Oppanna.com

ಭಾಷಾವಾರು ವಿಂಗಡಣೆಯ ಹುಣ್ಣಿಂಗೆ ಮಲೆಯಾಳ ಹೇರಿಕೆಯ ಬರೆ!

ಬರದೋರು :   ಒಪ್ಪಣ್ಣ    on   26/05/2017    5 ಒಪ್ಪಂಗೊ

ಮೊದಲೇ ಬೇನೆ ಕೊಡ್ತಾ ಇಪ್ಪ ಹುಣ್ಣಿಂಗೆ ಬರೆ ಎಳದರೆ ಹೇಂಗಕ್ಕು!?
ಅದೇ ಆವುತ್ತಾ ಇದ್ದು ನಮ್ಮ ಬೈಲಿಲಿ!
~
ಭಾರತ ದೇಶಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಅಪ್ಪಾಗ ಕಾಸರಗೋಡಿನ ಅನ್ಯಾಯವಾಗಿ ‘ಮಲೆಯಾಳ ಭಾಷಿಕರ ಪ್ರದೇಶ’ ಹೇದು ಗುರ್ತ ಮಾಡಿದವು ಕಾನೇಶುಮಾರಿ ತೆಗೆತ್ತೋರು. ಎತಾರ್ತಕ್ಕೆ ಚಂದ್ರಗಿರಿ ಹೊಳೆಂದ ಅತ್ಲಾಗಿ ಕೆಲವು ಮಲೆಯಾಳಿಗೊ ಇತ್ತಿದ್ದವೋ ಏನೊ, ಅದರಿಂದ ಇತ್ಲಾಗಿಯಾಣ ಅಷ್ಟೂ ಪ್ರದೇಶಂಗೊ ಕನ್ನಡ ಯಾ ತುಳು ಪ್ರದೇಶ ಆಗಿಂಡು ಇದ್ದತ್ತು. ಇಂದಿಂಗೆ ನಮ್ಮ ಪುತ್ತೂರು / ಬಂಟ್ವಾಳ ತಾಳೂಕಿನ ನಮುನೆ. ಆದರೆ ಬರಕ್ಕೊಂಬೋರು ಇಡೀ ಜಾಗೆಗೆ ಕೇರಳ ಹೇದು ಗುರ್ತ ಹಾಕಿದವು.
ಇದರಿಂದಾಗಿ ಇಡೀ ಕಾಸರಗೋಡು ಜಿಲ್ಲೆ ಕೇರಳದ ಭಾಗ ಆಗಿ ಹೋತು.

