ಆರಾದ ಬೈಲಿಂಗೆ ನೂರಾಗಲಿ..

December 27, 2013 ರ 12:00 amಗೆ ನಮ್ಮ ಬರದ್ದು, ಇದುವರೆಗೆ 31 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಂತೋಷಂಗಳ ಹಂಚಿಗೊಂಬಲೆ ಒಪ್ಪಣ್ಣಂಗೆ ಯೇವತ್ತೂ ಅಂಬೆರ್ಪೇ.
ಪ್ರತಿ ಒರಿಶದ ಹಾಂಗೇ ಈ ಒರಿಶವೂ ಸಾಂದ್ರ ಸಂತೋಷ ಇರ್ತ ಕಾರಣ, ನಾವು ಈ ವಾರವೇ ಎಲ್ಲೋರತ್ರೆ ಹೇಳಿ ಸಂತೋಷವ ಹೆಚ್ಚು ಮಾಡಿಗೊಂಬೊ, ಅಲ್ಲದೋ?

ಕೊಶಿ ಎಂತರ? ಗೌಜಿ ಎಂತರ?

~

ದೊಡ್ಡಮಾಣಿ ದೊಡ್ಡಳಿಯಂಗೆ ದೊಡ್ಡಪ್ಪ ಬಂದ ಗವುಜಿ,
ಓಜುಪೇಯಿ ಅಜ್ಜಂಗೆ ಎಂಭತ್ತೊಂಭತ್ತು ಆದ ಗೌಜಿ,
ನೀರ್ಚಾಲು ಶಾಲೆಗೆ ನೂರೊರಿಶದ ಗೌಜಿ,
ಅದರೊಟ್ಟಿಂಗೆ “ಬೈಲಿಂಗೆ ಮತ್ತೊಂದೊರಿಶ” ಆದ ಗೌಜಿಯೂ ಇದ್ದು!
ನಮ್ಮ ಬೈಲಿಂಗೆ ಮತ್ತೊಂದೊರಿಶ.

2009ರಲ್ಲಿ ಸುರು ಆದ ಬೈಲ ಮಹಾ ಪ್ರವಾಹ ಇಂದಿನ ಒರೆಂಗೂ ಚೆಂದಲ್ಲಿ ಬಂಬಲವಾಗಿ ಬೆಳದು ಬತ್ತಾ ಇದ್ದು!
ನಿನ್ನೆ ಮೊನ್ನೆ ಆಗಿ ಸುರು ಆದ ಬೈಲಿಂಗೆ ಇಂದು ಹಿಂದೆ ತಿರುಗಿ ನೋಡಿರೆ ಐದು ಒರಿಶ ಸಂಪೂರ್ಣ ಆತು!
ನಾಳ್ತಿಂದ ಸುರು ಆವುತ್ತದೇ “ಆರನೇ ಒರಿಶ”!! ಅದೇ ಈ ವಾರಕ್ಕಿಪ್ಪ ಕೊಶಿಯ ಶುದ್ದಿ.
~
ಐದೊರಿಶ ಹಿಂದೆ ಪ್ರಪಂಚ ಹೇಂಗಿದ್ದತ್ತು? ಐದೊರಿಶ ಕಳುದು ಪ್ರಪಂಚ ಈಗ ಹೇಂಗಾಯಿದು?
ಕಾಲ ತುಂಬ ಬದಲಿದ್ದು ಅಪ್ಪೋ!
ಅರುವತ್ತರಲ್ಲಿ ಹೋಪ ಕರಿಬೈಕ್ಕು ಸುಭಗಣ್ಣನ ಹತ್ತರೆ ಇದ್ದತ್ತಲ್ಲದೋ – ಅದುವೇ ಅತೀ ಹೆಚ್ಚಿನ ಸ್ಪೀಡು ಅಂದು!
ಆದರೆ ಈಗ ಕಲ್ಮಡ್ಕನಂತನ ಹತ್ತರೆ ಒಂದು ಕೆಂಪು-ನೀಲಿ ಬೈಕ್ಕಿದ್ದಲ್ಲದೋ – ಅದು ನೂರೈವತ್ತರಲ್ಲಿ ಹೋವುತ್ತಡ.
ಕಾಲಾಧಿಪತಿಗೆ ಇದೇ ನಮುನೆ ಬೈಕ್ಕು ಸಿಕ್ಕಿತ್ತೋ ಏನೋ – ಎಲ್ಲಾ ಬದಲಾವಣೆಗಳೂ ಅತ್ಯಂತ ವೇಗಲ್ಲಿ ನೆಡೆತ್ತಾ ಇದ್ದು.
ದೊಡ್ಡಮಾವ, ದೊಡ್ಡಜ್ಜನ ಹಾಂಗಿರ್ತ ಹೆರಿಯೋರು ನಮ್ಮ ಬಿಟ್ಟು ಹೋದವು; ದೊಡ್ಡಳಿಯನಾಂಗಿರ್ತ ತುಂಡು ಜವ್ವನಿಗರು ಬಂದು ಸೇರಿಗೊಂಡವು.
ಹಲವಾರು ಜವ್ವನಿಗರಿಂಗೆ ಮದುವೆ ಪ್ರಾಯ ಬಂದು ಮದುವೆ ಆಗಿ ಕಳುದತ್ತು;
ಕೆಲವು ನಮ್ಮ ಸಮಾಜದ ಕೂಸುಗೊಕ್ಕೆ ಇನ್ನೂ ಪ್ರಾಯ ಬೈಂದಿಲ್ಲಿ ಹೇದು ಘಟ್ಟದ ಮೇಗೆ ನೆಂಟಸ್ತನ ಮುಗುತ್ತು;
ನಮ್ಮಲ್ಲಿಪ್ಪ ನೀರು ಕಾಲಿ ಆತು ಹೇದು ಮಂಗಳನಲ್ಲಿ ನೀರಿದ್ದೋ ನೋಡ್ತವು ವಿಜ್ಞಾನಿಗೊ;
ಮೈಲುತೂತ್ತು ನಿಧಾನ ಹೇದು ಮತ್ತೊಂದು ಹೊಸತ್ತರ ತಂದವು – ಬೇಗ ಹಿಡಿಸ್ಸು;
ಹೀಂಗೆ ಎಂತೆಂತದೋ ಬದಲಾವಣೆಗೊ.
ಕೆಲವು ಒಳ್ಳೆದು, ಕೆಲವು ಬೂಸು. ಬದಲಾವಣೆ ಬಂದೇ ಬತ್ತು.

ಬದಲಾವಣೆ ನಿರಂತರ.
~

ಇದೇ ನಮುನೆ ಬದಲಾವಣೆ ಬೈಲಿಲಿಯೂ ಆವುತ್ತು; ಆಗಿಯೇ ಆವುತ್ತು; ಆಗಿಂಡೇ ಇರ್ತು.
ಒಂದೊಂದರಿ “ಬೈಲು ಹೇದರೆ ಸಾರಡಿ ತೋಡಿನ ಹಾಂಗೇ”ದು ರಂಗಮಾವ ನೆಗೆಮಾಡ್ಳಿದ್ದು.
ಹಳೆ ಹರಿಪ್ಪು ನಿಂದ ಮತ್ತೆ ಹೊಸ ನೀರು ಬಂದೇ ಬಕ್ಕು ಅಲ್ಲದೋ?
ಹರಿನೀರಕಟ್ಟಂಗೊ ಹಲವಿದ್ದುಗೊಂಡು ಎರ್ಕುಸುತ್ತರೂ, ಹೊಸ ನೀರು ಬಂದು ಬಂದು ಸೇರಿಗೊಂಡೇ ಹೋಕು.
ಹಲವಾರು ನಮುನೆ ಬೆಳೆಗೊ, ಕಳೆಗೊ ಆ ತೋಡಿನ ಎರಡೂ ಹೊಡೆಲಿ ಬಂಬಲ ಬೆಳಕ್ಕೊಂಡಿಕ್ಕು.
ಅಮೂಲ್ಯ ಬೆಳೆಗಳ ಎಡಕ್ಕಿಲಿ ಕಳೆಗಳೂ ಇರ್ತು – ಹೇಳ್ತದು ನವಗೆ ಅರಡಿಗು ಅಲ್ಲದೊ? ಅದಿರಳಿ.
ಆ ಕಳೆಗಳ ಎಲ್ಲ ನಿವಾರಣೆ ಮಾಡಿಂಡು ಹಲವು ನಮುನೆಯ ಬೆಳೆಗೊ ಯಶಸ್ವಿಯಾಗಿ ಬೆಳೆತ್ತಾ ಇದ್ದು, ಬೆಳಗುತ್ತಾ ಇದ್ದು – ಹೇಳ್ತದು ನಮ್ಮ ಹಿರಿಮೆ.
~

ಬೈಲಿಂಗೆ ಆರನೇ ವರ್ಷದ ಗೌಜಿ..
ಬೈಲಿಂಗೆ ಆರನೇ ವರ್ಷದ ಗೌಜಿ..

ಆಂತರ್ಯಲ್ಲಿ ಇದ್ದದು ಅಂತರ್ಜಾಲಲ್ಲಿ ಪ್ರಕಟ ಅಪ್ಪಲೆ ಆರಂಭ ಆದ್ಸು 2009ರಲ್ಲಿ.
ಅಂದಿಂದ ಇಂದಿನ ಒರೆಂಗೆ ಬೈಲು ಬೆಳದು ಬಂದ ರೀತಿ ಅದ್ಭುತವೇ ಸರಿ.
ಒಪ್ಪಣ್ಣ ಮಾಂತ್ರ ಶುದ್ದಿ ಹೇಳ್ತದಕ್ಕೆ ಕೆಲವು ಜೆನ ನೆರೆಕರೆಯೋರು ಸೇರಿಗೊಂಡವು;
ಕೆಲವು ಜೆನ ಇದ್ದದು ಬೆಳ ಬೆಳದು ಹಲವು ಜೆನ ಆತು;
ನೋಡಿಗೊಂಡಿದ್ದ ಹಾಂಗೆ ಅದು ಹಲವಾರು ಜೆನ ಸೇರಿದ ಬೈಲು ಆತು.

ಎಲ್ಲರುದೇ ಅವರವರ ಪುರುಸೊತ್ತಿಲಿ ಶುದ್ದಿ ಹೇಳಿದವು; ಬೈಲಿನೋರೆಲ್ಲ ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟವು.
ಎರಡು ಸಾವಿರದಷ್ಟು ಶುದ್ದಿಯೂ, ಹತ್ತು ಮೂವತ್ಮೂರು ಸಾವಿರದಷ್ಟು ಒಪ್ಪಂಗಳೂ ತುಂಬಿತ್ತು ಬೈಲಕಟ್ಟಲ್ಲಿ!
ಎಲ್ಲ ಹೆರಿಮೆಗೆ ಕಳಶಪ್ರಾಯವಾಗಿ ನಮ್ಮ ಬೈಲಿಂಗೆ ನಮ್ಮ ಗುರುಗೊ ಬಂದವು.
ಹಲವೂ ಶುದ್ದಿಗೊಕ್ಕೆ ಒಪ್ಪ ಆಶೀರ್ವಾದವೂ ಕೊಟ್ಟು ಅನುಗ್ರಹಿಸಿದವು.
ಬೈಲಿಂಗೆ ಮತ್ತೊಂದೊರಿಶ ಆತು – ಹೇದು ಅಂದೊಂದರಿ ವಿಶೇಷ ಆಶೀರ್ವಚನವೂ ಕೊಟ್ಟಿದವು.
ಎಲ್ಲವುದೇ ಬೈಲ ನೆಂಟ್ರುಗಳ ಕೊಶಿಯ ಹೆಚ್ಚುಮಾಡಿತ್ತು.

~

ಮಾಷ್ಟ್ರುಮಾವ ಒಂದು ಶ್ಲೋಕ ಹೇಳುಗು.
ಲಾಲಯೇತ್ ಪಂಚ ವರ್ಷಾಣಿ, ದಶವರ್ಷಾಣಿ ತಾಡಯೇತ್ – ಹೇದು.
ಮಕ್ಕಳ ಯೇವ ರೀತಿ ಬೆಳೆಶೇಕು – ಹೇಳ್ಸರ ಅಜ್ಜಂದ್ರು ಮನಗಂಡು ಶ್ಲೋಕರೂಪಲ್ಲಿ ಬರದು ಮಡಗಿದ್ದದಾಡ.
ಮಗುವಿನ ಕೊಂಗಾಟ ಮಾಡಿಂಡು, ಒಪ್ಪ ಕೊಟ್ಟುಗೊಂಡು ಲಾಲನೆ ಮಾಡೇಕು; ಸಮ.
ಹಾಂಗೆ ಮಾಡಿಂಡು ಎಷ್ಟು ಸಮಯ ಇರೇಕು? ಸುರುವಾಣ ಐದೊರಿಶ. ಮತ್ತೆ?
ಮತ್ತೆ ತಾಡನ!
ಹೇದರೆ, ತಪ್ಪು ಮಾಡುವಾಗ ತಿದ್ದೇಕು, ಬುದ್ಧಿ ಹೇಳೇಕು ಹೇದು.
ಮಗುವಿನ ಬೆಳವಣಿಗೆಯ ಮಹತ್ವದ ಘಟ್ಟ ಅಲ್ಲದೋ – ಹಾಂಗಾಗಿ ಆ ಸಮೆಯಲ್ಲಿ ತಿದ್ದಿ ಸರಿದಾರಿಲಿ ಕರಕ್ಕೊಂಡೋಯೇಕಾದ್ಸು ನಮ್ಮ ಕರ್ತವ್ಯ.

ಈಗ ಎಂತಗೆ ಈ ಶ್ಲೋಕ ನೆಂಪಾದ್ಸು – ಹೇದರೆ, ನಮ್ಮ ಬೈಲಿಂಗೂ – ಐದೊರಿಶ ಪೂರ್ತಿ ಆತು.
ಇನ್ನು ಆರನೇದು.

ಇಷ್ಟೂ ಸಮೆಯ ನಾವು ಬೈಲ ಕೊಂಗಾಟ ಮಾಡಿಂಡು ಮುಂದುವರುದತ್ತು.
ಇಷ್ಟು ಸಮೆಯ ಬೈಲಿನ “ಬೆಳೆಶಿತ್ತು”, ಇನ್ನು “ಬೆಳಗುಸೇಕು”.
ಬೆಳಗುಸೇಕಾರೆ ಎಂತ ಮಾಡೇಕು?
ನಮ್ಮ ನಮ್ಮ ಶುದ್ದಿಗಳ ತಿದ್ದೇಕು.
ಭಾಷಾ ಶುದ್ಧತೆ, ವಿಷಯ ಗಾಂಭೀರ್ಯತೆ, ಸರ್ಜನ ಸಾಹಿತ್ಯ – ಇದೆಲ್ಲವನ್ನೂ ಗಮನಲ್ಲಿ ಮಡಿಕ್ಕೊಂಡು ನಮ್ಮ ನಾವು ಬೆಳೆಶಿಗೊಳೇಕು.
ಅಲ್ಲದೋ?
ನಮ್ಮ ನಮ್ಮ ಪ್ರತಿ ಶುದ್ದಿಗಳದ್ದುದೇ ಮೌಲ್ಯವ ಇನ್ನಷ್ಟು ಹೆಚ್ಚುಮಾಡ್ಳೆ ನೋಡೇಕು.
ಆ ಮೂಲಕ ನಮ್ಮ ಶುದ್ದಿಗಳ ನಾವೇ ತಾಡನ ಮಾಡಿ ಬೆಳೆಶೇಕು. ಅಲ್ಲದೋ?

~

ಮನೆಯೆ ಮೊದಲ ಪಾಠ ಶಾಲೆ – ಹೇಳ್ತಾಂಗೆ ಐದೊರಿಶ ಮಕ್ಕೊ ಮನೆಲೇ ಕಳೆತ್ತವು.
ಮತ್ತೆ ಶಾಲೆಗೆ ಸೇರ್ತವು, ಆರನೇ ಒರಿಶಲ್ಲಿ.
ಈಗ ಒಂದೊರಿಶ ಹಿಡಿಯೇಕಾರೇ ಮಕ್ಕೊ ಶಾಲೆಲಿರ್ತವು; ಅದಿರಳಿ!
ಅಂತೂ – ಮದಲಿಂಗೆ ಆರನೇ ಒರಿಶಲ್ಲೇ ಒಂದನೆ ಕ್ಳಾಸು. ಅಲ್ಲಿಂದ ಮತ್ತೆ ಗಂಭೀರವಾದ ಕಲಿಯುವಿಕೆ ಆರಂಭ.
ಬೈಲಿಲಿಯೂ – ಇಷ್ಟನ್ನಾರ ಇದ್ದ ಕಲಿಯುವಿಕೆಂದಲೂ ಜಾಸ್ತಿ, ಇನ್ನೂ ಹೆಚ್ಚಿನ – ಗಂಭೀರವಾದ ಕಲಿಯುವಿಕೆ ಮನಸ್ಸಿಂಗೆ ಸಿಕ್ಕಲಿ.
ಭವಿಷ್ಯದ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಮುಂದೆ ಹೋಪ ಹಾಂಗೆ ಗುರು ಅನುಗ್ರಹ ಇರಳಿ.

~
ಲಾಲನೆ ಮಾಡಿ ಬೆಳೆಶುತ್ತ ಹಂತಂದ ತಾಡನ ಮಾಡಿ ಬೆಳೆಶುತ್ತ ಆರನೇ ಒರಿಶಕ್ಕೆ ಕಾಲು ಮಡಗುತ್ತ ಈ ಸಂದರ್ಭಲ್ಲಿ,
ನಾವೆಲ್ಲೋರುದೇ ಶ್ಲೋಕದ ಮಾತಿಂಗೆ ಕಟಿಬದ್ಧರಾಗಿಪ್ಪೊ.
ನೀರ್ಚಾಲಿನ ಶಾಲೆಯ ಹಾಂಗೆ ಶತಮಾನಂ ಭವತಿ – ಹೇಳುಸಿಗೊಳ್ಳಲಿ.
ನಮ್ಮ ಶ್ರೀಮಠದ ಹಾಂಗೆ ಸಾವಿರಾರು ಒರಿಶ ಮುಂದುವರಿಯಲಿ,
ಸನಾತನ ಧರ್ಮದ ಹಾಂಗೆ ಲಕ್ಷಾಂತರ ಒರಿಶದ ಕಾಲ ಬೆಳದು ಬರಳಿ.

ಕಳುದ ಐದೊರಿಶಂದ ನಿತ್ಯವೂ ಕೈಹಿಡುದು, ಒಪ್ಪಕೊಟ್ಟು ಶುದ್ದಿ ಹೇಳಿ ಬೆಳಗುಸಿ, ಎಳಗುಸಿ, ಬೆಳಕಾಗಿಸಿದ ಎಲ್ಲಾ ನೆಂಟ್ರಿಂಗೆ ಬೈಲಿನ ಪರವಾಗಿ ಒಪ್ಪಣ್ಣನ ಅನಂತಾನಂತ ಧನ್ಯವಾದಂಗೊ.
ಮುಂದೆಯೂ, ಮುಂದಾಣ ದಿನಂಗಳಲ್ಲಿಯೂ ಒಟ್ಟಿಂಗಿರಿ, ಬೈಲಿನ ಬೆಳೆಶುವೊ – ಹೇದು ಆದರದ ಕೋರಿಕೆ.
ಈ ಕಾರ್ಯಕ್ಕೆ ಗುರುಗಳ ಆಶೀರ್ವಾದ, ಹೆರಿಯೋರ ಮಾರ್ಗದರ್ಶನ, ಕಿರಿಯೋರ ಸಲಹೆ ಸೂಚನೆಗೊ ಅತ್ಯಗತ್ಯ ಇದ್ದು.
ಬನ್ನಿ, ಬೈಲ ಬೆಳೆಶುತ್ತ ಮಹತ್ಕಾರ್ಯಲ್ಲಿ ನಾವೆಲ್ಲೋರುದೇ ಸೇರುವೊ.
ಇದು ನಮ್ಮೆಲ್ಲರ ಬೈಲು. ಅಬ್ಬೆ ಭಾಷೆಯ ಪ್ರೀತಿ ನಮ್ಮೆಲ್ಲರ ಒಂದು ಮಾಡಲಿ.
ಬೈಲಿಂಗಾಗಿ ಒಂದಪ್ಪೊ.
~

ಒಂದೊಪ್ಪ: ಆರೊರಿಶಲ್ಲಿ ಆರೆಲ್ಲ ಒದಗಿ ಬಂದವೋ, ಅವರೆಲ್ಲರ ಅನುದಿನವೂ ನೆಂಪುಮಾಡಿಗೊಳ್ತು.

~

ಸೂ:
2009ರಿಂದ ಇಂದಿನ ವರೆಗೆ ಬೈಲಿಲಿ ಒಟ್ಟು 2,368 ಶುದ್ದಿಗಳೂ, ಅವೆಲ್ಲದಕ್ಕೆ ಒಟ್ಟಾಗಿ 33,711 ಒಪ್ಪಂಗಳೂ ಬಯಿಂದು.
ಶುದ್ದಿ ಹೇಳಿದ ನೆರೆಕರೆಯೋರಿಂಗೂ, ಒಪ್ಪ ಕೊಟ್ಟ ಬೈಲಿನೋರಿಂಗೂ ಅಭಿನಂದನೆಗೊ.

ಬೈಲ ಶುದ್ದಿಗಳ ಓದಲೆ ಇಲ್ಲಿಂದ ಸುರುಮಾಡಿ : ಸಂಕೊಲೆ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 31 ಒಪ್ಪಂಗೊ

 1. ಮಂಗ್ಳೂರ ಮಾಣಿ

  ಒಪ್ಪಣ್ಣಾ,
  ಅಭಿನಂದನೆಗೊ. ಬೈಲಿಂಗೆ ಬಂದೊಂಡಿಪ್ಪದು ವರ್ಷ ಐದಾತು ಹೇಳುದು ಗೊಂತೇ ಆವ್ತಿಲ್ಲೆ. ಇನ್ನೂ ಬೆಳಯಲಿ ಇದು :)

  [Reply]

  VN:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಒಪ್ಪಣ್ಣೋ……,
  ನೀನು ಸಾರಡಿ ತೋಡಕರೆಲಿ ಶುದ್ದಿ ಹೇಳುಲೆ ಸುರು ಮಾಡಿ ಅಪ್ಪಗ ಅಕ್ಕ° ಈಚ ಕರೇಂದ ನೋಡಿಗೊಂಡಿದ್ದದು ಇದಾ.. ನೀನು ಬರವ ರೀತಿಗೆ ಬೈಲಿಂಗೆ ಇಳಿಯದ್ದೆ ಮನಸ್ಸು ಕೇಳಿದ್ದಿಲ್ಲೆ. ಹಾಂಗೆ ಬಂದೋಳ ಬೈಲಿಂದ ಹಂದದ್ದ ಹಾಂಗೆ ಪ್ರೀತಿಯ ಬಳ್ಳಿಲಿ ಕಟ್ಟಿ ಹಾಕಿದ್ದೆ! ಶುದ್ದಿಯನ್ನೂ ಬರೆಶಿದ್ದೆ. ಎನ್ನ ಎಲ್ಲಾ ಭಾವನೆಗಳ ಗೌರವಿಸಿಗೊಂಡು ಪ್ರೀತಿಲಿಯೇ ಎನ್ನ ಒಟ್ಟಿಂಗೆ ಇಪ್ಪ ನಿನಗೆ ಅಕ್ಕನ ತುಂಬಾ… ತುಂಬಾ… ಪ್ರೀತಿಗೊ. ಬೈಲಿನ ಹೊಸವರ್ಷಕ್ಕೂ, ನಿನ್ನ ಹುಟ್ಟಿದ ದಿನಕ್ಕೂ ಅಭಿನಂದನೆಗೊ.

  ಒಪ್ಪಣ್ಣ,
  ಶ್ರೀಗುರುಗಳ ಶ್ರೀರಕ್ಷೆಲಿ, ಪಾರೆಅಜ್ಜಿಯ ಆಶೀರ್ವಾದಲ್ಲಿ ನೆಡೆತ್ತಾ ಇಪ್ಪ ಈ ಬೈಲಿಲಿ ಎಂಗೊಗೆ ಎಲ್ಲೋರಿಂಗೂ ಬರವ ಅವಕಾಶ ಮಾಂತ್ರ ಕೊಟ್ಟದಲ್ಲ, “ಬೈಲಿನ ಲೆಕ್ಕದ ಗುರುಭೇಟಿ”ಲಿ ಶ್ರೀಸಮ್ಮುಖಲ್ಲಿ ಕೂದು ಮಾತಾಡುವ ಅವಕಾಶವನ್ನುದೇ ಮಾಡಿ ಕೊಟ್ಟಿದೆ. ನಿರಂತರವಾಗಿ ವಾರವಾರವೂ ಶುದ್ದಿಯ ಬಿಡದ್ದೆ ಹೇಳಿದ ನಿನಗೆ ಅಕ್ಕನ ಒಪ್ಪಂಗೊ. ನಿನ್ನ ಶುದ್ದಿಗಳ ಹರಿವು ಯಾವಾಗಳೂ ಬತ್ತದ್ದಿರಲಿ.. ಸರಸ್ವತೀ ದೇವಿಯ ಅನುಗ್ರಹ ನಿನಗೆ ಯಾವಾಗಲೂ ಇರಲಿ ತಮ್ಮಾ…

  ಒಪ್ಪಣ್ಣ,
  ಬೈಲು ಹಂತ ಹಂತವಾಗಿ ಬೆಳಕ್ಕೊಂಡು ಬಂದದು ಇನ್ನುದೇ ತನ್ನದೇ ಗತಿಲಿ ಬೆಳೆಯಲಿ..
  ಹಲವು ನೆಂಟ್ರುಗ ಸೇರಿದ ಈ ಬೈಲಿನ ಎಲ್ಲೋರ ಮನಸ್ಸು ಒಂದೇ ಆಗಿರಲಿ..
  ಸಮಾಜಂದ ಪಡದ್ದದರ ಸಮಾಜಕ್ಕೆ ಕೊಡುವ ನಿನ್ನ ಧ್ಯೇಯಕ್ಕೆ ಎಂಗೊ ಎಲ್ಲೋರೂ ಅಳಿಲ ಸೇವೆಯ ಮಾಡಿಗೊಂಡು ಬೈಲಿನ ಬೆಳೆಶುವಲ್ಲಿ ನಿನ್ನ ಒಟ್ಟಿಂಗೆ ಇರ್ತೆಯಾ°..
  ಸಾರಡಿಯ ನೀರ ಹರಿವು ಯೇವಾಗಳೂ ಹರಿಯಲಿ.. ಒಂದೆಲಗದ ಬೈಲು ಬೆಳದು ಬಳ್ಳಿ ಲೋಕ ಇಡೀ ಹಬ್ಬಲಿ..
  ಮೋಳಮ್ಮನ ಸಂತಾನಂಗ ಹೆಚ್ಚಲಿ..
  ತರವಾಡು ಮನೆಗ-ಮನೆತನಂಗ ಒಳಿಯಲಿ..
  ನಮ್ಮ ಮಣ್ಣಿನ ಮಕ್ಕೊ ಅಬ್ಬೆ ಮಣ್ಣಿನ ಮರೆಯದ್ದೆ, ಅಬ್ಬೆಯನ್ನೂ ಮರೆಯದ್ದೆ ಅಬ್ಬೆ ಮಣ್ಣಿನ ಒಳಿಶಲಿ…
  ಹರೇರಾಮ.

  [Reply]

  VN:F [1.9.22_1171]
  Rating: 0 (from 0 votes)
 3. ವೇಣಿಯಕ್ಕ°

  ಬೈಲು ಇದೇ ರೀತಿ ಇನ್ನೂ ನೂರು ವರುಷ ಕಾಲ ಬೆಳೆಯಲಿ..ಃ) ಹೊಸ ಅಂಗಿ ಚೆಂದ ಇದ್ದು..ಃ)

  [Reply]

  VN:F [1.9.22_1171]
  Rating: 0 (from 0 votes)
 4. ಈಚ ಭಾವ
  ಈಚ ಭಾವ

  ಒಪ್ಪಣ್ಣ ವೆಬ್ ಸೈಟು ಸುರುವಾದ ಲಾಗಾಯ್ತು.. ಬೈಲಿನ ಸಂಪರ್ಕಲ್ಲಿ ಆನಿದ್ದೆ. ಆದರೆ ಇತ್ಲಾಗಿ ಬೈಲಿನ ಕರೇಲಿ ಕೂರದ್ದೆ, ಮಾತಾಡದ್ದೆ ಹಲವು ಸಮಯವೇ ಆಗಿ ಹೋತು. ಕಾರಣ ಕೆಲಸದ ಒತ್ತಡಂಗ ಇತ್ಯಾದಿ. ಓ ಮೊನ್ನೆ ಮೊನ್ನೆ ಶುರುವಾದ ವೆಬ್ ಸೈಟು ಇಂದು ಒಂದು ದೊಡ್ಡ ಕುಟುಂಬವನ್ನೇ ಸೃಷ್ಟಿಸಿದ್ದು, ನಾಲ್ಕು ಜನಪರ ಕೆಲಸಂಗಳ ಮಾಡ್ತು ಹೇಳುದು ಅತ್ಯಂತ ಸಂತೋಷದ ಸಂಗತಿ. ಹವ್ಯಕ ಭಾಷೆಯ ಬೆಳೆಶುವ, ಸಮಾಜ ಬಾಂಧವರಿಂಗೆ ಹೆಗಲು ಕೊಡುವ ‘ಒಪ್ಪ’ ಯತ್ನ ಮುಂದುವರಿಯಲಿ ಹೇಳಿ ಶುಭಾಶಯಂಗ.

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಹರೇ ರಾಮ,, ಮೊದಲಾಗಿ ಒಪ್ಪಣ್ಣಂಗೆ,ಒಪ್ಪಬಯಲಿಂಗೆ ,ಬಯಲಿಂಗೆ ಬಂದವಕ್ಕೆ, ಬೆಳೆಶಿದವಕ್ಕೆ , ಬೆಳವಲೆ ಪ್ರತ್ಯಕ್ಷ,ಪರೋಕ್ಷ ಕಾರಣರಾದವಕ್ಕೆ,ಅಭಿಮಾನಿಗೊಕ್ಕೆ, ಆತ್ಮೀಯತೆಯ ಒಂದೊಪ್ಪ.ಆರೊರುಷಾಣ ಈ ಕೂಸು ಇನ್ನು ಮುಂದೆ ಇದಕ್ಕೂ ಮಿಗಿಲಾಗಿ ಉತ್ತರೋತ್ತರ ಅಭಿವೃದ್ದಿ ಪಡೆಯಲಿ ಶ್ರೀಗುರು ದೇವತಾನುಗ್ರಹ ಸದಾಇರಲಿ ಹೇಳಿ ಎನ್ನ ಮನದಾಳದ ಹಾರೈಕೆ.

  [Reply]

  VN:F [1.9.22_1171]
  Rating: 0 (from 0 votes)
 6. ಅನುಶ್ರೀ ಬಂಡಾಡಿ

  ಹರೇರಾಮ.
  ಹೊಸಂಗಿ ಹಾಕಿ ಹೊಸ ರೂಪಲ್ಲಿ ಬಂದ ಬೈಲಿಂಗೆ ಶುಭಾಶಯಂಗೊ. ಒಪ್ಪಣ್ಣನ ಆಶಯದ ಹಾಂಗೆಯೇ ನಮ್ಮ ಬೈಲಿಂಗೆ ಆರಾಗಿ, ನೂರಾಗಿ, ಮುನ್ನೂರಾಗಿ ಬೆಳೆಯಲಿ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ; ನಮ್ಮ ಒಪ್ಪಣ್ಣನ ಬೈಲು ಹೊಸ ಒರಿಶಲ್ಲಿ ಹೊಸ ಅ೦ಗಿ ಹಾಕಿ ಆಯೆತ ಮಾಡಿಗೊ೦ಡದು ಬಾರಿ ಲಾಯಕಾಯಿದು.ನಮ್ಮ ಬೈಲಿ೦ಗೆ ಇ೦ಥ ರೂಪದೊಟ್ಟಿ೦ಗೆ ಚೆತನ್ಯಮಯವಾದ ಸಾಹಿತ್ಯ ವಾಹಿನಿ ಸದಾ ಹರುದು ಬರಲಿ.ಹೆಚ್ಚೆಚ್ಚು ಹವೀಕ ಬ೦ಧುಗ ಇಲ್ಲಿ ಕೃಷಿ ಮಾಡುವಾ೦ಗೆ ಆಗಲಿ.ಗುರು ಹೆರಿಯರ ಸದಾಶಯ೦ಗಳ ಪಡದು ಸದಾ ಸಾಹಿತ್ಯ ಸ೦ಪದದಿ೦ದ ತು೦ಬಿ ಮೆರೆಯಲಿ.ಹವಿಗನ್ನಡ ಸರಸ್ವತಿಯ ಆರಾಧನೆ ಉತ್ತರೋತ್ತರವಾಗಿ ನೆಡೆಯಲಿ ಹೇದು ಹಾರೆಕೆ.“ಶತಸ೦ವತ್ಸರ೦ ದೀರ್ಘಮಾಯುಃ ”

  [Reply]

  VN:F [1.9.22_1171]
  Rating: 0 (from 0 votes)
  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ; ನಮ್ಮ ಒಪ್ಪಣ್ಣನ ಬೈಲು ಹೊಸ ಒರಿಶಲ್ಲಿ ಹೊಸ ಅ೦ಗಿ ಹಾಕಿ ಆಯೆತ ಮಾಡಿಗೊ೦ಡದು ಬಾರಿ ಲಾಯಕಾಯಿದು.ನಮ್ಮ ಬೈಲಿ೦ಗೆ ಇ೦ಥ ರೂಪದೊಟ್ಟಿ೦ಗೆ ಚೆತನ್ಯಮಯವಾದ ಸಾಹಿತ್ಯ ವಾಹಿನಿ ಸದಾ ಹರುದು ಬರಲಿ.ಹೆಚ್ಚೆಚ್ಚು ಹವೀಕ ಬ೦ಧುಗ ಇಲ್ಲಿ ಕೃಷಿ ಮಾಡುವಾ೦ಗೆ ಆಗಲಿ.ಗುರು ಹೆರಿಯರ ಸದಾಶಯ೦ಗಳ ಪಡದು ಸದಾ ಸಾಹಿತ್ಯ ಸ೦ಪದದಿ೦ದ ತು೦ಬಿ ಮೆರೆಯಲಿ.ಹವಿಗನ್ನಡ ಸರಸ್ವತಿಯ ಆರಾಧನೆ ಉತ್ತರೋತ್ತರವಾಗಿ ನೆಡೆಯಲಿ ಹೇದು ಹಾರೈಕೆ.“ಶತಸ೦ವತ್ಸರ೦ ದೀರ್ಘಮಾಯುಃ ”

  [Reply]

  VN:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಎಲ್ಲೆಲ್ಲಿಯೋ ಊರೂರು ತಿರುಕ್ಕೊಂಡು ಟಿ.ಕುಮಾರಸ್ವಾಮಿ ಆಗಿತ್ತಿದ್ದ ಎನಗೆ “ತೆಕ್ಕುಂಜ ಕುಮಾರ ಮಾವ” ಹೇಳಿ ಪ್ರೀತಿ ಕೊಟ್ಟ ಬೈಲಿನ ಯೇವತ್ತಿಂಗೂ ಮರವಲಿಲ್ಲೆ.ಆರಕ್ಕೇರಿದ ಬೈಲು ನೂರ್ಕಾಲ ಹೀಂಗೇ ಬೆಳಯಲಿ.

  [Reply]

  VN:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸುಮಾರು ಮೂರುವರೆ ವರ್ಷ ಹಿಂದೆ ಒಂದು ಸಣ್ಣ ಮಿಂಚಂಚೆ ಬರದ್ದಕ್ಕೆ ಒಪ್ಪಣ್ಣನ ದೂರವಾಣಿ ಕರೆ ಬಂತು. “ನಿಂಗೊ ರೆಜ ವಿವರವಾಗಿ ಬರದು ಕೊಡಿ ಹೇಳಿ” ಅಲ್ಲಿಂದ ಸುರುಆದ ಎನ್ನ ಪಯಣ , ಈಗ ಹಿಂದೆ ತಿರುಗಿ ನೋಡುವಾಗ ದಿನಂಗೊ ಎಷ್ಟು ಬೇಗ ಓಡಿತ್ತು ಹೇಳಿ ಆವ್ತಾ ಇದ್ದು. ಹವ್ಯಕ ಲೇಖನಕ್ಕೆ ಇಷ್ಟೊಂದು ಪ್ರೋತ್ಸಾಹ ಸಿಕ್ಕುವ ಈ ಬೈಲಿನ ಆಸ್ತಿ ಹೇಳಿರೆ ಇದರಲ್ಲಿ ತೊಡಗಿಸಿಗೊಂಡ ಬೈಲ ಬಾಂಧವರು ಮತ್ತೆ ವಾರಕ್ಕೊಂದು ನಿಯಮಿತವಾಗಿ ಯಾವದೇ ಅಡೆ ತಡೆ ಇಲ್ಲದೆ ಮೌಲ್ಯಯುತ ಲೇಖನ ಕೊಡ್ತಾ ಇಪ್ಪ ಒಪ್ಪಣ್ಣ.. ಈ ಬೈಲು ಇನ್ನೂ ಬೆಳದು ವಿಸ್ತಾರ ಆಗಿ ನಮ್ಮ ಅಬ್ಬೆ ಭಾಷೆಯ ಏಕಮೇವಾದ್ವಿತೀಯ ಬೈಲು ಹೇಳಿ ಹೇಳಿಸಿಗೊಳ್ಳಲಿ. ಸರಸ್ವತಿ ಸೇವೆ ಇಲ್ಲಿ ನಿರಂತರವಾಗಿ ನೆಡೆಯಲಿ. ಹೊಸ ಮುಖಂಗೊ ಇನ್ನಷ್ಟು ಬಂದು ಬೈಲಿನ ಸಂಪನ್ನಗೊಳಿಸಲಿ.

  [Reply]

  VA:F [1.9.22_1171]
  Rating: 0 (from 0 votes)
 9. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಶುಭಾಶಯ..ಹೊಸ ಅಂಗಿ ಬೈಲಿಂಗೆ ಹೊಸ ಚೇತನ ಕೊಟ್ಟ ಹಾಂಗೆ ಇದ್ದು..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಕೇಜಿಮಾವ°ಅಕ್ಷರದಣ್ಣವಿನಯ ಶಂಕರ, ಚೆಕ್ಕೆಮನೆಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆಪಟಿಕಲ್ಲಪ್ಪಚ್ಚಿಜಯಗೌರಿ ಅಕ್ಕ°ನೀರ್ಕಜೆ ಮಹೇಶಸಂಪಾದಕ°ಶುದ್ದಿಕ್ಕಾರ°ಡಾಮಹೇಶಣ್ಣಕೊಳಚ್ಚಿಪ್ಪು ಬಾವಪುತ್ತೂರುಬಾವಸರ್ಪಮಲೆ ಮಾವ°ಉಡುಪುಮೂಲೆ ಅಪ್ಪಚ್ಚಿಶಾ...ರೀಬೊಳುಂಬು ಮಾವ°ನೆಗೆಗಾರ°ಪೆಂಗಣ್ಣ°vreddhiಡಾಗುಟ್ರಕ್ಕ°ಕಾವಿನಮೂಲೆ ಮಾಣಿಅಕ್ಷರ°ಅನಿತಾ ನರೇಶ್, ಮಂಚಿಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