ಲಡಾಯಿ ಕಟ್ಟಿದ ಲಾಡೆನ್ನಿನ ತಿಂಬಗ ಮೀನುಗಳೂ ಲಡಾಯಿ ಮಾಡಿಕ್ಕೋ?

May 6, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ದೇಂತಡ್ಕಲ್ಲಿ ಗವುಜಿ ಗಮ್ಮತ್ತು.
ಬೈಲಿಂದ ಗಣೇಶಮಾವ, ಆಚಮನೆ ದೊಡ್ಡಣ್ಣ, ಬಲ್ನಾಡುಮಾಣಿ – ಎಲ್ಲೋರುದೇ ಹೋಗಿತ್ತವಿದಾ.
ಅಯಿದು ಯಜ್ಞಂಗೊ ಇದ್ದಾಡ, ಅದಕ್ಕೆ ಐದು ಜೆನ ಅಧ್ವರ್ಯುಗೊ ಅಡ, ಗುರುಗೊ ಬತ್ತವಡ. ಅವು ಇದ್ದೇ ಪೂರ್ಣಾಹುತಿ ಅಪ್ಪದಾಡ –  ಹೀಂಗೆಲ್ಲ ಮಾತಾಡಿಗೊಂಡವು ಬೈಲಿಲಿ. ಹೇಳಿಕೆ ಕಾಗತ ಅಂತೂ ಮೊನ್ನೆಯೇ ಕಳುಸಿದ್ದ, ಬಲ್ನಾಡುಮಾಣಿ.
ಅಪ್ಪೋಂಬಗ, ನವಗೂ ವಿಶೇಷ ಅಗಳು ಗರ್ಪುತ್ತ ಕಾರ್ಯ ಮನೆಲಿ ಇತ್ತಿಲ್ಲೆ, ಹಾಂಗೆ ವನದುರ್ಗೆಯ ಗವುಜಿ ನೋಡಿಕ್ಕುವೊ- ಹೇಳಿಗೊಂಡು ಹೋತು.
ಜೆಂಬ್ರ ಗವುಜಿಲೇ ಕಳಾತು, ಭರ್ಜರಿ ಊಟವೂ ಕಳಾತು, ಮದ್ಯಾನ್ನಕ್ಕೆ.
ಎಲ್ಲೋರಿಂಗೂ ಕೊಶಿ ಆಗಿತ್ತು; ಗುಣಾಜೆಕುಂಞಿಯೂ ಬಯಂಕರ ಕೊಶಿಲಿತ್ತಿದ್ದ.
’ಕಳುದ ಓಟಿಂಗೆ ಬೆಂಗುಳೂರಿಂದ ಯೇವಯೇವ ಪಂಚಾತಿನೋರು ಎಷ್ಟೆಷ್ಟು ಜೆನ ಬಯಿಂದವು’ – ಹೇಳ್ತರ ಬರಕ್ಕೊಂಡ ಒಂದು ಕಾಗತವ ಕೈಲಿ ಹಿಡ್ಕೊಂಡು ಪಾಲಾರಣ್ಣಂಗೆ ತೋರುಸಿಗೊಂಡಿತ್ತಿದ್ದ. ಸುಮಾರು ಸರ್ತಿ ಬಿಡುಸಿ-ಮಡುಸಿ ಮಾಡಿದ ಕಾರಣ ಬೆಳಿಬಣ್ಣದ ಕಾಗತ ಕಂದು ಬಣ್ಣ ಆಯಿದು; ಕಂದು ಬಣ್ಣದ ಮಡಿಕ್ಕೆ ಕಪ್ಪಾಯಿದು.
ಅದಿರಳಿ.
ಕುಂಞಿಗೆ ಕೊಶಿಯೋ ಕೊಶಿ, ಎದುರಾಣ ಹಲ್ಲಿನ ಬುಡ ಒರೆಂಗೆ ಕಾಂಬ ನಮುನೆಲಿ ನೆಗೆ ಮಾಡಿಗೊಂಡಿತ್ತಿದ್ದ!
ಜೆಂಬ್ರದ ಕೊಶಿ ಅಲ್ಲ ಅದು, ಆಂತರ್ಯಂದ ಎಳಗಿ ಎಳಗಿ ಬತ್ತ ಕೊಶಿ!
ಪಕ್ಕೆನೆ ಅವನ ಕೈಲಿರ್ತ ಮೂರು ನಾಕು ಮೊಬಯಿಲಿ, ಒಂದಕ್ಕೆ ಸಮೋಸ ಬಂತು, ಚೊಯಿಂಕನೆ ಶಬ್ದ ಮಾಡಿಗೊಂಡು.
ಅದರ ಓದಿದೋನಂತೂ, ಕೊಶಿಲಿ ಒಂದರಿಯೇ ಹಾರಿದ, ನಾಕು ಮಾರು ಎತ್ತರಕ್ಕೆ! ತಟಪಟನೆ ಎರಡೂ ಕೈಯ ಹತ್ತೂ ಬೆರಳಿಲಿ ಟೈಪು ಮಾಡಿ ಉತ್ತರ ಕಳುಸಿದ.
ಎಂತ ಕುಂಞೀ, ಬಾರೀ ಕೊಶಿಲಿದ್ದೇ? – ಕೇಳಿದೆ.
ಲಾಡೆನ್ ಸತ್ತತ್ತಡಾ, ಈಗ ಎಲ್ಲೋರ ಸಮೋಸಲ್ಲಿಯೂ ಅದೇ ಶುದ್ದಿ… – ಹೇಳಿದ.
~
ಅಪ್ಪು, ಗುಣಾಜೆಮಾಣಿಯ ಮೊಬಯಿಲಿಂಗೂ ಸಮೋಸಂಗೊ ಬತ್ತು.
ಚೆನ್ನೈಭಾವ ಹತ್ತೈವತ್ತು ಜೆನಕ್ಕೆ ಕಳುಸುತ್ತವಾಯಿಕ್ಕು; ದೊಡ್ಡಬಾವ ನೂರು ಜೆನಕ್ಕೆ ಕಳುಸುತ್ತವಾಯಿಕ್ಕು; ಎಡಪ್ಪಾಡಿಬಾವ ಒಂದು ಸಾವಿರ ಜೆನಕ್ಕೆ ಕಳುಸುತ್ತವಾಯಿಕ್ಕು; ಆದರೆ ಗುಣಾಜೆಮಾಣಿಯ ಒಯಿವಾಟೇ ದೊಡ್ಡದು!
