ಹೋಕ್ವರುಕ್ಕು ಇಲ್ಲದ್ರೂ ಹೋಗಿಬಂದು ಮಾಡ್ತವು..!

August 6, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 53 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮೋರಲ್ಲಿ ಮದಲಿಂಗೇ ಹಾಂಗೆ, ಕೈಲಿ ರಜಾ ಪೈಸೆ ತುಂಬಿರೆ ಅದರ ಕಳವಲೆ ಎಂತಾರು ದಾರಿ ನೋಡುಗು.
ಒಂದೋ ಎಲ್ಲೊರನ್ನೂ ದಿನಿಗೆಳಿ ಒಂದು ಜೆಂಬ್ರ ತೆಗಗು, ಅಲ್ಲದ್ದರೆ ಆರನ್ನಾರು ದಿನಿಗೆಳಿ ಒಂದು ನಂಬ್ರ ತೆಗಗು.

ನಂಬ್ರ ಮಾಡುದು ಹೇಳಿರೆ ನಿಂಗೊಗೆ ಅರಡಿಯದೋ ಏನೋ-
ಏವದೇ ಕೇಸು ರಿಜಿಸ್ತ್ರಿ ಆಗಿ ಕೋರ್ಟಿಂಗೆ- ಎತ್ತಿರೆ ಇಂತಾ ಕೇಸಿಂಗೆ ಇಂತಾ ನಂಬ್ರ- ಹೇಳಿ ಬರಕ್ಕೊಂಗಿದಾ;
ಹಾಂಗೆ – ಕೋರ್ಟಿಲಿ ವಿಚಾರಣೆ ಆಗಿಯೊಂಡಿಪ್ಪ ಕೇಸಿಂಗೆ ನಂಬ್ರ ಹೇಳಿ ಹೆಸರು.
ಯೇವ ಕಾಲಕ್ಕೂ ಮುಗಿಯದ್ದ ನಂದಾದೀಪ ಅದೊಂದು.

ನಮ್ಮೋರಲ್ಲಿ ನಂಬ್ರಂಗೊ ಈಗೀಗ ರಜ ಕಮ್ಮಿ ಆದರೂ, ಮದಲಿಂಗೆ ಅದು ಧಾರಾಳ!
ಅಜ್ಜಂದ್ರು ಯೇವದೋ ಕೆಟ್ಟ ಗಳಿಗೆಲಿ ಸುರು ಮಾಡುದು – ಒಂದು ತಕರಾರು, ಅವರ ಮಕ್ಕಳಕಾಲಕ್ಕಪ್ಪಗ ಅದು ಹಳಸಿರ್ತು.  ಅವರ ಮಕ್ಕೊಗೆ ಪರಸ್ಪರ ಯಾವ ಮನಸ್ತಾಪವೂ ಇರ್ತಿಲ್ಲೆ.
ಆದರೂ ಅದನ್ನೇ ಮುಂದರುಶಿಗೊಂಡು ಹೋವುತ್ತವಿದಾ – ಅಪ್ಪನ ಮೇಗಾಣ ಭಯಭಕ್ತಿಯ ಮೇಲೆ..
ಅದುವೇ ಇಂದ್ರಾಣ ಶುದ್ದಿ.
~
ಇದು ಆಚಬೈಲಿನ ಶುದ್ದಿ, ನಮ್ಮ ಬೈಲಿಂದಲ್ಲ –
– ಅಲ್ಲಿ, ಮೇಗಾಣ ಮನೆಗೂ ಕೆಳಾಣ ಮನೆಗೂ ಹೋಕ್ವರ್ಕಿಲ್ಲೆ.
ಹೋಕುವರುಕ್ಕು ಇಲ್ಲೆ ಹೇಳಿರೆ ಮದಲಿಂಗೇ ಇಲ್ಲೆ – ಒಂದು ನೂರುನೂರೈವತ್ತು ಒರಿಶ ಮದಲಿಂಗೇ!
ಮೂವತ್ತೊರಿಷಕ್ಕೆ ಒಂದು ತಲೆಮಾರು ಲೆಕ್ಕ ಇದಾ – ಹಾಂಗೆ ಇದೊಂದು ಸಾಮಾನ್ಯ ಐದು ತಲೆಮಾರು ಹಿಂದಾಣ ಶುದ್ದಿ.
ಅಂಬಗಾಣ ಅಜ್ಜಂದ್ರ ಜಗಳ!!
ಆ ಕಾಲದ ಜವ್ವನಿಗರು ಕಡ್ಪ ಜಾಸ್ತಿ – ಏನಾರು ಆಗದ್ದೆ ಬಂದರೆ ಪಕ್ಕನೆ ಹೇಳಿಬಿಡುಗು, ಕಣಿಯಾರಕ್ಕೋ, ಧರ್ಮಸ್ಥಳಕ್ಕೋ ಮಣ್ಣ!

ಹ್ಮ್, ಧರ್ಮಸ್ಥಳಕ್ಕೆ ಹೇಳುದು ಹೇಳಿರೆ, ಯೇವದಾರು ಜಗಳ ಸುರು ಮಾಡಿರೆ ಅದರಲ್ಲಿ ಸರಿ ಆರದ್ದು ತಪ್ಪು ಆರದ್ದು ಹೇಳ್ತ ತೀರ್ಪು ಆ ಧರ್ಮಸ್ಥಳ ಮಂಜುನಾಥನೇ ಕೊಡಲಿ ಹೇಳಿ ನಂಬಿಗೊಂಬದು.
ಧರ್ಮಸ್ಥಳದವಂಗೆ ತೀರ್ಪಿನ ಬಿಟ್ಟಾಯಿದು, ಇನ್ನು ಅವ ತೀರ್ಪು ಕೊಡುವನ್ನಾರ ಪರಸ್ಪರ ಯೇವದೇ ವೆವಹಾರ ಮಾಡ್ಳಿಲ್ಲೆ!
ವೆವಹಾರ ಮಾಡುದೆಲ್ಲಿಗೆ, ಅಲ್ಲಿಂದ ಮತ್ತೆ ಮಾತುಕತೆಯೇ ಇಲ್ಲೆ!!
~

ಆಚಬೈಲಿನ ಆ ಮೇಗಾಣ ಮನೆ ಮಾಪಣ್ಣಜ್ಜನೂ, ಚುಬ್ಬಣ್ಣಜ್ಜನೂ ಇಬ್ರುದೇ ಕಾಸಾ ಅಣ್ಣತಮ್ಮಂದ್ರು. ಆದರೂ ಪರಸ್ಪರ ಅವು ಮಾತಾಡಿದ್ದು ಕೇವಲ ಸುರುವಾಣ ನಲುವತ್ತೊರಿಶ ಮಾಂತ್ರ!!
ಅಷ್ಟೊರಿಶಲ್ಲಿ ಅವು ಬೆಳದು ಅವಕ್ಕೆ ಮದುವೆ ಆಗಿ ಮಕ್ಕೊ ಆಗಿಯೂ ಆಯಿದು.
ಅವಕ್ಕೆ ನೆಡುಪ್ರಾಯ ಬಪ್ಪಗ ಅವರ ಅಪ್ಪ ತೀರಿಹೋಗಿ ಜಾಗೆ ಪಾಲುಮಾಡಿಗೊಂಡವು!

