ಹತ್ಯಾರೇ ಇಲ್ಲದ್ದೆ ಪಳಗುತ್ತ ದನುವಿನ ಹತ್ಯೆ ಮಾಡ್ಳಕ್ಕೋ..?

ನಮ್ಮ ಬೈಲಿಲಿ ದನುವಿನ ಶುದ್ದಿ ಮಾತಾಡುದು ಇದೇನೂ ಸುರು ಅಲ್ಲ, ದಾರಾಳ ಮಾತಾಡಿದ್ದು.
ದನುವಿನ ಶುದ್ದಿ ಮಾತಾಡಿ ಬೊಡಿವಲಿದ್ದೋ? – ಚೆ! ಇಲ್ಲೆಪ್ಪ.
ಇದಾ, ಇಂದೊಂದರಿ ಪುನಾ, ದನಗಳ ಶುದ್ದಿಯೇ..

ಬೈಲಿಲಿ ಹಟ್ಟಿ ಇಪ್ಪ ಮನೆಗೊ ಧಾರಾಳ ಇದ್ದು. ಇಲ್ಲದ್ದುದೇ ಕೆಲವಿದ್ದು.
ಮದಲಿಂಗೆಲ್ಲ, ಮನೆ ಮನೆಗಳಲ್ಲಿ – ಎಲ್ಲಾ ದಿಕ್ಕೆಯುದೇ ದನದ ಸಂಪತ್ತು ಇದ್ದೇ ಇಕ್ಕು.
ಮನೆ ಕಟ್ಟುದು ಹೇಳಿರೆ ಹಟ್ಟಿಯುದೇ ಅದರೊಟ್ಟಿಂಗೆ ಕಟ್ಟುದು ಹೇಳಿಯೇ ಲೆಕ್ಕ. ಹಟ್ಟಿಯೂ ಮನೆ ಕಟ್ಟುತ್ತ ಲೆಕ್ಕಲ್ಲೇ ಬಂತು.
ಈಗಳೂ ಊರಿನವು, ಹಳ್ಳಿಯವು ಹೊಸ ಮನೆ ಒಕ್ಕಲಿನ ದಿನಾವೇ ಹಟ್ಟಿಯುದೇ ಒಕ್ಕಲು ಮಾಡಿಗೊಳ್ತವು.
ಎಂತಕೇ ಹೇಳಿರೆ – ಮನೆಯಷ್ಟೇ ಪ್ರಾಮುಖ್ಯ ಅಲ್ಲದೋ ಆ ಹಟ್ಟಿ, ಹಾಂಗೆ.
~

ಅನಾಗರಿಕತೆಯ ಕಾಲಲ್ಲೇ ದನಗೊ ಮನುಷ್ಯಂಗೆ ಹತ್ತರೆ ಆದ್ದಡ, ಮಾಷ್ಟ್ರುಮಾವ° ಹೇಳಿದವು!
ಕಾಡುಮನಿಷ° ಬೇಟೆ ಮಾಡಿ, ಸಿಕ್ಕಿದ ಪ್ರಾಣಿಗಳ ತಿಂದುಗೊಂಡು ಜೀವನ ಮಾಡಿದ್ದು – ಅಲ್ಲದೋ?
ಬೇಟೆಲಿ ದನಗಳೂ, ಎಮ್ಮೆಗಳೂ – ಎಲ್ಲ ಹಿಂಡು ಹಿಂಡು ಸಿಕ್ಕಿದವು. ಕೆಲವು ಬೇಟೆಗಳ ತಿಂದವು, ಮತ್ತೆ ಒಳುದ ಕಂಜಿಗಳ ಎಂತ ಮಾಡುದು?! – ಸಾಂಕಿದವು!
ಸಾಂಕಲೆ ಬೇರೆಂತೂ ಬೇಡ, ಬೇರೆ ಕಾಡುಪ್ರಾಣಿಗಳಿಂದ ರಕ್ಷಣೆ ಮಾಂತ್ರ ಸಾಕು – ಅಲ್ಲದೋ!
ಮುಂದೆ ಆ ಕಂಜಿಗೊ ದೊಡ್ಡ ಆದವು, ಯೆಜಮಾನನ ಒಟ್ಟಿಂಗೆ ತಿಳುವಳಿಕೆ ಬೆಳದತ್ತು! ಗಾಡಿ ಎಳವದೋ, ಹೂಡುದೋ – ಹೀಂಗಿರ್ತ ದೈಹಿಕ ಶ್ರಮಂಗಳ ಕೆಲಸಂಗಳಲ್ಲಿ ಸಹಭಾಗಿ ಅಪ್ಪಲೆ ಸುರು ಆತು!
ಬೇಟೆಮಾಡಿ ತಂದ ಪ್ರಾಣಿ ಆದರೂ, ಮತ್ತೆ ಮನೆಮಕ್ಕಳೇ ಆಗಿ ಹೋದವು ಈ ಕಂಜಿಗೊ!
ಅಲ್ಲಿ ಸುರು ಆದ ಬಂಧ ಮತ್ತೆ ಹಾಂಗೇ ಬೆಳಕ್ಕೊಂಡು ಹೋತು.
~

ನಾಗರಿಕತೆಯ ಆರಂಭ ಕಾಲಲ್ಲಿ ಇದೇ ಬಂಧ ಮುಂದರುದತ್ತು..

ಮೂವತ್ತಮೂರು ಕೋಟಿ ದೇವರುಗೊ - ದನದ ಮೈಮೇಲಾಣ ಕಲ್ಪನೆ!

ಸಿಂಧೂ ನದಿ ನಾಗರೀಕತೆಯ ಸಮೆಯಕ್ಕೆ ಅಪ್ಪಗ ಅಂತೂ ಮನುಶ್ಯನ ಸಂಸ್ಕೃತಿಯ ಭಾಗ ಆಗಿ ಬಿಟ್ಟಿತ್ತಿದ್ದಡ. ಅಂಬಗಾಣ ಮನುಷ್ಯರ ಎಲ್ಲಾ ಅಗತ್ಯತೆಗೂಕ್ಕೂ ದನಗಳ ಉಪಯೋಗುಸಿಗೊಂಡು ಇತ್ತಿದ್ದವಡ!
ಹಾಲಿಂಗೋ, ಗೊಬ್ಬರಕ್ಕೋ, ಸಗಣಕ್ಕೋ, ಗೋಮೂತ್ರಕ್ಕೋ, ಹೂಡುದೋ, ಗಾಡಿ ಎಳವಲೋ –
ಹೀಂಗೇ ನಾಗರೀಕ ಮನುಷ್ಯರ ಅಗತ್ಯದ ಕೆಲಸಂಗೊ ಹೆಚ್ಚಿಂದಕ್ಕುದೇ. ದನುವಿಂಗೂ ಅದು ಅಭ್ಯಾಸ ಆಗಿತ್ತು. ಡೋಲು, ನಗಾರಿ ಮಾಡ್ಳೆ ಸತ್ತ ಹಶುಗಳ ಚರ್ಮವೇ ಬೇಕು!
ಅಂಬಗಾಣ ಜೀವನ ಶೈಲಿಯ ಕೆಲವು ಕಲ್ಲಿನ ಮೇಗೆ ಕೆತ್ತಿ ಮಡಗಿದ್ದವಡ -ಅಲ್ಯಾಣ ಚಿತ್ರಂಗೊ ನೋಡಿರೆ ಅಂಬಗಾಣ ಜೀವನ ಸರೀ ಅರ್ತ ಆವುತ್ತಡ – ಅದರ್ಲಿ ದನಗಳ ಚಿತ್ರವುದೇ ಇದ್ದಡ.
ಪಶುಪತಿ ಹೇಳಿಗೊಂಡು – ಶಿವನ ಆಕೃತಿಲಿ ನಂದಿ(ಹೋರಿ)ಯ ಕೆತ್ತನೆಗೊ ಕಂಡು ಬಪ್ಪದು ಗೋವು ಅಂಬಗಳೇ ಅವಕ್ಕೆ ದೇವರು ಆಗಿತ್ತು ಹೇಳುದರ ತೋರುಸುತ್ತಡ!
~