ಎರಡು-ಎರಡೂವರೆ ಸಾವಿರ ಜೆನರ ನಂಬ್ರ ಇದ್ದು. ಒಬ್ಬನೇ ಒಬ್ಬನತ್ರೂ ನಂಬ್ರ ಆಗದ್ದ ಕಾರಣ ಒಳ್ಳೆ ಸಂಪರ್ಕ ಇದ್ದು.
ಶೋಬಕ್ಕನ ನಂಬ್ರಂದ ತೊಡಗಿ, ನೆಗೆಮಾಣಿಯ ನಂಬ್ರದ ಒರೆಂಗೆ ಎಲ್ಲೋರದ್ದೂ – ಎಲ್ಲಾ ನಂಬ್ರಂಗಳೂ ಇಕ್ಕು.
ಎಲ್ಲಾ ನಂಬ್ರಂಗೊ ಹೇಳಿರೆ – ಅಪ್ಪು, ಆಚೊರಿಶ ಉಪಯೋಗುಸಿಗೊಂಡಿದ್ದ ಹಳೇ ನಂಬ್ರವುದೇ ಕಾಂಗು, ಅವನ ಮೊಬಯಿಲಿಲಿ.
ಹಾಂಗೇ ಎರಡೂವರೆ ಸಾವಿರ ಆದ್ದು, ಹೇಳಿ ಒಂದೊಂದರಿ ನೆಗೆಮಾಣಿ ನೆಗೆಮಾಡ್ಳಿದ್ದು.
ಅದಿರಳಿ, ಅವಂಗೆ ಸಮೋಸ ಸಂಪರ್ಕ ಇದ್ದು ಎಲ್ಲೋರ ಹತ್ತರೂ!
~
ಏನಾರು ಒಂದು ಶುದ್ದಿ ಆದರೆ ಕೂಡ್ಳೇ ಸಮೋಸ ಮಾಡಿ ಹಂಚುತ್ತದು ಅವನ ಇಷ್ಟದ ಕಾರ್ಯಂಗಳಲ್ಲಿ ಒಂದು.
ಹಾಂಗೆ, ಮೊನ್ನೆಯೂ ಸಮೋಸ ಮಾಡಿದ್ದ, ಹಂಚಿಯೂ ಹಂಚಿದ್ದ!
ಎಲ್ಲೋರದ್ದುದೇ ಉತ್ತರ ಬಂದುಗೊಂಡಿತ್ತು, ಕೊಶಿ ಆತು ಕೊಶಿ ಆತು ಹೇಳಿಗೊಂಡು. ಪ್ರತಿ ಉತ್ತರ ನೋಡುವಾಗಳೂ ಗುಣಾಜೆಮಾಣಿಯ ಹೊಟ್ಟೆತುಂಬಿಗೊಂಡಿತ್ತು; ಬೆಳ್ಟಿಂದ ಮತ್ತೂ ಒಂದಂಗುಲ ಹೆರ ಬಪ್ಪದು ಗೊಂತಾಗಿಂಡಿತ್ತು!
ಹೇಳಿದಾಂಗೆ, ಬೈಲಿಲಿ ಎಲ್ಲೋರಿಂಗೂ ಕೊಶಿ ಆವುತ್ತ ಶುದ್ದಿಯೇ ಲಾಡೆನ್ ಸತ್ತಶುದ್ದಿ!
~
ಒಪ್ಪಣ್ಣಂಗೆ ಲಾಡೆನ್ನಿನ ಕಂಡು ಗೊಂತಿಲ್ಲದ್ದರೂ, ಕೇಳಿ ಅರಡಿಗು, ರಜರಜ.
ಅಂದೊಂದರಿ ಇರುಳು ಟೀವಿಲಿ ಭಕ್ತಕುಂಬಾರ ಸಿನೆಮ ಇದ್ದು ಹೇಳಿ ತರವಾಡುಮನಗೆ ಹೋಗಿತ್ತಿದ್ದೆ. ಆ ದಿನ ಟೀವಿಯವು ಸಿನೆಮ ತೋರುಸುದರ ನಿಲ್ಲುಸಿ, ಎರಡು ದೊಡಾ ಕಟ್ಟೋಣ ಬೀಳ್ತದರ ತೋರುಸಿತ್ತಿದ್ದವು.
ಇಡೀ ವಿಶ್ವಕ್ಕೇ  ಪೆಟ್ಟುಕೊಟ್ಟ ದೊಡಾ ಘಟನೆ ಅಡ ಅದು, ಆದ ಕಾರಣ ಎಲ್ಲಾ ಟೀವಿಲಿಯೂ ಅದೇ ವೀಡ್ಯವ ಕೊಟ್ಟುಗೊಂಡಿತ್ತಿದ್ದವು.
ಮತ್ತೆ ನೋಡಿರೆ, ವಿಚಾರಣೆ ಮಾಡಿಪ್ಪಗ ಗೊಂತಾತು, ಅದು ಈ ಲಾಡೆನ್ನಿನ ಕೆಲಸ – ಹೇಳಿಗೊಂಡು.
~
ಗುಣಾಜೆಕುಂಞಿಗೆ ಕೃಷ್ಣಬಸ್ಸಿಲಿ ಪೆರ್ಣೆಂದ ಬದಿಯಡ್ಕಕ್ಕೆ ಟಿಕೇಟುಕ್ರಯ ಎಷ್ಟು – ಅರಡಿಯ, ಆದರೆ ಕಾಸ್ರೋಡಿಲಿ ಮಾಪ್ಳೆಓಟಿನ ಪರ್ಸೆಂಟು ಎಷ್ಟು – ಹೇಳ್ತದು ಅರಡಿಗು.
ಹಾಂಗೆಯೇ, ನವಗೆ ಲಾಡೆನ್ನಿನ ಬಗ್ಗೆ ರಜ್ಜವೇ ಅರಡಿಗಷ್ಟೆ, ಆದರೆ ಗುಣಾಜೆಮಾಣಿಗೆ ಹಾಂಗಲ್ಲ, ಪ್ರತಿ ಉಪದ್ರ ಘಟನೆಗಳ ಇಸವಿ, ದಿನ, ನಿಮಿಷಂಗಳನ್ನೂ ಸೇರುಸಿ – ನಿಖರವಾಗಿ ಹೇಳುಲೆ ಅರಡಿಗು.
ಉಂಡಿಕ್ಕಿ ಕುರ್ಶಿಲಿ ಕೂದುಗೊಂಡಿಪ್ಪಗ , ಗುಣಾಜೆ ಮಾಣಿ ಹೇಳಿದ ಕೆಲವು ವಿಷಯಂಗೊ ಭಾರೀ ಕುತೂಹಲ ತಂದತ್ತು.
ಪೂರ ಅಲ್ಲ, ನೆಂಪಾದಷ್ಟರ ಬೈಲಿಂಗೆ ಹೇಳುವೊ- ಹೇಳಿ ಕಂಡತ್ತು.
~

