Oppanna.com

ಮಂತ್ರವೂ, ವಾದವೂ ಸೇರಿರೆ ಮಾಂತ್ರ ಮಂತ್ರವಾದ ಫಲಿಸುಗು..!

ಬರದೋರು :   ಒಪ್ಪಣ್ಣ    on   17/07/2015    1 ಒಪ್ಪಂಗೊ

ನಮ್ಮ ಬೈಲಿಲೇ ಹಲವೂ ಮಂತ್ರವಾದಿಗಳ ಕುಟುಂಬದೋರು ಇದ್ದರೂ, ಒಪ್ಪಣ್ಣಂಗೆ ಮಂತ್ರವಾದದ ಬಗ್ಗೆ ಅರಡಿಸ್ಸು ಕಡಮ್ಮೆಯೇ. ಸಾಮಾನ್ಯವಾಗಿ – ಮಂತ್ರ ಆದರೆ ಕಂಡು ಅರಡಿಗು, ಮಂತ್ರವಾದ ಆದರೆ ಕೇಳಿ ಮಾಂತ್ರ ಅರಡಿಗಷ್ಟೆ ಇದ.
ಬಟ್ಟಮಾವನ ಮಂತ್ರ ಪೂಜೆ ಪುನಸ್ಕಾರಂಗಳಲ್ಲಿ ನವಗೆ ಕಂಡು ಗೊಂತಿರ್ತು, ಆದರೆ ಮಂತ್ರವಾದಲ್ಲಿ ಎಂತಾರು ಮಾಡೇಕಾರೆ ಅದು ನೆಡಿರುಳು ಮಾಡುಸ್ಸಾದ ಕಾರಣವೋ – ಒಪ್ಪಣ್ಣಂಗೆ ಆ ಹೊತ್ತಿಂಗೆ ಒರಗದ್ದೆ ಆತೇ ಇಲ್ಲೆ! ಮತ್ತೆಲ್ಲಿಗೆ ಕಾಂಬದು?!
~

ಓ ಮೊನ್ನೆ ಒಂದಿನ ಹರಿಯೊಲ್ಮೆ ಮದುವೆ ಕಳಾತಲ್ಲದೋ, ಎರಡ್ಣೇ ಹಂತಿ ಉಂಡಿಕ್ಕಿ ಮೇಗಾಣ ಉಪ್ಪರಿಗೆಲಿ ಒಂದೊರಕ್ಕು ಒರಗಿದೆ. ಎದ್ದು ನೋಡ್ತೆ, ಮದುವೆ ಚೆಪ್ಪರ ಕಾಲಿ – ಎಲ್ಲೋರುದೇ ಹೆರಟು ಹೋಗಿ ಆಗಿತ್ತು! ಕೈಕ್ಕಾಲು ಮೋರೆ ತೊಳಕ್ಕೊಂಡು ಹೆರಾಚಿಗೆ ಬಪ್ಪಗ ಮುಳಿಯಭಾವನ ಸಂಸಾರ ಹೆರಡ್ಳೆ ಕಾರು ಗುರುಗುರು ಮಾಡಿಗೊಂಡು ಇತ್ತಿದ್ದವು. ಬತ್ತೆಯೋ ಒಪ್ಪಣ್ಣೋ ಹೋಪೊ° – ಹೇಯಿದವು; ಪೇಟೆಕರೆಂಗೆ ಒರೆಗೆ ನೆಡವದು ತಪ್ಪಿತ್ತನ್ನೇ’ದು – ಅಕ್ಕು ಹೇದು ಕಾರಿಂಗೆ ಹತ್ತಿದೆ.
ಅವು ಮುನ್ನಾದಿನವೇ ಬಂದು ಆ ದಿನ ಎಲ್ಲ ಸುಧಾರಿಕೆ ಕಳಿಶಿ ಹೆರಡುಸ್ಸು. ಕೂಸಿನಕಡೆ ಹತ್ತರಾಣ ನೆಂಟ್ರಿದಾ!

