Oppanna.com

ಕಣ್ಯಾರ ಆಯನ / ಕುಂಬ್ಳೆ ಬೆಡಿ : ಗಳಿಗೆಗಾದರೂ ಹೋಗದ್ದೆ ಇರೆಡಿ!!

ಬರದೋರು :   ಒಪ್ಪಣ್ಣ    on   15/01/2010    16 ಒಪ್ಪಂಗೊ

ಕುಂಬಳೆ ಸೀಮೆಯ ಇತಿಹಾಸಲ್ಲಿ ನಾಲ್ಕು ಪ್ರಸಿದ್ಧ ದೇವಸ್ಥಾನಂಗೊ.
ಅಡೂರು – ಮಧೂರು – ಕಾವು – ಕಣ್ಯಾರ. ಅದರ “ಸೀಮೆ ದೇವಸ್ಥಾನ” ಹೇಳಿಯೂ ಹೇಳ್ತವು.
ಸೀಮೆಯ ಉದ್ದಗಲಕ್ಕೆ ಹರಡಿಗೊಂಡಿಪ್ಪ ಈ ಧರ್ಮಕೇಂದ್ರದ ವ್ಯಾಪ್ತಿಲಿ ನಿತ್ಯ ದೇವತಾ ವಿನಿಯೋಗ, ಒರಿಷಕ್ಕೊಂದರಿ ಉತ್ಸವ – ಇತ್ಯಾದಿಗೊ ನೆಡಕ್ಕೊಂಡು ಇತ್ತು.
ಊರಿಂಗೆ ಎಂತದೇ ಕಷ್ಟ – ಕೋಟಲೆ ಬಂದರೂ ಈ ಸೀಮೆ ದೇವಸ್ಥಾನಂಗೊಕ್ಕೆ ಹೋಗಿ ಪ್ರಾರ್ಥನೆ ಮಾಡ್ತ ಪರಿವಾಡಿ ನಮ್ಮೋರಲ್ಲಿ ಇತ್ತು.
ಸೀಮೆಯ ಕಾವ ದೈವೀ ಶಕ್ತಿಗೊ ಅವು ಹೇಳ್ತ ನಂಬಿಕೆ ನಮ್ಮ ಹಿರಿಯೋರದ್ದು.

ಊರಿಲಿ ಇಡೀಕ ಅರಾಜಕತೆ ಬಂದಿಪ್ಪಗ, ಅನಾಗರಿಕ ನಂದರು ಆಳ್ವಿಕೆ ಸುರು ಮಾಡಿ, ಜೆನಂಗೊಕ್ಕೆ ಮರಿಯಾದಿಲಿ ಬದ್ಕಲೆಡಿಯದ್ದೆ ಇಪ್ಪಗ, ಮಾಯಿಪ್ಪಾಡಿಯ ಅರಸು ಬಂದು ಕುಂಬ್ಳೆ ಸೀಮೆಯ ಗೆದ್ದತ್ತಡ. ಈ ನಾಲ್ಕು ದೇವಸ್ಥಾನಂಗಳ ವೃದ್ಧಿಪಡುಸಿತ್ತಡ. ಸೀಮೆಯ ರಕ್ಷಣೆಗೆ ದೈವೀಶಕ್ತಿಗೊ ನೆರವಾತಡ. ಅರಸು ದೇವಸ್ಥಾನ ಬೆಳೆಶಿತ್ತು, ದೇವಸ್ಥಾನ ಧರ್ಮವ ಬೆಳೆಶಿತ್ತು. ಅನಾದಿ ಕಾಲಂದಲುದೇ ಈ ದೇವಸ್ಥಾನಂಗಳಲ್ಲಿ ನಿತ್ಯ ದೇವತಾ ವಿನಿಯೋಗ, ಒರಿಷಕ್ಕೊಂದರಿ ಜಾತ್ರೆ ನೆಡಗು, ಗೌಜಿಲಿ.
ಆ ಒರಿಷಾವಧಿ ಜಾತ್ರಗೆ ’ಆಯನ’ ಹೇಳುದು.

~~
ಸೀಮೆ ದೇವಸ್ಥಾನಂಗಳ ಬಗ್ಗೆ ಹುಂಡು ವಿವರ:
ಅಡೂರು:
ಮುಳ್ಳೇರಿಯ-ಸುಳ್ಯ ಮಾರ್ಗಲ್ಲಿ ಹೋಪಗ ಕೊಟ್ಯಾಡಿಯ ಹತ್ತರೆ ಬಲತ್ತಿಂಗೆ ತಿರುಗಿರೆ ಅಡೂರು ದೇವಸ್ಥಾನ ಸಿಕ್ಕುತ್ತು. ಈಚ ಹೊಡೆಲಿ ಹೋವುತ್ತರೆ ನಮ್ಮ ಪಾಲಾರಣ್ಣ ಮನೆಯ ಒತ್ತಕ್ಕೆ ಮಾರ್ಗಲ್ಲೆ ಹೋಯೆಕು.
ಸೀಮೆ ದೇವಸ್ಥಾನ ಮದಲಿಂಗೆ ಆಗಿದ್ದರೂ, ಈಗ ನಮ್ಮೋರ ಸಂಖ್ಯೆ ಅಲ್ಲಿ ಕಮ್ಮಿ ಆದ ಕಾರಣ ನಮ್ಮೋರ ಸಂಪರ್ಕಂದ ರಜಾ ದೂರ ಇದ್ದು. ಸದ್ಯಕ್ಕೆ ಕೆಲವು ಮಾರಾಟಿ ನಾಯ್ಕಂಗಳ ಏರ್ಪಾಡು, ಗುರಿಕ್ಕಾರ್ತಿಗೆಲಿ ನೆಡೆತ್ತಾ ಇದ್ದು.
ಈಗಾಣ ನಮ್ಮೋರಿಂಗೆ ಇದರ ಗುರ್ತ ಕಮ್ಮಿ. ದೇವಸ್ಥಾನವ ಹೇಳುದು ಹೇಳ್ತವು, ಅಲ್ಲಿಗೆ ಹೋದೋರು ಕಮ್ಮಿ. ನಮ್ಮ ಬೈಲಿಂದ ಓ ಮೊನ್ನೆ ಮಾಷ್ಟ್ರುಮಾವನೂ, ಗಣೇಶಮಾವನೂ ಉದಾಕೆ ಹೋಗಿ ಮದ್ಯಾನ್ನದ ಪ್ರಸಾದ ತೆಕ್ಕೊಂಡು ಬಯಿಂದವು.

ಮಧೂರು:
ಗೆಣಪ್ಪಣ್ಣನ ದೇವಸ್ಥಾನ ಹೇಳಿ ಪ್ರಸಿದ್ಧಿ ಆದರೂ, ಮೂಲವಾಗಿ ಅದು ಗೆಣಪ್ಪಣ್ಣನ ಅಪ್ಪ, ಶಿವನ ದೇವಸ್ಥಾನ. ಶಿವ ಅನಂತೇಶ್ವರನ ರೂಪಲ್ಲಿ ಅಲ್ಲಿ ಇದ್ದ°. ಅಪ್ಪ° ಒತ್ತಕ್ಕೇ ಇದ್ದರೂ ಎಲ್ಲ ಮಗಂದೇ ಕಾರ್ಬಾರು – ಆಚಕರೆಯ ತರವಾಡುಮನೆಯ ಹಾಂಗೆ!
ಗೆಣಪ್ಪಣ್ಣ ಯೇವದೋ ಬಲ್ಲೆಲಿ ’ಮುದರು’ ಹೇಳ್ತ ಮೇರ್ತಿಗೆ ಸಿಕ್ಕಿ, ಮತ್ತೆ ಬೆಳದು ಬೆಳದು ಅಷ್ಟು ದೊಡ್ಡ ಆದ್ದಡ.
ಎಂತ ಕಾರ್ಯ ಸುರು ಮಾಡ್ತರೂ, ಮಾಡುವ ಮೊದಲು ಒಂದರಿ ಮದೂರು ಗೆಣಪ್ಪಣ್ಣಂಗೆ ನಂಬಿಗೊಂಡರೆ ಕಾರ್ಯ ಸುಸೂತ್ರ ಆವುತ್ತು ಹೇಳ್ತದು ಹಳಬ್ಬರ ನಂಬಿಕೆ. (ಒಪ್ಪಣ್ಣಂದೇ ಶುದ್ದಿ ಹೇಳುಲೆ ಸುರುಮಾಡುವ ಮದಲು ಗೆಣಪ್ಪಣ್ಣನ ನೆಂಪು ಮಾಡಿದ್ದ

