ಬಲೀಂದ್ರ ಹಬ್ಬವ ಬಲಿಕೊಟ್ಟ ಹುಲಿಯ ಕ್ರೂರತ್ವ..!!!!!

November 13, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚಾಣಕ್ಯ ನೀತಿ ಹೇದರೆ ನಮ್ಮ ಹಿಂದಾಣ ಕಾಲದ ರಚನೆಗಳಲ್ಲಿ ಮೇರು ಕೃತಿ. ನಂದರ ಓಡುಸಿ ಚಂದ್ರಗುಪ್ತನ ಪೀಠಲ್ಲಿ ಕೂರ್ಸಿ ತನ್ನಷ್ಟಕ್ಕೇ ತಾನು ಬದ್ಕಿದ ಮಹಾನ್ ಮಂತ್ರಿ ಕೌಟಿಲ್ಯನ ಇನ್ನೊಂದು ಹೆಸರೇ ಚಾಣಕ್ಯ ಹೇದು. ಅವನ ರಾಜನೀತಿಯ ಅನುಭವದ ರಸಪಾಕವೇ ಚಾಣಕ್ಯನೀತಿ.
ಅದರ ಹದಿಮೂರನೇ ಅನ್ವಾಕದ ಎಂಟನೇ ಶ್ಲೋಕಲ್ಲಿ “ಯಥಾ ರಾಜಾ ತಥಾ ಪ್ರಜಾ” – ಹೇದು ವಿವರ ಕೊಡ್ತನಾಡ.
ರಾಜ° ಹೇಂಗೋ – ಪ್ರಜೆಗಳೂ ಹಾಂಗೇ – ಹೇದು ತೋರಮಟ್ಟಿಂಗೆ ಅರ್ತ.

ರಾಜನ ಆಡಳ್ತೆ ಕಾಲಲ್ಲಿ ರಾಜನ ವೆಗ್ತಿತ್ವ, ಆಚಾರ, ಕ್ರಮ, ಚಿಂತನೆಗೊ ಹೇಂಗಿದ್ದತ್ತೋ – ಅದೇ ನಮುನೆ ಅವನ ಪ್ರಜೆದೂ ಇರ್ತು – ಹೇದು ಚಾಣಕ್ಯ ಉವಾಚ.
ರಾಜ° ಹೇಡಿ ಆಗಿಂಡು ಇದ್ದರೆ – ಪ್ರಜೆಗಳೂ ನೇರ್ಪ ಧೈರ್ಯಲ್ಲಿ ಇರ್ತವಿಲ್ಲೆ. ರಾಜ° ಪುಕ್ಕೆಲ° ಆಗಿದ್ದುಗೊಂಡು ’ಹತ್ತರಾಣೋರು ಯೇವಾಗ ಧಾಳಿ ಮಾಡ್ತವೋ’ – ಹೇದು ಚಿಂತೆಲಿ ಇದ್ದರೆ, ಪ್ರಜೆಗೊಕ್ಕೆ ಎಷ್ಟು ನೆಮ್ಮದಿ ಇಕ್ಕು? – ಅದೇ ನಮುನೆ ಚಿಂತೆ ಪ್ರಜೆಗೊಕ್ಕೂ ಇರ್ತು.
ರಾಜ° ಧೈರ್ಯಶಾಲಿ ಆಗಿ ಪ್ರಜೆಗಳ ಹುಮ್ಮಸ್ಸಿನ ಏರುಸಿಗೊಂಡು ಇದ್ದರೆ, ರಾಜಗಾಂಭೀರ್ಯಲ್ಲಿ ಕೂದುಗೊಂಡು ಮೈನವಿರೇಳುಸುವ ಮಾತುಗಳ ಹೇಳಿಗೊಂಡಿದ್ದರೆ, ತನ್ನಿಂತಾನಾಗಿ ಪ್ರಜೆಗೊಕ್ಕೂ ಅದು ಬತ್ತು. ಎಲ್ಲಾ ಪ್ರಜೆಗಳೂ ಅದೇ ಹುಮ್ಮಸ್ಸಿಲಿ, ಧೈರ್ಯಲ್ಲಿ ಇರ್ತವು.

ಅಶೋಕನ ಕಾಲಲ್ಲಿ ಅಶೋಕ° ಎಲ್ಲವನ್ನೂ ಬಿಟ್ಟು ಶಾಂತಿ ಸ್ಥಾಪನೆ ಹೇದೊಂಡು ಬುದ್ಧ° ಆಗಿ ಹೋದ° ಅಲ್ಲದೋ – ಅಷ್ಟಪ್ಪಗ ಅವನ ಹಿಂದೆಯೇ ಇಡೀ ಸಾರನಾಥವೇ, ಇಡೀ ರಾಜ್ಯವೇ ಬಂತು. ಎಲ್ಲೋರುದೇ ಅವರ ಕ್ರೂರತೆಯ ಬಿಟ್ಟು ಶಾಂತಿಯ ಹಿಂದೆ ಹೋದವಾಡ – ಹೇಳುಸ್ಸು ನವಗೆ ಕತೆಲಿ ಗೊಂತಾವುತ್ತು. ಅದೇ ಜರ್ಮನಿಯ ಹಿಟ್ಳರು – ಅವನ ರಾಜ್ಯದಾಹಂದಾಗಿ ಅವನ ಸೈನಿಕರೂ ಅದೇ ನಮುನೆ ರ್ತನೆ ಮಾಡೇಕಾತು. ಲಕ್ಷಾಂತರ ಯಹೂದಿಗಳ ಹಿಡುದು ತಂದು ಸೂಟುಮಣ್ಣಿಂಗೆ ಹಾಕಿದವು ಇದಾ! ರಾಜನ ಪ್ರೇರಣೆ ಯೇವ ಹೊಡೆಂಗೆ ಬತ್ತೋ – ಪ್ರಜೆಗಳ ದಾರಿಯೂ ಅದೇ ನಮುನೆ ಇರ್ತು.

ಹಾಂಗಾಗಿಯೇ ಚಾಣಕ್ಯ ಹೇದ್ಸು, ಯಥಾ ರಾಜಾ ತಥಾ ಪ್ರಜಾಃ.
ಇದೆಲ್ಲ ಈಗೆಂತಕೆ ನೆಂಪಾತು ಹೇದರೆ – ಕರ್ನಾಟಕ ಸರಕಾರದ ಕೆಲವು ಮುದಿಭ್ರಾಂತು ಕಾರ್ಯಂದಾಗಿ.
~

ಎಲ್ಲವೂ ಸರಿ ಇತ್ತು.
ನೀರು ಮೇಗೆ ನಿಂದು, ಕೆಸರು ಅಡಿಲಿ ಒಂದಿ – ಶುಭ್ರವಾಗಿ ಇದ್ದತ್ತು.
ಒಂದರಿಯೇ ಒಂದು ಎಸಡಿ ಬಂದು ಅಡಿಲಿ ಕಲಂಕಿದ್ಸರ ಗೆಜಳುಸಿ ತೆಳುದ ನೀರಿನ ಕಲಂಕುಸಿರೆ ಹೇಂಗಕ್ಕು?
ಅದೇ ನಮುನೆ ಆತು ಇಲ್ಲಿಯುದೇ.
ಎಲ್ಲವೂ ಸರಿ ಇತ್ತು.
ಅದೆಲ್ಲಿಂದ ಆ ಬುದ್ಧಿ ದೇವರು ಕೊಟ್ಟನೋ ’ಟಿಪ್ಪು ಜಯಂತಿ’ಯ ಆಚರುಸೇಕು – ಹೇದು ಒಂದು ಎಸಡಿ ಆಲೋಚನೆ ಮಂತ್ರಿಮಾಗಧರ ತಲೆಗೆ ಹೋತು.
ಸರಿ, ಕೆಲಸ ಸುರು ಮಾಡಿದವು ಆ ಬಗ್ಗೆ.

ಟಿಪ್ಪುವಿನ ಬಗ್ಗೆ ಈಗಲ್ಲ, ಅಂದೇ ಇದ್ದು ಲೊಟ್ಟೆಕತೆಗೊ.
ಪ್ರೈಮರಿ ಶಾಲೆಲಿ ಓದುವಾಗಳೇ – ಮೈಸೂರಿನ ಹುಲಿ ಟಿಪ್ಪು ಸುಲ್ತಾನ – ಹೇದು ಪಾಟ ಪುಸ್ತಕಲ್ಲಿ ಒಂದು ಚಿತ್ರ ಇದ್ದತ್ತು. ದಪ್ಪ ಮೀಸೆಯ ಒಂದು ಮಧ್ಯವಯಸ್ಕ – ಮುಂಡಾಸು ಪೇಟ ಕಟ್ಟಿಗೊಂಡು ಜೋಯಿಶಪ್ಪಚ್ಚಿಯ ಮಗಳು ಪುಚ್ಚೆಯ ಹಿಡುದು ನೇಚುತ್ತ ಹಾಂಗೆ ಒಂದು ಹುಲಿಯ ಬಲುಗಿ ಹಿಡುದ ಚಿತ್ರ. ಅದು ಎತಾರ್ತಲ್ಲಿ ಎಲ್ಲಿ ಹಾಂಗೆ ಹುಲಿಯ ಹಿಡುದು ನೆಗ್ಗಿದ್ದು, ಅದರ ಹಿಂದೆ-ಮುಂದೆ ಎಂತರ ಕತೆ? ಆರಿಂಗೂ ಅರಡಿಯ.
ಅಂತೇ ಆರೋ ಒಬ್ಬ° ಲೊಟ್ಟೆಕತೆ ಹೇಯಿದ್ಸರ ಒಳುದೋರು ಮುಂದುವರುಸಿದವು. ಅಷ್ಟೇ.

ಮೈಸೂರು ಒಡೆಯರ ಆಳ್ವಿಕೆಲಿ ಇದ್ದಿದ್ದ ರಾಜ್ಯವ ಇರುಳಿಂದಿರುಳೇ ಕಳ್ಳದಾರಿಲಿ ವಶ ಪಡುಸಿಗೊಂಡದು ಆಲಿ ಹೈದರ. ಊರೋರ ದಂಗೆ ಅಕ್ಕು ಹೇದು ಹೆದರಿ ರಾಜ ಮನೆತನವ ಕೊಂದಿದಿಲ್ಲೆ, ಅಲ್ಲದ್ದರೆ ಅವರ ಇಡೀ ನುಂಗಿ ನೀರು ಕುಡಿತ್ತಿತು. ಕೊಲ್ಲದ್ದರೆ ಎಂತಾತು, ರಾಜಮನೆತನಕ್ಕೆ ದಿಗ್ಬಂಧನ. ಎಂತದೂ ಅಲ್ಲಿಗೆ ಹೋಪಲಿಲ್ಲೆ, ಅಲ್ಲಿಂದ ಬಪ್ಪಲೂ ಇಲ್ಲೆ.
ಎಲ್ಲವೂ ಹೈದರನ ಕಣ್ಣಳತೆಲೇ ಇದ್ದದು.

ಅದಕ್ಕೆ ಒಂದು ಮಗ ಹುಟ್ಟಿತ್ತು – ಗಟ್ಟದ ಮೇಗೆ ತಿಪ್ಪಣ್ಣ, ತಿಪ್ಪೇಸ್ವಾಮಿ – ಹೇದು ಹೆಸರು ಇಲ್ಲೆಯೋ, ಅದೇ ನಮುನೆ ಯೇವ ಹಿಂದೂ ದೇವರ ಹರಕ್ಕೆಲಿ ಹುಟ್ಟಿತ್ತೋ – ತಿಪ್ಪು ಹೇದು ಹೆಸರು ಮಡಗಿದ್ದಾಡ.
ಅಪ್ಪನ ಅದೇ ದುರ್ಬುದ್ಧಿ, ಅದರ ಚೊಲ್ಲಿಗೊಂಡು ಬಂದದು ತಿಪ್ಪು.
ಅಪ್ಪನ ಹಾಂಗೇ ದರ್ಬಾರು ಮುಂದುವರುಸಿತ್ತು. ರಾಜರ ಮನೆತನವ ದಿಗ್ಬಂಧನಲ್ಲಿ ಕೂಡುಸಿತ್ತು.
ಅದರೊಟ್ಟಿಂಗೇ – ತನ್ನ ಬೇಳೆ ಬೇಶೇಕಾರೆ ಬ್ರಿಟಿಶರ ಎದುರು ಮೀಸೆಕ್ಕು, ಹಾಂಗೆ ಮಾಡೇಕಾರೆ ಬ್ರಿಟಿಶರಿಂಗೆ ಆಗದ್ದೋರ ಹತ್ತರೆ ಮಾಡಿಗೊಳ್ಳೇಕು – ಹೇದು ಪ್ರೆಂಚರ ಹತ್ತರೆ ಒಯಿವಾಟೂ ಮಾಡಿತ್ತಾಡ.
ಆಳ್ವಿಕೆಲಿ ಧರ್ಮವ ಬೆರಕ್ಕೆ ಮಾಡಿತ್ತು. ಆಡಳ್ತೆಲ್ಲಿ ಬ್ಯಾರಿಗಳ ಕುರ್-ಅನ್ ನ ಹೇರಿತ್ತಾಡ. ಪರ್ಶಿಯಾ ಭಾಶೆಯ ಆಡಳ್ತೆ ಭಾಶೆಗೊ ಮಿಶ್ರ ಆತು.

ಅಷ್ಟೇ ಆಗಿದ್ದರೆ ಹೆದರಿಕೆ ಇತ್ತಿಲ್ಲೆ.
ಇದು ಊರೂರು ಹೋಗಿ ಸಿಕ್ಕಿದ ಪಾಪದ ಹಿಂದುಗಳ – ಪುರ್ಬುಗಳ ಹಿಡುದು ತಂದು ಬ್ಯಾರಿ ಮಾಡಿತ್ತಾಡ.
ಒಪ್ಪದ್ದೋರ ಗೊಂತಿದ್ದನ್ನೇ – ಮರಕ್ಕೆ ಕಟ್ಟಿ ನೇಲ್ಸುದೋ, ಗುಡ್ಡೆಂದ ಕೊಂಡೋಗಿ ಕೆಳ ನೂಕಿ ಹಾಕುದೋ, ಆನೆ ಕೈಲಿ ಬಡಿಶುದೋ, ಕುದುರೆ ಗಾಡಿಗೆ ಕಟ್ಟಿ ಎಳವದೋ – ಹೀಂಗೆಲ್ಲ ಮಾಡಿಗೊಂಡು ಇತ್ತಿದ್ದು.

ಛೇ – ಎಂತಾ ಕ್ರೂರ.
~
ಮಂಡ್ಯಮ್ ಅಯ್ಯಂಗಾರ್ರು ಹೇದು ಗೊಂತಿದ್ದಲ್ಲದೋ – ಅವು ಈಗಳೂ ದೀಪಾವಳಿ ಹಬ್ಬ ಆಚರಣೆ ಮಾಡ್ತವಿಲ್ಲೆ.
ಏಕೇದರೆ – ಅದೊಂದು ಒರಿಶದ ದೀಪಾವಳಿ ದಿನವೇ – ಆ ಊರಿನ ಅಷ್ಟೂ ಅಯ್ಯಂಗಾರ ಗೆಂಡುಮಕ್ಕಳ ಹಿಡುದು ನೇಲುಸಿದ್ದು ಟಿಪ್ಪು.
ಇಡೀ ಊರಿಂಗೆ ಊರೇ ಗೆಂಡು ಸಂತಾನ ಇಲ್ಲದ್ದೆ – ಮುತ್ತಿಯೇ ಹೋತು.
ಹಾಂಗೂ ಹೀಂಗೂ ಬದ್ಕಿದವು ಎಲ್ಲೆಲ್ಲಿಗೋ ಓಡಿ ಹೋಗಿ ಬೇಡಿ ತಿಂದು ಬದ್ಕಿದವು, ಪಾಪ!