ವೇದಕಾಲಲ್ಲಿ ಅಂತೂ ಈ ದನಗಳ – ಹೋರಿಗಳ ಪ್ರಾಮುಖ್ಯತೆ ಸಿಕ್ಕಾಪಟ್ಟೆ ಜಾಸ್ತಿ ಆಗಿತ್ತಡ – ಮಾಷ್ಟ್ರುಮಾವ° ಒಂದರಿ ಎಲೆತುಪ್ಪಿಕ್ಕಿ ವಿವರುಸುಲೆ ಸುರುಮಾಡಿದವು!
ಋಷಿಮುನಿಗೊಕ್ಕೆ ದನಗೊ ಬೇಕೇ ಬೇಕು – ಅವರ ಎಲ್ಲಾ ಕ್ರಿಯಕ್ಕೆ!
ಯಜ್ಞ ಯಾಗಾದಿಗೊಕ್ಕೆ ಆಹುತಿಗೆ ದನಗಳ ತುಪ್ಪವೇ ಆಗೆಡದೋ, ದೇವರಿಂಗೆ ನೇವೇದ್ಯಕ್ಕೆ ಹಾಲು, ಶುದ್ಧಮಾಡ್ಳೆ ಗೋಮೂತ್ರ- ಗೋಮಯ, ಎಲ್ಲವುದೇ ಗೋಜನ್ಯ..!
ರಾಮಾಯಣ, ಮಹಾಭಾರತಲ್ಲಿದೇ ಗೋವಿನ ಬಗೆಗೆ ತುಂಬ ಹೇಳ್ತದು ಕಂಡುಬತ್ತಡ!
ಪಾಂಡವರು ಎಲ್ಲಿದ್ದವು ಹೇಳಿ ತಿಳಿವಲೆ ಉತ್ತರನ ರಾಜ್ಯಂದ ಗೋವುಗಳ ಕದ್ದುಗೊಂಡು ಹೋದ್ದಡ. ಚಿನ್ನ ಕದ್ದರೂ ಮಾತಾಡದ್ದೆ ಕೂರುಗು, ಆದರೆ ದನುವಿನ ಕದ್ದರೆ ಎಂತವಂಗೂ ಪಿಸುರು ಬಂದು ಜಗಳಕ್ಕೆ ಬಕ್ಕು – ಹೇಳುದು ಅಂಬಗಾಣ ಸಾಮಾಜಿಕ ತಿಳುವಳಿಕೆ ಆಗಿತ್ತು.

ಅಷ್ಟಪ್ಪಗ ಒಂದು ಕುತೂಹಲದ ಶುದ್ದಿ ಗೊಂತಾತು ಒಪ್ಪಣ್ಣಂಗೆ:
ಋಷಿಗಳ ಆಶ್ರಮಲ್ಲಿ ಗೋವುಗಳ ಹಿಂಡು ಹಿಂಡುಗೊ ಇತ್ತಡ.
ಊರಿನ ಜೆನಂಗಳೂ ಆ ಆಶ್ರಮಲ್ಲಿ ಗೋವುಗಳ ತಂದು ಬಿಡುದಡ. ಮನೆಲೇ ಇದ್ದರೆ ಗೋವಿನ ರಕ್ಷಣೆ ಮಾಡ್ತ ವೆವಸ್ತೆ ಕಷ್ಟ ಹೇಳ್ತ ಲೆಕ್ಕಲ್ಲಿ!
ದನಗಳ ಕದ್ದುಗೊಂಡು ಹೋಪದು ಎಲ್ಲ ನೆಡಕ್ಕೊಂಡು ಇತ್ತು – ಮುಖ್ಯವಾದ ಸಂಪತ್ತು ಅಲ್ಲದೋ – ಹಾಂಗೆ!
ಋಷಿಗಳ ಆಶ್ರಮದ ರಕ್ಷಣೆಗೆ ಹೇಂಗೂ ರಾಜಸೈನ್ಯದ ವಿನಿಯೋಗ ಇತ್ತನ್ನೆ, ಹಾಂಗಾಗಿ ಅಲ್ಲಿ ಬಿಟ್ರೆ ಅತ್ಯಂತ ಸುರಕ್ಷಿತ!
ಯೇವದೋ ಒಂದು ಕಾಲಲ್ಲಿ – ಮುಖ್ಯವಾಗಿ ಏಳುಜೆನ ಋಷಿಗಳ ಆಶ್ರಮ ಇತ್ತಡ. ವಸಿಷ್ಠ, ವಿಶ್ವಾಮಿತ್ರ, ಆಂಗೀರಸ, ಜಮದಗ್ನಿ, ಗೌತಮ.. ಇತ್ಯಾದಿ.
ಇವರ ಆಶ್ರಮಲ್ಲಿ ಗೋವಿನ ಬಿಟ್ಟವು ಆಯಾ ಗೋತ್ರದವು ಹೇಳಿ ಬಂದದಡ ಮುಂದಕ್ಕೆ..!
(ಉದಾ: ವಸಿಷ್ಠ ಋಷಿಯ ಆಶ್ರಮಲ್ಲಿ ಗೋವುಗಳ ಬಿಟ್ಟುಗೊಂಡು ಇದ್ದವೆಲ್ಲರುದೇ ವಸಿಷ್ಠ ಗೋತ್ರದವು – ಇತ್ಯಾದಿ)
ಹೇಳಿದಾಂಗೆ, ನಿಂಗಳದ್ದು ಯೇವ ಗೋತ್ರ? ನಿಂಗಳ ಅಜ್ಜಂದ್ರು ಆ ಋಷಿಯ ಆಶ್ರಮಲ್ಲಿ ದನುವಿನ ಬಿಟ್ಟುಗೊಂಡು ಇತ್ತಿದ್ದವಡ!
~

ಇತಿಹಾಸಕಾಲಲ್ಲಿ ಈ ಬಂಧ ಇನ್ನೂ ಗಟ್ಟಿ ಆತಡ!
ನಮ್ಮ ಭಾರತದ ರಾಜರುಗೊಕ್ಕೆ ದನಗೊ ಅತ್ಯವಶ್ಯ. ಹೇಂಗೆ ಯುದ್ಧ ಸಮೆಯಲ್ಲಿ ಸೈನ್ಯ ಅಗತ್ಯವೋ – ಅದೇ ನಮುನೆ ಶಾಂತಿ ಸಮೆಯಲ್ಲಿ ಗೋವು ಅಗತ್ಯ.
ಬರೇ ಹಾಲು-ಮಸರಿಂಗೆ ಮಾಂತ್ರ ಅಲ್ಲದ್ದೆ, ಕೃಷಿ ಇತ್ಯಾದಿ ವಿಚಾರಂಗಳಲ್ಲಿ ನಮ್ಮೊಟ್ಟಿಂಗೇ ನೆಡಕ್ಕೊಂಡು ಬಂದು, ಯೆಜಮಾನಂಗೆ ಬೇಕಾದ ದೈಹಿಕ ಶ್ರಮ ಕೊಡ್ತ ಕಾರ್ಯ ಮಾಡಿತ್ತು ಗೋವು.
ಅಂಬಗ ಎಲ್ಲ ಒಂದು ರಾಜ್ಯದ ಸಂಪತ್ತು ಹೇಳಿರೆ ಗೋವು ಹೇಳಿ ಅರ್ಥ ಅಡ, ಮಾಷ್ಟ್ರುಮಾವ° ಕೆಲವು ಉದಾಹರಣೆ ಕೊಟ್ಟವು.
ಇಂತಿಷ್ಟು ಸಹಸ್ರ ಗೋವು ಇಪ್ಪ ಶ್ರೀಮಂತ ರಾಜ್ಯ – ಹೇಳಿ ಶಾಸನಂಗಳಲ್ಲಿ ಬರಗಡ!
~
ಈ ದನುವಿನ ಬಗ್ಗೆ ಇಷ್ಟು ಒರಿಶಾನುಒರಿಷಂದ ಬಂಧ ನೆಡಕ್ಕೊಂಡು ಬರೆಕ್ಕಾರೆ ಕಾರಣ ಎಂತರ?

ಬಾ ಬಾ ಕುಂಞಿ ಉಂಬೆ, ಪೋಕ್ರಿ ಪೋಕ್ರಿ ಪುಟ್ಟುಂಬೆ..!

ಬಾ ಬಾ ಕುಂಞಿ ಉಂಬೆ, ಪೋಕ್ರಿ ಪೋಕ್ರಿ ಪುಟ್ಟುಂಬೆ..!

ಬರೇ ಮನಿಷಂಗೆ ಸಕಾಯ ಮಾಡ್ತ ಪ್ರಾಣಿ ಹೇಳಿ ಮಾಂತ್ರ ಅಲ್ಲ. ಹಾಂಗೆ ನೋಡಿರೆ ಕುದುರೆ, ಕತ್ತೆಗೊ ಈ ದನುವಿಂದ ಎಷ್ಟೋ ಜಾಸ್ತಿ ಸಕಾಯ ಮಾಡ್ತವು.
ದನುವಿನ ಮೈಲಿ ದೇವರಿದ್ದವು – ಹೇಳಿ ನಮ್ಮೋರ ಭಾವನೆ ಆಗಿತ್ತು. ಅದುವೇ ಈ ಒರಿಷಾಂತರದ ಸಂಬಂಧಕ್ಕೆ ಕಾರಣ.