ಕಾವು:
ದೀಪಕ್ಕನ ಮನೆಯ ಹತ್ರೆ ಇಪ್ಪ ಕಾವು ಅಲ್ಲ ಇದು – ಇಲ್ಲಿ ಕಾವು ಹೇಳಿರೆ ನಮ್ಮ ಮುಜುಂಗಾವು.
ಚಾಮಿ ಶ್ರೀಕೃಷ್ಣ ಅರ್ಜುನಂಗೆ ಜೀವನತತ್ವ ಹೇಳಿಕೊಡ್ತ ಪಾರ್ಥಸಾರಥಿಯಾಗಿ ಇಪ್ಪ ದೇವಸ್ಥಾನ ಇದು.
ವಿಶಾಲವಾದ ಪಾರೆಗೆದ್ದೆಲಿ ಈ ದೇವಸ್ಥಾನ ಇಪ್ಪದು. ಇದರ ಎದುರೇ ಒಂದು ಕೆರೆ ಇದ್ದು. ಅಲ್ಲಿ ಶ್ರದ್ಧೆಲಿ ಮಿಂದರೆ ಮೈಲಿಪ್ಪ ಕೆಡು ಇತ್ಯಾದಿ ಚರ್ಮದೋಷಂಗೊ ಹೋವುತ್ತು ಹೇಳ್ತದು ನಮ್ಮೋರ ನಂಬಿಕೆ.
ನೀರಿಲಿ ರಂಜಕದ ಅಂಶ ಇಪ್ಪದೇ ಅದಕ್ಕೆ ಕಾರಣ ಹೇಳಿ ಕೇಮಹೇಶಣ್ಣ ಹೇಳಿತ್ತಿದ್ದವು, ಅವಕ್ಕೆ ವಿಜ್ಞಾನ ಎಲ್ಲ ಅರಡಿಗಿದಾ!
ಅಂತೂ ಕಾವೇರಿ ಸಂಕ್ರಣದ ದಿನ ಸಾವಿರಗಟ್ಳೆ ಜೆನ ಸೇರುಗು, ಮಿಂದು ಸಂತೃಪ್ತರಕ್ಕು.

ಕಣಿಯಾರ:
ಮದಲಿಂಗೆ ಕಣ್ವಪುರ ಆಗಿತ್ತಿದ್ದದು ಕ್ರಮೇಣ ಕಣಿಯಾರ ಆದ ಈ ಊರಿಂಗೆ – ಈಗಾಣೋರು ಕುಂಬಳೆ ಹೇಳಿಯೂ ಹೇಳ್ತವು.
ದನಗಳ ಕಾವ ಮಾಣಿ ಕೃಷ್ಣಂಗೆ ಹಾಲು ಬಾರೀ ಪ್ರೀತಿ ಇದಾ – ಕೃಷ್ಣ ಚೆಲ್ಲಿದ ಹಾಲಿನ ಬಿಂದು ’ಕುಂಭ ಹೊಳೆ’ಯಾಗಿ ಊರಿಂಗೆ ಈ ಹೆಸರು ಬಂದದಡ – ಮಾಷ್ಟ್ರುಮಾವ° ಹೇಳಿದವು ಓ ಮೊನ್ನೆ.
ದನಗಳ ಪ್ರೀತಿಯ ಗೋಪಾಲಕೃಷ್ಣ ಆಗಿ ಇಲ್ಲಿಪ್ಪ ಈ ಚಾಮಿ, ಕೇಳಿದವರ ಇಷ್ಟಾರ್ಥ ಸಿದ್ಧಿ ಮಾಡ್ತನಡ.
ಮದಲಿಂಗೆ ಮನೆಮನೆಗಳಲ್ಲಿ ಇದ್ದಿದ್ದ ದನಗೊ ಕರವಲಪ್ಪಗ ಶುದ್ದದ ದಿನದ ಹಾಲು ಗೋಪಾಲಕೃಷ್ಣಂಗೆ ಸಂದಿಯೇ ಸಂದುಗು. ಈಗ ಅದೆಲ್ಲ ಕಮ್ಮಿ ಆದರೂ, ಕೆಲಾವು ಮನೆಲಿ ಒಳುಶಿಗೊಂಡು ಬಯಿಂದವು.
ಕುಂಬಳೆ ಸೀಮೆಂದ ಎದ್ದು ಬೇರೆ ಹೋದರುದೇ, ಒರಿಷಕ್ಕೊಂದರಿಯೋ – ಎಲ್ಲ ತುಪ್ಪ – ಇತ್ಯಾದಿ ತಂದು ಕೊಡುವವು ಇದ್ದವಡ, ಆಚಮನೆ ದೊಡ್ಡಣ್ಣ ಹೇಳಿಗೊಂಡಿತ್ತಿದ್ದ, ಓ ಮೊನ್ನೆ!
ನಮ್ಮೋರಲ್ಲಿ ಎಷ್ಟೋಜೆನರ ಹೆಸರುದೇ ಈ ದೇವರದ್ದೇ ಮಡಗುತ್ತ ಸಂಪ್ರದಾಯ ಇದ್ದು. ನಮ್ಮೋರ ಹಳಬ್ಬರ ನೆತ್ತರಿಲಿ ಈ ಗೋಪಾಲಕೃಷ್ಣ ಇದ್ದ°.

ಅದೆಲ್ಲ ಸರಿ, ಈಗ ಎಂತಕೆ ಆ ಶುದ್ದಿ?
ಈಗ ಕಣಿಯಾರ ಆಯನದ ಗೌಜಿ!! ಗೊಂತಿದ್ದನ್ನೇ?
~~

ಯೇವ ರೀತಿ ತೆಂಕಲಾಗಿಯಾಣ ಶೈಲಿ, ಅಲ್ಯಾಣ ವೇಷಭೂಶಣ ನಮ್ಮ ಜನಜೀವನಕ್ಕೆ ಒತ್ತಿ ಹೋಯಿದೋ – ನಮ್ಮ ಸಂಪ್ರದಾಯಂಗಳಲ್ಲೂ ಅದು ಎದ್ದು ಕಾಣ್ತು.
ದೇವಸ್ಥಾನಂಗಳಲ್ಲೂ ಅದು ಇದ್ದೇ ಇದ್ದು. ಕರ್ನಾಟಕದ ಗಟ್ಟದ ಮೇಗೆ ಇರ್ತ ದೇವಸ್ತಾನದ ರೂಪಕ್ಕೂ, ನಮ್ಮ ಊರಿಂದಕ್ಕೂ ತುಂಬಾ ವಿತ್ಯಾಸ ಇದ್ದು! ಕೊಡಿಮರದ ಶುದ್ದಿಲಿ ಒಂದರಿ ಇದರ ಮಾತಾಡಿದ್ದು ನಾವು.
ನೆಡೂಕೆ ಗರ್ಭಗುಡಿ(ಗುಂಡ), ಅದರ ಎಡ – ಬಲ ದಿಕ್ಕಂಗೆ ಉಪದೇವರ ಗುಡಿಗೊ, ಎದುರು ನಮಸ್ಕಾರಮಂಟಪ, ಅದರ ಎಲ್ಲವನ್ನುದೇ ಸುತ್ತುವರಿವ ಹಾಂಗೆ ಒಂದು ಗೋಪುರ. ಗೋಪುರ ಮತ್ತೆ ಈ ಗುಡಿಗಳ ಮಧ್ಯದ ಜಾಲೇ ಅಂಗಣ. ಗರ್ಭಗುಡಿಯ ಸುತ್ತುದೇ – ಅಂಗಣಲ್ಲಿ – ಸಣ್ಣಸಣ್ಣ ಬಲಿಕಲ್ಲುಗೊ; ಗುಂಡದೊಳಾಣ ದೇವರ ಗಣಂಗೊ ಅಲ್ಲಿ ಇಪ್ಪದು ಹೇಳ್ತ ನಂಬಿಕೆ. ಅಂಗಣಲ್ಲಿ ಈಶಾನ್ಯಖಂಡಲ್ಲಿ ಒಂದು ತೊಳಶಿಕಟ್ಟೆ, ಅದರ ಒತ್ತಕ್ಕೆ ಒಂದು ಬಾವಿ! ಪೂರ್ವದ ಮುಖ್ಯದ್ವಾರ ಅಲ್ಲದ್ದೆ ಪಶ್ಚಿಮಲ್ಲಿ ಒಂದು, ಉತ್ತರಲ್ಲಿ ಒಂದು ಸಣ್ಣಸಣ್ಣ ಬಾಗಿಲುಗೊ, ಹೆರಾಂದ ಅಂಗಣಕ್ಕೆ ಬಪ್ಪಲೆ- ಇದಿಷ್ಟು ಎಲ್ಲಾ ದೇವಸ್ಥಾನಂಗಳಲ್ಲಿ ಕಂಡುಬಪ್ಪ ಸರ್ವೇ ಸಾಮಾನ್ಯ ಅಂಶಂಗೊ.
ಇದಕ್ಕೆ ಹೊರತಾಗಿ ಕೆಲವೆಲ್ಲ ಸಾಮಾನುಗೊ ದೇವಸ್ತಾನಕ್ಕೆ ಒಳಪ್ಪಟ್ಟದು. ಜಾತ್ರೆ ಸುರು ಅಪ್ಪಲಪ್ಪಗ ಈ ಪ್ರದೇಶಂಗೊ ಎಲ್ಲವುದೇ ಮದುಮ್ಮಾಯನ ಹಾಂಗೆ ಆವುತ್ತು. ಹಾಮಸು, ಮಣ್ಣು ಎಲ್ಲ ತೊಳದು ಒಪ್ಪೊಪ್ಪ ಆಗಿ, ತಂತ್ರಿಗೊ ಶುದ್ದಮಾಡ್ಳೆ ತೆಯಾರಾಗಿ ನಿಂದಿರ್ತು.
ಇದರ ಪುನಾ ಎಂತಕೆ ಹೇಳಿದೆ ಹೇಳಿತ್ತುಕಂಡ್ರೆ, ಜಾತ್ರೆಯ ಅಂದ ದೇವಸ್ಥಾನದ ಸ್ವರೂಪಕ್ಕೆ ನೇರವಾಗಿ ಅವಲಂಬಿತ ಆಗಿರ್ತು.

