Oppanna.com

ಮಂಗಳ ಕಾರ್ಯಕ್ರಮದ ದ್ಯೋತಕದ ನಿಧಿ – ಮಂಗಳ ನಿಧಿ

ಬರದೋರು :   ಒಪ್ಪಣ್ಣ    on   04/12/2015    4 ಒಪ್ಪಂಗೊ

ಮಾಷ್ಟ್ರುಮಾವನ ಮಗಳ ಬೈಲಿಲಿ ಎಲ್ಲೋರಿಂಗೂ ಗುರ್ತವೇ. ಮೊನ್ನೆ ಮೊನ್ನೆ ಹುಟ್ಟಿದ ನೆಂಪು ಹಲವು ಹೆರಿಯೋರಿಂಗೆ ಇದ್ದರೂ, ರಾಮಜ್ಜನ ಕೋಲೇಜಿಲಿ ಕಲ್ತು, ಬೆಂಗ್ಳೂರಿಲಿ ಇಂಜಿನಿಯರು ಆಗಿಪ್ಪಷ್ಟು ದೊಡ್ಡ ಯಿದು.
ಅಪೂರ್ವಕ್ಕೆ ಒಂದೊಂದರಿ ಊರಿಂಗೆ ಬಂದಪ್ಪಗ ಒಪ್ಪಣ್ಣಂಗೆ ಸಿಕ್ಕಿಗೊಂಡು ಇದ್ದತ್ತು.
ಸದ್ಯ ಆ ಕೂಸಿನ ಬದ್ಧ ಕಳಾತು – ಹೇದು ಬೈಲಿಂಗೆ ಗೊಂತಿದ್ದುದೇ.
ಮೊನ್ನೆ ಕಳುದ ಬದ್ಧದ ಲೆಕ್ಕಲ್ಲಿ ನಾಳ್ತು ಮದುವೆಯುದೇ ಎತ್ತಿತ್ತು. ಅದೇ – ದಶಂಬ್ರ ಆರಕ್ಕೆ ಮದುವೆ ಹೇದು ಬೈಲಿಲಿ ಎಲ್ಲೋರಿಂಗೂ ಕಾಗತ ಸಿಕ್ಕಿತ್ತು.

ದಶಂಬ್ರ ಆರು ಹೇದಪ್ಪಗಳೇ ಹಳೆಮನೆ ಅಣ್ಣ ಹೇಯಿತ್ತಿದ್ದವು – ಕೇರಳದ ಹೊಡೆಂದ ಬಪ್ಪೋರಿಂಗೆ ಬಂಙ ಅಕ್ಕನ್ನೇ’ದು. ಅಪ್ಪು, ಮಂದಿರದ ಜಾಗೆಲಿ ಇದ್ದ ಕಟ್ಟೋಣವ ಒಡದ ವಿಜಯೋತ್ಸವವ ಕೆಲವು ಜೆನ ಕರಾಳ ದಿನ ಹೇದು ಆಚರಣೆ ಮಾಡ್ತವಾಡ. ಹಾಂಗಾಗಿ – ಆ ಕರಾಳ ದಿನ ಆಚರಣೆಗೆ ಕೆಲವು ಜಾಗೆಗೊ ಬಂಙ ಬತ್ತು, ಅದರ್ಲಿ ನಮ್ಮ ಕಾಸರಗೋಡು ದೇ ಒಂದು.
ಅದಿರಳಿ.
~
ನಿನ್ನೆ ಮಾಷ್ಟ್ರುಮಾವನ ಮನೆಗೆ ಹೋಗಿತ್ತಿದ್ದೆ. ಮದುವೆ ಹಾಲಿಲಿ ಆದ ಕಾರಣ ನವಗೆ ಹಾಲು ಕುಡುದಷ್ಟು ಸುಲಭ – ಹೇದು ಮಾಷ್ಟ್ರಮನೆ ಅತ್ತೆ ಹೇಳುದು ಕೇಳಿತ್ತು ಅಟ್ಟುಂಬೊಳಾಂದ. ಅಪ್ಪು, ಮನೆಲೇ ಮಾಡುದಾದರೆ ಚೆಪ್ಪರ, ಶಾಮಿಯಾನ, ಮತ್ತೊಂದು ಹೇದು ಹಲವೂ ತಲೆಬೇನೆಗೊ. ಹಾಲಿಲಿ ಆದರೆ, ಒಂದು ದಿನದ ಮಟ್ಟಿಂಗೆ ಅದುವೇ ನಮ್ಮ ಮನೆ, ರೆಡಿಮೇಡು ಒಸ್ತ್ರದ ನಮುನೆ – ಉಪಯೋಗಕ್ಕೆ ಸಿದ್ಧವಾಗಿರ್ತು.
ಹಾಂಗೆ, ಮಾಣಿ ಮಠದ ಜನಭವನಲ್ಲಿ ಇದಾ ಮದುವೆ. ನೆಂಟ್ರುಗಳ ಹಾಮ್ಗೇ ಹೋಗಿ ಸುಧಾರ್ಸಿ ಬಂದರೆ ಆತು. ನೆಂಟ್ರಿಂದ ರಜಾ ಮದಲೇ ಹೋಗಿ ಮತ್ತೆ ಬರೆಕ್ಕಾವುತ್ತು – ಅಷ್ಟೇ ಇರ್ಸು.

ಅಷ್ಟೇ ಇರ್ಸು ಆದರೂ – ರಜ ಕೆಲಸ ಇಲ್ಲದ್ದಿಲ್ಲೆ. ಹೇಳಿಕೆಗೊ, ತರಕ್ಕಾರಿ ವೆವಸ್ತೆಗೊ, ಊಟಕ್ಷಿಣೆಗೆ ಇರ್ತ ಏರ್ಪಾಡುಗೊ, ಹೀಂಗಿರ್ಸ ಹಲವು ಕತೆಗೊ.
ನಿನ್ನೆ ಮಾಷ್ಟ್ರುಮಾವನ ಮನೆಗೆ ಹೋಗಿಪ್ಪಗಳೂ ಇದೇ ಆಗಿದ್ದತ್ತು.

ಮಾಷ್ಟ್ರುಮಾವನ ಮಗ – ಅಮೇರಿಕಲ್ಲಿಪ್ಪೋನು – ಬಂದು ಖುದ್ದು ಮದುವೆ ಉಸ್ತುವಾರಿ ತೆಕ್ಕೊಂಡ ಕಾರಣ ಮಾಷ್ಟ್ರುಮಾವಂಗೆ ತುಂಬ ಹಗುರ ಆತು ಕೆಲಸಂಗೊ. ಹಾಂಗೆ, ಅದೆಂತದೋ – ಮಂಗಳ ನಿಧಿ – ಹೇಳ್ಸರ ಬಗ್ಗೆ ಮಾತಾಡಿಗೊಂಡು ಇತ್ತಿದ್ದವು ಒಪ್ಪಣ್ಣ ಎತ್ತುವಾಗ.
~

ಮಂಗಳ ನಿಧಿ:
ಹೆಸರೇ ಹೇಳ್ತ ಹಾಂಗೆ – ಮಂಗಳ ಕಾರ್ಯಲ್ಲಿ ಸಲ್ಲುತ್ತ ನಿಧಿ – ದೇಣಿಗೆ.
ಸಮಾಜದ ಇಷ್ಟದ ಬಂಧುಗೊ ಎಲ್ಲೋರುದೇ ಸೇರಿಪ್ಪ ಮಂಗಳ ಸುಮುಹೂರ್ತಲ್ಲಿ ಮನೆಯ ಮಂಗಳ ಕಾರ್ಯಕ್ರಮ ನೆಡವಾಗ, ಆ ಮಂಗಳ ಕಾರ್ಯಕ್ರಮದ ನೆಂಪಿಂಗಾಗಿ – ಸಮಾಜಕ್ಕಾಗಿ ದುಡಿವ ಸಂಘ ಸಂಸ್ಥೆಗೆ ಕಾಣಿಕೆಯಾಗಿ ಒಂದು ನಿಧಿ ದೇಣಿಗೆ ಕೊಡ್ತದೇ “ಮಂಗಳ ನಿಧಿ” ಕಾರ್ಯಕ್ರಮ.
ಇದು ನಮ್ಮ ಸಂಪ್ರದಾಯಲ್ಲಿ ಬಂದ್ಸು. ಮದಲಿಂಗೇ ಇದ್ದತ್ತು. ಆರು, ಎಲ್ಲಿ ಬೇಕಾರೂ, ಯೇವ ಸಂಸ್ಥೆಗೂ ಕೊಡ್ಳಕ್ಕು. ನಮ್ಮ ಮಠಕ್ಕೆ ಚರಣ ಕಾಣಿಕೆ ಹೇದು ಕೊಡ್ತ ಸಂಪ್ರದಾಯವೂ ಇದೇ ನಮುನೆಲಿ ಬಂದದಾಯಿಕ್ಕು ಹೇದು ಆಚಮನೆ ದೊಡ್ಡಪ್ಪನ ಅಭಿಪ್ರಾಯ.

ಉದಾಹರಣೆಗೆ, ಸ್ವಯಂಸೇವಕ ಸಂಘಲ್ಲಿ ಈ ಸಂಪ್ರದಾಯ ಈಗಳೂ ವಿಶೇಷವಾಗಿ ಇದ್ದು.
ಆರಾರು ಸಂಸ್ಥೆಯ ಹಿರಿಯರು ಬಂದಿಪ್ಪಾಗ – ಅವರ ಕೈಗೆ ಒಂದು ಬೆಳಿ ಕವರಿಲಿ ಪೈಶೆ ತುಂಬುಸಿ – ಇದು ನಿಂಗಳ ಸಂಸ್ಥೆಗೆ – ಹೇದು ದೇಣಿಗೆ ಕೊಡ್ತದು.
ಎಷ್ಟು ಕೊಟ್ಟಿದವು ಹೇದು ಆರುದೇ ಚಿಂತೆ ಚಿಂತನೆ ಮಾಡೇಕಾದ್ಸು ಇಲ್ಲೆ. ತೆಕ್ಕೊಂಬೋರೂ – ಕೊಡ್ತೋರೂ ಆ ಸಣ್ಣ ವಿಶಯವ ಮಾತಾಡ್ಳೆ ಪುರುಸೊತ್ತಿಲಿ ಇರ್ತ್ವಿಲ್ಲೆ. ಅದೆಷ್ಟೇ ಪೈಶೆ ಆದರೂ – ಸ್ವಾರ್ಥ ಇಲ್ಲದ್ದೆ ಸಮಾಜಕ್ಕೆ ಕೊಡ್ತದು. ನಿಸ್ವಾರ್ಥ ಸೇವೆ ಮಾಡಿ ಸಮಾಜಕ್ಕಾಗಿ ತೆಕ್ಕೊಂಬದು.
ಹಾಂಗಾಗಿ ಮಂಗಳ ನಿಧಿಯ ಮಂಗಳವಾಗಿ ಸ್ವೀಕಾರ ಮಾಡ್ತವು.

ಸ್ವೀಕಾರ ಮಾಡಿದ ಮತ್ತೆ ಆ ಸಂಸ್ಥೆಯ ಪರವಾಗಿ ಎರಡು ಎಡ್ಡೆಪಾತೆರ ಹೇಳುವ ಸಂಪ್ರದಾಯವೂ ಕೆಅಲ್ವು ಜೆನ ಮಡಿಕ್ಕೊಂಡಿದವು. ಆದರೆ ಅದೆಂತ ನಿರ್ದಿಷ್ಟತೆ ಏನಲ್ಲ.
~
ಮಾಷ್ಟ್ರುಮಾವನ ದೊಡ್ಡಮಗಂಗೆ ಸ್ವಯಂಸೇವಕ ಸಂಘಲ್ಲಿ ವಿಶೇಷ ಆಸಕ್ತಿ, ಜೆಬಾದಾರಿಕೆ ಇಪ್ಪ ಕಾರಣ ಈ ಸರ್ತಿ ಮಂಗಳ ನಿಧಿ ಕಾರ್ಯಕ್ರಮಲ್ಲಿ ಸಂಘದ ಆರಾರು ಹೆರಿಯೋರ ಬಪ್ಪಲೆ ಹೇಳುವೊ – ಹೇದು ಮೊನ್ನೆ ವಿಚಾರ ಮಾಡಿಗೊಂಡು ಇತ್ತಿದ್ದವು ಅಲ್ಲಿ.

ಅದೇ ನಮುನೆ – ಅವರವರ ಇಷ್ಟದಂತೆ, ಅವರ ನಂಬಿಕೆಯ ಸಂಘ ಸಂಸ್ಥೆಗಳನ್ನೂ ಬಪ್ಪಲೆ ಮಾಡಿ ಮಂಗಳನಿಧಿ ಕೊಡ್ಳಕ್ಕು. ಅದೆಲ್ಲವೂ ಒಂದಲ್ಲಾ ಒಂದು ರೂಪಲ್ಲಿ ಸಮಾಜದ ಉದ್ಧಾರಕ್ಕೇ ಸಿಕ್ಕುತ್ತು ಹೇಳ್ತದು ಸತ್ಯಸ್ಯ ಸತ್ಯ.
~

ನಾವು ಒಂದು ಜೆಂಬ್ರ ತೆಗವಲೆ ದೊಡ್ಡ ಮಟ್ಟಿನ ಪೈಶೆಯ ಏರ್ಪಾಡು ಹಾಕಿರ್ತು.
ಡಬ್ಬಲು ಶಾಮಿಯಾನ, ಕುರ್ಚಿ, ಐಸ್ಕ್ರೀಮು, ವೀಡ್ಯ, ಪಲಾವು, ಪೂರಿಬಾಜಿ – ಹೀಂಗಿರ್ಸ ವಿಶೇಷತೆಗೊ ಈಗೆಲ್ಲ ತುಂಬಿ ಹೋಯಿದು.
ಇಷ್ಟೆಲ್ಲ ಏರ್ಪಾಡು ಮಾಡಿ ಖರ್ಚು ಮಾಡುವಾಗ, ರಜ್ಜ ಸಮಾಜ ನಿಧಿಗೆ ಹೇದು ತೆಗದು ಮಡಗುದರ್ಲಿ ಏನೂ ಹೊರೆ ಹೆಚ್ಚಪ್ಪಲಿಲ್ಲೆ, ಅಲ್ದೋ?
~

ನಾಡ್ತು ಮದುವೆಲಿಯೂ ಮಂಗಳ ನಿಧಿ ಕಾರ್ಯಕ್ರಮ ನೆಡವಲಿದ್ದು – ಹೇದು ಅರಡಿಗಾತು. ಇದು ಎಲ್ಲಾ ಜೆಂಬ್ರ ತೆಗೆತ್ತೋರಿಂಗೂ ಪ್ರೇರೇಪಣೆ ಆಗಿರೇಕು – ಹೇಳ್ತದು ಒಪ್ಪಣ್ಣನ ಮನಸ್ಸಿಂಗೆ ಬಂದ ಯೋಚನೆ. ಎಂತ ಹೇಳ್ತಿ?
~

ಮಾಷ್ಟ್ರುಮಾವನ ಮಗಳ ಮುಂದಾಣ ಜೀವನ ಬೆಳಗಲಿ.
ಆ ದಿನ ಮಂಗಳ ನಿಧಿ ಸ್ವೀಕಾರ ಮಾಡಿದ ಸಂಸ್ಥೆಗೊ ಸಮಾಜಕ್ಕೂ ಮಂಗಳ ಉಂಟುಮಾಡುವ ಹಾಂಗಾಗಲಿ.

ಒಂದೊಪ್ಪ: ಮಂಗಳ ಕಾರ್ಯಕ್ರಮಂಗೊ ಎಲ್ಲವೂ ನಿಧಿಯೇ ಆಗಿರ್ತು.

4 thoughts on “ಮಂಗಳ ಕಾರ್ಯಕ್ರಮದ ದ್ಯೋತಕದ ನಿಧಿ – ಮಂಗಳ ನಿಧಿ

  1. ಸಮಾಜ ನಿಧಿ – ಮಂಗಳ ನಿಧಿ , ಒಳ್ಳೆಯ ಯೋಚನೆ. ಕೆಲಾವು ಮನೆ ಜೆಂಬ್ರಂಗಳಲ್ಲಿ ವೇದಪಾಠ ಶಾಲಗೋ, ಸಂಸ್ಥೆಗೊಕ್ಕೋ ಕೊಟ್ಟಿಪ್ಪದಾಗಿ ವಾರ್ಷಿಕ ಲೆಕ್ಕಾಚಾರ ಪತ್ರಲ್ಲಿ ಕಾಣುತ್ತು ಕೆಲಾವು ಸಂಘಸಂಸ್ಥೆಗಳ ವಾರ್ಷಿಕ ವರದಿ ಬಪ್ಪಗ. ನಮ್ಮಲ್ಲಿಯೂ ಈ ಪದ್ಧತಿ ಸ್ವಯಂಪ್ರೇರಿತವಾಗಿ ಅನುಷ್ಠಾನಕ್ಕೆ ಬರಳಿ , ಬರುಸುವೊ ಹೇಳ್ತ ಸದಾಶಯ. ಮಾಷ್ಟ್ರುಮಾವನ ಮಗಳ ಮದುವೆಲಿ ಇದು ಅನುಕರಣೀಯವಾಗಿ ಮುಂದೆ ಸಾಗಲಿ ಹೇಳ್ವದೀಗ ನಮ್ಮ ಒಪ್ಪ

  2. ಮಾಷ್ಟ್ರು ಮಾವ ಮಗಳ ಮದುವೆ ದಿನ ಮಂಗಳ ನಿಧಿಯ ಕೊಡ್ತ ಸಮಯಲ್ಲಿ ಮಂಟಪದ ಕರೆಲಿ ನಿಂದೊಂಡು ನೋಡಿದವರಲ್ಲಿ ಆನುದೆ ಒಬ್ಬ. ಒಳ್ಳೆಯ ಸಂಪ್ರದಾಯ. ಒಪ್ಪಣ್ಣ ಹೇಳಿದ ಹಾಂಗೆ ಮಾಷ್ಟ್ರು ಮಾವನ ಮಗಳ ಮುಂದಾಣ ಜೀವನ ಬೆಳಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×