ಸಂಕಟಬಂದಿಪ್ಪಗ ಬೇಕಾದ ನಿಜವಾದ ವೆಂಕಟ್ರಮಣಂಗೊ..

ಬಟ್ಟಮಾವ ಅಂಬಗಂಬಗ ಹೇಳುವ ಹಲವು ಸುಭಾಷಿತಂಗಳಲ್ಲಿ ಇದೂ ಒಂದು:

ಲಬ್ಧವಿದ್ಯಾ ಗುರುರ್ದ್ವೇಷ್ಟಿಃ ಲಬ್ಧಾರೋಗ್ಯಶ್ಚಿಕಿತ್ಸಕಃ |
ಲಬ್ಧ ಪುತ್ರಾ ಪತಿರ್ದ್ವೇಷ್ಟಿಃ ಲಬ್ಧ ಭಾರ್ಯಾಚ ಮಾತರಮ್ ||

ಮನುಷ್ಯಂಗೆ ವಿದ್ಯೆ ಕಲುಶಿದ ಮತ್ತೆ ಗುರುವನ್ನೇ ಕಡೆಗಣನೆ ಮಾಡ್ತ, ಅನಾರೋಗ್ಯಂದ ವಿಮುಕ್ತಿ ಹೊಂದಿ ಆರೋಗ್ಯ ಸಿಕ್ಕಿದ ಮತ್ತೆ ಡಾಗುಟ್ರನ್ನೇ ಮರದು ಬಿಡ್ತ, ಹೆಂಡತ್ತಿ ಕೈಗೆ ಮಗು ಬಂದ ಮತ್ತೆ ಗೆಂಡನ ಬಗ್ಗೆ ಗುಮಾನವೇ ಇರ್ತಿಲ್ಲೆ, ಹಾಂಗೇ ಜೀವನಲ್ಲಿ ಹೆಂಡತ್ತಿ ಪ್ರವೇಶ ಆದ ಮತ್ತೆ ಅಮ್ಮನನ್ನೇ ಮರದು ಬಿಡ್ತವು – ಹೇದು.
ನಾಲ್ಕು ಗೆರೆಲಿ ನಾಲ್ಕು ನಮುನೆ ಜೆನಂಗಳ ಬರದು ಮಡಗಿದ್ದವು ನಮ್ಮ ಹೆರಿಯೋರು.
ಇದೆಲ್ಲ ಅಜ್ಜಂದ್ರು – ಎದುರೆದುರು ಕಂಡದನ್ನೇ ಇದಾ ಹೇಳುಸ್ಸು. ಎಲ್ಲೋರುದೇ ಹಾಂಗಿರವು, ಆದರೆ ಕೆಲವು ಜೆನ ಆದರೂ ಈ ನಮುನೆಲಿ ಇದ್ದೇ ಇರ್ತವು.

~

ಲಬ್ಧಾರೋಗ್ಯಃ  ಚಿಕಿತ್ಸಕಃ – ಹೇದು ಒಂದು ಗೆರೆ ಇದ್ದತ್ತು ಮೇಲೆ, ಗಮನುಸಿದಿರೋ!
ಮನುಷ್ಯನ ನೆಮ್ಮದಿ ಜೀವನಲ್ಲಿ ಏನೂ ರಗಳೆ ಇಲ್ಲದ್ದೆ ನೆಡದರೆ ದೇವರನ್ನೂ ನೆಂಪು ಮಾಡ. ರಜ್ಜ ಕಷ್ಟಕೋಟಲೆಗೊ ಬಂದರೆ ಮಾಂತ್ರ “ಅಯ್ಯೋ ದೇವರೇ, ಎನಗೇ ಎಂತಕೆ ಈ ಕಷ್ಟ” –ಹೇದು ಬೆಲಕ್ಕಲೆ ಸುರುಮಾಡ್ತವು. ಮುನ್ನಾದಿನವರೆಗೆ ನೆಂಮದಿಲಿ ಇದ್ಸುದೇ ನೆಂಪಿರ ಅಂಬಗ! ಇರಳಿ,  ಅಂತೂ ಬೇನೆ ಬಂದರೆ ಆದರೂ ಹೋವುತ್ತವನ್ನೇ!  ಅದೇ ದೊಡ್ಡದು.
ಮನಸ್ಸಿನ ಬೇನೆ ಮಾಂತ್ರ ಅಲ್ಲದ್ದೆ – ದೇಹಕ್ಕೇನಾರು ಅನಾರೋಗ್ಯ ಬಂದರೆ ಎಂತ ಮಾಡುದು? ಸೀತ ಹೋವುಸ್ಸು ದಾಕುದಾರನಲ್ಲಿಗೆ.