ಮೊನ್ನೆ ಎಡಪ್ಪಾಡಿ ಬಾವಂದೇ, ಅಜ್ಜಕಾನಬಾವಂದೇ ಬೆಂಗುಳೂರಿಂಗೆ ಹೋಗಿಪ್ಪಗ, ಏಡಿನಗೆಡ್ಡದ ಮುತ್ತಿಗೆಭಾವ – ಅದಾ ಬೆಂಗ್ಳೂರಿಲಿ ಕಂಪ್ಯೂಟ್ರು ಕೆಲಸಲ್ಲಿಪ್ಪ ಬಾವಯ್ಯ- ಸಿಕ್ಕಿದನಡ. “ಕಣಿಯಾರಾಯನದ ಐದುದಿನ ಗೌಜಿ – ರಜೆಇದ್ದರೆ ಬಂದಿಕ್ಕು” ಹೇದನಡ, ಎಡಪ್ಪಾಡಿಬಾವ. ಅವರ ಸಾಗರ ಹೊಡಿಲಿ ಈ ಆಯನಂಗೊ ಎಲ್ಲ ಇಲ್ಲೆ ಇದಾ! ’ಐದು ದಿನ ಎಡಿಯ, ಒಂದು ದಿನಕ್ಕೆ ಬತ್ತೆ, ಯೇವ ದಿನ ಯೇವ ಗೌಜಿ ಹೇಳ್ತದು ಗೊಂತಿದ್ದರೆ ಒಳ್ಳೆದು’- ಹೇಳಿ ಮುತ್ತಿಗೆಭಾವಯ್ಯ ಹೇಳಿದ, ಗೆಡ್ಡ ತೊರುಸಿಗೊಂಡು. ಹಾಂಗೆ ಎಡಪ್ಪಾಡಿಬಾವ ವಿವರುಸುಲೆ ಸುರುಮಾಡಿದನಡ. ಅಜ್ಜಕಾನಬಾವ ಬಂದಿಕ್ಕಿ ಆ ಶುದ್ದಿಗಳ ಎಂಗಳತ್ರೆ ಹೇಳಿದ, ಅವಂದುದೇ ರಜ್ಜ ಒಗ್ಗರಣೆ ಸೇರಸಿಗೊಂಡು.

ಪ್ರತಿ ಒರಿಷ ಮಕರತಿಂಗಳ ಶೆಂಕ್ರಾಂತಿಗೆ ಕೊಡಿ ಏರಿ, ಮತ್ತೆ ಐದಕ್ಕೆ ಕೊಡಿ ಇಳಿತ್ತ ಗೌಜಿ.
ಪ್ರಾಕಿಂದಲೂ ಹಾಂಗೇ ನೆಡಕ್ಕೊಂಡು ಬಂದದು, ಐದು ದಿನದ ಗೌಜಿ. ಆ ಒರಿಷದ ಆರೋಹಣಂದ, ಅವರೋಹಣ ಒರೆಂಗೆ ಇಡೀ ಆ ಐದು ದಿನಲ್ಲಿ ನೆಡೆತ್ತು. ಅದೆಂತರ ಹೇಳಿ ನೋಡುವೊ:

Kumble Gopalakrishna Temple
ಕುಂಬ್ಳೆ ದೇವಸ್ಥಾನ, ಮಾರ್ಗದ ಕರೆಂದ ಪಟ ತೆಗದು ಎಡ್ರಾಸು ಅಂಟುಸಿದ್ದವು

1. ಕೊಡಿ:
’ಕೊಡಿ’ ಹೇಳಿರೆ ಬಾವುಟ. ( / ಧ್ವಜ.  ದೇವಸ್ಥಾನದ ಎದುರು ನೆಟ್ಟ ಧ್ವಜಸ್ತಂಭ   ಕ್ಕೆ ಒಂದು ಬಳ್ಳಿ ನೇಲುಸಿ, ಆ ಬಳ್ಳಿಲೆ ಆಗಿ ಒಂದು ಬೇತಾಳನ ಚಿತ್ರ ಕೆತ್ತಿದ ಬೆಳ್ಳಿ ತಗಡಿನ ಏರುಸುದು.
ಮಾಷ್ಟ್ರುಮಾವ ಶಾಲೆಲಿ ಸ್ವಾತಂತ್ರ ದಿನ ಮಾಡಿಗೊಂಡು ಇದ್ದ ನಮುನೆಯೇ, ಆದರೆ ಇಲ್ಲಿ ತಂತ್ರಿ ಮಾಡುದು. ಅದರ ಒಟ್ಟಿಂಗೇ ಊರೋರ ಸಂಭ್ರಮವುದೇ ಏರುತ್ತು.
ತಂತ್ರಿಗೊ, ಅಡಿಗಳು ಅದರ ಧ್ವಜಾರೋಹಣ ಹೇಳುಸ್ಸು, ಊರೋರು ಅದರ ’ಕೊಡಿ ಏರುದು’ kopie horloges verkoop ಹೇಳುಸ್ಸು.
ಧ್ವಜ ಮೇಲೆ ಏರಿದ ಮತ್ತೆ ಅದು ಇಳಿವನ್ನಾರ ಊರಿಲಿ ಎಂತ ಶುಭಕಾರ್ಯವನ್ನುದೇ ಮಾಡವು. ಎಂತಕೇ ಹೇಳಿತ್ತುಕಂಡ್ರೆ – ಶುಭಕಾರ್ಯ ದೇವಸ್ತಾನಲ್ಲೇ ಅಪ್ಪಗ ಎಲ್ಲಾ ಆಸ್ತಿಕರುದೇ ಅಲ್ಲೇ ಸಂಭ್ರಮಿಸುತ್ತವಲ್ದೋ, ಮತ್ತೆ ಮನೆಲಿ ಆರಿದ್ದವು ಸೇರುಲೆ! – ಹಾಂಗೆ.
ಇಲ್ಲಿ ಮಕರಶೆಂಕ್ರಾಂತಿ ದಿನ ಉದಿಯಪ್ಪಗ ಕೊಡಿ ಏರುದು. ಐದು ದಿನ ಆ ಕೊಡಿ ಊರ ಹತ್ತು ಬೈಲಿಂಗೂ ಕಾಂಬ ಹಾಂಗೆ ಗೋಚಾರುಸುಗು.
ಊರ ಎಲ್ಲೊರುದೇ ಬಂದು ಸೇರ್ತವು, ಗೌಜಿ ಅಧಿಕೃತವಾಗಿ ಸುರುಆದ್ದರ ಧೃಢಪಡುಸಿಗೊಂಡು, ತಾವೂ ಭಾಗಿ ಆವುತ್ತವು.
ಈ ಸರ್ತಿ ಸಂಕಪ್ಪನ ಮಗ ಕೆಲವು ಪುಳ್ಳರುಗಳ ಒಟ್ಟಿಂಗೆ ಅಯ್ಯಪ್ಪನ ಜ್ಯೋತಿ ನೋಡ್ಳೆ ಹೋಯಿದು, ಹಾಂಗಾಗಿ ಅವರ ಗೌಜಿ ಇಲ್ಲೆ.
ಐದು ದಿನ ಆದಮತ್ತೆ ಈ ಕೊಡಿ ಇಳಿತ್ತದು. (ಈ ಒರಿಷ ಮಾಂತ್ರ : 2ನೇ ದಿನ ಗ್ರಹಣ ಬತ್ತಲ್ದಾ, ಹಾಂಗೆ ಗ್ರಹಣದ ಮೊದಲು ಒಂದರಿ ಕೊಡಿ ಇಳುಶುತ್ತವಡ. ಗ್ರಹಣ ಬಿಟ್ಟಮತ್ತೆ ಇರುವಾರ(ಪುನಾ) ಏರುಸುದು! ಲೋಕಕ್ಕೇ ಸೂತಕ ಅಲ್ದಾ, ಹಾಂಗಾಗಿ)

