ಪ್ರದೇಶದ ಉತ್ತರಕುಮಾರರ ಅರಾಜಕತೆಗೆ ಯೋಗಿಯೇ ಉತ್ತರ !!

March 24, 2017 ರ 12:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಲೋಕಲ್ಲಿ ಅಧರ್ಮ ಹೆಚ್ಚಪ್ಪಗ ತಾನಾಗಿ ಅವತಾರ ಎತ್ತಿ ಬತ್ತೆ – ಹೇದು ಪರಮಾತ್ಮನೇ ಹೇಳಿದ್ದನಾಡ.
ಹಾಂಗೇ ಆತುದೇ.
ಎಲ್ಲಿ?
ಕಳುದ ವಾರ ಕರ್ನಾಟಕಲ್ಲಿ ಬಜೆಟ್ಟು ಆದ್ಸು ಒಂದು ಕತೆ ಆದರೆ, ಈ ವಾರ ಉತ್ತರ ಪ್ರದೇಶದ್ದು ಇನ್ನೊಂದು ಕತೆ.
ಕರ್ನಾಟಕದ್ದು ಬೇಜಾರದ ಸಂಗತಿ ಆದರೆ, ಉತ್ತರ ಪ್ರದೇಶದ್ದು ಕೊಶಿಯ ಸಂಗತಿ – ಹೇದು ಗುಣಾಜೆ ಮಾಣಿ ವ್ಯಾಖ್ಯಾನ ಮಾಡಿದ°.
~
ಕಳುದ ಕೆಲವು ತಿಂಗಳಿಂದಲೇ ಉತ್ತರ ಪ್ರದೇಶದ ಚುನಾವಣೆ ಚುನಾವಣೆ ಹೇದು ಪ್ರಸಾರ ಇದ್ಸು ನಿಂಗೊಗೆ ಗೊಂತಿಕ್ಕು.
ಅಂತೂ ಇಂತೂ ಮೊನ್ನೆ ಆ ಕಾರ್ಯ ಮುಗಾತು; ಅದಾದ ಮತ್ತೆ ಮತ ಎಣಿಕೆ ಆತು; ಅದಾದ ಮತ್ತೆ ಫಲಿತಾಂಶವೂ ಬಂತು.
ಎಲ್ಲದರಲ್ಲಿಯೂ ಇಡೀ ವಿಶ್ವದ ಗಮನ ಪಡಕ್ಕೊಂಡದು ಉತ್ತರ ಪ್ರದೇಶವೇ.
ಇಷ್ಟನ್ನಾರ ಜಾತಿ ರಾಜಕೀಯ, ಧರ್ಮ ರಾಜಕೀಯ ಮಾಡಿದ ಅಲ್ಯಾಣ ಜನತೆ ಈ ಸರ್ತಿ ಬದಲಾವಣೆ ಬೇಕು, ಅಭಿವೃದ್ಧಿ ಬೇಕು – ಹೇದು ವೋಟು ಹಾಕಿದವಾಡ. ಹಾಂಗೆ ಹಾಕಿದ್ಸರಲ್ಲಿ ಬಂದದು ಮೋದಿ ಅಜ್ಜನ ಪಾರ್ಟಿ.
ಗೆದ್ದರೆ ಮುಖ್ಯಮಂತ್ರಿ ಆರು ಹೇದು ಗೆಲ್ಲುವನ್ನಾರವೂ ಹೇಳಿದ್ದವಿಲ್ಲೆ. ಹಾಂಗಾಗಿ ಮುಖ್ಯಮಂತ್ರಿಯ ಹೆಸರೇ ಇಲ್ಲದ್ದೆ ಗೆದ್ದದು.
ಗೆದ್ದ ಮತ್ತೆಯೇ ಗೊಂತು – ಅಲ್ಯಾಣ ಮುಖ್ಯಮಂತ್ರಿ ಆರು ಅಪ್ಪದೂ ಹೇದು.