ಬೇನೆಲಿಪ್ಪೋನಿಂಗೆ ಡಾಗುಟ್ರ ಕಂಡಪ್ಪದ್ದೇ – ಅಮೃತ ಸಿಕ್ಕಿದ ಹಾಂಗಾವುತ್ತು.
ಎನಗೆ ಹೀಂಗೀಗೆ – ತಲೆಬೇನೆಂದ ಹಿಡುದು ಕಾಲುಬೇನೆ ವರೆಂಗೆ ಇಪ್ಪ ಸಮಸ್ಯೆಗಳ ಪೂರ ಹೇಳುಸ್ಸು.
ಬೇನೆ ಹೇಳುವಾಗ ಅಂತೂ ಆ ದಾಕುದಾರನೇ ದೇವರು. ಅವರ ಪ್ರತಿಯೊಂದು ಸಲಕರಣೆಗಳೂ ಕೌಳಿಗೆ ಸಕ್ಕಣದ ಹಾಂಗೆ ಕಾಂಬದು. ಅವರ ಮದ್ದು ಹೇದರೆ ತೀರ್ಥಪ್ರಸಾದ. ಅವು ಹೇಳ್ತ ಮಾರ್ಗದರ್ಶನಂಗೊ ಹೇದರೆ ಸ್ವತಃ ದೇವವಾಕ್ಯ.
ಬೇನೆ ಗುಣ ಅಪ್ಪನ್ನಾರವೂ ಅವ್ವೇ ದೇವರು.

ರೋಗಕ್ಕಿಪ್ಪ ಏರ್ಪಾಡು ನಿವೃತ್ತಿಗೊ ಆಗಿ ಕೊನೆಗೆ ದಕ್ಷಿಣೆ ಕೊಟ್ಟಪ್ಪಗಳೇ ಡಾಗುಟ್ರ ಸಂಪರ್ಕ ಒಂದರಿಯಂಗೆ ಮುಗಿತ್ತು. “ಇನ್ನು ಹದ್ನೈದು ದಿನ ಬಿಟ್ಟು ಪುನಾ ಬರ್ಬೇಕು” – ಹೇದರೂ ಗುಮಾನ ಇಲ್ಲೆ. ಗುಣ ಆತಾನೆ, ಇನ್ನೆಂತರ – ಹೇದು ಆ ಹೊಡೆಂಗೆ ತಲೆಹಾಕಿಯೂ ಮನುಗಲಿಲ್ಲೆ ಇದಾ!
~

ಆದರೆ, ಡಾಗುಟ್ರು ಅವರ ಬೇನೆಗೆಯೋ ನವಗೆ ಮದ್ದುಕೊಡ್ತದು? ಅಲ್ಲಾನೇ!
ನಮ್ಮ ಅನಾರೋಗ್ಯವ ಸರಿಯಾಗಿ ಪರಿಶೀಲನೆ ಮಾಡಿ, ಅದಕ್ಕಿಪ್ಪ ಮದ್ದು ಮಾತ್ರೆಗಳ ಸರಿಯಾಗಿ ಸೂಚಿಸಿ, ನಾವು ಅದರ ತೆಕ್ಕೊಂಡಿದೋ – ಹೇದು ನಿಘಂಟು ಮಾಡಿ, ನಮ್ಮ ದೇಹಂದ ಅನಾರೋಗ್ಯ ದೂರ ಮಾಡ್ತದು ಡಾಗುಟ್ರ ಹಿರಿಮೆ. ಕೆಲವು ಸರ್ತಿ ಎಡ್ಮಿಟ್ಟು ಮಾಡೇಕಾವುತ್ತು; ಹಾಂಗಿಪ್ಪಗ ಹಾಸಿಗೆಲಿ ಮನುಗಿದ ರೋಗಿಗೆ ಅಪ್ಪಮ್ಮ ಎಲ್ಲೋರುದೇ ಆ ಡಾಗುಟ್ರೇ ಆಗಿರ್ತವು. ಕಾಲಕಾಲಕ್ಕೆ ಬೇಕಾದ ಡ್ರಿಪ್ಪೋ, ಕಪ್ಪೋ ಬೇಕಾದ್ಸು ಕೊಟ್ಟು ಶೆಗ್ತಿ ತುಂಬುಸಿ ಒಪಾಸು ಕಳುಸಿಕೊಡ್ತವು.
ಡಾಗುಟ್ರ ವೃತ್ತಿಧರ್ಮ ಅದು.
ಬಂದ ರೋಗಿಗೆ ಮದ್ದು ಕೊಟ್ಟು ಗುಣಮಾಡುದು- ಅವನ ಯೋಗಕ್ಷೇಮವ ನೋಡಿಗೊಂಬದು.