2. ಸಣ್ಣ ದೀಪ
ಕೊಡಿಯ ದಿನಂದಲೇ ಗೌಜಿ ಸುರು ಆದರೂ, ನಿಜವಾದ ’ಜಾತ್ರೆ’ಯ ಸ್ವರೂಪ ಬಪ್ಪದು ಮರದಿನಂದ.
ಗುಂಡದ ಒಳ ದೇವರಿರ್ತವು ಅಲ್ಲದೋ? ಅಡಿಗಳು ನಿತ್ಯವೂ ಪೂಜೆ ಮಾಡ್ತ ಕಲ್ಲಿನ ಮೂರ್ತಿ – ಅದಕ್ಕೆ ಪ್ರತಿಷ್ಟಾ ಮೂರ್ತಿ ಹೇಳುದಡ.
ಅದೇ ದೇವರ ಶಕ್ತಿಯ ಆಹ್ವಾನ ಮಾಡ್ತದು ಇನ್ನೊಂದು ಮೂರ್ತಿ ಇದ್ದು, ಕಂಚೋ – ಬೆಳ್ಳಿಯೋ – ಲೋಹದ ಪ್ರಭಾವಳಿಯ ನೆಡುಕೆ ಸಣ್ಣ ಮೂರ್ತಿ ಇಪ್ಪ ವೆವಸ್ಥೆ.
ಜಾತ್ರೆಯ ಸಮೆಯಕ್ಕೆ ಮಾಂತ್ರ ಹೆರ ತೆಗವದು ಅದರ. ಉತ್ಸವ ಮೂರ್ತಿ ಹೇಳುದು. ಕಲ್ಲಿನ ಮೂರ್ತಿಯ ಹಾಂಗೆ ಅಷ್ಟಬಂಧ ಹಾಕಿ ಅಂಟುಸಿದ್ದಲ್ಲ ಇದರ, ಹೊರ್ಲೆ ಎಡಿವ ಹಾಂಗೆ ಪೀಟ ಇಪ್ಪ ಲೋಹದ ಮೂರ್ತಿ.
ಒಂದು ಲೇಂಡುಲೈನು, ಒಂದು ಮೊಬೈಲು – ಹೇಳಿ ಆಚಕರೆ ಮಾಣಿ ಹೇದ! (’ಪೆರಟ್ಟು ಮಾತಾಡುತ್ಸು’ – ಹೇಳಿ ದೊಡ್ಡಮಾವ° ಬೈದವತ್ಲಾಗಿ). ಕಲ್ಲಿನ ಮೂರ್ತಿಯ ಅಡಿಗಳು ಹೊರ್ತರೆ ಇದು ಬೇಕಾತಿಲ್ಲೆ ಇದಾ! – ಹೇಳಿ ಅಜ್ಜಕಾನಬಾವನ ಯೋಚನೆ!
ಅಂತೂ ಈ ಉತ್ಸವ ಮೂರ್ತಿಗೆ – ಹೊರ್ಲೆಡಿತ್ತ ಹಾಂಗೆ ಬೆಲೇನ್ಸಿಲಿ (ಬ್ಯಾಲೆನ್ಸ್) ಚೆಂದಕೆ ಅಲಂಕಾರ ಮಾಡಿ, ಗುಂಡದ ದೇವರ ಎದುರು ಮಡುಗುತ್ತವು. ಅದಕ್ಕೂ ಆವಾಹನೆ ಆದ್ದದು ಅದೇ ಗೋಪಾಲಕೃಷ್ಣ ಇದಾ – ಎರಡು ಮೂರ್ತಿಗೂ ಒಟ್ಟಿಂಗೇ ಮಹಾ ಮಂಗಳಾರತಿ.

ಮಂಗಳಾರತಿಂದ ಮೊದಲು ಇಪ್ಪದೇ – ಬಲಿ. ಇಂದು ಅದರ ಸಣ್ಣದೀಪ ಹೇಳ್ತದು.
ಮಿಂದು ಶುದ್ಧಲ್ಲಿಪ್ಪ ಅಡಿಗಳು, ಸ್ವತಃ ಸಾಂಪ್ರದಾಯಿಕ ಅಲಂಕಾರ ಮಾಡಿಗೊಂಡು, ತಲಗೆ ಒಂದು ಮುಂಡಾಸು ಮಡಿಕ್ಕೊಂಡು, ಕೈ-ಸೊಂಟಕ್ಕೆಲ್ಲ ಆಭರಣಂಗಳ ಸಿಕ್ಕುಸಿಗೊಂಡು – ಸರ್ವಾಂಗಸುಂದರ, ಸರ್ವಾಲಂಕೃತ ದೇವರ ತನ್ನ ತಲೆಲಿ ಮಡಿಕ್ಕೊಂಡು ಗುಂಡಂದ ಹೆರ ಬಕ್ಕು, ಸುಮುಹೂರ್ತಲ್ಲಿ.
ಇಡೀ ದೇವಸ್ಥಾನದ ಸುತ್ತ ಇಪ್ಪ ಎಲ್ಲಾ ದೇವರ ಗಣಂಗಳನ್ನುದೇ ತೃಪ್ತಿಪಡುಸುತ್ತ ಸುಸಮಯ. ತಂತ್ರಿಗಳ ತಂತ್ರದ ಮೂಲಕ, ಚೆಂಡೆಯವರ ಪೆಟ್ಟಿನ ಒಟ್ಟಿಂಗೆ ದೇವಸ್ಥಾನದ ಮುಖ್ಯದೇವರು ಅಲ್ಯಾಣ ದೇವರ ಒಟ್ಟಿಂಗೆ ಕುಶಲೋಪರಿ ಮಾತಾಡುದಡ. ಮರದಿನದ ದೊಡ್ಡದೀಪದ ಗೌಜಿ ಇಲ್ಲದ್ರೂ, ಈ ಉತ್ಸವ ಮೂರ್ತಿಯ ಎದುರು ಎರಡು ದೀಪ ಹಿಡ್ಕೊಂಡು ತಂತ್ರ ತೂಗುತ್ತ ಕಾರ್ಯ ನೆಡಗು. ಚೆಂಡೆಪಟ್ಟಿನ ಎಡೆಲಿ ಅತ್ತಿತ್ತೆ ಮಾತಾಡಿದ್ದುದೇ ಕೇಳ ಇದಾ!
ಉತ್ಸವಮೂರ್ತಿಗೆ ದೀಪ ತೋರುಸಿಗೊಂಡು ದೇವಸ್ಥಾನಕ್ಕೆ ಸುತ್ತು ಬಪ್ಪ ಕಾರಣ ಈ ಹೆಸರು ಆಯಿಕ್ಕು, ಮರದಿನ ಹೆಚ್ಚುಕಮ್ಮಿ ಇದೇ ಕ್ರಮಂಗ, ಇನ್ನೂ ಗೌಜಿಲಿ ಬತ್ತಕಾರಣ ಇದರ ’ಸಣ್ಣ’ ದೀಪ ಹೇಳುದಾಯಿಕ್ಕು – ಹೇಳಿ ರಂಗಮಾವ ಹೇಳಿದವು.
ಕಳೀಯದ್ದ ಊರೋರುದೇ, ತೀರಾ ಆಸ್ತಿಕರಾದ ಪರಊರೋರುದೇ ಸೇರುಗು.
ಹೆಚ್ಚಿನವೆಲ್ಲ ಇರುಳಾಣ ಪೂಜೆ ಕಳುದು ಪಾಟಾಳಿ ಕೊಡ್ತ ಚೀಪೆಅವಲಕ್ಕಿ ತಿಂದು ಹೆರಡುಗು.
ಇಂದು ದೇವರು ತನ್ನ ಗಣಂಗಳೊಟ್ಟಿಂಗೆ ಮಾತಾಡಿ, ಸುತ್ತು ಬಂದು, ಗುಂಡದೊಳ ಬಂದು ಕೂದವು, ತೂಷ್ಣಿಲಿ (ಸಣ್ಣಮಟ್ಟಿಂಗೆ)!

3. ನೆಡುದೀಪ
ಇಂದು ಇನ್ನೊಂದರಿ, ಪುರುಸೋತಿಲಿ ಮಾತಾಡುಸಿಕ್ಕಿ ಬಪ್ಪ ದಿನ. ಅದರೊಟ್ಟಿಂಗೇ ತರತರದ ಸೇವೆಗಳ ಸ್ವೀಕರುಸುತ್ತ ದಿನ.

ಇಂದು, ದಾರಿ ನೆಡುಕೆ ದೀಪ ಇದ್ದು ಹೇಳಿ ಅರ್ತ ಅಲ್ಲ, ಜಾತ್ರೆಯ ಐದು ದಿನಲ್ಲಿ ಇಂದು ನೆಡೂಕಾಣದ್ದು, ಮೂರನೇ ದಿನ! ಕೈ ದೀಪದ ಬೆಣಚ್ಚಿಲಿ ಗೋಪಾಲಕೃಷ್ಣ ಹೊಳೆತ್ತ ದಿನ, ಹಾಂಗಾಗಿ ನೆಡುದೀಪ.
ಹೆಚ್ಚಿಂದೆಲ್ಲ ನಿನ್ನೇಣ ಹಾಂಗೇ, ಅಡಿಗಳು ಶುಭ್ರವಾದ -ಗಣೇಶಮಾವನ ಕಾಂಚಿವೇಷ್ಟಿಯ ಹಾಂಗಿರ್ತ – ದಪ್ಪಕಂಬಿಯ ವೇಷ್ಟಿ ಸುತ್ತಿಗೊಂಡು, ಅಲಂಕಾರ ಮಾಡಿಗೊಂಡು, ಮುಂಡಾಸು ಮಡಿಕ್ಕೊಂಡು ತೆಯಾರಕ್ಕು.