ಪಾಲುಮಾಡಿದವು, ಎಂತರ – ಜಾಗೆಯ ಮಾಂತ್ರ.
ಆದರೆ ಆ ಜಾಗೆಗೆ ಕೆರೆ ಒಂದೇ ಇದ್ದದಿದಾ – ಹಾಂಗೆ ಆ ಕೆರೆಯ ಪಾಲುಮಾಡ್ತದು ಹೇಂಗೆ – ಹಾಂಗಾಗಿ ನೀರಿನ ಹಂಚಿಗೊಂಡವು.

ಅಂಬಗ ಗೆದ್ದೆ ಇದಾ – ಸಣ್ಣ ಹಿಡ್ವಳಿ, ನೀರು ಬೇಕು ಧಾರಾಳ.
ಹಾಂಗೆ ಅಣ್ಣ- ತಮ್ಮ ಇಬ್ರುದೇ ಗೆದ್ದೆ ಬಿತ್ತಲೆ ಸುರುಮಾಡಿದವು. ಸೆಸಿ ಬೆಳತ್ತು, ಮೇಗೆ ಬಂತು.
ಜೊಟ್ಟೆ(ಏತ) ಮೊಗಚ್ಚಿ ಗೆದ್ದಗೆ ಬಿಡುದು. ಒಬ್ಬೊಬ್ಬಂದು ಒಂದೊಂದು ಜೊಟ್ಟೆ. ಕೆರೆ ಒಂದು, ಪಾಲೆರಡು.
ಒಂದೇ ಕೆರೆಂದ ನೀರಿನ ಹಂಚಿಗೊಂಬದು ಬಾರಿ ಕಷ್ಟ ಇದಾ – ಆಚವಂಗೆ ಹೆಚ್ಚು ಸಿಕ್ಕಿತ್ತು, ಎನಗೆ ಕಮ್ಮಿ ಸಿಕ್ಕಿತ್ತು ಹೇಳಿ ಒಂದು ಸಣ್ಣ ಸಂಶಯ ಇಬ್ರಿಂಗೂ ಸುರು ಆತು!

ಇಬ್ರುದೇ ಕಷ್ಟಪಟ್ಟು ಗೆದ್ದೆ ಬೆಳೆಶಿ, ಬತ್ತ ಮಾಡಿಯೇ ಹೊಟ್ಟೆ ತುಂಬೆಕ್ಕಷ್ಟೆ –  ಹಾಂಗಾಗಿ ಇಬ್ರಿಂಗೂ ಅದು ಒಂದೊರಿಶದ ಜೀವನದ ಪ್ರಶ್ಣೆ –
ಗೆದ್ದಗೆ ನೀರಿಲ್ಲದ್ರೆ ಆ ಒರಿಶ ಜೀವನವೇ ಇಲ್ಲೆ!

ಮಾಪಣ್ಣಜ್ಜ ಅನ್ಯಾಯ ಮಾಡಿದವು ಹೇಳಿ ಚುಬ್ಬಣ್ಣಜ್ಜನೂ, ಚುಬ್ಬಣ್ಣಜ್ಜ ಬೆನ್ನಿಂಗೆ ಪೀಶಕತ್ತಿ ಇಳುಸಿದವು ಹೇಳಿ ಮಾಪಣ್ಣಜ್ಜನೂ ನಂಬಿಗೊಂಡವು.
ಸಂಶಯ ಜಗಳಕ್ಕೆ ತಿರುಗಿ, ಕ್ರಮೇಣ ಬಾಯಿಮಾತು ಜೋರು ಜೋರಾಗಿ ಒಂದು ದೊಡ್ಡ ತಕರಾರೇ ಆತು ಅದು.
ಇಬ್ರುದೇ ಒಂದು ನಂಬ್ರ ತೆಗದೇ ತೆಗದವು. ನಂಬ್ರ ತೆಗದೇ ತೆಗಗು ಹೇಳಿ ನೆರೆಕರೆಯೋರುದೇ ಅಂದಾಜಿ ಮಾಡಿತ್ತಿದ್ದವು!

ಎರಡು ಮನೆಗೂ ಹೋಕ್ವರ್ಕು ಇಲ್ಲದ್ದೆ ಆತು.
ಕೋರ್ಟಿಲಿ ಕೇಸು ನಡವಲೆ ಸುರು ಆತು. ಒಂದೇ ಬೈಲಿಂದ, ಒಂದೇ ದಾರಿಲಿ, ಒಂದೇ ಹೊತ್ತಿಂಗೆ ಇಬ್ರು ಅಜ್ಜಂದ್ರೂ ಬೇರೆ ಬೇರೆ ಆಗಿ ವಿಚಾರಣೆಗೆ ಹೋಯ್ಕೊಂಡು ಇತ್ತಿದ್ದವು – ಸಾವಲ್ಲಿಯೊರೇಂಗೆ.