ಆಸ್ತಿಕ ಮನಿಷಂಗೆ ದೇವತಾರಾಧನೆ ನಿರಂತರ. ಎಲ್ಲಾ ದೇವತಾರಾಧನೆಗೂ ಈ ದನುವಿನ ತಂದುಗೊಂಡಿತ್ತಿದ್ದವು.
ಪ್ರತ್ಯಕ್ಷ ದೇವರ ಕಾಂಬಲೆಡಿತ್ತಿಲ್ಲೆ ಹೇಳ್ತ ಲೆಕ್ಕಲ್ಲಿ ಈ ದನುವಿಂಗೇ ಪೂಜೆ ಮಾಡ್ಳೆ ಸುರು ಮಾಡಿದವು.
ದನುವಿನ ಬಾಯಿಲಿ ಸರಸ್ವತೀ ಮಾತೆ, ಗೋಮೂತ್ರಲ್ಲಿ ಗಂಗಾಮಾತೆ, ಪಾದಂಗಳಲ್ಲಿ ಭೂಮಾತೆ, ಗೋಮಯಲ್ಲಿ ಲಕ್ಷ್ಮಿ, ಕೈಕಾಲಿಲಿ – ಮೈಲಿ ಎಲ್ಲ ಒಟ್ಟಾಗಿ ಮೂವತ್ತಮೂರು ಕೋಟಿ ದೇವತೆಗಳೂ ಆ ದನುವಿನ ಮೈಲಿ ಇದ್ದವು ಹೇಳ್ತ ಕಲ್ಪನೆ ನಮ್ಮ ಹೆರಿಯೋರಿಂಗೆ ಬಂದಿತ್ತು. ನಮ್ಮ ಒರೆಂಗೂ ಅದೇ ಮುಂದರುಕ್ಕೊಂಡು ಬಂತು.
~

ಹಾಂಗೇ ಮುಂದರುದತ್ತು – ನಮ್ಮ ಐದಾರು ತಲೆ ಹಿಂದೆ ಒರೆಂಗೂ…
.. ಹೇಳಿರೆ, ಸಾಮಾನ್ಯ ಶಂಬಜ್ಜನ ಅಜ್ಜನ ಕಾಲ ಒರೆಂಗೂ..!
ಅಷ್ಟಪ್ಪಗ ಸುರು ಆತಿದಾ – ಬ್ರಿಟೀಶಂಗಳ ಆಳ್ವಿಕೆ. ಅವಕ್ಕೆ ನಮ್ಮ ಭಾವನೆಗೊ ಎಂತೂ ಅರ್ತ ಆಗ. ಈ ಊರವೇ ಅಲ್ಲ.
ಸಂಸ್ಕೃತಿ ಅರಡಿಯೆಕಾರೆ ಊರು ಅರಡಿಯೇಕು, ದೇಶ ಅರಡಿಯೇಕು. ಅವು ಪೈಸ ಮಾಂತ್ರ ಅರಡಿಗಾದೋರು – ಹಾಂಗಾಗಿ ನಮ್ಮ ಯೇವದೇ ಭಾವನೆಗಳ ಅರ್ತ ಮಾಡಿಗೊಂಡಿದವಿಲ್ಲೆ.
ಅವರ ಊರಿಲಿದೇ ದನಗೊ ಇರ್ತವಡ, ಆದರೆ ಆ ಜರ್ಸಿ ನಮುನೆದು.
ಕಂಜಿ ಹಾಕಿಪ್ಪಗ ಹಾಲು ಕೊಡ್ತು, ಸಮಾ ಸಾಂಕುತ್ತವು. ಹಾಲು ಕೊಡ್ತ ಸಮೆಯ ಕಳುದ ಕೂಡ್ಳೆ ಇನ್ನೂ ಸಾಂಕುತ್ತವು, ಪಾಪ – ಒಳ್ಳೆತ ತೋರ ಆವುತ್ತು, ಒಂದು ದಿನ ಅದರ ಕಡುದು ತಿಂದವು.

ಮಾಣಿಯ ಪ್ರೀತಿಯ ಎದುರು ಉಂಬೆಯ ಶಕ್ತಿ ಎಂತದೂ ಅಲ್ಲ!

ಮಾಣಿಯ ಪ್ರೀತಿಯ ಎದುರು ಉಂಬೆಯ ಶಕ್ತಿ ಎಂತದೂ ಅಲ್ಲ!

ಮುಗುತ್ತು ಆ ದನುವಿನ ಸಂಬಂಧ. ಮತ್ತೆ ಇನ್ನೊಂದರ ಸಾಂಕಿತ್ತು..!
ಅವು ದನುವಿನ ಸಾಂಕುದು ಹಾಲು, ಮಾಂಸ – ಎರಡೇ ಅಂಶಕ್ಕೆ. ಯೇವದೇ ಭಾವನೆಗೆ ಅಲ್ಲಡ!
~

ನಮ್ಮೋರಲ್ಲಿ, ದನ ಸಣ್ಣ ಕಂಜಿಆಗಿಪ್ಪಗಳೇ ಪೋಚಕಾನ ಸುರು ಆವುತ್ತು.
ಹಳೇ ಕ್ರಮದ ಮನೆಲಿ ಈಗಳೂ ಅದೇ ನಮುನೆ ಮುಂದುವರಿತ್ತು!
ಹುಟ್ಟಿದ ದಿನಂಗಳಲ್ಲಿ, ಆ ಕೈ-ಕಂಜಿಯ ಕಟ್ಟುದೇ ಮನೆ ಒಳದಿಕೆ. ಹಟ್ಟಿಲಿ ಅದರ ಅಬ್ಬೆಹಾಲು ಕುಡುದ ಮತ್ತೆ, ಸೀದ ಬಾಬೆಯ ಎತ್ತಿದ ಹಾಂಗೆ ಮುದ್ದಾಗಿ ಎತ್ತಿಗೊಂಡು ಬಂದು, ಮನೆ ಜೆಗಿಲಿಲಿ ಬಿಡುದು. ಬಾಯಿಲಿ ಹಾಲಿನ ನೊರೆ ಅರುಕ್ಕೊಂಡು ಉಂಬೇ-ಉಂಬೇ ಹೇಳಿ ಮನೆ ಒಳ ಪೆರ್ಚಿಲಿ ಓಡುದೇ ಒಂದು ಗಮ್ಮತ್ತು!
ಆ ಕೋಣೆಲಿ ಕೂದ ಎಲ್ಲೊರನ್ನುದೇ ಮೂಸಿ ಮೂಸಿ ಗುರ್ತ ಮಾಡುವ ಒಯಿವಾಟು ಸುರು. ಅದರಷ್ಟಕೇ ಇಡೀ ಮನೆ ಒಳ ತಿರುಗುದೂ ಇದ್ದು.
ದೇವರೊಳ ಪೂಜೆ ಮಾಡ್ತ ಬಟ್ಟಮಾವನ ಮಾತಾಡುಸಿ, ಅಲ್ಲಿಂದ ಅಡಿಗೆ ಕೋಣಗೆ ಹೋಗಿ, ಅಲ್ಲಿ ಎಂತೆಲ್ಲ ವೆವಸ್ತೆ ಇದ್ದು, ಎಲ್ಲೆಲ್ಲ ಇದ್ದು ಹೇಳಿ ನೋಡಿಗೊಂಡು, ಮತ್ತೆ ಹೆರಾಣ ಜೆಗಿಲಿಲಿ ಆರೆಲ್ಲ ಇದ್ದವು ಹೇಳಿ ಮಾತಾಡುಸಿಗೊಂಡು – ಇಡೀ ಮನೆ ಆ ಕಂಜಿದೇ!
ಎಲ್ಯಾರು ಗೋಮೂತ್ರ ಹೊಯಿದರೂ ಆರೂ ಬಯ್ಯವು, ಕೊಂಗಾಟಲ್ಲಿ ಪರಂಚಿಗೊಂಡು ಉದ್ದುಗು, ಅಷ್ಟೇ!
ತಿರುಗಿ ತಿರುಗಿ ಬಚ್ಚಿ ಅಪ್ಪಗ ಆರಿಂಗಾರು ಒಬ್ಬಂಗೆ ಅಂಟಿಗೊಂಡು ಮನುಗ್ಗು. ಮತ್ತೆ ಅದರ ಎತ್ತಿ ಆ ಗೋಣಿ ಮೇಲೆ ಮನುಶುದು – ಕೆಲವು ಸರ್ತಿ.
ಮನೆ ಒಳವೇ ತಿರುಗಿ, ಬೆಳದರೆ ಅದು ಮನೆಮಗಳೇ ಆತಿಲ್ಲೆಯೋ – ಹಾಂಗಾಗಿ ಮನೆಮಕ್ಕೊಗೆ  ಮಡಗುತ್ತ ಹೆಸರನ್ನೇ ಮಡಗ್ಗು – ಗಂಗೆಯೋ, ತುಂಗೆಯೋ, ದುರ್ಗೆಯೋ, ಶಿವನೋ, ಹರಿಯೋ – ಹೀಂಗೆಂತಾರು..
ಇದು ತಲೆತಲಾಂತರಂದ ಬಂದ ಕ್ರಮ ಆದ ಕಾರಣ, ಕಂಜಿಗೆ ಗೊಂತೇ ಇಲ್ಲದ್ದೆ ಮನುಷ್ಯರ ಗುರ್ತ ಆಗಿರ್ತು. ಆ ಮನೆಯೋರ ಪ್ರತ್ಯೇಕ ಪ್ರತ್ಯೇಕ ಗುರ್ತ ಮಾಡಿಗೊಂಬದೊಂದೇ ಬಾಕಿ!
ಪ್ರತಿಯೊಬ್ಬನೂ ಆ ಕಂಜಿಯ ಮೈಯ ಮುಟ್ಟಿ ಮುಟ್ಟಿ, ಕೊಂಡಾಟ ಮಾಡಿ – ಜನಂಗೊ ಹೇಂಗೆ ಹೇಳ್ತದರ ಸರಿಯಾಗಿ ಅರ್ತಮಾಡಿಗೊಂಡಿರ್ತು.
ಮಣ್ಣುತಿಂಬದೋ -ಎಂತಾರು ಬಿಂಗಿ ಮಾಡಿರೆ ಕೊಂಗಾಟಲ್ಲಿ ಬೈಕ್ಕೊಂಡು – ಬಾಯಿ ಒಳಂಗೆ ಕೈ ಹಾಕಿ ಆ ಮಣ್ಣಿನ ತೆಗಗು.
ಕುಂಡಗೆರಡು ಕೊಡುಗು, ಮೆಲ್ಲಂಗೆ!!
~

ಮುಂದೆ ದೊಡ್ಡ ಆದ ಹಾಂಗೆ, ಅದರ ಹಟ್ಟಿಲೇ ಕಟ್ಟುದು, ಕಂಜಿಗಳ ಒಟ್ಟಿಂಗೆ.