ತಂತ್ರಿಗೊ ಅವರ ಕೈಬಟ್ಳಿನ (ಕೊಂಬುಗಿಂಡಿಯ ಹಾಂಗೆ, ತಂತ್ರಿಗೊ ಹಿಡಿತ್ತದು) ಒಟ್ಟಿಂಗೆ ಸಿದ್ಧರಾಗಿಕ್ಕು.
ಅವರ ಒತ್ತು – ಪರಿಕರ್ಮಿ; ಒಂದು ಹೆಡಗೆಲಿ ನೇರಳೆ ಸೊಪ್ಪೋ – ಇತ್ಯಾದಿ ತಂತ್ರ ತೂಗಲೆ ಬೇಕಾದ ಪರಿಕರಂಗಳ ಹಿಡ್ಕೊಂಡು ತೆಯಾರಾಗಿಕ್ಕು.
ನಂಬೀಶಂಗೊ ಕೈದೀಪಕ್ಕೆ ಬಾಯಿಪೂಜ ಎಣ್ಣೆ ಹಾಕಿ, ನೆಣೆ ಜಾರದ್ದ ಹಾಂಗೆ ಒಂದು ಓಡಿನ ತುಂಡು ಮಡಗಿ ಹಿಡ್ಕೊಂಗು. ಕೈ ಒತ್ತುದಕ್ಕೆ ಒಂದು ಹರ್ಕುದೇ! ಅದರ್ಲಿ ಒಂದರ ಎಡಪ್ಪಾಡಿ ಬಾವಂಗೆ ಗುರ್ತ ಇದ್ದಡ, ಯೇವತ್ತೂ ಬತ್ತ ಕಾರಣ!
ಸಾರಡಿ ತೋಡಕರೆಯ ಓಟೆಬೆದುರಿಂಗೆ ಬಣ್ಣಬಣ್ಣದ, ಆಕಾರ ಆಕಾರದ ಬಾವುಟಂಗಳ ಮೊದಲೇ ಸಿಕ್ಕುಸಿ ಮಡಗ್ಗಿದಾ – ಮಕ್ಕೊ ಎಲ್ಲ ಆ ಬಾವುಟಂಗಳ ಹಿಡ್ಕೊಂಬಲೆ ಓಡುಗು.
ಬಾವುಟಂಗಳ ಒಟ್ಟಿಂಗೇ ಒಂದು ಬೇತಾಳ ಬೇಕಲ್ದಾ, ಬೇತಾಳನ ಒಳ ಹೋಯೆಕ್ಕಾದ ಮಡ್ಯೋಳ ತಲೆ ಒತ್ತುದಕ್ಕೆ ಮುಂಡಾಸೊಂದು ಬಿಗುದ್ದು ಕಟ್ಟಿಕ್ಕಿ ಬೇತಾಳನ ಒಳ ಹೋಕು.
ಬಿಂಗಿ ಮಕ್ಕೊಗೆ ಅಂತೂ ಗಂಬೀರ ದೇವರಿಂದ ದೊಗಳೆ ಬೇತಾಳನೇ ಹೆಚ್ಚು ಆಸಕ್ತಿ!

ಚೆಂಡೆಯವಕ್ಕೆ ಪುರುಸೊತ್ತೇ ಇಲ್ಲೆ! ಬಾರುಸುಗು, ಸಂಕಪ್ಪ ಕಳ್ಳುಕುಡುದು ಹೆಂಡತ್ತಿಗೆ ಬಾರುಸಿದ ಹಾಂಗೆ!
ಆವೇಶ ಬಂದ ಹಾಂಗೆ ಕಾಂಗು.
ಸುರುವಿಂಗೆ ಬಾವುಟ, ಮತ್ತೆ ಬೇತಾಳ, ಅದಾದ ಮತ್ತೆ ಚೆಂಡೆ, ಮತ್ತೆ ಕೈದೀಪದ ನಂಬೀಶಂಗೊ,ಮತ್ತೆ ತಂತ್ರಿಗೊ, ಮತ್ತೆ ದೇವರು – ಅಡಿಗಳ ತಲೆಲಿ!
ಅವರ ಹಿಂದೆ ಬಟ್ಟಮಾವಂದ್ರು, ಊರೋರು, ಮೋಗ್ತೇಸರ, ಅವು ಇವು, ಎಲ್ಲೊರುದೇ!
ಅಜ್ಜಿಯಕ್ಕೊ ಹೆಮ್ಮಕ್ಕೊ ಎಲ್ಲ ಸುತ್ತುಬಪ್ಪಲೆ ಇಲ್ಲದ್ರೆ ಗೋಪುರಲ್ಲೇ ಕೂದಂಡು ನೋಡುಗು. ದೇವರು ಬಪ್ಪಗ ಎದ್ದು ನಿಂದೊಂಡ್ರೆ ಆತನ್ನೇ!

ಇಡೀ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ದೇವ-ಗಣಂಗೊಕ್ಕೆ ಸಂತೃಪ್ತಿ ಮಾಡ್ಲೆ ಇಪ್ಪ ದಿನ!
ತಂತ್ರಿಗೊ ಗರ್ಭಗುಡಿಯ ಎದುರಂದ ಸುರುಮಾಡಿ ಸುತ್ತವೂ ಇರ್ತ ಸಣ್ಣ-ದೊಡ್ಡ ಆದಿಯಾಗಿ ಎಲ್ಲಾ ಬಲಿಕಲ್ಲುಗೊಕ್ಕೂ, ಉಪದೇವರುಗೊಕ್ಕೂ ’ತಂತ್ರ ತೂಗುಗು’.
ತಂತ್ರಿಗಳ ತಂತ್ರತೂಗುವಿಕೆ ಆದ ಹಾಂಗೇ ಚೆಂಡೆಯವು ಒಂದು ಹೆಜ್ಜೆ ಹಂದುಗು, ಅದರ ನೋಡಿ ಬೇತಾಳ, ಬೇತಾಳನೊಟ್ಟಿಂಗಿಪ್ಪ ಮಕ್ಕೊ – ಎಲ್ಲೊರುದೇ ಹಂದುಗು.
ದೇವರುದೇ ಒಂದು ಹೆಜ್ಜೆ ಮುಂದೆ ಹೋಕು. ಒಟ್ಟಿಂಗೆ ಊರವೆಲ್ಲೊರುದೇ!! ಎಷ್ಟು ಚೆಂದ! ಎಂತಾ ನಿಬದ್ಧ!!!

ತಂತ್ರ ತೂಗುವಗ ಗಣಂಗಳ ದಿನಿಗೆಳುಲೆ ತಯಂಬಕ (ನೆರಿಯದೊಡ್ಡಪ್ಪನವು ಇದರ ಪಟಹ ಹೇಳಿಯೂ ಹೇಳುಗು) ಬಡಿಗು.
ಮಾರಾಯನ (ಮಾರಾರ್- ಚೆಂಡೆಬಡಿವವರ ಕುಲ) ತೋಂಪಟ ತೋಂಪಟ ಪಟ್ಟಿಂಗೆ, ಆಯಾ ತಾಳಕ್ಕೆ ಸಂಬಂಧಿಸಿದ ಗಣಂಗೊ ಬಪ್ಪದಡ. ತಂತ್ರಿಗೊ ಕೊಟ್ಟ ಸಮರ್ಪಣೆಯ ಸ್ವೀಕರುಸಿ, ಅಲಂಕೃತ ಉತ್ಸವ ಮೂರ್ತಿ ನೋಡಿಕ್ಕಿ ಹೆರಡುದಡ!
ತಂತ್ರ ತೂಗಿ ಆದ ಮತ್ತೆ ತಂತ್ರಿಗಳ ಒಂದರಿಯಾಣ ಕೆಲಸ ಮುಗಾತು. ನಮಸ್ಕಾರ ಮಂಟಪಲ್ಲಿಯೋ – ಗುಂಡದೊಳವೋ – ಮಣ್ಣ ಕೂದುಗೊಂಗು.
ಮತ್ತೆ ಸುರು ಅಪ್ಪದು ’ಸುತ್ತು’ಗೊ.
ಸುತ್ತು ಹೇಳಿರೆ – ಆಗ ತಂತ್ರಿಗೊ ಇದ್ದ ಜಾಗೆಲಿ ಈಗ ಒಂದು ತಂಡ ಇಪ್ಪದು.
ಅದು ಚೆಂಡೆ ಬಡಿವೋರು ಆಯಿಕ್ಕು, ಮಂತ್ರ ಹೇಳುವೋರು ಆಯಿಕ್ಕು, ಸಂಗೀತ ಹಾಡುವೋರು ಆಯಿಕ್ಕು, ಓಲಗ (/ಸೇಕ್ಸೋಪೋನು ಇತ್ಯಾದಿ) ಉರುಗುತ್ತವು ಆಯಿಕ್ಕು, ಜಾಗಟೆ ಬಾರುಸುತ್ತವು ಆಯಿಕ್ಕು – ಎಂತದೂ ಆಯಿಕ್ಕು, ಎಂತದೇ ಆಯಿಕ್ಕು.
ಆಯಾ ದೇವಸ್ಥಾನದ ಶಕ್ತ್ಯಾನುಸಾರ, ದೇವರಿಂಗೆ ಕುಶಿ ಅಪ್ಪಲೆ ತರಾವಳಿ ಸುತ್ತುಗೊ.