ಅವರ ಅಹಂ ರಜ ಏರಿದ್ದು ಅವರ ಕೆಲಸದೋರು ಕುತ್ತಿಕೊಟ್ಟದರಿಂದ ಅಡ – ಅಂಬಗಾಣ ಕಾಲದವು ಮಾತಾಡಿಗೊಂಬಲೆ ಬೆಶಿಬೆಶಿ ಶುದ್ದಿ ಅಡ.
ಕೆಲವು ಜನ ಕೆಲಸದೋರು ಹಾಂಗೇ ಅಡ – ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಶುದ್ದಿ ಹೇಳುದು.
ಅಲ್ಲಿಯಾಣ ಶುದ್ದಿ ಇಲ್ಲಿ ಹೇಳಿತ್ತುಕಂಡ್ರೆ ಇಲ್ಲಿ ಎಂತಾರು ಸಿಕ್ಕುಗು. ಹಾಂಗೆಯೇ ಅಲ್ಲಿದೇ – ಹೇಳುದು ಹೇಳಿರೆ ಅದಕ್ಕೆ ರಜ ಸೇರುಸಿಯೇ ಹೇಳುದು – ಚಾಡಿ ಹೇಳ್ತ ನಮುನೆಲಿ.
ಒಟ್ಟಿಲಿ ಅವರ ಲಾಬ ಅವು ನೋಡಿಗೊಂಗು. ಆಚೀಚೊಡೆಲಿ ಕಿಚ್ಚು ಹೊತ್ತಿ ಉರುದರೆ ಅವಕ್ಕೆಂತ. ಅದು ನಂದದ್ದ ಹಾಂಗೆ ತುಪ್ಪ ಸುರುಕ್ಕೊಂಡಿದ್ದರೆ ಅವರ ಜೀವನ ನೆಮ್ಮದಿಲಿ ನಡೆಗು.
~
ಕುತ್ತಿಕೊಟ್ಟದರ ಕೇಳ್ತದು ಹಿತ್ತಾಳೆಕೆಮಿ ಅಡ! ಕೋರ್ಟಿಲಿ ನಂಬ್ರ ನಡೆತ್ತಾ ಇದ್ದರೂ ಸಾಲ – ಇಷ್ಟೆಲ್ಲ ಅನ್ಯಾಯ ಮಾಡಿದವಂಗೆ ದೇವರೇ ಗೆತಿ ಮಾಡೆಕ್ಕು ಹೇಳ್ತದು ಮಾಪಣ್ಣಜ್ಜ ಗ್ರೇಶಿ ಬಿಟ್ಟವು.
ಒಂದು ಹಂತಲ್ಲಿ ಮಾಪಣ್ಣಜ್ಜ ಹೇಳಿಯೇ ಬಿಟ್ಟವು – ಅಕ್ಕಂಬಗ, ನ್ಯಾಯ ಏವದೋ ಧರ್ಮಸ್ಥಳದವ° ಕಂಡಾಂಗಿರಳಿ – ಹೇಳಿಗೊಂಡು!
ಚುಬ್ಬಣ್ಣಜ್ಜಂಗೂ ತಾನುಸರಿ ಹೇಳಿಯೇ ನಂಬಿಕೆ, ಅಕ್ಕಂಬಗ, ಅನ್ಯಾಯ ಮಾಡಿದವನ ನಾಲಗೆ ಕಾನತ್ತೂರಿಂಗೆ ಹೋಗಿ ಬೀಳಲಿ – ಹೇಳಿದವು.

ಆತಲ್ಲಿಗೆ,

ಒಬ್ಬ ಧರ್ಮಸ್ಥಳಕ್ಕೂ, ಇನ್ನೊಬ್ಬ ಕಾನತ್ತೂರಿಂಗೂ ಹೇಳಿದವು.
ಮನೆ ಒಳ ಅಜ್ಜಿಯಕ್ಕೊಗೆ ಬಾರೀ ಅನ್ಯೋನ್ಯ, ಆದರೆ ಮನೆಲಿ ಹೀಂಗಾತು. ಎಂತರ ಮಾಡುದು!
ಸಂಬಂದ ಸರಿ ಆಯೆಕು ಹೇಳಿ ಎರಡೂ ಮನೆಯ ಎಲ್ಲೊರಿಂಗೂ ಇದ್ದು, ಯೆಜಮಾನಕ್ಕಳ ಬಿಟ್ಟು!!

ಅದಿನ್ನು ಸರಿ ಆಯೆಕ್ಕಾರೆ ಮಾತಾಡಿಗೊಂಡ ಇಬ್ರುದೇ ಒಟ್ಟಾಗಿ ಸುರೂವಿಂಗೆ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ದೇವರ ಸನ್ನಿಧಿಲಿ ತಪ್ಪುಕಟ್ಟಿಕ್ಕಿ (ತಪ್ಪುಕಾಣಿಕೆ ಕಟ್ಟಿಕ್ಕಿ) ಬರೆಕ್ಕು,
– ಅದಾದ ಮತ್ತೆ ಇಬ್ರುದೇ ಕಾನತ್ತೂರಿನ ಬೂತದತ್ರಂಗೆ ಹೋಗಿ ಅಲ್ಲಿಯೂ ತಪ್ಪುಕಟ್ಟಿಕ್ಕಿ ಬರೆಕ್ಕು.
ಎರಡೂ ದಿಕ್ಕಾಣ ಪ್ರಸಾದ ತೆಕ್ಕೊಂಡ ಮತ್ತೆ ಪರಸ್ಪರ ಯೇವದೇ ವೆವಹಾರ ಸುರು ಮಾಡ್ಲಕ್ಕು – ಮಾತಾಡುದರಿಂದ ಹಿಡುದು!
ಅಲ್ಲಿಯವರೆಗೆ ಪರಸ್ಪರ ನೀರುದೇ ಕುಡಿವಲಾಗ – ಹೇಳ್ತದು ನಂಬಿಕೆ.
~

ಅಲ್ಲಿಂದ ಮತ್ತೆ ಅವಕ್ಕೆ ಹೋಕ್ವರುಕ್ಕು ಇಲ್ಲೆ!
ಒಂದೇ ಕೆರೆಯ ನೀರಾದರೂ, ಇವ° ಎಳದ್ದರ ಅವ ಕುಡಿಯ, ಅವ° ಎಳದ್ದರ ಇವ° ಕುಡಿಯ!
ಕೆರಗಾ ಮಣ್ಣ ಈ ಸಂಗತಿ ಗೊಂತಾಗಿದ್ದರೆ ಬಿದ್ದು ಬಿದ್ದು ನೆಗೆಮಾಡ್ತಿತು – ಅಲ್ಲದೋ?
~

ಸುರುವಿಂಗೆ ರಜ ಒರಿಶ ಪರಸ್ಪರ ಮಾತುಕತೆಯೇ ಇತ್ತಿಲ್ಲೆಡ, ಎರಡು ಮನೆಗೆ.
ಕೆರೆಬುಡಲ್ಲಿ ಅಜ್ಜಿಯಕ್ಕೊ, ಮನೆಯೋರು ಎಲ್ಲ ಮಾತಾಡಿಗೊಂಗು – ರಜರಜ, ಕದ್ದುಕದ್ದು.
ಅಜ್ಜಂದ್ರಿಂಗೆ ಗೊಂತಾಗದ್ದ ಹಾಂಗೆ! 😉

ಮತ್ತೆ ಮತ್ತೆ ಅಜ್ಜಂದ್ರಿಂಗೆ ಪ್ರಾಯ ಆತು, ಒಯಿವಾಟು ಕಮ್ಮಿ ಆತು.

