ಬದ್ಧತೆಯ ಬದುಕು ಬದ್ಧಂದಲೇ ಆರಂಭ..

September 25, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಾಂಗೂ ಹೀಂಗೂ ಚೌತಿ ಗೌಜಿ ಕಳಾತು. ಕೋಣಮ್ಮೆ ಬಟ್ಟಮಾವನ ಹಾಂಗಿರ್ತ ಹಳಬ್ಬರು ಭಕ್ತಿ ಶ್ರದ್ಧೆಲಿ ಗೆಣವತಿ ಹೋಮ ಮಾಡಿದ್ದೂ ಆತು,
ದೊಡ್ಡ ಪೇಟೆಗಳಲ್ಲಿ ನಾನಾ ನಮುನೆ ಗೆಣವತಿ ಮೂರ್ತಿಗಳ ಮಡಗಿದ್ದೂ ಆತು,
ನಿನ್ನೆ ಮೊನ್ನೆ ಆಗಿ ನೀರಿಂಗೆ ಇಳುಸಿಯೂ ಆತು.
ಪ್ರತಿಷ್ಟೆ ಮಾಡಿ ಪೂಜೆ ಮಾಡಿದ ಜೆನಂಗಳೇ ನೀರಿಂಗೆ – ಸಮಯ ಮುಗುದಪ್ಪದ್ದೇ – ನೀರಿಂಗೆ ಇಳುಶುತ್ತವಪ್ಪೋ – ಹೇದು ಟೀಕೆಮಾವ ಟೀಕೆಮಾಡಿದ್ದೂ ಆತು.
ಅದಿರಳಿ.
~
ಪಂಚಾಂಗಲ್ಲಿ ಶುಭಕಾಲ ಬಂತು ಹೇದರೆ ಬೈಲಿಲಿ ಶುಭ ಜೆಂಬ್ರಂಗೊ ಸುರು ಆತು ಹೇದು ಲೆಕ್ಕ. ಬಟ್ಟಮಾವಂದ್ರಿಂಗೆ ಹಿಡುದು, ಕೆಮರದಣ್ಣಂದ್ರ ವರೆಗೆ ಎಲ್ಲೋರಿಂಗೂ ಪುರುಸೊತ್ತಿಲ್ಲೆ. ಪೋನು ಬಂದರೆ ಮಾತಾಡ್ಳೂ ಪುರುಸೊತ್ತಿಲ್ಲೆ. ಬೈಕ್ಕಿಲಿ ಹೋಗಿಂಡು ಇಪ್ಪಗ ಅಲ್ಲಿಂದಲೇ ಕೈ ನೆಗ್ಗಿ ಮಾತಾಡ್ಸಿ ಮುಂದೆ ಹೋಪಷ್ಟು ಅಂಬೆರ್ಪು!
ಆಯೆಕ್ಕನ್ನೇ ಎಲ್ಲ ದಿಕ್ಕಂಗೂ ಏರ್ಪಾಡುಗೊ!
ಅದಿರಳಿ.

ಮಾತಾಡಿಗೊಂಡು ಇಪ್ಪ ಹಾಂಗೇ ಬೈಲಿನ ಒಳ ಒಂದು ಜೆಂಬ್ರ ಎದ್ದತ್ತಿದಾ.
ಮಾಷ್ಟ್ರುಮಾವನಲ್ಲಿ, ಅವರ ಕೊಂಡಾಟದ ಮಗಳ ಜೆಂಬ್ರ ಅದು.
ಓ ಅತ್ಲಾಗಿ ಉಪ್ರಂಗಡಿ ಹೊಡೆಂಗೆ ಕೊಡುಸ್ಸಡ, ಹಾಂಗೆ ಬಪ್ಪ ಆಯಿತ್ಯವಾರ ಬದ್ಧ – ಹೇದು ಅಂದೇ ಹೇಳಿಕೆ ಹೇಳಿತ್ತಿದ್ದವು.
ಮೊನ್ನೆ ಮೊನ್ನೆ ಬುತ್ತಿಚೀಲ ಹಿಡ್ಕೊಂಡು ಪ್ರೈಮರಿ ಶಾಲೆಗೆ ನೆಡಕ್ಕೊಂಡು ಹೋಗಿಂಡು ಇದ್ದಿದ್ದ ಕೂಸು – ಈಗ ಜೆಂಬ್ರ ಏಳುಸುವಷ್ಟು – ಹ್ಹೋ – ಹ್ಹು; ಮಕ್ಕೊಗೊ ಪ್ರಾಯ ಬೆಳೆಸ್ಸು ಗೊಂತೇ ಆವುತ್ತಿಲ್ಲೆ – ಹೇದು ರಂಗಮಾವ ಒಂದೊಂದರಿ ಹೇಳುಸ್ಸು ಅಂತೆ ಅಲ್ಲ.
ಆಗಲಿ, ಬದ್ಧಕ್ಕೆ ಹೋಯೇಕು, ಸುಧಾರಿಕೆ ಆಯೇಕು – ಪಾಯಿಸ ತಿನ್ನೇಕು. ಇದಿಷ್ಟು ಸದ್ಯಕ್ಕೆ ಇಪ್ಪ ಏರ್ಪಾಡುಗೊ.
~

ಬದ್ಧ.
ಮದುವೆ ನಿಶ್ಚಿತಾರ್ಥಕ್ಕೆ ನಮ್ಮ ಭಾಶೆಲಿ ಹಾಂಗೆ ಹೇಳುಸ್ಸು.
ಆ ಜೆಂಬ್ರಕ್ಕೆ ನಮ್ಮ ಭಾಶೆಲಿ ಕಂದುಬಪ್ಪ – ಪ್ರಯೋಗಲ್ಲಿಪ್ಪ ಶಬ್ದ.
ಅದು ಎಷ್ಟೊಳ್ಳೆ ಸೂಕ್ತ ಶಬ್ದ ಹೇದರೆ – ಗಾಡವಾದ ಅರ್ತ ಇದ್ದಾಡ, ಸಂಸ್ಕೃತಲ್ಲಿ. ಒಳಪ್ಪಟ್ಟದು, ಸಂಬಂಧಿಸಿದ್ದು, ಹೊಂದಿಗೊಂಡದು – ಇತ್ಯಾದಿ ಅರ್ತಂಗೊ ಬತ್ತು.
ಆ ಶಬ್ದಕ್ಕೆ ಇಪ್ಪ ಅಷ್ಟೂ ಅರ್ತಂಗಳೂ – ಆ ಜೆಂಬ್ರಕ್ಕೆ ಹೊಂದಿಗೊಳ್ತು.

ವಧೂ ವರರು ಸಂಸಾರ ಜೀವನಕ್ಕೆ ಬದ್ಧರಪ್ಪ ದಿನ ಅದು.
ಚತುರ್ವಿಧ ಫಲಪುರುಶಾರ್ಥ ಸಿದ್ಧಿಗಾಗಿ ಸಾಂಸಾರಿಕ ಜೀವನಕ್ಕೆ ಒಪ್ಪಿಗೊಂಬ ದಿನ ಅದು.
ಕೌಮಾರ್ಯ ಜೀವನಂದ ಗ್ರಾಹಸ್ಥ್ಯಕ್ಕೆ ಕಾಲು ಮಡಗುವ ದಿನ ಅದು.
ಹೊಸ ನೆಂಟ್ರುಗೊ ಸಂಬಂಧಿಕರಪ್ಪ ದಿನ ಅದು.
ತಾಂಬೂಲ ಪಗರ್ಸಿ ಕೂಸು ಕೊಟ್ಟು-ತಪ್ಪ ಒಪ್ಪಂದ ಅಪ್ಪ ದಿನ ಅದು.
ಒಂದು ಹೊಸ ಯುಗ ಆರಂಭ ಅಪ್ಪ ದಿನ ಅದು.
ಎಶ್ಟೋ ಕಾಲಂದ ಇದು ನೆಡಕ್ಕೊಂಡು ಬತ್ತಾ ಇದ್ದು.

ಒಂದು ದೀಪ ಇನ್ನೊಂದರ ಬೆಳಗುಸುವ ಹಾಂಗೆ – ಒಂದು ಮನೆಲಿ ಹುಟ್ಟಿ, ಓಡಾಡಿ, ಬೆಳದು, ಸಂಸ್ಕಾರ ಕಲ್ತು ದೊಡ್ಡಾದ ಕೂಸು – ಯೇವದೋ ಹೊಸ ಮನೆಗೆ, ಹೊಸ ಬದುಕಿಂಗೆ ಬದ್ಧ ಅಪ್ಪದು.
ಹೊಸ ಜೀವನ ಆರಂಭ ಮಾಡುದು.
ಹುಟ್ಟಿ ಬೆಳದ ಅಪ್ಪನ ಮನೆಯ ಬಿಟ್ಟು ದೂರ ಹೋಗಿ ತನ್ನದೇ ಮನೆಯ ಕಟ್ಟುದು.
ಅಪ್ಪನ ಮನೆಯ ಸಂಸಾರ ಬಳ್ಳಿಯ ಬೆಳೆಶಿ ಮುಂದುವರುಸುದು.
ಹೊಸ ತಲೆಮಾರಿನ ಆರಂಭ ಮಾಡುದು.
ಬದ್ಧ – ಹೇದರೆ ಇಷ್ಟೂ ವಿಶಯಂಗಳ ಆರಂಭ.

ಅಂದೊಂದರಿ ಅರ್ತಿಕಜೆ ಅಜ್ಜ ಹೇಳಿದ ಹಾಂಗೆ – ಬದ್ಧತೆ, ಬುದ್ಧತೆ, ಸಿದ್ಧತೆ – ಮೂರೂ ವಿಶಯಂಗೊ ಇಲ್ಲಿ ಕಾಂಗು.
ಬದ್ಧತೆ – ಹೇದರೆ ಸಾಂಸಾರಿಕ ಬದ್ಧತೆ. ಸಂಸಾರ ಬೆಳೆಶುವ ಬದ್ಧತೆ.
ಬುದ್ಧತೆ – ಹೇದರೆ ಸಂಸಾರ ಕಟ್ಟುವ ಪ್ರಬುದ್ಧತೆ.
ಸಿದ್ಧತೆ – ಹೇದರೆ ಸಂಸಾರ ನೆಡೆಶಲೆ ಇಪ್ಪ ತನು-ಮನ-ಧನದ ಸಿದ್ಧತೆ.
ಇದೆಲ್ಲವನ್ನೂ ನಾವು ಬದ್ಧದ ಆಸುಪಾಸಿಲಿ ಕಾಣ್ತು.

ಕ್ರಮಪ್ರಕಾರ ಬದ್ಧ ಮಾಡಿರೆ ಅದುವೇ ಸಂಸಾರಕ್ಕೆ ಭದ್ರ ಬುನಾಧಿ. ಅದಲ್ಲದ್ದೇ ಹೋದರೆ – ಅದು ಅಪದ್ಧ ಅಕ್ಕಷ್ಟೆ.
~
ನಾಡ್ತು ನೆಡವ ಬದ್ಧದ ಕಾರ್ಯಕ್ರಮವೂ, ಮುಂದಾಣ ಜೀವನವೂ ಚೆಂದಕೆ ನೆಡೆಯಲಿ – ಹೇಳ್ತ ಹಾರೈಕೆ ಬೈಲ ಬಂಧುಗಳದ್ದು.
~
ಒಂದೊಪ್ಪ: ಬದ್ಧ ನೆರವೇರಿರೆ ಸಂಸಾರ ಸುಂದರ. ಅದಲ್ಲದ್ದರೆ ಜೀವನವೇ ಅಸಂ-ಬದ್ಧ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಬದ್ಧದ ಬಗೆಲಿ ಪ್ರಬುದ್ಧವಾದ ಒಪ್ಪಣ್ಣನ ಶುದ್ದಿ ಓದಿ ಕೊಶಿಯಾತು. ಕಡೇಣ ಒಂದೊಪ್ಪ, ಸಮಾಜದ ಎಲ್ಲ ಒಪ್ಪಣ್ಣ ಒಪ್ಪಕ್ಕಂದ್ರಿಂಗೆ ಉತ್ತಮ ಸಂದೇಶ ಕೊಟ್ಟತ್ತು. ಮಾಸ್ಟ್ರ ಮಗಳಿಂಗೆ ಅಭಿನಂದನೆಗೊ, ಶುಭಮಸ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಬದ್ಧ ಶುದ್ದಿ ಓದಿಕ್ಕಿ ಆನಿನ್ನು ಆ ಮದುವೆಗೆ ಹೋಗಿಯೇ ಬದ್ಧ ಹೇಳ್ಸಕ್ಕೆ ಬದ್ಧ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಶಾ...ರೀಮಾಷ್ಟ್ರುಮಾವ°ಶಾಂತತ್ತೆವಾಣಿ ಚಿಕ್ಕಮ್ಮಪೆಂಗಣ್ಣ°ಪವನಜಮಾವಬಂಡಾಡಿ ಅಜ್ಜಿvreddhiಮುಳಿಯ ಭಾವಡಾಗುಟ್ರಕ್ಕ°ತೆಕ್ಕುಂಜ ಕುಮಾರ ಮಾವ°ಮಾಲಕ್ಕ°ನೀರ್ಕಜೆ ಮಹೇಶಕಾವಿನಮೂಲೆ ಮಾಣಿಬೊಳುಂಬು ಮಾವ°ಡೈಮಂಡು ಭಾವಪೆರ್ಲದಣ್ಣಶೀಲಾಲಕ್ಷ್ಮೀ ಕಾಸರಗೋಡುಅಡ್ಕತ್ತಿಮಾರುಮಾವ°ಶ್ರೀಅಕ್ಕ°ಯೇನಂಕೂಡ್ಳು ಅಣ್ಣಉಡುಪುಮೂಲೆ ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿದೊಡ್ಡಭಾವಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