ಮುಳಿಯಭಾವನ ಕಾರು ಕರಿಮಾರ್ಗಕ್ಕೆ ಸೇರುವಾಗ- ಆಚೊಡೆಂದ ನಮ್ಮ ಉಡುಪಮೂಲೆ ರಾಜಭಾವನ ಕಾರು ಬಂತು. ಕಾರಿಂಗೆ ಕಾರು ಸೈಡು ಹೊಡದು ಮುಂದೆ ಹೋವುತ್ತ ಬದಲು ಎರಡೂ ಕಾರುದೇ ನಿಂದತ್ತು.
ಕಾರಲ್ಲ ನಿಂದದು – ಅದರೊಳ ಇದ್ದ ಜೆನಂಗೊ! ಸುಕದುಕ್ಕ ಮಾತಾಡ್ಳೆ.
ಉಡುಪಮೂಲೆ ರಾಜಣ್ಣಂಗೆ ಒಪ್ಪಣ್ಣನ ಧಾರಾಳ ಗುರ್ತ ಇದ್ದು; ಮುಳಿಯಭಾವನನ್ನೂ ಗೊಂತಿದ್ದು. ಹಾಂಗೆ “ಏನು, ಎತ್ತ, ದೂರ” – ಹೀಂಗಿರ್ಸರ ಮಾತಾಡ್ಳೆ ಬೇಕಾಗಿ ನಿಂದದು ಅಲ್ಲಿ. ಅಲ್ಲೇ ಹತ್ತರೆ ಮದುವೆ ಊಟಕ್ಕೆ ಬಂದು ಈಗ ಹೆರಡ್ತಾ ಇಪ್ಪದು ಹೇದು ಗೊಂತಪ್ಪದ್ದೇ – ಚಾಯಕುಡಿವಲೆ ಮನೆಗೆ ಹೋಪೊ°, ಇಲ್ಲೇ ಹತ್ತರೆ ಇದಾ ಮನೆ – ಹೇದವು ರಾಜಣ್ಣ.

ಅಕ್ಕು ಹೇದು ಮುಳಿಯಭಾವ° ಹೇಯಿದವು, ಒಪ್ಪಣ್ಣನೂ ತಲೆ ಆಡ್ಸಿದೆ. ಚಾಯ ಸಿಕ್ಕುತ್ತರೆ ಬಿಡುದೆಂತಕೆ, ಅಲ್ದೋ?

ಉಡುಪಮೂಲೆ ಭಾವನ ಕಾರು ಮುಂದಂದ, ಮುಳಿಯಭಾವನ ಕಾರು ಹಿಂದಹಿಂದಂದ – ಕರಿಮಾರ್ಗ ಬಿಟ್ಟು, ಕೆಂಪುಮಾರ್ಗ ಹಿಡುದು, ಮತ್ತೆ ಬಲತ್ತಿಂಗೆ ತಿರುಗಿ, ರಬ್ಬರು ಕಾಡು ದಾಂಟಿ, ಪುನಾ ಕರಿಮಾರ್ಗ ಹಿಡುದು, ಬ್ಯಾರಿಕುಟ್ಟಂಗಳ ಕೇರಿದಾಂಟಿ, ಗುಡ್ಡೆ ಹತ್ತಿ – ಎತ್ತಿತ್ತು ರಾಜಭಾವನ ಮನೆ.