ದನ ಕೊಲ್ಲುತ್ತ ಮಿಶನು - ಪಾಪ, ಅದರ ಕಣ್ಣಿಲಿಪ್ಪ ಗಾಬರಿ ನೋಡಿ ನಿಂಗೊ!

ದನ ಕೊಲ್ಲುತ್ತ ಮಿಶನು - ಪಾಪ, ಅದರ ಕಣ್ಣಿಲಿಪ್ಪ ಗಾಬರಿ ನೋಡಿ ನಿಂಗೊ!

ಅಷ್ಟಪ್ಪಗಳೇ ಅದಕ್ಕೆ ಆ ಮನೆಯೋರ ಗುರ್ತ ಆಗಿರ್ತು. ಮನೆಯೋರುದೇ ಹಾಂಗೆ, ಅಲ್ಲೇ ಹೋಪಗ ಅದರ ಕೊರಳು ಒಂದರಿ ಉದ್ದಿ, ಕೊಂಗಾಟ ಮಾಡಿ ಮುಂದೆ ಹೋವುತ್ತವು. ಹಾಂಗಾಗಿ ಮನುಷರ ಕಂಡ್ರೆ ಕೊರಳು ಆಡುಸಿ ಪೋಕ್ರಿ ಮಾಡುಗು. ಎಲ್ಲೊರುದೇ ಗುರ್ತದವೇ ಇದಾ..
ಮತ್ತುದೇ ರಜದೊಡ್ಡ ಆದ ಮೇಲೆ, ‘ತಿಂಬಲೆ ಎಂತಾರು ತಾ… ತಾ…’ ಹೇಳಿ ಮೋರೆ ಆಡುಸಿ ಹೇಳುದು ನವಗೆ ಅರ್ತ ಅಕ್ಕು.
ಮನೆಯೋರೂ ಅಷ್ಟೇ – ಜೋರು ಉಪದ್ರ ಮಾಡಿರೆ ಒಂದರಿ ಬೈಗು. ಕೆಮಿ ಮಡುಸಿಗೊಂಡು ಬೈಗಳು ತಿಂಗು ಈ ಕಂಜಿಗೊ..!
ಅವಕ್ಕುದೇ ನಮ್ಮ ಭಾಷೆ ಅರ್ತ ಆವುತ್ತೋ – ಹೇಳುವಷ್ಟೂ ಆಶ್ಚರ್ಯ ಆವುತ್ತು ಕೆಲವು ಸರ್ತಿ.!
ಇನ್ನೂ ರಜ ದೊಡ್ಡ ಆದರೆ ನಮ್ಮ ಕೆಲವೆಲ್ಲ ಶಬ್ದಂಗೊ ಅರ್ತ ಮಾಡಿಗೊಂಗು.
’ಬಾ..’ , ’ಇದಾ ಹಿಂಡಿ..’, ’ಕೂಡೊ..’, ’ಹೋಗಿಲ್ಲಿಂದ..’ – ಇತ್ಯಾದಿ ಆಜ್ಞೆಗಳ ಸರಿಯಾಗಿ ಗುರುತುಸಿ, ಬೇಕಾದ ಹಾಂಗೆ ನೆಡಕ್ಕೊಂಗು!

ಹೋರಿಗೊ ಆದರೆ ಹೂಡ್ಳೋ(ಹೂಟೆಗೋ), ಗಾಡಿ ಎಳವದೋ – ಹೀಂಗೆ ದೈಹಿಕ ಶ್ರಮದ ಕೆಲಸಂಗೊಕ್ಕೆ ಸೇರುಗು.
ಅಲ್ಲಿಗೆ ವಿಶೇಷವಾದ ಕೆಲವು ಆಜ್ಞೆಗಳನ್ನುದೇ ಮನನ ಮಾಡುಗು. ತಿರುಗುದು, ಜೋರು ಹೋಪದು, ನಿಂಬದು – ಹೀಂಗೆಂತಾರು!
ದನಗೊ ಹಟ್ಟಿಮಟ್ಟಿಂಗೇ ಇದ್ದುಗೊಂಡು ಚೆಂದಲ್ಲಿ ಹಟ್ಟಿ ಬೆಳಗುಸುಗು!
~

ನೋಡಿ ನಿಂಗೊ, ಒಂದು ದನುವಿನ ಪಳಗುಸುಲೆ ಎಂತದೂ ಹತಿಯಾರು ಬೇಕಾಯಿದಿಲ್ಲೆ.
ಬರೇ ಬಾಯಿ ಮಾತು, ಕೈಮಾತು – ಇಷ್ಟೇ!
ಎಷ್ಟು ದೊಡ್ಡ ತ್ರಾಣಿ ಹೋರಿ ಆದರೂ ಯೆಜಮಾನ ಜೋರಿಲಿ ಒಂದು ಬೈದರೆ ಸುಮ್ಮನೆ ನಿಂಗು – ಅದರ ಬಾಲ್ಯದ ನೆಂಪಿಲಿ!
ಎಂತಾ ಪಿಸುಂಟು ದನ, ಕೂಡುಲೇ ಬಾರದ್ರೂ, ‘ಒಂದು ಹಿಂಡಿ ಕೊಡ್ತೆ ಬಾ..’, ಹೇಳಿರೆ ಸಮದಾನಲ್ಲಿ ಬಂದು ಉರುಳಿಂಗೆ ತಲೆ ಒಡ್ಡುಗು!
ಹಿಂಡಿಯ ಆಸಗೆ ಅಲ್ಲ, ಬದಲಾಗಿ ಯಜಮಾನನ ಮೇಲಾಣ ನಂಬಿಕೆಗಾಗಿ!
ದನಗೊಕ್ಕೆ ಮನುಷ್ಯರು ಒಟ್ಟೀಂಗೆ ಬೇಕು, ಮನುಷ್ಯರಿಂಗೆ ದನ ಒಟ್ಟೀಂಗೆ ಬೇಕು! – ಇಬ್ರೂ ಹುಟ್ಟುವ ಮದಲೇ ಆ ಬಯಕೆ ಬಂದಿರ್ತು.
ಇಂದು ನಿನ್ನೇಣದ್ದಲ್ಲ, ಸಾವಿರಾರು ಒರಿಷ ಹಿಂದಾಣದ್ದಲ್ಲದೋ – ಈ ಬಂಧ!
~

ಬ್ರಿಟಿಷರು, ಅವರ ಊರಿಲಿ ದನುವಿನ ಹೇಂಗೆ ನೋಡ್ತವೋ – ಹೋದಲ್ಲೆಲ್ಲ ಹಾಂಗೇ ಕಾಂಬಲೆ ಸುರು ಮಾಡಿದವು!
ಭಾರತಕ್ಕೆ ಬಂದ ಮತ್ತೆ ಇಲ್ಯಾಣ ದನುವಿನ ಮೇಗೆಯೂ ಕಣ್ಣು ಹಾಕಿದವು.
ಯೇವರೀತಿ ಮಾಪ್ಳೆಗೊ ನಮ್ಮೋರ ಕೊಲೆ ಮಾಡಿದವೋ – ಅದೇ ರೀತಿ ಬ್ರಿಟಿಷರು ನಮ್ಮ ದನುವಿನ ಕೊಂದವು.
ಗೋಮಾಂಸ ತೆಯಾರು ಮಾಡಿ ಕಳುಸುತ್ತ ಕೈಗಾರಿಕೆಯೇ ಸುರು ಆತು. ಅವರೊಟ್ಟಿಂಗೆ ಕೆಲವು ಮಾಪುಳೆಗೊಕ್ಕೂ ಧೈರ್ಯ ಆತು!
(ಇದಲ್ಲದ್ರೆ ನಮ್ಮ ಊರಿಲಿ ಕೆಲವು ಮಾಪುಳೆಗೊ ತಿಂದುಗೊಂಡು ಇದ್ದಿದ್ದವು, ಅವ್ವೇ ಸಾಂಕಿದ ಹೋರಿಯೋ – ದನವೋ – ಸತ್ತಮೇಗೆ ಒಂದು ಬೆಂದಿ ಮಾಡುಗಡ, ಅದರ ಮೇಲೆ ಪ್ರೀತಿಲಿ. ಅಷ್ಟು ಮಾಂತ್ರ.)
ಆದರೆ ಈ ಇಂಗ್ಳೀಷರು ಸಾರೋದ್ಧಾರ ದನುವಿನ ತಿಂಬಲೆ ಬೇಕಾದ ವೆವಸ್ಥೆ ಮಾಡಿಗೊಂಡವು!
ಮಾಷ್ಟ್ರುಮಾವ° ಇದರ ಹೇಳುವಗ ಬೇಜಾರ ಆಗಿತ್ತು!
~