ಈ ಆಘಾತವ ಕಾಸರಗೋಡಿನ ಜನತೆಗೆ ಸುರುವಿಂಗೆ ಸ್ವೀಕರುಸುಲೇ ಎಡಿಗಾತಿಲ್ಲೆ. ಕ್ರಮೇಣ ಹೋರಾಟ ಮಾಡಿಗೊಂಡು ‘ಕಾಸರಗೋಡಿಲಿ ಎಲ್ಲಾ ಸರ್ಕಾರೀ ಆದೇಶಂಗೊ ಕನ್ನಡಲ್ಲಿಯೂ ಇರೇಕು’ – ಹೇದು ತೀರ್ಪು ತೆಗದವಾಡ. ಮೆಚ್ಚೆಕ್ಕು ನಮ್ಮ ಹೆರಿಯೋರ.
ಆದರೆ, ದರ್ಪದ ಸರ್ಕಾರಕ್ಕೆ ಇದು ಲೆಕ್ಕವೋ!
ಸರ್ಕಾರೀ ಆಪೀಸುಗಳಲ್ಲಿ ಕನ್ನಡ ಬಪ್ಪೋರೇ ಅಪುರೂಪ ಅಪ್ಪಲೆ ಸುರು ಆತು. ನಮ್ಮ ಪೈಕಿ ಅಪ್ಪಚ್ಚಿಯೋ, ಬಾವನೋ, ನಮ್ಮ ಕ್ಲಾಸುಮೇಟುಗಳೋ ಮಣ್ಣ ಇದ್ದರೆ ಅವರ ಮೂಲಕ ಮಾತಾಡ್ಸೇಕಾದ ಪರಿಸ್ಥಿತಿ ಬಂತು.
ಬೋರ್ಡುಗೊ ಕನ್ನಡಲ್ಲಿ ಇರೆಕ್ಕು ಹೇಳ್ತ ಕಾರಣಕ್ಕೆ ತಪ್ಪು ತಪ್ಪು ಕನ್ನಡಲ್ಲಿ ಬರವಲೆ ಸುರು ಮಾಡಿತ್ತು.
ಬೋರ್ಡುಗೊ ಎಲ್ಲ ಅಕ್ಷರ ಕನ್ನಡವೇ ಆದರೂ, ಲಿಪಿಗೊ ಕನ್ನಡದ್ದೇ ಆದರೂ ವ್ಯಾಕರಣ ಒಂದೂ ಅರ್ತ ಆಗದ್ದ ಹಾಂಗಿ ಇಪ್ಪಲೆ ಸುರು ಆತು. ಇದು ಅರ್ತ ಆಯೇಕಾರೆ ಅದರೊಟ್ಟಿಂಗೆ ಇಪ್ಪ ಇಂಗ್ಳೀಶು ಬೋರ್ಡಿನ ಓದೇಕಷ್ಟೆ!
~
ಬಸ್ಸಿನ ಬೋರ್ಡುಗಳೂ ಹಾಂಗೇ – ಮೊದಲು ಕನ್ನಡಲ್ಲಿ ಇದ್ದತ್ತು,
ಕ್ರಮೇಣ ಕನ್ನಡಲ್ಲಿ ದೊಡ್ಡಕ್ಕೆ, ಮಲೆಯಾಳಲ್ಲಿ ಸಣ್ಣಕೆ ಬರವಲೆ ಸುರು ಆತು,
ಮತ್ತೆ ಕನ್ನಡಲ್ಲಿಯೂ ಮಲೆಯಾಳಲ್ಲೂ ಸುರು ಮಾಡಿದವು,
ಅದಾದ ಮತ್ತೆ ಮಲೆಯಾಳಲ್ಲಿ ದೊಡ್ಡಕೆ, ಕರೇಲಿ ಸಣ್ಣಕೆ ಕನ್ನಡಲ್ಲಿ ಬರವಲೆ ಸುರು ಮಾಡಿದವು,
ಈಗೀಗ ಕೆಲವು ಬಸ್ಸಿನ ಬೋರ್ಡುಗೊ ಪೂರ ಮಲೆಯಾಳಲ್ಲೇ ಇಪ್ಪ ನಮುನೆ ಆತು.

ಇದೇ ಪರಿಸ್ಥಿತಿ ಅಂಗುಡಿಗಳ ಬೋರ್ಡುದೇ ಆಯಿದು. ಮೊದಲಾಣ ಕನ್ನಡ ಲಿಪಿಯ ಬೋರ್ಡುಗೊ ಹೋಗಿ ಮಲೆಯಾಳ ಬಯಿಂದು.
ಕೆಲವು ಜೆನ ಉಪಾಯ ಮಾಡಿ ಇಂಗ್ಳೀಶಿಲಿ ಮಾಂತ್ರ ಬರೆಶಿಗೊಂಡು ಬತ್ತವು – ಇಂದು ರಗಾಳೆ ಇಜ್ಜಿ – ಹೇದು.
~
ಕಾಸರಗೋಡಿನ ಕನ್ನಡಿಗರು ಹೇದರೆ, ಹವ್ಯಕ, ಕರಾಡ, ಶಿವಳ್ಳಿ, ಕೋಟ ಇತ್ಯಾದಿ ಬಟ್ಟಕ್ಕೊ, ತುಳು ಮಾತಾಡ್ತ ಪೂಜಾರಿ, ಬಂಟ, ಇತ್ಯಾದಿ ಸಮುದಾಯಂಗೊ, ಮರಾಟಿ ನಾಯ್ಕಂಗೊ – ಹೀಂಗಿರ್ತ ಸಮುದಾಯಂಗೊ ಮುಖ್ಯಪಟ್ಟದು.
ಇದರೆಡಕ್ಕಿಲಿ, ತುಳು ಮಾತಾಡ್ತೋರ ಈ ಕನ್ನಡ ಗುಂಪಿಂದ ಬೇರೆ ಮಾಡ್ಳೆ ಶುದ್ದಿಲ್ಲದ್ದೆ ಒಂದು ಪ್ರಯತ್ನ ಬೆಳದು ಬಂತು. ತುಳು ಭಾಸೆಗೆ ಲಿಪಿ ಇದ್ದು, ಅದರ ಕಲಿವೊ°, ಹಾಂಗೆ ಹೀಂಗೆ – ಹೇದು.
ಇವು ತುಳು ಲಿಪಿ ಹೇಳುಸ್ಸು ಇದೇ ಬಟ್ಟಕ್ಕೊ ಮಂತ್ರ ಬರದು ಮಡಗಲೆ ಉಪಯೋಗುಸಿಗೊಂಡು ಇದ್ದಿದ್ದ “ತಿಗಳಾರಿ” ಲಿಪಿ.
ಅದರ ಉಪಯೋಗುಸಿಗೊಂಡು ಇದ್ದದೂ ನಾವೇ, ಇದನ್ನೂ ಬಳಸಿಗೊಂಡು ಇದ್ದದು ನಾವೇ. ಹಾಂಗೇಳಿಗೊಂಡು ಮಲೆಯಾಳಿಗೊ ಎರಡನ್ನೂ ಬಳಸಿಗೊಂಡು ಇತ್ತಿದ್ದವಿಲ್ಲೆ.
~
ಈಗ, ಇತ್ತೀಚೆಗೆ ಬಂದ ದೊಡ್ಡ ಆಘಾತ ಹೇದರೆ, ಕೇರಳ ಸರಕಾರದ ಪ್ರಯತ್ನಲ್ಲಿಪ್ಪ ಮಸೂದೆ.
“ಕೇರಳದ ಎಲ್ಲ ಶಾಲೆಗಳಲ್ಲಿ ಮಲೆಯಾಳ ಕಡ್ಡಾಯ” – ಮಾಡೇಕು ಹೇದು.
ಇದು ಒಳ್ಳೆದೋ, ಇದು ಕೆಟ್ಟದೋ?

ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಮಾಡಿರೆ ಒಳ್ಳೆದು, ಪಶ್ಚಿಮ ಬಂಗಾಳಲ್ಲಿ ಬೆಂಗಾಳಿ ಕಡ್ಡಾಯ ಮಾಡಿರೆ ಒಳ್ಳೆದು, ಆದರೆ ಕೇರಳಕ್ಕೆ ಏಕೆ ಆಗ – ಹೇದು ಕೇಳುವೋರು ಇದ್ದವು.
ನಮ್ಮ ಸಮಸ್ಯೆ ಕೇರಳ ರಾಜ್ಯದ ವಿಶಯ ಅಲ್ಲ, ಕೇರಳಕ್ಕೆ ಅಕ್ರಮವಾಗಿ ಸೇರಿದ ಕನ್ನಡ ಭೂಪ್ರದೇಶದ ಬಗ್ಗೆ.
ಕಾಸರಗೋಡಿನ ಚಂದ್ರಗಿರಿ ಹೊಳೆಂದ ತೆಂಕಕ್ಕೆ, ಕರ್ನಾಟಕದ ಗಡಿಯ ಒರೆಗಾಣ ಮಣ್ಣು – ಅದು ಕನ್ನಡ ಮಣ್ಣು. ಅಲ್ಲಿಪ್ಪ ಬಟ್ಟಕ್ಕೊ, ಬಂಟಕ್ಕೊ, ಪೂಜಾರಿಯಕ್ಕೊ – ಇವೆಲ್ಲ ಹಲವು ಶತಮಾನಂಗಳಿಂದ ಅಲ್ಲಿ ಇದ್ದವು. ಎಲ್ಲೋರುದೇ ಕನ್ನಡ ಮಾತಾಡುವೋರೇ.
ಕನ್ನಡ ಭಾಷೆಗೆ, ಸಾಹಿತ್ಯಕ್ಕೆ ಇವೆಲ್ಲರಿಂದ ಅಮೋಘ ಕೊಡುಗೆ ಬಯಿಂದು.
ಇವು ಆರುದೇ ಮಲೆಯಾಳಿಗೊ ಅಲ್ಲ!

ಹೀಂಗಿರ್ತ ಶುದ್ಧ ಕನ್ನಡ ಭೂಮಿಲಿ ಮಲೆಯಾಳ ಹೇರುಸಿದರೆ ಹೇಂಗಕ್ಕು?
ಶಾಲೆಲಿ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಳೀಶು, ತೃತೀಯ ಭಾಷೆ ಹಿಂದಿ ಆಗಿಪ್ಪಾಗ, ಒಟ್ಟಿಂಗೆ ನಾಲ್ಕನೇ ಭಾಷೆ ಮಲೆಯಾಳವನ್ನೂ ಕಲೀರಿ ಮಕ್ಕಳೇ ಹೇದರೆ – ಕನ್ನಡ ತೆಕ್ಕೊಂಡ ತಪ್ಪಿಂಗೆ ಬೇಕಾಗಿ ಒಂದು ಹೆಚ್ಚು ಪುಸ್ತಕ ಓದುವ ಹೊರೆ ಮಕ್ಕೊಗೆ ಕೊಟ್ಟ ಹಾಂಗಾವುತ್ತಿಲ್ಲೆಯೋ?