ಸುರುವಿಂಗೆ ಚೆಂಡೆಸುತ್ತು. ಮಾರಾರುಗಳ ಚೆಂಡೆಯ ಲಯಬದ್ಧ ತಾಳಕ್ಕೆ ಎಂತವುದೇ ತಲೆದೂಗುಗು! ಎಷ್ಟು ಜೆನ ಇದ್ದರೂ ಪೆಟ್ಟು ಒಂದೇ ಬೀಳುಗಷ್ಟೆ.
ಆ ಚೆಂಡೆ ಪೆಟ್ಟುಗೊ ಅವರ ನೆತ್ತರಿಲಿ, ಸಂಸ್ಕಾರಲ್ಲಿ ಇರ್ತು. ಜಾತಿಪದ್ಧತಿಯ ಉಪಯೋಗಂಗಳಲ್ಲಿ ಇದುದೇ ಒಂದು!
ನಮ್ಮ ಊರಿಲಿ ಅವರ ಚೆಂಡೆಪೆಟ್ಟು ಕೇಳಿ ಕುಶಿಪಡದ್ದೋರು ಇಲ್ಲಲೇ ಇಲ್ಲೆ.
ಶೂನ್ಯಂದ ಆರಂಭ ಆಗಿ, ಲಯಬದ್ಧವಾಗಿ ಏರಿ, ತಾರಕಕ್ಕೆ ಎತ್ತಿ, ಮತ್ತೆ ನಿಧಾನಕ್ಕೆ ಇಳಿವಗ ಎಂತವಂಗೂ – ಇನ್ನೂ ರಜ ಹೊತ್ತು ಇರಳಿ – ಹೇಳಿ ಅನುಸದ್ದೆ ಇರ!
ಸಾರಡಿಪುಳ್ಳಿ ಅಂತೂ ಗೋಪುರಲ್ಲಿ ನಿಂದುಗೊಂಡು, ಚೆಂಡೆಪೆಟ್ಟಿನ ಇಂಪಿನ – ಬೆಂಗ್ಳೂರಿಲಿ ಇಪ್ಪ ಅದರ ಬಾವಂಗೆ, ಪೋನಿಲಿ ಕೇಳುಸಿದ್ದಡ!
ಅಜ್ಜಕಾನಬಾವನ ಮೊಬೈಲಿಂಗೆ ಪೋನುಬಪ್ಪಗ ಇದೇ ಚೆಂಡೆಪೆಟ್ಟು ಕೇಳ್ತು.
ಚೆನ್ನಬೆಟ್ಟಣ್ಣ ಕಾರಿಲಿ ಹೋಪಗ ಈ ಚೆಂಡೆಪೆಟ್ಟಿನ ಕೇಸೆಟ್ಟಿನ ಕೇಳಿಯೋಂಡು ಹೋಪದಡ!
ಚೆಂಬರ್ಪು ಅಣ್ಣ “ಎಷ್ಟಾರೂ ಯಕ್ಷಗಾನದ ಚೆಂಡಗೆ ಬಾರಪ್ಪ!” ಹೇಳಿದ°.


(2006ಕ್ಕೆ ನೆಡದ ಜಾತ್ರೆಯ ವೀಡ್ಯ, http://kanipura.com ಲಿ ನೇಲುಸಿಗೊಂಡು ಇತ್ತದು)

ಅದಾದ ಮತ್ತೆ ಮಂತ್ರಸುತ್ತು! ಚೆಂಡೆಪೆಟ್ಟಿನ ಇಂಪು ಆದ ಮತ್ತೆ ಮಂತ್ರದ ಇಂಪು!
ನೆರೆಕರೆಯ ಬಟ್ಟಮಾವಂದ್ರೆಲ್ಲ ಸೇರಿ, ಕೆಲವೆಲ್ಲ ಮಂತ್ರಂಗೊ, ಸೂಕ್ತಂಗೊ, ಹನುಸ್ಸುಗೊ ಎಲ್ಲ ಹೇಳಿಗೊಂಡು ಸುತ್ತು ಬಪ್ಪ ಗೌಜಿ!
ಮತ್ತೆ ಸಂಗೀತ, ಓಲಗ, ಬೇಂಡು – ಇತ್ಯಾದಿಗಳ ಸುತ್ತುಗೊ! ಒಂದರಿಂದ ಒಂದು ಬಹುರೂಪತೆ.!
ಊರ ಜಾತ್ರೆಗೆ ಊರವೆಲ್ಲ ಸೇರುಗು, ಅವಕ್ಕವಕ್ಕೆ ಎಡಿಗಾದ ಸೇವಾಕಾರ್ಯ ಮಾಡುಗು!
ಚೆ! ಎಷ್ಟು ಚೆಂದ!! ಎಂತಾ ಜಾತ್ಯತೀತತೆ!!

4. ಬೆಡಿ

ಕೊಡಿ ಏರಿ ಗೌಜಿ ಸುರು ಆತು. ದೀಪ ತೋರುಸಿ ದೇವರ ಸಂತೃಪ್ತಿಗೊಳುಸಿ ಆತು. ಇನ್ನು ಸಂಭ್ರಮ ಆಚರುಸುವ ಸಮಯ!
ನಿನ್ನೇಣ ಪೂಜೆ ಕಳುದು ಇಂದು ದೇವರು ಅಲಂಕೃತರಾಗಿಯೋಂಡು ಕಟ್ಟಪೂಜೆಗೆ ಹೇಳಿಗೊಂಡು ಹೆರಾಣ ವಸಂತಕಟ್ಟೆಗೆ ಬಕ್ಕು.
ವಸಂತಪೂಜೆಗಪ್ಪಗ ಹೆರ ಬೆಡಿಗೆದ್ದೆಲಿ ಬೆಡಿ ಹೊಟ್ಟುಸುದು ಸಂಪ್ರದಾಯ.
ಬೆಡಿ ಹೇಳಿರೆ ಎಂತರ?

ಇಲ್ಲಿ ಬೆಡಿ ಹೇಳಿರೆ ’ಸುಡುಮದ್ದು’ ಹೇಳಿ ಅರ್ಥ.
ದೊಡ್ಡ ಅಟ್ಟಿನಳಗೆಯಷ್ಟಕೆ ಇಪ್ಪ ಪಾತ್ರಂಗೊಕ್ಕೆ ಮದ್ದು ತುಂಬುಸಿ, ಬಿಗುದ್ದು ಕಟ್ಟಿ – ಮಾಡಿದ ಕದಿನಂಗಳ ಮೊದಲೇ ಕಾಲಿ ಜಾಗೆಲಿ ನೆಟ್ಟು ಮಡುಗ್ಗು. ಈ ಕೆಲಸ ಮಾಡ್ತ ಹೆಚ್ಚಿನವುದೇ ಮಾಪುಳೆಗೊ. ದೇವಸ್ತಾನಂಗಳ ಒಟ್ಟಿಂಗೆ ಅವಕ್ಕೆ ಇಪ್ಪ ಒಂದೇ ಒಂದು ಸಂಬಂದ ಹೇಳಿರೆ ಇದು. ಅಷ್ಟೇ!

ಬೆಡಿ ಹೇಳಿರೆ ಎಂತಾ ಬೆಡಿ!
ಯೋ ದೇವರೇ!
ಗಂಟೆ ಕಾಲ ನಿರಂತರವಾಗಿ ನಮುನೆ ನಮುನೆ ಶಬ್ದದ, ನಮುನೆ ನಮುನೆ ಬಣ್ಣದ – ವಿಚಿತ್ರ, ವಿಶೇಷ, ವಿಕಾರ, ವಿಸ್ಮೃತಿ!!
ಆಕಾಶಲ್ಲಿ ಬಣ್ಣದ ಚಿತ್ತಾರಂಗೊ, ಕೆಳ ಮಕ್ಕಳ ಚೀತ್ಕಾರಂಗೊ!!

ವಾಹ್! ಬೆಡಿ ಹೇಳಿರೆ ಬೆಡಿಯೇ ಅಪ್ಪ!
“ಮಧೂರು ಚೆಂಡೆ, ಕುಂಬ್ಳೆ ಬೆಡಿ” ಎರಡು ಪ್ರಸಿದ್ಧ ಅಡ ಮದಲಿಂಗೆ – ಶಂಬಜ್ಜ ಹೇಳುಗಡ.
ತುಂಬ ಮದಲಿಂಗೆ ಈ ಕ್ರಮ ಇತ್ತಿಲ್ಲೆ, ಅಂಬಗ ಎಲ್ಲ ’ಕಣಿಯಾರಾಯನ’ ಹೇಳಿಯೇ ಹೇಳಿಗೊಂಡು ಇದ್ದದು.
ಸದ್ಯದ ಇತಿಹಾಸದ ಯೇವದೋ ಒಂದು ಒರಿಷ ಇದು ಸುರು ಆಗಿ ಆಯನದ ಅವಿಭಾಜ್ಯ ಅಂಶ ಆಗಿ ಸೇರಿಯೊಂಡಿದು.
ಈಗ ಅದು ಎಷ್ಟು ಪ್ರಸಿದ್ಧಿ ಹೇಳಿರೆ, ಕುಂಬ್ಳೆ ಗೋಪಾಲಕೃಷ್ಣನ ಜಾತ್ರೆ -ಕಣಿಯಾರಾಯನ ಹೇಳಿದಷ್ಟೇ “ಕುಂಬ್ಳೆಬೆಡಿ” ಹೇಳಿಯೂ ಪ್ರಸಿದ್ಧಿ ಆಯಿದು.
ಕುಂಬ್ಳೆ ಹೊಡೇಣ ಜೋರಿನವರ ಕುಂಬ್ಳೆ ಬೆಡಿ ಹೇಳಿಯೂ ಹೇಳ್ತವಡ, ಕುಶಾಲಿಂಗೆ! – ಗಣೇಶಮಾವ ಹೇಳಿದ್ದು ಎನಗೆ!!