ಒಸಾಮ ಬಿನ್ನು ಲಾಡೆನ್ನು

ಒಸಾಮ ಬಿನ್ ಲಾಡೆನ್ ಹೇಳಿರೆ – ಮೂಲತಃ ಸೌದೀ ಅರೇಬಿಯದ ವೆಗ್ತಿ ಅಡ.
ಅದರ ಅಪ್ಪ ಯೇವದೋ ಹೆಲಿಕಾಪ್ಟರು ಹಾರುಸಿಂಡು ಹೋಪಗ ರೆಂಕೆಕೊಡಿ ತುಂಡಾಗಿ ಉದುರಿತ್ತಡ.
ಹಾಂಗಾಗಿ, ಪರಿಹಾರ – ಹೇಳಿಗೊಂಡು ದೊಡಾ ಪೈಶೆ ಸಿಕ್ಕಿತ್ತಡ ಅವರ ಕುಟುಂಬಕ್ಕೆ.
ಒಂದೇ ಸರ್ತಿ ಅಷ್ಟು ದೊಡ್ಡ ಪೈಸೆ ಬಪ್ಪಗ ಲಾಡೆನ್ನಿಂಗೆ ಎಂತ ಮಾಡೇಕು ಗೊಂತಾಯಿದಿಲ್ಲೇಡ.
ಅಲ್ಪನಿಗೆ ಐಶ್ವರ್ಯ ಬಂದಾಗ – ಹೇಳಿ ಒಂದು ಗಾದೆ ಇದ್ದಡ ಅಲ್ಲದೋ – ಹಾಂಗಾತಡ.
ಆ ದೊಡ್ಡ ಪೈಸೆಲಿ ಒಂದಂಶ ಧರ್ಮಕ್ಕೂ, ಇನ್ನೊಂದಂಶ ಒಯಿವಾಟಿಂಗೂ ಹಾಕಿತ್ತಡ. ಹಾಂಗಾಗಿ ಪೈಸೆ ಬೆಶಿ ಗೊಂತಾತಿಲ್ಲೆ.
ಕಾಸ್ರೋಡಿಲಿ ಹೆಚ್ಚಿನ ಮಾಪುಳೆಗೊಕ್ಕೂ ಇದೇ ಮೆಂಟೇಲಿಟಿ – ಹೇಳಿದ ಕುಂಞಿ.
ಅದಿರಳಿ.
~
ಹೇಂಗೂ ಪೈಶೆ ಬೇಕಾದಷ್ಟಿದ್ದಿದಾ, ಹಾಂಗಾಗಿ ಉಂಬಲಿಲ್ಲದ್ದ ಮಾಪಳೆಗೊ ಎಲ್ಲ ಅದರ ಕಾಲಬುಡಕ್ಕೆ ಪೈಸೆ ಆಶೆಗೆ ಬಂದವಡ.
ಅವರ ಉಪಯೋಗಿಸಿಂಡು, ’ದೊಡಾ ಸಂಘಟನೆ’ ಹೇಳ್ತರ ಮಾಡಿಗೊಂಡು, ಬೆಡಿ-ಬೋಂಬು ಮಡಿಕ್ಕೊಂಡು ಮಹಾ ’ಕಂಟ’ಕ ಕಾರಿ ಆಗಿತ್ತಡ.
ಅದೇ ಸಮೆಯಕ್ಕೆ, ರಷ್ಯಾದೋರು, ಅವರ ಜಾಗೆಕರೇಲಿ ಇರ್ತ ಮಾಪ್ಳೆಜಾಗೆಗೆ ಬೇಲಿ ಹಾಕಲೆ ಹೆರಟವಡ – ಅದೇ ಅಪ್ಗಾನಿಸ್ತಾನವ.
ಆ ಸಮೆಯಕ್ಕೆ, ನಮ್ಮ ಅಮೇರಿಕಾದೋರು “ಬಿಡ್ಳಾಗ” ಹೇಳಿಗೊಂಡು, ಈ ಲಾದೆನ್ನಿನ ಕೆಮಿಗೆ ಗಾಳಿ ಊಪಿದವಡ.
ನೀನು ಉಶಾರಿ ಅಲ್ಲದೋ – ಹೋಗಿ ಅಲ್ಲಿ ಜೆನರ ಗುಂಪು ಕಟ್ಟು, ರಷ್ಯಾದವರ ಬಡುದು ಓಡುಸು – ಹೇಳಿಗೊಂಡು.
ರಜ ಪೈಸೆಯೂ ಸಿಕ್ಕುತ್ತು, ಸಂಘಟನೆಯೂ ಬೆಳೆತ್ತು! ಧರ್ಮಕ್ಕೇ ದೊಡ್ಡ ಜೆನ ಅಪ್ಪಲಕ್ಕಿದಾ!!
ಅಕ್ಕಕ್ಕು – ಹೇಳಿಗೊಂಡು ಸಂತೋಷಲ್ಲಿ ಒಪ್ಪಿಗೊಂಡತ್ತಡ.
ಹೇಂಗೂ ಧರ್ಮದ ಆಧಾರಲ್ಲಿ ಬೆಳೆಸಿದ ಸಂಘಟನೆಯ ಅದೇ ಆಧಾರಲ್ಲಿ ಬೆಳೆಶಿತ್ತಡ.
ಇಸ್ಲಾಮು ಹೇಳಿರೆ ಅಲ್ಲಾಹು ಹೇಳಿದ ಅತಿ ದೊಡ್ಡ ಸತ್ಯ. ಬೇರೆ ಯೇವ ಧರ್ಮದೋರು ಸಿಕ್ಕಿರೂ ಬೆಡಿಮಡಗಿ! ಇದಾ – ನಿಂಗೊಗೆ ಧರ್ಮಕ್ಕೇ ಬೆಡಿ ಕೊಡ್ತೆ – ಹೇಳಿ ಮನೆ ಮನೆಗೆ ಬೆಡಿಕೊಟ್ಟತ್ತಡ, ಧರ್ಮಾರ್ಥ, ಷ್ಟೋರಿಲಿ ಅಕ್ಕಿ-ಗೋಧಿ ಕೊಡ್ತ ನಮುನೆ.
ಮುಂದೆ ಅದೇ ಸಂಘಟನೆ ಬೆಳದು ’ತಾಲೀಬಾನು’ ಹೇಳಿ ಆತಡ!’ ಹೇಳುವಗ ಗಾಡಿಬ್ರಾಯಿಯ ಮಗಳು ’ಐಶಾಬಾನು’ವಿನ ನೆಂಪಾತೊಂದರಿ ಒಪ್ಪಣ್ಣಂಗೆ!
~
ಹಾಂಗೆ ಬೆಳದ ತಾಲಿಬಾನಿನೋರು, ರಷ್ಯಾದೋರ ಬೇಟೆ ಮಾಡಿ, ಸೋಲುಸಿಯೇ ಬಿಟ್ಟವಡ!
ಆದರೆ ಮುಂದೆ ಅದರ ನುಂಗಲಕ್ಕು ಹೇಳಿ ಗ್ರೇಶಿದ ಅಮೇರಿಕಕ್ಕೆ ಎಡಿಗಾತೋ? – ಇಲ್ಲೆ. ಈ ಮಾಪುಳೆಬುದ್ಧಿ ಬಿಡೆಕ್ಕನ್ನೆ! ಅಮೇರಿಕದೋರಿಂಗೇ ಬೆಡಿಮಡಗಿದವಡ ಮತ್ತೆ!!
ಹಾಂಗಾಗಿ, ಅವ್ವೇ ಮಡಗಿದ ಮೊಟ್ಟೆ ಹಾವಾಗಿ ಅವಕ್ಕೇ ಕಚ್ಚಿತ್ತು – ಹೇಳಿದ ಗುಣಾಜೆಮಾಣಿ
~