ಅಪ್ಪಟ ಕನ್ನಡ ಅಭಿಮಾನಿಗೊ ಈ ಬಂಙ ತೆಕ್ಕೊಂಡ್ರೂ ತೆಕ್ಕೊಂಗು; ಈ ಅರೆದಡೆಲಿ ಇಪ್ಪ ಸಂಸಾರಂಗೊ ಇನ್ನೊಂದು ಭಾಷೆಯ ಹೊರೆ ಎಂತಕೆ – ಹೇದು ಸೀತ ಮಲೆಯಾಳವನ್ನೇ ತೆಕ್ಕೋಂಡ್ರೆ!
ಕ್ರಮೇಣ ಒಂದು ತಲೆಮಾರು ಕಳಿವಗ ಕನ್ನಡ ಭಾಷೆಯ ತೆಕ್ಕೊಂಬವನೇ ಇಲ್ಲದ್ದರೆ!
~
ಇಷ್ಟೇ ಅಲ್ಲ, ಕೇರಳ ಸರ್ಕಾರೀ ಕೆಲಸ ಸಿಕ್ಕೇಕಾರೆ ಈಗ ಮಲೆಯಾಳಲ್ಲಿ ಉತ್ತರುಸೇಕಡ.
ಹಾಂಗಾರೆ ಹುಟ್ಟಿದಾರಭ್ಯ ಕನ್ನಡ ಭಾಷೆಲೇ ಕಲ್ತ ಕೇರಳಿಗರಿಂಗೆ ಇದು ಅನ್ಯಾಯ ಅಲ್ದೋ?
~
ಇದುವೇ ಈಗಾಣ ಕೇರಳ ಸರಕಾರದ ಅನ್ಯಾಯಂಗೊ. ಇದರ ಖಂಡುಸುಲೆ ಮೊನ್ನೆ ಸಮಸ್ತ ಕನ್ನಡ ಸಂಘಟನೆಗೊ ಕಾಸರಗೋಡಿಲಿ ಸೇರಿದವಾಡ.
ಸಾವಿರಗಟ್ಳೆ ಜೆನಂಗೊ ಕಲೆಕ್ಟ್ರೇಟು ಆಫೀಸಿನ ಎದುರು ಸೇರಿ “ಕಾಸರಗೋಡು – ಕನ್ನಡ ನಾಡು” – ಹೇದು ಒಪಾಸು ನೆಂಪು ಮಾಡಿಗೊಂಡವಾಡ.
ಸರಕಾರದ ಅನಾಚಾರಂಗೊ ನಿಂದು, ಎಲ್ಲೋರಿಂಗೂ ನ್ಯಾಯ ಸಿಕ್ಕಲಿ – ಹೇದು ನಾವು ಗ್ರೇಶಿಗೊಂಬೊ°.
~
ಮೊದಲೇ ಭಾಶಾವಾರು ಪ್ರಾಂತ್ಯಲ್ಲಿ ಅನ್ಯಾಯ ಆದ ಕಾಸರಗೋಡಿನ ಕನ್ನಡಿಗರಿಂಗೆ ಈಗ ಮಲೆಯಾಳ ಕಡ್ಡಾಯದ ಬರೆ!