ಅದೂ ಗೆದ್ದ ಕೂಡ್ಳೇ ಗೊಂತಾಯಿದಿಲ್ಲೆ; ಗೆದ್ದು ಒಂದು ವಾರ ಕಳುದ ಮತ್ತೆಯೇ ಗೊಂತಾದ್ಸು.
~
ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿ ಆಗಿ ಆಯ್ಕೆ ಆದ್ಸು ಒಂದು ಸಂತ. ನಾಥ ಪಥದ ಯೋಗಿ.
ಹೆಸರು ಯೋಗಿ ಆದಿತ್ಯನಾಥ್ – ಹೇಳಿ.
ಗೋರಖಪುರದ ಗೋರಕ್ಷಾಪೀಠದ ಮಹಂತ ಆ ಯೋಗಿ.
ಇಪ್ಪತ್ತಾರ್ನೇ ಒರಿಶಲ್ಲೇ ಲೋಕಸಭಾ ಸದಸ್ಯ ಆದವಾಡ.
ಅಂದಿಂದ ಇಂದಿನ ಒರೆಗೂ ನಿರಂತರ ಲೋಕಸಭೆಲಿ ಪ್ರಾತಿನಿಧಿತ್ವ ಇದ್ದಾಡ.
ಸಮಾಜ ಸೇವೆಲಿ ಅಷ್ಟು ಅನುಭವ ಇಪ್ಪ ಆ ಸಂತ ಇಂದು ಇಡೀ ರಾಜ್ಯದ ಮುಖ್ಯ ಮಂತ್ರಿ.
~
ಬಂದ ಮರದಿನಂದಲೇ ತೊಡಗಿ, ಇಂದಿನವರೆಗೆ ಕೆಲವು ಮುಖ್ಯಪಟ್ಟ ಆದೇಶ ಹೆರಡುಸಿತ್ತಾಡ.
ಒಂದು – ರಾಜ್ಯದ ಅಕ್ರಮ ಕಸಾಯಿಖಾನೆಗಳ ಎಲ್ಲ ಮುಚ್ಚುಲೆ ಆದೇಶ.
ಎರಡು – ಮಂತ್ರಿಗಳ ಕಾರಿನ ಲೈಟುಗಳ ತೆಗವಲೆ ಆದೇಶ.
ಮೂರು – ಎಲ್ಲಾ ಮಂತ್ರಿ, ಮಾಗಧರ ಆಸ್ತಿ ವಿವರವ ಕೊಡೆಕ್ಕು,
ನಾಲ್ಕು – ಶಾಲೆ ಕೋಲೇಜುಗಳ ಕರೆಲಿ ಹೊತ್ತು ಕಳೆತ್ತಾ ಕೂಪ ಬೆಗುಡು ಜವ್ವನಿಗರ ದಾರಿಗೆ ತಪ್ಪಲೆ ಒಂದು ಸೈನ್ಯ –
ಹೀಂಗಿಪ್ಪ ಹಲವು ಕಾಯಿದೆಗೊ, ಕಾನೂನುಗೊ.
ಒಟ್ಟಿಲಿ, ಬಂದ ಲಾಗಾಯ್ತು ಕೆಟ್ಟವಕ್ಕೆ ನೆಲೆ ಇಲ್ಲೆ – ಹೇಳ್ತ ಹಾಂಗಾತು. ಇಂತಾ ಧೃಢ ಧೈರ್ಯದ ತೀರ್ಮಾನ ತೆಕ್ಕೊಳೆಕ್ಕಾರೆ ನಿಸ್ವಾರ್ಥ ರಾಜಕಾರಣಿಯೇ ಆಯೆಕ್ಕಷ್ಟೆ.
ನಾಥಪಂಥ ಬೆಳದ್ದದೇ ಲೋಕಲ್ಲಿ ಧರ್ಮಸ್ಥಾಪನೆಗೆ! ಈ ಆದಿತ್ಯನಾಥ ಲೋಕನಾಥನೇ ಅಪ್ಪದರಲ್ಲಿ ಸಂಶಯ ಇಲ್ಲೆ.
~
ಅದೆಲ್ಲದಕ್ಕಿಂತ ಮುಖ್ಯವಾದ ಇನ್ನೊಂದು ವಿಚಾರವೇ – ಅಯೋಧ್ಯಾ ಗಲಾಟೆ.
