Oppanna.com

ಅವಿಚ್ಛಿನ್ನ ಪರಂಪರೆಯೂ, ಚಿನ್ನದಂಥಾ ಸಂಗತಿಗಳೂ..

ಬರದೋರು :   ಒಪ್ಪಣ್ಣ    on   13/12/2013    16 ಒಪ್ಪಂಗೊ

ಎಡಪ್ಪಾಡಿ ಭಾವಂಗೆ ಪುರುಸೊತ್ತಿದ್ದರೆ ಮಾತಾಡುಗು; ಅಲ್ಲದ್ದರೆ ಬರೇ ಹೂಂಕುಟ್ಟುಗು.
ವಿದ್ವಾನಣ್ಣಂಗೆ ಪುರುಸೊತ್ತಿದ್ದರೆ ಹೂಂಕುಟ್ಟುಗು!
ಆದರೆ,  ಚೆಂಬಾರ್ಪು ಮಾವಂಗೆ ಅಂಬೆರ್ಪಿದ್ದರೇ ಮಾತಾಡುಗಷ್ಟೆ! 😉
ಮೊನ್ನೆ ಹಾಂಗೇ ಆತು. ಎಲ್ಲಿ? ಹೊಸನಗರಲ್ಲಿ.

~

ಈ ಸರ್ತಿ ದೊಡ್ಡಗುರುಗಳ ಆರಾಧನೆ ಹೊಸನಗರಲ್ಲಿ; ಆರಾಧನೆಲಿ ವಿಶೇಷವಾಗಿ “ಮಹಾ ನೈವೇದ್ಯ” ಮಾಡ್ಳಿದ್ದು – ಹೇದು ಮದಲೇ ಹೇಳಿಕೆ ಆಗಿದ್ದತ್ತು ನಮ್ಮ ಗುರಿಕ್ಕಾರ್ರದ್ದು.
ಮಹಾನೈವೇದ್ಯ ಹೇದರೆ ಅಳತೆ ಲೆಕ್ಕಲ್ಲಿ ಒಂದು ಸಾವಿರದ ಇಪ್ಪತ್ತೇಳು ಕಿಲವೋ – ಎಷ್ಟೋ ಅಕ್ಕಿಯ ಬೇಶಿ ನೈವೇದ್ಯ ಮಾಡೇಕಡ.
ಅಷ್ಟರನ್ನೂ ಉಂಡು ಮುಗಿಶಲೆ ಬ್ರಾಹ್ಮಣರೂ ಆಯೇಕು. ಹಾಂಗಾಗಿ ಆ ಅನ್ನಪ್ರಸಾದ ಭೋಜನಕ್ಕೆ ಊರೂರಿಂದ ಎಲ್ಲೋರುದೇ ಹೋಯೇಕು.
ಅಪ್ಪು, ಎಲ್ಲಾ ದಿಕ್ಕಂಗೂ ಹೋಯೇಕು ಹೇದು ಎಲ್ಲೋರಿಂಗೂ ಇದ್ದು, ಆದರೆ ಪುರುಸೊತ್ತು ಬಿಡೇಕೇ – ಹೇಳ್ತವು ಸುಳ್ಯದ ಕೇಸು ಭಟ್ರು!
ಅವು ಹೆರಟೋರಿಂಗೆ ಸುಳ್ಯಂದ ಹೆರಟು ಜಾಲ್ಸೂರಿಂಗೆತ್ತುವಾಗ ಎಂತದೋ ಅಂಬೆರ್ಪು ಬಂತಡ; ಮತ್ತೆ ಅವರ ಪಗರಕ್ಕೆ ಸುಭಗಣ್ಣನ ಕಳುಸಿದ್ದಾಡ.
ಅದಿರಳಿ.

ನವಗೆ ಮೊನ್ನೆಯೇ ಕುಕ್ಕಿಲ ಮಾವ° ಹೇಳಿತ್ತಿದ್ದವು, ಹೊಸ್ನಗ್ರಕ್ಕೆ ಹೋಪಲಿದ್ದು – ಹೇದು.
ಅಂಬಗಳೇ ಅತ್ಲಾಗಿ ಕೇಳಿದೆ – ಒಂದು ಸೀಟಿಕ್ಕೋ ಮಾವಾ°? – ಹೇದು.
ನೋಡುವೊ°, ಕೂಡೂರು ಮಾವನತ್ರೆ ಕೇಳಿ ಹೇಳ್ತೆ –ಹೇಳಿದವು.

ಕೂಡೂರು ಮಾವ, ಕುಕ್ಕಿಲಮಾವ° ಎಲ್ಲೋರುದೇ ಮದಲೇ ಚೆಂಙಾಯಿಗೊ.
ಹೀಂಗೆ ಒಟ್ಟಿಂಗೆ ಹೋಪ ಕ್ರಮ ಇದ್ದು. ಅವರ ಎಡಕ್ಕಿಲಿ ನವಗೆ ಬೇಕಪ್ಪದು ಒತ್ತೆ ಸೀಟು. ಸಿಕ್ಕದ್ದೆ ಇಕ್ಕೋ? ಸಿಕ್ಕಿತ್ತು.
ಹಾಂಗೆ, ಮೊನ್ನೆ ಅವರ ಒಟ್ಟಿಂಗೆ ಹೊಸನಗರಕ್ಕೆ ಹೋಪಲೆ ಅವಕಾಶ ಆತು.

ಆರಾಮಕ್ಕೆ ಹೋಗಿ ಚೆಂದಕ್ಕೆ ಬಂದಾತು. ದಾರಿ ಎಡಕ್ಕಿಲಿ ಎರಡು ಸರ್ತಿ ಚಾಯವೂ ಕುಡುದ್ದು.
ಕರಕ್ಕೋಂಡು ಹೋದೋರ ಪ್ರೀತಿ ಕಂಡು ಒಪ್ಪಣ್ಣಂಗೆ ತುಂಬಾ ಕೊಶಿ ಆಯಿದು. ಅದಿರಳಿ.