ಈ ಎಲ್ಲ ಅನಾಚಾರವ ಘಟ್ಟಿ ಭಾಶೆಲಿ ಖಂಡುಸುವೋರು ವಿಧಾನ ಸಭೆಲಿ ಇಲ್ಲೆ. ಕನ್ನಡಿಗರು ಓಟಿಂಗೆ ನಿಂದರೆ ಸಮಗಟ್ಟು ಓಟು ಹಾಕಲೆ ನಮ್ಮೋರು ಹೋವುತ್ತವಿಲ್ಲೆ. ಎಂಭತ್ತು ನೂರು ಓಟಿಂಗೆ ಸೋಲ್ತವು ಹೇದರೆ, ಹಾಂಗಾರೆ ಬೆಂಗ್ಳೂರಿಲಿ ಉದ್ಯೋಗ ಹಿಡುದ ಕಾಸರಗೋಡಿನೋರು ಉದಾಸಿನ ಮಾಡಿದ್ದಲ್ದೋ – ಕೇಳ್ತ ಪೆರ್ಲದಣ್ಣ.
~
ಹೇಳಿದಾಂಗೆ, ಕಾಸರಗೋಡು – ಕನ್ನಡ ನಾಡು ಹೇದು ಕಾಸರಗೋಡಿನವು ಮಾಂತ್ರ ಹೇಳುದಾಯಿದು. ಕರ್ನಾಟಕಲ್ಲಿ ಬೆಶ್ಚಂಗೆ ಚಳಿ ಕಾಸಿಗೊಂಡು ಇಪ್ಪ ಜೆನಂಗೊ ಸ್ವರ ಸೇರ್ಸದ್ದ ಕೃತಘ್ನರಾಯಿದವು.
ಅಪ್ಪು, ಅದು ನಮ್ಮದೇ, ಅಲ್ಲಿಪ್ಪೋರು ನಮ್ಮವೇ, ನಾವೆಲ್ಲ ಕನ್ನಡಿಗರೇ – ಹೇದು ಕರ್ನಾಟಕದ ಸರಕಾರ, ಕರ್ನಾಟಕದ ಜನತೆ ಹೇಳಿದ್ದಿದ್ದರೆ, ಹೇಳಿದರೆ ಇಷ್ಟು ಕಷ್ಟ ಇದ್ದೋ? ಇತ್ತೋ?
ಇನ್ನಾದರೂ ತಡವಾಯಿದಿಲ್ಲೆ – ಕೇರಳಲ್ಲಿ ಕನ್ನಡಿಗರಿಂಗೆ ಆವುತ್ತ ಅನ್ಯಾಯವ ತಡವಲೆ ಕರ್ನಾಟಕದ ಕನ್ನಡಿಗರೂ ಸ್ವರ ಸೇರ್ಸುವೊ°.
ಆಯೆಕ್ಕಾದ ಸಾಮಾಜಿಕ ಹೋರಾಟ, ಆಯೆಕ್ಕಾದ ಕಾನೂನು ಹೋರಾಟ, ಆಯೆಕ್ಕಾದ ಆಂದೋಲನ ನೆಡೆಯಲಿ.
ಅಲ್ಲದ್ದರೆ ನಮ್ಮ ಕನ್ನಡ ಒಳಿಯ.
~

ಒಂದೊಪ್ಪ: ಭಾಷೆಯೂ ಸಂಸ್ಕಾರವೂ ಒಂದಕ್ಕೊಂದು ಹೊಂದಿಗೊಂಡಿದ್ದು. ಭಾಷೆ ಒಳಿಯದ್ರೆ ಸಂಸ್ಕೃತಿಯೂ ಒಳಿಯ.

5 thoughts on “ಭಾಷಾವಾರು ವಿಂಗಡಣೆಯ ಹುಣ್ಣಿಂಗೆ ಮಲೆಯಾಳ ಹೇರಿಕೆಯ ಬರೆ!

  1. ಭಾಷಾವಾರು ಪ್ರಾಂತ್ಯ ವಿಂಗಡನೆ ಯಿಂದ ಒಳ್ಳೆದೂ ಆಯಿದು ಕೆಟ್ಟ ದೂ ಆಯಿದು. ಆರ಼್ಟಿಕಲ್ ಒ಼ಳ್ಳೆದಿದ್ದು.