ಜಾಲಿಂಗೆ ಹರಡಿದ ಜಲ್ಲಿಯ ಮೇಗೆ ಚರಚರನೆ ಎರಡು ಸುತ್ತು ತಿರುಗಿಕ್ಕಿ ಮುಳಿಯಭಾವನ ಕಾರು ನಿಂಬಗ, ರಾಜಣ್ಣಂಗೆ ಅದಾಗಳೇ ಹೋಗಿ ಅಕ್ಕನತ್ರೆ ಹೇಳಿ ಆಯಿದು. ಉಡುಪಮೂಲೆ ಅಕ್ಕನ ಪರಿಚಯ ಬೈಲಿಂಗೆ ಹೇಳೇಕೋ? ಬೇಡನ್ನೇ. ಅಂದಿಂದಲೇ ನಮ್ಮ ಬೈಲಿಲಿ ಇದ್ದವು.
ಮುಳಿಯಭಾವಂದೇ, ಒಪ್ಪಣ್ಣಂದೇ ಬಂದವು – ಹೇದು ಗೊಂತಾದ ಕೂಡ್ಳೆ ಏನೊಳ್ಳೆದು ಕೇಳುಲೆ ಹೆರಬಂದವು ಅಟ್ಟುಂಬೊಳಂದ ಚೆಂಡಿಕೈ ಉದ್ದಿಗೊಂಡು.
ಅಷ್ಟಪ್ಪಗ ಆರೋ ಬಂದ ಶಬ್ದ ಕೇಟು ಉಡುಪುಮೂಲೆ ಅಪ್ಪಚ್ಚಿ ಎಂತದೋ ಗಹನ ಅಧ್ಯಯನಲ್ಲಿ ಇದ್ದೋರು ಹೆರ ಬಂದವು.  ‘ಬೈಲಿಂಗೆ ಇಪ್ಪದರ ಅಧ್ಯಯನವೋ’ ಕೇಟೆ. ‘ಅಪ್ಪು ವೊಪ್ಪಣ್ಣಾ!’ ಹೇದು ಚೆಂದದ ನೆಗೆ ಮಾಡಿದವು.

~

ಆ ಮನೆ ಸಾಂಪ್ರದಾಯಿಕವಾಗಿ ಮಂತ್ರವಾದ ಮಾಡಿಗೊಂಡು ಬಂದ ಮನೆ. ಕೂಡು ಕುಟುಂಬದ ಮಾದರಿ ಮನೆತನ. ಎಷ್ಟೋ ಜೆನ ಅವರಿಂದ ಉಪಕೃತರಾಗಿ ಅವರವರ ಕಷ್ಟಂಗಳಿಂದ ಬಿಡುಗಡೆಹೊಂದಿ ಇಂದಿಂಗೂ ಪ್ರಾತಃಸ್ಮರಣೀಯರಾಗಿದ್ದವು. ಹಲವಾರು ಪ್ರಭಾವೀ ವೆಗ್ತಿಗಳಿಂದ ಹಿಡುದು ಗುಜ್ರಿ ಬ್ಯಾರಿಯ ವರೆಗೆ ಧರ್ಮಾತೀತವಾದ ದೊಡ್ಡಾ ಶಿಷ್ಯವರ್ಗ ಹೊಂದಿದ್ದವು, ಅವರ ತಲೆಮಾರುಗಳಿಂದ.

ಹಳೆಕಾಲದ ಹಿರಿಮೆಯ ಅಳವಡುಸಿಗೊಂಡ ಹೊಸತನ ತುಂಬಿದ ಮನೆ. ಟೇರೀಸು ಮನೆ ಆದರೂ ತುಂಬಿದ ಮರಮಟ್ಟುಗೊ. ಮರದ ಕಪಾಟಿಲಿ ಪುಸ್ತಕಂಗೊ. ಉಪ್ಪರಿಗೆ ಮೇಗೆ ತಾಳೆಗರಿಗಳೂ ಇದ್ದಾಡ – ಮುಳಿಯಭಾವ° ಗುಟ್ಟಿಲಿ ಹೇಳಿದವು. ಇಕ್ಕು ಇಕ್ಕು – ಹೇದೆ. ಓ ಅಲ್ಲಿ ಗುಡ್ಡೆಕರೆಲಿ ಹುಲಿಮಾಟೆಯೂ ಇದ್ದಲ್ಲದೋ, ಅಪ್ಪಚ್ಚಿ ಶುದ್ದಿ ಬರದಿತ್ತವು – ಹೇದು ನೆಂಪು ಹೇಯಿದೆ.

~

ಬಂದು ಕೂದು ಸಾವಕಾಶ ಅಪ್ಪವ ಒಳ ವಿಶ್ರಾಂತಿ ತೆಕ್ಕೊಂಡಿದ್ದಿದ್ದ ಹೆರಿಯೋರು ಬಂದವು. ಉಡುಪಮೂಲೆ ಅಕ್ಕನ ಮಾವನೋರು – ಹೆರಿಯ ಮಂತ್ರವಾದಿಗೊ.