ಅಮೆರಿಕದ ಗೋಪುರಂಗಳ ಹೊತ್ತು(ಟ್ಟು)ಸಿದ್ದು

ಜಗತ್ತಿಲಿ ಶಾಂತಿಪ್ರಿಯ ಮಾಪ್ಳೆಧರ್ಮವ ಬಿಟ್ಟು ಬೇರೆ ಎಲ್ಲವನ್ನೂ ಮುಗುಶೇಕು, ಶಾಂತಿಧರ್ಮ ಮಾಂತ್ರ ಇರೇಕು ಹೇಳಿಗೊಂಡು ಒಕ್ಕೊರಲಿನ ಧ್ವನಿ ಬೆಳೆಶಿತ್ತಡ. ನಮ್ಮ ಸನಾತನ ಧರ್ಮವ, ಕ್ರಿಸ್ತ ಧರ್ಮವ, ಅಮೇರಿಕವ, ಯಹೂದಿ ಧರ್ಮವ,– ಒಟ್ಟಾಗಿ ಬೇರೆ ಎಲ್ಲವನ್ನುದೇ ಸಂಪೂರ್ಣ ನಿರ್ನಾಮ ಮಾಡೇಕು – ಹೇಳ್ತ ಉದ್ದೇಶ ಎಲ್ಲ ಮಾಪ್ಳೆಗಳ ಮನಸ್ಸಿಲಿ ತುಂಬುಸಲೆ ನೋಡಿತ್ತಡ.
ಅದಕ್ಕೆ ಪೂರಕವಾಗಿ, ಅಶೋಕನ ಕಾಲಂದ ಬಾಮಿಯಾನಿಲಿ ಶಾಂತಿಂದ ನಿಂದ ಬುದ್ಧನ ವಿಗ್ರಹವ ಪಿರೆಂಗಿ ಮಡಗಿ ಒಡದವಡ! ಪಾಪಿಗೊ.
ಇದರೆಡಕ್ಕಿಲಿ ಎಂತಾತು ಹೇಳಿರೆ, ಅವರ ಒಂದು ಕಳ್ಳಮುಕ್ರಿಯ ನಮ್ಮೋರು ಹಿಡುದು ಜೈಲಿಂಗೆ ಹಾಕಿದವಡ.
ಅದಕ್ಕೇ ಅದ, ಒಂದು ವಿಮಾನವ ಹಿಡುದು, ಅಪುಗಾನಿಸ್ತಾನಕ್ಕೆ ತೆಕ್ಕೊಂಡು ಹೋಗಿ, ಬಿಡುಸುವನ್ನಾರ ಒತ್ತೆ ಮಡಗಿಂಡದು – ಹೇಳಿದ ಕುಂಞಿ. ಒತ್ತೆ ಮಡಗಿ ಬಿಟ್ಟಿದವಡ. ಬಿಟ್ಟದು ಓಜುಪೇಯಿ ಅಜ್ಜನ ಸರ್ಕಾರ ಆದ ಕಾರಣ ಜಾಸ್ತಿ ಬೈದ್ದನಿಲ್ಲೆ! ಆದರೆ ಅವಂಗೆ ಪಿಸುರು ಬಂದದು ಅವನ ಮೋರೆ ನೋಡುವಗ ಗೊಂತಾಗಿಂಡು ಇತ್ತು!
ದೊಡಾ ಅಪಘಾತ – ಹೇಳಿಗೊಂಡು, ಅಮೇರಿಕದ ಎರಡು ಗೋಪುರಕ್ಕೆ ವಿಮಾನವ ತೆಕ್ಕೊಂಡು ಹೋಗು ಹೆಟ್ಟುಸಿದ್ದಡ!
ಅಪ್ಪಪ್ಪು – ಒಪ್ಪಣ್ಣಂಗೆ ನೆಂಪಾತದು!
~
ಇಷ್ಟರ ಒರೆಂಗೆ ಸುಮ್ಮನೆ ಕೂದಿದ್ದ ಅಮೇರಿಕಕ್ಕೆ ಬೆಶಿನೀರು ಬಪ್ಪಲೆ ಸುರು ಆತಲ್ಲದೋ – ಇನ್ನು ಇವರ ಮಡಗಿರೆ ಆಗ – ಹೇಳಿಗೊಂಡು, ದುಷ್ಟ ಸಂಹಾರಕ್ಕೆ ಹೆರಟತ್ತಡ. ಅವ್ವೇ ಬೆಳೆಶಿದ ಕಳ್ಳಂಗೊ ಆದ ಕಾರಣ, ಆರೆಲ್ಲ ಕಳ್ಳಂಗೊ ಹೇಳಿ ಬೇಗ ಗೊಂತಿರ್ತಿದಾ!
ಹಾಂಗೆ, ಅಂದಿಂದಲೇ ಲಾಡೆನ್ನಿನ, ಅದರ ಪೈಕಿಯೋರ ಕೊಂದು ಲೋಕಲ್ಲಿ ಶಾಂತಿ, ನೆಮ್ಮದಿ ಬೆಳೆಶೇಕು – ಹೇಳಿಗೊಂಡು ಹೆರಟಿತ್ತಿದ್ದವಡ.
ಕಣ್ಣು ಮುಚ್ಚಿ ನಿಂದಿದ್ದ ಬುದ್ಧ ಕಣ್ಣು ಒಡದ್ದೇ ಒಡದ್ದು, ತಾಲಿಬಾನು ಹೊಡಿಆತು.