  2. ಭಾಷಾವರು ಪ್ರಾಂತ್ಯ ಹೇಳಿ ಸುರುಆದ ಲಾಗೈತಿಂದ ಕಾಸರಗೋಡು ಕನ್ನಡ ನಾಡು, ಕರ್ನಾಟಕಕ್ಕೆ ಸೇರೆಕ್ಕು ಹೇಳ್ತ ಕೂಗು ಸುರು ಆಯಿದು. ಇದಕ್ಕಾಗಿ ಸಾಕಷ್ಟು ಹೋರಾಟಂಗೊ ಹಿರಿಯ ಸಾಹಿತಿಗೊ, ನಾಡಿನ ಧುರೀಣರು ಎಲ್ಲಾ ಸೇರಿ ಆಯಿದು. ಆದರೆ ನಮ್ಮ ದೌರ್ಭಾಗ್ಯ ಹೇಳಿರೆ ಇನ್ನೂದೆ ಹೋರಾಟವೇ ಗತಿ ಹೇಳ್ತ ಪರಿಸ್ಥಿತಿ ಈಗಳೂ ಇಪ್ಪದು. ಕನ್ನಡಿಗರು ಇನ್ನು ಮುಂದಾದರೂ ಒಂದಾಗಿ, ಓಟ್ ಮಾಡುವಾಗ ಪಕ್ಷ ಭೇದ ಬಿಟ್ಟು, ಇದಕ್ಕಾಗಿ ಹೋರಾಡುವವರನ್ನೇ ಆರಿಸಿ ನಮ್ಮ ಪ್ರತಿನಿಧಿ ಆಗಿ ಕಳ್ಸೆಕ್ಕು.
    ಒಗ್ಗಟ್ಟಿಲ್ಲದ್ದರೆ ಇದು ಸಾಧ್ಯ ಇಲ್ಲೆ

  3. ಕರ್ನಾಟಕ ಸರಕಾರ ರಜ್ಜ ಈ ವಿಷಯಲ್ಲಿ ಧ್ವನಿ ತೆಗದರೆ ಸರಿಯಕ್ಕೋ ಹೇಳಿ ಕಾಣ್ತು. ಆದರೆ ಆರ ಬೊಬ್ಬಗುದೆ ಆನು ಕೆಮಿ ಕೊಡೆ ಹೇಳುವ ಜಾತಿಯವರತ್ರೆ ಎಂತ ಮಾಡ್ಳೆಡಿಗು ಹೇಳುವದು ಪ್ರಶ್ನೆ. ಕಾಸರಗೋಡು ಕನ್ನಡವಾಗಿಯೇ ಒಳಿಯಲಿ ಹೇಳುವ ಆಶೆ. ಆಂದೋಲನ ಇನ್ನೂ ದೊಡ್ಡಕ್ಕೆ ಎಲ್ಲೋರ ಸಹಕಾರಲ್ಲಿ ನೆಡದು ಫಲ ಸಿಕ್ಕಲಿ.

  4. ಸಕಾಲಿಕ ಶುದ್ದಿ. “ಹುಣ್ಣಿನ ಮೇಗೆ ಬರೆ” ಹೇಳ್ತ ಗಾದೆ ಮನ್ನೆ ನೆಂಪಾದ್ದಪ್ಪು. ಇನ್ನು ಹೀಂಗಾದರೆ ಇಲ್ಲಿ ತೆಂಕ್ಲಾಗಿಯಾಣವರ ಆಚಾರ ವಿಚಾರವೇ ಮೇಲಕ್ಕು. ನಮ್ಮ ಸಂಸ್ಕೃತಿ ನಾಶ ಅಪ್ಪಲೆ ತಡವಿಲ್ಲೆ. ಮನ್ನೆ ಎಂಗೊ ನಿಂದ ಗೇಟಿನತ್ರೆ ಕೆಲವು ಪೋಲೀಸುಗೊ ಕುಡಿವಲೆ ನೀರು ಕೇಳೆಂಡು ಬಂದವು. ಅವು ನೀರುಒಡ್ಡಿ ಬೇಡುವಗ ಆನು ಫೊಟೋ ತೆಗದೆ. ಅಷ್ಟಪ್ಪಗ ಬೇಗ ಚೆಪ್ಪೆ-ಚೆಪ್ಪೆ ಮಾಡೆಂಡು ಹೋತು. ಕೆಲವು ಜೆನ ಅವರವರಷ್ಟಕೇ ಜೋಕು ಹೇಳೆಂಡು ನೆಗೆ ಮಾಡೆಂಡಿಪ್ಪಗ; “ನಿಙ್ಘಳ ಚಿರಿಯೆಲು ಮತ್ತನ್ನ ಮಾರು” ಹೇಳೆಂಡು ಹೋತು.ಅವಕ್ಕೆ ಚದಿಯಂಗೊಕ್ಕೆ ಫಲಿತಾಂಶ ಹೇಂಗಕ್ಕು ಗೊತಿದ್ದತ್ತು!!.ಕಲೆಕ್ಟ್ರು ಚೀನಕ್ಕೆ ಬಲ್ಪಿದ್ದಾಡ ಎರಡು ದಿನಕ್ಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×