ಜಾಗೆಗೆ ಗಡಿ ಇಲ್ಲದ್ರೂ ಮನಸ್ಸಿಂಗೆ ಗಡಿ ಇತ್ತು!!

ಎಡಿಗಾದಪ್ಪನ್ನಾರವೂ ಕೋರ್ಟಿಂಗೆ ಹೋಯ್ಕೊಂಡಿತ್ತಿದ್ದವು – ಬೇರೆಬೇರೆ!
ಅಜ್ಜಂದ್ರ ಒಯಿವಾಟು ಕಮ್ಮಿ ಆದಷ್ಟು, ಮನೆಯೋರು ಮಾತಾಡಿಗೊಂಬದು ಜಾಸ್ತಿ ಆತು.
ಕಾಲಕ್ರಮೇಣ ಮಾಪಣ್ಣಜ್ಜಂಗೆ ಆಯುಶ್ಶ ತೀರಿ, ತೀರಿಗೊಂಡವು – ರಜ ಒರಿಶಲ್ಲಿ ಚುಬ್ಬಣ್ಣಜ್ಜಂದೇ.

ಅಜ್ಜಂದ್ರು ತೀರಿಗೊಂಡಮೇಗುದೇ ಸೂತಕ ಆಚರಣೆ ಮಾಡಿಗೊಂಡವು, ಆದರೆ ಪರಸ್ಪರ ಬಯಿಂದವಿಲ್ಲೆ – ಆ ಅಜ್ಜಂದ್ರ ಮಕ್ಕೊಗೆ ಅವರವರ ಅಪ್ಪನ ಮೇಗೆ ಇದ್ದ ಭಯಭಕ್ತಿ ಕಾರಣ ಅಡ.
ಎನ್ನಪ್ಪ ಮಾತು ಕೊಟ್ಟಿದವು, ಹಾಂಗಾಗಿ ಆಚಮನೆ ನೀರು ಕುಡಿವಲಿಲ್ಲೆ – ಹೇಳಿಗೊಂಡು  ಅವುದೇ ಸಂಬಂದ ಸರಿ ಮಾಡಿಗೊಂಡವಿಲ್ಲೆ.
ಮತ್ತೆ ಮತ್ತೆ ಆಚೀಚ ಮನೆಗಳ ಒಯಿವಾಟು ಬದಲಿಬದಲಿ – ದೂರದೂರವೇ ಆತಷ್ಟೇ ವಿನಾ, ಮತ್ತೆ ಒಂದಪ್ಪ ಪ್ರಯತ್ನವೇ ಆಯಿದಿಲ್ಲೆ…

ಎರಡೂ ಕೂಟದೋರಿಂಗೂ ಅವರ ಹೆರಿಯೋರ ಮೇಗಾಣ ಭಯಬಗ್ತಿ ಇನ್ನೂ ಒಂದಾಗದ್ದ ಹಾಂಗೆ ಮಾಡಿಗೊಂಡತ್ತೋ ಏನೋ!
ಉಮ್ಮಪ್ಪ, ಮಾತಾಡುದು ಮಾತಾಡಿಗೊಂಡೇ ಇತ್ತಿದ್ದವು – ಆದರೆ ಆಚ ಮನೆಗೆ ಈಚ ಮನೆಯೋರು ಹೋಗಿ ಬಪ್ಪದಿಲ್ಲೆ…
ಅಜ್ಜಂದ್ರು ಮಾಡಿದ ನಂಬ್ರದ ಕೇಸು ನಡಕ್ಕೊಂಡೇ ಇತ್ತು.
ಇಬ್ರ ಮಕ್ಕಳೂ ಕೋರ್ಟಿಂಗೆ ಹೋಯ್ಕೊಂಡಿತ್ತಿದ್ದವು – ಒಂದೇ ಬಸ್ಸಿಲಿ.
~

ಆ ತಲೆಮಾರುಗೊ ಮುಗಾತು.
ಅಂದು ಜಗಳ ಮಾಡಿಗೊಂಡ ಅಜ್ಜಂದ್ರ ಮಕ್ಕೊಗೇ ಸುಮಾರು ತಿತಿ ಕಳಾತು.
ಮೊದಲು ಎರಡೇ ಮನೆ ಇದ್ದದು ಈಗ ಆರೇಳು ಆಯಿದು. ಒಂದು ಕುಟುಂಬ, ಎರಡು ಕೂಟ, ಆರೇಳು ಮನೆ..

ಮಾಪಜ್ಜನ ಪುಳ್ಳಿ ಮಾಪಣ್ಣನೂ, ಚುಬ್ಬಣ್ಣಜ್ಜನ ಪುಳ್ಳಿ ಸುಬ್ಬಣ್ಣನೂ – ಒಂದೇ ಪ್ರಾಯದೋರು, ಹತ್ತರತ್ತರೆ ಮನೆ!
ಮದಲಾಣ ಅಜ್ಜಂದ್ರ ಜಾಗೆಯ ಪಾಲಿಲಿ ತುಂಡುತುಂಡು ಮಾಡಿಗೊಂಡ ಕಾರಣ ಹಿಡುವಳಿ ಸಣ್ಣ ಸಣ್ಣ ಆತು. ಇವರ ಮನೆ ಹತ್ತರತ್ತರೆ ಬಂತು.
ಅವು ತೋಟಲ್ಲಿ ಸಿಕ್ಕಿರೆ ಎಷ್ಟುದೇ ಮಾತಾಡುಗು – ಪೇಟಗೆ ಒಟ್ಟಿಂಗೇ ಹೋಕು.
ಕೋರ್ಟು ಕೇಸಿಂಗುದೇ ಅನ್ಯೋನ್ಯಲ್ಲಿ ಮಾತಾಡಿಗೊಂಡು ಹೋಗಿ ವಿಚಾರಣೆ ಮುಗುಶಿ ಒಟ್ಟಿಂಗೇ ಬಕ್ಕು.
ಕಾಸ್ರೋಡಿಂದ ಒಬ್ಬಂಗೆ ಎಂತಾರು ತಪ್ಪಲಿದ್ದರೆ ಇನ್ನೊಬ್ಬಂಗೆ ಪೇಟಗೆ ಹೋಪಲಿದ್ದರೆ – ಧಾರಾಳ ಕೈಸಕಾಯ ಮಾಡಿಗೊಂಗು.