ಸ್ವಾತಂತ್ರ ಸಿಕ್ಕಿ ಅರುವತ್ತೊರಿಷ ಕಳಾತಲ್ಲದೋ – ಇಂದಿಂಗೂ ದನುವಿನ ಮಾಂಸದ ಕಾರ್ಖಾನೆಗೊ ಹಾಂಗೇ ಇದ್ದಡ.
ನಮ್ಮದೇ ಮನೆಗಳಲ್ಲಿ ಸಾಂಕುತ್ತ ಗೋವುಗೊ ಅಲ್ಲಿಗೆ ಹೋವುತ್ತಾ ಇದ್ದಡ!
ನಮ್ಮ ಊರೂರಿಂದ, ಊರಿಲಿಲ್ಲದ್ದ ಕ್ರೆಯ ಕೊಟ್ಟು ತೆಕ್ಕೊಳ್ತವು ದನುವಿನ. ಎಲ್ಲ ಒಟ್ಟು ಮಾಡಿ ಸಾಗುಸುತ್ತವು

3G - ಗೋವು - ಗುರುಗೊ - ಗಾಂಧಿ

ಗೋರಾಷ್ಟ್ರ - ಗಾಂಧಿ ಕಂಡ ಕನಸು, ಗುರುಗೊ ಮಾಡುಗು ನನಸು!

– ಹೇಂಗೆ? – ಬಂಡಾಡಿಅಜ್ಜಿ ಬರಣಿಒಳಂಗೆ ಉಪ್ಪಿನಕಾಯಿ ತುಂಬುಸಿದ ಹಾಂಗೆ!ಜಾಗೆ ಹಾಳಪ್ಪಲಾಗ ಇದಾ!
ನಮ್ಮ ಹಟ್ಟಿಗಳಲ್ಲಿ – ದನಗೊಕ್ಕೆ ಗಾಳಿ ಸಿಕ್ಕೆಕ್ಕು ಹೇಳಿ ನಾಲ್ಕಡಿ ಅಂತರ ಮಡಗುತ್ತವು, ಅಲ್ಲದೋ?! ವೇನಿನ ಒಳದಿಕೆ ಹತ್ತು ಜೆನ ಮನುಷರು ನಿಂಬಲೆಡಿವಲ್ಲಿ – ಇಪ್ಪತ್ತು ದನುವಿನ ಹಿಡಿಶುತ್ತವು.
ಒಂದರ ಹೊಟ್ಟೆ ಅಡಿಲಿ ಇನ್ನೊಂದರ ತಲೆ, ಒಂದರ ಕಣ್ಣಿನ ಒಳದಿಕೆ ಮತ್ತೊಂದರ ಕೈ – ಷೋ – ರುದ್ರ ಭೀಕರ!
ಹೋಗಿ ಅನ್-ಲೋಡು ಮಾಡುದುದೇ ಹಾಂಗೆ, ಕೊಂಬು, ಕೈ ಕಾಲು ಹಿಡುದು, ದರದರನೆ ಎಳಕ್ಕೊಂಡು..
– “ಬಾ ಮಗಳೇ, ಹಿಂಡಿಕೊಡ್ತೇ….” ಹೇಳಿ ಪ್ರೀತಿಲಿ ದಿನಿಗೆಳುವಗ ಎಷ್ಟು ಉಲ್ಲಾಸಲ್ಲಿ ಬತ್ತವು ಅವ್ವೇ ಆಗಿ?!

ಇಷ್ಟಾದರೂ, ಆ ಕ್ರೂರಿಗೊ ದನಗಳ ಸಾಯದ್ದ ಹಾಂಗೆ ನೋಡಿಗೊಳ್ತವು! ಎಂತಕೆ?! – ಎಲ್ಲ ಸತ್ತರೆ ಮರದಿನಕ್ಕೆ ಕೊಳೆತ್ತಿಲ್ಲೆಯೋ!!
ಒಂದೊಂದೇ ಆಗಿ ಅವು ಆದು ಹಾಕಿ, ಪೆಕೆಟು ಮಾಡುವನ್ನಾರ ಬೇರೆ ದನುವಿನ ಮುಟ್ಟವು. ಅದಕ್ಕೆ ಬೇಕಾಗಿ ಆ ದನುವಿನ ಜೀವ ಒಳುಶುದು!
ಮತ್ತೆ ಒಂದು ದನದ ಸರತಿ ಬಪ್ಪಗಳುದೇ ಹಾಂಗೇಡ, ಜೀವಂತ ದನುವಿನ ಮೈಗೆ ಬೆಶಿನೀರು ಸ್ಪ್ರಿಂಕ್ಲರು ಬಿಡುದು, ರಬಸಲ್ಲಿ.
ಮೈಲಿಪ್ಪ ರೋಮವ ಒಂದೊಂದಾಗಿ ಆರು ತೆಗವದು ಬೇಕೆ, ಇದಾದರೆ ಚರ್ಮ ಬೆಂದು ಒಂದೇ ಸರ್ತಿ ಏಳ್ತಲ್ಲದೋ?!
ನಿಂಗೊಗೊ ಒಂದು ರಜ ಕಿಚ್ಚುಮುಟ್ಟಿ ಗುಳ್ಳೆ ಬಂದರೆ ಎರಡು ದಿನ ಕಂಗಾಲಾವುತ್ತಿ, ಪಾಪ ಆ ಬಾಯಿ ಬಾರದ್ದ ದನಗೊ?!
ಕೊಲ್ಲುವಗಳೂ ಹಾಂಗೇ, ರಜ್ಜ ರಜ್ಜವೇ ಗಾಯ ಮಾಡಿ ನೆತ್ತರು ಬರುಸುದು. ದನುವಿನ ನೆತ್ತರುದೇ ಅಮೂಲ್ಯವೇ ಅಲ್ಲದೋ – ಒಂದೇ ಸರ್ತಿ ಬಂದು ಹಾಳಾಗಿ ಹೋದರೆ ತುಂಬುಸಲೆ ಎಡಿತ್ತಿಲ್ಲೆ ಇದಾ!!
ಎಡಿಗಾದಷ್ಟು ಉಪದ್ರ ಕೊಟ್ಟೇ ಕೊಲ್ಲುದು, ಒಂದೇ ಸರ್ತಿ ಜೀವ ತೆಗವಲಿಲ್ಲೆ.
ಹಟ್ಟಿಲಿ ಒಂದು ದನ ಸತ್ತರೆ ಆ ದಿನ ಮತ್ತೆ ಮನೆಲಿ ಎಂತದೂ ವಿಶೇಷದ್ದು ಮಾಡವು – ಒಂದು ನಮುನೆ ಸೂತಕದ ಹಾಂಗೆ!

ಗ್ರೇಶಿರೇ ರೋಮ ಕುತ್ತ ಕುತ್ತ ಆವುತ್ತಲ್ಲದೋ?
ಓ ಮೊನ್ನೆ ನೆಟ್ಟಾರಣ್ಣಂದೇ, ಮೋಂತಿಮಾರುಮಾವಂದೇ ಮುಜುಂಗರೆ ಶಾಲೆ ವಾರ್ಶಿಕೋತ್ಸವಲ್ಲಿ ಸಿಕ್ಕಿದವು.
ಶಾಲೆಜೆಗೆಲಿಲಿ ನಿಂದುಗೊಂಡು ಇದರನ್ನೇ ಮಾತಾಡಿಗೊಂಡು ಇತ್ತಿದ್ದದು ಕರೆಲಿ ಇತ್ತಿದ್ದ ಒಪ್ಪಣ್ಣಂಗೆ ಕೇಳಿತ್ತು.
ನೆಟ್ಟಾರಣ್ಣನತ್ರೆ ಸೀಡಿ ಇದ್ದಡ – ಇದರ ಕುರಿತಾಗಿ ಮಾಡಿದ್ದು! ಮೋಂತಿಮಾರುಮಾವ° ಅಂತೂ ಇದರ ಪ್ರತ್ಯಕ್ಷ ನೋಡಿದ್ದವಡ! ಹೇಳಿ ಬೇಜಾರುಮಾಡಿಗೊಂಡವು!!
ನೂಜಿದೊಡ್ಡಣ್ಣ ಎಡೆಡೆಲಿ ನಮ್ಮೋರಿಂಗೇ ಬೈಕ್ಕೊಂಡಿತ್ತಿದ್ದ° – ಇಂಗ್ಳೀಶರ ಬೈದು ಗುಣ ಇಲ್ಲೆ ಬಾವಾ! ನಾವು ಕೊಡುದೆಂತಕೇ! ನಮ್ಮದೇ ತಪ್ಪು – ಹೇಳ್ತ ನಮುನೆಲಿ.
“ಹಳೆಕಾಲದ ನಮ್ಮ ಜೀವನಪದ್ಧತಿಲ್ಲಿ ದನಕ್ಕೆ ಇದ್ದ ಸ್ಥಾನಮಾನ, ಬೆಲೆ, ಗೌರವಗಳ ಪುನಾ ನಾವು ಕಂಡುಗೊಂಡ್ರೆ ಖಂಡಿತಾ ಈ ಕಾರ್ಖಾನೆಗೊ ನಿಂಗು – ಹೇಳಿ ನೆಟ್ಟಾರಣ್ಣ ಹೇಳಿದವು!
ಸಾವಲಾದ ದನುವಿನ ಮಾಪಳೆಗೆ ಕೊಡುದಲ್ಲ, ಸಾವನ್ನಾರ ಸಾಂಕೆಕ್ಕು – ಅದು ಪುಣ್ಯಕಾರ್ಯ!
ಸಣ್ಣ ಇಪ್ಪಗ ಹಾಲುಕೊಟ್ಟ ಅಬ್ಬೆಯನ್ನೇ ಕೊಡ್ತವಡ, ಇನ್ನು ಜೀವಮಾನ ಇಡೀ ಹಾಲುಕೊಟ್ಟ ದನುವಿನ ಕೊಡವಾ – ಚೆ, ಈಗಾಣ ಸಂಸ್ಕಾರವೇ! – ಮೋಂತಿಮಾರು ಮಾವಂಗೆ ಪಿಸುರು ಬಪ್ಪದು ಕಮ್ಮಿ, ಬಂದರೆ ಇಳಿವದು ರಜ ನಿಧಾನ!