ಉಡುಪಮೂಲೆ ಅಕ್ಕನ ಮಾವನೋರು ಹೇದರೆ – ಮದಲಿಂಗೇ ಹೆಸರುವಾಸಿ. ಮಂತ್ರವಾದ ಹೇಳ್ತ ಗಂಧದ ತುಂಡಿನ ಅರದು ಕುಡುದು ಜೀರ್ಣಿಸಿಗೊಂಡ ಅಸಾಧಾರಣಿ ಅವು.
ರಾಜಭಾವಂದೇ ಹಾಂಗೇ – ಈಗ ಅದರ ನಿಷ್ಠೆಲಿ ಮುಂದುವರುಸಿಗೊಂಡು ಹೋವುತ್ತವು. ಶಾಸ್ತ್ರಾಭ್ಯಾಸವ ಶಾಸ್ತ್ರೋಕ್ತವಾಗಿ ಮಾಡಿ ವೇದ, ಜ್ಯೋತಿಷ್ಯ, ಮಂತ್ರವಾದ – ಎಲ್ಲವುದೇ ಅರಡಿಗು ಅವಕ್ಕೆ.

ರಾಜಬಾವ° ಹೆರಿಯೋರಿಂಗೆ ಬಂದೋರ ಗುರ್ತ ಮಾಡಿಸಿ ಕೊಟ್ಟ ಮತ್ತೆ ಮಾವ° ತುಂಬ ಮಾತಾಡಿದವು. ಅವಕ್ಕೀಗ ಪ್ರಾಯ ಆದ ಕಾರಣವೇ ರಜ್ಜವೇ ದೇಹಾಲಸ್ಯ. ಮಜ್ಜಾನದ ಊಟ ಆಗಿ ಒರಗಿತ್ತಿದ್ದವಷ್ಟೆ.  ಮರದ ಸೋಪದ ತಲೆಕೊಂಬಿಲಿ ಕೂದು ಲೊಟ್ಟೆಪಟ್ಟಾಂಗಮಾತಾಡಿಗೊಂಡು ಇಪ್ಪ ಹಾಂಗೇ ಛಾಯ ಬಂತು. ಕೂಡ್ಳೆ ಮುರ್ಕುದೇ. ಒಪ್ಪಣ್ಣಂಗೆ ಆಸರಿಂಗೆ ಕಂಡ ಕೂಡ್ಳೇ ಮಾತಾಡುದು ಮರದತ್ತು, ಹೂಂಕುಟ್ಟುದು ಮಾಂತ್ರ ನೆಂಪೊಳುದತ್ತು. ಮುಳಿಯಭಾವ° ಅವರ ಮಾತಾಡ್ಸಿಗೊಂಡೇ ಇತ್ತಿದ್ದವು, ಹಳೆಕಾಲದ ಶುದ್ದಿಗೊ, ಹಳೆ ಸಂಗತಿಗೊ ಇತ್ಯಾದಿ ತಿರುಗಿ ತಿರುಗಿ ಸುಮಾರು ಸಂಗತಿಗೊ ಗಮ್ಮತ್ತುಗೊ ನೆಗೆಗೊ ಬಂತು.
~

ಮಂತ್ರವಾದಿಗೊ ಹೇದರೆ ಅಗಾಧ ಸಾಮಾಜಿಕ ಜ್ಞಾನವೂ, ಭಾವನಾತ್ಮಕ ಚಿಂತನೆಯೂ, ವಿಶೇಷ ಬುದ್ಧಿಮತ್ತೆಯೂ ಬೇಕಾವುತ್ತು – ಹೇಳ್ತದಕ್ಕೆ ನಿದರ್ಶನ ಹೇಳಿ ತೋರ್ಸಿದವು ಕೆಲವು ಘಟನೆಗಳಲ್ಲಿ.
ಮದುವೆ ಪ್ರಾಯಕ್ಕೆ ಬಂದ ಒಂದು ಕೂಸಿಂಗೆ ಎಲ್ಲಿಯೂ ಪೊದು ಹೊಂದಾಣಿಕೆ ಆಗದ್ದೆ ಅದರ ಅಪ್ಪಮ್ಮಂಗೂ ಹೊರೆ ಅಪ್ಪಲೆ ಸುರು ಆತಾಡ. ಆ ಸಂದರ್ಭಲ್ಲಿ ಇದ್ದಾ ಜ್ಯೋತಿಷಿಗಳ ಹತ್ರೆ ಹೋಗಿ, ಬೇಕಾದ ಪರಿಹಾರಂಗಳ ಎಲ್ಲಾ ಮಾಡಿರೂ ನೇರ್ಪಕ್ಕೆ ಅಪ್ಪಲೆ ಸರಿ ಆಯಿದಿಲ್ಲೇಡ.
ಹಾಂಗಿಪ್ಪ ಸಂದರ್ಭಲ್ಲಿ ಆ ಕೂಸಿಂಗೆ ಮಂತ್ರವಾದದ ಮೂಲಕ ಪರಿಹಾರ ಕೊಡುವೊ° – ಹೇದು ಅಪ್ಪಮ್ಮ ಇವರ ಹತ್ತರಂಗೆ ಕರಕ್ಕೊಂಡು ಬಂದವಾಡ.

ಕೂಸಿನ ಕರಕ್ಕೊಂಡು ಬಂದವು. ಸ್ಥಾನಗೌರವ ಮಡಿಕ್ಕೋಂಡೇ ಪ್ರೀತಿಲಿ ಮಾತಾಡ್ಸಿದವು ಅದರ. ಮಂತ್ರವಾದ ಮೂಲಕ ನೋಡಿರೆ ಯೇವದೇ ದೊಡ್ಡ ದೋಷ ಇದ್ದ ಹಾಂಗೆ ಕಾಣ್ತಿಲ್ಲೆ!
ಇನ್ನು ಮಾತಾಡಿಯೇ ನೋಡುವೋ° ಹೇದು ಮಗಳ ಹತ್ತರೆ ಮಾತಾಡಿದ ಹಾಂಗೆ ಮಾತಾಡ್ಳೆ ಸುರುಮಾಡಿದವಾಡ.
ಮಂತ್ರವಾದಿ ಹೇಳುದರಿಂದಲೂ ಹೆಚ್ಚು, ತನ್ನ ರಕ್ಷಣೆಗೆ ಇಪ್ಪ ಒಬ್ಬ° ಪರಮಾಪ್ತ°, ಆತ್ಮೀಯ ಬಂಧು – ಹೇಳ್ತ ಭಾವನೆ ಆ ಕೂಸಿಂಗೆ ಬಂತು ಕಾಣ್ತು – ಕೂಸಿಂಗೆ ಧೈರ್ಯ ಬಂತು.
ಅಪ್ಪಮ್ಮನ ಹತ್ತರೆ ಮಾತಾಡ್ತ ಅದೇ ಗೌರವಲ್ಲಿ, ಆತ್ಮೀಯ ಗೆಳತಿಯ ಹತ್ತರೆ ಮಾತಾಡುವ ಅದೇ ಆತ್ಮವಿಶ್ವಾಸಲ್ಲಿ ಮಾತಾಡ್ಳೆ ಸುರುಮಾಡಿತ್ತಾಡ. ಮನೆಲಿ ಹೇಳುಲೆ ಎಡಿಯದ್ದ ಒಂದು ವಿಷಯವ ಮಂತ್ರವಾದಿಗಳ ಹತ್ತರೆ ಹೇಳಿತ್ತು.
ಅದೆಂತ ಹೇದರೆ, ನೆರೆಕರೆಲಿ ಇಪ್ಪ ತನ್ನ ಮಾವನ ಮಗನನ್ನೇ ಈ ಕೂಸು ತುಂಬಾ ಇಷ್ಟ ಪಟ್ಟ ಸಂಗತಿ.
ತನ್ನ ಮನಸ್ಸಿನ ಪೂರ್ಣವಾಗಿ ಆ ಮಾಣಿಗೆ ಹಂಚಿಗೊಂಡ ಕಾರಣ ಬೇರೆ ಯೇವ ಮಾಣಿಯಂಗಳನ್ನೂ ಇದಕ್ಕೆ ಒಪ್ಪಿಗೊಂಬಲೆ ಎಡಿಗಾಗದ್ದದು.
ತಾನೇ ಇದರ ಅಪ್ಪಮ್ಮನ ಹತ್ತರೆ ಹೇಳುಲೂ ಎಡಿಯದ್ದೆ, ಮನಸ್ಸಿಲೇ ಮಡಿಕ್ಕೊಂಬಲೂ ಎಡಿಯದ್ದೆ – ಬಹಳ ಕಷ್ಟಪಟ್ಟಿದತ್ತು.

ಈಗಾಣ ಕಾಲ ಅಲ್ಲ ಅದು – ನೆಂಪುಮಡಿಕ್ಕೊಳಿ; ಒಂದು ತಲೆಮಾರು ಮೊದಲಾಣ ಕತೆ.

ಆ ಮಾಣಿ ಏಕೆ ಹಾಂಗಾರೆ ಈ ಸಂಗತಿಯ ಹೇಳದ್ದು?
ಏಕೆ ಹೇಳದ್ದು ಹೇದರೆ, ಆ ಮನೆಗೂ ಈ ಮನೆಗೂ ಹೋಕ್ವರ್ಕು ಇಲ್ಲೆ. ನಿತ್ಯಕ್ಕೆ ಹೋಪಬಪ್ಪ ಕ್ರಮ ಇದ್ದರೂ –ಜೆಂಬ್ರದೂಟ ಉಂಬ ಕ್ರಮ ಇಲ್ಲೆ. ಹಾಂಗಾಗಿ ಈ ಸಂಬಂಧ ಎಡಿಯಲೇ ಎಡಿಯ ಒಂದು ಕಾರಣ.
ಅತವಾ ಮನೆಯನ್ನೇ ಬಿಟ್ಟು ಹೊಸಜೀವನ ಮಾಡೇಕೋ – ಆ ಮಾಣಿಗೆ ವಿಶೇಷ ಸಂಪಾದನೆಗೆ ಅವಕಾಶ ಆಯಿದಿಲ್ಲೆ. ಇನ್ನೂ ಒದಗಿ ಬರೆಕ್ಕಷ್ಟೆ. ಹಾಂಗಾಗಿ ಈಗಳೇ ಬೇರೆಮನೆ ಮಾಡಿ ಸಂಸಾರ ಸಾಂಕಲೆ ಕಷ್ಟ. ಇದು ಎರಡ್ಣೇ ಕಾರಣ.
ಈ ಎಲ್ಲ ಒಯಿವಾಟಿಲಿ ಕೂಸು ಕಂಗಾಲು. ಆಚಿಗೆ ಮಾಣಿಯೂ ಕಂಗಾಲು.
ಮಂತ್ರವಾದಿಗೊಕ್ಕೆ ಅಶರೀರಿಗಳ ಮನಸ್ಸು ಓದಿ ಬೇಕಾದ್ದು ಮಾಡುಸ್ಸು ಅರಡಿವದು ಮಾಂತ್ರ ಅಲ್ಲ ಎಲ್ಲರ ಮನಸ್ಸಿನ ಒಳಮರ್ಮ ಅರಡಿಗಪ್ಪ ಶೆಗ್ತಿ ಇದ್ದಿದಾ. ಸಂದರ್ಭಕ್ಕೆ ತಕ್ಕ ಹಾಂಗೆ ಅವರ ವಿದ್ಯೆಗಳನ್ನೂ, ಯುಕ್ತಿಗಳನ್ನೂ ಉಪಯೋಗಿಸಿ ನ್ಯಾಯ ಒದಗಿಸೆಕ್ಕು.

~

ಹಾಂಗೆ ಮತ್ತೆ ಕೂಸಿನ ಅಪ್ಪಮ್ಮನ ಸಮಧಾನುಸಿ, ಹೇಳಿಕಳುಸಿ ಅಪ್ಪಗ ಬಪ್ಪಲೆ ತಿಳುಶಿ ಕಳುಸಿಕೊಟ್ಟವಾಡ. ಸೂಕ್ತ ಸಂದರ್ಭಲ್ಲಿ ಮಾಣಿಯ ಬಪ್ಪಲೆ ಮಾಡಿ, ಮಾತಾಡಿ – ಈ ವಿಷಯವನ್ನೂ ಮಾತಾಡಿದವಾಡ. ಕೂಸಿನ ಇಷ್ಟ ಆದ್ಸು ಅಪ್ಪು, ಆದರೆ ಅದಕ್ಕಿಪ್ಪ ತೊಡಕುಗಳ ಬಗ್ಗೆ ವಿಮರ್ಶೆಯೂ ಆತಾಡ.
ತನ್ನ ವಿದ್ಯಾಭ್ಯಾಸಕ್ಕೆ ಅನುಸೂಕ್ತವಾದ ಕೆಲಸ ಒಂದರ ಹುಡ್ಕಿಗೊಂಡು ಇತ್ತಿದ್ದನಾಡ ಆ ಮಾಣಿ. ಮಂತ್ರವಾದಿ ಮಾವನ ಶಿಷ್ಯವರ್ಗದ ಹೆರಿಯೋರ ಸಂಪರ್ಕ ಮಾಡಿ, ಈ ಮಾಣಿಗೆ ಒಪ್ಪ ಕೆಲಸ ಒಂದು ಬೇಗಲ್ಲಿ ಸಿಕ್ಕುವ ಹಾಂಗೆ ವೆವಸ್ತೆ ಮಾಡಿದವಾಡ.
ಸಂಸಾರಂಗಳ ಮಧ್ಯೆ ಮುರುದ ಹೋಕ್ವರ್ಕು ಸರಿ ಆಯೇಕಾರೆ ಎಂತಾಯೇಕು ಹೇದು ಮಂತ್ರವಾದಿಗೊಕ್ಕೆ ಹೇಳಿಕೊಡೆಕ್ಕೋ?
ಅದಕ್ಕೆ ಬೇಕಾದ ಏರ್ಪಾಡು ಮಾಡುವ ಬಗ್ಗೆ ಸುರುಮಾಡಿದವಾಡ. ಹೆರಿಯೋರ ಕಾಲಂದ ಬಂದ ವಾಗ್ದೋಶನಿವಾರಣೆ ಮಾಡಿ, ಪರಸ್ಪರ ಒಂದಪ್ಪ ಕಾರ್ಯಕ್ರಮವನ್ನೂ ಮಾಡಿ ಆತು.
ಕೂಸಿಂಗೆ ಬಂದ ಎಲ್ಲಾ ಜಾತಕ ದೋಷ, ಗ್ರಹದೋಷ, ಆ ದೋಷ ಈ ದೋಷ – ಎಲ್ಲವುದೇ ಅದರ ಮನಸ್ಸಿನ ಮಾಣಿ ಸಿಕ್ಕಿ ಅಪ್ಪಗ ನಿವುರ್ತಿ ಆತು. ಹಾಂಗೇ, ಮಾಣಿಗೂ, ಈ ಕೂಸಿನೊಟ್ಟಿಂಗೆ ಜೀವನಾರಂಭಕ್ಕಿಪ್ಪ ಎಲ್ಲಾ ತೊಡಕುಗೊ ನಿವಾರಣೆ ಆತು.

ಜೀವನಕ್ಕೇ ಆಧಾರ ಅಪ್ಪ ಸಕಾಯ ಮಾಡಿದ ಇವರ ಮಾತಿನ ಮಾಣಿಕಡೆ – ಕೂಸಿನ ಕಡೆಯೋರು ಬಿಟ್ಟು ಹಾಕುಗೋ?
ಬೇಗಲ್ಲೇ ಒಂದು ಮೂರ್ತಲ್ಲಿ ಮದುವೆ ಗೌಜಿ ಎಳಗಿತ್ತು.

ಮಂತ್ರವಾದಿ ನಿಜವಾದ ಮಂತ್ರವಾದಿ ಆಯೇಕಾರೆ ಮಂತ್ರಂಗಳೂ ಅರಡಿಯೇಕು, ವಾದ – ಹೇದರೆ ಬುದ್ಧಿವಂತಿಕೆಗಳೂ ಅರಡಿಯೇಕು – ಹೇದು ಮಾವನ ಅಭಿಪ್ರಾಯ.
~
ಕಾಪಿ ಕುಡುದು, ಹಲಸಿನಸೊಳೆ ಹೊರುದ್ದು ತಿಂದು ಕೈಉದ್ದಿಗೊಂಡು ಹೆರಡ್ಳಪ್ಪಾಗ ಮಾವಂಗೆ ಆಯುರಾರೋಗ್ಯ ಇನ್ನೂ ಸಿಕ್ಕಲಿ ಹೇದು ಗ್ರೇಶಿಂಡು ಕಾಲಿಡುದಾತು. ಬೈಲು ಒಳ್ಳೆದಾಗಲಿ ಹೇದು ಆಶೀರ್ವಾದವೂ ಮಾಡಿದವು. ಎಲ್ಲೋರತ್ರೂ ಟಾಟ ಮಾಡಿ ಹೆರಟಾತು.
ಎಷ್ಟೋ ಮನೆ ಕಟ್ಟಿದ, ಎಷ್ಟೋ ಜೆನರ ಮನಸ್ಸು ಬೆಳಗಿದ, ಎಷ್ಟೋ ಜೀವನಂಗಳ ತನ್ನ ಸಂಪರ್ಕದ ಮೂಲಕವೇ ಸುಧಾರ್ಸಿದ ಆ ಮಹಾನ್ ಚೈತನ್ಯಂಗೊ ನಮ್ಮ ಸಮಾಜಲ್ಲಿ ಇರ್ಸೇ ನಮ್ಮ ಹೆಮ್ಮೆ – ಹೇದು ಮುಳಿಯಭಾವ° ಹೇಯಿದವು, ಒಪಾಸು ಕಾರು ತಿರುಗುಸಿ ಹೆರಡುವಾಗ.
~
ಇದೊಂದೇ ಅಲ್ಲ, ಆ ಮಾವನ ಅನುಭವಪೂರ್ಣ ಜೀವನಲ್ಲಿ ಇಂಥಾ ಅನೇಕ ಸನ್ನಿವೇಶಂಗೊ, ಸಂದರ್ಭಂಗೊ ಇದ್ದು. ಎಲ್ಲವನ್ನೂ ಒಪ್ಪಣ್ಣನೇ ಹೇಳಿಕ್ಕಲೆ ಹೆರಟ್ರೆ ಶುದ್ದಿ ಕಂಡಾಬಟ್ಟೆ ಉದ್ದ ಅಕ್ಕು. ಉಡುಪಮೂಲೆ ಅಕ್ಕನೇ ಹೇಳ್ತವೋ ಕೇಳುವೊ° ಅವರತ್ರೆ.
~

ಒಂದೊಪ್ಪ: ಕಾರ್ಯಸಾಫಲ್ಯಕ್ಕೆ ಪ್ರಾಚೀನ ಶಾಸ್ತ್ರವೂ, ಆಧುನಿಕ ಬುದ್ಧಿವಂತಿಕೆಯೂ ಎರಡೂ ಬೇಕು.

One thought on “ಮಂತ್ರವೂ, ವಾದವೂ ಸೇರಿರೆ ಮಾಂತ್ರ ಮಂತ್ರವಾದ ಫಲಿಸುಗು..!

  1. ಶಾಸ್ತ್ರವೂ ಬುದ್ಧಿವಂತಿಕೆಯೂ… ಹೃದಯಸ್ಪರ್ಶೀ ಶುದ್ದಿ. ಅನುಭವೀ ಚೇತನಂಗೊಕ್ಕೆ ನಮೋ ನಮಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×