ಅವಿಬ್ರು ಪರಸ್ಪರ ಮಾತಾಡುವಗ ಅವರ ಜಾಗಗೆ ಇವು, ಇವರ ಜಾಗಗೆ ಅವು ಬಕ್ಕು. ಬಂದು ಬಂದು ಕೆಲವು ಸರ್ತಿ ಜಾಲಿಂಗೂ ಎತ್ತುಗು. ಮಾತಾಡಿಗೊಂಡೇ ಸೀತ ಮನೆಗೂ ಬಂದು ಬಿಡುಗು. 😉
ಆದರೂ…

ಈ ಮನೆಯೋರು ಆಚ ಮನೆಯವರ ನೀರು ಕುಡಿಯವು, ಅವು ಇಲ್ಯಾಣ ನೀರು ಮುಟ್ಟವು. ತಲೆತಲಾಂತರಂದ ಬಂದ ನಂಬಿಕೆಯ ಹಾಂಗೆ ಇದರ ಒಂದು ನಿಷ್ಠೆಲಿ ಆಚರುಸುಗು.
ಕೇಳಿರೆ ಹೇಳುಗು – ಎಂಗೊಗೆ ಹೋಕ್ವರುಕ್ಕು ಇಲ್ಲೆ ಹೇಳಿಗೊಂಡು. ಅಜ್ಜ ನೆಟ್ಟ ಆಲದ ಮರಕ್ಕೆ ನೇಲುದು ಹೇಳ್ತ ಹಾಂಗೆ.
~

ಮೊದಮೊದಲು ಹೋಕು – ಬರುಕ್ಕು (ಹೋಪದು, ಬಪ್ಪದು) ಎರಡೂ ಇಲ್ಲದ್ದು ಕ್ರಮೇಣ ಪರಸ್ಪರ ಮಾತಾಡ್ಳೆ ಸುರು ಆವುತ್ತು.
ಆದರೂ ಹೋಕ್ವರುಕ್ಕು ಇಲ್ಲೆ ಹೇಳಿಯೇ ಲೆಕ್ಕ!
ಅಲ್ಲಿಂದ ಮತ್ತೆ ಮಾತಾಡಿಮಾತಾಡಿ ಪರಸ್ಪರ ಜಾಗೆ ಪ್ರವೇಶ ಸುರು ಆವುತ್ತು.
ಆದರೂ ಹೋಕ್ವರುಕ್ಕು ಇಲ್ಲೆ ಹೇಳಿಯೇ ಲೆಕ್ಕ!
ಅಲ್ಲಿಂದ ಮತ್ತೆ ಮೆಲ್ಲಂಗೆ ಮನಗೆ ಬಪ್ಪದು ಸುರು ಆವುತ್ತು!
ಆದರೂ ಹೋಕ್ವರುಕ್ಕು ಇಲ್ಲೆ ಹೇಳಿಯೇ ಲೆಕ್ಕ!

ಇಲ್ಲೆ ಹೇಳಿರೆ ಇಲ್ಲಲೇ ಇಲ್ಲೆ ಹೇಳಿ ಲೆಕ್ಕ ಅಲ್ಲ!!
ಹೋಪದಿದ್ದು, ಬಪ್ಪದಿದ್ದು – ಆದರೆ ಜೆಂಬ್ರಕ್ಕೆ ಹೋಪಲಿಲ್ಲೆ, ಹಸ್ತೋದಕ ಉಂಬಲಿಲ್ಲೆ – ನಿತ್ಯಕ್ಕೆ ಮಾಂತ್ರ ಹೋಪದು – ಹೀಂಗೆಲ್ಲ ಪಿರಿಗೊ ಸುರು ಆವುತ್ತು.

ಈಗ ರಜ ಕಮ್ಮಿಯೋ ಏನೋ – ಮದಲಿಂಗೆ ನಮ್ಮ ಊರಿಲಿ ಎಷ್ಟೂ ಇತ್ತು, ಹೀಂಗಿರ್ತ ಹೋಕುವರುಕ್ಕು ಇಲ್ಲದ್ದ ಮನೆಗೊ.
ಅದೊಂದು ನಂಬಿಕೆ – ಅಂದು ಅಜ್ಜಂದ್ರ ಒಯಿವಾಟಿಲಿ ಆ ಜಗಳವ ಮಂಜುನಾತಂಗೆ ಬಿಟ್ಟದಲ್ಲದೋ!

ಮಾತುಬಿಡ ಮಂಜುನಾತ, ಕಾಸುಬಿಡ ವೆಂಕಟ್ರವಣ – ಹೇಳಿ ಶಂಬಜ್ಜನ ಗಾದೆ ಒಂದಿದ್ದು.
ಮಂಜುನಾತಂಗೆ ಹೇಳಿದ ಮಾತು ಅವ ಬಿಟ್ಟಾಕುತ್ತನಿಲ್ಲೆಡ. ಅದೇ ತಿರುಪತಿಗೆ ಮಡಗಿದ ಪೈಸೆಯ ಎತ್ತುಸಲೇ ಬೇಕು – ಅಲ್ಲದ್ರೆ ವೆಂಕಟ್ರಮಣ ದೇವರು ಅಂತೇ ಬಿಡ, ವಸೂಲುಮಾಡಿಯೇ ಮಾಡುಗು!
~
ಹೀಂಗೆಲ್ಲ ಸಂಗತಿ.
ಸುಮಾರು ಮನೆಗಳ ಈಗ ಗುರುಗೊ ಮಂತ್ರಾಕ್ಷತೆ ಕೊಟ್ಟು ಸರಿ ಮಾಡಿದ್ದವಡ, ಎಡಪ್ಪಾಡಿಬಾವ ಹೇಳಿದ ಓ ಮೊನ್ನೆ.
ಇನ್ನೂ ಕೆಲವೆಲ್ಲ ಒಳುಕ್ಕೊಂಡಿದು. ನೋಡೊ – ನಿದಾನಕ್ಕೆ ಸರಿ ಅಕ್ಕು.
ಎಷ್ಟೇ ಹೋಕುವರುಕ್ಕು ಇಲ್ಲದ್ದದುದೇ ರಜ ಸಮಯಲ್ಲಿ ಕೋಪ ಇಳಿತ್ತು. ಮನುಷ್ಯಂಗೆ ಮರೆವು ಜಾಸ್ತಿ. ಕೆಲವು ವಿಶಯಲ್ಲಿ ಅದು ಒಳ್ಳೆದೇ!