~
ಆ ಸಮಯ ಮೊನ್ನೆ ಒದಗಿ ಬಂತಡ!
ಅಬ್ಬ! ’ಎಲ್ಲಿದ್ದೋ ಎಂಗೊಗರಡಿಯ’ ಹೇಳಿ ಬೆಲಕ್ಕಿಂಡಿದ್ದ ಪಾಕಿಸ್ತಾನ ಚೆಂದಕೆ ಹಸೆಲಿ ಒರಗಿಂಡಿಪ್ಪಗ, ಅವಕ್ಕೇ ಗೊಂತಿಲ್ಲದ್ದೆ ಅವರ ದೇವರೊಳಂಗೆ ಬಂದು, ಉಪಾಯಲ್ಲಿ ಹುಗ್ಗಿ ಕೂದ ಲಾದೆನ್ನಿನ ಮನೆಗೆ ಇಳುದು, ಬೆಡಿ ಹೊಟ್ಟುಸಿಯೇ ಬಿಟ್ಟವಡ!
ಮನೆ ಹೇಳಿತ್ತುಕಂಡ್ರೆ ಸಾಮನ್ಯದ ಮನೆ ಅಲ್ಲಡ ಅದು. ದೊಡಾ ಅರಮನೆಯ ನಮುನೆಯೇ ಇದ್ದತ್ತಡ.
ಇಡೀ ಮನೆಗೆ ಮೂರೇ ಕಿಟಿಕಿ ಅಡ! ಒಳ ಇಪ್ಪೋರು ಆರೂ ಹೆರ ಬಪ್ಪಲಿಲ್ಲೆಡ. ಅರಮನೆ ಆಗಿದ್ದರೂ ಒಳ ಇದ್ದೋರಿಂಗೆ ಅದು ಸೆರೆಮನೆಯೇ ಆಗಿದ್ದಿಕ್ಕಟ್ಟೆ!
ಮನೆಯ ಸುತ್ತಲೂ ಬೆಡಿ ಹಿಡ್ಕೊಂಡ ಅದರ ಬಂಟಂಗೊ ಯೇವತ್ತೂ ಇಕ್ಕಡ, ಬೊಳುಂಬುಮಾವನ ಬೇಂಕಿನ ಎದುರು ಓಚುಮೇನು ಇದ್ದ ನಮುನೆ.
ಅಷ್ಟು ದೊಡ್ಡ ಮನೆಲಿ ಆರು ಇದ್ದಿದ್ದವು ಹೇಳಿ ಹತ್ತರೆ ಇದ್ದೋರಿಂಗೆ ಆರಿಂಗೂ ಅರಡಿಯ ಅಡ!
ಉಶಾರಿಗೊ, ಅಮೇರಿಕದೋರು – ಹೇಳಿದ ಒಂದರಿ ಕೊಶೀಲಿ.
~
ಅಷ್ಟಾಗಿ ಮತ್ತೂ ಒಂದು ವಿಷಯ ಹೇಳಿದ ಅವ.
ಲಾಡೆನ್ನು ಸತ್ತ ಮತ್ತೆ, ಅದರ ಬೊಜ್ಜ, ಶಪಿಂಡಿ ಎಲ್ಲ ಆರು ಮಾಡ್ತ, ಮಾಪುಳೆ ಓದುತ್ತದರ ಒಂದರಿ ಓದಿದ ಹಾಂಗೆ ಮಾಡಿ, ಬೆಳಿಒಸ್ತ್ರ ಮುಚ್ಚಿ, ಸೀತ ತಂದು ನಮ್ಮ ಕುಂಬ್ಳೆ ಕಡಲಿಂಗೆ ಇಡ್ಕಿದವಡ!!!!
ಇನ್ನು, ಅದರ ಹುಗುದಲ್ಲಿ ದೊಡಾ ಸ್ಮಾರಕವೋ ಮತ್ತೊ – ಕಟ್ಟಿ ಅದಿನ್ನು ಲೋಕಪ್ರಸಿದ್ಧ ವೆಗ್ತಿ ಅಪ್ಪದು ಬೇಡ ಹೇಳ್ತ ಉದ್ದೇಶಂದಾಗಿ ಹಾಂಗೆ ಮಾಡಿದ್ದಡ.
ಸಮುದ್ರಲ್ಲಿ ತೇಲಿಂಡು ಇನ್ನು ಕಾಸ್ರೋಡಿಂಗೆ ಎತ್ತದ್ದರೆ ಸಾಕು ಈ ರಕ್ತಬೀಜಾಸುರ – ಹೇಳಿದ ಕುಂಞಿ.
ಅವ ಈ ಎಲ್ಲ ಘಟನೆಗಳೊಟ್ಟಿಂಗೆ ಇಸವಿಗಳನ್ನೂ ಹೇಳಿದ್ದ, ಆದರೆ ಅದೆಲ್ಲ ನವಗರಡಿಯ.
~
ಇಷ್ಟು ಒಂದೇ ಉಸುಲಿಲಿ ಹೇಳಿಕ್ಕಿ, ಒಂದು ಕುಶಾಲಿನ ನೆಗೆಯನ್ನೂ ಬಿಟ್ಟ.
ಅಪುರೂಪಕ್ಕೆ ನೆಗೆಯೂ ಬಂತು ಅವನ ಕುಶಾಲಿಂಗೆ.