~

ನಾವು ಹೊಸನಗರಕ್ಕೆ ಎತ್ತಿ ನೋಡುವಾಗ ಎಡಪ್ಪಾಡಿ ಭಾವ ಎತ್ತಿ ಆಯಿದು!
ಆದರೆ ಅಂಬೆರ್ಪಿಪ್ಪ ಕಾರಣ ಮಾತಾಡ್ಳಾತಿಲ್ಲೆಡ. ಈಗ ಕಾಮದುಘಾದ ಎಂತದೋ ಜೆಬಾದಾರಿಕೆ ಇಪ್ಪ ಕಾರಣ ಕೆಲಸವೂ ಜಾಸ್ತಿ ಇದ್ದಾಡ.
ಊಟತಿಂಡಿ ಮಾಡ್ಳೇ ಅವಕ್ಕೆ ಪುರುಸೊತ್ತಿರ್ತಿಲ್ಲೆ – ಹೇದು ಎಡಪ್ಪಾಡಿ ಅಕ್ಕ ಪರಂಚುದು ಇದ್ದು ಒಂದೊಂದರಿ.
ಅದಿರಳಿ.

ಮಠದ ಎಲ್ಲಾ ಗೋಶಾಲೆಗಳ ಲೆಕ್ಕ, ಸಾಹಿತ್ಯಂಗಳ ಲೆಕ್ಕ, ಸಂಶೋಧನೆಯ ಲೆಕ್ಕ – ಇಡೀ ವ್ಯವಸ್ಥೆಯ ನಿಭಾಯಿಸುದರ್ಲಿ ಕಂಡಾಬಟ್ಟೆ ಬೆಶಿ ಇದಾ!
ಆ ಬೆಶಿಲಿಯೇ ಮೊನ್ನೆ ಇದ್ದದು.

ಅಪೂರ್ವ ಕಾರ್ಯಕ್ರಮಂಗೊ ಇದ್ದರೆ ವಿದ್ವಾನಣ್ಣಂಗೆ ಹೇಂಗಾರೂ ಅಂಬೆರ್ಪಿರ್ತು.
ಕಾರ್ಯಕ್ರಮದ ಸಮಗ್ರ ರೂಪುರೇಷೆ ಅವರದ್ದೇ ಇರ್ತಿದಾ; ಸಭಾಕಾರ್ಯಕ್ರಮವ ನಿರ್ವಹಣೆ ಮಾಡ್ತರಿಂದ ಹಿಡುದು, ಚೌಕಟ್ಟಿನ ಒರೆಂಗೆ.
ಹಾಂಗಾಗಿ, ಎಟ್ಟು ಗುರ್ತ ಇದ್ದರೂ ದೊಡ್ಡ ಕಾರ್ಯಕ್ರಮದ ಎಡಕ್ಕಿಲಿ ಅವರ ಮಾತಾಡ್ಸಿಕ್ಕಲೆಡಿಯ.

~

ಗುರುಗೊ ಪೂಜೆ ಮಾಡುದು. ಪೂಜಾಕ್ರಮ ಪರಮಗುರುಗೊ ಹೇಳಿಕೊಟ್ಟದು; ಅವಕ್ಕೆ ಅವರ ಗುರುಗೊ ಹೇಳಿದ್ದದಡ | ಅವಕ್ಕೆ ಅವರ ಗುರುಗೊ ಹೇಳಿದ್ದದಡ | ಅವಕ್ಕೆ ಅವರ ಗುರುಗೊ ಹೇಳಿದ್ದದಡ | ಅವಕ್ಕೆ ಅವರ ಗುರುಗೊ...
ಗುರುಗೊ ಪೂಜೆ ಮಾಡುದು. ಪೂಜಾಕ್ರಮ ಪರಮಗುರುಗೊ ಹೇಳಿಕೊಟ್ಟದಡ; ಅವಕ್ಕೆ ಅವರ ಗುರುಗೊ ಹೇಳಿದ್ದದಡ | ಅವಕ್ಕೆ ಅವರ ಗುರುಗೊ ಹೇಳಿದ್ದದಡ | ಅವಕ್ಕೆ ಅವರ ಗುರುಗೊ ಹೇಳಿದ್ದದಡ | ಅವಕ್ಕೆ ಅವರ ಗುರುಗೊ…

ಎಡಪ್ಪಾಡಿ ಭಾವಂಗೆ ಕಾಮದುಘಾ ವಿಷಯಲ್ಲಿ ತಲೆಬೆಶಿ. ಆದರೆ, ನವಗೆ ಎಂತ ತಲೆಬೆಶಿ?
ಉದಿಯಪ್ಪಗಾಣದ್ದಾತೋ, ಇನ್ನು ಮಜ್ಜಾನದ್ದರ ತಲೆಬೆಶಿ. ಅದಾತೋ – ಮತ್ತೆ ಹೊತ್ತೋಪಗಾಣ ತಲೆಬೆಶಿ. ಅದೂ ಆತೋ, ಮತ್ತೆ ಇರುಳಾಣದ್ದು! ಪೋ!!
ಹಾಂಗೆ ಒಂದಿಡೀ ದಿನ ಹೊಸನಗರ ಆವರಣಲ್ಲಿ ಇಪ್ಪಗ ಕಾರಣ ಸುಮಾರು ಜೆನರ ಹತ್ತರೆ ಮಾತಾಡ್ಳೂ ಅವಕಾಶ ಆತು. ಚೆಂಬರ್ಪು ಮಾವ, ಮಣಿಮುಂಡ ಶಾಸ್ತ್ರಿಗೊ, ಚಂಪಕದ ಅಣ್ಣ – ಹೀಂಗೇ ಸುಮಾರು ಜೆನ.

ಆದರೆ, ನವಗೆ ಮಾತಾಡ್ಲೆ ಸಿಕ್ಕಿದ್ದದು ಚೆಂಬರ್ಪಿನ ಮಾವನೇ ಇದಾ.
ಅವುದೇ ಅಂಬೆರ್ಪಿಲಿ ಇತ್ತಿದ್ದವು, ಆದರೆ ಅಂಬೆರ್ಪಿಲಿಯೂ ಒಂದು ಕುರ್ಶಿಲೇ ಕೂದುಗೊಂಡಿದ್ದ ಕಾರಣ ಮಾತಾಡ್ಳಾತು ಒಪ್ಪಣ್ಣಂಗೆ.
ಚೆಂಬಾರ್ಪು ಮಾವನ ಹತ್ತರೆ ಮಾತಾಡಿಗೊಂಡಿಪ್ಪದ್ದೇ – ಮೆಲ್ಲಂಗೆ “ಒಂದರಿ ನಮ್ಮ ಮಠದ ಜಾಗೆ ಇಡೀ ನೋಡಿಕ್ಕುವೊ” ಹೇಳಿದೆ.
ಚೆಂಬಾರ್ಪುಮಾವ ನೆಗೆಮಾಡಿಗೊಂಡೇ ಹೇಳಿದವು – ಹೊಸನಗರ ಮಠಲ್ಲಿಪ್ಪ ನೋಡೇಕಾದ ಜಾಗೆಗೊ ಎಂತೆಲ್ಲ ಹೇದು ಕಂಪ್ಯೂಟರ್ಲೇ ಕಾಣ್ತು ಈಗ – ಹೇದು.

“ಚೆಲ ಚೆಲಾ – ಇದೆಂತ ಕತೆ” ಹೇದು ಒಪ್ಪಣ್ಣಂಗೆ ಆಶ್ಚರ್ಯ ಆತು.

ಚೆಂಬರ್ಪು ಮಾವನ ಕೈಲಿ ಉದ್ದುತ್ತ ಸ್ಲೇಟು ಇದ್ದತ್ತಲ್ಲದೋ ಈಗಾಣ ನಮುನೆ ಕುಂಞಿಕಂಪ್ಯೂಟ್ರು; ಕರಿಬೇಗಿಂದ ಅದರ ತೆಗದವು, ಬೆರಳಿಲಿ ಅಡ್ಡ ನೀಟ ನಾಕು ಸರ್ತಿ ಉದ್ದಿಕ್ಕಿ ಹಸುರು ಪುಟ ಒಂದು ತೆಗದವು.
ಅದು ಹೊಸನಗರ ಜಾಗೆಯ ಪಟ ಆಡ, ಅದರ್ಲಿ ಅಲ್ಲಲ್ಲಿ – ಬೊಟ್ಟುಗೊ ಇದ್ದತ್ತು.
ಒಂದೊಂದನ್ನೇ ಒತ್ತಿರೆ ಅದಕ್ಕೆ ಸಮ್ಮಂದಪಟ್ಟ ಪುಟಂಗೊ ಪುಳುಕ್ಕನೆ ಎದ್ದು ಬಂದುಗೊಂಡಿತ್ತು.
ಮಹಾದ್ವಾರ, ಗೋಶಾಲೆ, ಮಠ, ಗುರುಕುಲ, ಆಚಾರ್ಯ ವನ – ಹೀಂಗಿರ್ತ ಹಲವಾರು ಸಂಗತಿಗೊ ಅದರ ನೋಡಿಂಡು ಹೋಪಾಗ ಗೊಂತಾತು.
ಚೆಂಬಾರ್ಪು ಮಾವ ಅದರ ಚೆಂದಕೆ ವಿವರ್ಸಿಗೊಂಡೂ ಹೋದವು. ಅದಿರಳಿ.

ಮುಂದೆ ಹೋದ ಹಾಂಗೇ ಮಠದ ಪುನರ್-ನಿರ್ಮಾಣ ಹೇದು ಬಪ್ಪದು ಕಂಡತ್ತು.
ಅಪ್ಪಡ, ಹೊಸನಗರಲ್ಲಿ ಮಠ ಪುನರ್-ನಿರ್ಮಾಣ ಆವುತ್ತಾಡ!

~

ಚೆಂಬಾರ್ಪುಮಾವನ ಕೈಲಿ ಕೇಳಿದೆ, ಪುನರ್-ನಿರ್ಮಾಣದ ಮೂಲ ಕಾರಣೀಭೂತ ಅಂಶಂಗೊ ಯೇವದೆಲ್ಲ? – ಹೇದು.
“ಅದೂ – ಒಪ್ಪಣ್ಣಾ ಹೊಸನಗರಲ್ಲಿ ನಮ್ಮ ಮಠ ಇದ್ದಲ್ಲದೋ – ಅದಕ್ಕೆ ಹಲವೂ ದೋಷಂಗೊ ಇದ್ದಾಡ” – ಹೇಯಿದವು.
ಒಂದ್ನೇದಾ ಗಿ, ವಾಸ್ತು ಲೆಕ್ಕಲ್ಲಿ ನೋಡಿರೆ ಅದು ಮೂಡಕ್ಕೆ ಇರ್ಸು ಆಗ್ನೇಯಕ್ಕೆ ಆಯಿದಾಡ.
ಮತ್ತೆ ಆ ಮಠಕ್ಕೆ ಹೊಕ್ಕಲಾಗದ್ದ ಜೀವಿ ಎಂತದೋ ಹೊಕ್ಕಿದ್ದಡ, ಹಾಂಗಾಗಿ ಇನ್ನು ಅಲ್ಲಿ ವಾಸ ಮಾಡುವ ಹಾಂಗೆ ಇಲ್ಲೇಡ.
ಮತ್ತೆ, ಆ ಮಠವೇ ಜೀರ್ಣ ಆಯಿದಾಡ, ಗೋಡೆಗೊ, ಮಾಡುಗೊ ಎಲ್ಲ ಶಿಥಿಲ ಆಗಿಂಡು ಬಯಿಂದಾಡ.
ಮತ್ತೆ, ಮಠ ಈಗ ಇಪ್ಪ ಜಾಗೆ ಆಗ್ನೇಯ ಮೂಲೆಲಿದ್ದಾಡ, ಅದರ ಮೂಡಕ್ಕೆ ತರೇಕಡ-
ಅವಿಚ್ಛಿನ್ನವಾಗಿ ಪೂಜೆ ಆದ ಶ್ರೀಮಠದ ದೇವರುಗಳ ಭದ್ರವಾಗಿ ಮಡುಗೇಕಾದ್ಸು ನಮ್ಮ ಕರ್ತವ್ಯ ಅಲ್ಲದೋ?
ಈ ಎಲ್ಲ ಕಾರಣಂಗಳಲ್ಲಿ, ಹೊಸನಗರಲ್ಲಿ ಮಠ ಹೊಸತ್ತು ಆಯೇಕು –ಚೆಂಬಾರ್ಪು ಮಾವ ಹೇಳಿದವು.

~

ಅವಿಚ್ಛಿನ್ನವಾಗಿ ಪೂಜೆಗೊಂಡ- ಎಂತರ ಹಾಂಗೇದರೆ?
ಅದೊಂದು ಅಪೂರ್ವ ಸಂಗತಿ. ಒಪ್ಪಣ್ಣಂಗೆ ಹೇಳುಸ್ಸು ಕೇಳಿ ಅಂದಾಜಿದ್ದರೂ- ಚೆಂಬಾರ್ಪು ಮಾವ ವಿವರ್ಸುವಾಗ ಸುಮ್ಮನೆ ಕೇಳಿಗೊಂಡು ಕೂದತ್ತು.
ಹೆರಿಯೋರು ಹೇಳುವಾಗ ಕೆಲವು ಹಿರಿ ವಿಷಯಂಗೊ ಬತ್ತಿದಾ, ಹಾಂಗಾಗಿ.

ವಿಚ್ಛಿನ್ನ – ಹೇದರೆ ತುಂಡು -ಹೇಳಿ ಅರ್ಥ.
ಅವಿಚ್ಛಿನ್ನ ಹೇಳಿರೆ ತುಂಡಾಗದ್ದದು.
ಯೇವದು ತುಂಡಾಗದ್ದದು? ಪರಂಪರೆ.
ಶಂಕರಾಚಾರ್ಯರಿಂದ ತೊಡಗಿ ಇಂದಿನ ಒರೆಂಗೂ ಆ ಪರಂಪರೆ ತುಂಡಾಯಿದಿಲ್ಲೆ.
ಯೇವ ಪರಂಪರೆ? ಅದೇ – ಶಿಷ್ಯ ಪರಂಪರೆ.
ಶಂಕರಾಚಾರ್ಯರಿಂದ ಮೊದಲ್ಗೊಂಡು ಮೂವತ್ತಾರ್ನೇ ಶಂಕರರಾದ ನಮ್ಮ ಗುರುಗಳ ಒರೆಂಗೆ – ಎಲ್ಲಾ ಗುರುಗಳುದೇ ಅವರ ಗುರುಗಳಿಂದೇ ನೇರವಾಗಿ ಯೋಗಪಟ್ಟಾಭಿಷೇಕ ಆದೋರು.

ಪ್ರತಿಯೊಬ್ಬರೂ ಅವರ ನೇರ ಗುರುಗಳ ಒಟ್ಟಿಂಗೇ ಇದ್ದಿದ್ದೋರು.
ಅವರ ಗುರುಗಳಿಂದ ಶಂಕರಾಚಾರ್ಯರ ಒರೆಂಗೂ ನೇರವಾದ ಸಂಕೊಲೆ ಇದ್ದು.
ಆಚಾರ್ಯ ಶಂಕರರಿಂದಲೇ ನೇರವಾಗಿ ಬಂದ ಎಷ್ಟೋ ಸಂಗತಿಗೊ ಇಂದಿಂಗೂ ನಮ್ಮ ಗುರುಪೀಠಲ್ಲೇ ಗೌಪ್ಯವಾಗಿ, ಭದ್ರವಾಗಿ ಒಳ್ಕೊಂಡಿದು.
ಹಾಂಗಾಗಿಯೇ, ಆ ಅವಿಚ್ಛಿನ್ನ ಪರಂಪರೆ ಹೇದರೆ “ಚಿನ್ನ” ಹೇಳಿದವು ನೆಗೆಮಾಡಿಗೊಂಡು.

ಗುರುಗೊ ಪೂಜೆ ಮಾಡ್ತವು. ಪೂಜೆ ಆರಿಂಗೆ?
ಮಠದ ಆರಾಧ್ಯ ದೇವರಾದ ಸೀತಾರಾಮಚಂದ್ರ, ಚಂದ್ರಮೌಳೀಶ್ವರ, ರಾಜರಾಜೇಶ್ವರೀ – ದೇವರಿಂಗೆ.
ದಿನಕ್ಕೆ ಎರಡು ಪೂಜೆ.
ಶಿಲಾ ಭವತಿ ಶಂಕರಃ – ಹೇಳ್ತವು ಹೆರಿಯೋರು; ಹಾಂಗಾರೆ ಶಂಕರರಿಂದಲೇ ಪೂಜೆ ಮಾಡಿದ ಶಿಲೆಗೆ ಎಷ್ಟು ಶೆಗ್ತಿ ಬಂದಿಕ್ಕು?
ಸಾಕ್ಷಾತ್ ಆ ಕೈಲಾಸವಾಸಿ ಶಂಕರರಷ್ಟೇ ಶೆಗ್ತಿ ಬಂದಿಕ್ಕು, ಅಲ್ಲದೋ?

ಮಾಂತ್ರ ಅಲ್ಲ, ಮಠಕ್ಕೆ ಸಮ್ಮಂದ ಪಟ್ಟ ಕೆಲವು ಸಂಗತಿಗೊ, ಕೆಲವು ಆರಾಧನೆಗೊ, ಪೀಠದ ಮಹತ್ವ, ಅಮುಕ್ತ ವಿಷಯಂಗೊ, ಆಡಳಿತಾತ್ಮಕ ಶುದ್ದಿಗೊ, ಶಿಷ್ಯಭಾವಂಗೊ, ಆಧ್ಯಾತ್ಮಿಕ-ಆದಿ ಭೌತಿಕ ವಿಷಯಂಗೊ, ಕೆಲವು ಮಂತ್ರಂಗೊ, ವಿಶೇಷ ಜೆಪಂಗೊ – ಇದೆಲ್ಲವೂ ಗುರುಗಳಿಂದ ಇಳುದು ಶಿಷ್ಯರಿಂಗೆ ಬತ್ತು.

ತನ್ನಂದಲೇ ಆಯ್ಕೆ ಆದ ಶಿಷ್ಯರಿಂಗೆ, ಪಟ್ಟದ ಶಿಷ್ಯರಿಂಗೆ ಮಾಂತ್ರ ಹೇಳಿಕೊಡುವ ಎಷ್ಟೋ ಸಂಗತಿಗೊ ಇಕ್ಕು.
ಇದೆಲ್ಲವೂ – ಶಂಕರಾಚಾರ್ಯರಿಂದ ಈಗಾಣ ಶಂಕರರ ಒರೆಂಗೆ ಹರುದು ಬಯಿಂದು ನಮ್ಮ ಮಠದ ಪರಂಪರೆಲಿ.
ಪರಮ ಗುರುಗಳಿಂದ ಗುರುಗೊಕ್ಕೆ, ಗುರುಗಳಿಂದ ಶಿಷ್ಯಗುರುಗೊಕ್ಕೆ – ಹೀಂಗೇ ಬಯಿಂದು.
ಆ ತಂತು ಎಲ್ಲಿಯೂ ಕಡುದ್ದಿಲ್ಲೆ.
ಹಾಂಗಾಗಿ ಶಂಕರಾಚಾರ್ಯರಿಂದಲೇ ನೇರವಾಗಿ ಇಂದಿನ ಒರೆಂಗೂ ಬಯಿಂದು – ಹೇಳ್ತದು ನಮ್ಮ ಮಠದ ಹೆರಿಮೆ ಒಪ್ಪಣ್ಣಾ – ಹೇದವು ಚೆಂಬಾರ್ಪು ಮಾವ.

~

ಶಂಕರಾಚಾರ್ಯರೇ ಕೊಟ್ಟ ದೇವರ ವಿಗ್ರಹಂಗೊ. ಶಂಕರಾಚಾರ್ಯರೇ ಹಸ್ತಾಂತರಿಸಿದ ಶಿವಲಿಂಗ, ಶಾಲಿಗ್ರಾಮ, ಗಣಪತಿ ಶಿಲೆಗೊ.
ಶಂಕರಾಚಾರ್ಯರೇ ನಿಘಂಟು ಮಾಡಿದ ಪೂಜಾ ಪದ್ಧತಿ. ಶಂಕರಾಚಾರ್ಯರೇ ಒದಗುಸಿದ ರೀತಿನೀತಿಗೊ.

ಎಲ್ಲವೂ ಅಲ್ಲಿಂದಲೇ ಹರುದು ಬಂದದು ನಮ್ಮ ಸೌಭಾಗ್ಯ.

ಮಠಂಗೊ ಕಾಲಕಾಲಲ್ಲಿ ಸ್ಥಳಾಂತರ ಆಗಿಕ್ಕು, ಆದರೆ ಅದರ ಸತ್ವ, ಹೆರಿಮೆ, ಮೌಲ್ಯ ಹಾಂಗೇ ಒಟ್ಟಿಂಗೆ ಬತ್ತು.
ನಮ್ಮ ಮಠವೂ ಹಾಂಗೇ.
ಪ್ರತಿಷ್ಠೆ ಆದ್ಸು ಗೋಕರ್ಣಲ್ಲಿ, ಬೆಳದ್ದು ಅಶೋಕೆಲಿ, ವಲಸೆ ಆದ್ಸು ಕೆಕ್ಕಾರಿಲಿ, ಆಶ್ರಯ ಸಿಕ್ಕಿದ್ದು ನಗರಲ್ಲಿ, ಅಲ್ಲಿಂದ ಬಂದು ಬೆಳಗಿದ್ದು ಹೊಸನಗರಲ್ಲಿ! ಗುರುಪೀಠ ಎಲ್ಲೆಲ್ಲ ಹೋಯಿದೋ ಅದೆಲ್ಲದರ ಒಟ್ಟಿಂಗೆ ಪೀಠದ ಸಮಗ್ರ ವಿಷಯಂಗಳೂ ಬಯಿಂದು.

ಅಂತಾ ಅಮೂಲ್ಯ ವಿಷಯಂಗಳ ಒಳುಶಿಗೊಂಡು, ರಕ್ಷಿಸಿಗೊಂಡು ಬಂದ ಗುರುಪೀಠವ ಮೆಚ್ಚಲೇಬೇಕು.

~

ಕಾರ್ಯಕ್ರಮ ಸುರು ಆತು, ವಿದ್ವಾನಣ್ಣ – ಕೆದಿಲಾಯ ಮಾವ ಎಲ್ಲೋರುದೇ ಸೇರಿ ಚೆಂದಗಾಣುಸಿ ಕೊಟ್ಟವು.
ಅದಾಗಿ ಶ್ರೀಗುರುಗಳಿಂದ ಉದ್ಘೋಷಣೆ – ಹೇದವು ಕಾರ್ಯಕ್ರಮ ನಿರೂಪಣೆಲಿ.
ಎಂತರ ಉದ್ಘೋಷಣೆ? – ನಮ್ಮ ಹೊಸನಗರ ಮಠದ ಪುನರ್-ನಿರ್ಮಾಣ.

~

ಹೊಸನಗರಲ್ಲಿಪ್ಪ ಮಠ ಈಗಾಣ ವ್ಯವಸ್ಥೆಲಿ ತುಂಬಾ ಜೀರ್ಣ ಆಗಿದ್ದು; ವಾಸ ಇಪ್ಪಲೆ ಯೋಗ್ಯವೂ ಅಲ್ಲ – ಹೇಳುವ ಲೆಕ್ಕಲ್ಲಿ, ಮಠದ ಹೊಸ ಕಟ್ಟೋಣವ ರೂಪುರೇಷೆ ತಂದು, ಅಷ್ಟಮಂಗಳ ಮಡಗಿ ನೋಡಿದವಾಡ.
ಪ್ರಶ್ನೆಲಿ ಕಂಡ ಲೆಕ್ಕಲ್ಲಿ ಪೂರ್ವದ ಹೊಡೆಲಿ ಎತ್ತರಕ್ಕೆ ವಾಸ್ತುಬದ್ಧವಾಗಿ ಚೆಂದಕೆ ಕಟ್ಟುತ್ತದಕ್ಕೆ ಸಂಪೂರ್ಣ ಒಲುದು ಬಂತಾಡ.

ಆ ಪ್ರಕಾರವಾಗಿ ಪುನರ್ ನಿರ್ಮಾಣ ಕಾರ್ಯ ಆರಂಭ ಅಪ್ಪದು – ಹೇಳುವ ಸಂಗತಿಗೊ ಗುರುಗಳ ಆಶೀರ್ವಚನಲ್ಲಿ ತಿಳುದು ಬಂತು.

~

ಅವಿಚ್ಛಿನ್ನ ಪರಂಪರೆಯ ಗುರುಗೊ ನವಗೆ ಬೇಕಾಗಿ ಒಳುಶಿಗೊಂಡು ಬಯಿಂದವು.
ಈಗ ನಾವು ಎಲ್ಲೋರುದೇ ಸೇರಿ ಮಠವ ಒಳುಶೇಕಾಯಿದು.
ಹೊಸನಗರಲ್ಲಿ ಚೆಂದದ ಮಠವ ಕಟ್ಟಿ ಬೆಳಗುಲೆ ನಾವೆಲ್ಲೋರುದೇ ಸೇರುವೊ. ಅದಾದ ಮತ್ತೆ ಆ ಮಠ ನವಗೇ ಇಪ್ಪ ಕಾರಣ, ನಮ್ಮ ಸ್ವಂತ ಆಸ್ತಿಯ ಹಾಂಗೇ ಜಾಗ್ರತೆಲಿ ಬೆಳಗುಸುವೊ.
ಅವಿಚ್ಛಿನ್ನ ಪರಂಪರೆಯ ಶ್ರೇಷ್ಠತೆಯ ಎತ್ತಿಹಿಡಿವೊ. ಆ ಪರಂಪರೆಲಿ ಬಂದ ಗುರುಪೀಠ – ದೇವರುಗಳ ಭದ್ರವಾದ ಮಠಲ್ಲಿ ಒಳುಶಿಗೊಂಬೊ.

ಎಂತ ಹೇಳ್ತಿ?

~

ಒಂದೊಪ್ಪ: ಸಮಾಜ ಮಠವ ಕಟ್ಟಿರೆ, ಮಠ ಸಮಾಜವ ಕಟ್ಟುತ್ತು.

16 thoughts on “ಅವಿಚ್ಛಿನ್ನ ಪರಂಪರೆಯೂ, ಚಿನ್ನದಂಥಾ ಸಂಗತಿಗಳೂ..

  1. ಅವಿಚ್ಛಿನ್ನ ಪರಂಪರೆಯ ಗುರುಮಠದ, ಚಿನ್ನದಂಥಾ ಸಂಗತಿಗಳ ತಿಳುಸಿಕೊಟ್ಟ ಒಪ್ಪಣ್ಣಂಗೆ ಧನ್ಯವಾದ. ಚೆಂಬಾರ್ಪು ಮಾವ ತಿಳುಸಿದ ವಿಷಯ ಕೇಳಿ ಆಶ್ಚರ್ಯ ಆತು.

    1. ಶ್ರೀಗುರುಗಳ ವಚನ ಮಂತ್ರಾಕ್ಷತೆ ಒಪ್ಪಣ್ಣಂಗೆ /ಬೈಲಿಂಗೆ ಸಿಕ್ಕಿದ್ದು ಕೇಳಿ ತುಂಬಾ ಕೊಶಿ ಆತು. ಧನ್ಯೋಸ್ಮಿ.

  2. ಓಹ್.. ವರದಿ ಭಾರೀ ಲಾಯಿಕಾಯಿದು.
    “ಮೊದಲು ನಾವು ಮನಸನ್ನು ಕಟ್ಟುವ ಕೆಲಸ ಮಾಡಿದೆವು.
    ಇನ್ನು ಮಠವನ್ನು ಕಟ್ಟುವ ಕೆಲಸ ಮಾಡುವೆವು.
    ಇವೆರಡೂ ಶಾಶ್ವತ ಕೆಲಸ.”…… ಶ್ರೀಗುರುಗಳು ಆ ದಿನ ಆಶೀರ್ವಚನದಲ್ಲಿ ಹೇಳಿದ್ದು

    ಒಪ್ಪಣ್ಣ೦ಗೆ ಸಿಕ್ಕಿದ ಮ೦ತ್ರಾಕ್ಷತೆ ಇಡೀ ಬೈಲಿ೦ಗೇ ಎತ್ತಿತ್ತು.
    ಖುಷೀ ಆತು.
    ಹರೇ ರಾಮ

  3. ಬೈಲಿಗೆ ಸಂಸ್ಥಾನ ಆಶೀರ್ವಾದ ಮಾಡಿದ ಮೇಲೆ ಗುರುಗಳ ಯೋಜನೆಗೆ ಬೈಲು ಸೇರದ್ದೆ ಇಕ್ಕೋ? ಸಂಶಯ ಇಲ್ಲೆ ಗುರುಗಳ ಆಶೀರ್ವಾದ ಇದ್ದರೆ ಸಮಾಜವೆ ಕೈ ಜೋಡುಸುಗು..ನಾವೂ ಸೇರಿಕೊಂಬ..ಹರೇ ರಾಮ

  4. ಹರೇ ರಾಮ,
    ಎಳ್ಳಿಯಡ್ಕ, ಇಲ್ಲಿಯೂ ಸಂಸ್ಥಾನದ ಅನನ್ಯ ಆಶೀರ್ವಾದ ಪಡೆದ ನೀ ಧನ್ಯ,
    ಅಪ್ಪು ಒಪ್ಪಣ್ಣ, ಭಾಳ ಚೆಲೋ ಆಜು. ಸಮಾದಲ್ಲಿ ಬಹಳಷ್ಟು ಜೆನಕ್ಕೆ ಹಿರಿಮೆ ಮಹಾತ್ಮ್ಯೆಗಳೇ ಗೊತ್ತಿಲ್ಲೆ. ಅವಿಚ್ಛಿನ್ನವಾಗಿ ದ್ವಿಸಂಧ್ಯಾಕಾಲದಲ್ಲೂ ಶಂಕರರಾದಿಯಾಗಿ ಪೂರ್ವಯತಿಗಳೆಲ್ಲ ಪೂಜೆ ಮಡ್ತಾ ಬಂದಿಪ್ಪ ದೇವತಾ ಸನ್ನಿಧ್ಯಕ್ಕೆ ಇಪ್ಪ ಶಕ್ತಿಯ ಅಂದಾಜೇ ಮಾಡುಲೆ ಆಗ್ತಿಲ್ಲೆ. ಕೆಲವರು ಕಾಲ್ಬುಡಕೇ ಕತ್ತಲೆ ಇಟ್ಗಂಡಿದ್ದ. ಅವಕ್ಕೆ ಬೆಳಕು ಕಾಣಲಿ ಹೇಳಿ ಹಂಬಲಮಾಡ್ಕಂಬ.

  5. 8-12-2013 ರಂದು ಬೆಂಗಳೂರಿಲ್ಲಿ ಆಶೀರ್ವಚನ ಮಾಡ್ತಾ ಗುರುಗೊ “ಅಶೋಕೆಯ ಮೂಲ ಮಠ ನಮಗೆ ತಾಯಿಬೇರು ಇದ್ದ ಹಾಂಗೆ. ಅದರ ಜೀರ್ಣೋದ್ಧಾರ ಕೆಲಸವಾದರೆ, ನಮ್ಮ ಸಮಾಜದ ಪುನರುತ್ಥಾನ ಅಕ್ಕು.” ಹೇಳಿದ್ದವು. ಹಾಂಗಾಗಿ ನಾವೆಲ್ಲರೂ ಅಶೋಕೆಯ ಮೂಲ ಮಠದ ದೇಣಿಗೆಯ ಸಂಗ್ರಹಕ್ಕೆ ಪ್ರಯತ್ನ ಮಾದುವೊ. ಹರೇ ರಾಮ.

  6. ಪ್ರಸ್ತುತಿ ತುಂಬಾ ಲಾಯಿಕಾಯಿದು. chs ಮಾವಂಗೆ ಮೂಗಿನ ಮೇಲೆ ಬೆರಳು ಮಡುಗುವಷ್ಟು ಲಾಯಕಿನ ಸತ್ಯಾಧಾರಿತ ಕಲ್ಪನೆಗೋ – ಮತ್ತು ಪ್ರಸ್ತುತಿ. ತುಂಬಾ ಖುಷಿ ಆತು. ಒಳ್ಳೇದಾಗಲಿ. ಹರೇರಾಮ.

  7. ಒಪ್ಪಣ್ಣಾ,
    ಇ0ದ್ರಾಣ ವಿಷಯ0ಗಳ ತೋರಣ ಕ0ಡಪ್ಪಗ,
    ನಿ0ಗಳ ಸಾಧನೆ,
    ಬೈಲ-ಬಲಭೀಮ, ಕುತ್ತ ತಲೆ ಮೇಲೆ ಗದೆ ಹಾರಿಸಿ,
    ಸಾನಿಧ್ಯವ ದರುಶನ ಮಾಡಿಸಿದ ಹಾ0ಗೆ ಆತು.
    ಉಘೇ.ಉಘೇ.

  8. HarEraama, indraaNa oppakke Atmeeyate maantra alla bhaya-bhakti yoo sEruttu. kaaraNa namma parama poojya guru gaLoo idaakke akshara roopalli harasiddavu.
    ondaari shreegurugo akshate kaaLina viShayalli hELuvaaga shankaraachaarya peeTada bagge , avichhinna parampare viShayavannoo hELiddavu.
    ideega Odekkaada oppakoDekaada suddi

  9. ಕಲ್ಪನೆಯ ಕಣ್ಣಿಲಿ ಆರಾಧನೆಯ ನೋಡಿ, ಅಕ್ಷರಂಗಳ ದ್ವಾರಾ ನಮ್ಮ ಸಿರಿ ಮಠವ ಆರಾಧಿಸುವ ಒಪ್ಪಣ್ಣನ ಕಾಂಬಗ ಇವನ ತಲಗೆ ಅನಂತ ಆಶೀರ್ಮಂತ್ರಾಕ್ಷತೆಗಳ ಧಾರೆ ಎರೆಯೆಕ್ಕು ಹೇಳಿಯಾತು!

    1. ಹರೇರಾಮ ಸಂಸ್ಥಾನ.
      ಶ್ರೀಚರಣಂಗಳಲ್ಲಿ ಮನಸಾ ನಮನಂಗೊ.

      ಅವಿಚ್ಛಿನ್ನ ಗುರುಪರಂಪರೆ, ಭವ್ಯಮಠದ ಬಗ್ಗೆ ಒಪ್ಪಣ್ಣನ ಅವಿಚ್ಛಿನ್ನ ಶುದ್ದಿಮಾಲಿಕೆಲಿ ಬರದ ಶುದ್ದಿಗೆ ಶ್ರೀಗುರುಗಳ ಒಪ್ಪಾಶೀರ್ವಾದಕ್ಕೆ ಕೋಟಿ ನಮನಂಗೊ.

      ನಮ್ಮ ಶ್ರೀಪೀಠದ ಪರಂಪರೆಯ ಅರಿತವಂಗೆ, ಒಳ ಹೊಕ್ಕವನ ಹೃದಯಲ್ಲಿ ಎಲ್ಲಾ ವಿಷಯಂಗಳೂ ಅಚ್ಚೊತ್ತುತ್ತು. ಅದು ಯಾವ ಊರಿಲಿ ಇದ್ದರೂ ಒಳಮನಸ್ಸಿಂಗೆ ಮಠಲ್ಲಿ ನೆಡವ ಕಾರ್ಯಗೋಚರ ಆವುತ್ತು. ಶ್ರೀಗುರುಗಳ ದಿವ್ಯ ಆಶೀರ್ವಾದ ಅದು. ಒಪ್ಪಣ್ಣ ಹೇಳಿದ ಹಾಂಗೆ ಎಲ್ಲಿಯೇ ಹೋದರೂ ಗುರುಮಠ ಕಾಲಕಾಲಕ್ಕೆ ಸಂಬಂಧಪಟ್ಟ ಹಾಂಗೆ ಬೇರೆಬೇರೆ ದಿಕ್ಕೆ ಬೆಳಗಿದರೂ, ಎಲ್ಲಾ ದಿಕ್ಕಿಲಿಯೂ ಮೂಲಂದ ಬಂದ ಎಲ್ಲ ಅಂಶವನ್ನೂ ಮಡಿಕ್ಕೊಂಡು ಬೆಳಗಿಗೊಂಡೇ ಇಪ್ಪದು ನಮ್ಮ ಪೀಠಾರೂಢರಾದ ತಪಸ್ವೀಗುರುಗಳ ಕಾರಣಂದ. ಈ ಎಲ್ಲ ಗುರುಗಳ ಪರಂಪರೆಯ ಆಶೀರ್ವಾದ ಸಮಾಜದ ಎಲ್ಲಾ ಶಿಷ್ಯರ ಮೇಲೆ ಇದ್ದುಗೊಂಡು ಶ್ರೀಮಠದ ಪುನರುತ್ಥಾನಲ್ಲಿ ಎಲ್ಲೋರೂ ಅವರವರ ಶಕ್ತಿ ತೊಡಗಿಸಿ, ಎಲ್ಲೊರೂ ಸೇರಿಗೊಂಡು ಮಠವ ಕಟ್ಟಲಿ..
      ಒಪ್ಪಣ್ಣನ ಮೇಲೆ ಸುರಿಸುವ ಅನಂತ ಆಶೀರ್ಮಂತ್ರಾಕ್ಷತೆ ಅವಂಗೆ ಯಾವಾಗಲೂ ಅನಂತಶುದ್ದಿಗಳ ಬೈಲಿಂಗೆ ಹೇಳುವ ಶೆಗ್ತಿ ಕೊಡಲಿ.. ಶ್ರೀಸಂಸ್ಥಾನದ ಆಶೀರ್ವಾದ ಅವನ ಮೇಲೆ, ಬೈಲಿನ ಎಲ್ಲೋರ ಮೇಲೆ ಸದಾ ಇರಲಿ..
      ಶ್ರೀಸಂಸ್ಥಾನಕ್ಕೆ ಮನಸಾ ನಮನಂಗೊ.
      ಹರೇರಾಮ.

      ಪೀಠದ ಶಿಷ್ಯೆ,
      ಶ್ರೀ..

  10. ಇಷ್ಟು ಶುದ್ದಿ ಓದಿಕ್ಕಿ ಇನ್ನು ಹೇಳ್ಳೆ ಇಪ್ಪದು – ‘ಹರೇ ರಾಮ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×