ಅಸಹಾಯಕ, ಅನಾಥ ದನುವಿನ ಸಾಂಕಲೆ ನಮ್ಮ ಮಠಲ್ಲಿ ಯೋಜನೆ ಸುರುಮಾಡಿದ್ದವಡ, ಅಂದೇ!
ಎಷ್ಟೋ ಜೆನ ಅವಕ್ಕೆ ಸಾಂಕಲೆಡಿಯದ್ದ ದನುವಿನ ಅಲ್ಲಿಗೆ ಕೊಟ್ಟೂ ಯೆತಾಶಕ್ತಿ ಕಾಣಿಕೆ ಕೊಟ್ಟು ಪುಣ್ಯಕಟ್ಟಿಗೊಳ್ತವಡ.
ಮೂರು ಕಾಸಿನ ಆಸಗೆ ಮಾಪುಳೆಗೆ ಕೊಡುದರ ಬದಲು ಇದು ಒಳ್ಳೆದು, ಅಲ್ಲದೋ?
~

ಒಂದು ಮಠ ಸುರು ಮಾಡಿರೆ ಭಾರತದ ಎಷ್ಟು ಶೇಕಡಾ ದನ ಒಳಿಗು? ಎಲ್ಲಿಯೋ ಒಂದು ರಜ್ಜ! ಅಂಬಗ ಎಂತ ಆಯೆಕ್ಕು ಇದಕ್ಕೆ?
ಎಲ್ಲಾ ಮಠಂಗಳೂ ದನುವಿನ ರಕ್ಷಣೆಗೆ ನಿಲ್ಲೆಕ್ಕು.ಎಲ್ಲಾ ದೇವಸ್ಥಾನಂಗಳಲ್ಲಿ ಗೋಶಾಲೆ ಕಟ್ಟುಸೆಕ್ಕು.ಗೋಹತ್ಯೆ ಹೇಳ್ತ ಒಂದು ಪೀಡೆಯ ತೊಲಗುಸೆಕ್ಕು.
ಗೋವಿನ ಮಹತ್ವ ಈ ದೇಶದ ಎಲ್ಲೊರಿಂಗೂ ಮುಟ್ಟುಲೆ – ಅದರ ’ರಾಷ್ಟ್ರಪ್ರಾಣಿ’ ಮಾಡೆಕ್ಕು – ಇವಿಷ್ಟು ಅತ್ಯಗತ್ಯದ ಕ್ರಮಂಗೊ!
ಇದೇ ಮೂಲವಾದ ಉದ್ದೇಶಂದ ದೇಶವ್ಯಾಪಿ ಆಂದೋಲನ ಆತಡ, ನಮ್ಮ ಗುರುಗಳ ನೇತೃತ್ವಲ್ಲಿ. ಅದುವೇ ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ!!!
ವಿಶ್ವ ಇಡೀಕ ಭಾರತದ ದನುವಿನ ಬಗೆಗೆ ಎಚ್ಚರ ಮೂಡುಸುಲೆ ನಮ್ಮ ಪೀಠಂದ ಪ್ರೇರೇಪಣೆಗೆ ಒಳಗಾದವು ಸಫಲ ಆಯಿದವಡ!
ಅದರ ಫಲ ಇಂದಿಂದಲೇ ಕಾಂಬಲೆ ಸುರು ಆವುತ್ತು – ಹೇಳಿ ಮೋಂತಿಮಾರುಮಾವನ ಹಾಂಗಿಪ್ಪವರ ಧೃಡ ವಿಶ್ವಾಸ!
~

ಗೋರ್ಮೆಂಟು ಇದಕ್ಕೆ ಎಂತ್ಸೂ ಸಹಕಾರ ಮಾಡ್ಳೆ ಎಡಿಯದೋ – ಅಜ್ಜಕಾನಬಾವ ಕೇಳಿದ.
ಮದಲಿಂಗೆ ಈ ದನಗಳ ಕೊಲ್ಲುದರ ವಿರುದ್ಧವಾಗಿ ಯೇವಯೇವ ದೇಶಲ್ಲಿ ಯೇವಯೇವ ಕಾನೂನು ಮಾಡಿದ್ದವು, ಅದು ಅವರ ದೇಶಕ್ಕೆ ಹೇಂಗೆ ಅನುಕೂಲ ಆತು – ಹೇಳ್ತದರ ಬಗ್ಗೆ ಮೋಂತಿಮಾರುಮಾವ ವಿವರುಸಿದವು. ಭಾರತಲ್ಲಿದೇ ಇತಿಹಾಸದ ರಾಜ್ಯಂಗಳಲ್ಲಿ ಗೋಹತ್ಯೆ ನಿಷೇಧ ಆದ ಬಗ್ಗೆ ವಿವರ ಕೊಟ್ಟವು. ಇದರೊಟ್ಟಿಂಗೆ ಒಂದು ಒಳ್ಳೆ ಸುದ್ದಿಯುದೇ ಹೇಳಿದವು!
ಅದೆಂತರ?

ಕರ್ನಾಟಕ ಸರಕಾರ “ಗೋಹತ್ಯೆ ನಿಶೇಧ” ಕಾನೂನಿನ ಮಾಡ್ತ ಏರ್ಪಾಡಡ.
ಓ ಮೊನ್ನೆ ಈ ಕೆಲಸ ಯೆಡಿಯೂರಪ್ಪ ಮಾಡಿತ್ತಡ – ಇನ್ನು ವಿಧಾನಸಭೆಲಿ ಒಂದರಿ ಎಲ್ಲೊರಿಂಗೂ ಸಮದಾನ ಆದರೆ ಮತ್ತೆ ಆ ಕಾನೂನು ಬಂತು ಹೇಳಿಯೇ ಲೆಕ್ಕ!
ಒಂದು ಸರಕಾರ ಆಗಿಯೊಂಡು, ಭಾರತದ ಪರಂಪರೆಯ ಚಿಂತನೆ ಇಪ್ಪ “ಗೋಹತ್ಯೆ ನಿಷೇಧ”ವ ಹೆರಡುಸುದುನಿಜವಾಗಿ ಅದ್ಭುತವೇ ಸರಿ.
ಈ ಕಾನೂನಿಂಗೆ ಕಾರಣ ಆದ ಯೆಡಿಯೂರಪ್ಪ, ಅದರಿಂದಲೂ ಮುಖ್ಯವಾಗಿ ಅಂತವಕ್ಕೆ ಆ ಚಿಂತನೆಗಳ ಕೊಟ್ಟ ನಮ್ಮ ಗುರುಗಳ ಹಾಂಗಿಪ್ಪ ನಿಜವಾದ ಗುರುಗೊಕ್ಕೂ ಕೋಟಿಕೋಟಿ ದನಗಳ ಪ್ರೀತಿಯ ಹಾರಯಿಕೆ ಇದ್ದೇ ಇದ್ದು!
~
ಇಷ್ಟೆಲ್ಲ ಮಾತಾಡಿ ಎಂಗೊ ಬೈಲಿಂಗೆ ಎತ್ತಿ ಪೇಪರು ಓದೊಗ ಒಂದು ಶುದ್ದಿ ಗೊಂತಾತು (ಇದಾ, ಈ ಸಂಕೊಲೆಲಿ ಇದ್ದು, ನೋಡಿ)  .
ಕರ್ನಾಟಕಲ್ಲಿ ಈ ಕಾನೂನು ಮಾಡ್ತದಕ್ಕೆ ಸಿಕ್ಕಾಪಟ್ಟೆ ವಿರೋಧ ಇದ್ದಡ.
ಬುದ್ಧಿ(ಲ್ಲದ್ದ)ಜೀವಿಗೊ, ಪ್ರಗತಿಪರ ಹೇಳ್ತ ಕುದ್ಕಂಗೊ, ರೈತರ ಶಾಲು ಹಾಯ್ಕೊಂಡ ನರಿಗೊ, ಅಲ್ಪ ಸಂಖ್ಯಾತರು ಹೇಳಿಗೊಂಬ ದೇಶದ್ರೋಹಿಗೊ – ಎಲ್ಲ ಸೇರಿಗೊಂಡು ಸರಕಾರದ ಮೇಗೆ ಬಯಂಕರ ಒತ್ತಡ ಹಾಕಿದವಡ.
ಸರಕಾರ ಅದಕ್ಕೆ ಬೇಕಾಗಿ ಆ ನಿರ್ಣಯವ ಹಿಂದೆತೆಕ್ಕೊಂಡು, ಕಾನೂನಿನ ಮಾರ್ಪಾಡು ಮಾಡಿ ಪುನಃ ಮಂಡುಸುವ ವಿಚಾರ ಮಾಡಿದ್ದಡ.