ಎಂತಾ ಕ್ರೂರಿ!
~

ಇದರ ಜಯಂತಿಯೋ, ತಿಥಿಯೋ ಆಚರಣೆ ಮಾಡ್ಳೆ ಹೆರಟವಲ್ಲದೋ ಕರ್ನಾಟಕಲ್ಲಿ!
ಆ ಕ್ರಮವ ವಿರೋಧಿಸುಲೆ ಹೇದು ಮೊನ್ನೆ ಓ ಆ ಮಡಿಕ್ಕೇರಿಲಿ ಪ್ರತಿಭಟನೆ ಇದ್ದತ್ತಾಡ – ಚುಬ್ಬಣ್ಣ ಹೇಯಿದ°.
ಪ್ರತಿಭಟನೆ ಹೋವುತ್ತಾ ಇಪ್ಪಗ ಮೊದಲೇ ತಯಾರಾಗಿ ಬಂದ ಮಾಪ್ಳೆಗೊ – ಕೇರಳದ ಮಾಪ್ಳೆಗೊ – ಇಷ್ಟಿಷ್ಟು ದೊಡ್ಡ ಕಲ್ಲು ಹೊತ್ತು ಹಾಕಿದವಾಡ.
ಒಂದು ಮನಿಶ್ಶನ ತಲಗೆ ಬಿದ್ದು ಆ ಜೆನ ತೀರಿಗೊಂಡತ್ತಾಡ.

ಟಿಪ್ಪು ಸಾವಿರಗಟ್ಳೆ ಜೆನರ ಕೊಲ್ಲುವಾಗ, ಅದರ ಅನುಯಾಯಿಗೊಕ್ಕೆ ಅದೇ ಪಾಠ ಆಗದ್ದೆ ಒಳಿಗೋ?
ಅದಕ್ಕೇ ಹೇಯಿದ್ದು – ಯಥಾ ರಾಜಾ, ತಥಾ ಪ್ರಜಾ – ಹೇದು ಚಾಣಕ್ಯ.
ಆ ಅಧಿಕಾರದಾಹಿ, ಧರ್ಮಾಂಧನ ಕತೆಯನ್ನೇ ನಂಬಿ ಎಲಿಕುಂಞಿಯ ಹುಲಿ ಮಾಡಿ ನಂಬಿದೋರು ಈಗ ಅದರ ಬೀಲಲ್ಲೇ ಹಿಡುದು ನೇಲ್ತಾ ಇದ್ದವು.
ಅದುವೇ ಅವರ ಜೀವನದ ಪರಮೋಚ್ಚ ದೇವರು ಆಗಿ ಹೋತು.
~
ನಮ್ಮ ಮಾದರಿ ವೆಗ್ತಿಗೊ ಆರು ಆಗಿರ್ತವೋ, ಅವರ ಪ್ರೇರಣೆ, ಪ್ರೇರೇಪಣೆ ನಮ್ಮ ನೆತ್ತರಿಲಿ ಸದಾ ಇರ್ತು.
ನಾವು ಮಾದರಿಯಾಗಿ ಸ್ವೀಕಾರ ಮಾಡುವ ಜೆನವೇ ಹೀಂಗೆ ಆದರೆ – ಗೋವಿಂದ.
ಅದಕ್ಕೇ ಯೇವಗಳೂ ಹಿರಿಯರು ಹೇಳುಸ್ಸು – ನಾವು ಸರಿ ದಾರಿಲಿ ನೆಡೇಕು, ನಮ್ಮಂದ ಮತ್ತಾಣೋರು ನಮ್ಮ ಮಾದರಿ ಆಗಿ ತೆಕ್ಕೊಂಡು ನೆಡೆತ್ತವು; ನಮ್ಮ ತಪ್ಪುಗಳನ್ನೇ ಅವು ವೇದವಾಕ್ಯ ಹೇದು ತೆಕ್ಕೊಳ್ತವು – ಹೇದು.

ಟಿಪ್ಪುವಿನ ಕತೆಲಿಯೂ ಅದೇ ಆತು.
~
ಮದಲಾಣ ರಾಜ ಕಾಲಕ್ಕೆ ಈ ಮಾತುಗೊ ಹೆಚ್ಚು ಅನ್ವಯ ಅಪ್ಪದಾದರೂ, ಈಗಾಣ ಕಾಲದ ಪ್ರಜಾ-ಪ್ರಭುತ್ವ ಕ್ಕುದೇ ಹೊಂದದ್ದೆ ಏನಿಲ್ಲೆ. ನಮ್ಮಂದಲೇ ಆಯ್ಕೆ ಆಗಿ ನಮ್ಮ ಆಳ್ವಿಕೆ ಮಾಡ್ತ ಮನುಷ್ಯರು ಹೇಂಗಿರ್ತವೋ – ಅದೇ ನಮುನೆ ಅವರ ಅನುಯಾಯಿಗೊ ಇರ್ತವು.
ಬುದ್ಧಿವಂತ – ವೀರ – ಶೂರ ಮುಂದಾಳುಗೊ ನವಗೆ ಇದ್ದರೆ ನಾವು ಸರಿ ಇರ್ತು.
~

ಒಂದೊಪ್ಪ: ಕ್ರೂರಿ ರಾಜನ ಅನುಯಾಯಿಗೊ ಕ್ರೂರಿಯಾಗಿಯೇ ಇರ್ತವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ವಿಜಯತ್ತೆ

    ‘ಯಥಾರಾಜ ತಥಾಪ್ರಜಾ’ ಸರಿಯಾದ ಮಾತು. ಇದರ ಓದುವಾಗ ಆನೊಂದು ಬರದ ಕತೆ ‘ಯಥಾ ದೃಷ್ಟಿ ತಥಾ ಸೃಷ್ಟಿ ‘ ಹೇಳಿ ಕತೆ ಬರದಿತ್ತಿದ್ದೆ ಹಿಂದೆ. ಅದು ನೆಂಪಾತು. ನಾವು ಹೇಂಗ್ದ್ದೊ ಹಾಂಗೇ ನಮ್ಮ ಕೆಲಸವೂ ಆಗಿರುತ್ತು.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣಒಪ್ಪಕ್ಕದೊಡ್ಡಭಾವಪುತ್ತೂರುಬಾವದೇವಸ್ಯ ಮಾಣಿಬಟ್ಟಮಾವ°ಸಂಪಾದಕ°ಪ್ರಕಾಶಪ್ಪಚ್ಚಿಪೆರ್ಲದಣ್ಣಅನುಶ್ರೀ ಬಂಡಾಡಿಕೇಜಿಮಾವ°ಮಾಲಕ್ಕ°ವಸಂತರಾಜ್ ಹಳೆಮನೆಶಾ...ರೀಅಜ್ಜಕಾನ ಭಾವಎರುಂಬು ಅಪ್ಪಚ್ಚಿವೇಣೂರಣ್ಣಅಡ್ಕತ್ತಿಮಾರುಮಾವ°ಕೊಳಚ್ಚಿಪ್ಪು ಬಾವಡಾಮಹೇಶಣ್ಣಪೆಂಗಣ್ಣ°ಚೆನ್ನೈ ಬಾವ°ನೀರ್ಕಜೆ ಮಹೇಶಕಾವಿನಮೂಲೆ ಮಾಣಿಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