ಹಲವು ತಲೆಮಾರುಗಳಷ್ಟು ಹಳೆ ವಿಚಾರವ ಈಗ ಪುಣಾ ಜೀವಕೊಟ್ಟು, ಒಂದರಿಂಗೇ ಮುಗುಶುವ ಬಗ್ಗೆ ಪ್ರಯತ್ನಂಗೊ ನೆಡೆತ್ತಾ ಇದ್ದು. ಈ ಕಾಲಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಒಬ್ಬ° ರಾಮಭಕ್ತನೇ ಬಂದ್ಸು ತುಂಬಾ ಒಳ್ಳೆ ಸಂಗತಿ.
ರಾಮ ಜನ್ಮ ಭೂಮಿಲಿ ರಾಮ ಮಂದಿರವ ಬೇಗ ಕಾಂಬಲೆ ಈ ರಾಮ ಭಕ್ತನಿಂದ ಸಾಧ್ಯ ಆಗಲಿ – ಹೇಳ್ತದು ಎಲ್ಲೋರ ಆಶಯ.
~
ಉತ್ತರ ಪ್ರದೇಶಲ್ಲಿ ಮೊನ್ನೆ ಒರೆಗೆ ಇದ್ದ ಉತ್ತರ ಕುಮಾರನ ರಾಜ್ಯಾಡಳಿತ ಮುಗುದು, ಈಗ ಯೋಗ್ಯ ಆಡಳಿತ ಬಯಿಂದು.
ಇದು ಯೋಗ್ಯ ಸರಕಾರಲ್ಲಿ ಯೋಗ್ಯ ಅಭಿವೃದ್ಧಿಯ ಕೊಡಲಿ – ಹೇಳುದು ನಮ್ಮೆಲ್ಲರ ಆಶಯ.
~
ಒಂದೊಪ್ಪ: ರಾಮನ ಮಂದಿರ ಕಟ್ಳೆ ಬೇಕಾದ ಸೇವಕರ ರಾಮನೇ ಹುಡ್ಕಿ ತಕ್ಕು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. Venugopal Kambaru

  ಲಾಯಕ್ ಆಯಿದು. ವಿವರ ಇನ್ನುದೇ ಬೇಕಿತ್ತು

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S K GOPALAKRISHNA BHAT

  ಯೋಗಿ ಎಂತ ಮಾಡುತ್ತಾ ಹೇಳಿ ಇಡೀ ದೇಶವೇ ನೋಡುತ್ತಾ ಇದ್ದು. ಆದಷ್ಟೂ ವಿವಾದಕ್ಕೆ ಎಡೆ ಕೊಡದ್ದೆ ರಾಜ್ಯಭಾರ ಮಾಡಲಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿಸುವರ್ಣಿನೀ ಕೊಣಲೆಅಜ್ಜಕಾನ ಭಾವಚೂರಿಬೈಲು ದೀಪಕ್ಕಮಾಷ್ಟ್ರುಮಾವ°ವಿದ್ವಾನಣ್ಣಜಯಗೌರಿ ಅಕ್ಕ°ಅನುಶ್ರೀ ಬಂಡಾಡಿಚೆನ್ನಬೆಟ್ಟಣ್ಣಅನಿತಾ ನರೇಶ್, ಮಂಚಿಪಟಿಕಲ್ಲಪ್ಪಚ್ಚಿತೆಕ್ಕುಂಜ ಕುಮಾರ ಮಾವ°ನೀರ್ಕಜೆ ಮಹೇಶಸರ್ಪಮಲೆ ಮಾವ°ಶ್ರೀಅಕ್ಕ°ಪುತ್ತೂರುಬಾವಗಣೇಶ ಮಾವ°ಸಂಪಾದಕ°ಬಟ್ಟಮಾವ°ದೊಡ್ಡಮಾವ°ದೇವಸ್ಯ ಮಾಣಿಒಪ್ಪಕ್ಕದೊಡ್ಡಭಾವಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