5. ಆರಾಟು
ಜಾತ್ರೆಯ ಮುಖ್ಯ ಅಂಶಂಗೊ ಮುಗಾತು.
ನಾಲ್ಕು ದಿನಲ್ಲಿ ಊರೋರು ಎಲ್ಲ ಬಂದು ಸೇರಿಗೋಂಡು ಒರಿಶಾವಧಿ ಆಚರಣೆಲಿ ಸೇರಿಗೊಂಡವು. ಇನ್ನು ಎಂತರ?
ದೊಡ್ಡ ಕಾರ್ಯ ಆದ ಮತ್ತೆ, ಪುನಾ ಮನೆ ಒಳದಿಕ್ಕೆ ಹೋಪ ಮದಲು ಮಿಂದಂಡು ಹೋವುತ್ತವಲ್ದಾ? ಹಾಂಗೆಯೇ, ಇಂದು ಚಾಮಿ ಮೀವ ದಿನ.
ಗೌಜಿಯ ಮೆರವಣಿಗೆಲಿ ಉತ್ಸವ ಮೂರ್ತಿ ಮೀವಲೆ ಹೋಪದು. ಅದಕ್ಕೆ ’ಆರಾಟು’ ಹೇಳುದು.[ಎಷ್ಟು ಹೇಳಿರೂ ಮೀವಲೆ ಹೋಗದ್ದೆ, ಮತ್ತೆ ತಡವಾಗಿ ಹೆರಟ್ರೆ ಪಂಜೆಕುಂಞಜ್ಜಿ ಪರಂಚುಗು – ’ಹ್ಞಾ, ಆರಾಟು ಹೆರಟತ್ತದಾ’ ಹೇಳಿ!]
ದೇವಸ್ತಾನದ ಎದುರಾಣ ಮಾರ್ಗಲ್ಲೆ ಆಗಿ ಸೀತ ಬಂದು, ದೇವಸ್ಯ ಡಾಕ್ಟ್ರ ಮನೆ ಹತ್ತರೆ ಆಗಿ ಬಂದು, ಕೆಲವು ಬಟ್ಟಕ್ಕಳ ಮನೆ ಎದುರೆ ಆಗಿ ಬಂದು, ಮುಂದೆ ಪೊಟ್ಟುಬಾವಿಯ ಕರೆಲಿ ತಿರುಗಿ, ಮಾರ್ಗಲ್ಲೆ ಆಗಿ ಶೇಡಿಗುಮ್ಮೆಲಿಪ್ಪ ಪೊಸವಣಿಕೆ ಅಜ್ಜನ ಕೆರೆಗೆ ಹೋಪದು.
ಅನಾದಿ ಕಾಲಂದಲೂ ಇದು ನೆಡದು ಬಂದದು.!
ಹೋಪಾಗ ಬಪ್ಪಗ ದೇವರ ನೋಡಿ ಸಂತುಷ್ಟರಕ್ಕು ಊರ ಜೆನಂಗೊ.

ದೇವರ ಒಟ್ಟಿಂಗೇ ಈ ಕಾರ್ಯಲ್ಲಿ ಸೇರಿದ ಹೆಚ್ಚಿನವುದೇ ಮಿಂದುಗೊಂಗು. (ಚೆಂಡೆಯವರ ಬಿಟ್ಟು!)
ಮತ್ತೆ ಬಂದು ದೇವರ ಒಳ ಹೊಕ್ಕರೆ ಇನ್ನಾಣ ಒರಿಶ ಒರೆಂಗೆ ಉತ್ಸವಮೂರ್ತಿಯ ನವಗೆ ಕಾಣ!

ಐದು ದಿನದ ಜಾತ್ರೆಯ ಸಂಕ್ಷಿಪ್ತ ಪರಿಚಯ ಅದು. ಎಡಪ್ಪಾಡಿಬಾವ ಹೇಳಿದ ಸುಮಾರು ಶುದ್ದಿ ಇದ್ದು ಅದರ್ಲಿ.
ಅಂತೂ, ಇಡೀ ಊರಿಂಗೆ ಊರೇ ಆಯೆತ ಮಾಡಿಗೊಂಡಿದು.
ಮಾರ್ಗದ ಕರೆಲಿ ದೀಪಂಗಳೋ, ಬಾಳೆದಂಡು ಬಲ್ಬೋ, ಜಿಗಿಜಿಗಿ ಮಾಲೆಗಳೋ, ಕೇಸರಿ ಬಣ್ಣದ ಪ್ಲೇಷ್ಟಿಕು ತುಂಡೋ, ಗುಣಾಜೆ ಮಾಣಿ ಕೊಟ್ಟ ಬಾವುಟಂಗಳೋ, ಕಮಾನುಗಳೋ, ಬೆದುರಿನ ದ್ವಾರಂಗಳೋ – ಹೋ ಹೋ ಹೋ – ಗೌಜಿಯೇ ಗೌಜಿ!
ಮೂರು ಮಾರ್ಗ ಸೇರ್ತಲ್ಲಿ ಅಂತೂ ಕಣ್ಣು ಬಿಡ್ಳೆಡಿಯ, ಬಿಟ್ರೆ ಮುಚ್ಚಲೆಡಿಯ – ಅಷ್ಟುದೇ ಗೌಜಿ!
ಕಾಸ್ರೋಡು, ಕೊಡೆಯಾಲಂದ ಬತ್ತ ಮಾರ್ಗವುದೇ ಹಾಂಗೇಡ, ಕುಂಬ್ಳೆ ಎತ್ತಿರೆ ಎಂತ ಹೊಸಬ್ಬಂಗೂ ಗೊಂತಕ್ಕಡ, ’ಎತ್ತಿತ್ತು’ ಹೇಳಿಗೊಂಡು.
ದೇವಸ್ತಾನದ ಒಳ ಎಷ್ಟು ಗೌಜಿಯೋ, ಹೆರವುದೇ ಹಾಂಗೇ ಇದ್ದಡ.
ಡೇನ್ಸೋ, ಸಿನೆಮದ ಡೇನ್ಸೋ, ಪದ್ಯಂಗಳೊ, ಸಭೆಗಳೋ – ಎಂತೆಲ್ಲ! ನೋಡೆಕ್ಕಾದ್ದೇ ಅಪ್ಪಾ!
ಹಳೆಮನೆ ಅಣ್ಣನೂ, ಯೇನಂಕೂಡ್ಳಣ್ಣನೂ ಪಟತೆಗದ್ದು ಸಿಕ್ಕುಗು. ಸಿಕ್ಕಿರೆ ನಿಂಗೊಗೂ ಕೊಡ್ತೆ, ಆತೋ?

ಒಪ್ಪಣ್ಣ ಹೇಳಿದ ಶುದ್ದಿ ರಜ ರಜ ವಿತ್ಯಾಸ ಆಗಿಪ್ಪಲೂ ಸಾಕು.
ಎಂತ ಮಾಡುದು, ಜಾತ್ರೆ ಹೇಳಿರೆ ಸಾಗರ – ಕುಂಬ್ಳೆ ಕಡಲಿನ ಹಾಂಗೆ! ಒಬ್ಬೊಬ್ಬಂಗೆ ಒಂದೊಂದು ನಮುನೆ ಕಾಣ್ತು…! 😉

ನಮ್ಮೋರ ತಲೆತಲಾಂತರಂದ ಸಂಪರ್ಕ ಇಪ್ಪ ಈ ದೇವಸ್ಥಾನಲ್ಲಿ ಈಗ ಜಾತ್ರೆಯ ಗೌಜಿ.
ಪುರುಸೊತ್ತು ಮಾಡಿ ಒಂದು ಗಳಿಗೆ ಹೋಗೆಡದೋ? ಮುತ್ತಿಗೆ ಬಾವನೂ ಬಕ್ಕು ಒಂದು ದಿನಕ್ಕೆ.
ಬೆಡಿಶಬ್ದ ಜೋರಾ, ನಮ್ಮ ಬೊಬ್ಬೆ ಜೋರಾ ನೋಡೆಡದೋ!
ಎಂತ ಹೇಳ್ತಿ ಭಾವಾ?

ಒಂದೊಪ್ಪ: ಮಾಪುಳೆಗೊ ಅತಿಹೆಚ್ಚು ದನಗಳ ಕೊಂಡೋಪ ದೊಡ್ಡಮಾರ್ಗದ ಕರೆಲೇ ದನಗಳ ಕಾವ ಈ ಗೋಪಾಲಕೃಷ್ಣ ಇಪ್ಪದು.
ನೋಡೋ° – ಅವಕ್ಕೆ ಎಂತಾರು ಮಾಡುಗು ಇವ°, ಸುಮ್ಮನೆ ಬಿಡ°. ಅಲ್ಲದೋ?

16 thoughts on “ಕಣ್ಯಾರ ಆಯನ / ಕುಂಬ್ಳೆ ಬೆಡಿ : ಗಳಿಗೆಗಾದರೂ ಹೋಗದ್ದೆ ಇರೆಡಿ!!

