Reply]

  VA:F [1.9.22_1171]
  Rating: 0 (from 0 votes)
 4. ಅರ್ತಿಕಜೆ ಮಾವ°

  ಪ್ರೋತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಏತಡ್ಕ ನರಸಿಂಹಣ್ಣಂಗೆ, ಚೆನ್ನೈ ಭಾವಂಗೆ, ಬೊಳುಂಬು ಗೋಪಾಲಣ್ಣಂಗೆ ಮತ್ತು ಓದುಗರಿಂಗೆ ಧ್ಯನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ದೊಡ್ಡಭಾವಪ್ರಕಾಶಪ್ಪಚ್ಚಿಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ಒಪ್ಪಕ್ಕಅಕ್ಷರ°ಕಳಾಯಿ ಗೀತತ್ತೆದೇವಸ್ಯ ಮಾಣಿವೇಣೂರಣ್ಣಶಾಂತತ್ತೆಹಳೆಮನೆ ಅಣ್ಣಅಜ್ಜಕಾನ ಭಾವವಾಣಿ ಚಿಕ್ಕಮ್ಮಡೈಮಂಡು ಭಾವಕೇಜಿಮಾವ°ಅಡ್ಕತ್ತಿಮಾರುಮಾವ°ಶಾ...ರೀವೇಣಿಯಕ್ಕ°vreddhiಗಣೇಶ ಮಾವ°ದೊಡ್ಮನೆ ಭಾವಪೆರ್ಲದಣ್ಣರಾಜಣ್ಣಗೋಪಾಲಣ್ಣಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