ಮಲ್ಲಿಕಾರ್ಜುನನ ದೇವಸ್ಥಾನ ಅಂಡಾಕಾರದ ವೃಷಭಾಯ..!!

June 24, 2017 ರ 12:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆದಿಶಂಕರಾಚಾರ್ಯರು ಧರ್ಮರಕ್ಷಣೆಗಾಗಿ ಭಾರತ ಸುತ್ತಿದ ಸಂಗತಿ ನವಗೆ ಗೊಂತಿದ್ದು.
ಹಾಂಗೇ ಬಂದು ಬಂದು ಶಿಷ್ಯರ ಒಟ್ಟಿಂಗೆ ನಮ್ಮ ಗೋಕರ್ಣಕ್ಕೂ ಬಂದವು. ಅಲ್ಲಿ ಒಂದು ಜಿಂಕೆಯೂ – ಹುಲಿಯೂ ಪರಸ್ಪರ ವೈರತ್ವ ಮರದ ಒಂದು ಜಾಗೆ ಕಂಡತ್ತು. ಶೋಕವೇ ಇಲ್ಲದ್ದ ಆ ಭೂಮಿಗೆ ಅಶೋಕೆ – ಹೇದು ಗುರ್ತ ಮಡಿಕ್ಕೊಂಡವು.
ಅಷ್ಟು ಮಾಂತ್ರ ಅಲ್ಲ, ಈ ಸುಂದರ ಜಾಗೆಲಿ ಒಂದು ಧರ್ಮಪೀಠ ಆಯೇಕು ಹೇದು ಸ್ಫುರಣೆ ಆತು.

ಒಟ್ಟಿಂಗೇ ಇದ್ದ ವಿದ್ಯಾನಂದಾಚಾರ್ಯರಿಂಗೆ ತನ್ನ ಜ್ಯೇಷ್ಠ ಶಿಷ್ಯ ಸುರೇಶ್ವರಾಚಾರ್ಯರ ಮೂಲಕ ಸಂನ್ಯಾಸ ಕೊಡುಸಿದವು. ಆ ಅಶೋಕೆ ಜಾಗೆಲಿ ಇದ್ದು ಧರ್ಮ ಪ್ರಸಾರ ಮಾಡ್ತಾ ಇರಿ – ಹೇದು ಉತ್ತರದ ಹೊಡೆಂಗೆ ಹೋದವು ಆಚಾರ್ಯ ಶಂಕರರು.
ಶಂಕರಾಚಾರ್ಯರು ಅಂದು ಬೆಳಗಿದ ಅದ್ವೈತ ಪೀಠ ಇಂದಿಂಗೂ ಅವಿಚ್ಚಿನ್ನವಾಗಿ ೩೬ನೇ ಶಂಕರಾಚಾರ್ಯರ ರೂಪಲ್ಲಿ ಬೆಳಗುತ್ತಾ ಇದ್ದು.
ಕಾಲಕ್ರಮೇಣ ಅಲ್ಲಿಂದ ರಜ್ಜ ದೂರದ ಗೋಕರ್ಣ ದೇವಸ್ಥಾನವೇ ಜನವಾಸ, ಕೇಂದ್ರ ಆತು. ಇದರಿಂದಾಗಿ ಅಶೋಕೆಯ ಜಾಗೆಗೆ ಜನಸಂಪರ್ಕ ಕಡಮ್ಮೆ ಆತು. ಹಾಂಗಾಗಿ ನಮ್ಮದು “ಗೋಕರ್ಣ ಮಠ” – ಹೇಳಿಯೂ ಹೆಸರಾತು.

ಮುಂದೆ ಕಾಲ ಇನ್ನೂ ಬದಲಿತ್ತು. ಗೋಕರ್ಣಂದ ಅನಿವಾರ್ಯವಾಗಿ ಹೆರಡೆಕ್ಕಾಗಿ ಬಂತು ನಮ್ಮ ಪೀಠ. ಅಲ್ಲಿಂದ ಒಳನಾಡಿಂಗೆ ಬಂದು ನಗರ – ಹೊಸನಗರ ಹೇಳ್ತಲ್ಲಿ ಪೀಠ ನೆಲೆ ಆತು. ಇದರಿಂದಾಗಿ ಅಶೋಕೆ ಇನ್ನೂ ಹಡಿಲು ಬಿದ್ದತ್ತು.
~
ಇದೆಲ್ಲ ಆಗಿ ಎಷ್ಟೋ ಶತಮಾನ ಆತು. ಸುಮಾರು ತಲೆಮಾರು ಆಗಿ ಹೋತು.
ಈಗ ಮೂವತ್ತಾರ್ನೇ ಶಂಕರರು.
ಬ್ರಹ್ಮ ಹಾಂಗೇ ಬರದ್ದನೋ ಏನೋ.
ಮಠ ಸ್ಥಾಪನೆ ಆದ ಜಾಗೆಲಿ ಈಗ ಪುನಃ ಮಠ, ಮಲ್ಲಿಕಾರ್ಜುನ ಗುಡಿ ಅಪ್ಪ ಸುಸಂದರ್ಭ ಬಂತು.
~
ಮಠ ಸ್ಥಾಪನೆ ಆದ್ಸು ಅಶೋಕೆಲಿ.
ಮಲ್ಲಿಕಾರ್ಜುನ ದೇವರು ಆ ಅಶೋಕೆಯ ಅಧಿಪತಿ ಆಡ.
ಆ ಮಲ್ಲಿಕಾರ್ಜುನಂಗೆ ಒಂದು ಭವ್ಯ ಗುಡಿ – ಸುರೂವಾಣ ಅಪೇಕ್ಷೆ.
ಹಾಂಗೇ ಶಂಕರಾಚಾರ್ಯರು ಸ್ಥಾಪನೆ ಮಾಡಿದ ಮಠಕ್ಕಾಗಿ ಪುನಾ ಒಂದು ಮಠವನ್ನೇ ಅಲ್ಲಿ ಲೋಕಾರ್ಪಣೆ ಮಾಡುವ ಅಪೇಕ್ಷೆ – ಇದೆರಡು ಶ್ರೀಪೀಠಕ್ಕೆ ಸ್ಫುರಣೆ ಆಗಿತ್ತು.
ಆ ಪ್ರಕಾರ ಕೆಲಸ ಸುರು ಆತು.
ಅಶೋಕೆಯ ದೇವಸ್ಥಾನದ ಕೆಲಸವೂ, ಮೂಲಮಠದ ಕೆಲಸವೂ ಸುರು ಆತು.

ಶಿಲಾಮಯ ಅಶೋಕೆಯ ದೇವಸ್ಥಾನದ ಕಟ್ಟೋಣ ಎದ್ದು ನಿಂದತ್ತು.
ಕೆಂಪು ಶಿಲೆಯ ಮೂಲಮಠವೂ ತಯಾರಾತು.

ನಾಳೆಂದ – ಬಪ್ಪವಾರದ ವರೆಗೆ ಬ್ರಹ್ಮಕಲಶದ ಗವುಜಿ.
ಎಲ್ಲೋರುದೇ ಬಂದು ಆ ಗೌಜಿ ನೋಡೇಕು ಹೇದು ಕೇಳಿಗೊಂಡವು ಗುರಿಕ್ಕಾರ್ರು. ಅಪ್ಪು, ಈ ವಾರ ಗುರಿಕ್ಕಾರ್ರಿಂಗೆ ಮಾಂತ್ರ ಅಲ್ಲ, ಒಪ್ಪಣ್ಣಂಗೂ ಅಂಬೆರ್ಪು. ಅಶೋಕೆಗೆ ಹೋಗಿ ಗವುಜಿ ನೋಡೆಕ್ಕಲ್ದಾ!
~
ಅಶೋಕೆಯ ದೇವಸ್ಥಾನ – ಪ್ರಪಂಚಲ್ಲೇ ಅಪೂರ್ವ ಆದ “ಅಂಡಾಕಾರ” ಅಡ. ಬೆಳ್ಳಿಗೆ ಮಾವ° ಹೇಳಿತ್ತಿದ್ದವು.
ಕೋಳಿಯ ಮೊಟ್ಟೆಯ ಸರೀ ಅರ್ಧ ಮಾಡಿರೆ ಯೇವ ಆಕಾರ ಬತ್ತೋ – ಅದು ಅಂಡಾಕಾರ.
ಪೂರ್ಣ ವೃತ್ತ ಅಲ್ಲದ್ದ, ಪೂರ್ಣ ದೀರ್ಘವೃತ್ತ ಅಲ್ಲದ್ದ – ಒಂದು ನಮುನೆ ಓರೆ ಉರುಟು.
ಶಿಲ್ಪಿಗೊ ಇದರ ಪುಸ್ತಕಲ್ಲಿ ಓದಿರ್ತವು, ಆದರೆ ಎಲ್ಲಿಯೂ ಈ ಆಯ ಮಾಡ್ಳೆ ಅವಕಾಶ ಆಗಿತ್ತಿಲ್ಲೆ. ನಮ್ಮ ಅಶೋಕೆಲೇ ಪ್ರಥಮ.

ಆಯ, ಪಾಯ, ಮಾಡು ಎಲ್ಲವೂ ಇದಕ್ಕೆ ಅನುರೂಪವಾಗಿ ಇರೆಕ್ಕಾವುತ್ತಿದಾ.
ಹಾಂಗಿಪ್ಪ ಅಪೂರ್ವ ರಚನೆ ಇದು.

ಇದರ ವೈಶಿಷ್ಠ್ಯಕ್ಕಾಗಿ ಆದರೂ ಒಂದು ಗಳಿಗೆ ಹೋಪ°. ನಮ್ಮ ಮೂಲಮಠ ಪುನರುತ್ಥಾನ ಕಾರ್ಯದ ಗವುಜಿ ನೋಡುವೊ°.
~

ಒಂದೊಪ್ಪ: ಅಶೋಕೆಯ ಮಲ್ಲಿಕಾರ್ಜುನ ಸಮಸ್ತ ಸಮಾಜದ ಶೋಕವ ದೂರ ಮಾಡಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಶ್ರೀಶಣ್ಣ
  ಶ್ರೀಶ

  ಆಯವೂ ವಿಶೇಷ, ಆಯನವೂ ವಿಶೇಷವೇ.
  ಈ ಶತಮಾನದ ಅಪೂರ್ವ ಘಟನೆಗೆ ನಾವು ಸಾಕ್ಷಿ ಆವ್ತಾ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಲೇಖನ ಒಳ್ಳೆ ದಿದ್ದು. ಸಾಕಷ್ಟು ವಿವರಂಗೊ ಇದ್ದು ಹೇದು ಹೇಳಲಕ್ಕು.

  [Reply]

  pattaje shivara?ma bhat Reply:

  mithamoole ಶಂಕರ ಭಟ್ರೇ ಲೇಖನ ಒಳ್ಳೆದಿದ್ದು
  ಹೇದರೆ ಸಾಲ. ಅಶೋಕೆಗೆ ಒಂದರಿ ಭೇಟಿ ಕೊಟ್ಟು ಬರೆಕು.

  [Reply]

  VA:F [1.9.22_1171]
  Rating: 0 (from 0 votes)

  pattaje shivara?ma bhat Reply:

  ಪಟ್ಟಾಜೆ ಶಂಕರ ಭಟ್ರೇ/ ಜೋಯಿಷರೇ ಅಶೋಕೆಗೆ ಹೋಪ ಅಂದಾಜಿ ಇದ್ದ?

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಗೋಪಾಲ

  ಒಳ್ಳೆ ಶುದ್ದಿ. ಹರೇ ರಾಮ.
  ಅಂಡಾಕಾರದ ಬಗ್ಗೆ ಹೆಚ್ಚಿನ ವಿವರಣೆಯೇ ಬೇಡ. ಏಕೆ ಹೇಳಿರೆ, ಶಾಲೆಲಿ ಮಧುರಂಕಾನ ಡ್ರಾಯಿಂಗ್ ಮಾಶ್ಟ್ರು ಸುರೂವಿಂಗೆ ಹೇಳಿ ಕೊಟ್ಟದೇ ಅಂಡಾಕಾರ ಹೇಂಗೆ ಹಾಕುವದು ಹೇಳುವುದರ !!

  [Reply]

  ಶ್ಯಾಮಣ್ಣ

  shyamanna Reply:

  ಪರೀಕ್ಷೆಲಿಯೂ ಅದೇ ಸಿಕ್ಕಿಗೊಂಡು ಇತ್ತಾ ಹೇಂಗೆ? :)

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಎಂತ ಒಪ್ಪಣ್ಣ ಹೊಸ ಲೇಖನ ಇಲ್ಲೇ ?

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ವಿಶ್ವಲ್ಲೇ ಅತೀ ಅಪರೂಪದ ಅಂಡಾಕಾರದ ದೇವಸ್ಥಾನ ನಮ್ಮ ಮೂಲ ಮಠದ ಮಲ್ಲಿಕಾರ್ಜುನ ಹೇಳುವ ಹೆಮ್ಮೆ ನಮ್ಮ ಹವ್ಯಕ ಬಾಂಧವರಿಂದು.

  ಎಂತ ಗುರಿಕ್ಕಾರರೇ ನಮ್ಮ ಒಪ್ಪಣ್ಣ ಬಯಲಿನ ೭ ನೇ ವರ್ಷ ಮುಗಿವದು ಏವಗ?

  [Reply]

  VN:F [1.9.22_1171]
  Rating: 0 (from 0 votes)
 6. ವಿಜಯತ್ತೆ

  ವಿಶ್ವಲ್ಲೇ ಅತೀ ಅಪರೂಪದ ಅಂಡಾಕಾರದ ದೇವಸ್ಥಾನ ನಮ್ಮ ಮೂಲ ಮಠದ ಮಲ್ಲಿಕಾರ್ಜುನ ಹೇಳುವ ಹೆಮ್ಮೆ ನಮ್ಮ ಹವ್ಯಕ ಬಾಂಧವರಿಂದು.

  ಗುರಿಕ್ಕಾರರೇಎಂತ ನಮ್ಮ ಒಪ್ಪಣ್ಣ ಬಯಲಿನ ೭ ನೇ ವರ್ಷ ಮುಗಿವದು ಏವಗ?

  [Reply]

  VN:F [1.9.22_1171]
  Rating: 0 (from 0 votes)
 7. ಈ ಲೇಖನ ಎರಡು ಸರ್ತಿ ಎಂತಕೆ ಬಂತು ದಯಮಾಡಿ ಆರಾರು ತಿಳುಶುತ್ತೀರೊ ?9

  [Reply]

  ವಿಜಯತ್ತೆ

  ವಿಜಯತ್ತೆ Reply:

  ಲೇಖನ ಎರಡು ಸರ್ತಿ ಬಯಿಂದಿಲ್ಲೆ ಶಂಕರಣ್ಣ ;ನಿಂಗಳ ಒಪ್ಪ ಎರಡು ಸರ್ತಿ ಬಂತು ಅದು ನಿಂಗೊಗೆ ಬಹು ಕೊಶಿ ಆಗಿ ಅಗಿಕ್ಕಲ್ಲೋ ?

  [Reply]

  pattaje shivarama bhat Reply:

  ಕುಂಞಣ್ಣ ಹೇದ್ದು ಸರಿ ವಿಜಯಕ್ಕ. ಅಶೋಕೆಯ ಲೇಖನ ೨ ಸರ್ತಿ ಪ್ರಿಂಟ್ ಆಯಿದು.

  [Reply]

  ಶ್ಯಾಮಣ್ಣ

  shyamanna Reply:

  ಪಬ್ಲಿಶ್ ಆದ ತಾರೀಕಿನ ನೋಡಿ….

  VA:F [1.9.22_1171]
  Rating: 0 (from 0 votes)
 8. ಲೇಖನ ಮೇಲೆ ಒಂದರಿ, ಕೆಳ ಒಂದರಿ ಕಾಣುತ್ಥನ್ನೆ.

  [Reply]

  ಶ್ಯಾಮಣ್ಣ

  shyamanna Reply:

  ಪಬ್ಲಿಶ್ ಆದ ತಾರೀಕಿನ ನೋಡಿ….

  [Reply]

  pattaje shivarama bhat Reply:

  ಎರಡು ಲೇಖನಂಗಳುದೇ ೨೪.೬.೧೭kke ಪಬ್ಲಿಶ್ ಆಯಿದು.

  [Reply]

  ಶ್ಯಾಮಣ್ಣ

  shyamanna Reply:

  ಅದರ ಅರ್ಥ- ಅದು ಒಂದೇ ಲೇಖನ ಹೇಳಿ. ಎರಡು ಲೇಖನ ಅಲ್ಲ.

  VA:F [1.9.22_1171]
  Rating: 0 (from 0 votes)
  ಶ್ಯಾಮಣ್ಣ

  shyamanna Reply:

  ಅದರ ಹೆಡ್ಡಿಂಗ್ ಎರಡು ಹೊಡೆಲಿ ಕಾಣ್ತಾ ಇದ್ದು. ಅದು ವೆಬ್ ಸೈಟಿನ ಡಿಸೈನ್ ಕಾರಣಂದ ಹಾಂಗೆ ಕಾಂಬದು. ಎರಡು ಸಲ ಪ್ರಿಂಟ್ ಆಯಿದು ಹೇಳಿ ಅರ್ಥ ಅಲ್ಲ.

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ದೇವಸ್ಯ ಮಾಣಿಪುತ್ತೂರುಬಾವಎರುಂಬು ಅಪ್ಪಚ್ಚಿಪೆಂಗಣ್ಣ°ಅನುಶ್ರೀ ಬಂಡಾಡಿಬಂಡಾಡಿ ಅಜ್ಜಿಕಜೆವಸಂತ°ಸುಭಗಬೋಸ ಬಾವಕಾವಿನಮೂಲೆ ಮಾಣಿಸಂಪಾದಕ°ಚುಬ್ಬಣ್ಣಹಳೆಮನೆ ಅಣ್ಣಡಾಗುಟ್ರಕ್ಕ°ಶ್ಯಾಮಣ್ಣದೊಡ್ಮನೆ ಭಾವಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ದೀಪಿಕಾಪಟಿಕಲ್ಲಪ್ಪಚ್ಚಿವಿದ್ವಾನಣ್ಣಡಾಮಹೇಶಣ್ಣಬಟ್ಟಮಾವ°ಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಅಂಜಲಿ
ಕೊಡಗಿನ ಗೌರಮ್ಮ-ಕಥಾ ಸ್ಪರ್ಧೆಯ ಬಹುಮಾನಿತ ಕತೆಗಳ ಸಂಗ್ರಹ

ಬೆಣಚ್ಚಿಪ್ಪಲ್ಲಿ ಹುಡ್ಕಲೆ