ಅವ ಹೇಳಿದ್ದೆಂತರ ಹೇಳಿರೆ, ಜೀವಮಾನ ಇಡೀ ಲಡಾಯಿ ಮಾಡಿದ ಲಾಡೆನ್ನಿನ ತಂದು ಸಮುದ್ರಕ್ಕೆ ಹಾಕಿದವಲ್ಲದೋ? – ಆ ಲಾಡೆನ್ನಿನ ಮೀನು, ತಿಮಿಂಗಿಲಂಗೊ ತಿಂದು ಹೋಕು. ಆದರೆ ಒಂದು ತುಂಡು ತಿಂಬಲೆ ಸುರು ಮಾಡಿದ ಕೂಡ್ಳೇ ಪರಸ್ಪರ ಜಗಳ ಮಾಡ್ಳೆ ಸುರು ಮಾಡುಗೋ – ಏನೋ. ಎಂತಕೆ ಹೇಳಿತ್ತುಕಂಡ್ರೆ, ಅದರ ನೆತ್ತರಿಲಿಯೇ ಆ ಜಗಳದ ಅಂಶ ಇಕ್ಕು – ಹೇಳಿಗೊಂಡು!
ಆಗಿಪ್ಪಲೂ ಸಾಕು. ಆ ಲಾಡೆನ್ನಿನ ತಿಂಬಗ ಮೀನುಗೊ ಎಷ್ಟು ಜಗಳ ಮಾಡಿಗೊಂಡಿದವೋ?!
ಈ ಮೀನುಗೊ ಇನ್ನು ನೆತ್ತರಿನ ಕೋಪದ ಬಲಲ್ಲಿ ಅಮೇರಿಕದ ಹಡಗುಗಳ ಹೊಡಿ ಮಾಡದ್ದರೆ ಸಾಕು!
ಹಾಂಗೆಲ್ಲ ಅಕ್ಕೋ?!
ಉಮ್ಮಪ್ಪ! ಗುಣಾಜೆ ಕುಂಞಿಗೆ ಅರಡಿಯ; ಒಪ್ಪಣ್ಣಂಗೂ.
ಏನೇ ಆಗಲಿ, ಇಂದು ಒಂದರಿ ಮೀನುಗೊ ಜಗಳ ಮಾಡಿರೂ – ನಾಳೆಂದ ಮತ್ತೆ ಒಟ್ಟಿಂಗೇ ಇಕ್ಕನ್ನೆ, ಕೊಶೀಲಿ.
~
ಕಳುದ ವಾರ ಬೇಜಾರಲ್ಲಿ ಸಾಯಿಬಾಬನ ಮರಣದ ಬಗ್ಗೆ ಮಾತಾಡಿರೂ, ಈ ವಾರ ಉಗ್ರ ಲಾದೆನ್ನು ಕೊಟ್ಟೆಕಟ್ಟಿದ್ದರ ಮಾತಾಡ್ಳೆ ಕೊಶಿಯೇ ಅಪ್ಪದಿದಾ!

ಒಂದೊಪ್ಪ: ಧರ್ಮ ಒಳಿಶಲೆ ಹೇಳಿ ಧರ್ಮಕ್ಕೆ ಸಿಕ್ಕಿದ ಪೈಸೆಯನ್ನೇ ಹಾಕಿ ಧರ್ಮಕ್ಕೇ ಜೀವನ ಹಾಳುಮಾಡಿತ್ತು, ಲಾಡೆನ್ನು. ಅಲ್ಲದೋ?

ಲಡಾಯಿ ಕಟ್ಟಿದ ಲಾಡೆನ್ನಿನ ತಿಂಬಗ ಮೀನುಗಳೂ ಲಡಾಯಿ ಮಾಡಿಕ್ಕೋ?, 4.8 out of 10 based on 5 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ಮಂಗ್ಳೂರ ಮಾಣಿ

  ಅದು ಸತ್ತದು ಅಪ್ಪೋ??? – ಇದು ೪ನೇ ಸರ್ತಿ ಅದು ಸಾವದು.

  {ಜಗತ್ತಿಲಿ ಶಾಂತಿಪ್ರಿಯ ಮಾಪ್ಳೆಧರ್ಮವ ಬಿಟ್ಟು ಬೇರೆ ಎಲ್ಲವನ್ನೂ ಮುಗುಶೇಕು, ಶಾಂತಿಧರ್ಮ ಮಾಂತ್ರ ಇರೇಕು ಹೇಳಿಗೊಂಡು ಒಕ್ಕೊರಲಿನ ಧ್ವನಿ ಬೆಳೆಶಿತ್ತಡ.} – ಹೆ ಹೆ ಹೆ ..

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಮಂಗ್ಳೂರು ಮಾಣಿ ನೆಗೆಮಾಡುವಗ ಚೆಂದ ಕಾಣ್ತೆ. ಅಂಬಗ ಶುದ್ದಿ ಹೇಳಿರೆ ಎಷ್ಟು ಚಂದ ಇಕ್ಕು, ಅಲ್ದೋ? :-)

  [Reply]

  VA:F [1.9.22_1171]
  Rating: +1 (from 1 vote)
 2. ಕೇಜಿಮಾವ°
  ಕೆ ಜಿ ಭಟ್

  ಸಮಸ್ಯೆ ಎನಂತ ಗೊಂತಿದ್ದೋ,ನಮ್ಮ ಊರಿಲ್ಲಿ ಕೆಲಾವು ಲಾಡನ್ನುಗೊ ಹಉಟ್ಟಿಯೊಂಡಿದವು.ಅವರ ಎಂತ ಮಾಡ್ಳೂ ಎಡಿಯ.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ನಮ್ಮ ಊರಿಲಿಯೂ ಒಬ್ಬೊಬ್ಬ ಒಬಾಮ ಹುಟ್ಟವೋ, ಕೇಜಿಮಾವಾ..?

  [Reply]

  ಕೇಜಿಮಾವ°

  ಕೆ ಜಿ ಭಟ್ Reply:

  ನಮ್ಮ ಊರಿಲ್ಲಿ ಈಗಳೇ ಹಲವು ಒಬಾಮಂಗೊ ಇಕ್ಕು.ಪುತ್ತೂರಿನ ಎಲ್ಲ ಬಂಡಾಅರಿಗಳೂ ಹಿಂದಿ ಮಾತಾಡುವ ಮುಸ್ಲಿಮರೇ.ಬಾಂಗ್ಲಾದೇಶದವೋ ಅಲ್ಲ ಪಾಕಿಸ್ತಾನದವೋ?

  [Reply]

  VA:F [1.9.22_1171]
  Rating: 0 (from 0 votes)
 3. ಪುಚ್ಚಪ್ಪಾಡಿ ಮಹೇಶ

  ಈ ಲಾಡೆನ್ನು ಸತ್ತತ್ತು ಹೇಳಿ ಹೇಳ್ತವು , ಆದರೆ ಮರಿ ಲಾಡೆನ್ನುಗೊ ಇದ್ದವಲ್ಲ , ಅವ್ರ ಎಂತ ಮಾಡುದು ಹೇಳಿ ಗೊತ್ತಾಗ್ತಾ ಇಲ್ಲೆ. ಇದ ಅಂದು ಕಾಸ್ರಗೋಡಿಲಿ ಇದೇ ಲಾಡೆನ್ನಿನ ಅಭಿಮಾನಿಗೊ ಎಷ್ಟು ಜನ ಇತ್ತಿದ್ದಿದ್ದವು ಗೊತ್ತಿದ್ದ. ಬ್ಯಾನರ್ ಎಲ್ಲಾ ಹಾಕಿತ್ತಿದ್ದವು. ಈಗ ಅವು ರಕ್ತ ಬೀಜಾಸುರನ ಹಾಂಗೆ ಹುಟ್ಟಿಕೊಂಡಿಕ್ಕು ಅಲ್ದಾ ?
  – (ಧರ್ಮ ಒಳಿಶಲೆ ಹೇಳಿ ಧರ್ಮಕ್ಕೆ ಸಿಕ್ಕಿದ ಪೈಸೆಯನ್ನೇ ಹಾಕಿ ಧರ್ಮಕ್ಕೇ ಜೀವನ ಹಾಳುಮಾಡಿತ್ತು, ಲಾಡೆನ್ನು. ಅಲ್ಲದೋ?) ಅದ್ರ ಮಾತ್ರ ಅಲ್ಲ ಬ್ಯಾರಿಗಳ ಕರ್ಮ.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಚಂದದ ವಿಮರ್ಶೆಗೆ ಒಪ್ಪಂಗೊ, ಪುಚ್ಚಪ್ಪಾಡಿ ಅಣ್ಣಂಗೆ.

  ಆದ್ರೆ,ಅದು ಸತ್ತಿಪ್ಪದ್ರ ಬಗ್ಗೆಯೇ ಸಂಶಯ ಇದ್ದಲ್ದ, ಈಗ!?

  [Reply]

  VA:F [1.9.22_1171]
  Rating: 0 (from 0 votes)
 4. ಶ್ರೀಅಕ್ಕ°

  ಒಪ್ಪಣ್ಣ, ಒಂದು ಕಂಟಕ ಕಳುದತ್ತು ಹೇಳಿ ಕೊಶಿ ಪಡುವ ಶುದ್ದಿ. ಆದರೆ ಅದು ತೋರ್ಸಿದ ದಾರಿಲಿ ನಡವ ಹಾಂಗಿಪ್ಪ ಅದರ ಸಂತಾನಂಗೊಕ್ಕೆ ಪ್ರಪಂಚಲ್ಲಿ ಕೊರತೆ ಇಲ್ಲೆನ್ನೆ!! ಅದರ ಕೊಂದದರ ವಿರೋಧಿಸಿ ಎಷ್ಟು ದಿಕ್ಕೆ ಕೊಡಿ ಹಿಡ್ಕೊಂಡು ನಡದ್ದವಿಲ್ಲೆ ಅದರ ಭಕ್ತಂಗ? ಅದರ ಹುಡುಕ್ಕಿ ಹಿಡುದು ಕೊಂದ ಹಾಂಗೆ ಮಾಡಿದ ಕಾರಣ ಲಾಡೆನ್ನಿನ ನಂಬುವ ಜನಂಗೊಕ್ಕೆ ಅದು ಅತಿ ಪ್ರಾಮುಖ್ಯ ವಿಷಯ ಆತಲ್ಲದಾ? ರಜ್ಜ ಸಣ್ಣ ಮಟ್ತಿನ ಹೊಯ್ ಕೈ ಆಗಿ ಲಾಡೆನ್ ಸತ್ತಿದ್ದರೆ ಬಹುಶ ಈ ಮಟ್ಟಕ್ಕೆ ಅದರ ಜನಂಗೊಕ್ಕೆ ಅದರ ಸಾವು ಭ್ರಾಂತಿ ಆವುತ್ತಿತ್ತಿಲ್ಲೆ ಅಲ್ಲದ?

  ಅವರ ಧರ್ಮಗುರು ಹೇಳಿ ಕೊಟ್ಟ ಪಾಠ ಎಂತದೋ? ಇವು ಪಾಲಿಸುತ್ತಾ ಇಪ್ಪದು ಎಂತದೋ? ಮಾಡ್ಲಾಗದ್ದದರ ಎಲ್ಲ ಮಾಡಿದರೂ ಅವುದೇ ಅವರ ಸಂತತಿಗಳುದೆ ಸುಭೀಕ್ಷಲ್ಲಿ ಇದ್ದವನ್ನೆ!!! ಇನ್ನು ಎಷ್ಟು ಜನರ, ಯಾವ ದೇಶವ ಆಪೋಶನ ತೆಕ್ಕೊಂಡಪ್ಪಗ ಈ ಜೆನಂಗೊಕ್ಕೆ ಸರಿ ಆತು ಹೇಳಿ ಅಕ್ಕಡ? ಇಡೀ ಲೋಕಲ್ಲಿ ಕಮ್ಯೂನಿಸ್ಟ್ ಬಲ್ಲೆ ಬೆಳದ ಹಾಂಗೆ ತುಂಬಿದ್ದವು. ಒಂದು ಲಾಡೆನ್ ಹೋಗಿ ಬಲ್ಲೆ ನಾಶ ಆಗ. ಈ ಬಲ್ಲೆಗಳ ಮನಾರ ಮಾಡೆಕ್ಕಾದರೆ ಯೇವ ಮದ್ದೋ, ಯಂತ್ರವೋ ಆಯೆಕ್ಕು ಹೇಳಿ ಕಾಲವೇ ಹೇಳೆಕ್ಕಟ್ಟೆ ಅಲ್ಲದಾ?

  ಒಂದೊಪ್ಪ ಲಾಯ್ಕಾಯಿದು. ಧರ್ಮಕ್ಕೆ ಬೇಕಾಗಿ ಧರ್ಮಕ್ಕೆ ಸಿಕ್ಕಿದ ಪೈಸಲ್ಲಿ ಧರ್ಮದ ವಿರುದ್ಧ ನಡದರೆ ಧರ್ಮಕ್ಕೆ ಸಾವುದೇ ಬಕ್ಕು ಅಲ್ಲದಾ? ಹೀನ ಮರಣ!!!!

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಶ್ರೀಅಕ್ಕ,
  ಶುದ್ದಿಯ ಓದಿ, ವಿಮರ್ಶೆಮಾಡಿ, ಒಪ್ಪ ಪ್ರೋತ್ಸಾಹ ಕೊಟ್ಟದು ಕಂಡು ಕೊಶಿ ಆತು.

  ಈ ಮುಕ್ರಿ ಸಾವ ಮೊದಲು ಪ್ರತಿ ಊರೂರಿಲಿ ಅದರ ಪ್ರಭಾವಳಿ ಒಳಿತ್ತ ನಮುನೆ ಆಶೀರ್ವಾದ ಮಾಡಿಕ್ಕಿ ಹೋಯಿದು – ಹೇಳ್ತದೇ ಗುಣಾಜೆಕುಂಞಿಯ ದೊಡ್ಡ ಕೋಪಕ್ಕೆ ಕಾರಣ!
  { ಧರ್ಮದ ವಿರುದ್ಧ ನಡದರೆ ಧರ್ಮಕ್ಕೇ ಸಾವು ಬಕ್ಕು } – ಒಳ್ಳೆ ಕಲ್ಪನೆ! :-)

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಾಣಿ ಚಿಕ್ಕಮ್ಮಕಜೆವಸಂತ°ಚೆನ್ನೈ ಬಾವ°ಶಾ...ರೀಯೇನಂಕೂಡ್ಳು ಅಣ್ಣಬಟ್ಟಮಾವ°ದೊಡ್ಡಭಾವಗಣೇಶ ಮಾವ°ಡಾಮಹೇಶಣ್ಣದೀಪಿಕಾಶೇಡಿಗುಮ್ಮೆ ಪುಳ್ಳಿವೇಣಿಯಕ್ಕ°ಪುಟ್ಟಬಾವ°ಮಂಗ್ಳೂರ ಮಾಣಿಪವನಜಮಾವಸಂಪಾದಕ°ದೇವಸ್ಯ ಮಾಣಿದೊಡ್ಡಮಾವ°ಕೇಜಿಮಾವ°ಮುಳಿಯ ಭಾವಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣಪುತ್ತೂರಿನ ಪುಟ್ಟಕ್ಕಪುತ್ತೂರುಬಾವನೀರ್ಕಜೆ ಮಹೇಶಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