ಛೆ! ಒಳ್ಳೆ ಕೆಲಸ ಮಾಡ್ತರೆ ಎಂತೆಂತಾ ವಿಘ್ನಂಗೊ! ಅಲ್ಲದಾ?
ಆದಷ್ಟು ಬೇಗ ಈ ಕಾನೂನು ಬರಳಿ, ವಿರೋಧ ಮಾಡುವವಕ್ಕೆ ಒಳ್ಳೆಬುದ್ಧಿ ಬರಲಿ. ಜೀವಮಾನ ಪೂರ್ತ ನವಗೆ ಸಕಾಯ ಮಾಡಿಯೊಂಡು, ನಮ್ಮ ಸೇವೆ ಮಾಡಿಯೊಂಡು ಬಂಙಬಪ್ಪ ದನುವಿಂಗೆ ಮರಣಲ್ಲಾದರೂ ಸುಖ ಸಿಕ್ಕಲಿ ಹೇಳಿ ಒಪ್ಪಣ್ಣನ ಬೈಲಿನವರ ಆಶಯ..!

~
ದನುವಿನ ಕೊಲ್ಲುತ್ತ ಈ – ಗೋಹತ್ಯೆ ಹೇಳ್ತದು ನಿಜವಾಗಿಯೂ ನಮ್ಮಲ್ಲಿಂದ ಹೋಯೆಕ್ಕಾದ ವಿಚಾರವೇ.
ಎಂತದೂ ಹತಿಯಾರು(ಸಾಧನ) ಇಲ್ಲದ್ದೆ ಒಂದು ದನುವಿನ ಪಳಗುಸಿರ್ತು. ಸಣ್ಣ ಇಪ್ಪ ಲಾಗಾಯ್ತು – ಪ್ರೀತಿಲಿ ಜೆನಂಗಳ ಗುರ್ತ ಆಗಿರ್ತು.
ಆ ಗುರ್ತ ಆದ ಜೆನಂಗಳ ತನ್ನ ಜೀವಂದಲೂ ಹೆಚ್ಚು ನಂಬುತ್ತು. ಆ ನಂಬಿಕೆಯನ್ನೇ ನಾವು ಬಳಸಿಗೊಂಬದಲ್ಲದೋ?
ನಿತ್ಯವೂ ಎಳ್ಳಿಂಡಿ ಕೊಟ್ಟ ಕೈಲಿ “ಆ ಲೋರಿಗೆ ಹತ್ತು…” ಹೇಳಿ ನೂಕಿರೆ ಯೇವ ದನ ಹತ್ತದ್ದೆ ಇಕ್ಕು? ಪಾಪ! ಇದೆಂತಾ ಮೋಸಕ್ಕೆ ಕರಕ್ಕೊಂಡು ಹೋಪದು ಹೇಳಿ ಅವಕ್ಕೆ ಗೊಂತೇ ಆಗ!!
ಜೆನಂಗೊ ಹೀಂಗೆ ಮಾಡಿದ್ದವು ಹೇಳಿ ನೆಂಪಿದ್ದರೆ ಬಪ್ಪ ಜನ್ಮಲ್ಲಿ ಖಂಡಿತಾ ಮನುಷ್ಯರ ಹತ್ತರೆ ಬಿಟ್ಟೊಳ.
ಎಂತ ಹೇಳ್ತಿ?

ಒಂದೊಪ್ಪ: ನಮ್ಮ ದೇಶಲ್ಲಿರೆಕ್ಕಾರೆ ನಮ್ಮ ದೇಶದ ಪದ್ಧತಿಲೇ ಬದ್ಕೇಕು! ದನುವಿನ ತಿಂದೇ ಆಯೆಕ್ಕು ಹೇಳಿ ಆದರೆ ಇಂಗ್ಳೇಂಡಿಂಗೊ – ಅರೇಬಿಂಗೋ ಮಣ್ಣ ಹೋಗಿ ಹಾಳಾಗಲಿ! ಅಲ್ಲದೋ?

ಸೂ: ಈ ಶುದ್ದಿಗೆ ಸಂಬಂದ ಪಟ್ಟ ಪಟಂಗಳ ನೆಟ್ಟಾರಣ್ಣನತ್ರೆ ಕೇಳಿದೆ, ಕೆಲವೆಲ್ಲ ನೋಡೊಗ ‘ರುದ್ರ ಭೀಕರ’ ಹೇಳಿ ಅನುಸಿತ್ತು! ಹಾಂಗಾಗಿ ಕೆಲವೇ ಕೆಲವು ಬಯಂಕರದ್ದು ಮಾಂತ್ರ ಹಾಕಿದ್ದು ಇಲ್ಲಿ!

ಒಪ್ಪಣ್ಣ

   

You may also like...

8 Responses

 1. ಅಜ್ಜಕಾನ ರಾಮ says:

  ಇಂದಿನ ಸುದ್ದಿ.. ಒಪ್ಪ ಓದದ್ದೆ ಬರೆತ್ತಾ ಇಪ್ಪದು..

  ಉದಿಯಪ್ಪಗ ಟಿ.ವಿ.ಲಿ ಹೇಳಿಯೋಂಡಿತ್ತಿದ್ದವು ಬೆಂಗಳೂರಿನ ವಿಜ್ಞಾನಿಗೊ ಸಂಶೋಧನೆ ಮಾಡಿ ಗೋಮೂತ್ರ ಮಧುಮೇಹಕ್ಕೆ ಮದ್ದು ಹೇಳಿದ್ದವಡ..

  ನಮ್ಮ ಮಠಲ್ಲಿ ಮೊದಲೆ ಸಂಶೋಧನೆ ಮಾಡಿದ್ದರ ಆರು ಹೇಳ್ತವಿಲ್ಲೆ.. ಮಠದ ಗವ್ಯಚಿಕಿತ್ಸಾಲಯಂಗಳಲ್ಲಿ ಇದರ ೨, ೩ ವರ್ಶ ಹಿಂದೆಂದಲೆ ಮಧುಮೇಹಕ್ಕೆ ಮದ್ದಾಗಿ ಕೊಡ್ತಾ ಇದ್ದವು..

 2. ಒಪ್ಪಣ್ಣ.. ಸೂಪರ್ಬ…!! ರಜ ನಮ್ಮೋರೆಲ್ಲರೂ ಇದರ ಕಣ್ಣು ಬಿಟ್ಟು ಓದಿರೆ ಒಳ್ಳೆದಿತ್ತು..

  ಮೊನ್ನೆ ಆನು ೩ದಿನ ರಜೆಲಿ ಮನೆಗೆ ಹೋಗಿಪ್ಪಗ ಟಿವಿ ಲಿ ನೋಡಿದೆ.. ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣಲ್ಲಿ ಹರಿಜನ ಗಿರಿಜನ ವಿಧ್ಯಾರ್ಥಿಗ ದನದ ಮಾಂಸವ ಬೇಶಿ ಬೇಶಿ ತಿಂತಾ ಇತ್ತಿದ್ದವು.. ಅವರ ಆಹಾರವ ಕಿತ್ತುಗೊಂಡಾಂಗೆ ಆವ್ತಡ್ಡ, ಆಕಾನೂನಿಂದಾಗಿ!! ಎಂತ ನಾವೆಲ್ಲ ಬರಿ ತರಕಾರಿ ತಿಂದು ಬದುಕುತ್ತಾ ಇಲ್ಯಾ…?? ನವೆಗೆಲ್ಯಾರು ಆಹಾರ ಕಮ್ಮಿ ಆಯಿದ…?

  ಹಾಂಗೊಂದು ಪ್ರಾಣಿಗಳೇ ಆಯೆಕ್ಕು ಹೇಳಿಪ್ಪವಕ್ಕೆ.. ಹೇಂಗಾರು ಶೂಟ್ ಮಾಡಿ ಬೀದಿ ನಾಯಿಗಳ ಕೊಲ್ತವನ್ನೆ ಅದನ್ನೂ ಆಹಾರ ಮಾಡುವ ಕೆಲಸ ಮಾಡ್ಲಕ್ಕಲ್ದ!! ದನವೇ ಆಯೆಕ್ಕಾ…?? ಮುಸ್ಲಿಂ ಗ ಮಾತ್ರ ಮಾಡುದು ಗ್ರೇಶಿತ್ತಿದ್ದೆ.. ಹಿಂದುಗಳೇ ಹೀಗೆ ಮಾಡ್ರೆ…!! ಆ ಸೀನ್ ಎಲ್ಲ ಅಪ್ಪಗ ನಮ್ಮ ಭಜರಂಗ ದಳವು ರಜ್ಜಾದ್ರು ಜಾಗೃತರಾಯೆಕಿತ್ತು, ನಮ್ಮೋರುದೇ… ಆಯೆಕ್ಕಿತ್ತು ಅಲ್ಲದಾ..?? ಲಾರಿಲಿ ದನವ ತೆಕ್ಕೊಂಡು ಹೋಪಗ ಹಿಡಿದು ಹಾಕುತ್ತವಡ್ಡ. ಅದರ ಮಾಂಸದ ಅಡುಗೆ ಮಾಡಿದವಕ್ಕೆ ನಾಲ್ಕು ಜೆಪ್ಪೆಕ್ಕಿತ್ತು!!

  ದನಂಗಳನ್ನೂ ತಿನ್ನೆಕ್ಕೋಳಿ ಕಾಣತನ್ನೆ! ರಜ ಸಮಯ ಕಳುದರೆ ನಮ್ಮನ್ನೂ ಹರುದು ತಿಂಗು!! ಆ ಕಾನೂನು ತರ್ಸುಗು.. ಪೂರಾ ಮೀಸಲಾತಿ ಸಿಕ್ಕಿದ್ದನ್ನೆ!!

 3. ಗೋಪಾಲ್ ಬೊಳುಂಬು says:

  ವಿಷಯ ಕೇಳುವಗ ತುಂಬಾ ಬೇಜಾರು ಆವುತ್ತು. ಹಿಂದುಗೋ ಆದ ಎಲ್ಲ್ಲೋರು “ಗೋಹತ್ಯೆ ನಿಷೇಧ”ಕ್ಕೆ ಬೆಂಬಲ ಕೊಟ್ರೆ ಅಕ್ಕಷ್ಟೆ. ಎಂತಕ್ಕುದೆ ಈ ರಾಜಕೀಯದವಕ್ಕೆ ಎಲ್ಲೋರ ಓಟುದೆ ಬೇಕನ್ನೆ. ಅದೇ ತೊಂದ್ರೆ ಆದ್ದದು.

 4. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಗೋ ಹತ್ಯೆ- ಇದಕ್ಕೊಂತ ದೊಡ್ಡ ಅಪರಾಧ ಇಲ್ಲೆ. ಅಬ್ಬೆಯ ಹಾಲು, ಹುಟ್ಟಿ ರಜ ದೊಡ್ಡ ಅಪ್ಪ ವರೆಗೆ, ಆದರೆ ದನದ ಹಾಲು ನಾವು ಜೀವನ ಪರ್ಯಂತ ಕುಡಿತ್ತು. ಹುಟ್ಟಿನಿಂದ ಸಾವಿನ ವರೆಗೆ ನಾವು ದನದ ಆಶ್ರಯಲ್ಲಿ ಇರುತ್ತು. ನಮ್ಮ ಗುರುಗಳು ಹೇಳಿದ ಹಾಂಗೆ ನಮ್ಮ ಅಶ್ರಯಲ್ಲಿ ದನಗೊ ಇಪ್ಪದು ಅಲ್ಲ, ನಾವು ಅದರ ಅಶ್ರಯಲ್ಲಿ ಇಪ್ಪದು. ಅದಕ್ಕೆ ಮರ್ಯಾದೆಲಿ ಬದುಕ್ಕಲೆ ಬಿಡಿ ಮತ್ತೆ ನೆಮ್ಮದಿಂದ ಸಾವಲೆ ಬಿಡಿ- ಎಷ್ಟು ಸತ್ಯ ಅಲ್ಲದ. ಇತ್ತೀಚೆಗಾಣ ಸುದ್ದಿ ಎಂತ ಹೇಳಿದರೆ ಕರ್ಣಾಟಕಲ್ಲಿ ಗೋ ಹತ್ಯೆ ನಿಷೇಧ ಕಾಯಿದೆಯ ಹಿಂದೆ ತೆಕ್ಕೊಂಡದು. ಎಷ್ಟರವರೆಗೆ ನಮ್ಮ ಮಂತ್ರಿಗೊಕ್ಕೆ ಅಲ್ಪ ಸಂಖ್ಯಾತರು ಹೇಳಿಗೊಂಡು ಮುಸ್ಲಿಮರ ಓಲೈಸಿಗೊಂಡು ಇರ್ತವೋ ಅಷ್ಟು ಸಮಯ ಅವಕ್ಕೆ ನಿಷೇಧ ಮಾಡಲೆ ಎಡಿಯ. ಎಲ್ಲಾ ವೋಟಿಂಗಾಗಿ ಮತ್ತೆ ಹಿಡುದ ಕುರ್ಚಿಯ ಗಟ್ಟಿ ಮಾಡಲೆ ಬೇಕಾಗಿ. ಕುಮಾರ ಸ್ವಾಮಿ ಮುಖ್ಯ ಮಂತ್ರಿ ಆಗಿಪ್ಪಗ ನಮ್ಮ ಗುರುಗಳು ಅದಕ್ಕೆ ಒಂದು ಒಳ್ಳೆ ದನವ ಕೊಟ್ಟ ವಿಷಯ ನವಗೆಲ್ಲಾ ಗೊಂತಿಪ್ಪದೇ. ಅದೇ ಪಾರ್ಟಿಯವು ಇಂದು ಗೋ ಹತ್ಯೆ ನಿಷೇಧ ಕಾನೂನಿಂಗೆ ಅಡ್ಡಿ ಮಾಡುತ್ತವು ಹೇಳಿದರೆ, ರಾಜಕೀಯ ಎಷ್ಟು ಕೆಳ ಮಟ್ಟಕ್ಕೆ ಇಳುದ್ದು ಹೇಳಿ ಗೊಂತಾವುತ್ತು.
  ಲೇಖನಲ್ಲಿ ಇಪ್ಪ ಕೆಲವು ಪಟಂಗಳ ನೋಡಿದರೆ ಮೈ ಎಲ್ಲಾ ಉರಿತ್ತು. ಹಿಂದುಗೊ ಎಂತ ಆದರೂ ಸರಿ,ಹೇಂಗಿಪ್ಪ ದನ ಆದರೂ ಸರಿ, ಅದರ ಆರಿಂಗೂ ಮಾರುತ್ತಿಲ್ಲೆ ಹೇಳಿ ಧ್ರಢ ನಿರ್ಧಾರ ತೆಕ್ಕೊಳ್ಳೆಕ್ಕು. ಹಾಲು ಕೊಡದ್ದ ಕೂಡಾಲೇ ದನಗೊ ನಿಷ್ಪ್ರಯೋಜಕ ಹೇಳಿ ತಿಳ್ಕೊಂಬಲೆ ಆಗ. ದನದ ಸಗಣಿ, ಉಚ್ಚು ಇದಕ್ಕಿಂತ ಮಿಗಿಲಾದ ಸಾವಯವ ಗೊಬ್ಬರ ಎಲ್ಲಿ ಸಿಕ್ಕುಗು?

 5. hareesha says:

  touching article mahesha .

 6. ಎಂತ ಮಾಡು ದು ನಾವ್ ಒಳ್ಳೆ ಕಾಲ ಬಕ್ಕು …ದುರ್ಬುದ್ದಿಯವಕ್ಕೆ ಕಾಲವೆ ಸದ್ಬುದ್ದಿ ಕೊಡುಗು ಹೇಳಿ ಭಾವಿಸುವ……

 7. ಪೋಕಿರಿ ಮಾಣಿ says:

  ಪಟಲ್ಲಿಪ್ಪ ಪುಟ್ಟುಂಬೆ ಚೆಂದ ಇದ್ದು 🙂

 8. ಮುತ್ತಿನಂಥಾ ಮಾಣಿಯಿಂದ ಮುತ್ತಿನಂಥಾ ವಿಷಯಲ್ಲಿ ಮುತ್ತಿನಂಥಾ ಒಂದು ಲೇಖನ . . .

  ಆದರೆ ನಮ್ಮ ದೇಶದ ಮುತ್ತಿಗೆ ಬಂದ ಕುತ್ತು ನೋಡು ಮಾರಾಯಾ . . .

  ‘ ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ
  ………………………………………………………………
  ………………………………………………………………
  ಏನು ಸಾರ್ಥಕ ಮನೆಯ ಮಕ್ಕಳೆ ಮಲಗಿ ನಿದ್ರಿಸುತಿದ್ದರೆ . . . !

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *