Oppanna.com

ಬಲ್ಲೆಯೂ ಬೆಳೆಯದ್ದ ಹಾಂಗೆ ಬೋಳುಸಿದವಡ ಬಳ್ಳಾರಿಯ..!

ಬರದೋರು :   ಒಪ್ಪಣ್ಣ    on   13/08/2010    83 ಒಪ್ಪಂಗೊ

ಒಪ್ಪಣ್ಣ ಎಲ್ಲ ಶುದ್ದಿಯನ್ನುದೆ ಮಾತಾಡಿದ°, ರಾಜಕೀಯ ಒಂದರ ಬಿಟ್ಟು.
ಹಾಂಗೆ ನೋಡಿರೆ ಒಪ್ಪಣ್ಣಂಗೆ ರಜ ಕಮ್ಮಿ ಆಸಗ್ತಿ ಇಪ್ಪ ವಿಶಯ ಹೇಳಿತ್ತುಕಂಡ್ರೆ ಅದು ರಾಜಕೀಯವೇ.
ಪರೀಕ್ಷೆಗೆ ಹೋವುತ್ತ ಕಾಲಲ್ಲಿ ಯೇವದು ಪರೀಕ್ಷೆಲಿ ಬಕ್ಕು – ಅದರ ಮಾಂತ್ರ ಎರಡೆರಡು ಸರ್ತಿ ಕಲ್ತುಗೊಂಬದು.
ಬಾರತದ ಪ್ರಧಾನಮಂತ್ರಿ ಆರು? ಮುಖ್ಯ ಚುನಾವಣಾಧಿಕಾರಿ ಆರು? ಮುಖ್ಯಮಂತ್ರಿ ಆರು – ಹೀಂಗಿರ್ತದು.
ಮತ್ತೆ ವಾಣಿಟೀಚರೋ – ರೇವತಿಟೀಚರೋ ಮಣ್ಣ ಇದ್ದವನ್ನೆ, ಸಂಶಯಬಂದರೆ ಹೇಳಿಕೊಡ್ಳೆ.
ಪರೀಕ್ಷೆಲಿ ಅಲ್ಲ, ಬಾಕಿದ್ದ ದಿನ!
~

ಈಗಾ ಹೇಳಿ ಅಲ್ಲ, ಮದಲಿಂಗೇ ಹಾಂಗೆ – ಸಮಾಜ ಹೇಳಿತ್ತುಕಂಡ್ರೆ ರಜಾ ಮಧ್ಯಮವೇ.
ಅದರ್ಲಿಪ್ಪ ಪಾಣಿಪತ್ ಕದನ, ಕಾನ್‌ಸ್ಟಾಂಟಿನೋಪಲ್, ರಕ್ಕಸತಂಗಡಿ, ಪೌರನೀತಿ, ರಾಜಕೀಯ – ಎಲ್ಲ ಓದಿಗೊಂಡು ಹೋಪ ಹಾಂಗೇ  ಆ… ಆವಳಿಗೆ ಎತ್ತಿಎತ್ತಿ ಬಕ್ಕು. ಈಗಳೂ ಒಂದು ಬಂತಿದಾ, ಶುದ್ದಿ ಹೇಳುವಗ.
ನಿಂಗೊಗೂ ಬಂತೋ? 😉

ವಿಜ್ಞಾನಕ್ಕೆ ಆದರೆ ಇಷ್ಟು ಕಷ್ಟ ಇತ್ತಿಲ್ಲೆ – ಸುಮಿತ್ರಟೀಚರು ಇದ್ದದು. ಅದು ಒಂದೇ ಗೆರೆಯ ಹದಿನಾರು ಸರ್ತಿ ಹೇಳುಗು – ಟೀವಿಯ ವಾರ್ತೆಯ ಹಾಂಗೆ. ಹಾಂಗಾಗಿ ಬೇಗ ತಲಗೆ ಹೋವುತ್ತು. ಮತ್ತೊಂದು ಕಷ್ಟ ಇದ್ದು – ಹದಿನಾರು ಆದರೆ ಸಮ; ಅದರಿಂದ ಜಾಸ್ತಿ ಆದರೆ ಪುನಾ ಆವಳಿಗೆ ಬತ್ತು.! ಒಟ್ಟಾರೆ ಈ ಉದಾಸಿನದ ಮುದ್ದೆಯ ಓದುಸುದು ಮನೆಲಿ ಭಾರೀ ಕಷ್ಟದ ಕೆಲಸ ಆಗಿತ್ತು.

ಯೇವದೇ ವಿಶಯ ಆದರೂ, ತಲಗೆ ಹಿಡುದು ಅರೇಕು, ಒಪ್ಪಣ್ಣಂಗೆ ಅರ್ತ ಆಯೇಕಾರೆ. ಪಕ್ಕನೆ ನೋಡಿದಕೂಡ್ಳೇ ಅರ್ತ ಆಗ.
ಅದುದೇ ಪೇಟೆ ನಮುನೆ ವಿಶಯಂಗೊ ಆದರೆ ಅರಡಿಯಲೇ ಅರಡಿಯ.
ನವಗೆ, ನಮ್ಮ ಬೈಲಿಲಿ ಎಲ್ಲೊರಿಂಗೂ ಹಾಂಗೇ, ಸಾಮಾನ್ಯವಾಗಿ. ಪೇಟೆಮಕ್ಕಳ ಹಾಂಗೆ ಒಂದೇ ಸರ್ತಿ ನೋಡಿದ್ದರಲ್ಲಿ ಕಲ್ತುಗೊಂಬಷ್ಟು ಬುದ್ಧಿವಂತಿಗೆ ರಜ ಕಮ್ಮಿಯೇ ಇದಾ!

ಈಗ ಅದೆಲ್ಲ ಹಳೆನೆಂಪು. ಶುದ್ದಿ ಹೇಳ್ತ ವಿಚಾರಲ್ಲಿ ಮಾಷ್ಟ್ರುಮಾವನ ಹತ್ರೆ ಹೋಗಿ ಕೂದು ಕೇಳಿರಾತು, ಶಂಬಜ್ಜ ಕತೆ ಹೇಳಿದ ಹಾಂಗೆ ಮಾಷ್ಟ್ರುಮಾವ° ಇತಿಹಾಸ ಹೇಳಿಕೊಡ್ತವು.
ಅಂದು ಆಸಗ್ತಿ ಇಲ್ಲದ್ದುದೇ ಇಂದಿದ್ದು.. ಇತಿಹಾಸದ ಸೂಕ್ಷ್ಮಂಗೊ ಎಲ್ಲ ತಲಗೆ ಹೋವುತ್ತು.

~
ಪೆರ್ಲದಣ್ಣ ಊರಿಂಗೆ ಬಯಿಂದ°.
ಅಜ್ಜಕಾನಬಾವಂಗೆ ಸಂಶಯ – ಆಟಿಸಮ್ಮಾನಕ್ಕೋ ಏನೋ ಹೇಳಿಗೊಂಡು! ಉಮ್ಮಪ್ಪ!
ಮೊನ್ನೆ ಬೈಲಿಂಗೆ ಬಂದಿತ್ತಿದ್ದವ° ಹೊತ್ತೋಪಗ ಕಟ್ಟೆಪುರಾಣಮಾತಾಡಿಗೊಂಡು ಪಾರೆಮಗುಮಾವನ ಮನಗೆ ಹೋದೆಯೊ°, ಎಂಗೊ ಮೂರು ಜೆನ.
ಅವಂಗೆ ಬೆಂಗುಳೂರಿಲಿ ಕೂದುಕೂದು ಬೊಡುದು ರಜ ನೆಂಟ್ರುಗಳ ಮನೆ ನೋಡೆಕ್ಕು ಹೇಳಿ ಆದ್ದದು, ಪಾಪ!
ಮದುವೆಪ್ರಾಯಲ್ಲಿ ಮಾಣಿಯಂಗೊಕ್ಕೆ ನೆಂಟ್ರಮನೆ ಜೋರು ನೆಂಪಪ್ಪದಡ, ದೊಡ್ಡಬಾವ° ಹೇಳುಗು – ಮೊಗಪ್ಪೆಲಿ ಹಪ್ಪಳ ತಿಂದೊಂಡು!!

ನೆಡವಲೆ ಒಂದು ಮೈಲು ಇದ್ದಿದಾ, ದಾರಿಬಚ್ಚಲು ಗೊಂತಾಗದ್ದ ಹಾಂಗೆ ಊರ ಪಂಚಾತಿಗೆ ಮಾಡಿಗೊಂಡು ನೆಡದೆಯೊ°.
ಬೆಂಗುಳೂರಿಲಿ ಕರೆಂಟು ಕಂಡಾಬಟ್ಟೆ ತೆಗೆತ್ತವಡ, ಈಗ ಎಲ್ಲೊರು ಕೇಂಡ್ಳು ಕೈಲಿಹಿಡ್ಕೊಂಡೇ ತಿರುಗುದಡ, ದೊಡ್ಡದಾಗಿ ಮೆಟ್ರೋ ರೈಲು ಮಾಡ್ತ ಲೆಕ್ಕಲ್ಲಿ ಮಾರ್ಗಂಗೊ ಎಲ್ಲ ಸಣ್ಣ ಆಯಿದಡ, ಪೆಟ್ರೋಲಿಂಗೆ ಏರಿದ್ದಡ – ಕಂಪ್ಯೂಟರಿಂಗೆ ಇಳುದ್ದಡ, ಬೇಂಕಿನ ಪ್ರಸಾದಣ್ಣಂಗೆ ಹೊಟ್ಟೆಬಯಿಂದಡ – ಕುಂಞಿಬಾವಂಗೆ ಹೊಟ್ಟೆ ಇಳುದ್ದಡ – ಹೀಂಗೆಂತೆಲ್ಲ ಹೊತ್ತೋಪಲೆ!
ನೆಡಕ್ಕೊಂಡು ನೆಡಕ್ಕೊಂಡು ಪಾರೆಮಗುಮಾವನ ಮನಗೆ ಎತ್ತಿದೆಯೊ°.
~

ಏನು-ಒಳ್ಳೆದು ಮಾತುಕತೆ ಆತು, ಸುಕದುಕ್ಕ ಎಲ್ಲ ಕೇಳಿಗೊಂಡವು.
ಪೆರ್ಲದಣ್ಣನ ಸೋದರತ್ತೆಯ ಪೈಕಿ ಆರನ್ನೋ ಮಗುಮಾವಂಗೆ ಕೊಟ್ಟದಡ – ನೆಂಟಸ್ತನಲ್ಲಿ ಸುಮಾರುಜೆನ ಅವು ಹೇಂಗಿದ್ದವು, ಇವು ಹೇಂಗಿದ್ದವು ಕೇಳಿಗೊಂಡವು.
ಆಸರಿಂಗೆ ಬಂತು, ಅಜ್ಜಕಾನಬಾವಂಗೆ ಕಾಪಿ ಆಗ – ಚಾಯ.
ಒಪ್ಪಣ್ಣಂಗುದೇ ಸಿಕ್ಕಿತ್ತು ಒಂದು ಗ್ಳಾಸು ಕಾಪಿ, ಜರ್ಸಿದನದ ಹಾಲಿಂಗೆ ಡಿಕೋಕ್ಷನು ಹಾಕಿ ಗೋಬರುಗೇಸಿನ ಒಲೆಲಿ ಮಗುಅತ್ತೆ ಮಾಡಿದ್ದು!
~
ಪಾರೆಮಗುಮಾವಂಗೆ ಬೇಂಕು ರಿಠೇರ್ಡು(Retirement) ಆದ ಮತ್ತೆ ಮನೆಯಷ್ಟಕೇ.
ಬೇಂಕಿಲಿಪ್ಪಗ ಪುರುಸೊತ್ತೇ ಇಲ್ಲೆ, ಬೊಳುಂಬುಮಾವನ ಹಾಂಗೆ ಕಾಂಬಲೇ ಅಪುರೂಪ!! 😉
ಈಗ ಹಾಂಗಲ್ಲ, ಪುರುಸೊತ್ತೇ ಪುರುಸೊತ್ತು – ಮೂರೊತ್ತು ಕಾಲುನೀಡಿ ಕೂಪದು.
ಒಂದು ಟೀವಿ ಇದ್ದು. ಕೆಂಪುಕೆಂಪು ಕಾಣ್ತ ನಮುನೆ ದೊಡ್ಡ ಟೀವಿ. ಟೀವಿಯಷ್ಟೇ ದೊಡ್ಡ ಕೊಡೆ, ಮಾಡಮೇಗೆ ಬೆಶಿಲಿಂಗೆ ಆಕಾಶನೋಡಿಗೊಂಡು. ತಿಂಗಳಿಂಗೆ ಎರಡುಕಿಲಅಡಕ್ಕೆ ಸೊರುಗಿದರೆ ಅದರ್ಲಿ ಐನ್ನೂರು ಚಾನೆಲು ಕಾಣ್ತಡ
– ಯೇವತ್ತು ನೋಡ್ಳೆ ಬೇಕೆ, ಆರಿಂಗೆ ಪುರುಸೊತ್ತಿದ್ದು ಬೇಕೆ ಹೇಳಿ ಪರಂಚುಗು ಮಗುಮಾವ°.

ಟೀವಿ ತಂದಮೇಗೆ ಅವರಲ್ಲಿ ಆಸಗ್ತಿ ರಜಾ ಬದಲಾಯಿದು.
ಪುರುಸೊತ್ತಪ್ಪಗ ಅವು ಬೆಶಿಬೆಶಿ ಶುದ್ದಿ ನೋಡುಗು- ಕನ್ನಡ, ಮಲೆಯಾಳ ಶುದ್ದಿಗೊ, ಇಂಗ್ಳೀಶು ನ್ಯೂಸುಗೊ, ಬೀಬೀಸಿಲಿ ಬಪ್ಪ ಬೆಶಿಬೆಶಿ ಮಾತುಕತೆಗೊ – ಇನ್ನೂ ಏನೇನೋ!
ಏನಿದ್ದರೂ ಹೊತ್ತಪ್ಪಗ ಒರೆಂಗೆ ನೋಡಿರೆ ಬಂತು. ಇರುಳು ಮಾಂತ್ರ ಅವಕ್ಕೆ ಸರ್ವತಾ ಟೀವಿನೋಡ್ಳೆ ಸಿಕ್ಕ – ಹೇಳ್ತದು ಮಗುಮಾವನ ಬೇಜಾರು. ಮಗುಅತ್ತೆಯ ಇಷ್ಟದ ಶ್ಟಾರುಸಿಂಗರು ಬತ್ತಡ, ನೆಡಿರುಳು ಒರೆಂಗೆ!
ಅಂತೂ ದಿನ ಉದಿಯಾದರೆ ಇರುಳೊರೆಂಗೂ ಟೀವಿ ಓಡಿಗೊಂಡೇ ಇರ್ತು!
ಅದಿರಳಿ.
~
ಮೊನ್ನೆ ಹೊತ್ತಪ್ಪಗ ಆಸರಿಂಗೆ ಎಲ್ಲ ಕುಡುದ ಕೂಡ್ಳೇ ಒಂದರಿ ಟೀವಿಯ ಬಗ್ಗೆ ಗಮನ ಹೋತು.
ಟೀವಿಒಂಬತ್ತಡ! ಬಳ್ಳಾರಿಲಿ ಸಬೆ, ಜೆನಸಾಗರ, ಗವುಜಿ – ಹೇಳಿ ಬಂದುಗೊಂಡು ಇತ್ತು.
ಒಂದೇ ಸರ್ತಿ ಹೇಳಿದ್ದರೆ ಒಪ್ಪಣ್ಣಂಗೆ ತಲಗೆ ಹೋವುತಿತಿಲ್ಲೆ, ಆದರೆ ಇದು ಹತ್ತು ನಿಮಿಶಲ್ಲಿ ಇಪ್ಪತ್ತು ಸರ್ತಿ ಹೇಳಿದ್ದನ್ನೇ ಹೇಳಿತ್ತು!
ಎಂತಪ್ಪಾ, ಮತ್ತೆಲ್ಲ ಗೆರೆಗೊ ಬಾಯಿಪಾಟ ಬಪ್ಪಲೆ ಸುರು ಆತು. ಆದರೂ ಅವು ಹೇಳುದು ನಿಲ್ಲುಸಿದ್ದವಿಲ್ಲೆ. ಹೇಳಿಗೊಂಡೇ ಇದ್ದವು!
ಅದಾ – ಪುನಾ ಒಂದರಿ.

ಬಳ್ಳಾರಿಲಿ ಸಬೆ ನೆಡತ್ತಡ. ಎಲ್ಲೊರೂ ಒಕ್ಕೊರಲಿಂದ ಖಂಡುಸಿದವಡ. ಬೆಂಗುಳೂರಿಂದ ನೆಡಕ್ಕೊಂಡು ಹೋದ್ದಡ – ಹಾಂಗಡ, ಹೀಂಗಡ!!
ಎಂತಪ್ಪಾ ಇದು – ಕೇಳಿದೆ ಅಜ್ಜಕಾನ ಬಾವನತ್ರೆ.
ಅವಂಗೂ ಅರಡಿಯದ್ದೆ ಪೆರ್ಲದಣ್ಣನ ಮೋರೆ ನೋಡಿದ°.
– ಅಷ್ಟಪ್ಪಗ ಮಗುಮಾವ° ವಿವರ ಹೇಳುಲೆ ಸುರು ಮಾಡಿವು.
~
ಬಳ್ಳಾರಿಯ ಮಣ್ಣಿಂಗೆ ಚಿನ್ನದ ಕ್ರಯ ಅಡ.
ಚಿನ್ನಕ್ಕೆ ಬಯಂಕರ ಏರಿದ್ದು ಭಾವ, ಇನ್ನು ಮದುವೆತೆಗೆತ್ತು ಹೇಂಗೊ! ರಾಮ ರಾಮ, ಅದಿರಳಿ.
ಬಳ್ಳಾರಿಯ ಮಣ್ಣಿಂಗೆ ಚಿನ್ನದ ಕ್ರಯ ಅಡ. ಕೋಲಾರದ ಮಣ್ಣಿಲಿ ಚಿನ್ನ ಸಿಕ್ಕುತ್ತ ನಮುನೆಲಿ ಬಳ್ಳಾರಿಯ ಮಣ್ಣಿಲಿ ಕಬ್ಬಿಣ, ಮೇಂಗನೀಸು (ಕಬ್ಬಿಣದ ನಮುನೆ ಇನ್ನೊಂದು ಲೋಹ) ಸಿಕ್ಕುತ್ತಡ.
ಒಳ್ಳೆದೇ. ಭಾರತಲ್ಲಿ ಎಲ್ಲಾ ನಮುನೆ ಮಣ್ಣುಗೊ ಇದ್ದು ಭಾವ!
ಕೋಲಾರಂದ ಚಿನ್ನ ತೆಗವಲೆ ನಾವೇ ವೆವಸ್ತೆ ಮಾಡಿದ್ದು – ವಿಶ್ವೇಶ್ವರಯ್ಯನ ಕಾಲಲ್ಲಿ!
ಆದರೆ ಇದು ಈಗಾಣ ಕಾಲ ಇದಾ, ಬಳ್ಳಾರಿಯ ಮಣ್ಣಿಂದ ನಾವು ಎಂತರನ್ನೂ ತೆಗವಲಿಲ್ಲೆ. ಆ ಮಣ್ಣಿನ ಬೇರೆದೇಶಕ್ಕೆ ಮಾರುದಡ.
ಅವು ಮಣ್ಣಿಂದ ಲೋಹವ ತೆಗದು ಬೆಡಿಯೋ, ಪ್ರಿಜ್ಜೋ, ವಿಮಾನವೋ, ಕುಕ್ಕರೋ, ಬೈಕ್ಕೋ, ಎಂತಾರು ಮಾಡಿ ಒಪಾಸು ನವಗೆ ಮಾರುದಡ.
ನಾವು ಇರುವಾರ ಅದರ ಪೈಸಕ್ಕೆ ತೆಕ್ಕೊಂಬದಡ.

ಬಳ್ಳಾರಿಲಿ ಒಳುದ ಅಪುರೂಪದ ಹಸುರು ಗುಡ್ಡೆ!
ಬಳ್ಳಾರಿಲಿ ಒಳುದ ಅಪುರೂಪದ ಹಸುರು ಗುಡ್ಡೆ!, ಇನ್ನೆಷ್ಟು ದಿನವೋ..?!

~
ಅದೇನೇ ಇರಳಿ.
ಬಳ್ಳಾರಿಲಿಪ್ಪೋರಿಂಗೆ ಮಣ್ಣಿನ ಮಣ್ಣಾಂಗಟ್ಟಿ ಹೇಳಿ ಬಿಡ್ಳಿಲ್ಲೆ. ಮಣ್ಣು ಮಾರುದೇ ದೊಡ್ಡ ಕೆಲಸ ಅಡ.
ಮಾರಿಮಾರಿ ಒಳ್ಳೆತ ದುಡುದ್ದವಡ. ನಮ್ಮ ಅಡಕ್ಕೆತೋಟ ಎಲ್ಲ ಲೆಕ್ಕವೇ ಇಲ್ಲೆಡ.
ಬಳ್ಳಾರಿಲಿ ಲೋರಿಲಿ ತುಂಬುಸಿ, ಕೊಡೆಯಾಲಕ್ಕೆ ತಂದು, ಅಲ್ಲಿಂದ ಹಡಗಿಲಿ ತುಂಬುಸಿ, ಆ ಹಡಗಿನ ಪಾಕಿಸ್ತಾನಕ್ಕೋ, ಚೀನಕ್ಕೋ, ಜಪಾನಿಂಗೋ – ಆರ ಕೈಂದ ಅದರ ಶುದ್ದಮಾಡ್ಳೆ ಹರಿತ್ತೋ – ಅವರ ಕೈಗೆ ಕೊಟ್ಟು ಕೈ ಮುಗಿವದಡ.
ಅವು ಕೊಟ್ಟಷ್ಟು ಪೈಸೆ ತೆಕ್ಕೊಂಬದು. ಗುಡ್ಡೆಮಣ್ಣಿಂಗೆ ಅಷ್ಟಾರೆ ಅಷ್ಟು – ಸಿಕ್ಕುತ್ತಿಲ್ಲೆಯೋ! ಹೇಳಿಗೊಂಡು.

ಉಂಬಲೆ ಗೆತಿ ಇಲ್ಲದ್ದ ಎಷ್ಟೋ ಜೆನ ಹಾಂಗೆ ಮಾಡಿ ಈಗ ದೊಡ್ಡ ಆಯಿದವಡ.
ಕೆಲವು ಜೆನ ಅಂತೂ ಹೆಲಿಕಾಪ್ಟರು ಮಡಗುವಷ್ಟು ದೊಡ್ಡ ಆಯಿದವಡ!
ರಜ ದೊಡ್ಡ ಜೆನ ಆದ ಕಾರಣ ರಾಜ್ಯ-ಕೇಂದ್ರ ಸರಕಾರಲ್ಲಿದೇ ದೊಡ್ಡ ಸ್ಥಾನ ಮಾಡಿಗೊಂಡಿದವಡ – ಎಂತೆಲ್ಲ ಹೇಳಿದವು ಮಗುಮಾವ.
~

ಅಷ್ಟೊತ್ತು ಒರೆಗುದೇ ಮಾತಾಡದ್ದೆ ಕೂದ ಪೆರ್ಲದಣ್ಣ ಮಾತಾಡ್ಳೆ ಸುರುಮಾಡಿದ.
ಅವಂಗೆ ಮಾತಾಡಿರೆ ಕಾಪಿಕುಡಿವಲೆಡಿತ್ತಿಲ್ಲೆ, ಹಾಂಗೆ ಅವಂಗೆ ಮಾತು ಕಮ್ಮಿ!

ಹ್ಮ್, ಈಗ ಬರೇ ಓಟು ಒಂದೇ ರಾಜಕೀಯ ಅಡ. ತತ್ವ ಹೇಳ್ತದು ಆರತ್ರೂ ಇಲ್ಲೆಡ.
ದೊಡಾ- ರಾಜ್ಯ ಒಳುಶುವವರ ಹಾಂಗೆ ಬೆಂಗುಳೂರಿಲಿ ಕೂದ ಕೆಲವು ಜೆನ ಬಳ್ಳಾರಿಯ ಗಣಿಗಾರಿಕೆ ನಿಲ್ಲುಸುತ್ತೆಯೊ° – ಹೇಳಿಗೊಂಡು ಹೆರಟದವಡ!
ಹೆರಟು ಅರ್ದ ಗಂಟೆ ಅಪ್ಪಗಳೇ, ಯೇಸಿ ಇಲ್ಲದ್ದೆ ಮೈ ಬೆಗರಿದ್ದಡ. ಮಣ್ಣು ಹಿಡುದು ಬೆಳಿಅಂಗಿ ಪೂರ ಕೆಂಪಾಯಿದಡ.
ನೆಡಕ್ಕೊಂಡೇ ಹೆರಟದಡ!
ಮೂರು ಜೆನ ಪರಸ್ಪರ ವಿರೋಧಿಗೊ ಇದ್ದ ಕಾರಣ ಆಚವ° ಮನುಗುವನ್ನಾರ ಇವಂದೆ ನೆಡೆಯಕ್ಕಲ್ಲದೋ – ಹಾಂಗೂ ಹೀಂಗೂ ಜೀಕಿದವಡ.
ಬೆಂಗುಳೂರಿಂದ ಹೆರಟವು ತುಮಕೂರಿಂಗೆ ಎತ್ತುವಗ ಜೆನ ಅರ್ದ ಆಯಿದಡ. ಅಷ್ಟಪ್ಪಗ ಜೆನ ಕಮ್ಮಿ ಅಪ್ಪಲಾಗ ಹೇಳ್ತ ಲೆಕ್ಕಲ್ಲಿ ಆಯಾ ಜಿಲ್ಲೆಯ ಪಾರ್ಟಿ ಅಧ್ಯಕ್ಷಂಗೆ ಕಂತ್ರಾಟು ಕೊಟ್ಟದಡ, ಜೆನ ಬ(ತ)ರುಸುಲೆ.
ಅದರಿಂದ ಮತ್ತೆ ಒಳ್ಳೆತ ಜೆನ ಆಯಿದಡ.
ಗೆದ್ದೆಲಿ ದುಡಿವದರಿಂದ ಹೆಚ್ಚು ಅಂತೇ ಕೈಬೀಸಿ ನೆಡದರೆ ಸಿಕ್ಕುತ್ತಡ ಭಾವ – ಚೆ, ನವಗೂ ಹೋತಿಕ್ಕಲಾವುತಿತು – ಹೇಳಿದ ಅಜ್ಜಕಾನಬಾವ!
ಹಾಂಗೆ ಬಂದವಕ್ಕೆ ಧಾರಾಳ ತಿಂಬಲೆ-ಕುಡಿವಲೆ ಸಿಕ್ಕುತ್ತಡ!
ನಡವದು ಹೇಳಿರೆ ಬರೇ ನಡಕ್ಕೊಂಡೇ ಹೋಪದು ಹೇಳಿ ಏನೂ ಅಲ್ಲಡ. ಎಡೆಲಿ ತುಂಬ ಬಚ್ಚಿತ್ತು ಕಂಡ್ರೆ ಒಂದು ರಜ್ಜ ವಾಹನಲ್ಲಿ ಹೋಕಡ..

ಗಾಂದಿ ಅಜ್ಜನ ಹಾಂಗೆ ಬರೇ ಕಾಲಿಲಿ ನಡದ್ದದುದೇ ಅಲ್ಲ. ಒಳ್ಳೆಕಂಪೆನಿಯ ಶೂಮೆಟ್ಟು ಹಾಕಿಗೊಂಡಿತ್ತಿದ್ದವಡ – ರೂಪತ್ತೆಯ ಮಗನ ಹಾಂಗೆ.
ಶೀತ ಜೊರ ಬಂದರೆ ಫೋರಿನಿಂಗೆ ಹೋಗಿ ಮದ್ದು ಮಾಡೆಕ್ಕಾವುತ್ತಿದಾ ಕೆಲವು ಜನಕ್ಕೆ. ಹಾಂಗಿಪ್ಪಗ ಇನ್ನು ಇಲ್ಲಿ ಎಂತಾರು ಆದರೆ ಎಂತ ಮಾಡುತ್ಸು? ಆ ಹಳ್ಳಿಲಿ ಸರಿಯಾದ ಡಾಗುಟ್ರೂ ಸಿಕ್ಕವು. ಅದಕ್ಕೆ ಅವಕ್ಕೆ ಬೇಕಾಗಿ ಒಟ್ಟಿಂಗೆ ಒಂದು ಡಾಗುಟ್ರಕ್ಕಳ ಗುಂಪುದೇ ಇದ್ದತ್ತಡ.
ಇವರ ಒಯಿವಾಟಿಲಿ ಅವಕ್ಕೂ ಒಂದು ಯಾತ್ರೆ.
ಇಷ್ಟೆಲ್ಲ ಮಾಡೆಕ್ಕಾರೆ ಮೊದಲು ಒಂದು ಪ್ರೇಗ್ಟೀಸು ಹೇಳಿ ಇದ್ದತ್ತಡ. ಶಾಲೆಲಿ ವಾರ್ಷಿಕೋತ್ಸವಕ್ಕೆ ವಾಣಿಟೀಚರು ನಾಟಕ ಅಭ್ಯಾಸ ಮಾಡುಸಿದ ನಮುನೆಲಿ!

ನಡಕ್ಕೊಂಡು ಹೋಪಾಗ ಅಲ್ಲಲ್ಲಿ ಬಾಷಣವೂ ಇದ್ದತ್ತಡ! ಬಚ್ಚಿದ್ದಕ್ಕೆ ರಜಾ ಒರಗಿ ರೆಶ್ಟು ಮಾಡ್ಳೆ ಒಂದು ಸಮೆಯ ಬೇಕನ್ನೆ – ಹೇಳಿ ಪೆರ್ಲದಣ್ಣನ ನೆಗೆ. ಅವ° ಎಂತಾರು ನೆಗೆ ಹೇಳಿರೆ ಅವಂಗೆ ನೆಗೆ ಬಾರ, ಬಾಕಿದ್ದವಂಗೆ ಬಾರದ್ದೆ ಇರ!
ಒಬ್ಬ° ಮಾತಾಡುವಗ ಒಳುದವು ಒರಗುದೂಳಿ ತೋರ್ತು! – ಉಮ್ಮಪ್ಪ ನವಗರಡಿಯ.
ಹಳೆಮನೆ ಅಣ್ಣ ಪಟ ತೆಗದ್ದನೋ ಏನೊ. 😉

ಮದಲಾಣವರ ಚಳುವಳಿಗೂ ಈಗಾಣವರದ್ದಕ್ಕೂ ಎಷ್ಟು ವಿತ್ಯಾಸ?!
ಹೇಳುದು ಮಾಂತ್ರ ಎಂಗಳೂ ಹಾಂಗೇ ಹೋರಾಟ ಮಾಡೊದು ಹೇಳಿ. ಮದಲಾಣವರ ಪ್ರಾಮಾಣಿಕತೆಯ ‘ಅಭಾವ’ ಹೇಳಿದ ಅಜ್ಜಕಾನ ಭಾವ. ಅದುದೇ ಕಾಲಕ್ಕೆ ತಕ್ಕ ಹಾಂಗೆ ಬದಲಾಯಿದು!

~

ಟೀವಿಯವಕ್ಕೆ ಅಂತೂ ನಿತ್ಯವೂ ಒಂದೊಂದು ಶುದ್ದಿ. ಪ್ರತಿ ಹೊತ್ತಿಂಗೂ ಶುದ್ದಿ ಸಿಕ್ಕಿದ ಕೊಶಿ (ಒಪ್ಪಣ್ಣನ ಹಾಂಗೆ! 😉 )
ದಿನಕ್ಕೆ ಅರ್ದ ಒಂದು ಗಂಟೆಯ ಕಾರ್ಯಕ್ರಮ ಮಾಡಿ ಹೇಳಿದ್ದನ್ನೇ ಕನಿಷ್ಠ ನೂರಯಿವತ್ತು ಸರ್ತಿ ಹೇಳಿದ್ದವಡ – ಮಗುಮಾವ ಪಿಸುರಿಲಿ ಹೇಳಿದವು.

ಹತ್ತು ಹದಿನಾರು ದಿನ ನೆಡದು ನೆಡದು ಅಂತೂ ಒಂದು ಗಳಿಗೆಲಿ ಬಳ್ಳಾರಿಗೆ ಎತ್ತಿದವಡ!
ಆ ದಿನ ಎಂಗ ನೋಡುವಗ ಟೀವಿಲಿ ಅದರದ್ದೇ ಕಾರ್ಯಕ್ರಮ ಬಂದುಗೊಂಡಿದ್ದದಡ, ಟೀವಿಲಿ!
ಎತ್ತಿದ ದಿನಾಣ ಜೋರು ಬೊಬ್ಬೆ!
ಜೆನರ ಕಂಡಾಬಟ್ಟೆ ಬ(ತ)ರುಸಿದ್ದವಡ ಅವು. ಕೆಲವು ಜೆನ ಬೆಳಿಟೊಪ್ಪಿ ಹಾಕಿಗೊಂಡು ಭಾಷಣಮಾಡಿಗೊಂಡು ಇತ್ತಿದ್ದವಡ!
ಎಷ್ಟು ಪೈಸೆ ಅಂತೇ ಮುಗಿಗು ಅಲ್ಲದೋ – ಕೇಳಿದ° ಅಜ್ಜಕಾನ ಬಾವ°.
ಪೈಸೆಯೋ – ಎಷ್ಟೋ ಸಾವಿರ ಲಕ್ಷ ರುಪಾಯಿ ಮುಗಿಗು- ಹೇಳಿದ° ಪೆರ್ಲದಣ್ಣ.
ಬೇರೆ ಆರೋ ಗಣಿಯವೇ ಕೊಟ್ಟದಡ ಈ ಪೈಸೆಯ!!
~
ಅಂತೂ ಕಾರ್ಯಕ್ರಮ ಮುಗಾತು.
ಈಗ ಒಂದಷ್ಟು ಪ್ರಶ್ಣೆಗೊ.
ಅಪ್ಪಲೆ ಪೆರ್ಲದಣ್ಣನೂ – ಪಾರೆಮಗುಮಾವನೂ ಪರಸ್ಪರ ಕೇಳಿದಾಂಗೆ ಕಂಡುಗೊಂಡು ಇತ್ತು.ಆದರೆ ಅವು ಕೇಳಿದ್ದು ಜೆನಂಗಳ ಹತ್ರೆ ಹೇಳಿ ಲೆಕ್ಕ! ಕೇಳಿದ್ದದರನ್ನೇ ಕೇಳುಗು. ಜೆನಂಗೊ ಹೇಳಿದ್ದದರನ್ನೇ ಹೇಳುಗು!
ಅದರ ನೋಡಿ ನೋಡಿ ಬೊಡುದತ್ತೂಳಿ ಪರಂಚಿಗೊಂಡು ಮಗುಮಾವ ಟೀವಿ ಸಣ್ಣ ಮಾಡಿದವು, ಟೀವಿಯ ಅಲ್ಲ, ಅದರ ಶೆಬ್ದವ – ಸುಮ್ಮನೆ ಹರಟೆ ಎಂತ್ಸಕ್ಕೆ ಹೇಳಿಗೊಂಡು.
ಎಲ್ಲ ಮುಗುದ ಮತ್ತೆ ಈ ವಿಷಯಲ್ಲಿ ಎಂಗಳೇ ರೆಜಾ ಚರ್ಚೆ ಮಾಡಿದೆಯೊ°.
~

ಬಳ್ಳಾರಿಲಿ ಗಣಿ ಗರ್ಪುಲೆ ಸುರು ಆದ್ದು ಇಂದು ನಿನ್ನೆ ಅಲ್ಲ ಭಾವ! ಒರಿಶಾನುಗಟ್ಳೆ ಆತಡ.
ಆದರೆ ಎಲ್ಲೊರುದೇ ಬೈವದು ಈಗ-ಒಂದು ಐದಾರೊರಿಶಂದ ಗರ್ಪುವವರ.
ಮೊದಲಾಣವರ ಎಂತದೂ ಹೇಳದ್ದೆ ಮತ್ತಾಣವರ ಬೈದರೆ ಹೇಂಗಕ್ಕು?
ಮೊದಲೇ ಮಾಡ್ಳೆ ಸುರುಮಾಡಿದವನನ್ನೂ ಬಯ್ಯೆಕ್ಕು ಭಾವ, ಅಲ್ಲದೋ?

ಮದಲಾಣವು ಸುರು ಮಾಡಿದ್ದರಿಂದಾಗಿ ಈಗ ಇಷ್ಟು ಆದ್ದದು.

ಅರುವತ್ತೊರಿಶಂದ ಅತ್ಲಾಗಿ ತಲೆಯೂ ಹಾಕದ್ದೆ, ಈಗ ಜೆನಂಗಳ ಕಟ್ಟಿಗೊಂಡು ಬಂದರೆ ಆ ಊರು ಅಭಿವುರ್ದಿ ಆಯಿದು ಹೇಳಿ ಲೆಕ್ಕ ಅಲ್ಲದೋ?

ಮದಲಾಣವು ಮಾಡಿದವೂಳಿ ಈಗಾಣವೂ ಮಾಡೆಕ್ಕೂಳಿತ್ತಿಲ್ಲೆ ಹೇಳುವ°.
ಇವಕ್ಕೆ ನಿಲ್ಲುಸುಲಾವುತಿತು. ಎಂತರ ಮಾಡುತ್ಸು ಎಲ್ಲೊರಿಂಗೂ ಪೈಸದ ಆಶೆ!
ಮಣ್ಣಿಂಗೆ ಪೈಸೆ ಸಿಕ್ಕುತ್ತು ಹೇಳಿರೆ ಬಿಡುಗಾ?
ಶುದ್ದಿ ಗೊಂತಾದರೆ ನಮ್ಮ ಬಟ್ಯನೂ ಕೊಟ್ಟು ತೆಕ್ಕೊಂಡು ಹೋಕು ಗರ್ಪುಲೆ!  😉

ಗರ್ಪಿದವು ಗರ್ಪಿದವು ಗರ್ಪಿಯೇ ಗರ್ಪಿದವು!
ಕೊಟ್ಟು ಪಿಕ್ಕಾಸಿಲಿ ಅಲ್ಲ – ದೊಡ್ಡ ದೊಡ್ಡ ಮಿಶನಿಲಿ. ಲೋಡುಗಟ್ಳೆ ಮಣ್ಣು!
ಕ್ರೇನು, ಜೇಸೀಬಿ, ಬುಲ್ಡೋಜರು, ಲೋರಿ, ಟ್ರೇಗ್ಟರು – ಎಲ್ಲವುದೇ ಇದ್ದು.

ಹಸುರು ಮರಂಗೊ ಎಲ್ಲಿದ್ದು? ಕೆಂಪು ಗುಡ್ಡೆ ಇಲ್ಲಿದ್ದು..!
ಹಸುರು ಮರಂಗೊ ಎಲ್ಲಿದ್ದು? ಕೆಂಪು ಗುಡ್ಡೆ ಇಲ್ಲಿದ್ದು..!

~

ಈಗ ಬಳ್ಳಾರಿಲಿ ಕೆಲವು ದಿಕ್ಕೆ ದೊಡ್ಡದೊಡ್ಡ ಗುಡ್ಡೆಗಳೇ ಇಲ್ಲೆಡ ಭಾವ! ಪೆರ್ಲದಣ್ಣ ಹೋಗಿಬಯಿಂದನಡ!
ಹಸಿರುಬಣ್ಣದ ದೊಡಾ ಗುಡ್ಡೆ ಇಪ್ಪ ಜಾಗೆಲಿ ಕೆಂಪು ಬಣ್ಣದ ದೊಡಾ ಗುಂಡಿ ಕಾಣ್ತಡ.
ಹಸಿರಸಿರು ಬಣ್ಣದ ಬಲ್ಲೆಗೊ ಎಲ್ಲ ಕಾಲಿ ಆಯಿದಡ.
ಈಗ ಅಂತೂ ಒಂದು ಜೆನ ಹಾಂಗೇ ಮಾಡಿಗೊಂಡಿದಡ ತಲೆಕಸವನ್ನುದೇ ತೆಗದು.
ನೋಡಿರೆ ಬೇಜಾರಾವುತ್ತಡ.
ಇದು ನಿಂಬದು ಯೇವತ್ತು ಅಂಬಗ?

ಮಗುಮಾವನೂ ಪೆರ್ಲದಣ್ಣನೂ ಮಾತಾಡಿಗೊಂಡೇ ಇತ್ತಿದ್ದವು, ಟೀವಿಲಿ ಕಾರಿಯಕ್ರಮ ಮುಗುದಮತ್ತೆಯೂ..
ಎಂಗೊ ಹೆರಟೆಯೊ°.
ಪೆರ್ಲದಣ್ಣ ಅವರಲ್ಲಿ ಆ ದಿನ ನಿಂದ.
~
ತಲೆಲಿ ಇಡೀ ಬಳ್ಳಾರಿಯ ಮಣ್ಣನ್ನೇ ಹೊತ್ತುಗೊಂಡು ಪಾರೆ ಮಗುಮಾವನಲ್ಲಿಂದ ಹೆರಟಾತು.
ಮನೆಗೆ ಹೋಪ ದಾರಿಲಿ ಮಾಷ್ಟ್ರುಮಾವನ ಮನಗೂ ಒಂದರಿ ಹೊಕ್ಕಿಕ್ಕಿ ಹೆರಡುವೊ° ಹೇಳಿ ಒಳಹೋದೆ. ಮಾಷ್ಟ್ರುಮಾವ° ಅಡಕ್ಕೆಯ ಹೋಳುಮಾಡಿಗೊಂಡೇ ಮಾತಾಡಿದವು. ಬಳ್ಳಾರಿದು ಎಲ್ಲವೂ ಗೊಂತಿದ್ದು ಹೇಳ್ತ ನಮುನೆ ಮಾತಾಡ್ಳೆ ಹೆರಟ° ಒಪ್ಪಣ್ಣ.
ಅಷ್ಟಪ್ಪಗ ಮಾಷ್ಟ್ರುಮಾವ° ಒಪ್ಪಣ್ಣಂಗೇ ಗೊಂತಿಲ್ಲದ್ದ ಕೆಲವು ಶುದ್ದಿ ಹೇಳಿದವು:
ಐನ್ನೂರೊರಿಶ ಮದಲು ಅದೇ ಜಾಗೆ ಅದೇ ನಮುನೆ ಶ್ರೀಮಂತ ಆಗಿದ್ದಿದ್ದಡ.
ವಿಜಯನಗರದ ಜಾಗೆಲಿ ಸಂಪತ್ತು ಸೊರುಗಿಯೊಂಡು ಇತ್ತಡ.
ಕೃಷ್ಣದೇವರಾಯ° ಕಟ್ಟಿದ ಒಯಿಭವದ ಹಂಪೆ ರಾಮರಾಯನ ಕಾಲಕ್ಕೆ ಮುಳುಗಿತ್ತಡ.
ದೂರದ ರಾಯಲ ಸೀಮೆಗೆ ಅವು ಓಡಿಅಪ್ಪಗ ಹಂಪೆಯ ಸಿಕ್ಕಿಸಿಕ್ಕಿದವು ದೋಚಿದ್ದವಡ. ಈಗ ಅದೇ ಜಾಗೆಯ, ವೈಭವವ ಮತ್ತೊಂದರಿ ಸಿಕ್ಕಿಸಿಕ್ಕಿದವು ದೋಚಿಗೊಂಡು ಇದ್ದವಡ.
– ಒಪ್ಪಣ್ಣಂಗೆ ಪೂರ್ತಿ ಅರ್ತ ಆಯಿದಿಲ್ಲೆ. ಇನ್ನೊಂದರಿ ಆ ಶುದ್ದಿ ಮಾತಾಡುವೊ° ಹೇಳಿಕ್ಕಿ ಕತ್ತಲಾದ ಲೆಕ್ಕಲ್ಲಿ ಬೀಸಬೀಸಕೆ ನೆಡದು ಮನಗತ್ತಿದೆ.
~
ಪ್ರಶ್ನೆಗೊ ಎಂತದೇ ಇರಳಿ ಭಾವ!
ಒಪ್ಪಣ್ಣಂಗೆ ಅನುಸಿದ್ದು ಇಷ್ಟೇ.
ಗಣಿಯ ಆರೇ ತೆಗೆಯಲಿ, ಹೇಂಗೆಯೇ ತೆಗೆಯಲಿ, ಯೇವ ಜಾತಿಯವನೇ ಮುಗುಶಲಿ, ಯೇವ ಪಾರ್ಟಿಯವನೇ ತೆಗೆಯಲಿ  – ಅವು ಮುಗುಶುದು ಭಾರತದ ಮಣ್ಣೇ ಅಲ್ಲದೋ?
ಬಗವದು ನಮ್ಮ ಭಾರತಮಾತೆಯ ಹೊಟ್ಟೆಯನ್ನೇ ಅಲ್ಲದೋ?
ಅದರ ಮಾರುದು ನವಗೇ ಉಪದ್ರ ಮಾಡ್ತ ಚೀನ,ಪಾಕಿಸ್ತಾನಕ್ಕೆ ಅಲ್ಲದೋ?  – ಅದರ ಬದಲು ನವಗೇ ಅದರ ಉಪಯೋಗುಸಿಗೊಂಬಲೆ ಎಡಿತ್ತಿಲ್ಲೆಯೋ?
ನಮ್ಮ ಸಂಪತ್ತುಗಳ ನಾವೇ ಉಪಯೋಗುಸಿರೆ ಅದುವೇ ಅಲ್ಲದೋ ಸ್ವಾತಂತ್ರೋತ್ಸವ?
ಇನ್ನೊಬ್ಬನ ಹಂಗು ನವಗೆ ಬೇಕೋ?

ಬಲ್ಲೆ ಬೆಳೆಯದ್ರೂ ಚಿಂತೆ ಇಲ್ಲೆ, ಬೆಡಿಮಡುಗದ್ರೆ ಸಾಕು ಆಚೀಚವು! ಎಂತ ಹೇಳ್ತಿ?
ಇಲ್ಲಿಂದ ತೆಕ್ಕೊಂಡೋಗಿ ಪಾಕಿಸ್ತಾನಕ್ಕೆ ಮಾರಿರೆ ವ್ಯಾಪಾರಲ್ಲಿ ನಮ್ಮದೇ ಸೊತ್ತಿಲಿ ನಮ್ಮಂದ ಉಶಾರಿ ಆವುತ್ತವು. ಅಲ್ಲದೋ?
ನಮ್ಮ ಮಣ್ಣಿಲಿಪ್ಪ ಲೋಹವನ್ನೇ ಬೆಡಿಮಾಡಿ ನವಗೇ ಗುರಿಮಡುಗುತ್ತವನ್ನೆ.
ಅದರಿಂದ ಮದಲು ನವಗೇ ಒಟ್ಟಾಗಿ, ನಮ್ಮ ಅದಿರಿನ ಸ್ವತಂತ್ರವಾಗಿ ಉಪಯೋಗುಸುಲಾಗದೋ? ಸ್ವತಂತ್ರ ದಿನ ರಜೆಲಿ ಕೂದಂಡು ಆಲೋಚನೆ ಮಾಡುವೊ°.
ಆಗದೋ? ಏ°?

ಒಂದೊಪ್ಪ: ಬಲ್ಲೆ ಕಾಲಿ ಆಗಿ ಬಳ್ಳಾರಿ ಕೆಂಪಾತು. ಬೆಡಿ ಜಾಸ್ತಿ ಆಗಿ ಕಾಶ್ಮೀರ ಕೆಂಪಾತು!
ಸ್ವಾತಂತ್ರೋತ್ಸವದ ಶುಭಾಶಯಂಗೊ!!

ಸೂ: ಬಳ್ಳಾರಿಯ ಸಂಡೂರು ಹೇಳ್ತ ಜಾಗೆಯ ಈಗಾಣ ಚಿತ್ರಣವ ಇಲ್ಲಿ ನೋಡ್ಳಕ್ಕಡ. ಪೆರ್ಲದಣ್ಣ ಕೊಟ್ಟ ಸಂಕೊಲೆ ಇಲ್ಲಿದ್ದು:
(ಸಂಡೂರು)

83 thoughts on “ಬಲ್ಲೆಯೂ ಬೆಳೆಯದ್ದ ಹಾಂಗೆ ಬೋಳುಸಿದವಡ ಬಳ್ಳಾರಿಯ..!

  1. ನೆಗೆಗಾರ°, ನೀರ್ಕಜೆ ಅಪ್ಪಚ್ಚಿ ಅಜ್ಜಕಾನ ಬಾವ, ರಘು ಬಾವ –ಚೆಲಾ ಬಾರಿ ರೈಸಿದ್ದಾತ…ಬಪ್ಪಲೆ ರಜ್ಜ ಲೇಟಾತು, ಇಲ್ಲದ್ರೆ ಆನುದೆ ಸೇರ‍್ತಿತೆ ನಿಂಗಳೊಟ್ಟಿಂಗೆ..

    1. ಎಂತ ಕೆಪ್ಪಣ್ಣೋ ಬಪ್ಪಾಗ ಲೇಟಾದ್ದು??? ವಿಮಾನದ ಟೈರು ಪೇಚಾತೋ ಅಲ್ಲ ಡ್ರೈವರು ರಜೆಲಿತ್ತಿದ್ದೋ??? 😉

  2. ಬಳ್ಳಾರಿಗೆ ಹೆರಟು ಪೇಷೆಂಟು ಆದ್ದದಲ್ಲ ಭಾವಾ, ಅದರ ಹೆಸರು ಕೇಳಿಯೆ ಜ್ವರ ಸುರು ಆಯ್ದು.. 🙂 ಬಳ್ಳಾರಿ ಹೇಳಿರೆ ಗುಣಾಜೆಮಾಣಿಗೆ ಮಾತ್ರಾ ಭೋ ಪ್ರೀತಿ… 🙂

  3. ಬಲ್ನಾಡು ಮಾಣಿ ಬಳ್ಳಾರಿಗೆ ಹೆರಟು ಪೇಷೆಂಟು ಆಯಿದನಡ.. ಜೀಮೈಲಿಲಿ ಬರದ್ದ.. ಗುರಿಕ್ಕಾರಂಗೆ ಪಟ ಕಳ್ಸಿದ್ದೆ.. ಪುರುಸೋತ್ತು ಇದ್ದರೆ ಹಾಕುಗು..

  4. ಯೆ ಒಪ್ಪಣ್ಣ ಭಾವ , ನಿನ್ನ ಲೇಖನ ಓದಿಕ್ಕಿ ಅನು ಸೀದಾ ಸ೦ಡೂರಿ೦ಗೆ ಹೊಗಿ ನೊಡಿಕ್ಕಿ ಬೈಯಿ೦ದೆ. ಅದರೆ ಅಲ್ಲಿ ಈಗ ಏಲ್ಲ ನಿ೦ದಿದು. ಯವಾಗ ಸುರು ಅಕ್ಕು ಗೊ೦ತಿಲೆ. ಅಲ್ಲಿಯ ಜನ ಜೀವನ ಏಲ್ಲಾ ಅಸ್ತವ್ಯಸ್ತ. ಮನಗ ಎಲ್ಲಾ ಕೆ೦ಪು ಬಣ್ಣ .
    ಅವರ ಸಮಸ್ಯೆ ನೊಡಿದರೆ ನಮ್ಮ ಊರಿನ ಸಮಸ್ಯೆ ಲೆಕ್ಕಕ್ಕೆ ಇಲ್ಲೆ. ನಾವು ಜಾಗ್ರೆತೆಲಿ ಇಲ್ಲದ್ದರೆ ನಮ್ಮ ಊರಿನ ಹಿ೦ದೆ ಇಪ್ಪ ಕುಮಾರಪರ್ವತವೂ ಖಾಲಿ ಅಕ್ಕು.

    1. ಹಾಂಗಾರೆ ಎಸ.ಪಿ.ಗೆ ಇಪ್ಪತ್ತು ವರುಷ ಹಿಂದೆಯೇ ಕನಸು ಬಿದ್ದು ಪದ ಹೇಳಿದ್ದದೋ…

      ಕೆಂಪಾದವೋ ಎಲ್ಲಾ ಕೆಂಪಾದವೋ
      ಹಸಿರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
      ನೆತ್ತರ ಕುಡಿದಂಗೆ ಕೆಂಪಾದವೋ

      ಬೋಳಾದವೋ ಎಲ್ಲ ಬೋಳಾದವೋ
      ಸುತ್ತ ಕಾಡುಗ ಎಲ್ಲ ದೊಡ್ಡ ಗುಡ್ಡೆಗ ಎಲ್ಲ
      ತಲೆ ಚಾಣೆ ಆದಂಗೆ ಬೋಳಾದವೋ…

      1. ಕೆಂಪಾದವೋ … ಬರದ ಲಂಕೇಶ್ ಈಗ ಇರ್ತಿದ್ದರೆ, ಗುರುಗಳ ಹೀಯಾಳಿಸಿ ಬರವಲೆ ಪುಟಂಗೊ ಸಾಕಾವ್ತಿತಿಲ್ಲೆ. ಗಣಿದೊರೆಗಳ ಬಗ್ಗೆಯೂ ಸಾಕಷ್ಟು ಪದ್ಯಂಗೊ ನೀಲು ಬರೆತ್ತಿತ್ತು.

  5. ಒಪ್ಪಣ್ಣ ಯಾವತ್ತೂ ರಾಜಕೀಯದ ಬಗ್ಗೆ ಬರೆತ್ತಾ° ಇಲ್ಲೆ, ರಾಜಕೀಯ ಅವಂಗೆ ಆಗಲೂ ಆಗ ಅಲ್ಲದಾ ಒಪ್ಪಣ್ಣ?
    ಒಪ್ಪಣ್ಣನ ಬಗ್ಗೆ ಸರ್ಪಮಲೆ ಮಾವನ ಕಾಳಜಿ, ಪ್ರೀತಿ ಕಂಡು ಹೃದಯ ತುಂಬಿ ಬಂತು. ಹಿರಿಯರಾದ ನಿಂಗಳ ಆಶೀರ್ವಾದ ಯಾವತ್ತೂ ಇರಲಿ..
    ಆದರೆ ಈಗ ನಮ್ಮ ನಾಡಿನ ಅ(ವ್ಯ) ವಸ್ಥೆ ಕಂಡು ತಡೆಯದ್ದೆ ಅವನೊಳ ಇಪ್ಪ ಭಾರತೀಯ° ಬರೆಶಿದ್ದು ಶುದ್ದಿಯ ಹೇಳಿ ಎನಗೆ ಅನುಸುತ್ತು. ಮಾಷ್ಟ್ರು ಮಾವ° ಚರಿತ್ರೆ ಕತೆ ಹೇಳುದು ಹೆಚ್ಚಾಗಿ ಕೇಳ್ತನ್ನೇ !!! ಹಾಂಗಿಪ್ಪಗ ಅದರ ಬೈಲಿಂಗೆ ಎತ್ತುಸೆಕ್ಕಾದ್ದು ಅವನ ಕರ್ತವ್ಯವುದೇ!! ಶುದ್ದಿ ಸಕಾಲಿಕವಾಗಿ ಬಯಿಂದು.
    ನಮ್ಮ ಹಿರಿಯೋರು ಯಾವ ಯೋಚನೆಲಿ ನವಗೆ ಸ್ವಾತಂತ್ರ್ಯ ಹೇಳುವ ಸ್ವಾಭಿಮಾನವ ಕೊಡುಸಿದವೋ ಇಂದು ಅದು ಯಾವ ರೂಪಲ್ಲಿದ್ದು ಹೇಳಿ ನಾವು ಯೋಚನೆ ಮಾಡೆಕ್ಕಲ್ಲದಾ? ನಮ್ಮ ಮುಂದಾಣೋರುದೆ ಇದೇ ದಾರಿ ಹಿಡಿಗಾ ಇದರಿಂದ ಕಡೆ ಅಕ್ಕಾ ಹೇಳಿ ಯೋಚನೆ ಮಾಡುದು ನಮ್ಮ ಕೈಲಿದ್ದು. ನಮ್ಮ ಮಕ್ಕೊಗೆ ಆದರೂ ಸರಿ ತಪ್ಪು ಹೇಳಿ, ಸ್ವಾತಂತ್ರ್ಯದ ನಿಜವಾದ ಕಲ್ಪನೆಯ ಅವಕ್ಕೆ ಕೊಟ್ಟು ಅವು ದಾರಿ ತಪ್ಪದ್ದ ಹಾಂಗೆ ನೋಡಿಗೊಂಬಲೆ ಅಕ್ಕು ಅಲ್ಲದಾ?

    1. ಗುಡ್ಡೆ ಗರ್ಪಿ ಬೇಕಾಬಿಟ್ಟಿ ಮಾರುದುದೇ ಒಂದು ನಮುನೆ ಸ್ವಾತಂತ್ರವೇ ಅಲ್ಲದೋ -ಹೇಳಿ ನಮ್ಮ ಪೆರ್ಲದಣ್ಣ ಗುಟ್ಟಿಲಿ ಕೇಳಿದ° ಎನ್ನತ್ರೆ! 🙂

  6. ರಾಜಕೀಯದ ಬಗ್ಗೆ ನಮ್ಮ ಬೈಲಿಲ್ಲಿ ಮಾತಾಡದ್ದರೆ ಆಗದೋ, ಒಪ್ಪಣ್ಣೊ. ಒಪ್ಪಣ್ಣ ರಜ ’ಸೀರಿಯಸ್’ ಆವ್ತಾ ಇದ್ದ ಹೇಳಿ ಸಂಶಯ ಬತ್ತು!
    ಒಪ್ಪಣ್ಣ ಮದಲೆ ಬರಕ್ಕೊಂಡಿದ್ದ ಹಾಂಗಿಪ್ಪ ಬರವಣಿಗೆಯೇ ಚೆಂದ. ನಮ್ಮ ಜೀವನ ಕ್ರಮ, ಆಚಾರ ವಿಚಾರಂಗೊ, ಪೂಜೆ ಪುನಸ್ಕಾರಂಗೊ, ಸಂಬಂದಂಗೊ– ಇಂತಾ ವಿಷಯಂಗಳ ಬಗ್ಗೆ ಕಾಲ್ಪನಿಕ ವ್ಯಕ್ತಿಗಳ, ಕತಗಳ ಸೇರಿಸಿಯೊಂಡು, ಕಲ್ಮಶವಿಲ್ಲದ್ದ ಹಾಸ್ಯಮಯ ಶೈಲಿಲಿ ಒಪ್ಪಣ್ಣ ಬರದ್ದರ ಓದುವ ಕೊಶಿಯೇ ಬೇರೆ. ಎಂತ ಹೇಳ್ತೆ ?

      1. ಬರೇ ನಮ್ಮ ಅಜ್ಜಂದ್ರ ಶುದ್ದಿಯೇ ಮಾತಾಡಿರೆ ಗುಣಾಜೆಮಾಣಿಗೆ ಕೊಶಿ ಅಕ್ಕೋ?
        ಅದಕ್ಕೆ ಎಡೆಲಿ ಒಂದರಿ ಈ ನಮುನೆದು ಹೇಳಿದ್ದಷ್ಟೆ. 🙂

        ಸರ್ಪಮಲೆಮಾವನ ಕಾಳಜಿ ತುಂಬಾ ಕೊಶಿ ಆತು.
        ಸಲಹೆಗೆ ಸಹಸ್ರ ಧನ್ಯವಾದಂಗೊ.

        1. ಒಪ್ಪಣ್ಣ ರಾಜಕೀಯ ಬರೆವದು ಇಷ್ಟ ಇಲ್ಲೆ ಹೇಳಿ ಗುಣಾಜೆ ಮಾಣಿ ಹೇಳಿದ°.
          ಒಪ್ಪಣ್ಣ ರಾಜಕೀಯ ಎಲ್ಲ ಕಲ್ತು ಮತ್ತೆ ಪಾರ್ಟಿ ಕೆಲಸ ಶುರು ಮಾಡಿದರೆ ಎಂ.ಪಿ. ಗುಣಾಜೆ ಮಾಣಿಯ ಎಂಪಿ ಟಿಕೆಟಿಂಗೆ ಅಡ್ಡಗಾಲು ಹಾಕುಗೋ ಹೇಳಿ ಹೆದರಿಕೆ ಅಡ.

  7. ಗಂಭೀರ ಪದ್ಯ ಆತು. ಇನ್ನು ಚೂರು ಮರ್ಲು ಕಟ್ಟುವ.. 🙂

    ಒಪ್ಪಣ್ಣನ ಲೇಖನ ಭಾರಿ ಲಾಯಿಕ ಆಯಿದು. ಪೆರ್ಲದಣ್ಣ ಅವನ ಕೇಮರಲ್ಲಿ ವೀಡ್ಯ ತೆಗವಲೆ ಹೇಳಿಯೇ ಇಂಥಲ್ಲಿಗೆಲ್ಲ ಹೋಪದೋ ಹೇಳಿ ಎನಗೊಂದು ಗುಮಾನಿ ಇದ್ದು.

    ಹೇಳಿದ ಹಾಂಗೆ ನಗೆಗಾರಣ್ಣಂಗೆ ಈ ವಿಷಯಂಗೊ ಎಲ್ಲ ತಲೆಯೊಳ ಇಳಿತ್ತಿಲ್ಲೆಯೋ ಹೇಳಿ?? 🙂 ಅದಕ್ಕೇ ಒಂದೂ ಪ್ರತಿಕ್ರಿಯೆ ಇಲ್ಲೆ ಹೇಳಿ ಕಾಣುತ್ತು ಎನಗೆ.

    1. ಅಪ್ಪು ಅಪ್ಪಚ್ಚಿ ,, ನಗೆಗಾರಣ್ಣಂಗೆ ಇದೆಲ್ಲ ತಲೆಯೊಳ ಇಳಿತ್ತಿಲ್ಲೆಡ,, ಕೆಮಿ ಮುಟ್ಟಿಗೊಂಡೆ ಅತ್ಲಾಗಿ ಹೋವುತ್ತಡ,… 🙂

      1. ಹೇಳಿದ ಹಾಂಗೆ, ವಾಸ್ತವವ ಭಾರಿ ಚೆಂದಕ್ಕೆ ಪದ್ಯಲ್ಲಿ ತೋರ್ಸಿದ್ದಿ ಅಪ್ಪಚ್ಚಿ.. ಲಾಯ್ಕ ಆಯ್ದು. .. 🙂

      2. {ಕೆಮಿ ಮುಟ್ಟಿಗೊಂಡೆ ಅತ್ಲಾಗಿ ಹೋವುತ್ತಡ}

        ಅದೇ ಈಗ.. 🙂 ಅಂಬಗ ಅದೆಂತರ ಟೆಕ್ನಾಲಜಿ ಇಕ್ಕಪ್ಪ ನಗೆಗಾರಂದು… ಕೆಮಿಲಿ ಎಂತದೋ ’ಮೆಗ್ನೆಟು’ ಇದ್ದಾ ಹೇಳಿ…. ಬೇಕಾದ್ದರ ಎಳದು ಬೇಡದ್ದರ ನೂಕುಲೆ.. 🙂 ನಮ್ಮ ನಗೆಗಾರ ಎಲ್ಲರಲ್ಲಿಯುದೆ ಎಕ್ಸ್ಪರ್ಟು ಅಪ್ಪ.. ಸಾಟಿಯೇ ಇಲ್ಲೆ…

        ಹ್ಮ್.. ಪ್ರತಿಕ್ರಿಯೆ ಬರದ ಎಲ್ಲರಿಂಗೂ ಧನ್ಯವಾದಂಗೊ..

      3. { ನಗೆಗಾರಣ್ಣಂಗೆ ಇದೆಲ್ಲ ತಲೆಯೊಳ ಇಳಿತ್ತಿಲ್ಲೆಡ,, ಕೆಮಿ ಮುಟ್ಟಿಗೊಂಡೆ ಅತ್ಲಾಗಿ ಹೋವುತ್ತಡ }
        – ಯೆಬೇ, ಹಾಂಗೆಂತ ಇಲ್ಲೆ ಆತ.
        ಬಂಡಾಡಿಅಜ್ಜಿ ಕಡವಲೆ ಹೇಳಿರೆ ಕೆಮಿಮುಚ್ಚಿಗೊಂಡು ಅತ್ಲಾಗಿ ಹೋದ್ದದು ಇದ್ದು, ಒಪ್ಪಣ್ಣನ ಶುದ್ದಿಗೊಕ್ಕೆ ಹಾಂಗೆ ಮಾಡಿದ್ದಿಲ್ಲೆ.

        ಆನು ಕೆಪ್ಪಣ್ಣನ ಒಟ್ಟಿಂಗೆ ಮೆಜೆಶ್ಟಿಂಗೆ ಹೋಗಿತ್ತಿದ್ದೆ. ಹಾಂಗಾಗಿ ಈ ಶುದ್ದಿಯ ಕೇಳುಲೆ ಪುರುಸೊತ್ತಾಯಿದಿಲ್ಲೆ. ಅಷ್ಟೇ. 🙂
        ಒಪ್ಪಣ್ಣ, ಲಾಯ್ಕಾಯಿದಾತ.. 😉

        1. {ಮೆಜೆಶ್ಟಿಂಗೆ}
          ಅದೆಲ್ಲಿ ಇಪ್ಪದು ಮೆಜೆಶ್ಟಿ?? ಬಳ್ಳಾರಿ ಹತ್ತರೆಯಾ ಹೇಂಗೆ?? ಹಾಂ?? 🙂

          1. ಕೂ…. 🙁 🙁
            “ಮೆಜೆಷ್ಟಿಕು” ಹೇಳೆಕ್ಕಾದು ತಪ್ಪಿ ಕು ಎನ್ನ ಹತ್ತರೇ ಒಳುದತ್ತು.

            (ಕೂ..ಕಿಲು ಹಾಕಿ ಹೇಳಿದೆ, ನಿಂಗೊಗೆ ಕೇಳಿದ್ದಿಲ್ಲೆ. ಬೌಷ್ಷ ಚಿಕ್ಕಮ್ಮ ಪರಂಚಿ ತೋಟ ದೂರ ಆಯಿದೋ ಏನೋ! ;-))

    2. {ಇನ್ನು ಚೂರು ಮರ್ಲು ಕಟ್ಟುವ}
      – ಇದಾ, ಚಿಕ್ಕಮ್ಮಂದೇ ಇದ್ದು, ಜಾಗ್ರತೆ.
      ತಲೆಲಿ ಮೊಳಕ್ಕಟೆ ಬಂದರೆ ಕಿದೂರುಡಾಗುಟ್ರಿಂಗೆ ಪುರುಸೊತ್ತಿಲ್ಲೆ. ಹಾಂ! 😉

  8. ಬಳ್ಳಾರಿ ಗಣಿಲಿ ಸಿಕ್ಕಿತ್ತು ಜನಂಗೊಕ್ಕೆ ಕೆಲಸ
    ಲಾರಿ ಬಿಡುವ ಬುಲ್ಡೋಜರ್ ತಿರುಗ್ಸುವ ಕೆಲಸ
    ಅದಿರು ಸಾಗ್ಸುವ, ಇಳುಶುವ ಕೆಲಸ
    ಗಣಿ ಇಲ್ಲಾರೆ ಅವು ಮಾಡೆಕ್ಕಾಗಿತ್ತು ಗೆದ್ದೆಲಿ ಕೆಲಸ, ಜೀವನಕ್ಕ ಮೋಸ

    ನಮ್ಮ ಊರಿಲಿಯೂ ಬರೆಕ್ಕು ಗಣಿ
    ನಮ್ಮಲ್ಲಿಯೂ ಇದ್ದು ಕುಮಾರ ಪರ್ವತ ಕಾಣಿ
    ಒಂದು ಅದಿರು ಕಾರ್ಖಾನೆಯುದೆ ಬೇಕು
    ಅಲ್ಲಿ ನಮ್ಮ ಇಂಜಿನಿಯರು ಮಕ್ಕೊಗೆ ಕೆಲಸ ಸಿಕ್ಕೆಕ್ಕು

    ಗಣಿಗೊ ಬೇಕು ಮನೆಗಳ ಬಡತನ ನೀಗುಲೆ
    ಕಷ್ಟಪಟ್ಟು ಓದಿದ ಮಕ್ಕೊಗೆ ಕೆಲಸ ಕೊಡುಲೆ
    ಪರಿಸರ ಹೇಳಿಯೊಂಡು ಕೂದರೆ ಜೀವನ ನಡೆತ್ತ ?
    ನಮ್ಮ ದೇಶ ನಡೆಯೆಡದ ಅಭಿವೃಧ್ಧಿಯತ್ತ ??

    ಪರಿಸರ ನಾಶ ಬೇರೆಲ್ಲಿಯೂ ಇಲ್ಲೆ ಆತ
    ನಮ್ಮ ನಮ್ಮ ಮನಸ್ಸಿಲೆ ಇದ್ದು ಆ ಭೂತ
    ಭೂತ ಅಲ್ಲ ಭೂತಗಣಾಧೀಶ ಪ್ರೇತ
    ಅದುವೇ ಕಲಿಕಾಲದ ವಿಪರೀತ

    ತನ್ನಂದಲೇ ಪ್ರಕೃತಿ ನಡವದು ಹೇಳುವ ಅಹಂಕಾರ
    ಅದಕ್ಕೇ ಬಂದದು ಪ್ರಕೃತಿಗೆ ಸಂಚಕಾರ
    ಪ್ರಕೃತಿ ತನ್ನ ಭೋಗಕ್ಕೇ ಇಪ್ಪದು ಹೇಳುವ ಮದ
    ತನ್ನ ಏಳ್ಗೆ ಭೋಗಲ್ಲಿ ಇಪ್ಪದಲ್ಲ ಹೇಳುದ ಮರದ

    ಕಲಿಯುಗದ ಬ್ರಾಹ್ಮಣ ಬಡವ ಅಲ್ಲ ವೇದಾಂತಿ ಅಲ್ಲ
    ಕಲಿಯುಗದ ಕ್ಷತ್ರಿಯ ದೇಶ ರಕ್ಷಣೆಗೆ ಸಲ್ಲ
    ಕಲಿಯುಗದ ವ್ಯಾಪಾರಿ ಪೈಸೆ ಮಾಡುವ ಮಾರಿ
    ಕಲಿಯುಗದ ಶೂದ್ರ ಪರಮ ಸೋಮಾರಿ

    ಎಲ್ಲರಿಂಗೂ ಪೈಸೆ ಬೇಕು ಭೋಗಕ್ಕೆ, ಕೊಡುವವ ಆರು?
    ಎಲ್ಲರಿಂಗೂ ಬೇಕು ಸೌಲಭ್ಯ, ಒದಗ್ಸುವವ ಆರು?
    ಎಲ್ಲರಿಂಗೂ ಬೇಕು ಆರೋಗ್ಯ ಕಾಸು ಗಳ್ಸುಲೆ
    ಎಲ್ಲರಿಂಗೂ ಬೇಕು ದೇವರು ಪೈಸೆ ಕೊಡ್ಸುಲೆ!

    ಕಲಿಗಾಲಲ್ಲಿಯೇ ಬಂದದಿದ ಮಹಾಮದ ಮೊಹಮ್ಮದ
    ಮೆಕ್ಕಾಲ್ಲಿ ಮಾತ್ರ ಅಲ್ಲ ಮಕ್ಕಳಲ್ಲಿಯುದೆ ಮಹಾಮದ
    ಮಕ್ಕೊ ಬೆಳವ ಮನೆಯಲ್ಲಿದೆ ಸಂಸಾರಲ್ಲಿಯುದೆ
    ಕಲಿವ ಶಾಲೆಲಿಯುದೆ ಮಾಡುವ ಕೆಲಸಲ್ಲಿಯುದೆ

    ಮನೆ ಯಜಮಾನನ ಮದ ಮನ ಮುರಿವವರೆಗೆ
    ಮನೆ ಯೆಜಮಾಂತಿಯ ಮದ ಮನೆ ಮುರಿವವರೆಗೆ
    ಮಗನ ಮದ ಶುರುವಾತು ಹೆಂಡತಿ ಬಂದಪ್ಪಗ
    ಸೊಸೆ ಮದ ಶುರುವಾತು ಅತ್ತೆ ಕಂಡಪ್ಪಗ

    ಇಂತಿಪ್ಪ ಕಲಿಗಾಲಲ್ಲಿ ತಪ್ಪು ಆರಿಂದಿಲ್ಲೆ?
    ಇಪ್ಪದೆಲ್ಲವೂ ಎನಗೆ ಬೇಕು ಹೇಳ್ತ ಮರ್ಲು ಆರಿಂಗಿಲ್ಲೆ?
    ಇಪ್ಪದು ಸಾಕು ಬೇಡ ಎನಗೆ ಕಾಸು ಹೇಳುವ ಧೈರ್ಯ ಆರಿಂಗಿದ್ದು?
    ಮಾಡಿದ್ದು ಸಾಕು ಅಭಿವೃಧ್ಧಿ, ಬೇಕು ಎನಗೆ ಸಂತೃಪ್ತಿ ಹೇಳುವ ಮನಸ್ಸೆಲ್ಲಿದ್ದು?

    ಯುಗಧರ್ಮವ ಎದುರ್ಸುವ ಶಕ್ತಿ ಆರಿಂಗಿದ್ದು?

    1. ಅಪ್ಪಚ್ಚಿ,

      ತುಂಬಾ ಲಾಯಿಕ್ಕಾಯಿದು.ತಿರುಗಿ ತಿರುಗಿ ಓದಿ ತಲೆಯೇ ತಿರುಗಿತ್ತು.

      ಎಲ್ಲ ರೋಗದ ಮೂಲಕಾರಣವೇ ಸ್ವಾರ್ಥ
      ಅಕ್ಕುಯೋಚನೆ ಬದಲು ಆಗದ್ದರನರ್ಥ.

      1. { ತಿರುಗಿ ತಿರುಗಿ ಓದಿ ತಲೆಯೇ ತಿರುಗಿತ್ತು}

        ಅದು ಹಾಂಗೆಯೇ ಅಪ್ಪಚ್ಚಿ.. ’ತಲೆ ತಿರುಗಿದ್ದರ’ ಬಗ್ಗೆ ಓದಿದರೆ ತಲೆ ತಿರುಗದ್ದೆ ಇಕ್ಕ?? ಅಲ್ಲದಾ ?? 🙂

        1. ಅದೂ ಸರಿಯನ್ನೇ !! ಸರಿ ಇಪ್ಪ ತಲೆ ತಿರುಗಿ ಅಪ್ಪಗ ವರ್ತಮಾನದ ವೆವಸ್ತೆ ಎಲ್ಲಾ ಸರಿ ಹೇಳಿ ಕಾಂಗಲ್ಲದೋ ??

        2. ಅಪ್ಪಚ್ಚೀ,
          ಯುಗಚಕ್ರ ತಿರುಗಿತ್ತು ಲೋಕ ಬದಲಾತು
          ಜೀವನದ ಪಥ ಕಂಡು ತಲೆಯೆ ಹಾಳಾತು
          ತಿರುಗಿ ಈ ಚಕ್ರ ಮೊದಲಿಪ್ಪಲ್ಲೇ ಬರಳಿ
          ಲೋಕ ಸಮಸ್ತರಲಿ ಸಂತ್ರಿಪ್ತಿ ನೆಲಸಿರಳಿ

          ಹೇಳಿ ಆಶಿಸೆಕ್ಕು ಅಲ್ಲದೋ ?

          1. {ಹೇಳಿ ಆಶಿಸೆಕ್ಕು ಅಲ್ಲದೋ }
            ನಿಜ. ಆಶಿಸುದರಲ್ಲಿ ಎಂತ ತಪ್ಪಿಲ್ಲೆ.. ಅದು ಬಿಟ್ಟು ಬೇರೆಂತ ಮಾಡುಲರಡಿಯನ್ನೆ 🙂

          2. ಹೀಂಗೇ ಒಳ್ಳೆದರ ಆಶಿಸುವವು ಉಳುದು ಬೆಳದರೆ ಮುಂದಾಣವಕ್ಕೆ ಅದುವೇ ಆಶಿಸ್ಸು!!
            ಆಶಿಸಿದ ಒಳ್ಳೆಯ ಸಂಗತಿ ಬೇರೆಯವಕ್ಕೆ ಹೇಳೆಕು. ಅಷ್ಟಪ್ಪಗ ಗೊಂತಾವುತ್ತದ ಆರೆಲ್ಲ ಸಾಧುಗೋ (ಒಳ್ಳೆಯವು) ಹೇಳಿ!!
            ಇಲ್ಲದ್ರೆ “ಪರಿತ್ರಾಣಾಯ ಸಾಧೂನಾಮ್ ” ಹೇಳಿದ ಭಗವಂತಂಗೆ ಸಾಧುಗೋ ಆರು ಹೇಳಿ ಗೊಂತಾಗದ್ದೆ (ರಕ್ಷಣೆ ಮಾಡ್ಲೆ) ಕಂಫ್ಯುಸು ಆಗಿ ತಿರುಗಿ ಹೋಕು 🙂

            ಒಪ್ಪಣ್ಣ ಅಗೆದ ಗಣಿಂದ ನೀರ್ಕಜೆ ಅಪ್ಪಚಿಯ ಕವನ ಖನಿಜವೂ, ರಘು ಅಣ್ಣನ ಮೌಕ್ತಿಕವುದೇ ಹೆರ ಬಂತದ 🙂

      2. ಮೀವಾಗ ತಲೆ ತಿರುಗಿರೆ ಒಳ್ಳೆದು.. ಬೆನ್ನು ಸರೀ ಕಾಣುತ್ತು, ಸಾಬೂನು ಸರೀ ಹಾಕಿ ಬೆನ್ನು ತಿಕ್ಕಿಗೊಂಡೇ ಮೀಯಲಕ್ಕು.. 😉

    2. {ಬಳ್ಳಾರಿ ಗಣಿಲಿ ಸಿಕ್ಕಿತ್ತು ಜನಂಗೊಕ್ಕೆ ಕೆಲಸ ಲಾರಿ ಬಿಡುವ ಬುಲ್ಡೋಜರ್ ತಿರುಗ್ಸುವ ಕೆಲಸ ಅದಿರು ಸಾಗ್ಸುವ, ಇಳುಶುವ ಕೆಲಸ}
      ಅವರ ಪಾಲಿಮ್ಗೆ, ಲೈಫ್ ಅಂದ್ರೆ ಇಷ್ಟೇನೆ…… ಟನ್ ಟಣಾ ಟನ್

      {ಎಲ್ಲರಿಂಗೂ ಬೇಕು ಆರೋಗ್ಯ ಕಾಸು ಗಳ್ಸುಲೆ}
      ಕಲಿಯುಗಲ್ಲಿ, ಹಿಂಗೂ ಬರವಲಕ್ಕು,
      ಎಲ್ಲರಿಂಗೂ ಬೇಕು ಕಾಸು,ಆರೋಗ್ಯ ಗಳ್ಸುಲೆ ??????

      ಉತ್ತಮ ಸಾಮಾಜಿಕ ಚಿತ್ರಣ…….

      1. {ಉತ್ತಮ ಸಾಮಾಜಿಕ ಚಿತ್ರಣ..}
        – ಓಹ್! ಅಪ್ಪಚ್ಚಿ ಚಿಕ್ಕಮ್ಮ ಇಬ್ರುದೇ ಮಾತಾಡಿಗೊಂಡದೋ..
        ಉತ್ತಮ ಸಾಂಸಾರಿಕ ಚಿತ್ರಣ..!! 😉

        1. ಎಲಾ ಕತೆಯೇ, ನಗೆಗಾರಣ್ಣನ ಇಲ್ಲಿಗೆ ದಿನಿಗೇಳಿದ್ದಕ್ಕೆ ಎನಗೆ ತಕ್ಕ ಶಾಸ್ತಿ ಆತು! 🙂 ನಗೆಗಾರಣ್ಣ ಒಪ್ಪಣ್ಣನ ಲೇಖನದ ಬಗ್ಗೆ ಬರವದು ಬಿಟ್ಟು ಆರಾರ ಸಂಸಾರ ಬಗ್ಗೆ ಎಂತಕೆ ಬರವದು?? :J

          1. ಬೈಲಿನೊಳದಿಕ್ಕಂಗೆ ಒಪ್ಪ ಕೊಟ್ಟರೆ ಹೇಂಗೆ
            ಕೊತ್ತಳಿ೦ಗೆಯ ಕೊಟ್ಟು ಬೆನ್ನೊಡ್ಡಿದಾಂಗೆ

          2. ಅಲ್ಲಪ್ಪ.. ಎನಗೆ ಕಾವ್ಯನಾಮ ಎಲ್ಲ ಇಲ್ಲೆ. ನಾಮ ಒಂದೇ ಇಪ್ಪದು 🙂

          1. @ಅಜ್ಜಕಾನ ಭಾವ,, ಎನ್ನ ನೋಡಿ ಕಲಿವ ಸಂಗತಿ ಸುಮಾರಿದ್ದು ಭಾವಾ!! 🙂 ಆದರೆ ನಾಮ ಹಾಕುದರ್ಲಿ ಮಾತ್ರಾ ಆನು ನಗೆಗಾರಣ್ಣನಷ್ಟು ಅನುಭವಸ್ಥ ಅಲ್ಲ ಇದಾ,,, 😉

    3. @ ನೀರ್ಕಜೆ ಅಪ್ಪಚ್ಚಿ, @ ರಘುಭಾವಾ..

      ಒಳ್ಳೆ ಹೃದಯದ ಕವಿತ್ವ ನಿಂಗೊಗೆ ಇಪ್ಪದರ ಬೈಲಿನೋರು ಗುರುತುಸುತ್ತವು.
      ಇನ್ನೂ ಇನ್ನೂ ಒಳ್ಳೆದಾಗಿ ಬರವ ಹಾಂಗಾಗಲಿ ಹೇಳುದೇ ನಮ್ಮ ಆಶಯ.

  9. ಎ೦ಗಲ ತೋಟಲ್ಳಿ ೨ ರುದ್ರಾಕ್ಶಿ ಮರ ಇದ್ದು.. ನೇಪಾಳ೦ದ ತ೦ದದು ಅಪ್ಪ.. ಕಾಯಿ ಆವುತ್ಥು… ಪಟ೦ಗಳ ನಾಳೆ ಹಾಕುತ್ಠೆ… ಅಪರೂಪದ ೨ , ೧೧, ೧೩, ೧೪ ಮುಖಿ ರುದ್ರಾಕ್ಶಿ ಅಯಿದು…ಆರುದೆ ನೊಡುಲ್ಲೆ ಬಪ್ಪಲಕ್ಕು…

      1. ಅಪ್ಪು ಅಳಿಯೊ, ಬಳ್ಳಾರಿ ಧಣಿಗೊಕ್ಕೆ ಎನ್ನ ರೇಟು ಜಾಸ್ಥಿ ಆತಡ್ಡೊ..ಈಗ ಇಪ್ಪ ಪೈಸೆ ಎಲ್ಲ ಕೋರ್ಟು ಕೇಸುಗಕ್ಕೆ ಸಾಲಡ್ಡೊ!!!! ಜೈಲಿಲೇ ಜಪ ಮಾಡೆಕ್ಕು ಅಸ್ತೆ!!!!!

  10. ಆನು ಒಪ್ಪ ಬರವಾಗ ತಡವಾದರುದೆ, ನಿನ್ನ ಲೇಖನ ಸಾಂಧರ್ಬಿಕ ಒಫ್ಫಣ್ಣಾ… ಬಳ್ಳಾರಿಯ ಗುಡ್ಡೆಗಳ ಕಥೆ ಕೇಳಿ ಬೇಜಾರಾತು. ಗೊಂತಿಪ್ಪ ಸಂಗತಿಯೆ ಆದರೂ, ಲೇಖನಲ್ಲಿ ಇದ್ದ ಕಳಕಳಿ ಎನ್ನನ್ನೂ ಒಂದೆರಡು ನಿಮಿಷ ಅಲೋಚನೆ ಮಾಡುವ ಹಾಂಗೆ ಮಾಡಿತ್ತು. ನವಗಿಪ್ಪ ಕಳಕಳಿ ನಮ್ಮ ರಾಜಕಾರಣಿಗೊಕ್ಕಿಲ್ಲದ್ದು ಬೇಜಾರು ಮಾಡೆಕ್ಕಾದ ಸಂಗತಿ.. ಪಾದಯಾತ್ರೆ ಮಾಡಿದ್ದಕ್ಕೆ ಕೋಟೀಗಟ್ಲೆ ಖರ್ಚು ಮಾಡಿದವು.. (ಕಾರಿಲಿ ಹೋಗಿ ಬಪ್ಪಲಾವುತ್ತಿತು, 😉 ರಜ ಕಮ್ಮಿ ಖರ್ಚಿಲಿ ಮುಗಿಶಿ,ಒಳುದ ಪೈಸಲ್ಲಿ, ಹೊಟ್ಟೆಗಿಲ್ಲದ್ದವಕ್ಕೆ ಊಟ ಆದರೂ ಹಾಕಲಾವುತ್ತಿತ್ತು….) ಅವ ಹೆಚ್ಚು ಪೈಸ ಮಾಡಿದ ಇವ ಹೆಚ್ಚು ಪೈಸ ಮಾಡಿದ ಹೇಳಿ ಬೊಬ್ಬೆ ಹೊಡೆತ್ತವಷ್ಟೇ ಹೊರತು ಪರಿಸರ ಹಾಳಾದ್ದಕ್ಕೆ, ಗುಡ್ಡೆ ಬೋಳಾದ್ದಕ್ಕೆ ಒಂದು ಹನಿ ಕಣ್ಣೇರು ಹಾಕಿದ್ದು ಕಂಡತ್ತಿಲ್ಲೆ… ಒಂದೊಪ್ಪ ಸೂಪರು, ಸ್ವಾತಂತ್ರೋತ್ಸವದ ವಾಸ್ತವವ ನೆನಪು ಮಾಡಿತ್ತು.

  11. ಕೃಷಿ ಭೂಮಿಲಿ ಎಲ್ಲಾ ಕೈಗಾರಿಕೆ ಬತ್ತ ಇದ್ದು!!! ಎಲ್ಲರಿಂಗೂ ಅದೇ ಬೇಕಾದ್ದದೋ ಹೇಂಗೆ ಗೊಂತಿಲ್ಲೆ!! ಮೊನ್ನೆ ಆರೋ ಕೇಳಿಗೊಂಡು ಇತ್ತಿದವು ” ಹೀಂಗೆ ಆದರೆ ಎಂತ ಮಣ್ಣು ತಿಮ್ಬದಾ ?”…….ಆದರೆ ಬಳ್ಳಾರಿಯ ಕತೆ ನೋಡಿದರೆ ಮಣ್ಣುದೇ ತಿಮ್ಬಲೇ ಸಿಕ್ಕುದು ಡೌಟು….!!! ಭಾರೀ ಲಾಯ್ಕಾಯ್ದು ಒಪ್ಪಣ್ಣ…..

  12. ಬಾಣಾರೇ… ಬಟ್ಯಣ್ಣೆ ಎನಾಟ ಕೇಂದಿತ್ತೆರ್… ಬಲ್ಲಾರಿಗ್ ಪೋಯೆರೆ ಸಾದಿ ಓಲು ಪಂಡ್ತ್… ಯಾನ್ ಆನಿ ಒಂಜಿ ತಿಂಗೊಲು ಪೋದಿತ್ತೆ ಅತ್ತೇ… ಬಾರೀ ಅನ್ಯಾಯ ಮಲ್ತೇರ್ ಔಲು… ಕಾಡ್ ಬಲ್ಲೆ ಪೂರಾ ಕಡ್ತ್ ದ್ ಕಲ್ಪನೆದ ಲೆಕ್ಕ ಮಲ್ತ್ ದೆರ್. ನಮ್ಮ ಕಲ್ಪನೆದ ಲೆಕ್ಕ ಅತ್ತ್… ಮಾ ಮಲ್ಲವ್… ಸಮ್ಮುರ್ದದ ಲೆಕ್ಕ ಸೋಜುಂಡು.

    ಈರ್ ಎಡ್ಡೆ ಪಂಡಾರ್.. ನಮ್ಮ ದೇಸೊತ ಸಂಪತ್ತುನ್ ಅಂಚಿ ಕಡಪ್ಪುಡೊಂದುಲ್ಲೆರ್ ಆಸೆ ಯೆಚ್ಚಾಯಿನ ನರಮ್ಮಾಣಿಲು. ದೇವೆರ್ ಯೆಡ್ಡೆ ಮಲ್ಪಾಯೆರ್ ಅಂಚ ಮಾಲ್ತ್ಂಡ.

  13. sooper oppanno…oppannana bailinge rajakiyavu battu heli aatambaga.
    ballarinda mannu hotu balleyu hotanne.
    vishala jageli gandhada sesi adaru nettu kaadu beleshule aavutittu.
    vanamahostava madekku heli buddhi heludu nammantavakke.
    eega alli ona mahostava aidu.anthu bharathada sampattu heenge mundarudare nasha khanditha.
    eega ballari matte innondu paise maduvavakke enaaru ondondu sampattu sikkuttu namma bharathalli.
    innana vaarakke mysore b.j.p. sammaveshada shuddi baravado henge oppanna.
    anthu full bc engala oppanna.dinada 24 ghanteyu saakaavuttille. kaambale ille.bhari aparoopa allado he…
    good luck.

    1. { innana vaarakke mysore b.j.p. sammaveshada shuddi baravado henge oppanna. }

      – ಉಮ್ಮ, ಅದರ ಗುಣಾಜೆಕುಂಞಿ ಬರದರೆ ಚೆಂದ.
      ಒಪ್ಪಣ್ಣ ರಾಜಕೀಯ ಬರವಲೆ ಹೆರಟ್ರೆ ಬಲ್ನಾಡುಮಾಣಿ ಅಡಿಗೆಮಾಡಿದ ಹಾಂಗಕ್ಕು. ದನಗೊಕ್ಕೇ ಕೊಡೆಕಷ್ಟೆ ಅದರ!
      ಬೀಸ್ರೋಡುಮಾಣಿ ಅಡಿಗೆಲಿ ಉಶಾರಿ, ಬಲ್ನಾಡುಮಾಣಿ ಉಂಬದರ್ಲಿ! 😉 – ಹೇಳಿ ಅಜ್ಜಕಾನಬಾವ° ಯೇವತ್ತೂ ನೆಗೆಮಾಡುಗು..

      1. ಸರಿಯಾಗಿ ಹೇಳಿದೆ ನಗೆಗಾರಣ್ಣೋ! ಆನು ಅಡಿಗೆ ಮಾಡಿರೆ ದನವೂ ತಿಂಬದು ಡೌಟು!! 😉 ಆನು ಉಂಬದರಲ್ಲಿ ಉಷಾರಿ, ಜಾಸ್ತಿ ಉಂಬದರಲ್ಲಿ ಅಲ್ಲಾತಾ,, ಬಡುಸಿದ್ದರ ಸುಮ್ಮನೆ ತಿಂದಿಕ್ಕಿ ಹೋಪದರಲ್ಲಿ.. ಏನಾರು ರುಚು ಹೆಚ್ಚು ಕಮ್ಮಿ ಆದರೆ ಎನಗೆ ಗೊಂತೇ ಆಗ!! 🙂

      2. ಆ ಬಲ್ನಾಡು ಮಾಣಿಯ ಕಂಡರೆ ಉಂಡು ತಿಂದು ಸರಿ ಮಾಡ್ತಾ ಹಾಂಗೆ ಎನಗೆ ಕಾಣ್ತಿಲ್ಲೆ.

        1. ಓ ಶ್ರೀಶ ಭಾವ

          ಬಲ್ನಾಡು ಮಾಣಿ ಸರಿ ತಿನ್ನದ್ದು ಒಳ್ಳೆದಾತು.. ಗುಣಾಜೆ ಮಾಣಿ ಪಾರ್ಟಿಲಿ ಗಲಾಟೆ ಜೋರು ಆವುತ್ತಿತ್ತು..

        2. ಸಪೂರ ಇದ್ದರೆ ಅಪ್ಪ ಹತ್ತು ಪ್ರಯೋಜನಂಗೋ ಹೇಳಿ ಲೇಖನ ಬರವ ಅಂದಾಜಿಲಿದ್ದೆ.. 🙂 ಎನ್ನ ಅನುಭವ ಸಾರವ ಸೇರಿಸಿ ಹೇಳುವಾ ಹೇಳಿ ಅಂದಾಜಿ ,, 🙂

  14. Ballari guddeli paise madidavu kelavu jana, arogya halu madiyondavu halavu jana. Heenge helekaste. Lekana layaka ayidu.

  15. oppannoo, oppa bhari laikaidu… ganidani heliye hesaru banto ilyo ivu ishtella madida karana….alladre battitoo???heengirtha jenango iddavu heliyadru gonthavthitho navage…….. illenne..jenangala gamana avara hodenge selavalippa berebere avatarango idu heli kanthilyo……kallaralladdavu aaru? paise bedaddu aringe? ambaga kathe entara helire aanu baduda hange maadthe, , , , neenu kugida hange madu ashte……innu nedakkondu hopa padayatrigala vichara…idu avra samajika kalaji entu alla…Hange kalaji agiddare ivakke nedavaga ottinge benu valaga ella enthke bekittu appo allado?????????ivara upacharakke madida khrchina 100ra 1 amsha badavaringe kottidru saakittilyoo uddarakke???? eee natakalli baddangala baddu jariddashte horatu berenthu alla….avaravara aarogyada kalajili heengondu aata… siddha ramayyange daactru mava kolestal jasti aydu nedeyadre haartu bloku akku heliddavo heli kantu…. alladooooo??? enta helte?

    1. ಶೇಡಿಗುಮ್ಮೆ ಬಾವನ ಕಾಂಬದು ಅಪುರೂಪ ಆದರೂ ಒಪ್ಪ ಲಾಯಿಕ ಬರೆತ್ತೆ ಮಿನಿಯಾ..
      ಬೈಲಿಂಗೆ ಬತ್ತೆಯೋ? ಏ°?

  16. ಒಪ್ಪಣ್ಣನ ಸಾಮಾಜಿಕ ಕಳಕಳಿ, ಅದಕ್ಕೆ ರಘು ಮುಳಿಯ ಅವರ ವ್ಯಂಗ್ಯ ಎರಡೂ ಕೊಶೀ ಆತು.
    ಊರಿಲ್ಲಿ ಆರಾರೂ ಮನೆ ಕಟ್ಟಲೆ ಕಲ್ಲು ಬೇಕು ಹೇಳಿ ಕಲ್ಪಣೆ ಮಾಡಿರೆ ಅದಕ್ಕೆ ಸಾವಿರಾರು ಕಾನೂನುಗೊ ಅಡ್ಡ ಬತ್ತು. ಹಣ ಬಲ, ಅಧಿಕಾರದ ಬಲ ಇಪ್ಪವು ಗುಡ್ಡೆ, ಗುಡ್ಡೆಯನ್ನೇ ಹೊತ್ತೊಂಡು ಹೋದರೆ ಕೇಳುವವು ಆರೂ ಇಲ್ಲೆ. ಪೈಸೆ ಮಾಡಿದವು ಉದ್ಧಾರ ಆದವು. ಗಣಿಲಿ ಕೆಲಸ ಮಾಡಿದವು ಅಸ್ತಮಾವೋ ಮತ್ತೊಂದೋ ರೋಗ ಹಿಡಿಸಿಂಡು ಊರ್ಧ್ವ ಆದವು. ಈ ವಿಶಯಲ್ಲಿ ರಾಜಕೀಯ ಪಾರ್ಟಿಯವು ಆರೂದೆ ಸಾಚಾ ಅಲ್ಲ.
    ಪಾದಯಾತ್ರೆ ಹೇಳುವ ಹೆಸರಿಲ್ಲಿ ಎಷ್ಟು ಖರ್ಚು ಮಾಡಿದವೋ, ಆರಿಂಗೆ ಎಷ್ಟು ಉಪದ್ರ ಕೊಟ್ಟವೋ, ಅಲ್ಲಿ ಅನುಭವಿಸಿದವಕ್ಕೇ ಗೊಂತಿಕ್ಕಷ್ಟೆ. ಇನ್ನು ಅದರ ಉದ್ದೇಶ, ದೇವರಿಂಗೇ ಗೊಂತು.
    ಸಭೆಗೆ ಬಪ್ಪಲೆ ವ್ಯವಸ್ಥೆ ಮಾಡಿದವು ವಾಪಾಸು ಹೋಪಲೆ ಕೂಡಾ ಮಾಡ್ತವು ಹೇಳಿ ಜಾನ್ಸುವದು ಶುದ್ಧ ಮೂರ್ಖತನ.

    1. { ಪೈಸೆ ಮಾಡಿದವು ಉದ್ಧಾರ ಆದವು }
      – ಎಲ್ಲಿಂದ ಅಪ್ಪಚ್ಚಿ, ಎಲ್ಲ ಕ್ಷಣಿಕ ಅಲ್ಲದೋ?
      ಉದ್ಧಾರ ಆದ್ದದು ಎಷ್ಟು ಸಮೆಯ, ಎಲ್ಲ ಕಾರುಲಿಲ್ಲೆಯೋ..
      ನ್ಯಾಯ ಮಾರ್ಗದ್ದೇ ದಕ್ಕುತ್ತಿಲ್ಲೆಡ, ಇನ್ನು ಈ ನಮುನೆದು ದಕ್ಕುಗೋ – ಹೇಳಿ ನಮ್ಮ ಭಟ್ಟಮಾವ° ಬೇಜಾರಪ್ಪಗ ಹೇಳ್ತವು!

      1. ಒಪ್ಪಣ್ಣ ಹೇಳಿದ್ದು ಸರಿ ಇದ್ದು. ಅಧಿಕಾರ, ಪೈಸೆ ಇಪ್ಪಷ್ಟು ಸಮಯ ಮೆರೆದ್ದದು ಬಂತು. ಅದು ಹೋದರೆ ಅವನ ಆರೂದೆ ಕೇಳಲೆ ಬಾರವು.
        ಕೆಲವು ಸರ್ತಿ ವ್ಯಕ್ತಿಗಿಂತ ಹೆಚ್ಚು ಬೆಲೆ ಅವನ ಶ್ರೀಮಂತಿಕೆಗೆ ಸಿಕ್ಕುತ್ತಷ್ಟೆ.
        ಯಾವುದಾದರೂ ಸರಿಯಾದ ಮಾರ್ಗಲ್ಲಿ ಸಿಕ್ಕಿದರೇ ದಕ್ಕುಗಷ್ಟೆ ಹೇಳುವದು ಸತ್ಯ.

  17. ಒಪ್ಪಣ್ಣಾ. ನಾಕೇ ನಾಕು ಜೆನ ರಜ ಒಳ್ಳೆ ಕೆಲಸ ಮಾಡುಲೆ ಹೆರೆಟರೆ ನಿನ್ನದೊಂದು ಪಿಟ್ಕಾಯಣ.ಸಣ್ಣಾಗಿಪ್ಪಗ ನಿರ್ಮಲ ಟೀಚರು ಹತ್ತು ಸರ್ತಿ ಭಾರತ ಕ್ರಷಿಪ್ರಧಾನ ದೇಶ ಹೇಳಿ ಉರುಹೊಡೆಸಿದ್ದು ಮರತ್ತು ಹೋತೋ ಹೆಂಗೆ?. ಗುಡ್ಡೆ ಕಡುದು ಸಮ ಮಾಡಿ ಮುಂದಾಣೋರಿಂಗೆ ಕ್ರಷಿ,ನೆಟ್ಟಿಕಾಯಿ ಮಾಡುಲೆ ರಜ ಜಾಗೆ ಏನು ಸಾಗದ್ದರೆ ಒಂದು ಲೇಔಟ್ ಮಾಡುವ ಹೇಳಿ ದೂ(ದು)ರಾಲೋಚನೆಲಿ ಬುಲ್ಡೋಜರ್,ಟ್ರಾಕ್ಟರು,ಕೊಟ್ಟು, ಪಿಕ್ಕಾಸು -ಸಿಕ್ಕಿದ ಹತ್ಯಾರು ಕಿಸೆಂದ ಖರ್ಚು ಮಾಡಿ ತಂದು ಮಣ್ಣು ಬಾಚುತ್ತ ಇಪ್ಪೊದು, ಗೊಂತಾತೋ.ನೀನು ಅದಕ್ಕೂ ಕಲ್ಲು ಹಾಕುತ್ತೆನ್ನೇ.ಪಾಪ,ದೇಶ ಹಾಂಗಾರು ಉದ್ಧಾರ ಆಗಲಿ ಹೇಳಿ ಅವರ ಪ್ರಯತ್ನ.ಜೆನಂಗೊಕ್ಕೆ ದಮ್ಮುಕಟ್ಟುತ್ತು ,ಆಸ್ತಮಾ ಬತ್ತು ಹೇಳಿ ನೋಡಿರೆ ಊರು ಉದ್ಧಾರ ಮಾಡುತ್ಸು ಹೇಂಗೆ?

    ಇನ್ನು ಬಾಚಿದ ಮಣ್ಣಿನ ನಮ್ಮ ದೇಶಲ್ಲೇ ಹಾಕಿರೆ ಅಕ್ಕೋ?ಬೆಂಗಳೂರಿನ ಹಾನ್ಗಿರ್ತ ಪೇಟೇಲಿ ಖಾಲಿ ಸೈಟು ಕಂಡರೆ ಸಾಕು,ಇಪ್ಪ ಕಸವು,ಮಣ್ಣು ಎಲ್ಲ ತಂದು ಹಾಕಿ ಹಾಳು ಮಾಡುತ್ತವು.ಹಾಂಗಿಪ್ಪ ತಪ್ಪು ಮಾಡುಲಾಗ ಹೇಳಿ ಅಲ್ಲದೋ ಹೆರದೇಶಕ್ಕೆ ಕಳುಸೊದು ?ಹೆರದೇಶಲ್ಲಿ ಹೊಂಡ ಜಾಸ್ತಿಅಡ,ಅವಕ್ಕೆ ತುಮ್ಬುಸುಲೆ ಮಣ್ಣು ಬೇಕಡಾ.ಇನ್ನು ಸಾಗಾಣಿಕೆ ಖರ್ಚು ಹೇಳಿ ರಜ ಚಿಲ್ಲರೆ ಕೊಡುತ್ತವು,ಅದರ ಮೇಲೂ ನಿನ್ನ ವಕ್ರದ್ರಷ್ಟಿ ಬಿದ್ದತ್ತಾ??ಆಗ ಮಿನಿಯ..

    ತ್ರೇತಾಯುಗಲ್ಲಿ ರಾಮ,ಸೀತೆಯ ಹುಡುಕ್ಕಿಗೊಂದು ಬಂದು,ಸಮುದ್ರ ದಾಂಟಿ ಲಂಕಗೆ ಹೋಪಲೆ ಹತ್ತರೆ ಇಪ್ಪ ಎಲ್ಲ ಗುಡ್ಡೆಗಳ ಕಲ್ಲು ಮಣ್ಣು ಮಂಗಂಗಳ ಕೈಲಿ ಹೊರುಸಿ ಸಮುದ್ರಕ್ಕೆ ಹಾಕಿ ಲಗಾಡಿ ಕೊಟ್ಟ,ಅವನ ಸ್ವಾರ್ಥಕ್ಕೆ.ಆ ಮಣ್ಣು ತೆಗವಳೇ ಹೆರಟರೂ ನಿನಗಾಗ.ಈಗಾಣೋರು ಪಾಪ ಸಮುದ್ರಕ್ಕೆ ಹಾಕಿರೆ ಪರಿಸರ ಹಾಳಕ್ಕು ಹೆರದೇಶಕ್ಕೆ ಇಡ್ಕುತ್ತವು,ಕಸವು ಉಡುಗಿ ಜಾಲ ಕರೆಂಗೆ ಇಡುಕ್ಕಿದ ಹಾಂಗೆ.ಅಲ್ಲಿ ಇನ್ನು ಬೆಡಿ ಮಾಡುತ್ತವೋ,ಬಾಂಬು ಮಡುಗುತ್ತವೋ,ತಲೆಲಿ ಹೊರುತ್ತವೋ,ಮಣ್ಣಂಗಟ್ಟಿ,ನವಗೆಂತಗೆ ಅದರ ತಲೆಬೆಶಿ?ನಮ್ಮ ಮನೆ ಮನಾರ ಆತಿಲ್ಲೆಯೋ? ಇನ್ನು ಸಿಕ್ಕಿದ ಚಿಲ್ಲರೆಲಿ ಖರ್ಚು ಕಳದು ರಜ ಒಳಿತ್ತು.ಅದರ ಪೆಟ್ಟಿಗೆಲಿಯೇ ಮಡುಗಿದರೆ ಕೊಳೆಯದಾ?ಹಾಂಗಾಗಿ ನಾಕು ಹೆಲಿಕೊಪ್ತರ್ ತೆಗದರೆ ತಪ್ಪಾತಾ?ತೆಗದ ಮೇಲೆ ಹಾಂಗೆ ಮಡುಗಿರೆ ಆವುತ್ತೋ?ವೈವಾಟಿಲಿ ಬೆಂಗಳುರಿನ್ಗೋ,ಹೈದರಾಬಾದಿಂಗೋ,ದೆಲ್ಲಿಗೋ ಹೋಪಗ,ಹಾರಿಗೊಂಡು ಹೋದರೆ ಮಾರ್ಗ ನೆಡೆತ್ತೊರಿನ್ಗೆ ಗುಣ ಅಲ್ಲದೋ.ಮಾರ್ಗಲ್ಲಿ ರಶ್ ಕಮ್ಮಿ ಆವುತ್ತಿಲ್ಲೆಯೋ.!!

    ಮಾರ್ನೆಮಿಲಿ ಆಯುಧ ಪೂಜೆಗೆ ಮೋನಪ್ಪನ ಸೈಕ್ಕಲು ಶೋಪಿಲಿ ಸೈಕ್ಕಲುಗಳ ಸಾಲಿಲಿ ನಿಲ್ಲಿಸಿ ಸೇವಂತಿಗೆ,ಅಬ್ಬಲಿಗೆ ಮಾಲೆ ಹಾಕಿ ಮೈಕು ಮಡುಗಿ ಪೂಜೆ ಮಾಡಿದ ಹಾಂಗೆ ಇವು ಹೆಲಿಕೊಪ್ತರಿಂಗೆ ಮಾಡುತ್ತವಪ್ಪಾ,ಅದೂ ತಪ್ಪಾ??ಅವು ದೇಶದ ಉದ್ಧಾರ ಆಗಲಿ ಹೇಳಿ ಅಸಬಡುಕ್ಕೊಂಡಿದ್ದವು ನೀನು ನೋಡಿರೆ ಅವು ಮಾದುತ್ಸ ಒಳ್ಳೆ ಕೆಲಸಲ್ಲೆಲ್ಲ ಸಣ್ಣ ಪಿರಿ ತೆಗೆತ್ತಾ ಇದ್ದೆ.
    ಎನಗೆ ಸಂಶಯ ಬಪ್ಪಲೆ ಶುರು ಆಯಿದು.ನೀನೂ,ಈ ನೆಲ,ಜಲ,ಭಾಷೆ ( ಹೊಸತ್ತಾಗಿ ಮಣ್ಣು ಸೇರುಸುವ) ಒಳುಶುಲೆ ಕೊನೆ ಉಸಿರಿನವರೆಗೆ ಓರಾಟ ಮಾಡುವವರ ( ಉಟ್ಟು ಓರಾಟಗಾರರ) ಒಟ್ಟಿಗೆ ಸೇರಿಗೊಂಡಿದೆಯೋ ಹೇಂಗೆ?ಪೆರ್ಲದಣ್ಣ,ಅಜ್ಜಕಾನ ಭಾವನ ಸೇರ್ಸಿಗೊಂದು ಎರಡನೇ ಪಾದಯಾತ್ರೆ ತೆಗವ ಆಲೋಚನೆ ಮಣ್ಣು ಇದ್ದೋ? ಮನ್ನೆ ಹೋದವೆಲ್ಲ ತಿರುಗಿ ಬೈನ್ದವಿಲ್ಲೆ,ಎಲ್ಲಿ ಯಾವದರಲ್ಲಿ ಮುಳುಗಿದವೋ ಗೊಂತಿಲ್ಲೆ.ಮತ್ತೆ ನೀನು ರಜ ದಿನ ಇಲ್ಲದ್ದರು,ಇಲ್ಲಿ ಬೈಲು ಒಣಗುಗು ಗೊಂತಾತೋ?

    ನಮ್ಮ ಅದಿರಿನ ನಾವೇ ಉಪಯೋಗ ಮಾಡುವ ದುರ್ಬುದ್ಧಿ ಎಲ್ಲ ಹೇಳಿಕ್ಕೆದ ಒಪ್ಪನ್ನೋ.ಅದೆಲ್ಲ ಅಪ್ಪ ಹೋಪ ಕಡಕಟ್ಟಲ್ಲ.ಈಗಲೇ ಕರೆಂಟಿಲ್ಲೇ.ಇನ್ನು ಕಬ್ಬಿಣ ತಯಾರು ಮಾಡುವ ಮಿಶನು ಎಲ್ಲ ಶುರು ಆದರೆ ಕೇಂಡಲು ಸಾಕಾಗದ್ದೆ ಚಿಮಿಣಿ,ಲಾಟ್ನು,ಗೇಸುಲೈಟು ಎಲ್ಲ ಅಟ್ಟಂದ ಹೆರತೆಗೆಯೆಕ್ಕು.

    ಚಿಮಿಣಿ ಎಣ್ಣೆ ರೇಶನಿಲಿ ಸಿಕ್ಕುತ್ತೋ ಹೇಳಿ ಬಟ್ಯನತ್ರೆ ಕೇಳೆಕ್ಕಷ್ಟೇ.

    ಒಂದೊಪ್ಪ: ದೆಲ್ಲಿಲಿ ಹೂಗಿನ ಸೆಸಿಯ ಹೆಸರಿಲಿ ಎಲ್ಲೋರಾ ಕೆಮಿಲಿ ಹೂಗು ಮಡುಗಿದೋರ ಕಥೆ ಎಂತಡಾ??

    1. ಒಪ್ಪಣ್ಣಾ.. ಪಾಪ ಬಚ್ಚೇಗೌಡ ಗಣಿ ಇಲ್ಲದ್ದೆ ಎಷ್ಟು ಕಷ್ಟ ಬಂತು ನೋಡು.ಅದಕ್ಕೆ ಹೇಳುತ್ಸು ದೊಡ್ಡ ಜೆನಂಗೊಕ್ಕೆಲ್ಲ ದಾರಿಹೊಪಲೆ ಬಿಡೆಕ್ಕು ಹೇದೊಂದು.. ಆಕಾಶಲ್ಲಿ ಹಾರುವಷ್ಟು ಪೈಸೆ ಇಲ್ಲದ್ದೆ ಮಾರ್ಗಲ್ಲಿ ಅದರಷ್ಟಕ್ಕೆ ಹೋಯಿಕ್ಕೊಂಡಿತ್ತದ,ದೊಡ್ಡ ವೈವಾಟಿಲಿ .ಕಾಲ ಹಾಳಾತು, ಮನುಷ್ಯರು ಹೀಂಗೆ ಅಡ್ಡ ಬಪ್ಪಲಕ್ಕೋ? ನಾಯಿ ಅಡ್ಡ ಬಂದ ಹಾಂಗೆ. ನಾಯಿಗೆ ಬಡುದರೆ ಕಚ್ಚುಗು, ಮಂತ್ರಿ ಹೇಳಿ ನೋಡದ್ದೆ. ಹಾಂಗೆನಾದರು ಪೆಟ್ಟು ತಿಂದ ಮನುಷ್ಯ ಮಾಡಿದ್ದರೆ ಕಾರಿಲಿದ್ದ ಮಾವ ಕಾರಿಲೆ ಬಾಕಿ,ಇದು ಹೊಸ ಮಾವನ ಮನೆಗೆ ಸಮ್ಮಾನಕ್ಕೆ ಹೊಯೇಕ್ಕಾತು. ಅಪ್ಪೋಅಲ್ಲದೋ??

    2. ರಘುಭಾವಾ..
      ಅದ್ಭುತ ಒಪ್ಪ!!

      ಧನಾತ್ಮಕತೆಲಿ ಋಣವಿಷಯ ಬರದು ವ್ಯವಸ್ಥೆಯ ಸಂಪೂರ್ಣವಾಗಿ ವಿಮರ್ಶೆ ಮಾಡಿದ್ದಿರಲ್ಲದೋ – ಅದು ಎಷ್ಟೋ ಜೆನರ ಅಭಿಮಾನಕ್ಕೆ ಪಾತ್ರವಾಯಿದು.
      ಬೈಲಿಂಗೆ ಒಳ್ಳೆ ರೀತಿಲಿ ಸ್ವಾಗತ.

  18. ಬಳ್ಳಾರಿಯ ಕೆಂಪು ಬೋಳು ಗುಡ್ಡೆ ನೋಡಿ ಬೇಜಾರು ಆತು. ಗಣಿ ಹಗರಣದ ಪಾದಯಾತ್ರೆಯ ತಮಾಷೆ, ಚೆಂದ ಆಯಿದು. ಸ್ವಾತಂತ್ರೋತ್ಸವದ ಸಮಯಲ್ಲಿ ಒಳ್ಳೆ ಒಂದು ಲೇಖನ. ಒಪ್ಪಣ್ಣ, ನಾಡ್ದು ಸ್ವಾತಂತ್ರೋತ್ಸವದ ಸಮೆಲಿ ಮಂಗಳೂರಿಲ್ಲಿ ಚುಟುಕ ಪರಿಷತ್ತಿಲ್ಲಿ ಆನೊಂದು ಪದ್ಯ ಓದುವೋ ಹೇಳಿ ತಯಾರಿ ಮಾಡಿತ್ತಿದ್ದೆ. ಅದಾ. ಅದೇ ಸಮಯಕ್ಕೆ ನಿನ್ನ ಈ ಲೇಖನವೂ ಬಂತು. ನಿನ್ನ ಲೇಖನಕ್ಕೆ ಪೂರಕವಾಗಿ ಎನ್ನ ಪದ್ಯವೂ ಇದ್ದ ಕಾರಣ ಬೈಲಿನವಕ್ಕೆ ಓದಲೆ ಕೊಡುತ್ತಾ ಇದ್ದೆ. ನಿಂಗೊ ಎಲ್ಲ ವಿಮರ್ಶೆ ಖಂಡಿತಾ ಮಾಡ್ಳಕ್ಕು.

    1. ಮಾವಾ°..
      ನಿಂಗಳ ಸಕಾಲಿಕ ಪದ್ಯ ತುಂಬ ಚೆಂದ ಆಯಿದು.
      ಬೈಲಿನ ಕೃಷಿಗೆ ತೂಕ ಜಾಸ್ತಿ ಮಾಡಿತ್ತು.

      ಇನ್ನೂ ಬರೆತ್ತಾ ಇರಿ ಮಾವ°. ಚುಟುಕಪರಿಷತ್ತಿನ ಕಾರ್ಯಕ್ರಮ ಹೇಂಗಾತು?

      1. ನೀನು ಬೆನ್ನು ತಟ್ಟಿದ್ದಕ್ಕೆ ಕೊಶಿ ಆತು. ಚುಟುಕ ಪರಿಷತ್ತಿನ ಕಾರ್ಯಕ್ರಮ ಲಾಯಕ್ ಆತು. ದೊಡ್ಡವರ ಪದ್ಯಂಗಳ ಎಡೆಲಿ ಎನ್ನ ಪದ್ಯಕ್ಕೂ ಒಂದು ಬೆಲೆ ಬಂತು. ಕವನ ಓದಿದ ಕವಿಗಳ ಎಲ್ಲೋರನ್ನು ಒಂದು ಪನ್ನೀರು ಹೂಗು ಕೊಟ್ಟು, ಖಾದಿ ನೂಲಿನ ಹಾರ ಹಾಕಿ ಗೌರವಿಸಿದವು.

  19. ಆರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹೇಳುಲೆ ಒಪ್ಪಣ್ಣ ಓದುವ ಕಾಲಲ್ಲಿ ಕಷ್ಟ ಇತ್ತು. ಪರೀಕ್ಷೆಗೆ ಓದುವಾಗ ಒಂದು ಮಂತ್ರಿ ಇದ್ದರೆ ಪರೀಕ್ಷೆ ಬರವಾಗ ಅದು ಬದಲಾಗಿಯೊಂಡಿತ್ತು.
    ಇನ್ನು ಬಳ್ಳಾರಿಯ ಕಥೆ ಹೇಳಿ ಸುಖ ಇಲ್ಲೆ. ಎಲ್ಲರುದೆ ರಾಜಕೀಯಕ್ಕೆ ಬಪ್ಪದು ಪೈಸೆ ಮಾಡುಲೆ. ಉಹ್ಹ್…

    ಬೈಲಿಲಿಪ್ಪ ಎಲ್ಲೊರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗೋ.

    1. ಅದುದೇ ಅಪ್ಪು ಉದಯಣ್ಣ.
      ಅದಕ್ಕೇ ಎಂಗೊ ಬಾಯಿಪಾಟ ಮಾಡಿಗೊಂಡು ಹೋಪಲಿಲ್ಲೆ. ಹತ್ತರಾಣವ° ಎಂತ ಬರದನೋ ಅದನ್ನೇ ಬರವದು.
      ತಪ್ಪಾದರೂ, ಸರಿ ಆದರೂ..!!

  20. ಶುದ್ದಿ ಭಾರೀ ಲಾಯ್ಕಾಯಿದು. ಎಲ್ಲಿಂದ ಎಲ್ಲಿಗೆ ಲಿಂಕು- ಸಮಾಜಂದ ಬಳ್ಳಾರಿಗೆ, ಬಳ್ಳಾರಿಂದ ಸ್ವಾತಂತ್ರ್ಯಕ್ಕೆ, ಕಾಶ್ಮೀರಕ್ಕುದೇ!

    ಚೆ ಬಳ್ಳಾರಿಯ ಪರಿಸ್ಥಿತಿ ನೋಡಿ ಬೇಜಾರಾತು. ಪಾಪ ಅಲ್ಲಿಯಾಣ ಸಾಮಾನ್ಯ ಜನರಿಂಗೆ ಹೇಂಗಕ್ಕು, ಊರೆಲ್ಲ ಬೋಳಪ್ಪಾಗ.
    ನಿಂಗ ಹೇಳಿದಾಂಗೆ ಆ ಮಣ್ಣು ನಮ್ಮಲ್ಲೇ ಬಳಕೆ ಅಪ್ಪಾಂಗಿದ್ದಿದ್ದರೆ ಎಷ್ಟೋ ಅಭಿವೃದ್ಧಿ ಆವುತಿತ್ತು. ಇದಕ್ಕೆ ಒಂದು ಕಾರ್ಯಯೋಜನೆ ಮಾಡುದು ಬಿಟ್ಟು ಯಾತ್ರೆ-ಗೀತ್ರೆ ಮಾಡಿರೆ ಎಂತ ಪ್ರಯೋಜನ ಅಪ್ಪಲಿದ್ದು? ಅವುದೇ ಅವರ ಸ್ವಾರ್ಥ ನೋಡಿಗೊಂಬದಷ್ಟೇ.
    ಈ ಗಣಿಂದಾಗಿ ನಮ್ಮ ಊರಿಂಗೂ ತೊಂದರೆ ಆಗಿಯೊಂಡಿದ್ದಡ. ಅಲ್ಲಿಂದ ಮಣ್ಣು ತಂದು ಇಲ್ಲಿ ಬಂದರಿಲಿ ಸೊರುಗುದಿದಾ.

    ಶುದ್ದಿಯ ಶೀರ್ಷಿಕೆಯೂ, ಒಂದೊಪ್ಪವೂ ಸೂಪರ್.

    1. ಧನ್ಯವಾದಂಗೊ ಅನುಶ್ರೀ..
      ಈಗಾಣ ಸ್ವಾರ್ಥ ಕಾಂಬಗ ಬಂಡಾಡಿ ಅಜ್ಜಿಯ ನೆಲ್ಲಿಹಿಂಡಿ ತಿಂದ ಹಾಂಗಾವುತ್ತು ಒಪ್ಪಣ್ಣನ ಮೋರೆ.!! 😉

  21. ಹಳೆಮನೆ ಅಣ್ಣ ಪಟ ತೆಗವಲೆ ಹೋಯಿದನಿಲ್ಲೆ ಒಪ್ಪಣ್ಣೋ… ವೀಡ್ಯ ತೆಗವಲೆ ಬತ್ತಿರೋ ಕೇಟವು ಕೋಂಗ್ರೆಸ್ಸಿನವು. ಅವಕ್ಕೆ ಸೋನಿಯ ಬಾಯಮ್ಮಂಗೆ ತೋರುಸುಲೆ ಬೇಕಡ. ಆನು ಹೇಳಿದೆ ಅಷ್ಟು ದೂರ ಬಪ್ಪಲೆ ಎಡಿಯಾ ಹೇಳಿ. ಕಳುದ ಸರ್ತಿ ಕರ್ನಾಟಕದ ವೋಟಿನ ವೀಡ್ಯ ತೆಗವಲೆ ಹೋಗಿ ಸಾಕು ಸಾಕಾಯಿದು… ಬದಿಯಡ್ಕಲ್ಲಿಪ್ಪ ಬೊಳುಂಬು ಮಾವ° ಹೊಸಾ ಕೆಮರ (ದೊ…ಡ್ಡ ಕೆಮರಾ ಅಡ, ಆನು ನೋಡಿದ್ದಿಲ್ಲೆ) ತೆಕ್ಕೊಂಡು ಹೋಯಿದವು ಹೇದು ಒಂದು ಶುದ್ದಿ ಇದ್ದು…

    1. ಹಳೆಮನೆ ಅಣ್ಣ,
      ನಿಂಗೊ ತೆಗದಿದ್ದರೆ ಇನ್ನುದೇ ಆರ್ದ್ರವಾಗಿ ಬತ್ತಿತು ಎಲ್ಲ ಪಟಂಗೊ.
      ಯೇವತ್ತಾರು ಅತ್ಲಾಗಿ ಹೋಪದಿದ್ದರೆ ಅಲ್ಯಾಣ ಪಟ ತೆಗದರೆ ಬೈಲಿಂಗೆ ತೋರುಸಿ, ಆತೋ?
      (ಕೆಮರ ಜಾಗ್ರತೆ!)

  22. ಅವು ಎಂಕ್ಲೆನ ಊರುದೊ ಕಲ್ಪಣೆದ ಪಟ ಅತ್ತೆ?

    1. ಅಪ್ಪೋ ಬಟ್ಯ°..
      ಆನು ಉದೆಕಾಲಕ್ಕೆ ಓಡಿದ್ದು ಕಂಡಿದು ನಿನಗೆ. ಬೀಸ್ರೋಡುಮಾಣಿ ಬೆಳಿಕಾರು ತಿರುಗಿಸೆಂಡು ಹೋರ್ನು ಹಾಕಿ ಕಲಿತ್ತದು ಕಂಡಿದಿಲ್ಲೆಯೋ ನಿನಗೆ? ಹೇ°?

      1. ಎನಗೆ ಕಾರು ಬಂದರೆ ಪೋಡಿಗೆ ಹಾವ್ತು. ಕಾರಿಲ್ಲಿ ಆರಿದ್ದವು ಏಳಿ ಎಲ್ಲ ನೋಡಿದ್ದಿಲ್ಲೆ ದಣಿ. ಓರ್ನು ಕೇಳಿದ್ದು ಅಪ್ಪು

  23. ಒಪ್ಪಣ್ಣ ….ರಾಜಕೀಯ ಸುದ್ದಿ ಲಾಯ್ಕಾ ಆಯಿದು. ಅವು ೫೦ ವರ್ಷಲ್ಲಿ ಮಾಡಿದ್ದರ (ಪೈಸೆ), ಮಣ್ಣು ಬಗದ್ದರ ಇವು ಐದು ವರ್ಷಲ್ಲಿ ಮಾಡಿದ್ದವು ಬಾವ. ಅದಕ್ಕೆ ಅವಕ್ಕೆ ಬೆಶಿ. ಆ ಊರಿಲ್ಲಿ ಅವುದೆ ಒಂದೆ ಇವುದೆ ಒಂದೆ.
    ಒಂದೊಪ್ಪ ಪಷ್ಟಾಯಿದು….

  24. ಓಹೊ…
    ಈ ಪೆರ್ಲದಣ್ಣಂಗೆ ಕಾಂಗ್ರೆಸ್ಸಿನ ಲಾಡುಗಳ(ಅನಿಲ್ ಲಾಡ್, ಸಂತೋಷ್ ಲಾಡ್) ಸಂಡೂರು ಮಾತ್ರ ಕಾಂಬದೊ? ರೆಡ್ಡಿಗಳ ಓಬಳಾಪುರಂ ನೋಡಿ ಹೇಂಗಿದ್ದು ಹೇಳಿ: http://wikimapia.org/#lat=15.0782046&lon=76.8310243&z=18&l=0&m=b

    ಶ್ರೀರಾಮುಲುವಿನ ತಲೆಯನ್ನದರೂ ನೋಡ್ಲಕ್ಕು, ಓಬಳಾಪುರಂ ಗುಡ್ಡೆಗಳ ಎಡಿಯ.

    1. ಗುಣಾಜೆ ಮಾಣಿಗೆ ರೆಡ್ಡಿಗೊ ಶೋಭಕ್ಕನ ಅಧಿಕಾರಂದ ಇಳಿಸಿದ ಕೋಪ ಇನ್ನೂ ಇಳಿದ್ದಿಲ್ಲೆ ಹೇಳಿ ಕಾಣ್ಸು

      1. ಅಪ್ಪು ಪೆರ್ಲದಣ್ಣ, ರೆಡ್ಡಿಗಳ ಹೆಸರು ಕೇಳಿರೆ ಅವನ ಕೆಮಿಲಿ ಹೊಗೆ ಹೋವುತ್ತು!! 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×