    1. ಹ್ಮ್, ಅಪ್ಪಡ!!
      ಕೆದೂರು ಡಾಗುಟ್ರು ನೋಡಿಕ್ಕಿ ಬಂದು ಹೇಳಿದವು!!
      ಅವು ದೇವರ ನೋಡ್ಳೆ ಬಂದದಲ್ಲಡ, ಉಪದ್ರದ ಮಾರಿಗೊ!!
      ಬೆಶಿ ಏರಿತ್ತು ಒಂದರಿ!

      1. ಈ ನಮೂನೆಯವಕ್ಕೆ ಎಲ್ಲೋರಿ೦ಗೂ ಒ೦ದು ಒ೦ದು ಅ೦ಡೆ ಮದ್ದು ಕುಡಿಶಿ ಬೋದ ತಪ್ಪುಸಿ ನಾಕು ನಾಕು ವರ್ಷ ಏಳದ್ದ ಹಾ೦ಗೆ ಮಾಡೆಕ್ಕು ಕಾಣ್ತು!!!!

    1. ಬೆಡಿಗೆ ಬಪ್ಪಲಾಯಿದಿಲ್ಲೆ ಚೆಂಬರ್ಪು ಅಣ್ಣ,
      ಮರದಿನ ಒಂದು ಜೆಂಬ್ರಕ್ಕೆ ಹೋಪಲೆ ಇತ್ತು, ಒರಕ್ಕು ಜಾಸ್ತಿ ಕೆಟ್ರೆ ಊಟ ಮೆಚ್ಚ ಹೇಳಿಗೊಂಡು,
      ಮನೆಲೇ ಕೂದೆ, ಸ್ವಸ್ಥಕೆ!!! 😉

  1. oppanna jatrege hogi baindano ummappa sari gontille.oppakka
    mechanna jatrenda bugge takku, gombe takku kadle mitai takku heli dari nodiye baki
    punyanda mitai ondu kandattu.oppanna gattigane sari.adare jatrendalo ellinda heli gontille.bapporusha baddi sametha vasulu madude oppanna aata.good luck.

  2. ಒಪ್ಪಣ್ಣೊ ಇಂದು ಕುಂಬ್ಲೆ ಬೆಡಿ ಅಲ್ದೊ.. ಬಾರೀ ಗೌಜಿ ಆತು ಅಲ್ದೊ… ಅಚೆಕರೆ ಮಾಣಿಯ ಬೆಡಿ ಮಾತ್ರ ರಜ್ಜ ಜಾಸ್ತಿ ಆತೊ ಕಾಣ್ತು..

    ನೀನು ಬರೆದ್ದು ಕಣ್ಯಾರ ಜಾತ್ರೆಗೆ ಬರದ್ದವಕ್ಕು ಒಂದರಿ ಕಣ್ಣ ಕರೆಲಿ ಆಂಜಿದ ಹಾಂಗೆ ಅಕ್ಕು ಭಾವ…

    ಬೆಡಿಗೆ ಬಂದವು ಅನುಭವ ಹಂಚಿಕೊಳ್ಳಿ.

  3. kanyarayanada bagge odi tumba kushi aatu.aanu hoidille oppanna hoidano heli keluva.ooringe bandare jaatrege chambikko heli gontille.
    ava kambale sikkire keluva.neenu hoideya oppanna heli.hodare a to zvarege ella vishaya heluttano heli matadsuva.
    jatrenda oppakkange kadle mitai tattano enta heli gontille.oppannange maravadu jaasti.hange heliddaste.entakku oppannane barali keli maataadsi noduva.
    good luck oppanna

  4. ಯಬ್ಬೋ….. ಎಂಥಾ ಬೆಡಿ ಮಾರಾಯಾ….. ಹೊಟ್ಟಿಯೆ ಹೋತು ಎನ್ನ ಕೆಮಿ.

    ಮತ್ತೆ ಭಾವಾ… ಆನು ರಜಾ ಬಿಸಿ ಇತ್ತಿದ್ದೆ… ಹಾಂಗಾಗಿ ಒಪ್ಪಣ್ಣನ ಹೊಸ ಮನೆ ಒಕ್ಕಲಿಂಗೆ ಬಪ್ಪಲಾತಿಲ್ಲೆ…. (ವೆಬ್ ಸೈಟ್)

    ಅತ್ತೆ ಸಮಾ ಬೈದವು… ಹಾಂಗಾಗಿ ಒಂದು ಗಳಿಗ್ಗೆ ಒಪ್ಪಣ್ಣನ ಮಾತಾದ್ಸಿಗೋಂಡು ಹೋಪ ಹೇಳಿ ಬನ್ದದು….

    ರಜಾ ಅರ್ಜೆಂಟಿದ್ದು ಭಾವಾ…. ನಾಳ್ತ ಕಾಂಬ…..

    1. ಓ ಆಚೆಕರೆ ಮಾಣಿ ಇದ್ದೆಯಾ ಮಾರಯಾ.. ಒಪ್ಪಣ್ಣನ ಪಟದ ಪುಟಲ್ಲಿ ಪುಟ್ಟಕ್ಕ ಬೈದ್ದು ಹೇಳಿ ಕಡಲ ಕರೆಲಿ ಮನುಗಿದ್ದು ನೋಡಿಕ್ಕಿ ಅತ್ಲಾಗಿ ಹೋದೆಯಾ ಹೇಳಿ ಅಂದಾಜು ಮಾಡಿತ್ತಿದ್ದೆ.. ಅಬ್ಬ ಸದ್ಯ ಬಂದೆ ಅನ್ನೆ.. ಬಚಾವ್….

      1. ಅವಂಗೆ ಸಮುದ್ರಲ್ಲಿದೇ ಮೊಳಪ್ಪೊರೆಂಗೆ ನೀರಪ್ಪದಡ..
        ಹಾಂಗಾಗಿ ಎದ್ದಿಕ್ಕಿ ಬಂದ, ಸೀತ..!!!

  5. ಓಹ್!

    ಒಪ್ಪಣ್ಣನ ಲೇಖನ ಓದಿ ಕಣ್ಯಾರ ಆಯನವ ಕಣ್ಣಾರೆ ಕಂಡ ಹಾಂಗೆ ಆತು. ಕುಂಬ್ಳೆ ಬೆಡಿ ನೋಡ್ಳೆ ಎಷ್ಟು ಚೆಂದ. ಹಾಂಗೆ ಮಧೂರು ಬೆಡಿಯುದೆ.

    ಜಾತ್ರೆ ಇರುಳು ಚಳಿಗೆ ಗ್ಯಾಸ್ ಲೈಟಿನ ಹತ್ರೆ ಕೂದು ಚಳಿ ಕಾಸೆಂಡು ಇದ್ದಿದ್ದು ನೆಂಪಾತು. ಸಂತೆ ಗೆದ್ದೆಲಿ ಮಾನ್ಯದ ಸೆಟ್ರ ಕಡ್ಳೆ ಮಿಟಾಯಿ, ಉದ್ದದ ಸಕ್ಕರೆ ಮೀಟಾಯಿ, ಬಚ್ಚಂಗಾಯಿ, ಬುಗ್ಗೆ, ಪ್ಲಾಸ್ಟಿಕ್ಕು ಕಾರುಗಳ ತೆಗವಲೆ ಅಪ್ಪಂಗೆ ಪೊದ್ದ್ರ ಕೊಟ್ಟದು ನೆಂಪಾತು. ಬೆಡಿ ದಿನ ಏಳು ಗಂಟೆಗೆ ಹೋದರೆ, ಮರದಿನ ಉದಿಯಪ್ಪಗಳೆ ಮನಗೆ ವಾಪಸ್ಸು. ಎಂತಾ ಗಮ್ಮತ್ತು.

    ಮರದಿನ ಶಾಲೆಲಿ ಗೆಣಂಗು ತೂಗುತ್ತಾ (ಒರಕ್ಕು ತುಗುತ್ತಾ) ಇದ್ದಿದ್ದು ನೆಂಪು ಮಾಡಿತ್ತು. ಬೆಡಿ ಹೇಳಿರೆ ಇನ್ನೊಂದು ಅರ್ಥವೂ ಇದ್ದು. ಜವ್ವನಿಗರಿಂಗೆ ಪ್ರತ್ಯೇಕ ಹೇಳೆಕಾಗಿಲ್ಲೆ. ಲೈನ್ ಹೊಡವ ಬಗ್ಗೆ, ಸರಿ ಗೊಂತಿಕ್ಕದು. ಅಂತೂ ಬೆಡಿ ದಿನ ಬೆಡಿಯೇ ಬೆಡಿ.

    ಒಪ್ಪಣ್ಣ ಈ ಸರ್ತಿ ಕುಂಬ್ಳೆ ಬೆಡಿಗೆ ಬಪ್ಪಲಿದ್ದೊ ? ಹೋಗದ್ರೆ ಹೇಂಗೆ ಅಲ್ದೊ ? ಒಳ್ಳೆದಾಗಲಿ !!

    1. ಬೊಳುಂಬು ಮಾವ ಬಯಿಂದಿರೋ ಕುಂಬ್ಳೆಬೆಡಿಗೆ?
      ಬಂದಿದ್ದರೆ ಒಳ್ಳೆ ಪಟ ತೆಗವಲಾವುತಿತು!!

      ಹ್ಮ್, ಗೇಸುಲೈಟಿನ ಕರೆಲಿ, ಕಾರದ ಚರುಂಬುರಿ ಎಂತಾ ರುಚಿ!! ಅಲ್ದಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×