~

ಹಾಂಗೆ ನೋಡಿರೆ ಹೋಕುವರುಕ್ಕು ಇಲ್ಲದ್ದೇ ಅಪ್ಪಲೆ ಕಾರಣ ದೊಡ್ಡದೇನೂ ಇರ್ತಿಲ್ಲೆ.
ಸಣ್ಣ ನಾಯಿ-ಪುಚ್ಚೆ ಜಗಳದ ಹಾಂಗೆ ಇಪ್ಪದರ ಅಂತೇ ದೊಡ್ಡ ಮಾಡಿ ಸಂಬಂದ ಹಾಳುಮಾಡಿಗೊಂಡಿರ್ತವಷ್ಟೆ.
ಇನ್ನೂ ಕೆಲವು ಜನಕ್ಕೆ ಎಂತಕೆ ಹೋಕುವರುಕ್ಕು ಇಲ್ಲದ್ದದು ಹೇಳಿಯೇ ಗೊಂತಿರ! – ಅದು ಮೊದಲಿಂದ ಬಂದದು ಹೇಳಿ ಕಾರಣ ಇಲ್ಲದ್ದೇ ದ್ವೇಷ ಮಾಡುಗು.
ಹಾಂಗಾಗಿ – ನಿಂಗೊಗೆ ಗೊಂತಿದ್ದ ಹೋಕುವರುಕ್ಕು ಇಲ್ಲದ್ದ ವೆವಸ್ತೆ ಇದ್ದರೆ ಸರಿಮಾಡ್ಲೆ ಒಂದು ಪ್ರಯತ್ನ ಮಾಡಿಬಿಡಿ.
ಎಲ್ಲ ‘ಅಹಮ್’ಗಳನ್ನೂ ಯೇವದಾರು ದೊಡ್ಡ ಶೆಗ್ತಿಯ ಎದುರು ತಂದು ನಿಲ್ಲುಸಿ – ಎಲ್ಲ ಒಳ್ಳೆದಾವುತ್ತು!
ಓ ಮೊನ್ನೆ ಹೀಂಗಿರ್ತ ಹೋಕುವರುಕ್ಕು ಇಲ್ಲದ್ದ ಎರಡು ಮನೆಗೊಕ್ಕೆ ಗುರುಗೊ ಮಂತ್ರಾಕ್ಷತೆ ಕೊಟ್ಟು ಸರಿ ಆಯಿದಡ – ಎಡಪ್ಪಾಡಿಬಾವ ಹೇಳಿದ.

~
ವೋಯ್! ನಮ್ಮ ಬೈಲಿಲಿ ಆರಿಂಗೂ ಹೋಕ್ವರುಕ್ಕು ಇಲ್ಲದ್ದೆ ಆಯಿದಿಲ್ಲೆ.
ಒಂದು ವೇಳೆ ಮಾತಾಡುಸದ್ರೂ ಹೋಗಿಬಂದು ಮಾಡ್ತವು, ಅಲ್ಲದೋ?

ಒಂದೊಪ್ಪ: ನಾವುನಾವೇ ಜಗಳಮಾಡಿಗೊಂಡ್ರೆ, ನಾಳೆ ಆಚವರತ್ರೆ ಜಗಳಮಾಡ್ಲೆ ಆರಿದ್ದವು ಭಾವಾ?

ಸೂ: ಆರು ಬೈಲಿಂಗೆ ಬತ್ತವಿಲ್ಲೆಯೋ – ಅವು ಒಂದು ಒಪ್ಪ ಬರದು ತಿಳುಸಿ, ಆತೋ? 😉

ಹೋಕ್ವರುಕ್ಕು ಇಲ್ಲದ್ರೂ ಹೋಗಿಬಂದು ಮಾಡ್ತವು..!, 5.0 out of 10 based on 8 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 53 ಒಪ್ಪಂಗೊ

 1. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಒಪ್ಪಣ್ಣ, ಈ ವಾರದ ಶುದ್ದಿಲಿ ನಮ್ಮ ಹಿಂದಾಣ ತಲೆಮಾರಿನೋರು ಹೊತ್ತುಸಿದ ನಂದಾದೀಪ, ‘ನಂಬ್ರ’ದ ಮೇಲೆ ಬೆಳಕು ಚೆಲ್ಲಿದ್ದೆ.. ಎಷ್ಟೋ ಮನೆತನಂಗ, ಎಷ್ಟೋ ತಲೆಮಾರುಗ ಎಂತಕ್ಕೆ ಹೊಕ್ವರುಕ್ಕು ನಿಂದತ್ತು ಹೇಳಿ ಸಮೇತ ಗೊಂತಿಲ್ಲದ್ದೆ, ಅದರ ಒಂದು ಮನೆತನದ ಸಂಪ್ರದಾಯದ ಹಾಂಗೆ ಮುಂದರಿಶಿಗೊಂದು ಬಯಿಂದವು..ಕೋರ್ಟಿನ್ಗೆ ಹೋಪದುದೆ ವರ್ಷಾವಧಿ ಮಾಡ್ತ ಸೇವೆಯ ಹಾಂಗೆ. ಆದರೆ ಈಗ ಸುಮಾರಾಗಿ ಈ ಹೊಕ್ವರುಕ್ಕು ನಿಂದದು ನಮ್ಮ ಸಮಾಜಲ್ಲಿ ಕಡಮ್ಮೆ ಆಗಿ ಪರಸ್ಪರ ಹೋಪಲೆ ಬಪ್ಪಲೆ ಸುರು ಆಯಿದು. ಇದರಲ್ಲಿ ಎಡಪ್ಪಾಡಿ ಭಾವ° ಹೇಳಿದ ಹಾಂಗೆ ನಮ್ಮ ಸಂಸ್ಥಾನ ಆಶೀರ್ವಾದ ಮಾಡಿದ ಫಲ..!!
  ಒಂದೇ ಅಬ್ಬೆಯ ಹೊಟ್ಟೆಲಿ ಹುಟ್ಟಿದೋರಿಂಗೆ ಒಂದೇ ಭೂಮಿಯ, ಒಂದೇ ಕೆರೆಂದ ನೀರು ಪಾಲು ಮಾಡಿ ಅವರವರ ಪಾಲಿಂಗೆ ಹಾಕಿಗೊಂಬದರಲ್ಲಿಯೂ ಸಂಶಯ ಮಾಡಲೂ ಮನಸ್ಸು ಬತ್ತಲ್ಲದಾ? ಒಪ್ಪಣ್ಣ ಹೇಳಿದ್ದು ಸರಿ, ಕೆರೆಗೆ ಎಲ್ಲಿಯಾದರೂ ಈ ವಿಷಯ ಗೊಂತಾದರೆ ಬಿದ್ದು ಬಿದ್ದು ನೆಗೆ ಮಾಡ್ತಿತ್ತೋ ಹೇಳಿ ಅಲ್ಲದ್ದರೆ ಇವರ ಅವಸ್ತೆಗೆ ಬೇಜಾರಾಗಿ ಬತ್ತಿಯೇ ಹೋವುತ್ತಿತ್ತೋ ಏನೋ ಅಲ್ಲದಾ? :-( ಒಂದು ಅಮ್ಮ ಮಕ್ಕಳಲ್ಲಿ ಬೇಧ ಮಾಡಿದರಲ್ಲದಾ ಕೆರೆ ಬೇಧ ಮಾಡುದು? ಬೇಧ ಇಪ್ಪದು ನಮ್ಮ ಮನಸ್ಸಿಲಿ.. ಭೂಮಿ ಅಲ್ಲ, ನಾವೇ ಶಾಶ್ವತ ಹೇಳುವ ಭಾವನೆ ಮನಸ್ಸಿಲಿರ್ತೋ ಏನೋ ಅಲ್ಲದಾ?
  ಒಪ್ಪಣ್ಣ, ನಮ್ಮ ಬೈಲಿಲಿ ಆರೂ ಹೊಕ್ವರಕ್ಕು ಮುಟ್ಟುಸಿದ್ದವಿಲ್ಲೇ, ಗೆದ್ದೆ ಹುಣಿಲೇ ಹೋವುತ್ತವಾಯಿಕ್ಕು.. ಇಳುದು ಮಾತಾಡ್ಲೆ ಪುರುಸೊತ್ತಿಲ್ಲೇ ಆದಿಕ್ಕಪ್ಪಾ.. ಅವರವರ ಪುರುಸೋತ್ತಿಲಿ ಬಂದು ಒಪ್ಪ ಬರೆತ್ತವು.. ಒಂದೊಪ್ಪ ಲಾಯಕ ಆಯಿದು.. ನಾವು ನಾವೇ ನಂಬ್ರಂಗಳಲ್ಲಿ, ಜಗಳಲ್ಲಿ ಮುಳುಗಿಪ್ಪಗ ಇನ್ನೊಬ್ಬ° ಬಂದು ನಮ್ಮೊಳ ಭಿನ್ನ ಮಾಡಿ ಚೆಂದ ನೋಡುಗು. ಅಂಬಗ ಆರು ಬತ್ತ° ನಮ್ಮೊಟ್ಟಿನ್ಗೆ?

  [Reply]

  ನೆಗೆಗಾರ°

  ನೆಗೆಗಾರ° Reply:

  { ಗೆದ್ದೆ ಹುಣಿಲೇ ಹೋವುತ್ತವಾಯಿಕ್ಕು.. ಇಳುದು ಮಾತಾಡ್ಲೆ ಪುರುಸೊತ್ತಿಲ್ಲೇ }

  ಗೆದ್ದೆ ಹುಣಿಂದ ಇಳುದರೆ ಮತ್ತೆ ಗೆದ್ದಗೇ ಅಲ್ಲದೋ?
  ಚೆಕ್! ಕಾಲುಪೂರ ಕೆಸರು 😉

  [Reply]

  VA:F [1.9.22_1171]
  Rating: +1 (from 3 votes)
 2. ಶಾಂತತ್ತೆ

  oppanno enthella shuddi baretteppa enage gontilleppa.
  monne maheshanatre kelide innana vaarada shuddi entha heli.
  oppanatre keli helte helida.aatambaga helide.
  hokvarakku illadre balavanthanda sari madle aaga heli enage kaanthu.
  neerina vishayaddu oppannange gontikku
  yavagalu paalili haruve bittu bittule heratre ee ajjandra hange appadu.
  matte gurugalavarege ettuttu aste.elloringu preeti taalme vishvasa iddare heengella aaga allada oppanno.badathana ondu lekkave alla.ondoppa sooper.
  good luck

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  { monne maheshanatre kelide innana vaarada shuddi entha heli. }
  ಚೆ, ಗೊಂತಿಲ್ಲದ್ದರ ಗೊಂತಿಲ್ಲದ್ದವನ ಹತ್ತರೆ ಗೊಂತಿಲ್ಲದ್ದ ಹಾಂಗೆ ಕೇಳಿರೆ ಎಂತ ಮಾಡುದು ಗೊಂತಾಗ!!

  [Reply]

  ಶ್ರೀಶಣ್ಣ

  ಶ್ರೀಶ. ಹೊಸಬೆಟ್ಟು Reply:

  ಗೊಂತಿಲ್ಲದ್ದರ ಗೊಂತಿಪ್ಪವನ ಹತ್ರೆ ಕೇಳಿರೆ, ಗೊಂತಿಲ್ಲೆ ಹೇಳಿರೆ, ಗೊಂತಿಲ್ಲದ್ದವಂಗೆ ಎಂತ ಗೊಂತಕ್ಕು?:)

  [Reply]

  VA:F [1.9.22_1171]
  Rating: +1 (from 1 vote)
 3. ಡೈಮಂಡು ಭಾವ
  ಕೆಪ್ಪಣ್ಣ

  ಒಪ್ಪಣ್ಣಾ. ಯೇವತ್ತಿನ ಹಾಂಗೆ ಲಾಯ್ಕಾ ಆಯಿದು, ಬೈಲಿಂಗೆ ಬಪ್ಪಗ ಲೇಟಾತು… ಕೊಶಿ ಆತು ಲೇಖನ
  ನಂಬ್ರ = ಯೇವ ಕಾಲಕ್ಕೂ ಮುಗಿಯದ್ದ ನಂದಾದೀಪ ಅದೊಂದು-ಭಲೇ ಭಲೇ…

  [Reply]

  VA:F [1.9.22_1171]
  Rating: 0 (from 0 votes)
 4. ಜೆಂಬ್ರಕ್ಕೆ ಒಂದು ಭೇಟಿ ಕೊಡದ್ರೂ ನಂಬ್ರದ ಲೆಕ್ಕಲ್ಲಿ ಕೋರ್ಟಿಂಗೆ ಒಂದು ಸರಿಯಾಗಿ ಹೋಕು… ನ್ಯಾಯ ಎಂಥ ಸಿಕ್ಕುತ್ತೋ ದೇವರಿಂಗೇ ಗೊಂತು, ಆದರೆ ಹೀಂಗೆ ಮಾಡಿ ಲಾಯರುಗೋ ಮಾತ್ರ ಹೊಸ ಮನೆ ಕಟ್ಟುಗು ಫ಼ೀಸಿಲ್ಲಿ!
  ಲಾಯಕ್ಕ ಆಯ್ದು ಬರದ್ದು…

  – ಉಷೈ

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಉಷೈಅತ್ತಿಗೆಗೆ ನಮಸ್ಕಾರ ಇದ್ದು!
  ಸರಿಯಾಗಿ ಹೇಳಿದಿ.

  ಎಷ್ಟೋ ಜೆನ ಮಾಡಿದ್ದರ ಪೂರ ಕೋರ್ಟಿಂಗೆ ಸೊರುಗಿ, ಅಕೇರಿಗೆ ಪೈಶೆಕಾಲಿ ಆಗಿ, ಒಯಿವಾಟಿಲಿ ಬಚ್ಚಿ, ಮನೆಯ ಲಾಯರಿಂಗೇ ಅಡವು ಮಡಗಿದೋರುದೇ ಇದ್ದವಡ, ಆಚಮನೆ ದೊಡ್ಡಣ್ಣ ಹೇಳಿತ್ತಿದ್ದ°…

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  [ಮಾಪಜ್ಜನ ಪುಳ್ಳಿ ಮಾಪಣ್ಣನೂ, ಚುಬ್ಬಣ್ಣಜ್ಜನ ಪುಳ್ಳಿ ಸುಬ್ಬಣ್ಣನೂ – ಒಂದೇ ಪ್ರಾಯದೋರು, ಹತ್ತರತ್ತರೆ ಮನೆ!]
  ಪೊಸವಣಿಕೆ ಚುಬ್ಬಣ್ಣ ಹೇಳಿರೆ ಇವನೆಯೋ ಒಪ್ಪಣ್ಣಾ! :)

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  [ಮಾಪಜ್ಜನ ಪುಳ್ಳಿ ಮಾಪಣ್ಣನೂ, ಚುಬ್ಬಣ್ಣಜ್ಜನ ಪುಳ್ಳಿ ಸುಬ್ಬಣ್ಣನೂ – ಒಂದೇ ಪ್ರಾಯದೋರು, ಹತ್ತರತ್ತರೆ ಮನೆ!]
  ಪೊಸವಣಿಕೆ ಚುಬ್ಬಣ್ಣ ಹೇಳಿರೆ ಇವನೆಯೋ ಒಪ್ಪಣ್ಣಾ! :)

  [ಹಾಂಗೆ ನೋಡಿರೆ ಹೋಕುವರುಕ್ಕು ಇಲ್ಲದ್ದೇ ಅಪ್ಪಲೆ ಕಾರಣ ದೊಡ್ಡದೇನೂ ಇರ್ತಿಲ್ಲೆ.
  ಸಣ್ಣ ನಾಯಿ-ಪುಚ್ಚೆ ಜಗಳದ ಹಾಂಗೆ ಇಪ್ಪದರ ಅಂತೇ ದೊಡ್ಡ ಮಾಡಿ ಸಂಬಂದ ಹಾಳುಮಾಡಿಗೊಂಡಿರ್ತವಷ್ಟೆ.
  ಇನ್ನೂ ಕೆಲವು ಜನಕ್ಕೆ ಎಂತಕೆ ಹೋಕುವರುಕ್ಕು ಇಲ್ಲದ್ದದು ಹೇಳಿಯೇ ಗೊಂತಿರ! – ಅದು ಮೊದಲಿಂದ ಬಂದದು ಹೇಳಿ ಕಾರಣ ಇಲ್ಲದ್ದೇ ದ್ವೇಷ ಮಾಡುಗು.
  ಹಾಂಗಾಗಿ – ನಿಂಗೊಗೆ ಗೊಂತಿದ್ದ ಹೋಕುವರುಕ್ಕು ಇಲ್ಲದ್ದ ವೆವಸ್ತೆ ಇದ್ದರೆ ಸರಿಮಾಡ್ಲೆ ಒಂದು ಪ್ರಯತ್ನ ಮಾಡಿಬಿಡಿ.]

  ಮುತ್ತಿನಂಥ ಮಾತುಗಳ ಹೇಳಿದೆ. ಈ ಬ್ಲೋಗಲ್ಲಿ ಲೇಖನಂಗಳ ಬರೆತ್ತ ಹಾಂಗೆಯೇ ಒಂದು ಪುಸ್ತಕವ ಬರೆ. ನವಗೆಂತ, ಹೇಳಿರಾತು. ಬಿಟ್ಟಿ ಸಲಹೆ ಕೊಡ್ಲೆ ಪೈಸದ ಖರ್ಚಿಲ್ಲೆ :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಚೂರಿಬೈಲು ದೀಪಕ್ಕದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ಕೇಜಿಮಾವ°ಮಾಲಕ್ಕ°ಚುಬ್ಬಣ್ಣಪುಟ್ಟಬಾವ°ಪುತ್ತೂರಿನ ಪುಟ್ಟಕ್ಕಚೆನ್ನಬೆಟ್ಟಣ್ಣಶ್ರೀಅಕ್ಕ°ಶ್ಯಾಮಣ್ಣಜಯಗೌರಿ ಅಕ್ಕ°ಬಂಡಾಡಿ ಅಜ್ಜಿವೇಣಿಯಕ್ಕ°ಪುಣಚ ಡಾಕ್ಟ್ರುಕಳಾಯಿ ಗೀತತ್ತೆಅನಿತಾ ನರೇಶ್, ಮಂಚಿಗೋಪಾಲಣ್ಣವಿದ್ವಾನಣ್ಣಅಕ್ಷರದಣ್ಣದೀಪಿಕಾಡೈಮಂಡು ಭಾವಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