ನೂರಕ್ಕೆ ತೊಂಭತ್ತೊಂಭತ್ತು ಜೆನವೂ ಒಳ್ಳೇವೇ ಆಗಿರ್ತವು.
ಅಂದರೂ, ಒಂದೆರಡು ಪೀಕ್ಲಾಟದವೋ, ಹಾಂಕಾರದವೋ ಮಣ್ಣ ಇರ್ತವಲ್ಲದೋ! ಅದು ಭಾರೀ ಬಂಙ ಆವುತ್ತಿದಾ ಒಂದೊಂದರಿ.
ಡಾಗುಟ್ರು ಮದ್ದು ಕೊಡುದರ ಎಲ್ಲಾ ಕುಡುದಿಕ್ಕಿ – ಅಕೇರಿಗೆ ದಕ್ಷಿಣೆ ಜಾಸ್ತಿ ಆತು ಹೇಳುಸ್ಸೋ;
ಅನಾರೋಗ್ಯ ಗುಣ ಅಪ್ಪ ಬದಲು ಏರಿರೆ, ಡಾಗುಟ್ರು ಮದ್ದುಕೊಟ್ಟದೇ ಕಾರಣ – ಹೇಳುಸ್ಸೋ;
ರೋಗಿ ಅಕ್ಕಾಸ್ಮಿತ್ತಾಗಿ ಸತ್ತರೆ ಡಾಗುಟ್ರೇ ಕೊಂದದು ಹೇಳುಸ್ಸೋ;
ಮದ್ದು ರಜ್ಜ ಜಾಸ್ತಿ ಕೊಟ್ರೆ “ಡಾಗುಟ್ರಿಂಗೆ ಎಂತದೋ ಲಾಭ ಇದ್ದೋ ಕಾಣ್ತು” – ಹೇಳುಸ್ಸೋ;
– ಹೀಂಗೆ ಏನಾರೊಂದು ರೊಳ್ಳೆ ತೆಗೆಸ್ಸು ನಮ್ಮ ಕೆಲವರ ಕ್ರಮ.
~

ಕಾನಾವು ಡಾಗುಟ್ರು ಅಂದೊಂದರಿ ಸಿಕ್ಕಿಪ್ಪಗ ಕೆಲವು ವಿಷಯ ಹೇಳಿತ್ತಿದ್ದವು.
ಎಲ್ಲಿಯೋ ಒಂದು ದಿಕ್ಕೆ ಒಂದು ಬ್ಯಾರ್ತಿಯ ಪರೀಕ್ಷೆ ಮಾಡಿದ ಡಾಗುಟ್ರು ಇನ್ನು ಮಕ್ಕೊ ಆದರೆ ತಾಂಗುಲೆಡಿಯ ನಿನ್ನ ದೇಹಕ್ಕೆ. ಹಾಂಗಾಗಿ ಈಗವರೆಗೆ ದೇವರು ಕೊಟ್ಟದೇ ಸಾಕು – ಹೇಳಿದ್ಸಕ್ಕೆ, ಆ ದಿನ ಇರುಳು ಏಳೆಂಟು ಜೆನ ಕುಟ್ಟಂಗೊ ಬಂದು – “ಎಂಗಳ ಧರ್ಮಲ್ಲಿ ಹೆಣ್ಣುಗೊ ಇರ್ಸೇ ಮಕ್ಕಳ ಹೆರ್ಲೆ. ಸಾಕು ಹೇಳುಲೆ ನೀ ಆರು?” – ಹೇದು ತಗಾದೆ ತೆಗದ್ದವಾಡ.
ನಿಂಗೊ ನಿಂಗಳ ಧರ್ಮದ ಸಂಗತಿ ಹೇಳಿದ್ದು, ಆನು ಎನ್ನ ಧರ್ಮದ ಸಂಗತಿ ಹೇಯಿದ್ದು. ಆ ಹೆಮ್ಮಕ್ಕಳ ಜೀವಕ್ಕೆ ತೊಂದರೆ ಅಕ್ಕು – ಹೇದು ಎಷ್ಟು ಹೇಳಿರೂ ಅವಕ್ಕೆ ಸಮಾದಾನ ಆಯಿದಿಲ್ಲೇಡ.

ಮತ್ತೊಂದಿಕ್ಕೆ ಚಿಂತಾಜನಕ ಅಪಘಾತದ ಜೆನ ಡಾಗುಟ್ರು ಮುಟ್ಟಿದ ಕೂಡ್ಳೇ ಸತ್ತತ್ತಾಡ. ಅದಕ್ಕೆ ಡಾಗುಟ್ರೇ ಆ ಜೆನ ಸಾವಲೆ ಕಾರಣ ಹೇದು ಶವವ ಆಶುಪತ್ರೆಯ ಎದುರು ಮಡಗಿ ಜೋರು ಗಲಾಟೆ.
ಸಾವಲೆ ಆನಲ್ಲ, ಜೋರು ಬೈಕ್ಕುಬಿಟ್ಟ ಆ ಜೆನವೇ ಕಾರಣ – ಹೇದರೆ ಆರೂ ಕೇಳವು. ಆ ಎರೆಪ್ಪುಗೊ ಕಲ್ಲಿಡ್ಕಿದ್ದರಲ್ಲಿ ಡಾಗುಟ್ರ ಗೆನಾ ಕನ್ನಾಟಿ ನಾಕು ಹೊಡಿ!

ಮತ್ತೊಂದಿಕ್ಕೆ ಕಣ್ಣಾಪ್ರೇಶನು ಮಾಡಿಸೆಂಡು ಹೋದ ಒಂದು ಗ್ರಾಯಕಿ ಒಂದೊರಿಶ ಕಳುದು ಬಂದು ಜೋರಿಲಿ ಕೇಳಿತ್ತಾಡ – ಡಾಗುಟ್ರೇ, ನೀವು ಎಂತ ಮಾಡಿದ್ದು, ನನಿಗೆ ಕಾಣುದೇ ಇಲ್ಲ – ಹೇದು. ಅದರ ಫೈಲು ತೆಗದು ನೋಡಿರೆ, ಆಪ್ರೇಶನು ಆದ ಮತ್ತೆ “ಇಂತಾ ದಿನ ಬರೇಕು” ಹೇಳಿದ್ಸಕ್ಕೆ ಬಯಿಂದೇ ಇಲ್ಲೆ.  ಹಾಂಗೆ ಹೇಳಿ ಓದುಲೆ ಹೇಳಿದ್ದದರ ಪೂರಾ ಓದುಲೆ ಎಡಿಗಾಯಿದು. ಕಾಣ್ತಿಲ್ಲೆ ಹೇಳಿ ಲೊಟ್ಟೆ ಹೇಳಿ ಏಮಾರ್ಸುಲೆ ಬಂದದು! ಸರಿಯಾಗಿ ಮಾಡೆಕ್ಕಾದ್ದದರ ಮಾಡದ್ರೆ ಅದು ಡಾಗುಟ್ರ ತಪ್ಪೋ? ಓಯಿ!

ಹೀಂಗೆಲ್ಲ ಕತೆ.

~
ಅಲ್ಲ, ಕೆಲವು ದಿಕ್ಕೆ ಡಾಗುಟ್ರುಗಳದ್ದೂ ಅಚಾನಕ್ ತಪ್ಪಾಗಿ ಹೋಕು. ಆದರೆ, ಹೆಚ್ಚಿನ ದಿಕ್ಕೆಯೂ- ಒಬ್ಬನ ಉಶಾರಿ ಮಾಡೇಕು – ಹೇದು ಡಾಗುಟ್ರು ಗ್ರೇಶುಗೇ ಹೊರತು, ಒಬ್ಬನ ಲಗಾಡಿ ತೆಗವ – ಹೇದು ಆರುದೇ ಮದ್ದು ಕೊಡ್ತವಿಲ್ಲೆ.
ರೋಗಿಗಳ ಸರ್ವಾಂಗೀಣ ಅಭಿವೃದ್ಧಿಗೇ ವೈದ್ಯರು ಶ್ರಮಕೊಡುದು.
ನಿಜವಾದ ಅರ್ಥಲ್ಲಿ ಮನುಷ್ಯರಿಂಗೆ ಸಂಕಟ ಬಂದಪ್ಪಗ ನೆಂಪಪ್ಪ ವೆಂಕಟರಮಣಂಗೊ ಆ ವೈದ್ಯರು. ಮತ್ತೆ ಮರದಿನ ನವಗೆ ನೆಂಪಾಗದ್ರೂ ಆ ದಿನ ನೆಂಪಾಗಿಯೇ ಅಕ್ಕನ್ನೇ.
ವೆಂಕಟ್ರಮಣ ಹೇದು ನಾವೇ ಹೇಳಿದ ಮತ್ತೆ ಅವು ಹುಂಡಿ ಮಡಗಿರೆ ಎಂತ ಬೇಜಾರು!? ಅಲ್ದೋ! 😉
ಅದಿರಳಿ.

~
ನಿನ್ನೆಲ್ಲ ಮೊನ್ನೆ “ವೈದ್ಯರುಗಳ ದಿನ” ಆಡ. ನಮ್ಮ ಬೈಲಿಲಿಯೂ ಹಲವು ವೈದ್ಯರುಗೊ ಇದ್ದವು. ಎಲ್ಲೋರ ಪರಿಶ್ರಮಕ್ಕೆ ಮುಟ್ಟಾಳೆ ನೆಗ್ಗಿ ಕೃತಜ್ಞತೆ ಹೇಳುವೊ. ಎಲ್ಲೋರ ಕೈಗುಣಕ್ಕೂ ಧನ್ವಂತರಿ ಒಲುದು ಬರಳಿ.
ವೈದ್ಯರ ದಿನದ ಲೆಕ್ಕಲ್ಲಿ ಬೈಲಿನೆಲ್ಲೋರಿಂಗೂ ಇದೇ ಸದಾಶಯ ಇರಳಿ.
~

ಒಂದೊಪ್ಪ: ಸತ್ಪ್ರಜೆಗೊಕ್ಕೆ ರಾಜಾಪ್ರತ್ಯಕ್ಷ ದೇವತಾ; ಒಳ್ಳೆ ರೋಗಿಗೊಕ್ಕೆ ವೈದ್ಯರೇ ಪ್ರತ್ಯಕ್ಷ ದೇವರು.

ಒಪ್ಪಣ್ಣ

   

You may also like...

3 Responses

 1. ಮಾಟಕ್ಕೊ, ಡಾಕುಟ್ರಕ್ಕೊ, ವಕೀಲಕ್ಕೊ, ಬಟ್ಟಕ್ಕೊ ….. ಎಲ್ಲೋರು ನವಗೆ ಖಂಡಿತ ಬೇಕು. ಅಂದರೆ ಕೆಲವು ಘಟನೆಗಳ ನೋಡಿರೆ… ಅದೂ ದೊಡ್ಡ ಪೇಟಗಳಲ್ಲಿ ಅಪ್ಪದರ ನೋಡಿರೆ ಇವಕ್ಕೆಲ್ಲ ರಜಾರು ಮನುಷ್ಯತ್ವ ಇಲ್ಲೆಯೋ ಹೇದೂ ಗ್ರೇಶಿ ಹೋವ್ತು.

  ಸಕಾಲ ಶುದ್ದಿಗೊಂದು ಒಪ್ಪ ಹೇದಿಕ್ಕಿ ಡಾಕುಟ್ರಕ್ಕೊಗೆ ಶುಭಾಶಯಂಗೊ. ವೈದ್ಯೋ ನಾರಾಯಣೋ ಹರಿಃ ಎಲ್ಲದಿಕ್ಕೆ ಸತ್ಯವಾಗಲಿ.

 2. S.K.Gopalakrishna Bhat says:

  olledaayidu.

 3. ಜಯಲಕ್ಷ್ಮಿ ಕುಕ್ಕಿಲ says:

  ಪಷ್ಟಾಯಿದು ಒಪ್ಪಣ್ಣಾ ಬರದ್ದು…ಅಪ್ಪು…ನೂರಕ್ಕೆ ತೊಂಭತ್ತೊಂಭತ್ತು ಜೆನ ಡಾಕ್ಟ್ರಕ್ಕಳೂ ಒಳ್ಳೇವೇ ಆಗಿರ್ತವು. ನಮ್ಮಗುರುಗೊ ಹೇಳಿದಾಂಗೆ ’ಹಂಡೆ ಹಾಲಿಂಗೆ ಹುಂಡು ಹುಳಿ” ಸಾಕನ್ನೆ….. ಒಳ್ಳೆ ಡಾಕ್ಟ್ರಕ್ಕೊ ಹೇಂಗೆ ಇರ್ತವು ಹೇಳಿರೆ.. ಒಂದರಿ ಎನ್ನ ಯೆಜಮಾನರು ಜ್ವರ ಮೈಕೈ ಬೇನೆ ಹೇಳಿ ಎಂಗಳ ಡಾಕ್ಟ್ರತ್ರೆ ಹೋಗಿ ಹೇಳಿದವ್ ಮದ್ದು ಕೊಡೆಕ್ಕು ಹೇಳಿ..ಡಾಕ್ಟ್ರು ಅವರ ನೋಡಿದ್ದು ಮಾತ್ರ ಮೈ ಮುಟ್ಟಿದ್ದವೇ ಇಲ್ಲೆ….ನಿನಗೆ ಎಂತ ಮದ್ದೂ ಬೇಡ….ಸರಿಯಾಗಿ ಮನೆಗೆ ಹೋಗಿ ರೆಸ್ಟ್ ಮಾಡು..ಫೋನ್, ಮೊಬೈಲು, ಕಂಪ್ಯೂಟರ್..ಟಿವಿ ಎಲ್ಲ ದೂರ ಮಡುಗೆಕ್ಕು ಅಗತ್ಯವಾಗಿ… ಅಷ್ಟೇ ಸಾಕು ಹೇಳಿದವ್. ಇವ್ ..ಆದರೂ ಜ್ವರ ಇದ್ದನ್ನೆ..ಹೇಳಿದ್ದಕ್ಕೆ…ಡಾಕ್ಟ್ರು ಕೂಡಲೇ ಎಂತ ಹೇಳಿದ್ದು ಹೇಳಿರೆ…
  ಈಗ ಆನು ನಿನಗೆ ಮದ್ದು ಕೊಡೆಕ್ಕಾರೆ ಎರಡು-ಮೂರು ಕಾರಣ ಬೇಕು .. ಒಂದು..ಎನಗೆ ಪೈಸೆ ಮಾಡುವ ಉದ್ದೇಶ ಇರೆಕ್ಕು…ಎರಡು..ನೀನು ಹೇಳಿದ್ದು ಕೇಳದ್ದೆ ರೆಸ್ಟ್ ಮಾಡದ್ದೇ ಇರೆಕ್ಕು…ಮತ್ತೊಂದು ಆನು ಹೇಳಿದ್ದು ನಿನಗೆ ಅರ್ಥ ಆಗದ್ದೇ ಇರೆಕ್ಕು…ಡಾಕ್ಟ್ರನತ್ರೆ ಇಂಜೆಕ್ಷನ್ ತೆಕ್ಕೊಂಡ್ರೆ ಮಾತ್ರ ಜ್ವರ ಸರಿ ಅಪ್ಪದು ಹೇಳುವಷ್ಟೇ ಗೊಂತಿಪ್ಪದು ಅಲ್ಲನ್ನೇ ನಿನಗೆ ಹೇಳಿ… ಹೀಂಗಿದ್ದ ಡಾಕ್ಟ್ರಕ್ಕಳೂ ಇರ್ತವು ಅಲ್ಲದಾ ಒಪ್ಪಣ್ಣಾ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *